2 Chronicles · chapter 30 · verse 19
2 Chronicles 30:19 in Kannada
ಆದರೆ ಹಿಜ್ಕೀಯನು ಅವರಿಗೋಸ್ಕರ ಪ್ರಾರ್ಥಿಸಿಯಾವನಾದರೂ ಪರಿಶುದ್ಧ ಸ್ಥಾನದ ಶುದ್ಧಿಯ ಪ್ರಕಾರ ಶುಚಿಯಾಗದೆ ಇದ್ದರೂ ತನ್ನ ಪಿತೃಗಳ ಕರ್ತನಾದ ದೇವರಾಗಿರುವ ದೇವರನ್ನು ಹುಡುಕಲು ತನ್ನ ಹೃದಯ ವನ್ನು ಸಿದ್ಧಮಾಡುವವನ ಪಾಪವನ್ನು ದಯವುಳ್ಳ ಕರ್ತನು ಮುಚ್ಚಲಿ ಎಂದು ಹೇಳಿದನು.
Aadare hijkeeyanu avarigoskara praarthisiyaavanaadaroo parishuddha sthaanada shuddhiya prakaara shuchiyaagade iddaroo tanna pitrugala kartanaada devaraagiruva devarannu hudukalu tanna hrudaya vannu siddhamaaduvavana paapavannu dayavulla kartanu muchchali endu helidanu.
2 Chronicles 30:19 in English
- King James Version (KJV)
- [That] prepareth his heart to seek God, the LORD God of his fathers, though [he be] not [cleansed] according to the purification of the sanctuary.
- World English Bible (WEB)
- who sets his heart to seek God, the LORD, the God of his fathers, even if they aren’t clean according to the purification of the sanctuary.”
- American Standard Version (ASV)
- that setteth his heart to seek God, Jehovah, the God of his fathers, though [he be] not [cleansed] according to the purification of the sanctuary.
- Bible in Basic English (BBE)
- Who, with all his heart, is turned to God the Lord, the God of his fathers, even if he has not been made clean after the rules of the holy place.
- Darby Translation (DBY)
- that has directed his heart to seek God, Jehovah the God of his fathers, although not according to the purification of the sanctuary.
- Webster's Bible (WBS)
- [That] prepareth his heart to seek God, the LORD God of his fathers, though [he is] not [cleansed] according to the purification of the sanctuary.
- Young's Literal Translation (YLT)
- who hath prepared his heart to seek God — Jehovah, God of his fathers — yet not according to the cleansing of the sanctuary;'
Read in context
- 17ಯಾಕಂದರೆ ಸಭೆಯಲ್ಲಿ ಅನೇಕರು ಅಪರಿಶುದ್ಧರಾಗಿದ್ದರು, ಲೇವಿಯರು ಅಶುದ್ಧರಾದ ಎಲ್ಲರ ನಿಮಿತ್ತ ಅವರನ್ನು ಕರ್ತನಿಗೆ ಪರಿಶುದ್ಧ ಮಾಡುವ ಹಾಗೆ ಪಸ್ಕದ ಬಲಿಗಳನ್ನು ವಧಿಸುವದಕ್ಕೆ ಇದ್ದರು.
- 18ಯಾಕಂದರೆ ಜನರಲ್ಲಿ ಅನೇಕರು--ಎಫ್ರಾ ಯಾಮ್, ಮನಸ್ಸೆ, ಇಸ್ಸಾಕಾರ್, ಜೆಬುಲೂನ್ ಇವ ರಲ್ಲಿ ಅನೇಕರು ತಮ್ಮನ್ನು ಶುದ್ಧ ಮಾಡಿಕೊಳ್ಳದೆ, ಬರೆಯಲ್ಪಟ್ಟ ಪ್ರಕಾರವಲ್ಲದೆ ಪಸ್ಕವನ್ನು ಉಂಡರು.
- 19ಆದರೆ ಹಿಜ್ಕೀಯನು ಅವರಿಗೋಸ್ಕರ ಪ್ರಾರ್ಥಿಸಿಯಾವನಾದರೂ ಪರಿಶುದ್ಧ ಸ್ಥಾನದ ಶುದ್ಧಿಯ ಪ್ರಕಾರ ಶುಚಿಯಾಗದೆ ಇದ್ದರೂ ತನ್ನ ಪಿತೃಗಳ ಕರ್ತನಾದ ದೇವರಾಗಿರುವ ದೇವರನ್ನು ಹುಡುಕಲು ತನ್ನ ಹೃದಯ ವನ್ನು ಸಿದ್ಧಮಾಡುವವನ ಪಾಪವನ್ನು ದಯವುಳ್ಳ ಕರ್ತನು ಮುಚ್ಚಲಿ ಎಂದು ಹೇಳಿದನು.
- 20ಕರ್ತನು ಹಿಜ್ಕೀಯನ ಮಾತು ಕೇಳಿ ಜನರನ್ನು ಗುಣಮಾಡಿದನು.
- 21ಯೆರೂಸಲೇಮಿನಲ್ಲಿದ್ದ ಇಸ್ರಾಯೇಲಿನ ಮಕ್ಕಳು ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಏಳು ದಿವಸ ಸಂತೋಷದಿಂದ ಆಚರಿಸಿದರು. ಇದಲ್ಲದೆ ಲೇವಿ ಯರೂ ಯಾಜಕರೂ ಮಹಾಶಬ್ದದ ವಾದ್ಯಗಳಿಂದ ಕರ್ತನಿಗೆ ಹಾಡಿ ಪ್ರತಿ ದಿನದಲ್ಲಿಯೂ ಕರ್ತನನ್ನು ಸ್ತುತಿಸಿದರು.
Cross references
- 2 Chronicles 19:3 2 ಪೂರ್ವಕಾಲವೃತ್ತಾಂತ 19:3ಆದಾಗ್ಯೂ ನೀನು ದೇಶದಿಂದ ತೋಪು ಗಳನ್ನು ತೆಗೆದುಹಾಕಿ ದೇವರನ್ನು ಹುಡುಕಲು ನಿನ್ನ ಹೃದಯವನ್ನು ಸಿದ್ಧಪಡಿಸಿದ್ದರಿಂದ ನಿನ್ನಲ್ಲಿ ಉತ್ತಮವಾದ ಕಾರ್ಯಗಳು ಕಾಣಲ್ಪಟ್ಟಿವೆ ಅಂದನು.
- Proverbs 23:26 ಜ್ಞಾನೋಕ್ತಿಗಳು 23:26ನನ್ನ ಮಗನೇ, ನಿನ್ನ ಹೃದಯ ವನ್ನು ನನಗೆ ಕೊಡು; ನನ್ನ ಮಾರ್ಗಗಳನ್ನು ನಿನ್ನ ಕಣ್ಣುಗಳು ದೃಷ್ಟಿಯಿಟ್ಟು ನೋಡಲಿ.
- Psalm 10:17 ಕೀರ್ತನೆಗಳು 10:17ಕರ್ತನೇ, ದೀನರ ಆಶೆ ಯನ್ನು ಕೇಳಿದ್ದೀ; ನೀನು ಅವರ ಹೃದಯವನ್ನು ಸಿದ್ಧ ಪಡಿಸಿ ಅವರ ಮೊರೆಗೆ ಕಿವಿಗೊಡುತ್ತೀ.ಭೂಮಿಯ ಮನುಷ್ಯನು ಇನ್ನು ಭಯಪಡಿಸದ ಹಾಗೆ ದಿಕ್ಕಿಲ್ಲದ ವರಿಗೂ ಕುಗ್ಗಿದವರಿಗೂ ನ್ಯಾಯತೀರಿಸುವದಕ್ಕೆ ಕಿವಿಗೊಟ್ಟಿದ್ದೀ.
- Job 11:13 ಯೋಬನು 11:13ನೀನು ನಿನ್ನ ಹೃದಯವನ್ನು ಸಿದ್ಧಮಾಡಿ ನಿನ್ನ ಕೈಗಳನ್ನು ಆತನ ಕಡೆಗೆ ಚಾಚಿದರೆ,
- 2 Chronicles 20:33 2 ಪೂರ್ವಕಾಲವೃತ್ತಾಂತ 20:33ಆದರೆ ಉನ್ನತ ಸ್ಥಳಗಳು ಇನ್ನೂ ತೆಗೆದುಹಾಕಲ್ಪಡಲಿಲ್ಲ. ಜನರು ತಮ್ಮ ಹೃದಯಗಳನ್ನು ತಮ್ಮ ಪಿತೃಗಳ ದೇವರ ಕಡೆಗೆ ಇನ್ನೂ ಸಿದ್ಧಮಾಡಿರಲಿಲ್ಲ;
- Ezra 7:10 ಎಜ್ರನು 7:10ಎಜ್ರನು ಕರ್ತನ ನ್ಯಾಯಪ್ರಮಾಣವನ್ನು ವಿಚಾರಿ ಸುವದಕ್ಕೂ ಅದರ ಪ್ರಕಾರ ಮಾಡುವದಕ್ಕೂ ಇಸ್ರಾ ಯೇಲಿನಲ್ಲಿ ನೇಮನ್ಯಾಯಗಳನ್ನು ಕಲಿಸುವದಕ್ಕೂ ತನ್ನ ಹೃದಯವನ್ನು ಸಿದ್ಧಮಾಡಿದನು.
- 1 Chronicles 29:18 1 ಪೂರ್ವಕಾಲವೃತ್ತಾಂತ 29:18ನಮ್ಮ ಪಿತೃಗಳಾದ ಅಬ್ರಹಾಕಮ್, ಇಸಾಕ್, ಇಸ್ರಾಯೇ ಲಿನ ದೇವರಾದ ಕರ್ತನೇ, ಇದನ್ನು ನಿನ್ನ ಜನರ ಹೃದಯದ ಯೋಚನೆಗಳ ಭಾವನೆಯಲ್ಲಿ ನಿರಂತರ ವಾಗಿ ಕಾಪಾಡಿ ಅವರ ಹೃದಯವನ್ನು ನಿನಗೆ ಸಿದ್ಧ ಮಾಡು.
- Numbers 19:13–20 ಅರಣ್ಯಕಾಂಡ 19:13–20ಸತ್ತ ಮನುಷ್ಯನ ಹೆಣವನ್ನು ಮುಟ್ಟಿ ಶುದ್ಧಮಾಡಿ ಕೊಳ್ಳದ ಯಾವನಾದರೂ ಕರ್ತನ ಗುಡಾರವನ್ನು ಹೊಲೆಮಾಡುತ್ತಾನೆ; ಅವನು ಇಸ್ರಾಯೇಲಿನವರೊ ಳಗಿಂದ ತೆಗೆದುಹಾಕಲ್ಪಡಲಿ; ಪ್ರತ್ಯೇಕಿಸಲ್ಪಟ್ಟ ನೀರು ಅವನ ಮೇಲೆ ಚೆಲ್ಲಲ್ಪಡದ ಕಾರಣ ಅಶುದ್ಧನಾಗಿದ್ದಾನೆ; ಅವನ ಅಶುದ್ಧತ್ವವು ಇನ್ನೂ ಅವನ ಮೇಲೆ ಇದೆ. ಒಬ್ಬ ಮನುಷ್ಯನು ಡೇರೆಯಲ್ಲಿ ಸತ್ತಾಗ ಅವನ ವಿಷಯವಾದ ಆಜ್ಞೆ ಏನಂದರೆ--ಆ ಡೇರೆಯೊಳಗೆ ಪ್ರವೇಶಿಸುವವರೆಲ್ಲರೂ ಡೇರೆಯಲ್ಲಿರುವವರೆ ಲ್ಲರೂ ಏಳು ದಿವಸಗಳ ವರೆಗೆ ಅಶುದ್ಧರಾಗಿರಬೇಕು. ಮುಚ್ಚಳ ಹಾಕದೆ ತೆರೆದಿರುವ ಸಾಮಾನುಗಳೆಲ್ಲಾ ಅಶುದ್ಧವಾಗಿರಬೇಕು. ಇದಲ್ಲದೆ ಹೊಲದಲ್ಲಿ ಕತ್ತಿ ಯಿಂದ ಕೊಲ್ಲಲ್ಪಟ್ಟವನನ್ನಾದರೂ ಮನುಷ್ಯನ ಎಲುಬ ನ್ನಾದರೂ ಸಮಾಧಿಯನ್ನಾದರೂ ಮುಟ್ಟಿದವರೆಲ್ಲರು ಏಳು ದಿವಸ ಅಪವಿತ್ರರಾಗಿರಬೇಕು. ಅಪವಿತ್ರನಾದವನಿಗೋಸ್ಕರ ಸುಡಲ್ಪಟ್ಟ ಪಾಪ ಕಳೆಯುವ ಹಸುವಿನ ಬೂದಿಯನ್ನು ತಕ್ಕೊಂಡು ಒಂದು ಪಾತ್ರೆಯೊಳಗಿಟ್ಟು ಅದರ ಮೇಲೆ ಹರಿಯುವ ನೀರನ್ನು ಹಾಕಬೇಕು ಪವಿತ್ರನಾದವನೊಬ್ಬನು ಹಿಸ್ಸೋಪನ್ನು ತಕ್ಕೊಂಡು ನೀರಿನಲ್ಲಿ ಅದ್ದಿ ಆ ಡೇರೆಯ ಮೇಲೆಯೂ ಸಮಸ್ತ ಸಾಮಾನುಗಳ ಮೇಲೆಯೂ ಅದರಲ್ಲಿರುವ ಮನುಷ್ಯರ ಮೇಲೆಯೂ ಎಲುಬನ್ನಾದರೂ ಕೊಲ್ಲಲ್ಪಟ್ಟ ವನನ್ನಾದರೂ ಸತ್ತವನನ್ನಾದರೂ ಸಮಾಧಿಯನ್ನಾದರೂ ಮುಟ್ಟಿದವನ ಮೇಲೆ ಚಿಮುಕಿಸಬೇಕು. ಪವಿತ್ರನಾ ದವನು ಅಪವಿತ್ರನಾದವನ ಮೇಲೆ ಮೂರನೇ ದಿವಸ ದಲ್ಲಿಯೂ ಏಳನೇ ದಿವಸದಲ್ಲಿಯೂ ಚಿಮುಕಿಸಲಿ. ಏಳನೇ ದಿವಸದಲ್ಲಿ ಅವನು ತನ್ನನ್ನು ಪವಿತ್ರಮಾಡಿ ಕೊಂಡು ತನ್ನ ವಸ್ತ್ರಗಳನ್ನು ಒಗೆದುಕೊಂಡು ಅವನು ಸ್ನಾನಮಾಡಿ ಸಾಯಂಕಾಲದಲ್ಲಿ ಪವಿತ್ರನಾಗುವನು. ಆದರೆ ಅಪವಿತ್ರನಾಗಿದ್ದು ತನ್ನನ್ನು ಶುದ್ಧಪಡಿಸಿ ಕೊಳ್ಳದವನು ಸಭೆಯ ಮಧ್ಯದಿಂದ ತೆಗೆದು ಹಾಕಲ್ಪ ಡಲಿ; ಅವನು ಕರ್ತನ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿದ್ದಾನೆ; ಪ್ರತ್ಯೇಕಿಸಲ್ಪಟ್ಟ ನೀರು ಅವನ ಮೇಲೆ ಚಿಮುಕಿಸಲ್ಪಡಲಿಲ್ಲ; ಅವನು ಅಪವಿತ್ರನೇ.
- 1 Samuel 7:3 1 ಸಮುವೇಲನು 7:3ಆಗ ಸಮುವೇಲನು ಇಸ್ರಾಯೇಲ್ ಮನೆಯವರಿಗೆಲ್ಲಾ ಮಾತನಾಡಿ--ನೀವು ನಿಮ್ಮ ಪೂರ್ಣಹೃದಯದಿಂದ ಕರ್ತನ ಕಡೆಗೆ ತಿರುಗಿ ನಿಮ್ಮಲ್ಲಿರುವ ಅನ್ಯದೇವರುಗಳನ್ನೂ ಅಷ್ಟೋ ರೆತ್ನ್ನೂ ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಿ ನಿಮ್ಮ ಹೃದಯವನ್ನು ಕರ್ತನಿಗೆ ಸಿದ್ಧಮಾಡಿ ಆತನೊಬ್ಬನನ್ನೇ ಸೇವಿಸಿದರೆ ಆತನು ನಿಮ್ಮನ್ನು ಫಿಲಿಷ್ಟಿಯರ ಕೈಗಳೊ ಳಗಿಂದ ತಪ್ಪಿಸುವನು.
- Leviticus 21:17–23 ಯಾಜಕಕಾಂಡ 21:17–23ಆರೋನನೊಂದಿಗೆ ಮಾತ ನಾಡಿ ಹೇಳಬೇಕಾದದ್ದೇನಂದರೆ--ನಿನ್ನ ಸಂತತಿಯು ಅವರ ವಂಶಾವಳಿಗಳಲ್ಲಿ ಯಾವನಿಗೆ ಯಾವದಾದರೂ ಕಳಂಕವಿರುವದಾದರೆ ಅವನು ತನ್ನ ದೇವರ ರೊಟ್ಟಿಯನ್ನು ಸಮರ್ಪಿಸುವದಕ್ಕಾಗಿ ಬರಬಾರದು. ಯಾವ ಮನುಷ್ಯನು ಕಳಂಕವುಳ್ಳವನಾಗಿರುತ್ತಾನೋ ಅಂದರೆ ಕಣ್ಣಿಲ್ಲದವನು ಇಲ್ಲವೆ ಕುಂಟನು ಚಪ್ಪಟೆ ಯಾದ ಮೂಗುಳ್ಳವನು ಹೆಚ್ಚಾದ ಅಂಗವುಳ್ಳವನು ಮುರಿದ ಪಾದವುಳ್ಳವನು ಮುರಿದ ಕೈಯುಳ್ಳವನು ಗೂನು ಬೆನ್ನುಳ್ಳವನು ಗಿಡ್ಡನು ಕಣ್ಣುಗಳಲ್ಲಿ ಕಳಂಕವುಳ್ಳವನು ಹುರುಕುಳ್ಳವನು ತುರಿಯುಳ್ಳವನು ತನ್ನ ಬೀಜಹೊಡೆದವನು ಯಾಜಕನಾದ ಆರೋನನ ಸಂತತಿಯಲ್ಲಿ ಕಳಂಕವುಳ್ಳ ಯಾವ ಮನುಷ್ಯನೂ ಅಗ್ನಿ ಸಮರ್ಪಣೆಗಳನ್ನು ಅರ್ಪಿಸು ವದಕ್ಕಾಗಿ ಕರ್ತನ ಸನ್ನಿಧಿಯಲ್ಲಿ ಬರಬಾರದು; ಕಳಂಕವುಳ್ಳವನು ತನ್ನ ದೇವರ ರೊಟ್ಟಿಯನ್ನು ಅರ್ಪಿಸುವದಕ್ಕಾಗಿ ಸವಿಾಪಬರಬಾರದು. ಅವನು ಅತಿ ಪರಿಶುದ್ಧವಾದ ಮತ್ತು ಪರಿಶುದ್ಧವಾದ ತನ್ನ ದೇವರ ರೊಟ್ಟಿಯನ್ನು ತಿನ್ನಬೇಕು. ಆದರೆ ಅವನು ಕಳಂಕವುಳ್ಳವನಾದದರಿಂದ ತೆರೆಯ ಒಳಕ್ಕೆ ಹೋಗ ಬಾರದು ಇಲ್ಲವೆ ಯಜ್ಞವೇದಿಯ ಸವಿಾಪಕ್ಕೂ ಬರಬಾರದು. ಹೀಗೆ ಅವನು ನನ್ನ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಬಾರದು; ಅವರನ್ನು ಶುದ್ಧೀಕರಿಸುವ ಕರ್ತನು ನಾನೇ.ಮೋಶೆಯು ಅದನ್ನು ಆರೋನ ನಿಗೂ ಅವನ ಕುಮಾರರಿಗೂ ಇಸ್ರಾಯೇಲ್ ಎಲ್ಲಾ ಮಕ್ಕಳಿಗೂ ಹೇಳಿದನು.
- Leviticus 15:31–33 ಯಾಜಕಕಾಂಡ 15:31–33ಹೀಗೆ ನೀವು ಇಸ್ರಾಯೇಲ್ ಮಕ್ಕಳನ್ನು ಅವರ ಅಶುದ್ಧತ್ವದಿಂದ ಪ್ರತ್ಯೇಕಿಸಬೇಕು; ಆಗ ಅವರು ತಮ್ಮ ಮಧ್ಯದಲ್ಲಿರುವ ನನ್ನ ಗುಡಾರವನ್ನು ಹೊಲೆಮಾಡದೆ ತಮ್ಮ ಅಶುದ್ಧತ್ವದಿಂದ ಸಾಯುವದಿಲ್ಲ. ಮೇಹಸ್ರಾವವುಳ್ಳವನಿಗೂ ವೀರ್ಯಸ್ರಾವವುಳ್ಳ ವನಿಗೂ ಅವುಗಳಿಂದ ಅಶುದ್ಧವಾಗುವವರಿಗೂ ಇರುವ ನಿಯಮವು ಇದೇ.ಮುಟ್ಟು ಎಂಬ ರೋಗವಿರು ವವಳಿಗೂ ಮೇಹಸ್ರಾವವಿರುವ ಗಂಡಸಿಗೂ ಹೆಂಗಸಿಗೂ ಅಶುದ್ಧವಾದವಳ ಸಂಗಡ ಮಲಗಿದವನಿಗೂ ಇರುವ ನಿಯಮವು ಇದೇ. ಮುಟ್ಟು ಎಂಬ ರೋಗವಿರು ವವಳಿಗೂ ಮೇಹಸ್ರಾವವಿರುವ ಗಂಡಸಿಗೂ ಹೆಂಗಸಿಗೂ ಅಶುದ್ಧವಾದವಳ ಸಂಗಡ ಮಲಗಿದವನಿಗೂ ಇರುವ ನಿಯಮವು ಇದೇ.
- Numbers 9:6 ಅರಣ್ಯಕಾಂಡ 9:6ಆಗ ಶವದ ದೆಸೆಯಿಂದ ಅಶುದ್ಧರಾಗಿ ಪಸ್ಕವನ್ನು ಆ ದಿವಸದಲ್ಲಿ ಆಚರಿಸಲಿಕ್ಕಾಗದ ಕೆಲವು ಮನುಷ್ಯ ರಿದ್ದರು; ಅವರು ಆ ದಿವಸದಲ್ಲಿ ಮೋಶೆ ಆರೋನರ ಮುಂದೆ ಬಂದರು.