2 Chronicles · chapter 13 · verse 5
2 Chronicles 13:5 in Kannada
ಇಸ್ರಾಯೇಲಿನ ದೇವರಾದ ಕರ್ತನು ಇಸ್ರಾ ಯೇಲಿನ ಮೇಲೆ ರಾಜ್ಯವನ್ನು ಎಂದೆಂದಿಗೂ ದಾವೀ ದನಿಗೆ, ಅವನಿಗೂ ಅವನ ಮಕ್ಕಳಿಗೂ ಉಪ್ಪಿನ ಒಡಂಬಡಿಕೆಯಿಂದ ಕೊಟ್ಟನೆಂದು ನೀವು ತಿಳಿಯ ತಕ್ಕ ದ್ದಲ್ಲವೋ?
Israayelina devaraada kartanu israa yelina mele raajyavannu endendigoo daavee danige, avanigoo avana makkaligoo uppina odambadikeyinda kottanendu neevu tiliya takka ddallavo?
2 Chronicles 13:5 in English
- King James Version (KJV)
- Ought ye not to know that the LORD God of Israel gave the kingdom over Israel to David for ever, [even] to him and to his sons by a covenant of salt?
- World English Bible (WEB)
- Ought you not to know that the LORD, the God of Israel, gave the kingdom over Israel to David forever, even to him and to his sons by a covenant of salt?
- American Standard Version (ASV)
- Ought ye not to know that Jehovah, the God of Israel, gave the kingdom over Israel to David for ever, even to him and to his sons by a covenant of salt?
- Bible in Basic English (BBE)
- Is it not clear to you that the Lord, the God of Israel, gave the rule over Israel to David and to his sons for ever, by an agreement made with salt?
- Darby Translation (DBY)
- Ought ye not to know that Jehovah the God of Israel gave the kingdom over Israel to David for ever, to him and to his sons [by] a covenant of salt?
- Webster's Bible (WBS)
- Ought ye not to know that the LORD God of Israel gave the kingdom over Israel to David for ever, [even] to him and to his sons by a covenant of salt?
- Young's Literal Translation (YLT)
- Is it not for you to know that Jehovah, God of Israel, hath given the kingdom to David over Israel to the age, to him and to his sons — a covenant of salt?
Read in context
- 3ಅಬೀಯ ನಿಗೂ ಯಾರೊಬ್ಬಾಮನಿಗೂ ಯುದ್ಧ ಉಂಟಾಗಿತ್ತು. ಆಗ ಅಬೀಯನು ಯುದ್ಧಸ್ಥರಾದ ಪರಾಕ್ರಮಶಾಲಿಗಳ ಸೈನ್ಯವನ್ನು ಯುದ್ಧಕ್ಕೆ ಸಿದ್ಧಮಾಡಿದನು. ಆಯಲ್ಪಟ್ಟ ನಾಲ್ಕು ಲಕ್ಷ ಜನರಿದ್ದರು. ಯಾರೊಬ್ಬಾಮನು ಅವನಿಗೆ ಎದುರಾಗಿ ಎಂಟು ಲಕ್ಷ ಮಂದಿ ಆಯಲ್ಪಟ್ಟ ಪರಾ ಕ್ರಮಶಾಲಿಗಳನ್ನು ಯುದ್ಧಕ್ಕೆ ನಿಲ್ಲಿಸಿದನು.
- 4ಆಗ ಅಬೀಯನು ಎಫ್ರಾಯಾಮ್ ಬೆಟ್ಟದಲ್ಲಿರುವ ಚೆಮಾರೈ ಎಂಬ ಬೆಟ್ಟದ ಮೇಲೆ ನಿಂತು--ಯಾರೊ ಬ್ಬಾಮನೇ, ಸಮಸ್ತ ಇಸ್ರಾಯೇಲೇ, ನನ್ನ ಮಾತು ಕೇಳಿರಿ.
- 5ಇಸ್ರಾಯೇಲಿನ ದೇವರಾದ ಕರ್ತನು ಇಸ್ರಾ ಯೇಲಿನ ಮೇಲೆ ರಾಜ್ಯವನ್ನು ಎಂದೆಂದಿಗೂ ದಾವೀ ದನಿಗೆ, ಅವನಿಗೂ ಅವನ ಮಕ್ಕಳಿಗೂ ಉಪ್ಪಿನ ಒಡಂಬಡಿಕೆಯಿಂದ ಕೊಟ್ಟನೆಂದು ನೀವು ತಿಳಿಯ ತಕ್ಕ ದ್ದಲ್ಲವೋ?
- 6ಆದರೆ ದಾವೀದನ ಮಗನಾದ ಸೊಲೊ ಮೋನನ ಸೇವಕನಾಗಿದ್ದ ನೆಬಾಟನ ಮಗನಾದ ಯಾರೋಬ್ಬಾಮನು ಎದ್ದು ತನ್ನ ಯಜಮಾನನ ಮೇ ತಿರುಗಿಬಿದ್ದಿದ್ದಾನೆ.
- 7ಇದಲ್ಲದೆ ನಿಷ್ಪ್ರಯೋಜಕರಾದ ಬೆಲಿಯಾಳನ ಮಕ್ಕಳು ಅವನ ಬಳಿಗೆ ಕೂಡಿ ಬಂದು ಸೊಲೊಮೋನನ ಮಗನಾದ ರೆಹಬ್ಬಾಮನು ಹುಡುಗ ನಾಗಿಯೂ ಮೃದು ಹೃದಯವುಳ್ಳವನಾಗಿಯೂ ಅವ ರನ್ನು ಎದುರಿಸಲು ಬಲವಿಲ್ಲದೆ ಇರುವಾಗ ಅವ ನಿಗೆ ವಿರೋಧವಾಗಿ ತಮ್ಮನ್ನು ಬಲಪಡಿಸಿಕೊಂಡಿ ದ್ದಾರೆ.
Cross references
- Numbers 18:19 ಅರಣ್ಯಕಾಂಡ 18:19ಇಸ್ರಾಯೇಲ್ ಮಕ್ಕಳು ಕರ್ತನಿಗೆ ಎತ್ತುವ ಪರಿಶುದ್ಧವಾದ ಅರ್ಪಣೆಗಳನ್ನೆಲ್ಲಾ ನಿನಗೂ ನಿನ್ನ ಕುಮಾರರಿಗೂ ಕುಮಾರ್ತೆಯರಿಗೂ ನಿತ್ಯ ಕಟ್ಟಳೆ ಯಾಗಿ ಕೊಟ್ಟಿದ್ದೇನೆ; ಇದು ಕರ್ತನ ಮುಂದೆ ನಿನಗೂ ನಿನ್ನ ಸಂಗಡ ಇರುವ ನಿನ್ನ ಸಂತತಿಗೂ ನಿತ್ಯವಾದ ಉಪ್ಪಿನ ಒಡಂಬಡಿಕೆಯಾಗಿರಬೇಕು.
- Leviticus 2:13 ಯಾಜಕಕಾಂಡ 2:13ನಿನ್ನ ಪ್ರತಿ ಯೊಂದು ಆಹಾರ ಸಮರ್ಪಣೆಯೂ ಉಪ್ಪಿನಲ್ಲಿ ಬೆರಿಕೆ ಯಾಗಿರಬೇಕು; ನಿನ್ನ ದೇವರ ಒಡಂಬಡಿಕೆಯನ್ನು ಸೂಚಿಸುವ ಉಪ್ಪು ನಿನ್ನ ಸಮರ್ಪಣೆಯಲ್ಲಿ ಇಲ್ಲದೆ ಇರಬಾರದು; ನಿನ್ನ ಎಲ್ಲಾ ಸಮರ್ಪಣೆಗಳಲ್ಲಿ ನೀನು ಉಪ್ಪನ್ನು ಸಮರ್ಪಿಸಬೇಕು.
- 2 Samuel 7:12–16 2 ಸಮುವೇಲನು 7:12–16ಇದಲ್ಲದೆ ಕರ್ತನು ನಿನಗೆ ತಿಳಿಸುವದೇನಂದರೆ, ನಾನು ನಿನಗೆ ಮನೆಯನ್ನು ಕಟ್ಟುವೆನು. ನಿನ್ನ ದಿವಸಗಳು ಪೂರ್ತಿ ಯಾಗಿ ನೀನು ನಿನ್ನ ಪಿತೃಗಳ ಸಂಗಡ ಮಲಗಿಕೊಂಡಿ ರುವಾಗ ನಿನ್ನ ಕರುಳುಗಳಿಂದ ಹೊರಡುವ ನಿನ್ನ ಸಂತತಿಯನ್ನು ನಿನ್ನ ತರುವಾಯ ಎಬ್ಬಿಸಿ ನಾನು ಅವನ ರಾಜ್ಯವನ್ನು ಸ್ಥಿರಮಾಡುವೆನು. ಅವನು ನನ್ನ ಹೆಸ ರಿಗೆ ಮನೆಯನ್ನು ಕಟ್ಟುವನು; ನಾನು ಅವನ ರಾಜ್ಯದ ಸಿಂಹಾಸನವನ್ನು ಸದಾಕಾಲಕ್ಕೂ ಸ್ಥಿರಮಾಡುವೆನು. ನಾನು ಅವನ ತಂದೆಯಾಗಿರುವೆನು; ಅವನು ನನ್ನ ಮಗನಾಗಿರುವನು. ಅವನು ಕೆಟ್ಟತನ ಮಾಡಿದರೆ ನಾನು ಅವನನ್ನು ಮನುಷ್ಯರ ಕೋಲಿನಿಂದಲೂ ಮನುಷ್ಯರ ಮಕ್ಕಳ ಪೆಟ್ಟುಗಳಿಂದಲೂ ದಂಡಿಸುವೆನು. ಆದರೆ ನಾನು ನಿನ್ನ ಮುಂದೆ ತೊರೆದುಬಿಟ್ಟ ಸೌಲ ನಿಂದ ನನ್ನ ಕೃಪೆಯನ್ನು ನಾನು ತೊಲಗಿಸಿದ ಹಾಗೆ ಅವನಿಂದ ತೊಲಗಿಸುವದಿಲ್ಲ. ನಿನ್ನ ಮನೆಯೂ ನಿನ್ನ ರಾಜ್ಯವೂ ನಿನ್ನ ಮುಂದೆ ಸದಾಕಾಲಕ್ಕೂ ಸ್ಥಿರಮಾಡಲ್ಪಡುವವು; ನಿನ್ನ ಸಿಂಹಾಸನವು ಯುಗ ಯುಗಾಂತರಕ್ಕೂ ಶಾಶ್ವತವಾಗಿರುವದು ಎಂದು ಹೇಳಿ ದನು.
- Mark 9:49–50 ಮಾರ್ಕನು 9:49–50ಯಾಕಂದರೆ ಪ್ರತಿಯೊಬ್ಬನಿಗೂ ಬೆಂಕಿಯಿಂದ ಸಾರವಾಗಬೇಕು; ಮತ್ತು ಪ್ರತಿಯೊಂದು ಯಜ್ಞಕ್ಕೆ ಉಪ್ಪಿ ನಿಂದ ಸಾರವಾಗಬೇಕು.ಉಪ್ಪು ಒಳ್ಳೆಯದು; ಆದರೆ ಉಪ್ಪು ತನ್ನ ಸಾರವನ್ನು ಕಳೆದುಕೊಂಡರೆ ಇನ್ನಾತರಿಂದ ನೀವು ಅದನ್ನು ರುಚಿಗೊಳಿಸುವಿರಿ? ನಿಮ್ಮೊಳಗೆ ಉಪ್ಪು ಇರಲಿ; ಮತ್ತು ಒಬ್ಬರ ಸಂಗಡಲೊಬ್ಬರು ಸಮಾಧಾನ ವಾಗಿರ್ರಿ ಅಂದನು. ಉಪ್ಪು ಒಳ್ಳೆಯದು; ಆದರೆ ಉಪ್ಪು ತನ್ನ ಸಾರವನ್ನು ಕಳೆದುಕೊಂಡರೆ ಇನ್ನಾತರಿಂದ ನೀವು ಅದನ್ನು ರುಚಿಗೊಳಿಸುವಿರಿ? ನಿಮ್ಮೊಳಗೆ ಉಪ್ಪು ಇರಲಿ; ಮತ್ತು ಒಬ್ಬರ ಸಂಗಡಲೊಬ್ಬರು ಸಮಾಧಾನ ವಾಗಿರ್ರಿ ಅಂದನು.
- Luke 1:31–33 ಲೂಕನು 1:31–33ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸು ಎಂದು ಹೆಸರಿಡಬೇಕು. ಆತನು ದೊಡ್ಡವನಾಗಿದ್ದು ಮಹೋನ್ನತನ ಕುಮಾರನೆಂದು ಕರೆಯಲ್ಪಡುವನು; ದೇವರಾದ ಕರ್ತನು ಆತನ ತಂದೆ ಯಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡು ವನು. ಆತನು ಯಾಕೋಬನ ಮನೆತನವನ್ನು ಸದಾ ಕಾಲವೂ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ ಎಂದು ಹೇಳಿದನು.
- Psalm 89:19–37 ಕೀರ್ತನೆಗಳು 89:19–37ಆಗ ದರ್ಶನದಲ್ಲಿ ನಿನ್ನ ಪರಿಶುದ್ಧನ ಸಂಗಡ ಮಾತಾಡಿ ಹೇಳಿದ್ದೇನಂದರೆ --ಪರಾಕ್ರಮಶಾಲಿಯ ಮೇಲೆ ಸಹಾಯವನ್ನು ಇಟ್ಟಿ ದ್ದೇನೆ. ಆಯಲ್ಪಟ್ಟವನನ್ನು ಜನರೊಳಗಿಂದ ಉನ್ನತಕ್ಕೇರಿ ಸಿದ್ದೇನೆ. ನನ್ನ ಸೇವಕನಾದ ದಾವೀದನನ್ನು ಕಂಡು ಕೊಂಡಿದ್ದೇನೆ; ನನ್ನ ಪರಿಶುದ್ಧ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದ್ದೇನೆ. ಅವನ ಸಂಗಡಲೇ ನನ್ನ ಕೈ ಸ್ಥಿರವಾಗಿರುವದು; ನನ್ನ ತೋಳು ಅವನನ್ನು ಬಲಪಡಿಸು ವುದು. ಶತ್ರುವು ಅವನನ್ನು ಬಲಾತ್ಕಾರ ಮಾಡನು; ಯಾವ ದುಷ್ಟನೂ ಅವನನ್ನು ಹಿಂಸೆ ಪಡಿಸನು. ಇದ ಲ್ಲದೆ ಅವನ ಮುಂದೆ ವೈರಿಗಳನ್ನು ಹೊಡೆದು ಬಿಡು ವೆನು; ಅವನ ಹಗೆಯವರನ್ನು ಸಂಕಟಪಡಿಸುವೆನು. ಆದರೆ ನನ್ನ ನಂಬಿಗಸ್ತಿಕೆಯೂ ಕರುಣೆಯೂ ಅವನ ಸಂಗಡ ಇರುವವು. ನನ್ನ ಹೆಸರಿನಲ್ಲಿ ಅವನ ಕೊಂಬು ಉನ್ನತವಾಗುವದು. ಸಮುದ್ರದಲ್ಲಿ ಅವನ ಕೈ ಯನ್ನೂ ನದಿಗಳಲ್ಲಿ ಅವನ ಬಲಗೈಯನ್ನೂ ಇರಿಸು ವೆನು. ಅವನು--ನೀನು ನನ್ನ ತಂದೆಯೂ ದೇವರೂ ರಕ್ಷಣೆಯ ಬಂಡೆಯೂ ಎಂದು ನನಗೆ ಮೊರೆಯಿಡು ವನು. ನಾನು ಅವನನ್ನು ನನ್ನ ಚೊಚ್ಚಲ ಮಗನ ನ್ನಾಗಿಯೂ ಭೂಮಿಯ ಅರಸರಿಗಿಂತ ಉನ್ನತನನ್ನಾ ಗಿಯೂ ಮಾಡುವೆನು. ಎಂದೆಂದಿಗೂ ಅವನಿಗೋ ಸ್ಕರ ನನ್ನ ಕರುಣೆಯನ್ನು ಕಾದಿಡುವೆನು. ನನ್ನ ಒಡಂಬಡಿಕೆಯು ಅವನೊಂದಿಗೆ ದೃಢವಾಗಿರುವದು. ಅವನ ಸಂತತಿ ಯನ್ನು ಸಹ ಎಂದೆಂದಿಗೂ ಅವನ ಸಿಂಹಾಸನವನ್ನು ಆಕಾಶದ ದಿವಸಗಳ ಹಾಗೆಯೂ ಮಾಡುವೆನು. ಅವನ ಮಕ್ಕಳು ನನ್ನ ನ್ಯಾಯ ಪ್ರಮಾಣವನ್ನು ಬಿಟ್ಟು, ನನ್ನ ನ್ಯಾಯಗಳಲ್ಲಿ ನಡೆಯದೇ ಹೋದರೆ, ಅವರು ನನ್ನ ನೇಮಕಗಳನ್ನು ಮುರಿದು ನನ್ನ ಆಜ್ಞೆಗಳನ್ನು ಕೈಕೊಳ್ಳದೇ ಹೋದರೆ, ಕೋಲಿ ನಿಂದ ಅವರ ದ್ರೋಹವನ್ನೂ ಪೆಟ್ಟುಗಳಿಂದ ಅವರ ಅಕ್ರಮವನ್ನೂ ದಂಡಿಸುವೆನು. ಆದಾಗ್ಯೂ ನನ್ನ ಪ್ರೀತಿ ಕರುಣೆಯನ್ನು ಅವನಿಂದ ಸಂಪೂರ್ಣವಾಗಿ ತೊಲಗಿಸೆನು; ಇಲ್ಲವೇ ನನ್ನ ನಂಬಿಗಸ್ತಿಕೆಯನ್ನು ವ್ಯರ್ಥ ಮಾಡೆನು. ನನ್ನ ಒಡಂಬಡಿಕೆಯನ್ನು ನಾನು ಮುರಿ ಯೆನು; ಇಲ್ಲವೆ ನನ್ನ ತುಟಿಗಳಿಂದ ಹೊರಟದ್ದನ್ನು ಬದಲಾಯಿಸೆನು. ಒಂದು ಸಾರಿ ನನ್ನ ಪರಿಶುದ್ಧತ್ವ ದಿಂದ ಆಣೆಯಿಟ್ಟು ಹೇಳಿದ್ದೇನೆ; ದಾವೀದನಿಗೆ ಸುಳ್ಳಾ ಡೆನು. ಅವನ ಸಂತತಿಯು ಯುಗ ಯುಗಕ್ಕೂ ಅವನ ಸಿಂಹಾಸನವು ನನ್ನ ಮುಂದೆ ಸೂರ್ಯನ ಹಾಗೆಯೂ ಇರುವದು. ಚಂದ್ರನ ಹಾಗೆ ಅದು ಯುಗಯುಗಕ್ಕೂ, ಸ್ಥಿರವಾಗಿರುವದು; ಪರಲೋಕದಲ್ಲಿ ರುವ ಸಾಕ್ಷಿಯ ಹಾಗೆ ನಂಬಿಕೆ ಯುಳ್ಳದ್ದಾಗಿರುವದು ಸೆಲಾ.
- 1 Kings 8:20 1 ಅರಸುಗಳು 8:20ಈಗ ಕರ್ತನು ತಾನು ಹೇಳಿದ ವಾಕ್ಯ ವನ್ನು ಪೂರೈಸಿದ್ದಾನೆ. ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ಎದ್ದು, ಕರ್ತನು ಮಾತು ಕೊಟ್ಟ ಪ್ರಕಾರ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಂಡು ಇಸ್ರಾಯೇಲಿನ ದೇವರಾದ ಕರ್ತನ ನಾಮಕ್ಕೆ ಮಂದಿರವನ್ನು ಕಟ್ಟಿಸಿದ್ದೇನೆ.
- 1 Chronicles 28:4–5 1 ಪೂರ್ವಕಾಲವೃತ್ತಾಂತ 28:4–5ಆದರೆ ಇಸ್ರಾಯೇಲಿನ ಕರ್ತನಾದ ದೇವರು ಎಂದೆಂದಿಗೂ ಇಸ್ರಾಯೇಲಿನ ಮೇಲೆ ಅರಸನಾಗಿರಲು ನನ್ನ ತಂದೆಯ ಮನೆಯ ಸಮಸ್ತರಿಂದ ನನ್ನನ್ನು ಆದುಕೊಂಡನು. ಯಾಕಂದರೆ ನಾನು ನಾಯಕನಾಗಿರಲು ಯೆಹೂದನನ್ನೂ ಯೆಹೂ ದನ ಮನೆಯಲ್ಲಿ ನನ್ನ ತಂದೆಯ ಮನೆಯನ್ನೂ ಆದು ಕೊಂಡು ನನ್ನ ತಂದೆಯ ಕುಮಾರರಲ್ಲಿ ನನ್ನನ್ನು ಸಮಸ್ತ ಇಸ್ರಾಯೇಲಿನ ಮೇಲೆ ಅರಸನಾಗ ಮಾಡಲು ಚಿತ್ತ ವುಳ್ಳವನಾಗಿದ್ದನು; ಕರ್ತನು ನನಗೆ ಅನೇಕ ಕುಮಾ ರರನ್ನು ಕೊಟ್ಟಿರುವಾಗ ನನ್ನ ಸಮಸ್ತ ಕುಮಾರರಲ್ಲಿ ಇಸ್ರಾಯೇಲಿನ ಮೇಲಾಗಿ ಕರ್ತನ ರಾಜ್ಯದ ಸಿಂಹಾ ಸನದ ಮೇಲೆ ಕುಳಿತುಕೊಳ್ಳುವದಕ್ಕೆ ನನ್ನ ಮಗನಾದ ಸೊಲೊಮೋನನನ್ನು ಆದುಕೊಂಡನು.
- Daniel 4:25–32 ದಾನಿಯೇಲನು 4:25–32ಅವರು ನಿನ್ನನ್ನು ಮನುಷ್ಯರೊಳಗಿಂದ ತಳ್ಳಿ ಬಿಡುವರು; ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವದು; ನಿನಗೆ ಎತ್ತುಗಳ ಸಂಗಡ ಹುಲ್ಲನ್ನು ಮೇಯಿಸುವರು. ಆಕಾಶದ ಮಂಜಿನಿಂದ ನಿನ್ನನ್ನು ತೇವ ಮಾಡುವರು. ಮಹೋನ್ನತನು ಮನುಷ್ಯರ ರಾಜ್ಯವನ್ನು ಆಳುವನೆಂದೂ ತನ್ನ ಮನಸ್ಸಿಗೆ ಸರಿಬಂದ ವರಿಗೆ ಅದನ್ನು ಕೊಡುತ್ತಾನೆಂದೂ ನೀನು ತಿಳಿಯುವ ವರೆಗೂ ಆ ಏಳು ಕಾಲಗಳು ಕಳೆದು ಹೋಗುವವು. ಆ ಮರದ ಬೇರಿನ ಮೋಟನ್ನು ಉಳಿಸಬೇಕೆಂದು ಅವರು ಆಜ್ಞೆ ಮಾಡಿದ್ದರಲ್ಲಿ ಅಂದರೆ ಪರಲೋಕವು ಆಳುತ್ತದೆಂದು ನೀನು ತಿಳಿದುಕೊಂಡ ಮೇಲೆ ನಿನ್ನ ರಾಜ್ಯವು ನಿನಗೆ ಸ್ಥಿರವಾಗುವದು. ಆದದರಿಂದ ಓ ಅರಸನೇ, ನನ್ನ ಆಲೋಚನೆಯು ನಿನಗೆ ಸಮ್ಮತಿ ಯಾಗಿ ನಿನ್ನ ಪಾಪಗಳನ್ನು ನೀತಿಯಿಂದ ಅಳಿಸಿ ನಿನ್ನ ಅನ್ಯಾಯಗಳನ್ನು ಬಡವರಿಗೆ ದಯೆ ತೋರಿಸುವದ ರಿಂದ ಬಿಟ್ಟುಬಿಡು. ಒಂದು ವೇಳೆ ಇದರಿಂದ ನಿನ್ನ ನೆಮ್ಮದಿಯು ಹೆಚ್ಚಾಗಬಹುದು. ಅರಸನಾದ ನೆಬೂಕದ್ನೆಚ್ಚರನಿಗೆ ಇದೆಲ್ಲವೂ ಸಂಭ ವಿಸಿತು. ಹನ್ನೆರಡು ತಿಂಗಳಾದ ಮೇಲೆ ಅವನು ಬಾಬೆಲಿನ ರಾಜ್ಯದ ಅರಮನೆಯಲ್ಲಿ ತಿರುಗಾಡಿದನು. ಆಗ ಅರಸನು ಮಾತನಾಡಿ ಹೇಳಿದ್ದೇನಂದರೆ--ನಾನು ನನ್ನ ಪರಾಕ್ರಮದ ಬಲದಿಂದ ನನ್ನ ಮಹಿ ಮೆಯ ಕೀರ್ತಿಗಾಗಿ ಕಟ್ಟಿಸಿದ ಮಹಾಬಾಬೆಲು ಇದ ಲ್ಲವೇ ಅಂದನು. ಈ ಮಾತು ಅರಸನ ಬಾಯಿಯಲ್ಲಿ ಇರುವಾಗಲೇ ಪರಲೋಕದಿಂದ ಒಂದು ಶಬ್ದವು ಉಂಟಾಯಿತು; ಏನಂದರೆ--ಓ ಅರಸನಾದ ನೆಬೂಕದ್ನೆ ಚ್ಚರನೇ, ನಿನಗೆ ಹೇಳುವದೇನಂದರೆ, ನಿನ್ನ ರಾಜ್ಯವು ನಿನ್ನನ್ನು ಬಿಟ್ಟು ಹೋಯಿತು. ಅವರು ನಿನ್ನನ್ನು ಮನುಷ್ಯರೊಳಗಿಂದ ತಳ್ಳಿಬಿಡುವರು. ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವದು, ನಿನಗೆ ಎತ್ತುಗಳ ಹಾಗೆ ಹುಲ್ಲನ್ನು ಮೇಯಿಸುವರು. ಮಹೋ ನ್ನತನು ಮನುಷ್ಯರ ರಾಜ್ಯವನ್ನಾಳುವನೆಂದೂ ತನ್ನ ಮನಸ್ಸಿಗೆ ಸರಿಬಂದವರಿಗೆ ಅದನ್ನು ಕೊಡುವೆನೆಂದೂ ನೀನು ತಿಳಿಯುವಷ್ಟರಲ್ಲಿ ಏಳು ಕಾಲಗಳು ನಿನ್ನನ್ನು ದಾಟಿ ಹೋಗುವವು.
- Ezekiel 43:24 ಯೆಹೆಜ್ಕೇಲನು 43:24ನೀನು ಅವುಗಳನ್ನು ಕರ್ತನ ಮುಂದೆ ಅರ್ಪಿಸಬೇಕು; ಯಾಜಕರು ಅವುಗಳ ಮೇಲೆ ಉಪ್ಪನ್ನು ಹಾಕಿ ಅವುಗಳನ್ನು ಕರ್ತನಿಗೆ ದಹನಬಲಿಯಾಗಿ ಅರ್ಪಿಸಬೇಕು.
- Jeremiah 33:21–22 ಯೆರೆಮೀಯ 33:21–22ಆಗ ನಾನು ನನ್ನ ಸೇವಕನಾದ ದಾವೀದನ ಸಂಗಡ ಮಾಡಿದ ಒಡಂಬಡಿಕೆಯನ್ನೂ ಅವನ ಸಿಂಹಾಸನದಲ್ಲಿ ಆಳುವ ಮಗನು ಅವನಿಗಿಲ್ಲದ ಹಾಗೆ ಮತ್ತು ನನ್ನ ಸೇವಕರಾಗಿರುವ ಯಾಜಕರಾದ ಲೇವಿಯರ ಸಂಗಡ ಮಾಡಿದ ಒಡಂಬಡಿಕೆಯನ್ನೂ ವಿಾರುವದಕ್ಕೆ ಆದೀತು. ಆಕಾಶದ ಸೈನ್ಯವನ್ನು ಹೇಗೆ ಎಣಿಸಲಿಕ್ಕಾಗದೋ ಸಮುದ್ರದ ಮರಳನ್ನು ಹೇಗೆ ಅಳಿಯಲಿಕ್ಕಾಗದೋ ಹಾಗೆಯೇ ನಾನು ನನ್ನ ಸೇವಕನಾದ ದಾವೀದನ ಸಂತಾನವನೂ ನನಗೆ ಸೇವೆ ಮಾಡುವ ಲೇವಿಯ ರನ್ನೂ ಹೆಚ್ಚಿಸುವೆನು.
- 1 Chronicles 17:11 1 ಪೂರ್ವಕಾಲವೃತ್ತಾಂತ 17:11ನಿನ್ನ ದಿವಸಗಳು ತೀರಿದ ಮೇಲೆ ನೀನು ನಿನ್ನ ಪಿತೃಗಳ ಬಳಿಗೆ ಸೇರಿದಾಗ ಆಗುವದೇ ನಂದರೆ, ನಾನು ನಿನ್ನ ತರುವಾಯ ನಿನ್ನ ಪುತ್ರರಿಂದಾ ಗುವ ನಿನ್ನ ಸಂತತಿಯನ್ನು ಎಬ್ಬಿಸಿ ಅವನಿಗೆ ರಾಜ್ಯವನ್ನು ಸ್ಥಿರಮಾಡುವೆನು.