2 Chronicles · chapter 28 · verse 16
2 Chronicles 28:16 in Kannada
ಅದೇ ಕಾಲದಲ್ಲಿ ಅರಸನಾದ ಆಹಾಜನು ಅಶ್ಶೂ ರಿನ ಅರಸುಗಳ ಬಳಿಗೆ ಕಳುಹಿಸಿ ಸಹಾಯ ಬೇಡಿ ಕೊಂಡನು.
Ade kaaladalli arasanaada aahaajanu ashshoo rina arasugala balige kaluhisi sahaaya bedi kondanu.
2 Chronicles 28:16 in English
- King James Version (KJV)
- At that time did king Ahaz send unto the kings of Assyria to help him.
- World English Bible (WEB)
- At that time King Ahaz sent to the kings of Assyria to help him.
- American Standard Version (ASV)
- At that time did king Ahaz send unto the kings of Assyria to help him.
- Bible in Basic English (BBE)
- At that time King Ahaz sent for help to the king of Assyria.
- Darby Translation (DBY)
- At that time king Ahaz sent to the kings of Assyria to help him.
- Webster's Bible (WBS)
- At that time king Ahaz sent to the kings of Assyria to help him.
- Young's Literal Translation (YLT)
- At that time hath king Ahaz sent unto the king of Asshur to give help to him;
Read in context
- 14ಆಗ ಸೈನ್ಯದ ವರು ಸೆರೆಯವರನ್ನೂ ಕೊಳ್ಳೆಯನ್ನೂ ಪ್ರಧಾನರ ಮುಂದೆಯೂ ಸಮಸ್ತ ಕೂಟದ ಮುಂದೆಯೂ ಬಿಟ್ಟು ಬಿಟ್ಟರು.
- 15ಆಗ ಹೆಸರಿನಿಂದ ಹೇಳಲ್ಪಟ್ಟ ಆ ಮನು ಷ್ಯರು ಎದ್ದು ಸೆರೆಯವರನ್ನು ತೆಗೆದುಕೊಂಡು ಅವರಲ್ಲಿ ಬೆತ್ತಲೆಯಾದವರಿಗೆ ಕೊಳ್ಳೆಯ ವಸ್ತ್ರಗಳನ್ನು ಉಡಿಸಿ ತೊಡಿಸಿ ಅವರಿಗೆ ಕೆರಗಳನ್ನು ಕೊಟ್ಟು ಉಣ್ಣುವದಕ್ಕೂ ಕುಡಿಯುವದಕ್ಕೂ ಕೊಟ್ಟು ಅವರ ತಲೆಗಳಿಗೆ ಎಣ್ಣೆ ಯನ್ನು ಹಚ್ಚಿ ಅವರಲ್ಲಿ ಇರುವ ಬಲಹೀನರನ್ನು ಕತ್ತೆಗಳ ಮೇಲೆ ಏರಿಸಿ ಯೆರಿಕೋವೆಂಬ ಖರ್ಜೂರದ ಪಟ್ಟಣಕ್ಕೆ ಅವರ ಸಹೋದರರ ಬಳಿಗೆ ಕರಕೊಂಡು ಹೋಗಿ ಸಮಾರ್ಯಕ್ಕೆ ಹಿಂತಿರುಗಿದರು.
- 16ಅದೇ ಕಾಲದಲ್ಲಿ ಅರಸನಾದ ಆಹಾಜನು ಅಶ್ಶೂ ರಿನ ಅರಸುಗಳ ಬಳಿಗೆ ಕಳುಹಿಸಿ ಸಹಾಯ ಬೇಡಿ ಕೊಂಡನು.
- 17ಯಾಕಂದರೆ ಎದೋಮ್ಯರು ತಿರಿಗಿ ಬಂದು ಯೆಹೂದದವರನ್ನು ಸಂಹರಿಸಿ ಕೆಲವರನ್ನು ಸೆರೆಯಾಗಿ ತಕ್ಕೊಂಡು ಹೋದರು.
- 18ಇದಲ್ಲದೆ ಫಿಲಿ ಷ್ಟಿಯರು ತಗ್ಗಿನ ದೇಶದ ಪಟ್ಟಣಗಳಲ್ಲಿಯೂ ಯೆಹೂ ದದ ದಕ್ಷಿಣ ಪಾರ್ಶ್ವದಲ್ಲಿಯೂ ಹೊಕ್ಕು ಬೇತ್ಷೆಮೆ ಷನ್ನೂ ಅಯ್ಯಾಲೋನನ್ನೂ ಗೆದೇರೋತನ್ನೂ ಸೋಕೋವನ್ನೂ ಅದರ ಗ್ರಾಮಗಳನ್ನೂ ತಿಮ್ನಾ ವನ್ನೂ ಅದರ ಗ್ರಾಮಗಳನ್ನೂ ಗಿಮ್ಜೋವನ್ನೂ ಅದರ ಗ್ರಾಮಗಳನ್ನೂ ತಕ್ಕೊಂಡು ಅಲ್ಲಿ ವಾಸವಾಗಿದ್ದರು.
Cross references
- Isaiah 7:17 ಯೆಶಾಯ 7:17ಕರ್ತನು ನಿನ್ನ ಮೇಲೆ ಯೂ ನಿನ್ನ ಜನರ ಮೇಲೆಯೂ ನಿನ್ನ ತಂದೆಯ ಮನೆಯ ಮೇಲೆಯೂ ಯೆಹೂದದಿಂದ ಎಫ್ರಾ ಯಾಮು ಅಗಲಿದಂದಿನಿಂದ ಅಂದರೆ ಅಶ್ಯೂರ ಅರ ಸನ ಕಾಲದಿಂದಲೂ ಬಾರದೆ ಇದ್ದ ದಿವಸಗಳನ್ನು ಬರಮಾಡುವನು.
- 2 Kings 16:5–7 2 ಅರಸುಗಳು 16:5–7ಅವನ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀ ನನೂ ಇಸ್ರಾಯೇಲಿನ ಅರಸನಾದಂಥ ರೆಮಲ್ಯನ ಮಗನಾದ ಪೆಕಹನೂ ಯುದ್ಧಮಾಡಲು ಯೆರೂಸ ಲೇಮಿಗೆ ಬಂದು ಆಹಾಜನನ್ನು ಮುತ್ತಿಗೆ ಹಾಕಿದರು; ಆದರೆ ಅವನನ್ನು ಜಯಿಸಲಾರದೆ ಹೋದರು. ಅದೇ ವೇಳೆಯಲ್ಲಿ ಅರಾಮ್ಯರ ಅರಸನಾದ ರೆಚೀನನು ಏಲ ತನ್ನು ಅರಾಮಿಗೆ ತಿರಿಗಿ ಸೇರಿಸಿಕೊಂಡು ಏಲತಿನಿಂದ ಯೆಹೂದ್ಯರನ್ನು ಓಡಿಸಿಬಿಟ್ಟನು; ಅರಾಮ್ಯರು ಏಲತಿಗೆ ಬಂದು ಇಂದಿನವರೆಗೂ ಅಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ ಆಹಾಜನು ಅಶ್ಶೂರಿನ ಅರಸನಾದ ತಿಗ್ಲತ್ಪಿಲೇ ಸೆರನಿಗೆ--ನಾನು ನಿನ್ನ ಸೇವಕನೂ ನಿನ್ನ ಮಗನೂ ಆಗಿದ್ದೇನೆ; ನನಗೆ ವಿರೋಧವಾಗಿ ಎದ್ದ ಅರಾಮ್ಯರ ಅರಸನ ಕೈಗೂ ಇಸ್ರಾಯೇಲಿನ ಅರಸನ ಕೈಗೂ ನನ್ನನ್ನು ತಪ್ಪಿಸಿ ರಕ್ಷಿಸುವ ಹಾಗೆ ಬರ ಹೇಳು ಅಂದನು.
- Isaiah 7:1–9 ಯೆಶಾಯ 7:1–9ಯೋಥಾಮನ ಮಗನೂ ಉಜ್ಜೀಯನ ಮೊಮ್ಮಗನೂ ಯೆಹೂದದ ಅರಸನೂ ಆದ ಆಹಾಜನ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀನ, ರೆಮಲ್ಯನ ಮಗನೂ ಇಸ್ರಾಯೇಲ್ಯರ ಅರ ಸನೂ ಆದ ಪೆಕಹ ಎಂಬವರು ಯೆರೂಸಲೇಮಿನ ವಿರುದ್ಧವಾಗಿ ಯುದ್ಧಕ್ಕೆ ಹೋದರು. ಆದರೆ ಅದನ್ನು ಜಯಿಸಲು ಸಾಧ್ಯವಾಗಲಿಲ್ಲ. ಸಿರಿಯಾದವರು ಎಫ್ರಾಯಾಮ್ಯರೊಂದಿಗೆ ಹೊಂದಿಕೊಂಡಿದ್ದಾರೆಂದು ದಾವೀದನ ಮನೆಗೆ ತಿಳಿದಾಗ ಅವನ ಹೃದಯವು ಪ್ರಜೆಯ ಹೃದಯವು ಅರಣ್ಯದ ಮರಗಳು ಗಾಳಿಗೆ ಅಲುಗಾಡುವಂತೆ ನಡುಗಿದವು. ಆಗ ಕರ್ತನು, ಯೆಶಾಯನಿಗೆ--ನೀನು ಶೆಯಾರ್ ಯಾಶೂಬನೆಂಬ ನಿನ್ನ ಮಗನನ್ನು ಕರೆದುಕೊಂಡು ಹೋಗಿ ಮಡಿವಾಳರ ಹೊಲದ ಮೇಲೆ ಹೋಗುವ ದಾರಿಯಲ್ಲಿ ಮೇಲಿನ ಕೆರೆಯ ಕಾಲುವೆಯ ಕೊನೆಯ ಹತ್ತಿರ ಆಹಾಜನನ್ನು ಎದುರುಗೊಂಡು ಅವನಿಗೆ ಹೀಗೆ ಹೇಳು-- ಜಾಗ ರೂಕನಾಗಿ ಸುಮ್ಮನಿರು; ಭಯಪಡಬೇಡ ಇಲ್ಲವೆ ರೆಚೀನ ಅರಾಮ್ಯ ರೆಮಲ್ಯನ ಮಗ ಇವರ ಕೋಪವು ಎಷ್ಟು ಹೆಚ್ಚಿದರೂ ಹೊಗೆಯಾಡುವ ಈ ಎರಡು ಮೋಟು ಕೊಳ್ಳಿಗಳಿಗೆ ನಿನ್ನ ಹೃದಯವು ಕುಂದದಿರಲಿ. ಸಿರಿಯಾದವರೂ ಎಫ್ರಾಯಿಮಿನವರೂ ರೆಮಲ್ಯನ ಮಗನೂ ನಿನಗೆ ವಿರೋಧವಾಗಿ ದುರಾಲೋಚನೆ ಮಾಡಿ, ನಾವು ಯೆಹೂದಕ್ಕೆ ವಿರೋಧವಾಗಿ ಹೋಗಿ ಅದನ್ನು ವ್ಯಥೆಪಡಿಸಿ ಅದರಲ್ಲಿ ನಮಗಾಗಿ ಮಾಡಿ ಕೊಂಡಿರುವ ಒಪ್ಪಂದವನ್ನು ಉಲ್ಲಂಘಿಸಿ ಅದರ ಮಧ್ಯದಲ್ಲಿ ಒಬ್ಬ ಅರಸನನ್ನು ಅಂದರೆ ಟಾಬೇಲನ ಮಗನನ್ನು ನೇಮಿಸಿಕೊಳ್ಳೋಣ ಎಂದು ಹೇಳುವರು ಅದಕ್ಕೆ ಕರ್ತನಾದ ದೇವರು--ಅದು ನಿಲ್ಲುವದಿಲ್ಲ; ಇಲ್ಲವೆ ಅದು ಆಗುವದೇ ಇಲ್ಲ. ದಮಸ್ಕವು ಸಿರಿ ಯಾದ ತಲೆಯಾಗಿದೆ ಮತ್ತು ದಮಸ್ಕದ ತಲೆಯು ರೆಚೀನ; ಅರುವತ್ತೈದು ವರುಷಗಳೊಳಗೆ ಎಫ್ರಾಯಾ ಮ್ಯರು ಭಂಗಪಟ್ಟು ಜನಾಂಗವೆನಿಸಿಕೊಳ್ಳರು. ಎಫ್ರಾ ಯಾಮಿನ ತಲೆ ಸಮಾರ್ಯ ಸಮಾರ್ಯದ ತಲೆ ರೆಮಲ್ಯನ ಮಗನು. ನೀವು ನಂಬದೆ ಹೋದರೆ ನೀವು ನಿಜವಾಗಿಯೂ ನೆಲೆಗೊಳ್ಳುವದಿಲ್ಲ ಎಂಬದೇ.