2 Chronicles · chapter 15 · verse 3
2 Chronicles 15:3 in Kannada
ಆತನನ್ನು ಬಿಟ್ಟುಬಿಟ್ಟರೆ ಆತನು ನಿಮ್ಮನ್ನು ಬಿಟ್ಟುಬಿಡುವನು ಅಂದನು. ಬಹುಕಾಲ ಇಸ್ರಾಯೇಲ್ಯರು ನಿಜವಾದ ದೇವರಿಲ್ಲದೆ ಬೋಧಿಸುವ ಯಾಜಕನಿಲ್ಲದೆ ನ್ಯಾಯಪ್ರಮಾಣವಿಲ್ಲದೆ ಇದ್ದರು.
Aatanannu bittubittare aatanu nimmannu bittubiduvanu andanu. Bahukaala israayelyaru nijavaada devarillade bodhisuva yaajakanillade nyaayapramaanavillade iddaru.
2 Chronicles 15:3 in English
- King James Version (KJV)
- Now for a long season Israel [hath been] without the true God, and without a teaching priest, and without law.
- World English Bible (WEB)
- Now for a long time Israel was without the true God, without a teaching priest, and without law.
- American Standard Version (ASV)
- Now for a long season Israel was without the true God, and without a teaching priest, and without law:
- Bible in Basic English (BBE)
- Now for a long time Israel has been without the true God, and without a teaching priest and without the law;
- Darby Translation (DBY)
- Now for a long while Israel [was] without the true God, and without a teaching priest, and without law;
- Webster's Bible (WBS)
- Now for a long season Israel [hath been] without the true God, and without a teaching priest, and without law.
- Young's Literal Translation (YLT)
- and many days [are] to Israel without a true God, and without a teaching priest, and without law,
Read in context
- 1ಆಗ ದೇವರ ಆತ್ಮನು ಓದೇದನ ಮಗನಾದ ಅಜರ್ಯನ ಮೇಲೆ ಬಂದದ್ದರಿಂದ ಅವನು ಆಸನನ್ನು ಎದುರುಗೊಳ್ಳಲು ಹೊರಟುಬಂದು ಅವನಿಗೆ--
- 2ಆಸನೇ, ಯೆಹೂದ ಬೆನ್ಯಾವಿಾನನ ಸಮಸ್ತರೇ, ನನ್ನ ಮಾತನ್ನು ಕೇಳಿರಿ. ನೀವು ಕರ್ತನ ಸಂಗಡ ಇರುವ ವರೆಗೂ ಆತನು ನಿಮ್ಮ ಸಂಗಡ ಇರುವನು; ನೀವು ಆತನನ್ನು ಹುಡುಕಿದರೆ ಆತನು ನಿಮಗೆ ಸಿಕ್ಕುವನು;
- 3ಆತನನ್ನು ಬಿಟ್ಟುಬಿಟ್ಟರೆ ಆತನು ನಿಮ್ಮನ್ನು ಬಿಟ್ಟುಬಿಡುವನು ಅಂದನು. ಬಹುಕಾಲ ಇಸ್ರಾಯೇಲ್ಯರು ನಿಜವಾದ ದೇವರಿಲ್ಲದೆ ಬೋಧಿಸುವ ಯಾಜಕನಿಲ್ಲದೆ ನ್ಯಾಯಪ್ರಮಾಣವಿಲ್ಲದೆ ಇದ್ದರು.
- 4ಆದರೆ ಅವರು ತಮ್ಮ ಇಕ್ಕಟ್ಟಿನಲ್ಲಿ ಇಸ್ರಾಯೇಲಿನ ದೇವರಾದ ಕರ್ತನ ಕಡೆಗೆ ತಿರಿಗಿ ಆತನನ್ನು ಹುಡುಕಿ ದಾಗ ಆತನು ಅವರಿಗೆ ಸಿಕ್ಕಿದನು.
- 5ಆ ಕಾಲಗಳಲ್ಲಿ ಹೊರಗೆ ಹೋಗುವವನಿಗೂ ಒಳಗೆ ಬರುವವನಿಗೂ ಸಮಾಧಾನವಿಲ್ಲದೆ ಇತ್ತು; ದೇಶದ ನಿವಾಸಿಗಳು ಬಹಳ ವಾಗಿ ಹೆದರಿದ್ದರು.
Cross references
- Nehemiah 8:9 ನೆಹೆಮೀಯ 8:9ಇದಲ್ಲದೆ ತಿರ್ಷತನಾದ ನೆಹೆವಿಾಯನೂ ಶಾಸ್ತ್ರಿ ಯೂ, ಯಾಜಕನೂ ಆದ ಎಜ್ರನೂ ಜನರನ್ನು ಬೋಧಿಸಿದ ಲೇವಿಯರೂ ಜನರೆಲ್ಲರಿಗೆ ಹೇಳಿದ್ದೇ ನಂದರೆ--ಈ ದಿನವು ನಿಮ್ಮ ದೇವರಾಗಿರುವ ಕರ್ತನಿಗೆ ಪರಿಶುದ್ಧವಾದದರಿಂದ ದುಃಖಿಸದೆ, ಅಳದೆ ಇರ್ರಿ. ಯಾಕಂದರೆ ಜನರೆಲ್ಲರು ನ್ಯಾಯಪ್ರಮಾಣದ ಮಾತು ಗಳನ್ನು ಕೇಳಿದಾಗ ಅತ್ತರು.
- 2 Chronicles 17:8–9 2 ಪೂರ್ವಕಾಲವೃತ್ತಾಂತ 17:8–9ಅವರ ಸಂಗಡ ಲೇವಿಯರಾದ ಶೆಮಾಯನನ್ನೂ ನೆತನ್ಯನನ್ನೂ ಜೆಬದ್ಯನನ್ನೂ ಅಸಾ ಹೇಲನನ್ನೂ ಶೆವಿಾರಾಮೋತನನ್ನೂ ಯೆಹೋನಾತಾ ನನ್ನೂ ಅದೋನೀಯನನ್ನೂ ಟೋಬೀಯನನ್ನೂ ಟೋಬದೋನಿಯನನ್ನೂ ಇವರ ಸಂಗಡ ಯಾಜಕ ರಾದ ಎಲೀಷಾಮನನ್ನೂ ಯೆಹೋರಾಮನನ್ನೂ ಕಳು ಹಿಸಿದನು. ಇವರು ಯೆಹೂದದಲ್ಲಿ ಬೋಧಿಸಿದರು. ಅವರ ಬಳಿಯಲ್ಲಿ ಕರ್ತನ ನ್ಯಾಯಪ್ರಮಾಣದ ಪುಸ್ತಕ ಇತ್ತು; ಯೆಹೂದದ ಸಮಸ್ತ ಪಟ್ಟಣಗಳನ್ನು ಸಂಚರಿಸಿ ಜನರಿಗೆ ಬೋಧಿಸಿದರು.
- Leviticus 10:11 ಯಾಜಕಕಾಂಡ 10:11ನೀವು ಇಸ್ರಾಯೇಲ್ ಮಕ್ಕಳಿಗೆ ಕರ್ತನು ಮೋಶೆಯ ಕೈಗೆ ಒಪ್ಪಿಸಿ ಹೇಳಿದ ಹಾಗೆ ಎಲ್ಲಾ ಕಟ್ಟಳೆಗಳನ್ನು ಬೋಧಿಸುವದಕ್ಕಾಗಿಯೂ ಇರುವದು.
- Jeremiah 10:10 ಯೆರೆಮೀಯ 10:10ಆದರೆ ಕರ್ತನು ನಿಜವಾದ ದೇವರಾಗಿದ್ದಾನೆ, ಆತನು ಜೀವವುಳ್ಳ ದೇವರೂ ನಿತ್ಯವಾದ ಅರಸನೂ ಆಗಿದ್ದಾನೆ; ಆತನ ರೌದ್ರದಿಂದ ಭೂಮಿ ಕಂಪಿಸುವದು ಆತನ ಉಗ್ರತೆಯನ್ನು ಜನಾಂಗಗಳು ತಾಳಲಾರವು.
- Malachi 2:7 ಮಲಾಕಿಯ 2:7ಯಾಜಕನ ತುಟಿಗಳು ತಿಳುವಳಿಕೆಯನ್ನು ಕಾಪಾಡತಕ್ಕದ್ದು, ನ್ಯಾಯಪ್ರಮಾಣ ವನ್ನು ಅವನ ಬಾಯಲ್ಲಿ ಹುಡುಕತಕ್ಕದ್ದು; ಯಾಕಂದರೆ ಅವನು ಸೈನ್ಯಗಳ ಕರ್ತನ ಸೇವಕನೇ.
- Ezekiel 44:21–23 ಯೆಹೆಜ್ಕೇಲನು 44:21–23ಇದಲ್ಲದೆ ಯಾವ ಯಾಜಕನೇ ಆಗಲಿ, ಒಳಗಿನ ಅಂಗಳದಲ್ಲಿ ಪ್ರವೇಶಿಸುವಾಗ ದ್ರಾಕ್ಷಾ ರಸವನ್ನು ಕುಡಿಯಬಾರದು. ಅವರು ಒಬ್ಬ ವಿಧವೆ ಯನ್ನಾಗಲಿ, ಹೊರಗೆ ಹಾಕಲ್ಪಟ್ಟವಳನ್ನಾಗಲಿ, ಹೆಂಡತಿ ಯನ್ನಾಗಲು ಸ್ವೀಕರಿಸಬಾರದು ಆದರೆ ಇಸ್ರಾಯೇಲಿನ ಮನೆತನದ ಸಂತಾನದವರಾದ ಕನ್ಯೆಯರನ್ನು ತೆಗೆದು ಕೊಳ್ಳಬಹುದು. ಅಥವಾ ಯಾಜಕನಿಂದ ವಿಧವೆಯಾಗಿ ರುವವಳನ್ನು ತೆಗೆದುಕೊಳ್ಳಬಹುದು. ಅವರು ನನ್ನ ಜನರಿಗೆ ಪರಿಶುದ್ಧವಾದದ್ದಕ್ಕೂ ಅಪವಿತ್ರವಾದದ್ದಕ್ಕೂ ಹೆಚ್ಚು ಕಡಿಮೆಯನ್ನು ಬೋಧಿಸಿ, ಅವರಿಗೆ ಹೊಲೆ ಯಾದದ್ದನ್ನೂ ಶುದ್ಧವಾದದ್ದನ್ನೂ ತಿಳಿಸಬೇಕು.
- Matthew 2:4–5 ಮತ್ತಾಯನು 2:4–5ಇದಲ್ಲದೆ ಅವನು ಜನರ ಎಲ್ಲಾ ಪ್ರಧಾನ ಯಾಜಕರನ್ನೂ ಶಾಸ್ತ್ರಿಗಳನ್ನೂ ಒಟ್ಟುಗೂಡಿಸಿ ಕ್ರಿಸ್ತನು ಹುಟ್ಟತಕ್ಕದ್ದು ಎಲ್ಲಿ ಎಂದು ಅವರನ್ನು ವಿಚಾರಿಸಿದನು. ಅದಕ್ಕೆ ಅವರು ಅವನಿಗೆ--ಯೂದಾಯದ ಬೇತ್ಲೆಹೇಮಿ ನಲ್ಲಿಯೇ; ಯಾಕಂದರೆ ಪ್ರವಾದಿಯಿಂದ ಹೀಗೆ ಬರೆಯಲ್ಪಟ್ಟಿದೆ--
- Hosea 3:4 ಹೋಶೇಯ 3:4ಇಸ್ರಾಯೇಲಿನ ಮಕ್ಕಳು ಬಹಳ ದಿವಸಗಳ ವರೆಗೆ ಅರಸನಿಲ್ಲದೆ ಪ್ರಧಾ ನನಿಲ್ಲದೆ ಬಲಿ ಇಲ್ಲದೆ ವಿಗ್ರಹವಿಲ್ಲದೆ ಎಫೋದ್ ಇಲ್ಲದೆ ವಿಗ್ರಹಗಳು ಇಲ್ಲದೆ ಇರುವರು.ಆಮೇಲೆ ಇಸ್ರಾಯೇಲಿನ ಮಕ್ಕಳು ತಿರುಗಿಕೊಂಡು ಅವರ ದೇವ ರಾದ ಕರ್ತನನ್ನು ಮತ್ತು ಅವರ ಅರಸನಾದ ದಾವೀದ ನನ್ನು ಹುಡುಕಿಕೊಂಡು ಅಂತ್ಯ ದಿವಸಗಳಲ್ಲಿ ಕರ್ತನನ್ನೂ ಆತನ ದಯೆಯನ್ನೂ ಭಯದಿಂದ ಮರೆಹೋಗುವರು.
- Micah 3:11 ಮೀಕ 3:11ಅದರ ಮುಖ್ಯಸ್ಥರು ಲಂಚಕ್ಕೆ ನ್ಯಾಯತೀರಿಸುತ್ತಾರೆ; ಅದರ ಯಾಜಕರು ಸಂಬಳಕ್ಕೆ ಬೋಧಿಸುತ್ತಾರೆ; ಅದರ ಪ್ರವಾ ದಿಗಳು ಹಣಕ್ಕೆ ಶಕುನ ಹೇಳುತ್ತಾರೆ; ಆದರೂ ಕರ್ತನ ಮೇಲೆ ಆತುಕೊಂಡು--ಕರ್ತನು ನಮ್ಮ ಮಧ್ಯದಲ್ಲಿ ಇಲ್ಲವೋ? ನಮ್ಮ ಮೇಲೆ ಕೇಡು ಬರುವದಿಲ್ಲ ಅನ್ನು ತ್ತಾರೆ.ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು.
- Romans 2:12 ರೋಮಾಪುರದವರಿಗೆ 2:12ನ್ಯಾಯ ಪ್ರಮಾಣವಿಲ್ಲದೆ ಪಾಪ ಮಾಡಿದವರೆಲ್ಲರೂ ನ್ಯಾಯ ಪ್ರಮಾಣವಿಲ್ಲದೆ ನಾಶವಾಗುವರು; ನ್ಯಾಯಪ್ರಮಾಣ ವುಳ್ಳವರಾಗಿದ್ದು ಪಾಪ ಮಾಡಿದವರು ನ್ಯಾಯಪ್ರಮಾ ಣದಿಂದಲೇ ತೀರ್ಪು ಹೊಂದುವರು.
- Deuteronomy 33:10 ಧರ್ಮೋಪದೇಶಕಾಂಡ 33:10ಅವರು ಯಾಕೋಬನಿಗೆ ನಿನ್ನ ನ್ಯಾಯಗಳನ್ನೂ ಇಸ್ರಾಯೇಲಿಗೆ ನಿನ್ನ ನ್ಯಾಯಪ್ರಮಾಣವನ್ನೂ ಬೋಧಿಸುವರು; ನಿನ್ನ ಮುಂದೆ ಧೂಪವನ್ನೂ ನಿನ್ನ ಬಲಿಪೀಠದ ಮೇಲೆ ಸರ್ವಾಂಗ ದಹನಬಲಿಯನ್ನೂ ಇಡುವರು.
- 1 Kings 12:28–33 1 ಅರಸುಗಳು 12:28–33ಎಂದು ಅರಸನು ಆಲೋ ಚನೆ ಕೇಳಿಕೊಂಡು ಎರಡು ಬಂಗಾರದ ಹೋರಿಗ ಳನ್ನು ಮಾಡಿಸಿ ಜನರಿಗೆ--ಯೆರೂಸಲೇಮಿನ ವರೆಗೂ ಹೋಗುವದು ನಿಮಗೆ ಕಷ್ಟವಾಗಿದೆ. ಓ ಇಸ್ರಾಯೇಲೇ, ಇಗೋ, ಐಗುಪ್ತದಿಂದ ನಿನ್ನನ್ನು ಬರಮಾಡಿದ ನಿನ್ನ ಈ ದೇವರುಗಳು ಅಂದನು. ಅವನು ಒಂದನ್ನು ಬೇತೇಲಿನಲ್ಲಿಯೂ ಮತ್ತೊಂದನ್ನು ದಾನಿನಲ್ಲಿಯೂ ಇಟ್ಟನು. ಈ ಕಾರ್ಯವು ಪಾಪಕ್ಕೆ ಕಾರಣವಾಯಿತು. ಜನರು ಒಂದರ ದರ್ಶನಕ್ಕೋಸ್ಕರ ದಾನಿನ ವರೆಗೂ ಹೋದರು. ಇದಲ್ಲದೆ ಅವನು ಉನ್ನತ ಸ್ಥಳಗಳ ಒಂದು ಮನೆಯನ್ನು ಕಟ್ಟಿಸಿ ಲೇವಿಯ ಮಕ್ಕಳಲ್ಲದ ಜನರಲ್ಲಿ ಕನಿಷ್ಠ ಜನರೊಳಗಿಂದ ಯಾಜಕರನ್ನು ನೇಮಿಸಿ ದನು. ಯಾರೊಬ್ಬಾಮನು ಎಂಟನೇ ತಿಂಗಳ ಹದಿ ನೈದನೇ ದಿವಸದಲ್ಲಿ ಯೆಹೂದದಲ್ಲಿರುವ ಹಬ್ಬದ ಪ್ರಕಾರ ಹಬ್ಬವನ್ನು ನೇಮಿಸಿ ಪೀಠದ ಮೇಲೆ ಬಲಿಗ ಳನ್ನು ಅರ್ಪಿಸಿದನು. ಈ ಪ್ರಕಾರ ಅವನು ಬೇತೇಲಿ ನಲ್ಲಿ ಮಾಡಿ ಅವನು ಉಂಟುಮಾಡಿದ ಹೋರಿಗಳಿಗೆ ಬಲಿಗಳನ್ನು ಅರ್ಪಿಸಲು ಬೇತೇಲಿನಲ್ಲಿ ತಾನು ಮಾಡಿದ ಉನ್ನತ ಸ್ಥಳಗಳ ಯಾಜಕರನ್ನೇ ನೇಮಿಸಿದನು.ಹೀಗೆಯೇ ಅವನು ತನ್ನ ಸ್ವಂತ ಹೃದಯದಲ್ಲಿ ಯೋಚಿಸಿದ ತಿಂಗಳಲ್ಲಿ ಎಂಟನೇ ತಿಂಗಳ ಹದಿನೈದನೇ ದಿವಸದಲ್ಲಿ ಅವನು ಬೇತೇಲಿನಲ್ಲಿ ಉಂಟುಮಾಡಿದ ಪೀಠದ ಮೇಲೆ ಬಲಿಗಳನ್ನರ್ಪಿಸಿ ಇಸ್ರಾಯೇಲಿನ ಮಕ್ಕಳಿಗೆ ಹಬ್ಬವನ್ನು ನೇಮಿಸಿದನು. ಇದಲ್ಲದೆ ತಾನೇ ಪೀಠದ ಮೇಲೆ ಬಲಿಗಳನ್ನರ್ಪಿಸಿ ಧೂಪವನ್ನು ಸುಟ್ಟನು. ಹೀಗೆಯೇ ಅವನು ತನ್ನ ಸ್ವಂತ ಹೃದಯದಲ್ಲಿ ಯೋಚಿಸಿದ ತಿಂಗಳಲ್ಲಿ ಎಂಟನೇ ತಿಂಗಳ ಹದಿನೈದನೇ ದಿವಸದಲ್ಲಿ ಅವನು ಬೇತೇಲಿನಲ್ಲಿ ಉಂಟುಮಾಡಿದ ಪೀಠದ ಮೇಲೆ ಬಲಿಗಳನ್ನರ್ಪಿಸಿ ಇಸ್ರಾಯೇಲಿನ ಮಕ್ಕಳಿಗೆ ಹಬ್ಬವನ್ನು ನೇಮಿಸಿದನು. ಇದಲ್ಲದೆ ತಾನೇ ಪೀಠದ ಮೇಲೆ ಬಲಿಗಳನ್ನರ್ಪಿಸಿ ಧೂಪವನ್ನು ಸುಟ್ಟನು.