2 Chronicles · chapter 31 · verse 1
2 Chronicles 31:1 in Kannada
ಇದೆಲ್ಲಾ ತೀರಿದ ತರುವಾಯ ಅಲ್ಲಿ ಇರುವವರಾದ ಸಮಸ್ತ ಇಸ್ರಾಯೇಲ್ಯರು ಯೆಹೂ ದದ ಪಟ್ಟಣಗಳಿಗೆ ಹೊರಟು ಹೋಗಿ ವಿಗ್ರಹಗಳನ್ನು ಮುರಿದು ತೋಪುಗಳನ್ನು ಕಡಿದು ಸಮಸ್ತ ಯೆಹೂದ ಬೆನ್ಯಾವಿಾನ್ ಎಫ್ರಾಯಾಮ್ ಮನಸ್ಸೆ ದೇಶಗಳಲ್ಲಿ ಅವುಗಳನ್ನೆಲ್ಲಾ ತೀರಿಸುವ ಪರ್ಯಂತರ ಉನ್ನತ ಸ್ಥಳ ಗಳನ್ನೂ ಬಲಿಪೀಠಗಳನ್ನೂ ಕೆಡವಿಹಾಕಿದರು. ಆಗ ಇಸ್ರಾಯೇಲ್ ಮಕ್ಕಳೆಲ್ಲರು ತಮ್ಮ ತಮ್ಮ ಸ್ವಾಸ್ತ್ಯಗ ಳಿಗೂ ತಮ್ಮ ತಮ್ಮ ಪಟ್ಟಣಗಳಿಗೂ ತಿರಿಗಿಹೋದರು.
Idellaa teerida taruvaaya alli iruvavaraada samasta israayelyaru yehoo dada pattanagalige horatu hogi vigrahagalannu muridu topugalannu kadidu samasta yehooda benyaaviాn ephraayaam manasse deshagalalli avugalannellaa teerisuva paryantara unnata sthala galannoo balipeethagalannoo kedavihaakidaru. Aaga israayel makkalellaru tamma tamma svaastyaga ligoo tamma tamma pattanagaligoo tirigihodaru.
2 Chronicles 31:1 in English
- King James Version (KJV)
- Now when all this was finished, all Israel that were present went out to the cities of Judah, and brake the images in pieces, and cut down the groves, and threw down the high places and the altars out of all Judah and Benjamin, in Ephraim also and Manasseh, until they had utterly destroyed them all. Then all the children of Israel returned, every man to his possession, into their own cities.
- World English Bible (WEB)
- Now when all this was finished, all Israel who were present went out to the cities of Judah and broke the pillars in pieces, cut down the Asherah poles, and broke down the high places and the altars out of all Judah and Benjamin, also in Ephraim and Manasseh, until they had destroyed them all. Then all the children of Israel returned, every man to his possession, into their own cities.
- American Standard Version (ASV)
- Now when all this was finished, all Israel that were present went out to the cities of Judah, and brake in pieces the pillars, and hewed down the Asherim, and brake down the high places and the altars out of all Judah and Benjamin, in Ephraim also and Manasseh, until they had destroyed them all. Then all the children of Israel returned, every man to his possession, into their own cities.
- Bible in Basic English (BBE)
- Now when all this was over, all the men of Israel who were present went out into the towns of Judah, causing the stone pillars to be broken up and the wood pillars to be cut down, pulling down the high places and the altars in all Judah and Benjamin, as well as in Ephraim and Manasseh, till all were gone. Then all the children of Israel went back to their towns, every man to his property.
- Darby Translation (DBY)
- And when all this was finished, all Israel that were present went out to the cities of Judah, and broke the columns, and hewed down the Asherahs, and demolished the high places and the altars in all Judah and Benjamin, in Ephraim also and Manasseh, until they had destroyed them all. And all the children of Israel returned every man to his possession, into their cities.
- Webster's Bible (WBS)
- Now when all this was finished, all Israel [that were] present went out to the cities of Judah, and broke the images in pieces, and cut down the groves, and threw down the high places and the altars out of all Judah and Benjamin, in Ephraim also and Manasseh, until they had utterly destroyed them all. Then all the children of Israel returned every man to his possession into their own cities.
- Young's Literal Translation (YLT)
- And at the completion of all this, gone out have all Israel who are found present to the cities of Judah, and break the standing-pillars, and cut down the shrines, and break down the high places and the altars, out of all Judah and Benjamin, and in Ephraim and Manasseh, even to completion, and all the sons of Israel turn back, each to his Possession, to their cities.
Read in context
- 1ಇದೆಲ್ಲಾ ತೀರಿದ ತರುವಾಯ ಅಲ್ಲಿ ಇರುವವರಾದ ಸಮಸ್ತ ಇಸ್ರಾಯೇಲ್ಯರು ಯೆಹೂ ದದ ಪಟ್ಟಣಗಳಿಗೆ ಹೊರಟು ಹೋಗಿ ವಿಗ್ರಹಗಳನ್ನು ಮುರಿದು ತೋಪುಗಳನ್ನು ಕಡಿದು ಸಮಸ್ತ ಯೆಹೂದ ಬೆನ್ಯಾವಿಾನ್ ಎಫ್ರಾಯಾಮ್ ಮನಸ್ಸೆ ದೇಶಗಳಲ್ಲಿ ಅವುಗಳನ್ನೆಲ್ಲಾ ತೀರಿಸುವ ಪರ್ಯಂತರ ಉನ್ನತ ಸ್ಥಳ ಗಳನ್ನೂ ಬಲಿಪೀಠಗಳನ್ನೂ ಕೆಡವಿಹಾಕಿದರು. ಆಗ ಇಸ್ರಾಯೇಲ್ ಮಕ್ಕಳೆಲ್ಲರು ತಮ್ಮ ತಮ್ಮ ಸ್ವಾಸ್ತ್ಯಗ ಳಿಗೂ ತಮ್ಮ ತಮ್ಮ ಪಟ್ಟಣಗಳಿಗೂ ತಿರಿಗಿಹೋದರು.
- 2ಹಿಜ್ಕೀಯನು ಅವನವನ ಸೇವೆಯ ಪ್ರಕಾರ ಯಾಜ ಕರ ಲೇವಿಯರ ಸರತಿಗಳನ್ನು ನೇಮಿಸಿದನು. ದಹನ ಬಲಿಗಳನ್ನು ಮತ್ತು ಸಮಾಧಾನದ ಬಲಿಗಳನ್ನು ಅರ್ಪಿ ಸುವದಕ್ಕೂ ಸೇವಿಸುವದಕ್ಕೂ ಕರ್ತನ ಗುಡಾರಗಳ ಬಾಗಲುಗಳಲ್ಲಿ ಸ್ತೋತ್ರ ಮಾಡುವದಕ್ಕೂ ಕೊಂಡಾ ಡುವದಕ್ಕೂ ಯಾಜಕರನ್ನೂ ಲೇವಿಯರನ್ನೂ ನೇಮಿಸಿ ದನು.
- 3ಅವನು ಕರ್ತನ ನ್ಯಾಯಪ್ರಮಾಣದಲ್ಲಿ ಬರೆದ ಪ್ರಕಾರ ಉದಯಕಾಲದ ಸಾಯಂಕಾಲದ ದಹನ ಬಲಿಗಳಿಗೋಸ್ಕರವೂ ಸಬ್ಬತ್ತುಗಳಲ್ಲಿಯೂ ಅಮವಾಸ್ಯೆ ಗಳಲ್ಲಿಯೂ ನೇಮಿಸಿದ ಹಬ್ಬಗಳಲ್ಲಿಯೂ ಬೇಕಾದ ದಹನಬಲಿಗಳಿಗೋಸ್ಕರವೂ ಅರಸನ ಸ್ಥಿತಿಯಿಂದ ಅವನ ಭಾಗವನ್ನು ನೇಮಿಸಿದನು.
Cross references
- 2 Kings 18:4 2 ಅರಸುಗಳು 18:4ಅವನು ಉನ್ನತ ಸ್ಥಳಗಳನ್ನು ತೆಗೆದುಹಾಕಿ, ವಿಗ್ರಹ ಗಳನ್ನು ಒಡೆದುಬಿಟ್ಟು, ತೋಪುಗಳನ್ನು ಕಡಿದುಹಾಕಿ, ಮೋಶೆಯು ಮಾಡಿದ ತಾಮ್ರದ ಸರ್ಪವನ್ನು ಚೂರುಚೂರು ಮಾಡಿದನು. ಆ ದಿವಸಗಳ ವರೆಗೂ ಇಸ್ರಾ ಯೇಲಿನ ಮಕ್ಕಳು ಅದಕ್ಕೆ ಧೂಪಸುಡುತ್ತಿದ್ದರು. ಅದನ್ನು ತಾಮ್ರದ ತುಂಡು ಎಂದು ಅವನು ಕರೆದನು.
- 2 Chronicles 32:12 2 ಪೂರ್ವಕಾಲವೃತ್ತಾಂತ 32:12ಈ ಹಿಜ್ಕೀಯನು ಉನ್ನತ ಸ್ಥಳಗಳನ್ನೂ ಬಲಿಪೀಠಗಳನ್ನೂ ತೆಗೆದುಹಾಕಿ ಯೆಹೂದದವರಿಗೂ ಯೆರೂಸಲೇಮಿ ನವರಿಗೂ--ನೀವು ಒಂದೇ ಬಲಿಪೀಠದ ಮುಂದೆ ಅಡ್ಡಬಿದ್ದು ಅದರ ಮೇಲೆ ಧೂಪವನ್ನರ್ಪಿಸಬೇಕೆಂದು ಹೇಳಿದ್ದಾನಲ್ಲವೇ?
- 2 Chronicles 30:1–27 2 ಪೂರ್ವಕಾಲವೃತ್ತಾಂತ 30:1–27ಆಗ ಅವರು ಇಸ್ರಾಯೇಲಿನ ದೇವರಾದ ಕರ್ತನ ಪಸ್ಕವನ್ನು ಆಚರಿಸಲು ಯೆರೂ ಸಲೇಮಿನಲ್ಲಿ ಕರ್ತನ ಆಲಯಕ್ಕೆ ಬರುವ ಹಾಗೆ ಹಿಜ್ಕೀಯನು ಸಮಸ್ತ ಇಸ್ರಾಯೇಲಿಗೂ ಯೆಹೂದಕ್ಕೂ ಹೇಳಿ ಕಳುಹಿಸಿ, ಎಫ್ರಾಯಾಮ್ಯರಿಗೂ ಮನಸ್ಸೆಯ ವರಿಗೂ ಪತ್ರಗಳನ್ನು ಬರೆದನು. ಯೆರೂಸಲೇಮಿ ನಲ್ಲಿರುವ ಅರಸನೂ ಅವನ ಪ್ರಧಾನರೂ ಸಮಸ್ತ ಸಭೆಯೂ ಎರಡನೇ ತಿಂಗಳಲ್ಲಿ ಪಸ್ಕವನ್ನು ಆಚರಿ ಸಲು ಯೋಚಿಸಿಕೊಂಡರು. ಯಾಕಂದರೆ ಯಾಜಕರು ತಮ್ಮನ್ನು ತಕ್ಕಹಾಗೆ ಪರಿಶುದ್ಧಮಾಡಿಕೊಳ್ಳದೆ ಇದ್ದದ್ದ ರಿಂದಲೂ ಜನರು ಯೆರೂಸಲೇಮಿಗೆ ಕೂಡಿ ಬಾರದೆ ಇದ್ದದ್ದರಿಂದಲೂ ಆ ಕಾಲದಲ್ಲಿ ಆಚರಿಸಲಾರದೆ ಇದ್ದರು. ಈ ಕಾರ್ಯವು ಅರಸನಿಗೂ ಸಮಸ್ತ ಸಭೆ ಯವರಿಗೂ ಒಪ್ಪಿಗೆಯಾಯಿತು. ಆದದರಿಂದ ಅವರು ಯೆರೂಸಲೇಮಿನಲ್ಲಿ ಇಸ್ರಾಯೇಲಿನ ದೇವರಾದ ಕರ್ತನಿಗೆ ಪಸ್ಕವನ್ನು ಆಚರಿಸಲು ಬರಬೇಕೆಂದು ಬೇರ್ಷೆಬವು ಮೊದಲುಗೊಂಡು ದಾನಿನ ವರೆಗೂ ಸಮಸ್ತ ಇಸ್ರಾಯೇಲಿನಲ್ಲಿ ಕೂಗಿ ಸಾರಲು ನಿರ್ಣಯಿ ಸಿದರು. ಯಾಕಂದರೆ ಬರೆಯಲ್ಪಟ್ಟ ಹಾಗೆ ಅವರು ಅದನ್ನು ಬಹು ಕಾಲದಿಂದ ಆಚರಿಸಿದ್ದಿಲ್ಲ. ಅದೇ ಪ್ರಕಾರ ದೂತರು ಅರಸನ ಕೈಯಿಂದಲೂ ಅವನ ಪ್ರಧಾನರ ಕೈಯಿಂದಲೂ ಪತ್ರಗಳನ್ನು ತಕ್ಕೊಂಡು ಅರಸನ ಅಪ್ಪಣೆಯ ಪ್ರಕಾರ ಸಮಸ್ತ ಇಸ್ರಾಯೇಲ್ ಯೆಹೂದ ದೇಶಗಳ ಮೇಲೆ ಹೋಗಿ--ಇಸ್ರಾಯೇಲ್ ಮಕ್ಕಳೇ, ಅಬ್ರಹಾಮ್ ಇಸಾಕ್ ಇಸ್ರಾಯೇಲ್ ಕರ್ತನಾದ ದೇವರ ಕಡೆಗೆ ತಿರುಗಿರಿ. ಆಗ ಆತನೂ ಅಶ್ಶೂರಿನ ಅರಸುಗಳ ಕೈಗೆ ತಪ್ಪಿಸಿಕೊಂಡ ನಿಮ್ಮ ಉಳಿದವರ ಬಳಿಗೆ ತಿರುಗುವನು. ತಮ್ಮ ಪಿತೃಗಳ ದೇವರಾದ ಕರ್ತನಿಗೆ ಅಪರಾಧ ಮಾಡಿದಂಥ, ನೀವು ನೋಡುವ ಹಾಗೆ ನಾಶನಕ್ಕೆ ಒಪ್ಪಿಸಲ್ಪಟ್ಟಂಥ, ನಿಮ್ಮ ಪಿತೃಗಳ ಹಾಗೆಯೂ ನಿಮ್ಮ ಸಹೋದರರ ಹಾಗೆಯೂ ಇರಬೇಡಿರಿ. ನಿಮ್ಮ ಪಿತೃ ಗಳ ಹಾಗೆ ನಿಮ್ಮ ಕುತ್ತಿಗೆಯನ್ನು ಕಠಿಣಪಡಿಸಬೇಡಿರಿ. ಕರ್ತನಿಗೆ ಕೈಕೊಟ್ಟು ಆತನು ಯುಗಯುಗಕ್ಕೂ ಪರಿಶುದ್ಧ ಮಾಡಿದ ಆತನ ಪರಿಶುದ್ಧ ಸ್ಥಾನದಲ್ಲಿ ಪ್ರವೇಶಿಸಿದ ನಿಮ್ಮ ದೇವರಾದ ಕರ್ತನನ್ನು ಸೇವಿಸಿರಿ. ಆಗ ತನ್ನ ಉಗ್ರಕೋಪವನ್ನು ಬಿಟ್ಟು ನಿಮ್ಮ ಕಡೆಗೆ ತಿರುಗುವನು. ನೀವು ಕರ್ತನ ಕಡೆಗೆ ತಿರುಗಿದರೆ ನಿಮ್ಮ ಸಹೋದ ರರೂ ನಿಮ್ಮ ಮಕ್ಕಳೂ ತಿರಿಗಿ ಈ ದೇಶಕ್ಕೆ ಬರುವ ಹಾಗೆ ತಮ್ಮನ್ನು ಸೆರೆಯಾಗಿ ಒಯ್ದವರ ಸಮ್ಮುಖದಲ್ಲಿ ಕರುಣೆಯನ್ನು ಹೊಂದುವರು. ನಿಮ್ಮ ದೇವರಾದ ಕರ್ತನು ಕೃಪೆಯೂ ಕರುಣೆಯೂ ಉಳ್ಳವನಾಗಿದ್ದಾನೆ, ನೀವು ಆತನ ಕಡೆಗೆ ತಿರುಗಿದರೆ ಆತನು ನಿಮ್ಮ ಕಡೆ ಯಿಂದ ತನ್ನ ಮುಖ ತೊಲಗಿಸನು ಎಂದು ಹೇಳಿದರು. ಹೀಗೆಯೇ ದೂತರು ಎಫ್ರಾಯಾಮಿನ, ಮನ ಸ್ಸೆಯ ದೇಶದಲ್ಲಿ ಜೆಬುಲೂನ್ ಪರ್ಯಂತರ ಸಂಚರಿಸಿ ಪಟ್ಟಣದಿಂದ ಪಟ್ಟಣಕ್ಕೆ ಹಾದುಹೋದರು. ಆದರೆ ಜನರು ಇವರನ್ನು ನೋಡಿ ನಕ್ಕು ಗೇಲಿ ಮಾಡಿದರು. ಆದಾಗ್ಯೂ ಅಶೇರ, ಮನಸ್ಸೆ, ಜೆಬುಲೂನ್ ಇವರಲ್ಲಿ ಕೆಲವರು ತಮ್ಮನ್ನು ತಗ್ಗಿಸಿಕೊಂಡು ಯೆರೂಸಲೇಮಿಗೆ ಬಂದರು. ಇದಲ್ಲದೆ ಕರ್ತನ ವಾಕ್ಯದಿಂದುಂಟಾದ ಅರಸನ ಪ್ರಧಾನರ ಆಜ್ಞೆಯನ್ನು ಕೈಕೊಳ್ಳಲು ಅವರಿಗೆ ಒಂದೇ ಹೃದಯವನ್ನು ಕೊಡಲು ದೇವರ ಕೈ ಯೆಹೂ ದದವರಲ್ಲಿ ಇತ್ತು. ಆದದರಿಂದ ಎರಡನೇ ತಿಂಗಳಲ್ಲಿ ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸುವದಕ್ಕೆ ಯೆರೂಸಲೇಮಿನಲ್ಲಿ ಬಹಳ ಜನರು ಕೂಡಿ ಕೊಂಡು ಮಹಾದೊಡ್ಡ ಸಭೆಯಾಯಿತು. ಆಗ ಅವರು ಎದ್ದು ಯೆರೂಸಲೇಮಿನಲ್ಲಿದ್ದ ಬಲಿಪೀಠಗಳನ್ನು ತೆಗೆದುಹಾಕಿದರು ಮತ್ತು ಧೂಪಪೀಠಗಳನ್ನೆಲ್ಲಾ ತೆಗೆದು ಬಿಟ್ಟು ಕಿದ್ರೋನ್ ಹಳ್ಳದಲ್ಲಿ ಹಾಕಿದರು. ಎರಡನೇ ತಿಂಗಳ ಹದಿನಾಲ್ಕನೇ ದಿವಸದಲ್ಲಿ ಪಸ್ಕ ವನ್ನು ವಧಿಸಿದರು. ಯಾಜಕರೂ ಲೇವಿಯರೂ ಲಜ್ಜೆ ಯನ್ನು ಹೊಂದಿ ತಮ್ಮನ್ನು ಪರಿಶುದ್ಧ ಮಾಡಿಕೊಂಡು ಕರ್ತನ ಮನೆಯೊಳಗೆ ದಹನಬಲಿಗಳನ್ನು ತಂದರು. ಇದಲ್ಲದೆ ಅವರು ದೇವರ ಮನುಷ್ಯನಾದ ಮೋಶೆ ಯ ನ್ಯಾಯಪ್ರಮಾಣದ ಹಾಗೆ ತಮ್ಮ ಪದ್ಧತಿಯ ಪ್ರಕಾರ ತಮ್ಮ ತಮ್ಮ ಸ್ಥಳದಲ್ಲಿ ನಿಂತು ಯಾಜಕರು ಲೇವಿಯರ ಕೈಯಿಂದ ರಕ್ತವನ್ನು ತೆಗೆದುಕೊಂಡು ಚಿಮುಕಿಸಿದರು. ಯಾಕಂದರೆ ಸಭೆಯಲ್ಲಿ ಅನೇಕರು ಅಪರಿಶುದ್ಧರಾಗಿದ್ದರು, ಲೇವಿಯರು ಅಶುದ್ಧರಾದ ಎಲ್ಲರ ನಿಮಿತ್ತ ಅವರನ್ನು ಕರ್ತನಿಗೆ ಪರಿಶುದ್ಧ ಮಾಡುವ ಹಾಗೆ ಪಸ್ಕದ ಬಲಿಗಳನ್ನು ವಧಿಸುವದಕ್ಕೆ ಇದ್ದರು. ಯಾಕಂದರೆ ಜನರಲ್ಲಿ ಅನೇಕರು--ಎಫ್ರಾ ಯಾಮ್, ಮನಸ್ಸೆ, ಇಸ್ಸಾಕಾರ್, ಜೆಬುಲೂನ್ ಇವ ರಲ್ಲಿ ಅನೇಕರು ತಮ್ಮನ್ನು ಶುದ್ಧ ಮಾಡಿಕೊಳ್ಳದೆ, ಬರೆಯಲ್ಪಟ್ಟ ಪ್ರಕಾರವಲ್ಲದೆ ಪಸ್ಕವನ್ನು ಉಂಡರು. ಆದರೆ ಹಿಜ್ಕೀಯನು ಅವರಿಗೋಸ್ಕರ ಪ್ರಾರ್ಥಿಸಿಯಾವನಾದರೂ ಪರಿಶುದ್ಧ ಸ್ಥಾನದ ಶುದ್ಧಿಯ ಪ್ರಕಾರ ಶುಚಿಯಾಗದೆ ಇದ್ದರೂ ತನ್ನ ಪಿತೃಗಳ ಕರ್ತನಾದ ದೇವರಾಗಿರುವ ದೇವರನ್ನು ಹುಡುಕಲು ತನ್ನ ಹೃದಯ ವನ್ನು ಸಿದ್ಧಮಾಡುವವನ ಪಾಪವನ್ನು ದಯವುಳ್ಳ ಕರ್ತನು ಮುಚ್ಚಲಿ ಎಂದು ಹೇಳಿದನು. ಕರ್ತನು ಹಿಜ್ಕೀಯನ ಮಾತು ಕೇಳಿ ಜನರನ್ನು ಗುಣಮಾಡಿದನು. ಯೆರೂಸಲೇಮಿನಲ್ಲಿದ್ದ ಇಸ್ರಾಯೇಲಿನ ಮಕ್ಕಳು ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಏಳು ದಿವಸ ಸಂತೋಷದಿಂದ ಆಚರಿಸಿದರು. ಇದಲ್ಲದೆ ಲೇವಿ ಯರೂ ಯಾಜಕರೂ ಮಹಾಶಬ್ದದ ವಾದ್ಯಗಳಿಂದ ಕರ್ತನಿಗೆ ಹಾಡಿ ಪ್ರತಿ ದಿನದಲ್ಲಿಯೂ ಕರ್ತನನ್ನು ಸ್ತುತಿಸಿದರು. ಇದಲ್ಲದೆ ಹಿಜ್ಕೀಯನು ಕರ್ತನ ಉತ್ತ ಮವಾದ ಬೋಧನೆಯನ್ನು ಬೋಧಿಸಿದ ಸಮಸ್ತ ಲೇವಿ ಯರಿಗೆ ಸಮಾಧಾನವಾಗಿ ಮಾತನಾಡಿದನು. ಅವರು ಹಬ್ಬವನ್ನು ಏಳು ದಿನಗಳ ಪರ್ಯಂತರ ಭೋಜನ ಮಾಡುತ್ತಾ ಸಮಾಧಾನದ ಬಲಿಗಳನ್ನು ಅರ್ಪಿಸುತ್ತಾ ತಮ್ಮ ಪಿತೃಗಳ ದೇವರಾದ ಕರ್ತನಿಗೆ ಅರಿಕೆಮಾಡುತ್ತಾ ಆಚರಿಸಿದ್ದರು. ಆದರೆ ಸಮೂಹವೆಲ್ಲಾ ಮತ್ತೂ ಏಳು ದಿವಸ ಆಚರಿಸುವದಕ್ಕೆ ಯೋಚಿಸಿಕೊಂಡ ಮೇಲೆ ಏಳು ದಿವಸಗಳು ಸಂತೋಷವಾಗಿ ಆಚರಿಸಿದರು. ಯೆಹೂದದ ಅರಸನಾದ ಹಿಜ್ಕೀಯನು ಸಭೆಗೆ ಸಾವಿರ ಹೋರಿಗಳನ್ನೂ ಏಳು ಸಾವಿರ ಕುರಿಗಳನ್ನೂ ಕೊಟ್ಟನು. ಇದಲ್ಲದೆ ಪ್ರಧಾನರು ಕೂಟಕ್ಕೆ ಸಾವಿರ ಹೋರಿಗಳನ್ನೂ ಹತ್ತು ಸಾವಿರ ಕುರಿಗಳನ್ನೂ ಕೊಟ್ಟರು. ಯಾಜಕರಲ್ಲಿ ಅನೇಕರು ತಮ್ಮನ್ನು ಪರಿಶುದ್ಧ ಮಾಡಿ ಕೊಂಡರು. ಯೆಹೂದದ ಸಭೆಯವರೆ ಲ್ಲರೂ ಯಾಜಕರೂ ಲೇವಿಯರೂ ಇಸ್ರಾಯೇಲಿನಿಂದ ಬಂದ ಸಮಸ್ತ ಸಭೆಯೂ ಇಸ್ರಾಯೇಲಿನ ದೇಶದಿಂದ ಬಂದ ಪರದೇಶಿಗಳೂ ಯೆಹೂದದಲ್ಲಿ ವಾಸವಾಗಿರುವವರೂ ಸಂತೋಷಪಟ್ಟರು. ಇಸ್ರಾ ಯೇಲಿನ ಅರಸನಾಗಿರುವ ದಾವೀದನ ಮಗನಾದ ಸೊಲೊಮೋನನ ಕಾಲ ಮೊದಲುಗೊಂಡು ಯೆರೂ ಸಲೇಮಿನಲ್ಲಿ ಇದರ ಹಾಗೆ ನಡೆದಿರಲಿಲ್ಲವಾದದ ರಿಂದ ಹೀಗೆಯೇ ಯೆರೂಸಲೇಮಿನಲ್ಲಿ ಮಹಾ ಸಂತೋಷ ಉಂಟಾಗಿತ್ತು.ಆಗ ಲೇವಿಯರಾದ ಯಾಜಕರೂ ಎದ್ದು ಜನರನ್ನು ಆಶೀರ್ವದಿಸಿದರು. ಅವರ ಶಬ್ದವು ಕೇಳಲ್ಪಟ್ಟಿತು. ಅವರ ಪ್ರಾರ್ಥನೆಯು ಆತನ ಪರಿಶುದ್ಧವಾದ ನಿವಾಸಸ್ಥಾನಕ್ಕೆ ಅಂದರೆ ಪರಲೋಕಕ್ಕೆ ಮುಟ್ಟಿತು. ಆಗ ಲೇವಿಯರಾದ ಯಾಜಕರೂ ಎದ್ದು ಜನರನ್ನು ಆಶೀರ್ವದಿಸಿದರು. ಅವರ ಶಬ್ದವು ಕೇಳಲ್ಪಟ್ಟಿತು. ಅವರ ಪ್ರಾರ್ಥನೆಯು ಆತನ ಪರಿಶುದ್ಧವಾದ ನಿವಾಸಸ್ಥಾನಕ್ಕೆ ಅಂದರೆ ಪರಲೋಕಕ್ಕೆ ಮುಟ್ಟಿತು.
- Deuteronomy 7:5 ಧರ್ಮೋಪದೇಶಕಾಂಡ 7:5ಅವರಿಗೆ ಮಾಡಬೇಕಾದ ದ್ದೇನಂದರೆ ಅವರ ಬಲಿಪೀಠಗಳನ್ನು ಒಡೆದುಹಾಕ ಬೇಕು; ಅವರ ವಿಗ್ರಹಗಳನ್ನು ಮುರಿದುಹಾಕಬೇಕು; ಅವರ ತೋಪುಗಳನ್ನು ಕಡಿದುಹಾಕಬೇಕು; ಅವರು ಕೆತ್ತಿದ ವಿಗ್ರಹಗಳನ್ನು ಬೆಂಕಿಯಿಂದ ಸುಡಬೇಕು.
- 2 Kings 23:2–20 2 ಅರಸುಗಳು 23:2–20ಆಗ ಅರಸನೂ ಅವನ ಸಂಗಡ ಯೆಹೂದದ ಜನರೆಲ್ಲರೂ ಯೆರೂ ಸಲೇಮಿನ ನಿವಾಸಿಗಳೆಲ್ಲರೂ ಯಾಜಕರೂ ಪ್ರವಾದಿ ಗಳೂ ಹಿರಿಕಿರಿಯರಾದ ಎಲ್ಲಾ ಜನರೂ ಕರ್ತನ ಆಲಯಕ್ಕೆ ಹೋದರು. ಅವರು ಕೇಳುವ ಹಾಗೆ ಕರ್ತನ ಆಲಯದಲ್ಲಿ ಸಿಕ್ಕಿದ ಒಡಂಬಡಿಕೆಯ ಪುಸ್ತಕದ ಮಾತುಗಳನೆಲ್ಲಾ ಅವನು ಓದಿದನು. ಅರಸನು ಸ್ತಂಭದ ಬಳಿಯಲ್ಲಿ ನಿಂತು ಕರ್ತನನ್ನು ಹಿಂಬಾಲಿಸು ವದಕ್ಕೂ ಆತನ ಆಜ್ಞೆಗಳನ್ನೂ ಸಾಕ್ಷಿಗಳನ್ನೂ ಕಟ್ಟಳೆ ಗಳನ್ನೂ ಪೂರ್ಣಹೃದಯದಿಂದಲೂ ಪೂರ್ಣಪ್ರಾಣ ದಿಂದಲೂ ಕೈಕೊಳ್ಳುವದಕ್ಕೂ ಈ ಪುಸ್ತಕದಲ್ಲಿ ಬರೆದಿ ರುವ ಒಡಂಬಡಿಕೆಯ ವಾಕ್ಯಗಳನ್ನು ಸ್ಥಿರಪಡಿಸುವ ದಕ್ಕೂ ಕರ್ತನ ಮುಂದೆ ಒಡಂಬಡಿಕೆಯನ್ನು ಮಾಡಿ ದನು; ಜನರೆಲ್ಲರೂ ಒಡಂಬಡಿಕೆಗೆ ಒಪ್ಪಿದರು. ಅರ ಸನು--ಬಾಳನಿಗೋಸ್ಕರವೂ ವಿಗ್ರಹದ ತೋಪುಗಳಿ ಗೋಸ್ಕರವೂ ಆಕಾಶದ ಸೈನ್ಯಕ್ಕೋಸ್ಕರವೂ ಮಾಡ ಲ್ಪಟ್ಟಿದ್ದ ಎಲ್ಲಾ ಪಾತ್ರೆಗಳನ್ನು ಕರ್ತನ ಆಲಯದಿಂದ ಹೊರಗೆ ತಕ್ಕೊಂಡು ಬರಬೇಕೆಂದು ಪ್ರಧಾನ ಯಾಜಕ ನಾದ ಹಿಲ್ಕೀಯನಿಗೂ ಎರಡನೇ ತರಗತಿಯ ಯಾಜಕ ರಿಗೂ ದ್ವಾರಪಾಲಕರಿಗೂ ಆಜ್ಞಾಪಿಸಿದನು ಮತ್ತು ಅವನು ಅವುಗಳನ್ನು ಯೆರೂಸಲೇಮಿನ ಹೊರಗೆ ಕಿದ್ರೋನ್ ಹೊಲಗಳಲ್ಲಿ ಸುಡಿಸಿ ಅವುಗಳ ಬೂದಿ ಯನ್ನು ಬೇತೇಲಿಗೆ ತರುವಂತೆ ಮಾಡಿದನು. ಇದಲ್ಲದೆ ಯೆಹೂದದ ಪಟ್ಟಣಗಳಲ್ಲಿರುವ ಉನ್ನತ ಸ್ಥಳಗಳ ಲ್ಲಿಯೂ ಯೆರೂಸಲೇಮಿನ ಸುತ್ತಲಿರುವ ಉನ್ನತ ಸ್ಥಳಗಳಲ್ಲಿಯೂ ಧೂಪವನ್ನು ಸುಡಲು ಯೆಹೂದದ ಅರಸುಗಳು ನೇಮಿಸಿದ್ದ ಪೂಜಾರಿಗಳನ್ನೂ ಬಾಳನಿಗೂ ಸೂರ್ಯನಿಗೂ ಚಂದ್ರನಿಗೂ ಹನ್ನೆರಡು ರಾಶಿಗಳಿಗೂ ಆಕಾಶದ ಎಲ್ಲಾ ಸೈನ್ಯಕ್ಕೂ ಧೂಪಸುಡುವವರಾರೂ ಇರದ ಹಾಗೆ ಮಾಡಿದನು. ಕರ್ತನ ಆಲಯದೊ ಳಗಿಂದ ವಿಗ್ರಹದ ತೋಪನ್ನು ಯೆರೂಸಲೇಮಿನ ಹೊರಗೆ ಕಿದ್ರೋನ್ ಹಳ್ಳಕ್ಕೆ ಅದನ್ನು ತರಿಸಿ ಅವನು ಕಿದ್ರೋನ್ ಹಳ್ಳದ ಬಳಿಯಲ್ಲಿ ಸುಟ್ಟು ಧೂಳಾಗಿ ಪುಡಿಮಾಡಿ ಆ ಧೂಳಿನ ಪುಡಿಯನ್ನು ಜನರ ಸಮಾಧಿ ಗಳ ಮೇಲೆ ಹಾಕಿಸಿದನು. ಸ್ತ್ರೀಯರು ವಿಗ್ರಹದ ತೋಪಿಗೋಸ್ಕರ ಮನೆಗಳನ್ನು ನೇಯುತ್ತಿದ್ದ ಕಡೆಯಲ್ಲಿ ಕರ್ತನ ಮನೆಯ ಬಳಿಯಲ್ಲಿ ಇದ್ದ ಪುರುಷ ಸಂಗಮರ ಮನೆಗಳನ್ನು ಕೆಡವಿಸಿದನು. ಇದಲ್ಲದೆ ಅವನು ಯೆಹೂದದ ಪಟ್ಟಣಗಳಿಂದ ಯಾಜಕರೆಲ್ಲರನ್ನು ಬರ ಮಾಡಿ ಗೆಬ ಮೊದಲುಗೊಂಡು ಬೇರ್ಷೆಬದ ವರೆಗೂ ಯಾಜಕರು ಧೂಪ ಸುಡುತ್ತಿದ್ದ ಉನ್ನತ ಸ್ಥಳಗಳನ್ನು ಹೊಲೆಮಾಡಿ ಪಟ್ಟಣದ ಬಾಗಲಿನ ಎಡಪಾರ್ಶ್ವದಲ್ಲಿದ್ದ ಪಟ್ಟಣದ ಅಧಿಪತಿಯಾದ ಯೆಹೋಶುವನ ಬಾಗಲಿನ ದ್ವಾರದಲ್ಲಿದ್ದ ಬಾಗಲುಗಳ ಉನ್ನತ ಸ್ಥಳಗಳನ್ನು ಕೆಡವಿ ಹಾಕಿದನು. ಆದರೆ ಉನ್ನತ ಸ್ಥಳಗಳ ಯಾಜಕರು ಯೆರೂಸಲೇಮಿನಲ್ಲಿರುವ ಕರ್ತನ ಬಲಿಪೀಠದ ಬಳಿ ಯಲ್ಲಿ ಸೇರದೆ ತಮ್ಮ ಸಹೋದರರ ಮಧ್ಯದಲ್ಲಿ ಹುಳಿ ಇಲ್ಲದ ರೊಟ್ಟಿಯನ್ನು ತಿನ್ನುತ್ತಾ ಇದ್ದರು. ಯಾವನೂ ತನ್ನ ಮಗನನ್ನಾದರೂ ಮಗಳನ್ನಾದರೂ ಮೋಲೆಕನಿ ಗೋಸ್ಕರ ಬೆಂಕಿದಾಟಿಸದ ಹಾಗೆ ಹಿನ್ನೋಮನ ಮಕ್ಕಳ ತಗ್ಗಿನಲ್ಲಿದ್ದ ತೋಫೆತನ್ನು ಹೊಲೆಮಾಡಿದನು. ಬೈಲ ಲ್ಲಿರುವ ಪ್ರಧಾನನಾದ ನಾತಾನ್ ಮೆಲೆಕನ ಕೊಠಡಿಯ ಹತ್ತಿರ ಇದ್ದ ಕರ್ತನ ಮನೆಯ ದ್ವಾರದ ಬಳಿಯಲ್ಲಿ ಯೆಹೂದದ ಅರಸುಗಳು ಸೂರ್ಯನಿಗೆ ಕೊಟ್ಟ ಕುದುರೆ ಗಳನ್ನು ತೆಗೆದುಹಾಕಿ ಸೂರ್ಯನ ರಥಗಳನ್ನು ಬೆಂಕಿ ಯಿಂದ ಸುಟ್ಟುಬಿಟ್ಟನು. ಯೆಹೂದದ ಅರಸರು ಉಂಟು ಮಾಡಿದ ಆಹಾಜನ ಮೇಲು ಮಾಳಿಗೆಯ ಮೇಲೆ ಇದ್ದ ಬಲಿಪೀಠಗಳನ್ನೂ ಮನಸ್ಸೆಯು ಕರ್ತನ ಮನೆಯ ಎರಡು ಅಂಗಳಗಳಲ್ಲಿ ಮಾಡಿದ ಬಲಿಪೀಠ ಗಳನ್ನೂ ಅರಸನು ಕೆಡವಿಸಿ ಅಲ್ಲಿಂದ ಅದರ ಧೂಳನ್ನು ಕಿದ್ರೋನ್ ಹಳ್ಳದಲ್ಲಿ ಹಾಕಿಸಿದನು. ಇದಲ್ಲದೆ ಯೆರೂಸಲೇಮಿನ ಮುಂದೆ ಮೋಸದ ಬೆಟ್ಟದ ಬಲ ಪಾರ್ಶ್ವದಲ್ಲಿದ್ದ ಚೀದೋನ್ಯರ ಅಸಹ್ಯಕರವಾದ ಅಷ್ಟೋ ರೆತಿಗೂ ಮೋವಾಬ್ಯರ ಅಸಹ್ಯಕರವಾದ ಕೆಮೋಷ ನಿಗೂ ಅಮ್ಮೋನಿನ ಮಕ್ಕಳ ಅಸಹ್ಯಕರವಾದ ಮಿಲ್ಕೋ ಮ್ನಿಗೂ ಇಸ್ರಾಯೇಲಿನ ಅರಸನಾದ ಸೊಲೊ ಮೋನನು ಕಟ್ಟಿಸಿದ ಉನ್ನತ ಸ್ಥಳಗಳನ್ನೂ ಅರಸನು ಹೊಲೆಮಾಡಿ ವಿಗ್ರಹಗಳನ್ನು ಮುರಿದು ವಿಗ್ರಹದ ತೋಪುಗಳನ್ನು ಕಡಿದುಬಿಟ್ಟು ಅವುಗಳ ಸ್ಥಳಗಳನ್ನು ಮನುಷ್ಯರ ಎಲುಬುಗಳಿಂದ ತುಂಬಿಸಿದನು. ಇದಲ್ಲದೆ ಬೇತೇಲಿನಲ್ಲಿದ್ದ ಬಲಿಪೀಠವನ್ನೂ ಇಸ್ರಾಯೇಲ್ಯರು ಪಾಪಮಾಡಲು ಪ್ರೇರೇಪಿಸಿದ ನೆಬಾ ಟನ ಮಗನಾದ ಯಾರೊಬ್ಬಾಮನು ಮಾಡಿದ ಉನ್ನತ ಸ್ಥಳವನ್ನೂ ಅವನು ಕೆಡವಿಹಾಕಿ ಸುಟ್ಟ್ಟು ಅದನ್ನು ಧೂಳಾ ಗಲು ಪುಡಿಮಾಡಿ ವಿಗ್ರಹದ ತೋಪನ್ನು ಸುಡಿಸಿದನು. ಯೋಷೀಯನು ತಿರುಗಿಕೊಂಡು ಅಲ್ಲಿ ಬೆಟ್ಟದಲ್ಲಿದ್ದ ಸಮಾಧಿಗಳನ್ನು ಕಂಡು, ಕಳುಹಿಸಿ, ಸಮಾಧಿಗಳಿಂದ ಎಲುಬುಗಳನ್ನು ತೆಗೆದುಕೊಂಡು ಈ ಮಾತುಗಳನ್ನು ಪ್ರಕಟಿಸಿದ ದೇವರ ಮನುಷ್ಯನು ಸಾರಿದ ಕರ್ತನ ವಾಕ್ಯದ ಪ್ರಕಾರ ಬಲಿಪೀಠದ ಮೇಲೆ ಅವುಗಳನ್ನು ಸುಟ್ಟುಬಿಟ್ಟು ಅದನ್ನು ಹೊಲೆಮಾಡಿದನು. ಆಗ ಅವನು--ನಾನು ನೋಡಿದ ಆ ಶಿರೋನಾಮವೇನು ಅಂದನು. ಅದಕ್ಕೆ ಆ ಪಟ್ಟಣದ ಜನರು ಅವನಿಗೆಯೆಹೂದದಿಂದ ಬಂದು ಬೇತೇಲಿನ ಬಲಿಪೀಠಕ್ಕೆ ವಿರೋಧವಾಗಿ ನೀನು ಮಾಡಿದ ಈ ಕಾರ್ಯಗಳನ್ನು ಸಾರಿ ಹೇಳಿದ ದೇವರ ಮನುಷ್ಯನ ಸಮಾಧಿ ಅಂದರು. ಆಗ ಅವನು--ಅವನನ್ನು ಬಿಟ್ಟುಬಿಡಿರಿ; ಯಾವನೂ ಅವನ ಎಲುಬುಗಳನ್ನು ಮುಟ್ಟದೆ ಇರಲಿ ಅಂದನು. ಹಾಗೆಯೇ ಅವರು ಅವನ ಎಲುಬುಗಳನ್ನು ಸಮಾರ್ಯ ದಿಂದ ಬಂದ ಪ್ರವಾದಿಯ ಎಲುಬುಗಳ ಸಂಗಡ ಸುಮ್ಮನೆ ಬಿಟ್ಟರು. ಕೋಪವನ್ನೆಬ್ಬಿಸುವದಕ್ಕೆ ಇಸ್ರಾ ಯೇಲಿನ ಅರಸುಗಳು ಸಮಾರ್ಯದ ಪಟ್ಟಣಗಳಲ್ಲಿ ಮಾಡಿದ, ಕರ್ತನ ಕೋಪವನ್ನೆಬ್ಬಿಸಿದ ಉನ್ನತ ಸ್ಥಳಗಳ ಮನೆಗಳನ್ನೆಲ್ಲಾ ಯೋಷೀಯನು ಕೆಡವಿಹಾಕಿ ಬೇತೇಲಿ ನಲ್ಲಿ ತಾನು ಮಾಡಿದ ಎಲ್ಲಾ ಕ್ರಿಯೆಗಳ ಪ್ರಕಾರ ಅವುಗಳಿಗೆ ಮಾಡಿ, ಆ ಸ್ಥಳಗಳಲ್ಲಿದ್ದ ಉನ್ನತ ಸ್ಥಳಗಳ ಯಾಜಕರನ್ನೆಲ್ಲಾ ಬಲಿಪೀಠಗಳ ಮೇಲೆ ಕೊಂದುಹಾಕಿ, ಅವುಗಳ ಮೇಲೆ ಮನುಷ್ಯರ ಎಲುಬುಗಳನ್ನು ಸುಟ್ಟು ಯೆರೂಸಲೇಮಿಗೆ ತಿರಿಗಿ ಬಂದನು.
- 2 Chronicles 34:3–7 2 ಪೂರ್ವಕಾಲವೃತ್ತಾಂತ 34:3–7ಅವನು ಇನ್ನೂ ಹುಡುಗನಾಗಿರುವಾಗ ತನ್ನ ಆಳ್ವಿಕೆಯ ಎಂಟನೇ ವರುಷದಲ್ಲಿ ತನ್ನ ಪಿತೃವಾದ ದಾವೀದನ ದೇವರನ್ನು ಹುಡುಕಲು ಆರಂಭಿಸಿದನು. ಅವನ ಆಳ್ವಿಕೆಯ ಹನ್ನೆರಡನೇ ವರುಷದಲ್ಲಿ ಉನ್ನತ ಸ್ಥಳಗಳನ್ನೂ ತೋಪುಗಳನ್ನೂ ಕೆತ್ತಿದ ವಿಗ್ರಹಗಳನ್ನೂ ಎರಕಹೊಯಿದ ವಿಗ್ರಹಗಳನ್ನೂ ತೆಗೆದುಹಾಕಿ ಯೆಹೂದ ಯೆರೂಸಲೇಮನ್ನು ಶುಚಿಮಾಡಲು ಆರಂಭಿಸಿದನು. ಅವರು ಬಾಳನ ಬಲಿಪೀಠಗಳನ್ನು ಅವನ ಸಮ್ಮುಖದಿಂದ ಕೆಡವಿಹಾಕಿದರು. ಅವುಗಳ ಮೇಲಿರುವ ಸೂರ್ಯಸ್ತಂಭಗಳನ್ನು ಕಡಿದುಹಾಕಿ ತೋಪುಗಳನ್ನೂ ಕೆತ್ತಿದ ವಿಗ್ರಹಗಳನ್ನೂ ಎರಕ ಹೊಯ್ದ ವಿಗ್ರಹಗಳನ್ನೂ ಒಡೆದುಬಿಟ್ಟು ಪುಡಿಪುಡಿ ಮಾಡಿ, ಅವುಗಳಿಗೆ ಬಲಿ ಅರ್ಪಿಸಿದವರ ಸಮಾಧಿ ಗಳ ಮೇಲೆ ಚೆಲ್ಲಿಸಿ ಪೂಜಾರಿಗಳ ಎಲುಬುಗಳನ್ನು ಅವರ ಬಲಿಪೀಠಗಳ ಮೇಲೆ ಸುಟ್ಟುಬಿಟ್ಟು, ಯೆಹೂ ದವನ್ನೂ ಯೆರೂಸಲೇಮನ್ನೂ ಶುಚಿಮಾಡಿದರು. ಹೀಗೆಯೇ ಅವರು ತಮ್ಮ ಗುದ್ದಲಿಗಳಿಂದ ಮನಸ್ಸೆ ಎಫ್ರಾಯಾಮ್ ಸಿಮೆಯೋನ್ ಪಟ್ಟಣಗಳು ಮೊದಲು ಗೊಂಡು ನಫ್ತ್ತಾಲಿಯ ವರೆಗೂ ಸುತ್ತಲೂ ಮಾಡಿದರು. ಅವನು ಬಲಿಪೀಠಗಳನ್ನೂ ತೋಪುಗಳನ್ನೂ ಕೆಡವಿ ಹಾಕಿ ಕೆತ್ತಿದ ವಿಗ್ರಹಗಳನ್ನು ಕುಟ್ಟಿ ಪುಡಿಪುಡಿ ಮಾಡಿ ಇಸ್ರಾಯೇಲ್ ದೇಶದಲ್ಲೆಲ್ಲಿಯೂ ಇರುವ ಸಮಸ್ತ ವಿಗ್ರಹಗಳನ್ನು ಕೆಡಿಸಿದ ತರುವಾಯ ಯೆರೂಸಲೇಮಿಗೆ ಹಿಂತಿರುಗಿದನು.
- 2 Kings 17:2 2 ಅರಸುಗಳು 17:2ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು; ಆದರೆ ತನಗೆ ಮುಂಚೆ ಇದ್ದ ಇಸ್ರಾಯೇಲಿನ ಅರಸುಗಳ ಹಾಗಲ್ಲ.
- 1 Kings 18:38–40 1 ಅರಸುಗಳು 18:38–40ಆಗ ಕರ್ತನ ಬೆಂಕಿಯು ಇಳಿದು ಬಂದು ದಹನಬಲಿಯನ್ನೂ ಕಟ್ಟಿಗೆ ಗಳನ್ನೂ ಕಲ್ಲುಗಳನ್ನೂ ಮಣ್ಣನ್ನೂ ಸುಟ್ಟುಬಿಟ್ಟು ಕಾಲುವೆ ಯಲ್ಲಿದ್ದ ನೀರನ್ನು ಹೀರಿಬಿಟ್ಟಿತು. ಜನರೆಲ್ಲರು ಇದನ್ನು ನೋಡಿದಾಗ ಬೋರಲು ಬಿದ್ದು--ಕರ್ತನು ತಾನೇ ದೇವರು, ಕರ್ತನು ತಾನೇ ದೇವರು ಅಂದರು. ಆಗ ಎಲೀಯನು ಅವರಿಗೆ--ನೀವು ಬಾಳನ ಪ್ರವಾದಿಗಳನ್ನು ಹಿಡಿಯಿರಿ; ಅವರಲ್ಲಿ ಒಬ್ಬನೂ ತಪ್ಪಿಸಿ ಕೊಳ್ಳದೆ ಇರಲಿ ಅಂದನು. ಇವರು ಅವರನ್ನು ಹಿಡಿ ದರು; ಎಲೀಯನು ಅವರನ್ನು ಕೀಷೋನ್ಹಳ್ಳದ ಬಳಿಗೆ ತಕ್ಕೊಂಡುಹೋಗಿ ಅಲ್ಲಿ ಅವರನ್ನು ಕೊಂದು ಹಾಕಿದನು.
- Genesis 19:15 ಆದಿಕಾಂಡ 19:15ಸೂರ್ಯೋದಯವಾದಾಗ ದೂತರು ಲೋಟನನ್ನು ತ್ವರೆಪಡಿಸಿ--ನೀನು ಈ ಪಟ್ಟಣದ ದುಷ್ಟತನದಿಂದ ನಾಶವಾಗದ ಹಾಗೆ ಎದ್ದು ನಿನ್ನ ಹೆಂಡತಿಯನ್ನೂ ಇಲ್ಲಿರುವ ನಿನ್ನ ಇಬ್ಬರು ಕುಮಾರ್ತೆಯರನ್ನೂ ಕರಕೊಂಡು ನಡೆ ಅಂದರು.
- Esther 4:16 ಎಸ್ತೇರಳು 4:16ನಾನೂ ನನ್ನ ದಾಸಿಯರೂ ಹಾಗೆಯೇ ಉಪವಾಸ ಮಾಡುವೆವು. ಅನಂತರ ನಾನು ಆಜ್ಞೆ ವಿಾರಿ ಅರಸನ ಬಳಿಗೆ ಪ್ರವೇಶಿಸುವೆನು. ನಾನು ನಾಶವಾದರೆ ನಾಶವಾಗುವೆನು ಅಂದಳು.ಆಗ ಮೊರ್ದೆಕೈ ಹೊರಟು ಹೋಗಿ ಎಸ್ತೇರಳು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿದನು.
- Exodus 23:24 ವಿಮೋಚನಕಾಂಡ 23:24ಅವರ ದೇವರುಗಳಿಗೆ ನೀವು ಅಡ್ಡಬೀಳಲೂ ಬಾರದು, ಅವುಗಳನ್ನು ಸೇವಿಸಲೂಬಾರದು. ಇದಲ್ಲದೆ ನೀವು ಅವರ ಕೃತ್ಯಗಳ ಪ್ರಕಾರ ಮಾಡದೆ ಅವರನ್ನು ನಿರ್ಮೂಲ ಮಾಡಿಬಿಟ್ಟು ಅವರ ವಿಗ್ರಹಗಳನ್ನು ಪೂರ್ಣವಾಗಿ ಒಡೆದು ಹಾಕಬೇಕು.
- 2 Chronicles 14:3 2 ಪೂರ್ವಕಾಲವೃತ್ತಾಂತ 14:3ಅವನು ಅನ್ಯದೇವರು ಗಳ ಬಲಿಪೀಠಗಳನ್ನೂ ಉನ್ನತ ಸ್ಥಳಗಳನ್ನೂ ತೆಗೆದು ಹಾಕಿ ವಿಗ್ರಹಗಳನ್ನು ಒಡೆದುಬಿಟ್ಟು ಅವುಗಳ ತೋಪು ಗಳನ್ನು ಕಡಿದುಹಾಕಿ,
Original words (Hebrew)
- finished · H3615כָּלָה kâlâh
- Israel · H3478יִשְׂרָאֵל Yisrâʼêl
- present · H4672מָצָא mâtsâʼ
- out · H3318יָצָא yâtsâʼ
- cities · H5892עִיר ʻîyr
- Judah · H3063יְהוּדָה Yᵉhûwdâh
- brake · H7665שָׁבַר shâbar
- images · H4676מַצֵּבָה matstsêbâh
- pieces · H7665שָׁבַר shâbar
- down · H1438גָּדַע gâdaʻ
- groves · H842אֲשֵׁרָה ʼăshêrâh
- down · H5422נָתַץ nâthats
- places · H1116בָּמָה bâmâh
- altars · H4196מִזְבֵּחַ mizbêach
- Judah · H3063יְהוּדָה Yᵉhûwdâh
- Benjamin · H1144בִּנְיָמִין Binyâmîyn
- Ephraim · H669אֶפְרַיִם ʼEphrayim
- Manasseh · H4519מְנַשֶּׁה Mᵉnashsheh
- destroyed · H3615כָּלָה kâlâh
- children · H1121בֵּן bên
- Israel · H3478יִשְׂרָאֵל Yisrâʼêl
- returned · H7725שׁוּב shûwb
- man · H376אִישׁ ʼîysh
- possession · H272אֲחֻזָּה ʼăchuzzâh
- cities · H5892עִיר ʻîyr