2 Chronicles · chapter 32 · verse 24
2 Chronicles 32:24 in Kannada
ಆ ದಿನಗಳಲ್ಲಿ ಹಿಜ್ಕೀಯನು ಸಾಯುವ ರೋಗ ದಲ್ಲಿದ್ದದ್ದರಿಂದ ಅವನು ಕರ್ತನಿಗೆ ಪ್ರಾರ್ಥನೆ ಮಾಡಿ ದನು. ಆಗ ಆತನು ಅವನ ಸಂಗಡ ಮಾತನಾಡಿ ಅವನಿಗೆ ಗುರುತನ್ನು ಕೊಟ್ಟನು.
Aa dinagalalli hijkeeyanu saayuva roga dalliddaddarinda avanu kartanige praarthane maadi danu. Aaga aatanu avana sangada maatanaadi avanige gurutannu kottanu.
2 Chronicles 32:24 in English
- King James Version (KJV)
- In those days Hezekiah was sick to the death, and prayed unto the LORD: and he spake unto him, and he gave him a sign.
- World English Bible (WEB)
- In those days Hezekiah was terminally ill, and he prayed to the LORD; and he spoke to him, and gave him a sign.
- American Standard Version (ASV)
- In those days Hezekiah was sick even unto death: and he prayed unto Jehovah; and he spake unto him, and gave him a sign.
- Bible in Basic English (BBE)
- In those days Hezekiah was ill and near death; and he made prayer to the Lord, and the Lord in answer gave him a sign.
- Darby Translation (DBY)
- In those days Hezekiah was sick unto death, and he prayed to Jehovah; and he spoke to him and gave him a sign.
- Webster's Bible (WBS)
- In those days Hezekiah was sick and near to death, and [he] prayed to the LORD: and he spoke to him, and he gave him a sign.
- Young's Literal Translation (YLT)
- In those days hath Hezekiah been sick even unto death, and he prayeth unto Jehovah, and He speaketh to him, and a wonder hath appointed for him;
Read in context
- 22ಹೀಗೆಯೇ ಕರ್ತನು ಹಿಜ್ಕೀಯ ನನ್ನೂ ಯೆರೂಸಲೇಮಿನ ನಿವಾಸಿಗಳನ್ನೂ ಅಶ್ಶೂರಿನ ಅರಸನಾದ ಸನ್ಹೇರೀಬನ ಕೈಯೊಳಗಿಂದಲೂ ಸಮಸ್ತರ ಕೈಯೊಳಗಿಂದಲೂ ರಕ್ಷಿಸಿ ಸಮಸ್ತ ಕಡೆಯಿಂದ ಅವ ರನ್ನು ನಡಿಸಿದನು.
- 23ಅನೇಕರು ಯೆರೂಸಲೇಮಿ ನಲ್ಲಿರುವ ಕರ್ತನಿಗೆ ಅರ್ಪಣೆಗಳನ್ನೂ ಯೆಹೂದದ ಅರಸನಾದ ಹಿಜ್ಕೀಯನಿಗೆ ವಸ್ತುಗಳನ್ನೂ ತಂದರು. ಅಂದಿನಿಂದ ಅವನು ಸಮಸ್ತ ಜನಾಂಗಗಳ ಸಮ್ಮುಖ ದಲ್ಲಿ ಉನ್ನತಕ್ಕೇರಿಸಲ್ಪಟ್ಟನು.
- 24ಆ ದಿನಗಳಲ್ಲಿ ಹಿಜ್ಕೀಯನು ಸಾಯುವ ರೋಗ ದಲ್ಲಿದ್ದದ್ದರಿಂದ ಅವನು ಕರ್ತನಿಗೆ ಪ್ರಾರ್ಥನೆ ಮಾಡಿ ದನು. ಆಗ ಆತನು ಅವನ ಸಂಗಡ ಮಾತನಾಡಿ ಅವನಿಗೆ ಗುರುತನ್ನು ಕೊಟ್ಟನು.
- 25ಆದರೆ ಹಿಜ್ಕೀ ಯನು ತನಗೆ ಆದ ಉಪಕಾರಕ್ಕೆ ತಕ್ಕಂತೆ ನಡೆಯದೆ ಇದ್ದನು; ಅವನ ಹೃದಯದಲ್ಲಿ ಅಹಂಕಾರ ತುಂಬಿತ್ತು; ಆದದರಿಂದ ಅವನ ಮೇಲೆಯೂ ಯೆಹೂದ ಯೆರೂ ಸಲೇಮಿನ ಮೇಲೆಯೂ ರೌದ್ರ ಉಂಟಾಯಿತು.
- 26ಆದಾಗ್ಯೂ ಹಿಜ್ಕೀಯನೂ ಯೆರೂಸಲೇಮಿನ ನಿವಾಸಿಗಳೂ ತಮ್ಮ ಹೃದಯದ ಗರ್ವದ ವಿಷಯ ತಮ್ಮನ್ನು ತಾವು ತಗ್ಗಿಸಿಕೊಂಡದ್ದರಿಂದ ಹಿಜ್ಕೀಯನ ದಿವಸಗಳಲ್ಲಿ ಕರ್ತನ ರೌದ್ರವು ಅವರ ಮೇಲೆ ಬರಲಿಲ್ಲ.
Cross references
- 2 Kings 20:1–11 2 ಅರಸುಗಳು 20:1–11ಆ ದಿವಸಗಳಲ್ಲಿ ಹಿಜ್ಕೀಯನು ಮರಣಕರರೋಗದಲ್ಲಿ ಬಿದ್ದಿದ್ದನು. ಆಗ ಆಮೋಚನ ಮಗನಾದ ಪ್ರವಾದಿಯಾದ ಯೆಶಾಯನು ಅವನ ಬಳಿಗೆ ಬಂದು ಅವನಿಗೆ--ನೀನು ನಿನ್ನ ಮನೆಯನ್ನು ವ್ಯವಸ್ಥೆ ಮಾಡಿಕೋ; ಯಾಕಂದರೆ ನೀನು ಬದುಕದೆ ಸಾಯುವಿ ಎಂದು ಕರ್ತನು ಹೇಳುತ್ತಾನೆ ಅಂದನು. ಆಗ ಅವನು ಗೋಡೆಯ ಕಡೆಗೆ ತನ್ನ ಮುಖವನ್ನು ತಿರುಗಿಸಿ ಕರ್ತನನ್ನು ಪ್ರಾರ್ಥಿಸಿ-- ಓ ಕರ್ತನೇ, ನಾನು ಸತ್ಯದಿಂದಲೂ ಪೂರ್ಣಹೃದಯದಿಂದಲೂ ನಿನ್ನ ಮುಂದೆ ನಡೆದು ನಿನ್ನ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದ್ದೇನೆಂದು ನೆನಸು ಅಂದನು. ಹಿಜ್ಕೀಯನು ಬಹಳವಾಗಿ ಅತ್ತನು. ಆದರೆ ಯೆಶಾಯನು ಆವರಣದ ಮಧ್ಯಕ್ಕೆ ಹೋಗುವ ಮುಂಚೆ ಕರ್ತನ ವಾಕ್ಯವು ಅವ ನಿಗೆ ಉಂಟಾಗಿ-- ನೀನು ತಿರುಗಿಕೊಂಡು ನನ್ನ ಜನರ ನಾಯಕನಾದ ಹಿಜ್ಕೀಯನಿಗೆ ಹೇಳಬೇಕಾದದ್ದೇ ನಂದರೆ--ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ; ನಿನ್ನ ಕಣ್ಣೀರನ್ನು ನೋಡಿದ್ದೇನೆ; ಇಗೋ, ನಾನು ನಿನ್ನನ್ನು ಸ್ವಸ್ಥಮಾಡುತ್ತೇನೆ; ಮೂರನೇ ದಿವಸದಲ್ಲಿ ಕರ್ತನ ಮನೆಗೆ ಹೋಗುವಿ. ಇದಲ್ಲದೆ ನಾನು ನಿನ್ನ ಆಯುಷ್ಯಕ್ಕೆ ಹದಿನೈದು ವರುಷ ಹೆಚ್ಚಾಗಿ ಕೂಡಿ ಸುತ್ತೇನೆ; ನಿನ್ನನ್ನೂ ಈ ಪಟ್ಟಣವನ್ನೂ ಅಶ್ಶೂರಿನ ಅರಸನ ಕೈಗೆ ಬೀಳದಂತೆ ತಪ್ಪಿಸಿಬಿಡುವೆನು. ಈ ಪಟ್ಟಣವನ್ನು ನನ್ನ ನಿಮಿತ್ತವಾಗಿಯೂ ನನ್ನ ಸೇವಕನಾದ ದಾವೀದನ ನಿಮಿತ್ತವಾಗಿಯೂ ಕಾಪಾಡುವೆನೆಂದು ನಿನ್ನ ತಂದೆಯಾದ ದಾವೀದನ ದೇವರಾದ ಕರ್ತನು ಹೇಳು ತ್ತಾನೆ ಎಂಬದೇ. ಇದಲ್ಲದೆ ಯೆಶಾಯನು ಅಂಜೂರದ ಹಣ್ಣುಗಳ ಉಂಡೆಯನ್ನು ತಕ್ಕೊಂಡು ಬರ ಹೇಳಿದನು. ಅವರು ಹಾಗೆಯೇ ತಕ್ಕೊಂಡು ಹುಣ್ಣಿನ ಮೇಲೆ ಹಾಕಿದ್ದರಿಂದ ಅವನು ಗುಣ ಹೊಂದಿದನು. ಆದರೆ ಹಿಜ್ಕೀಯನು ಯೆಶಾಯನಿಗೆ--ಕರ್ತನು ನನ್ನನ್ನು ಸ್ವಸ್ಥ ಮಾಡುವನೆಂಬದಕ್ಕೂ ನಾನು ಮೂರನೇ ದಿವಸದಲ್ಲಿ ಕರ್ತನ ಮನೆಗೆ ಹೋಗುವೆನೆಂಬದಕ್ಕೂ ನನಗೆ ಗುರುತೇನು ಅಂದನು. ಆಗ ಯೆಶಾಯನು --ಕರ್ತನು, ತಾನು ಹೇಳಿದ ಕಾರ್ಯವನ್ನು ಮಾಡುವ ನೆಂಬದಕ್ಕೆ ಕರ್ತನ ಕಡೆಯಿಂದ ನಿನಗೆ ಉಂಟಾಗುವ ಗುರುತು ಇದೇ--ನೆರಳು ಹತ್ತು ಮೆಟ್ಟಲು ಮುಂದಕ್ಕೆ ಹೋಗಬೇಕೋ? ಇಲ್ಲವೆ ಹತ್ತು ಮೆಟ್ಟಲು ಹಿಂದಕ್ಕೆ ಹೋಗಬೇಕೋ ಎಂದು ಕೇಳಿದನು. ಅದಕ್ಕೆ ಹಿಜ್ಕೀ ಯನು--ನೆರಳು ಹತ್ತು ಮೆಟ್ಟಲು ಇಳಿಯುವದು ಅಲ್ಪವಾದದ್ದು; ಹಾಗಲ್ಲ, ನೆರಳು ಹತ್ತು ಮೆಟ್ಟಲು ಹಿಂದಕ್ಕೆ ತಿರುಗಲಿ ಅಂದನು. ಆಗ ಪ್ರವಾದಿಯಾದ ಯೆಶಾಯನು ಕರ್ತನಿಗೆ ಮೊರೆಯಿಟ್ಟದ್ದರಿಂದ ಅವನು ಆಹಾಜನ ಛಾಯಾಸ್ತಂಭದಲ್ಲಿ ಇಳಿದುಹೋದ ನೆರ ಳನ್ನು ಹತ್ತು ಮೆಟ್ಟಲು ಹಿಂದಕ್ಕೆ ಬರಮಾಡಿದನು.
- Isaiah 38:1–8 ಯೆಶಾಯ 38:1–8ಆ ಕಾಲದಲ್ಲಿ ಹಿಜ್ಕೀಯನು ರೋಗಿಯಾಗಿ ಸಾಯುವದಕ್ಕಿದ್ದನು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು ಅವನಿಗೆ--ನಿನ್ನ ಮನೆಯ ವಿಷಯವಾಗಿ ವ್ಯವಸ್ಥೆ ಮಾಡಿಕೋ; ಯಾಕಂದರೆ ನೀನು ಉಳಿಯುವ ಹಾಗಿಲ್ಲ, ಸಾಯಬೇಕಾಗಿದೆ ಎಂಬದಾಗಿ ಕರ್ತನು ಹೇಳುತ್ತಾನೆ ಎಂದು ಹೇಳಿದನು. ಆಗ ಹಿಜ್ಕೀಯನು ತನ್ನ ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ-- ಓ ಕರ್ತನೇ, ನಾನು ನಿನ್ನ ಮುಂದೆ ಸತ್ಯವಾಗಿಯೂ ಯಥಾರ್ಥ ಹೃದಯದಿಂದಲೂ ನಡೆದು ನಿನ್ನ ದೃಷ್ಟಿ ಯಲ್ಲಿ ಒಳ್ಳೆಯದನ್ನು ಮಾಡಿದ್ದೇನೆಂದು ನೆನಪು ಮಾಡಿಕೋ ಎಂದು ಬೇಡಿಕೊಂಡು ವ್ಯಥೆಪಟ್ಟು ಅತ್ತನು. ಆಗ ಕರ್ತನ ವಾಕ್ಯವು ಯೆಶಾ ಯನ ಬಳಿಗೆ ಬಂದು ಹೇಳಿದ್ದೇನಂದರೆ-- ನೀನು ಹೋಗಿ ಹಿಜ್ಕೀ ಯನಿಗೆ ಹೇಳತಕ್ಕದ್ದೇನಂದರೆ--ನಿನ್ನ ತಂದೆಯಾದ ದಾವೀದನ ದೇವರಾದ ಕರ್ತನು ಹೀಗೆ ಹೇಳುತ್ತಾನೆ, ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನೂ ನೋಡಿದ್ದೇನೆ; ಇಗೋ, ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನೂ ಕೂಡಿಸುತ್ತೇನೆ. ನಿನ್ನನ್ನೂ ಈ ಪಟ್ಟಣವನ್ನೂ ಅಶ್ಶೂರದ ಅರಸನ ಕೈಯಿಂದ ಬಿಡಿಸುವೆನು; ಈ ಪಟ್ಟಣವನ್ನು ಕಾಪಾಡುವೆನು. ಕರ್ತನು ತಾನು ನುಡಿದದ್ದನ್ನು ನೆರವೇರಿಸುವನು ಎಂಬದಕ್ಕೆ ಒಂದು ಗುರುತನ್ನು ಕಾಣುವಿ. ಆಗ ಇಗೋ, ಸೂರ್ಯನ ಇಳಿತರದಿಂದ ಆಹಾಜನ ಸೋಫಾನ ಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳನ್ನು ಹತ್ತು ಮೆಟ್ಲು ಹಿಂದಕ್ಕೆ ಬರಮಾಡುವೆನು ಅಂದನು. ಅದರಂತೆ ಸೋಫಾನ ಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಲು ಹಿಂದಕ್ಕೆ ಬಂತು.
- Isaiah 38:21–22 ಯೆಶಾಯ 38:21–22ಯೆಶಾಯನು--ಅಂಜೂರದ ಹಣ್ಣುಗಳ ಅಡೆಯನ್ನು ತರಿಸಿ ಹುಣ್ಣಿನ ಮೇಲೆ ಇಟ್ಟರೆ ಅವನು ಬದುಕುವನೆಂದು ಹೇಳಿದ್ದನು.ಇದಲ್ಲದೆ ಹಿಜ್ಕೀಯನು--ನಾನು ಕರ್ತನ ಆಲಯಕ್ಕೆ ಹೋಗುವದಕ್ಕೆ ಗುರುತೇನು ಎಂದು ಕೇಳಿದ್ದನು. ಇದಲ್ಲದೆ ಹಿಜ್ಕೀಯನು--ನಾನು ಕರ್ತನ ಆಲಯಕ್ಕೆ ಹೋಗುವದಕ್ಕೆ ಗುರುತೇನು ಎಂದು ಕೇಳಿದ್ದನು.