2 Chronicles · chapter 30 · verse 1
2 Chronicles 30:1 in Kannada
ಆಗ ಅವರು ಇಸ್ರಾಯೇಲಿನ ದೇವರಾದ ಕರ್ತನ ಪಸ್ಕವನ್ನು ಆಚರಿಸಲು ಯೆರೂ ಸಲೇಮಿನಲ್ಲಿ ಕರ್ತನ ಆಲಯಕ್ಕೆ ಬರುವ ಹಾಗೆ ಹಿಜ್ಕೀಯನು ಸಮಸ್ತ ಇಸ್ರಾಯೇಲಿಗೂ ಯೆಹೂದಕ್ಕೂ ಹೇಳಿ ಕಳುಹಿಸಿ, ಎಫ್ರಾಯಾಮ್ಯರಿಗೂ ಮನಸ್ಸೆಯ ವರಿಗೂ ಪತ್ರಗಳನ್ನು ಬರೆದನು.
Aaga avaru israayelina devaraada kartana paskavannu aacharisalu yeroo saleminalli kartana aalayakke baruva haage hijkeeyanu samasta israayeligoo yehoodakkoo heli kaluhisi, ephraayaamyarigoo manasseya varigoo patragalannu baredanu.
2 Chronicles 30:1 in English
- King James Version (KJV)
- And Hezekiah sent to all Israel and Judah, and wrote letters also to Ephraim and Manasseh, that they should come to the house of the LORD at Jerusalem, to keep the passover unto the LORD God of Israel.
- World English Bible (WEB)
- Hezekiah sent to all Israel and Judah, and wrote letters also to Ephraim and Manasseh, that they should come to the LORD’s house at Jerusalem, to keep the Passover to the LORD, the God of Israel.
- American Standard Version (ASV)
- And Hezekiah sent to all Israel and Judah, and wrote letters also to Ephraim and Manasseh, that they should come to the house of Jehovah at Jerusalem, to keep the passover unto Jehovah, the God of Israel.
- Bible in Basic English (BBE)
- Then Hezekiah sent word to all Israel and Judah, and sent letters to Ephraim and Manasseh, requesting them to come to the house of the Lord at Jerusalem, to keep the Passover to the Lord, the God of Israel.
- Darby Translation (DBY)
- And Hezekiah sent to all Israel and Judah, and wrote letters also to Ephraim and Manasseh, that they should come to the house of Jehovah at Jerusalem, to hold the passover to Jehovah the God of Israel.
- Webster's Bible (WBS)
- And Hezekiah sent to all Israel and Judah, and wrote letters also to Ephraim and Manasseh, that they should come to the house of the LORD at Jerusalem, to keep the passover to the LORD God of Israel.
- Young's Literal Translation (YLT)
- And Hezekiah sendeth unto all Israel and Judah, and also letters he hath written unto Ephraim and Manasseh, to come in to the house of Jehovah in Jerusalem, to make a passover to Jehovah, God of Israel.
Read in context
- 1ಆಗ ಅವರು ಇಸ್ರಾಯೇಲಿನ ದೇವರಾದ ಕರ್ತನ ಪಸ್ಕವನ್ನು ಆಚರಿಸಲು ಯೆರೂ ಸಲೇಮಿನಲ್ಲಿ ಕರ್ತನ ಆಲಯಕ್ಕೆ ಬರುವ ಹಾಗೆ ಹಿಜ್ಕೀಯನು ಸಮಸ್ತ ಇಸ್ರಾಯೇಲಿಗೂ ಯೆಹೂದಕ್ಕೂ ಹೇಳಿ ಕಳುಹಿಸಿ, ಎಫ್ರಾಯಾಮ್ಯರಿಗೂ ಮನಸ್ಸೆಯ ವರಿಗೂ ಪತ್ರಗಳನ್ನು ಬರೆದನು.
- 2ಯೆರೂಸಲೇಮಿ ನಲ್ಲಿರುವ ಅರಸನೂ ಅವನ ಪ್ರಧಾನರೂ ಸಮಸ್ತ ಸಭೆಯೂ ಎರಡನೇ ತಿಂಗಳಲ್ಲಿ ಪಸ್ಕವನ್ನು ಆಚರಿ ಸಲು ಯೋಚಿಸಿಕೊಂಡರು.
- 3ಯಾಕಂದರೆ ಯಾಜಕರು ತಮ್ಮನ್ನು ತಕ್ಕಹಾಗೆ ಪರಿಶುದ್ಧಮಾಡಿಕೊಳ್ಳದೆ ಇದ್ದದ್ದ ರಿಂದಲೂ ಜನರು ಯೆರೂಸಲೇಮಿಗೆ ಕೂಡಿ ಬಾರದೆ ಇದ್ದದ್ದರಿಂದಲೂ ಆ ಕಾಲದಲ್ಲಿ ಆಚರಿಸಲಾರದೆ ಇದ್ದರು.
Cross references
- 1 Corinthians 5:7–8 1 ಕೊರಿಂಥದವರಿಗೆ 5:7–8ಆದದರಿಂದ ನೀವು ಹುಳಿ ಇಲ್ಲದ ವರಾದ ಕಾರಣ ಹೊಸ ಕಣಿಕವಾಗಿರುವಂತೆ ಆ ಹಳೇ ಹುಳಿಯನ್ನು ತೆಗೆದುಹಾಕಿರಿ. ಯಾಕಂದರೆ ನಮ್ಮ ಪಸ್ಕವಾಗಿರುವ ಕ್ರಿಸ್ತನೇ ನಮಗೋಸ್ಕರ ಯಜ್ಞಾರ್ಪಿತ ನಾಗಿದ್ದಾನೆ. ಆದಕಾರಣ ನಾವು ಹಳೇ ಹುಳಿಯನ್ನು ಅಂದರೆ ದುರ್ಮಾರ್ಗತ್ವ ದುಷ್ಟತ್ವ ಎಂಬ ಹುಳಿಯನ್ನು ಇಟ್ಟುಕೊಳ್ಳದೆ ಸರಳತೆ ಸತ್ಯತೆ ಎಂಬ ಹುಳಿಯಿಲ್ಲದ ರೊಟ್ಟಿಯಿಂದ ಹಬ್ಬವನ್ನು ಆಚರಿಸೋಣ.
- 2 Chronicles 35:6 2 ಪೂರ್ವಕಾಲವೃತ್ತಾಂತ 35:6ಪಸ್ಕವನ್ನು ವಧಿಸಿ ನಿಮ್ಮನ್ನು ಪರಿಶುದ್ಧ ಮಾಡಿ ಕೊಂಡು ಕರ್ತನು ಮೋಶೆಯ ಮುಖಾಂತರವಾಗಿ ಹೇಳಿದ ವಾಕ್ಯದ ಪ್ರಕಾರ ನಿಮ್ಮ ಸಹೋದರರು ಮಾಡುವ ಹಾಗೆ ಅವರನ್ನು ಸಿದ್ಧಮಾಡಿರಿ ಅಂದನು.
- Hosea 5:4 ಹೋಶೇಯ 5:4ಅವರು ತಮ್ಮ ದೇವರ ಬಳಿಗೆ ತಿರುಗಿಕೊಳ್ಳುವ ಹಾಗೆ ತಮ್ಮ ಕ್ರಿಯೆಗಳನ್ನು ಸರಿ ಮಾಡುವದಿಲ್ಲ; ಯಾಕಂದರೆ ವ್ಯಭಿಚಾರಗಳ ಆತ್ಮವು ಅವರ ಮಧ್ಯದಲ್ಲಿ ಉಂಟು; ಅವರು ಕರ್ತನನ್ನು ತಿಳಿದುಕೊಳ್ಳಲಿಲ್ಲ.
- Hosea 11:8 ಹೋಶೇಯ 11:8ಎಫ್ರಾಯಾಮೇ, ನಾನು ನಿನ್ನನ್ನು ಬಿಟ್ಟು ಬಿಡುವದು ಹೇಗೆ? ಇಸ್ರಾಯೇಲೇ, ನಿನ್ನನ್ನು ನಾನು ಬಿಡಿಸುವದು ಹೇಗೆ? ನಾನು ನಿನ್ನನ್ನು ಅದ್ಮದ ಹಾಗೆ ಮಾಡುವದು ಹೇಗೆ? ನಾನು ನಿನ್ನನ್ನು ಜೆಬೋಯಾಮಿನ ಹಾಗೆ ಸ್ಥಾಪಿಸುವದು ಹೇಗೆ? ನನ್ನ ಹೃದಯವು ನನ್ನಲ್ಲಿ ತಿರುಗಿಕೊಂಡಿದೆ. ನನ್ನ ಪಶ್ಚಾತ್ತಾಪಗಳು ಒಟ್ಟಿಗೆ ಹತ್ತಿ ಕೊಂಡಿವೆ.
- 2 Chronicles 11:13 2 ಪೂರ್ವಕಾಲವೃತ್ತಾಂತ 11:13ಇದಲ್ಲದೆ ಸಮಸ್ತ ಇಸ್ರಾಯೇಲಿನಲ್ಲಿದ್ದ ಯಾಜ ಕರೂ ಲೇವಿಯರೂ ತಮ್ಮ ಸಮಸ್ತ ಪ್ರಾಂತ್ಯಗಳಿಂದ ಅವನ ಬಳಿಗೆ ಪುನಃ ಬಂದರು.
- 2 Chronicles 25:7 2 ಪೂರ್ವಕಾಲವೃತ್ತಾಂತ 25:7ಆಗ ದೇವರ ಮನುಷ್ಯ ನಾದ ಒಬ್ಬನು ಅವನ ಬಳಿಗೆ ಬಂದು ಅವನಿಗೆಅರಸನೇ, ಇಸ್ರಾಯೇಲಿನ ಸೈನ್ಯವು ನಿನ್ನ ಸಂಗಡ ಹೋಗದೆ ಇರಲಿ; ಯಾಕಂದರೆ ಕರ್ತನು ಇಸ್ರಾಯೇ ಲ್ಯರಾದ ಎಫ್ರಾಯಾಮನ ಸಮಸ್ತ ಮಕ್ಕಳ ಸಂಗಡ ಇರುವದಿಲ್ಲ.
- 2 Chronicles 30:10–11 2 ಪೂರ್ವಕಾಲವೃತ್ತಾಂತ 30:10–11ಹೀಗೆಯೇ ದೂತರು ಎಫ್ರಾಯಾಮಿನ, ಮನ ಸ್ಸೆಯ ದೇಶದಲ್ಲಿ ಜೆಬುಲೂನ್ ಪರ್ಯಂತರ ಸಂಚರಿಸಿ ಪಟ್ಟಣದಿಂದ ಪಟ್ಟಣಕ್ಕೆ ಹಾದುಹೋದರು. ಆದರೆ ಜನರು ಇವರನ್ನು ನೋಡಿ ನಕ್ಕು ಗೇಲಿ ಮಾಡಿದರು. ಆದಾಗ್ಯೂ ಅಶೇರ, ಮನಸ್ಸೆ, ಜೆಬುಲೂನ್ ಇವರಲ್ಲಿ ಕೆಲವರು ತಮ್ಮನ್ನು ತಗ್ಗಿಸಿಕೊಂಡು ಯೆರೂಸಲೇಮಿಗೆ ಬಂದರು.
- Deuteronomy 16:2–6 ಧರ್ಮೋಪದೇಶಕಾಂಡ 16:2–6ಹೀಗಿರುವ ದರಿಂದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳದಲ್ಲಿ ನಿನ್ನ ದೇವರಾದ ಕರ್ತನಿಗೆ ಕುರಿಪಶುಗಳ ಪಸ್ಕವನ್ನು ಅರ್ಪಿಸಬೇಕು. ಅದರಲ್ಲಿ ಹುಳಿ ರೊಟ್ಟಿಯನ್ನು ತಿನ್ನಬಾರದು. ಏಳು ದಿವಸ ಹುಳಿ ಇಲ್ಲದ ಶ್ರಮೆಯ ರೊಟ್ಟಿಗಳನ್ನು ಅದರಲ್ಲಿ ತಿನ್ನಬೇಕು; ತ್ವರೆಯಾಗಿ ಐಗುಪ್ತದೇಶದೊಳಗಿಂದ ನೀನು ಹೊರಗೆ ಬಂದಿ; ಆದಕಾರಣ ನೀನು ಐಗುಪ್ತದೇಶದೊಳಗಿಂದ ಹೊರಗೆ ಬಂದ ದಿವಸವನ್ನು ನೀನು ಜೀವಿಸುವ ದಿವಸ ಗಳಲ್ಲೆಲ್ಲಾ ಜ್ಞಾಪಕಮಾಡಬೇಕು. ಏಳು ದಿವಸ ಹುಳಿ ಕಲಸಿದ ರೊಟ್ಟಿ ನಿನ್ನ ಮೇರೆಗಳಲ್ಲೆಲ್ಲೂ ಕಾಣಬಾರದು. ಮೊದಲನೇ ದಿನದ ಸಾಯಂಕಾಲದಲ್ಲಿ ನೀನು ಕೊಯ್ದ ಮಾಂಸದಲ್ಲಿ ಏನಾದರೂ ಮರು ದಿವಸದ ವರೆಗೆ ಉಳಿಸಬಾರದು. ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದ್ವಾರಗಳ ಯಾವದೊಂದರಲ್ಲಾದರೂ ನೀನು ಪಸ್ಕವನ್ನು ಅರ್ಪಿಸ ಬಾರದು. ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳದಲ್ಲೇ ನೀನು ಪಸ್ಕವನ್ನು ಸಾಯಂಕಾಲದಲ್ಲಿ ಸೂರ್ಯನು ಅಸ್ತಮಿಸುವಾಗ ನೀನು ಐಗುಪ್ತವನ್ನು ಬಿಟ್ಟುಹೋದ ಸಮಯದಲ್ಲಿ ಅರ್ಪಿಸಬೇಕು.
- Exodus 12:3–20 ವಿಮೋಚನಕಾಂಡ 12:3–20ಇಸ್ರಾಯೇಲ್ ಸಭೆಗೆಲ್ಲಾ ನೀವು ಹೇಳಬೇಕಾದದ್ದೇ ನಂದರೆ--ಈ ತಿಂಗಳಿನ ಹತ್ತನೆಯ ದಿನದಲ್ಲಿ ಅವರು ತಮಗೆ ಒಂದೊಂದು ಕುರಿಮರಿಯನ್ನು ಅವರ ತಂದೆಗಳ ಮನೆಯ ಪ್ರಕಾರ ಮನೆಗೆ ಒಂದು ಕುರಿಮರಿಯನ್ನು ತಕ್ಕೊಳ್ಳಬೇಕು. ಒಂದು ಕುರಿಮರಿಯನ್ನು ತಿನ್ನುವದಕ್ಕೆ ಕುಟುಂಬವು ಚಿಕ್ಕದಾಗಿದ್ದರೆ ಅವನೂ ತನ್ನ ಮನೆಗೆ ಸವಿಾಪವಾಗಿರುವ ತನ್ನ ನೆರೆಯವನೂ ವ್ಯಕ್ತಿಗಳ ಲೆಕ್ಕದ ಪ್ರಕಾರ ಒಂದನ್ನು ತಕ್ಕೊಳ್ಳಲಿ; ಒಬ್ಬೊಬ್ಬನು ತಾನು ತಿನ್ನುವ ಅಳತೆಯ ಪ್ರಕಾರ ಕುರಿಮರಿಯನ್ನು ತಕ್ಕೊಳ್ಳಲಿ. ನಿಮ್ಮ ಕುರಿಮರಿಯು ನಿರ್ದೋಷವಾಗಿರುವ ಒಂದು ವರುಷದ ಗಂಡುಮರಿಯಾಗಿರಬೇಕು. ನೀವು ಕುರಿಗಳಿಂದಾಗಲಿ ಮೇಕೆಗಳಿಂದಾಗಲಿ ಅದನ್ನು ತಕ್ಕೊ ಳ್ಳಬೇಕು. ಅದನ್ನು ಈ ತಿಂಗಳಿನ ಹದಿನಾಲ್ಕನೆಯ ದಿನದ ವರೆಗೆ ಇಟ್ಟುಕೊಳ್ಳಬೇಕು. ತರುವಾಯ ಸಾಯಂ ಕಾಲದಲ್ಲಿ ಇಸ್ರಾಯೇಲಿನ ಕೂಟದ ಇಡೀ ಸಭೆಯು ಅದನ್ನು ಕೊಲ್ಲಬೇಕು. ರಕ್ತದಲ್ಲಿ ಸ್ವಲ್ಪ ತೆಗೆದು ಅವರು ಊಟ ಮಾಡುವ ಮನೆಗಳ ಎರಡು ನಿಲುವು ಗಂಬಗ ಳಿಗೂ ಬಾಗಿಲ ಮೇಲಿನ ಅಡ್ಡಗಂಬಕ್ಕೂ ಹಚ್ಚಬೇಕು. ಆ ರಾತ್ರಿಯಲ್ಲಿಯೇ ಆ ಮಾಂಸವನ್ನು ತಿನ್ನಬೇಕು. ಬೆಂಕಿಯಲ್ಲಿ ಸುಟ್ಟು ಅದನ್ನೂ ಹುಳಿಯಿಲ್ಲದ ರೊಟ್ಟಿಗ ಳನ್ನೂ ಕಹಿಯಾದ ಪಲ್ಯಗಳ ಸಂಗಡ ತಿನ್ನಬೇಕು. ಅದರಲ್ಲಿ ಯಾವದನ್ನೂ ಹಸಿಯಾದದ್ದಾಗಲಿ ನೀರಿ ನಲ್ಲಿ ಬೇಯಿಸಿದ್ದಾಗಲಿ ತಿನ್ನದೆ ಅದರ ತಲೆ ತೊಡೆ ಒಳಗಿನವುಗಳ ಸಹಿತವಾಗಿ ಬೆಂಕಿಯಲ್ಲಿ ಸುಟ್ಟೇ ಅದನ್ನು ತಿನ್ನಬೇಕು. ಅದರಲ್ಲಿ ಬೆಳಗಿನ ವರೆಗೆ ಏನನ್ನೂ ಉಳಿಸಬಾರದು. ಬೆಳಗಿನ ವರೆಗೆ ಅದರಲ್ಲಿ ಉಳಿದದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು. ನೀವು ಅದನ್ನು ತಿನ್ನತಕ್ಕ ರೀತಿ ಇದೇ: ನೀವು ನಿಮ್ಮ ನಡುಕಟ್ಟಿಕೊಂಡು, ಕೆರ ಮೆಟ್ಟಿಕೊಂಡು, ಕೋಲನ್ನು ಹಿಡಿದುಕೊಂಡು, ತ್ವರೆಯಾಗಿ ಅದನ್ನು ತಿನ್ನಬೇಕು. ಅದು ಕರ್ತನ ಪಸ್ಕವಾಗಿದೆ. ನಾನು ಈ ರಾತ್ರಿ ಐಗುಪ್ತದೇಶದಲ್ಲಿ ಹಾದುಹೋಗುತ್ತೇನೆ. ಐಗುಪ್ತದೇಶದಲ್ಲಿರುವ ಎಲ್ಲಾ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಇರುವ ಚೊಚ್ಚ ಲಾದವುಗಳನ್ನು ಸಂಹರಿಸುವೆನು. ಐಗುಪ್ತದ ದೇವರುಗ ಳಿಗೆಲ್ಲಾ ನಾನು ನ್ಯಾಯತೀರಿಸುವೆನು; ನಾನೇ ಕರ್ತನು. ಆದರೆ ನೀವು ಇರುವ ಎಲ್ಲಾ ಮನೆಗಳ ಮೇಲೆ ರಕ್ತವು ನಿಮಗೆ ಗುರುತಾಗಿರುವದು. ಆ ರಕ್ತವನ್ನು ನಾನು ನೋಡುವಾಗ ನಿಮ್ಮನ್ನು ದಾಟಿಹೋಗುವೆನು. ಐಗುಪ್ತದೇಶವನ್ನು ನಾನು ಹೊಡೆಯುವ ಸಮಯದಲ್ಲಿ ನಿಮ್ಮನ್ನು ನಾಶಮಾಡುವ ಯಾವ ಬಾಧೆಯೂ ನಿಮ್ಮ ಮೇಲೆ ಬರುವದಿಲ್ಲ. ಈ ದಿನವು ನಿಮಗೆ ಜ್ಞಾಪಕಾರ್ಥವಾಗಿರುವದು; ನೀವು ಇದನ್ನು ಕರ್ತನಿಗೆ ಹಬ್ಬವಾಗಿ ತಲತಲಾಂತರ ಗಳಲ್ಲಿ ಆಚರಿಸಬೇಕು; ಇದನ್ನು ನಿತ್ಯ ಶಾಸನದಂತೆ ಎಂದೆಂದಿಗೂ ಆಚರಿಸಬೇಕು. ಏಳು ದಿನಗಳ ವರೆಗೆ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನು ನಿಮ್ಮ ಮನೆಯೊಳಗಿಂದ ತೆಗೆದುಹಾಕಬೇಕು; ಮೊದಲನೆಯ ದಿನದಿಂದ ಏಳ ನೆಯ ದಿನದ ವರೆಗೆ ಹುಳಿರೊಟ್ಟಿಯನ್ನು ತಿನ್ನುವವರು ಇಸ್ರಾಯೇಲಿನೊಳಗಿಂದ ತೆಗೆದು ಹಾಕಲ್ಪಡಬೇಕು. ಇದಲ್ಲದೆ ಮೊದಲನೆಯ ದಿನದಲ್ಲಿ ಪರಿಶುದ್ಧ ಸಭೆಯೂ ಏಳನೆಯ ದಿನದಲ್ಲಿ ಪರಿಶುದ್ಧ ಸಭೆಯೂ ನಿಮಗೆ ಇರಬೇಕು. ಊಟಮಾಡುವದನ್ನು ಬಿಟ್ಟು ಆ ದಿನಗಳಲ್ಲಿ ಯಾವ ತರವಾದ ಕೆಲಸವನ್ನೂ ಮಾಡ ಬಾರದು. ನೀವು ಹುಳಿಯಿಲ್ಲದ ರೊಟ್ಟಿಯ ಹಬ್ಬ ವನ್ನು ಆಚರಿಸಬೇಕು. ಆ ದಿನದಲ್ಲಿಯೇ ನಾನು ನಿಮ್ಮ ಸೈನ್ಯಗಳನ್ನು ಐಗುಪ್ತದೇಶದೊಳಗಿಂದ ಹೊರಗೆ ಬರ ಮಾಡಿದ್ದೇನೆ; ಆದಕಾರಣ ನಿಮ್ಮ ಸಂತತಿಗಳಲ್ಲಿ ಸದಾ ಕಾಲಕ್ಕೂ ಒಂದು ಶಾಸನವಾಗಿ ಈ ದಿನವನ್ನು ನೀವು ಆಚರಿಸಬೇಕು. ಮೊದಲನೆಯ ತಿಂಗಳಿನಲ್ಲಿ ಅದೇ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲದಿಂದ ಆ ತಿಂಗಳಿನ ಇಪ್ಪತ್ತೊಂದನೆಯ ದಿನದ ಸಾಯಂಕಾಲದ ವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಳು ದಿನಗಳ ವರೆಗೆ ಹುಳಿಹಿಟ್ಟು ನಿಮ್ಮ ಮನೆಗಳಲ್ಲಿ ಇರಬಾರದು; ಹುಳಿಕಲಸಿದ್ದನ್ನು ಯಾರು ತಿನ್ನುವರೋ ಆ ವ್ಯಕ್ತಿಯು ಪರದೇಶದವನಾಗಲಿ ಸ್ವದೇಶದವ ನಾಗಲಿ ಅವನನ್ನು ಇಸ್ರಾಯೇಲ್ ಸಭೆಯೊಳಗಿಂದ ತೆಗೆದು ಹಾಕಬೇಕು. ಹುಳಿಕಲಸಿದ್ದು ಯಾವದೇ ಆಗಿರಲಿ ನೀವು ತಿನ್ನಬಾರದು; ನಿಮ್ಮ ಎಲ್ಲಾ ನಿವಾಸ ಗಳಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು ಎಂದು ಹೇಳಿದನು.
- 2 Chronicles 11:16 2 ಪೂರ್ವಕಾಲವೃತ್ತಾಂತ 11:16ಇವರ ತರುವಾಯ ಇಸ್ರಾಯೇಲಿನ ಕರ್ತನಾದ ದೇವರನ್ನು ಹುಡುಕಲು ತಮ್ಮ ಹೃದಯ ಗಳನ್ನು ಕೊಟ್ಟು ತಮ್ಮ ಪಿತೃಗಳ ದೇವರಾದ ಕರ್ತನಿಗೆ ಬಲಿ ಅರ್ಪಿಸಲು ಇಸ್ರಾಯೇಲಿನ ಸಮಸ್ತ ಗೋತ್ರ ಗಳಿಂದ ಯೆರೂಸಲೇಮಿಗೆ ಬಂದರು.
- Hosea 7:8–9 ಹೋಶೇಯ 7:8–9ಎಫ್ರಾಯಾಮು ಜನರೊಂದಿಗೆ ತನ್ನನ್ನು ಬೆರೆಸಿ ಕೊಂಡಿದ್ದಾನೆ; ಎಫ್ರಾಯಾಮು ತಿರುವಿ ಹಾಕದ ರೊಟ್ಟಿ ಯಾಗಿದ್ದಾನೆ. ಪರಕೀಯರು ಅವನ ಶಕ್ತಿಯನ್ನು ನುಂಗಿಬಿಟ್ಟಿದ್ದಾರೆ; ಅದು ಅವನಿಗೆ ಗೊತ್ತಿಲ್ಲ; ಹೌದು, ನರೆ ಕೂದಲು ಅಲ್ಲಲ್ಲಿ ಅವನ ಮೇಲೆ ಅದೆ. ಆದಾಗ್ಯೂ ಅವನು ತಿಳಿಯದೇ ಇದ್ದಾನೆ.
Original words (Hebrew)
- Hezekiah · H3169יְחִזְקִיָּה Yᵉchizqîyâh
- sent · H7971שָׁלַח shâlach
- Israel · H3478יִשְׂרָאֵל Yisrâʼêl
- Judah · H3063יְהוּדָה Yᵉhûwdâh
- wrote · H3789כָּתַב kâthab
- letters · H107אִגֶּרֶת ʼiggereth
- Ephraim · H669אֶפְרַיִם ʼEphrayim
- Manasseh · H4519מְנַשֶּׁה Mᵉnashsheh
- come · H935בּוֹא bôwʼ
- house · H1004בַּיִת bayith
- Jerusalem · H3389יְרוּשָׁלַ͏ִם Yᵉrûwshâlaim
- keep · H6213עָשָׂה ʻâsâh
- passover · H6453פֶּסַח peçach
- God · H430אֱלֹהִים ʼĕlôhîym
- Israel · H3478יִשְׂרָאֵל Yisrâʼêl