2 Chronicles · chapter 30 · verse 5
2 Chronicles 30:5 in Kannada
ಆದದರಿಂದ ಅವರು ಯೆರೂಸಲೇಮಿನಲ್ಲಿ ಇಸ್ರಾಯೇಲಿನ ದೇವರಾದ ಕರ್ತನಿಗೆ ಪಸ್ಕವನ್ನು ಆಚರಿಸಲು ಬರಬೇಕೆಂದು ಬೇರ್ಷೆಬವು ಮೊದಲುಗೊಂಡು ದಾನಿನ ವರೆಗೂ ಸಮಸ್ತ ಇಸ್ರಾಯೇಲಿನಲ್ಲಿ ಕೂಗಿ ಸಾರಲು ನಿರ್ಣಯಿ ಸಿದರು. ಯಾಕಂದರೆ ಬರೆಯಲ್ಪಟ್ಟ ಹಾಗೆ ಅವರು ಅದನ್ನು ಬಹು ಕಾಲದಿಂದ ಆಚರಿಸಿದ್ದಿಲ್ಲ.
Aadadarinda avaru yeroosaleminalli israayelina devaraada kartanige paskavannu aacharisalu barabekendu bershebavu modalugondu daanina varegoo samasta israayelinalli koogi saaralu nirnayi sidaru. Yaakandare bareyalpatta haage avaru adannu bahu kaaladinda aacharisiddilla.
2 Chronicles 30:5 in English
- King James Version (KJV)
- So they established a decree to make proclamation throughout all Israel, from Beer-sheba even to Dan, that they should come to keep the passover unto the LORD God of Israel at Jerusalem: for they had not done [it] of a long [time in such sort] as it was written.
- World English Bible (WEB)
- So they established a decree to make proclamation throughout all Israel, from Beersheba even to Dan, that they should come to keep the Passover to the LORD, the God of Israel, at Jerusalem, for they had not kept it in great numbers in the way it is written.
- American Standard Version (ASV)
- So they established a decree to make proclamation throughout all Israel, from Beer-sheba even to Dan, that they should come to keep the passover unto Jehovah, the God of Israel, at Jerusalem: for they had not kept it in great numbers in such sort as it is written.
- Bible in Basic English (BBE)
- So it was ordered that word was to be sent out through all Israel, from Beer-sheba to Dan, that they were to come to keep the Passover to the Lord, the God of Israel, at Jerusalem: because they had not kept it in great numbers in agreement with the law.
- Darby Translation (DBY)
- So they established a decree to make proclamation throughout Israel from Beer-sheba even to Dan, that they should come to hold the passover to Jehovah the God of Israel, at Jerusalem; because they had not held it for a long time as it was written.
- Webster's Bible (WBS)
- So they established a decree to make proclamation throughout all Israel, from Beer-sheba even to Dan, that they should come to keep the passover to the LORD God of Israel at Jerusalem: for they had not done [it] of a long [time in the manner] as it was written.
- Young's Literal Translation (YLT)
- and they establish the thing, to cause to pass over an intimation into all Israel, from Beer-Sheba even unto Dan, to come in to make a passover to Jehovah, God of Israel, in Jerusalem, for not for a long time had they done as it is written.
Read in context
- 3ಯಾಕಂದರೆ ಯಾಜಕರು ತಮ್ಮನ್ನು ತಕ್ಕಹಾಗೆ ಪರಿಶುದ್ಧಮಾಡಿಕೊಳ್ಳದೆ ಇದ್ದದ್ದ ರಿಂದಲೂ ಜನರು ಯೆರೂಸಲೇಮಿಗೆ ಕೂಡಿ ಬಾರದೆ ಇದ್ದದ್ದರಿಂದಲೂ ಆ ಕಾಲದಲ್ಲಿ ಆಚರಿಸಲಾರದೆ ಇದ್ದರು.
- 4ಈ ಕಾರ್ಯವು ಅರಸನಿಗೂ ಸಮಸ್ತ ಸಭೆ ಯವರಿಗೂ ಒಪ್ಪಿಗೆಯಾಯಿತು.
- 5ಆದದರಿಂದ ಅವರು ಯೆರೂಸಲೇಮಿನಲ್ಲಿ ಇಸ್ರಾಯೇಲಿನ ದೇವರಾದ ಕರ್ತನಿಗೆ ಪಸ್ಕವನ್ನು ಆಚರಿಸಲು ಬರಬೇಕೆಂದು ಬೇರ್ಷೆಬವು ಮೊದಲುಗೊಂಡು ದಾನಿನ ವರೆಗೂ ಸಮಸ್ತ ಇಸ್ರಾಯೇಲಿನಲ್ಲಿ ಕೂಗಿ ಸಾರಲು ನಿರ್ಣಯಿ ಸಿದರು. ಯಾಕಂದರೆ ಬರೆಯಲ್ಪಟ್ಟ ಹಾಗೆ ಅವರು ಅದನ್ನು ಬಹು ಕಾಲದಿಂದ ಆಚರಿಸಿದ್ದಿಲ್ಲ.
- 6ಅದೇ ಪ್ರಕಾರ ದೂತರು ಅರಸನ ಕೈಯಿಂದಲೂ ಅವನ ಪ್ರಧಾನರ ಕೈಯಿಂದಲೂ ಪತ್ರಗಳನ್ನು ತಕ್ಕೊಂಡು ಅರಸನ ಅಪ್ಪಣೆಯ ಪ್ರಕಾರ ಸಮಸ್ತ ಇಸ್ರಾಯೇಲ್ ಯೆಹೂದ ದೇಶಗಳ ಮೇಲೆ ಹೋಗಿ--ಇಸ್ರಾಯೇಲ್ ಮಕ್ಕಳೇ, ಅಬ್ರಹಾಮ್ ಇಸಾಕ್ ಇಸ್ರಾಯೇಲ್ ಕರ್ತನಾದ ದೇವರ ಕಡೆಗೆ ತಿರುಗಿರಿ. ಆಗ ಆತನೂ ಅಶ್ಶೂರಿನ ಅರಸುಗಳ ಕೈಗೆ ತಪ್ಪಿಸಿಕೊಂಡ ನಿಮ್ಮ ಉಳಿದವರ ಬಳಿಗೆ ತಿರುಗುವನು.
- 7ತಮ್ಮ ಪಿತೃಗಳ ದೇವರಾದ ಕರ್ತನಿಗೆ ಅಪರಾಧ ಮಾಡಿದಂಥ, ನೀವು ನೋಡುವ ಹಾಗೆ ನಾಶನಕ್ಕೆ ಒಪ್ಪಿಸಲ್ಪಟ್ಟಂಥ, ನಿಮ್ಮ ಪಿತೃಗಳ ಹಾಗೆಯೂ ನಿಮ್ಮ ಸಹೋದರರ ಹಾಗೆಯೂ ಇರಬೇಡಿರಿ.
Cross references
- Judges 20:1 ನ್ಯಾಯಸ್ಥಾಪಕರು 20:1ಆಗ ಇಸ್ರಾಯೇಲ್ ಮಕ್ಕಳೆಲ್ಲರು ಹೊರಟು ಗಿಲ್ಯಾದು ಸಹಿತವಾಗಿ ದಾನ್ ಪಟ್ಟಣವು ಮೊದಲುಗೊಂಡು ಬೇರ್ಷೆಬದ ಮಟ್ಟಿಗೂ ಸಭೆಯು ಒಬ್ಬ ಮನುಷ್ಯನ ಹಾಗೆ ಮಿಚ್ಪೆಯಲ್ಲಿ ಕರ್ತನ ಮುಂದೆ ಕೂಡಿಕೊಂಡಿತು.
- Esther 9:20–21 ಎಸ್ತೇರಳು 9:20–21ಯೆಹೂದ್ಯರು ಅಡಾರ್ ತಿಂಗಳ ಹದಿನಾಲ್ಕನೇ ದಿವಸವನ್ನೂ ಹದಿನೈದನೇ ದಿವಸವನ್ನೂ ಪ್ರತಿ ವರು ಷದಲ್ಲಿ ಆಚರಿಸಲು ಅವರಲ್ಲಿ ಸ್ಥಿರಮಾಡುವ ಹಾಗೆ ಮೊರ್ದೆಕೈಯು ಈ ವರ್ತಮಾನಗಳನ್ನು ಬರೆದು ಅಹಷ್ವೇರೋಷನ ಸಕಲ ಪ್ರಾಂತ್ಯಗಳಲ್ಲಿ ಸವಿಾಪ ವಾಗಿಯೂ ದೂರವಾಗಿಯೂ ಇರುವ ಸಕಲ ಯೆಹೂ ದ್ಯರಿಗೆ ಪತ್ರಗಳನ್ನು ಕಳುಹಿಸಿದನು.
- 2 Chronicles 36:22 2 ಪೂರ್ವಕಾಲವೃತ್ತಾಂತ 36:22ಆದರೆ ಪಾರಸಿಯ ಅರಸನಾದ ಕೊರೇಷನ ಮೊದಲನೇ ವರುಷದಲ್ಲಿ ಕರ್ತನು ಯೆರೆವಿಾಯನ ಮೂಲಕವಾಗಿ ಹೇಳಿದ ವಾಕ್ಯವು ಈಡೇರುವ ಹಾಗೆ ಕರ್ತನು ಪಾರಸಿಯ ಅರಸನಾದ ಕೊರೇಷನ ಆತ್ಮ ವನ್ನು ಪ್ರೇರೇಪಿಸಿದ್ದರಿಂದ ಅವನು ತನ್ನ ರಾಜ್ಯದಲ್ಲೆಲ್ಲಾ ಸಾರೋಣದಿಂದಲೂ ಬರಹದಿಂದಲೂ ಹೇಳಿದ್ದೇ ನಂದರೆ --ಪಾರಸಿಯ ಅರಸನಾದ ಕೊರೇಷನು ಹೀಗೆ ಹೇಳುತ್ತಾನೆ--ಪರಲೋಕದ ದೇವರಾದ ಕರ್ತನು ಭೂಲೋಕದ ರಾಜ್ಯಗಳನ್ನೆಲ್ಲಾ ನನಗೆ ಕೊಟ್ಟಿದ್ದಾನೆ; ಆತನು ಯೆಹೂದ ದೇಶದೊಳಗೆ ಯೆರೂಸಲೇಮಿನಲ್ಲಿ ತನಗೆ ಆಲಯವನ್ನು ಕಟ್ಟಿಸಲು ನನಗೆ ಆಜ್ಞಾಪಿಸಿದ್ದಾನೆ. ಆತನ ಸಮಸ್ತ ಜನರಾದ ನಿಮ್ಮಲ್ಲಿ ಹೋಗುವವರು ಯಾರು? ಅವನು ಹೋಗಲಿ, ಅವನ ದೇವರಾದ ಕರ್ತನು ಅವನ ಸಂಗಡ ಇರಲಿ ಅಂದನು.
- 1 Corinthians 11:2 1 ಕೊರಿಂಥದವರಿಗೆ 11:2ಸಹೋದರರೇ, ನೀವು ಎಲ್ಲಾದರಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಂಡು ನಾನು ನಿಮಗೆ ಒಪ್ಪಿಸಿಕೊಟ ಕಟ್ಟಳೆಗಳನ್ನು ಅನುಸರಿಸಿ ನಡೆಯುತ್ತೀರೆಂದು ನಿಮ್ಮನ್ನು ಹೊಗಳುತ್ತೇನೆ.
- Daniel 6:8 ದಾನಿಯೇಲನು 6:8ಓ ರಾಜನೇ, ಈಗ ನೀನು ಈ ನಿಬಂಧನೆಯನ್ನು ವಿಧಿಸಿ ಇದು ಬದಲಾಗದಂತೆ ಮೇದ್ಯಯರ ಮತ್ತು ಪಾರಸೀಯರ ನ್ಯಾಯಪ್ರಮಾಣದ ಪ್ರಕಾರ ಇದು ಬೇರೆಯಾಗದಂತೆ ನಿರ್ಣಯವನ್ನು ರೂಪಿಸಿ ಬರಹಕ್ಕೆ ರುಜುಹಾಕು ಅಂದರು.
- Esther 3:12–15 ಎಸ್ತೇರಳು 3:12–15ಆಗ ಮೊದಲನೇ ತಿಂಗಳ ಹದಿಮೂರನೇ ದಿವಸದಲ್ಲಿ ಅರಸನ ಲೇಖಕರು ಕರೆಯಲ್ಪಟ್ಟರು. ಹಾಮಾನನು ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಪ್ರತಿ ಪ್ರಾಂತ್ಯದ ಮೇಲಿರುವ ಅರಸನ ಕೈ ಕೆಳಗಿನ ಉಪ ರಾಜರುಗಳಿಗೂ ಅಧಿಪತಿಗಳಿಗೂ ಪ್ರತಿ ಪ್ರಾಂತ್ಯದಲ್ಲಿ ಜನರ ಮೇಲಿರುವ ಅಧಿಕಾರಿಗೂ ಅದರದರ ಬರಹದ ಪ್ರಕಾರವಾಗಿಯೂ ಜನರ ಪ್ರತಿಯೊಬ್ಬರ ಭಾಷೆಯ ಪ್ರಕಾರವಾಗಿಯೂ ಬರೆಯಲ್ಪಟ್ಟಿತು. ಅದು ಅರಸನಾದ ಅಹಷ್ವೇರೋಷನ ಹೆಸರಿನಲ್ಲಿ ಬರೆಯಲ್ಪಟ್ಟು ಅರಸನ ಉಂಗುರದಿಂದ ಮುದ್ರೆ ಹಾಕಲ್ಪಟ್ಟಿತು. ಒಂದೇ ದಿನದಲ್ಲಿ ಅಂದರೆ ಅಡಾರ್ ತಿಂಗಳೆಂಬ ಹನ್ನೆರಡನೇ ತಿಂಗಳ ಹದಿಮೂರನೇ ದಿನದಲ್ಲಿ ಹಿರಿಯರೂ ಕಿರಿಯರೂ ಮಕ್ಕಳೂ ಸ್ತ್ರೀಯರೂ ಸಹಿತವಾಗಿ ಎಲ್ಲಾ ಯೆಹೂದ್ಯರನ್ನು ಸಂಹರಿಸುವದಕ್ಕೂ ಕೊಂದುಹಾಕು ವದಕ್ಕೂ ನಾಶಮಾಡುವದಕ್ಕೂ ಅವರ ಆಸ್ತಿಯನ್ನು ಕೊಳ್ಳೆಹೊಡೆಯುವದಕ್ಕೂ ಅರಸನ ಸಮಸ್ತ ಪ್ರಾಂತ್ಯಗಳಿಗೆ ಅಂಚೆಯವರ ಮೂಲಕ ಪತ್ರಿಕೆಗಳು ಕಳುಹಿಸ ಲ್ಪಟ್ಟವು. ಅವರು ಆ ದಿನಕ್ಕೆ ಸಿದ್ಧವಾಗಿರುವ ಹಾಗೆ ಪ್ರತಿ ಪ್ರಾಂತ್ಯದಲ್ಲಿ ಕಟ್ಟಳೆಯಾಗಿ ಬರೆದ ಪತ್ರಿಕೆಯು ಎಲ್ಲಾ ಜನಗಳಿಗೆ ಪ್ರಸಿದ್ಧ ಮಾಡಲ್ಪಟ್ಟಿತು.ಅಂಚೆ ಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಹೊರಟು ಹೋದರು. ಶೂಷನ್ ಅರಮನೆಯಲ್ಲಿ ಆ ಆಜ್ಞೆಯು ಕೊಡಲ್ಪಟ್ಟಿತು. ಅರಸನೂ ಹಾಮಾನನೂ ಕುಡಿಯಲು ಕುಳಿತುಕೊಂಡರು. ಆದರೆ ಶೂಷನ್ ಪಟ್ಟಣವು ತಳ ಮಳಗೊಂಡಿತು. ಅಂಚೆ ಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಹೊರಟು ಹೋದರು. ಶೂಷನ್ ಅರಮನೆಯಲ್ಲಿ ಆ ಆಜ್ಞೆಯು ಕೊಡಲ್ಪಟ್ಟಿತು. ಅರಸನೂ ಹಾಮಾನನೂ ಕುಡಿಯಲು ಕುಳಿತುಕೊಂಡರು. ಆದರೆ ಶೂಷನ್ ಪಟ್ಟಣವು ತಳ ಮಳಗೊಂಡಿತು.
- Daniel 4:1–33 ದಾನಿಯೇಲನು 4:1–33ಅರಸನಾದ ನೆಬೂಕದ್ನೆಚ್ಚರನು, ಭೂಲೋಕದಲ್ಲೆಲ್ಲಾ ವಾಸಮಾಡುವ ಎಲ್ಲಾ ಪ್ರಜೆಗಳಿಗೂ ಜನಾಂಗಗಳಿಗೂ ಭಾಷೆಯವರಿಗೂ--ನಿಮಗೆ ಶಾಂತಿಯು ಹೆಚ್ಚಾಗಲಿ. ದೇವರು ನನ್ನ ವಿಷಯದಲ್ಲಿ ನಡೆಸಿರುವ ಸೂಚಕ ಕಾರ್ಯಗಳನ್ನೂ ಅದ್ಭುತಗಳನ್ನೂ ಪ್ರಚುರಪಡಿಸಬೇಕೆಂಬದು ನನಗೆ ವಿಹಿತವಾಗಿ ತೋರಿ ಬಂದಿದೆ. ಆತನ ಸೂಚಕ ಕಾರ್ಯಗಳು ಎಷ್ಟೋ ದೊಡ್ಡವುಗಳು! ಆತನ ಅದ್ಭುತ ಗಳು ಪರಾಕ್ರಮವಾದವುಗಳು, ಆತನ ರಾಜ್ಯವು ನಿತ್ಯವಾದ ರಾಜ್ಯವು, ಆತನ ಆಡಳಿತವು ತಲತಲಾಂತರ ವಾಗಿರುವಂತದ್ದು. ನೆಬೂಕದ್ನೆಚ್ಚರನೆಂಬ ನಾನು ನನ್ನ ಮನೆಯಲ್ಲಿ ಕ್ಷೇಮವಾಗಿಯೂ ನನ್ನ ಅರಮನೆಯಲ್ಲಿ ಸುಖವಾ ಗಿಯೂ ಇರುವಾಗ; ನನ್ನನ್ನು ಭಯಪಡಿಸುವಂತೆ ನಾನು ಒಂದು ಕನಸನ್ನು ಕಂಡೆನು. ನನ್ನ ಹಾಸಿಗೆಯ ಮೇಲೆ ಆದ ಯೋಚನೆಗಳು ನನ್ನ ಮನಸ್ಸಿನ ದರ್ಶನ ಗಳು ನನ್ನನ್ನು ಕಳವಳಪಡಿಸಿದವು. ಆದದರಿಂದ ನನ್ನ ಕನಸಿನ ಅರ್ಥವನ್ನು ನನಗೆ ತಿಳಿಸುವದಕ್ಕೋಸ್ಕರ ಬಾಬೆಲಿನ ಸಕಲ ಜ್ಞಾನಿಗಳನ್ನು ನನ್ನ ಮುಂದೆ ತರಬೇಕೆಂದು ಆಜ್ಞಾಪಿಸಿದೆನು. ಆಗ ಮಂತ್ರಗಾರರು, ಜೋತಿಷ್ಯರು, ಕಸ್ದೀಯರು, ಶಕುನಗಾರರು ಒಳಗೆ ಬಂದರು; ನಾನು ಕನಸನ್ನು ಅವರಿಗೆ ತಿಳಿಸಿದೆನು; ಆದರೆ ಅವರು ಅದರ ಅರ್ಥವನ್ನು ನನಗೆ ತಿಳಿಸಲಿಲ್ಲ. ಕಡೆಯಲ್ಲಿ ನನ್ನ ದೇವರ ಹೆಸರಿನ ಹಾಗೆಯೂ ಬೇಲ್ತೆಶಚ್ಚರನೆಂಬ ಹೆಸರುಳ್ಳವನಾಗಿಯೂ ಪರಿಶುದ್ಧ ದೇವರ ಆತ್ಮವನ್ನು ಹೊಂದಿದವನಾಗಿಯೂ ಇರುವ ದಾನಿಯೇಲನು ನನ್ನ ಮುಂದೆ ಬಂದನು; ಅವನಿಗೆ ನಾನು ಕನಸನ್ನು ತಿಳಿಸಿ ಹೇಳಿದ್ದೇನಂದರೆ-- ಓ ಮಂತ್ರ ಗಾರರ ಯಜಮಾನನಾದ ಬೇಲ್ತೆಶಚ್ಚರನೇ, ನಿನ್ನಲ್ಲಿ ಪರಿಶುದ್ಧ ದೇವರ ಆತ್ಮವಿರುವದೆಂದೂ ಯಾವ ರಹ ಸ್ಯವೂ ನಿನ್ನನ್ನು ಕಳವಳಪಡಿಸದೆಂದೂ ನಾನು ಬಲ್ಲೆನು; ನಾನು ಕಂಡ ಕನಸಿನ ದರ್ಶನವನ್ನೂ ಅದರ ಅರ್ಥ ವನ್ನೂ ನೀನು ನನಗೆ ಹೇಳು. ನನ್ನ ಹಾಸಿಗೆಯಲ್ಲಿ ಉಂಟಾದ ನನ್ನ ಮನಸ್ಸಿನ ದರ್ಶನಗಳು--ನಾನು ನೋಡಲಾಗಿ ಇಗೋ, ಭೂಮಧ್ಯದಲ್ಲಿ ಒಂದು ಬಹಳ ಎತ್ತರವಾದ ಮರವು ಇತ್ತು. ಆ ಮರವು ಬೆಳೆದು ಬಲವಾಯಿತು; ಅದರ ಎತ್ತರವು ಆಕಾಶಕ್ಕೂ ಅದು ಭೂಲೋಕದ ಕಟ್ಟಕಡೆಯವರೆಗೂ ಕಾಣಿಸುತ್ತಿತ್ತು. ಅದರ ಎಲೆಗಳು ಅಂದವಾಗಿದ್ದವು, ಅದರ ಫಲವು ಬಹಳವಾಗಿತ್ತು; ಅದರಲ್ಲಿ ಎಲ್ಲರಿಗೂ ಆಹಾರವಿತ್ತು; ಬಯಲು ಮೃಗಗಳಿಗೆ ಅದರ ಕೆಳಗೆ ನೆರಳಿತ್ತು; ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಿಸುತ್ತಿದ್ದವು, ಎಲ್ಲಾ ಜೀವಿಗಳಿಗೂ ಅದರಿಂದಲೇ ಆಹಾರ ಇರುತ್ತಿತ್ತು. ನನ್ನ ಹಾಸಿಗೆಯ ಮೇಲೆ ನನ್ನ ಮನಸ್ಸಿನ ದರ್ಶನ ಗಳನ್ನು ನಾನು ನೋಡಲಾಗಿ; ಇಗೋ, ಒಬ್ಬ ಪಾಲಕನು ಮತ್ತು ಪರಿಶುದ್ಧನೊಬ್ಬನು ಪರಲೋಕದಿಂದ ಇಳಿದು ಬಂದನು. ಅವನು ಗಟ್ಟಿಯಾಗಿ ಕೂಗಿ--ಮರವನ್ನು ಕಡಿದು ಅದರ ಕೊಂಬೆಗಳನ್ನು ಕತ್ತರಿಸಿ ಅದರ ಎಲೆ ಗಳನ್ನು ಉದುರಿಸಿ ಅದರ ಫಲವನ್ನು ಚದರಿಸಿ ಮೃಗಗಳು ಅದರ ಕೆಳಗಿನಿಂದಲೂ ಪಕ್ಷಿಗಳು ಅದರ ಕೊಂಬೆ ಗಳಿಂದಲೂ ಹೋಗಿ ಬಿಡಲಿ. ಆದಾಗ್ಯೂ ಅದರ ಬೇರಿನ ಮೋಟನ್ನು ಕಬ್ಬಿಣ, ಹಿತ್ತಾಳೆಗಳ ಕಟ್ಟುಳ್ಳದ್ದ ನ್ನಾಗಿ ಮಾಡಿ ಭೂಮಿಯಲ್ಲಿಯೂ ಬಯಲಿನ ಎಳೆಯ ಹುಲ್ಲಿನಲ್ಲಿಯೂ ಬಿಡಿರಿ; ಅದು ಆಕಾಶದ ಮಂಜಿನಿಂದ ತೇವವಾಗಲಿ; ಅದರ ಪಾಲು ಮೃಗಗಳ ಸಂಗಡ ಭೂಮಿಯ ಹುಲ್ಲಿನಲ್ಲಿರಲಿ. ಅವನ ಹೃದಯವು ಮನುಷ್ಯನ ಹೃದಯದಂತೆ ಇರದೆ ಬದಲಾಗಲಿ; ಮೃಗದ ಹೃದಯವು ಅವನಿಗೆ ಕೊಡಲ್ಪಡಲಿ; ಏಳು ಕಾಲಗಳು ಅವನನ್ನು ದಾಟಿಹೋಗಲಿ ಎಂದು ಹೇಳಿದನು. ಈ ವಿಷಯವು ಪಾಲಕರ ಕಟ್ಟಡದಿಂದಲೂ ಈ ಸಂಗತಿಯು ಪರಿಶುದ್ಧರ ಮಾತಿನಿಂದಲೂ ಉಂಟಾಯಿತು; ಮಹೋ ನ್ನತನು ಮನುಷ್ಯರ ರಾಜ್ಯದಲ್ಲಿ ಆಳುತ್ತಾನೆಂದೂ ತನ್ನ ಮನಸ್ಸಿಗೆ ಸರಿಯಾದವರಿಗೆ ಅದನ್ನು ಕೊಡುತ್ತಾನೆಂದೂ ಮನುಷ್ಯರಲ್ಲಿ ನೀಚರಾದವರನ್ನು ಅದರ ಮೇಲೆ ನೇಮಿಸುತ್ತಾನೆಂದೂ ಜೀವಂತರಿಗೆ ತಿಳಿಯಬೇಕೆಂದೇ ಸಾರಿದನು. ಈ ಕನಸನ್ನು ನೆಬೂಕದ್ನೆಚ್ಚರನೆಂಬ ಅರಸನಾದ ನಾನು ಕಂಡಿದ್ದೇನೆ. ಈಗ ಬೆಲ್ತೆಶಚ್ಚರ ನೆಂಬ ನೀನು ಅದರ ಅರ್ಥವನ್ನು ಹೇಳು. ನನ್ನ ರಾಜ್ಯದಲ್ಲಿರುವ ಸಕಲ ಜ್ಞಾನಿಗಳು ಅದರ ಅರ್ಥವನ್ನು ನನಗೆ ಹೇಳಲು ಶಕ್ತರಾದವರಲ್ಲ. ಆದರೆ ನಿನ್ನಲ್ಲಿ ಪರಿ ಶುದ್ಧ ದೇವರುಗಳ ಆತ್ಮವು ಇರುವದರಿಂದ ನೀನು ಹೇಳಲು ಸಾಧ್ಯವಾಯಿತು. ಆಗ ಬೆಲ್ತೆಶಚ್ಚರನೆಂಬ ಹೆಸರುಳ್ಳ ದಾನಿಯೇಲನು ಒಂದು ಗಳಿಗೆ ವಿಸ್ಮಿತನಾಗಿ ತನ್ನ ಆಲೋಚನೆಗಳಲ್ಲಿ ಕಳವಳಗೊಂಡನು. ಆಗ ಅರಸನು ಮಾತನಾಡಿ-- ಬೆಲ್ತೆಶಚ್ಚರನೇ, ಕನಸಾಗಲಿ ಅದರ ಅರ್ಥವಾಗಲಿ ನಿನ್ನನ್ನು ಕಳವಳಪಡಿಸದಿರಲಿ ಅಂದನು. ಆಗ ಬೆಲ್ತೆಶ ಚ್ಚರನು ಪ್ರತ್ಯುತ್ತರವಾಗಿ--ನನ್ನ ಒಡೆಯನೇ, ಆ ಕನಸು ನಿನ್ನ ವೈರಿಗಳಿಗೂ ಅದರ ಅರ್ಥವು ನಿನ್ನ ಶತ್ರುಗಳಿಗೂ ಆಗಲಿ. ನೀನು ಕಂಡ ಮರವು ಬೆಳೆದು ಬಲವಾ ದದ್ದೂ ಅದರ ಎತ್ತರವು ಆಕಾಶಕ್ಕೂ ಅದರ ದೃಷ್ಟಿಯು ಭೂಮಿಯ ಎಲ್ಲಾ ಕಡೆಯವರೆಗೂ ಇವೆ; ಅದರ ಎಲೆಗಳು ಅಂದವಾಗಿದ್ದವು, ಫಲವು ಬಹಳವಾಗಿತ್ತು, ಅದರಲ್ಲಿ ಎಲ್ಲರಿಗೂ ಆಹಾರ ಇತ್ತು; ಅದರ ಕೆಳಗೆ ಬಯಲಿನ ಮೃಗಗಳು ವಾಸಮಾಡಿದ್ದವು; ಅದರ ಕೊಂಬೆಗಳಲ್ಲಿ ಆಕಾಶದ ಪಕ್ಷಿಗಳು ನಿವಾಸಮಾಡಿದ್ದವು. ಓ ಅರಸನೇ, ಆ ಮರವು ನೀನೇ ಆಗಿರುವಿ, ನೀನು ಬೆಳೆದು ಬಲವಾಗಿರುವಿ; ಹೌದು, ನಿನ್ನ ಮಹತ್ತು ಬೆಳೆದು ಆಕಾಶಕ್ಕೂ ನಿನ್ನ ಅಧಿಕಾರವು ಭೂಮಿಯ ಅಂತ್ಯದ ವರೆಗೂ ಮುಟ್ಟುವದು. ಆಗ ಪಾಲಕನು ಮತ್ತು ಪರಿಶುದ್ಧನಾದ ಒಬ್ಬನು ಪರಲೋಕದಿಂದ ಇಳಿದು ಬಂದು--ಮರವನ್ನು ಕಡಿದು ನಾಶಮಾಡಿರಿ; ಆದರೆ ಅದರ ಬೇರಿನ ಮೋಟನ್ನು ಕಬ್ಬಿಣ ಮತ್ತು ಕಂಚುಗಳ ಕಟ್ಟುಳ್ಳದ್ದಾಗಿ ಭೂಮಿಯಲ್ಲಿಯೂ ಬಯಲಿನ ಎಳೇ ಹುಲ್ಲಿನಲ್ಲಿಯೂ ಬಿಡಿರಿ. ಅದು ಆಕಾಶದ ಮಂಜಿನಿಂದ ತೇವವಾಗಲಿ; ಏಳು ಕಾಲಗಳು ಕಳೆಯುವ ತನಕ ಅದರ ಪಾಲು ಕಾಡು ಮೃಗಗಳ ಸಹವಾಸದ ಗತಿಯಂತೆ ಬರಲಿ ಎಂದು ಸಾರುವದನ್ನು ಅರಸನಾದ ನೀನು ನೋಡಿದೆಯಲ್ಲಾ. ಓ ಅರಸನೇ, ಇದರ ಅರ್ಥವು ಏನಂದರೆ, ನನ್ನ ಒಡೆಯನಾದ ಅರಸನ ಮೇಲೆ ಬಂದಂಥ ಮಹೋನ್ನತನ ನಿರ್ಣಯವು ಹೀಗಿದೆ. ಅವರು ನಿನ್ನನ್ನು ಮನುಷ್ಯರೊಳಗಿಂದ ತಳ್ಳಿ ಬಿಡುವರು; ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವದು; ನಿನಗೆ ಎತ್ತುಗಳ ಸಂಗಡ ಹುಲ್ಲನ್ನು ಮೇಯಿಸುವರು. ಆಕಾಶದ ಮಂಜಿನಿಂದ ನಿನ್ನನ್ನು ತೇವ ಮಾಡುವರು. ಮಹೋನ್ನತನು ಮನುಷ್ಯರ ರಾಜ್ಯವನ್ನು ಆಳುವನೆಂದೂ ತನ್ನ ಮನಸ್ಸಿಗೆ ಸರಿಬಂದ ವರಿಗೆ ಅದನ್ನು ಕೊಡುತ್ತಾನೆಂದೂ ನೀನು ತಿಳಿಯುವ ವರೆಗೂ ಆ ಏಳು ಕಾಲಗಳು ಕಳೆದು ಹೋಗುವವು. ಆ ಮರದ ಬೇರಿನ ಮೋಟನ್ನು ಉಳಿಸಬೇಕೆಂದು ಅವರು ಆಜ್ಞೆ ಮಾಡಿದ್ದರಲ್ಲಿ ಅಂದರೆ ಪರಲೋಕವು ಆಳುತ್ತದೆಂದು ನೀನು ತಿಳಿದುಕೊಂಡ ಮೇಲೆ ನಿನ್ನ ರಾಜ್ಯವು ನಿನಗೆ ಸ್ಥಿರವಾಗುವದು. ಆದದರಿಂದ ಓ ಅರಸನೇ, ನನ್ನ ಆಲೋಚನೆಯು ನಿನಗೆ ಸಮ್ಮತಿ ಯಾಗಿ ನಿನ್ನ ಪಾಪಗಳನ್ನು ನೀತಿಯಿಂದ ಅಳಿಸಿ ನಿನ್ನ ಅನ್ಯಾಯಗಳನ್ನು ಬಡವರಿಗೆ ದಯೆ ತೋರಿಸುವದ ರಿಂದ ಬಿಟ್ಟುಬಿಡು. ಒಂದು ವೇಳೆ ಇದರಿಂದ ನಿನ್ನ ನೆಮ್ಮದಿಯು ಹೆಚ್ಚಾಗಬಹುದು. ಅರಸನಾದ ನೆಬೂಕದ್ನೆಚ್ಚರನಿಗೆ ಇದೆಲ್ಲವೂ ಸಂಭ ವಿಸಿತು. ಹನ್ನೆರಡು ತಿಂಗಳಾದ ಮೇಲೆ ಅವನು ಬಾಬೆಲಿನ ರಾಜ್ಯದ ಅರಮನೆಯಲ್ಲಿ ತಿರುಗಾಡಿದನು. ಆಗ ಅರಸನು ಮಾತನಾಡಿ ಹೇಳಿದ್ದೇನಂದರೆ--ನಾನು ನನ್ನ ಪರಾಕ್ರಮದ ಬಲದಿಂದ ನನ್ನ ಮಹಿ ಮೆಯ ಕೀರ್ತಿಗಾಗಿ ಕಟ್ಟಿಸಿದ ಮಹಾಬಾಬೆಲು ಇದ ಲ್ಲವೇ ಅಂದನು. ಈ ಮಾತು ಅರಸನ ಬಾಯಿಯಲ್ಲಿ ಇರುವಾಗಲೇ ಪರಲೋಕದಿಂದ ಒಂದು ಶಬ್ದವು ಉಂಟಾಯಿತು; ಏನಂದರೆ--ಓ ಅರಸನಾದ ನೆಬೂಕದ್ನೆ ಚ್ಚರನೇ, ನಿನಗೆ ಹೇಳುವದೇನಂದರೆ, ನಿನ್ನ ರಾಜ್ಯವು ನಿನ್ನನ್ನು ಬಿಟ್ಟು ಹೋಯಿತು. ಅವರು ನಿನ್ನನ್ನು ಮನುಷ್ಯರೊಳಗಿಂದ ತಳ್ಳಿಬಿಡುವರು. ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವದು, ನಿನಗೆ ಎತ್ತುಗಳ ಹಾಗೆ ಹುಲ್ಲನ್ನು ಮೇಯಿಸುವರು. ಮಹೋ ನ್ನತನು ಮನುಷ್ಯರ ರಾಜ್ಯವನ್ನಾಳುವನೆಂದೂ ತನ್ನ ಮನಸ್ಸಿಗೆ ಸರಿಬಂದವರಿಗೆ ಅದನ್ನು ಕೊಡುವೆನೆಂದೂ ನೀನು ತಿಳಿಯುವಷ್ಟರಲ್ಲಿ ಏಳು ಕಾಲಗಳು ನಿನ್ನನ್ನು ದಾಟಿ ಹೋಗುವವು. ಅದೇ ಗಳಿಗೆಯಲ್ಲಿ ಈ ಸಂಗತಿಯು ನೆಬೂಕದ್ನೆಚ್ಚರನಲ್ಲಿ ನೆರವೇರಿತು. ಅವನು ಮನುಷ್ಯ ರಿಂದ ತಳ್ಳಲ್ಪಟ್ಟು ಎತ್ತುಗಳಂತೆ ಹುಲ್ಲು ಮೇಯುತ್ತಿದ್ದನು. ಕೊನೆಗೆ ಅವನ ಕೂದಲು ಹದ್ದಿನ ಗರಿಗಳಂತೆಯೂ ಅವನ ಉಗುರುಗಳು ಪಕ್ಷಿಗಳ ಉಗುರುಗಳ ಹಾಗೂ ಬೆಳೆಯುವ ವರೆಗೆ ಅವನ ಶರೀರವು ಆಕಾಶದ ಮಂಜಿ ನಿಂದ ತೇವವಾಯಿತು.
- Ezra 6:8–12 ಎಜ್ರನು 6:8–12ಇದಲ್ಲದೆ ದೇವರ ಈ ಆಲಯವನ್ನು ಕಟ್ಟುವದಕ್ಕೆ ಯೆಹೂದ್ಯರ ಹಿರಿಯರಿಗೆ ನೀವು ಮಾಡತಕ್ಕದ್ದನ್ನು ಕುರಿತು ನಾನು ಕೊಡುವ ಅಪ್ಪಣೆ ಏನಂದರೆ--ಅವರು ಅಭ್ಯಂತರ ಮಾಡಲ್ಪಡದ ಹಾಗೆ ನದಿಯ ಆಚೆಯಲ್ಲಿಂದ ಬರುವ ಅರಸನ ಕಪ್ಪದಿಂದಲೇ ಈ ಮನುಷ್ಯರಿಗೆ ಖರ್ಚು ಕೊಡಲ್ಪಡಲಿ. ಇದಲ್ಲದೆ ಅವರು ಪರ ಲೋಕದ ದೇವರಿಗೆ ಸುವಾಸನೆಯುಳ್ಳ ಬಲಿಗಳನ್ನು ಅರ್ಪಿಸುವ ಹಾಗೆಯೂ ಅರಸನ ಪ್ರಾಣಕ್ಕೋಸ್ಕರವೂ ಅವನ ಮಕ್ಕಳ ಪ್ರಾಣಕ್ಕೋಸ್ಕರವೂ ಪ್ರಾರ್ಥನೆ ಮಾಡುವ ಹಾಗೆಯೂ ಪರಲೋಕದ ದೇವರಿಗೆ ದಹನಬಲಿಗಳ ನಿಮಿತ್ತ ಅವರಿಗೆ ಬೇಕಾದ ಹೋರಿ ಗಳೂ ಟಗರುಗಳೂ ಕುರಿಮರಿಗಳೂ ಗೋಧಿಯೂ ಉಪ್ಪೂ ದ್ರಾಕ್ಷಾರಸವೂ ಎಣ್ಣೆಯೂ ಪ್ರತಿದಿನ ತಪ್ಪದೆ ಯೆರೂಸಲೇಮಿನಲ್ಲಿರುವ ಯಾಜಕರ ನೇಮಕದ ಪ್ರಕಾರ ಅವರಿಗೆ ಕೊಡಲ್ಪಡಲಿ. ನಾನು ಕೊಡುವ ಅಪ್ಪಣೆ ಏನಂದರೆ--ಯಾವನಾದರೂ ಈ ಮಾತನ್ನು ಬದಲು ಮಾಡಿದರೆ ಅವನ ಮನೆಯಿಂದ ಮರ ಕಿತ್ತು ನೆಡಲ್ಪಡಲಿ; ಅವನು ಅದರಲ್ಲಿ ಗಲ್ಲಿಗೆ ಹಾಕಲ್ಪಡಲಿ; ಅವನ ಮನೆಯು ಇದರ ನಿಮಿತ್ತ ತಿಪ್ಪೆ ಮಾಡಲ್ಪಡಲಿ. ಇದಲ್ಲದೆ ತನ್ನ ನಾಮವನ್ನು ಇರಿಸಲು ಮಾಡಿದ ದೇವರು ಯೆರೂಸಲೇಮಿನಲ್ಲಿರುವ ದೇವರ ಈ ಆಲಯವನ್ನು ಬದಲು ಮಾಡುವದಕ್ಕೂ ಕೆಡಿಸು ವದಕ್ಕೂ ತಮ್ಮ ಕೈಯನ್ನು ಚಾಚುವ ಎಲ್ಲಾ ಅರಸುಗ ಳನ್ನೂ ಜನರನ್ನೂ ಆತನು ಕೆಡಿಸಲಿ. ದಾರ್ಯಾ ವೆಷನಾದ ನಾನು ಅಪ್ಪಣೆಕೊಟ್ಟಿದ್ದೇನೆ; ಅದು ತ್ವರೆ ಯಾಗಿ ಮಾಡಲ್ಪಡಲಿ ಎಂಬದು.
- Leviticus 23:4 ಯಾಜಕಕಾಂಡ 23:4ನೀವು ಅವುಗಳ ಕಾಲಗಳಲ್ಲಿ ಪ್ರಕಟಿಸಬೇಕಾದ ಪವಿತ್ರ ಸಭಾಕೂಟ ಗಳೂ ಕರ್ತನ ಹಬ್ಬಗಳೂ ಇವೇ.
- Esther 8:8–10 ಎಸ್ತೇರಳು 8:8–10ನೀವು ಯೆಹೂದ್ಯರಿ ಗೋಸ್ಕರ ಅರಸನ ಹೆಸರಿನಿಂದ ನಿಮ್ಮ ದೃಷ್ಟಿಗೆ ಒಳ್ಳೇ ದಾಗಿ ತೋರುವ ಹಾಗೆ ಬರೆದು ಅರಸನ ಉಂಗುರ ದಿಂದ ಮುದ್ರೆಯನ್ನು ಹಾಕಿರಿ. ಯಾಕಂದರೆ ಅರಸನ ಹೆಸರಿನಿಂದ ಬರೆಯಲ್ಪಟ್ಟು ಅರಸನ ಉಂಗುರದಿಂದ ಮುದ್ರೆ ಹಾಕಲ್ಪಟ್ಟ ಬರಹವನ್ನು ಯಾರೂ ಈಗ ರದ್ದು ಮಾಡುವದಕ್ಕಾಗುವದಿಲ್ಲ ಅಂದನು. ಆಗ ಅದೇ ಕಾಲದಲ್ಲಿ ಶೀವಾನ್ ಎಂಬುವ ಮೂರನೇ ತಿಂಗಳ ಇಪ್ಪತ್ತು ಮೂರನೇ ದಿವಸದಲ್ಲಿ ಅರಸನ ಲೇಖಕರು ಕರೆಯಲ್ಪಟ್ಟರು. ಮೊರ್ದೆಕೈ ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಸಕಲ ಯೆಹೂದ್ಯರಿಗೂ ಭಾರತ ಮೊದಲು ಗೊಂಡು ಕೂಷಿನ ವರೆಗೂ ಇರುವ ನೂರಇಪ್ಪತ್ತೇಳು ಪ್ರಾಂತ್ಯಗಳ ಯಜಮಾನರಿಗೂ ಅಧಿಪತಿಗಳಿಗೂ ಪ್ರಧಾನರಿಗೂ ಪ್ರತಿ ಪ್ರಾಂತ್ಯಕ್ಕೆ ಅದರ ಬರಹದ ಪ್ರಕಾರವೂ ಪ್ರತಿ ಜನರಿಗೆ ಅವರ ಭಾಷೆಯ ಪ್ರಕಾ ರವೂ ಯೆಹೂದ್ಯರಿಗೆ ಅವರ ಬರಹದ ಪ್ರಕಾರವೂ ಅವರ ಭಾಷೆಯ ಪ್ರಕಾರವೂ ಬರೆಯಲ್ಪಟ್ಟಿತು. ಅವನು ಅರಸನಾದ ಅಹಷ್ವೇರೋಷನ ಹೆಸರಿನಲ್ಲಿ ಬರೆದು ಅರಸನ ಉಂಗುರದಿಂದ ಮುದ್ರೆ ಹಾಕಿ ಪತ್ರಗಳನ್ನು, ಕುದುರೆಗಳನ್ನು, ಸವಾರಿ ಹತ್ತಿ ಕೊಂಡಿದ್ದ ಅಂಚೆಯವರ ಮೂಲಕ ಹೇಸರ ಕತ್ತೆಗಳ ಮೇಲೆಯೂ ಒಂಟೆಗಳ ಮೇಲೆಯೂ ವೇಗವಾಗಿ ಓಡುವ ಎಳೇ ಒಂಟೆಗಳ ಮೇಲೆಯೂ ಕಳುಹಿಸಿದನು.
- 2 Chronicles 35:18 2 ಪೂರ್ವಕಾಲವೃತ್ತಾಂತ 35:18ಪ್ರವಾದಿಯಾದ ಸಮುವೇಲನ ದಿವಸಗಳು ಮೊದಲುಗೊಂಡು ಇಸ್ರಾಯೇಲಿನಲ್ಲಿ ಇಂಥಾ ಪಸ್ಕವನ್ನು ಆಚರಿಸಿದ್ದಿಲ್ಲ. ಇಸ್ರಾಯೇಲಿನ ಸಮಸ್ತ ಅರಸುಗಳಲ್ಲಿ ಯೋಷೀಯನೂ ಯಾಜಕರೂ ಲೇವಿಯರೂ ಸಿದ್ಧವಾಗಿದ್ದ ಯೆಹೂದ ಇಸ್ರಾಯೇಲ್ಯ ರೆಲ್ಲರೂ ಯೆರೂಸಲೇಮಿನ ನಿವಾಸಿಗಳೂ ಆಚರಿಸಿದ ಪಸ್ಕದ ಹಾಗೆ ಯಾರೂ ಆಚರಿಸಲಿಲ್ಲ.
- Leviticus 23:2 ಯಾಜಕಕಾಂಡ 23:2ಇಸ್ರಾಯೇಲ್ ಮಕ್ಕಳೊಂದಿಗೆ ನೀನು ಮಾತನಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ನೀವು ಪರಿಶುದ್ಧ ಸಭೆಗಳಾಗಿ ಪ್ರಕಟಿಸಬೇಕಾದ ಕರ್ತನ ಹಬ್ಬಗಳು ಇವೇ,
Original words (Hebrew)
- established · H5975עָמַד ʻâmad
- decree · H1697דָּבָר dâbâr
- proclamation · H5674עָבַר ʻâbar
- Israel · H3478יִשְׂרָאֵל Yisrâʼêl
- Beer-sheba · H884בְּאֵר שֶׁבַע Bᵉʼêr Shebaʻ
- Dan · H1835דָּן Dân
- come · H935בּוֹא bôwʼ
- keep · H6213עָשָׂה ʻâsâh
- passover · H6453פֶּסַח peçach
- God · H430אֱלֹהִים ʼĕlôhîym
- Israel · H3478יִשְׂרָאֵל Yisrâʼêl
- Jerusalem · H3389יְרוּשָׁלַ͏ִם Yᵉrûwshâlaim
- done · H6213עָשָׂה ʻâsâh
- long · H7230רֹב rôb
- written · H3789כָּתַב kâthab