2 Chronicles · chapter 32 · verse 25
2 Chronicles 32:25 in Kannada
ಆದರೆ ಹಿಜ್ಕೀ ಯನು ತನಗೆ ಆದ ಉಪಕಾರಕ್ಕೆ ತಕ್ಕಂತೆ ನಡೆಯದೆ ಇದ್ದನು; ಅವನ ಹೃದಯದಲ್ಲಿ ಅಹಂಕಾರ ತುಂಬಿತ್ತು; ಆದದರಿಂದ ಅವನ ಮೇಲೆಯೂ ಯೆಹೂದ ಯೆರೂ ಸಲೇಮಿನ ಮೇಲೆಯೂ ರೌದ್ರ ಉಂಟಾಯಿತು.
Aadare hijkee yanu tanage aada upakaarakke takkante nadeyade iddanu; avana hrudayadalli ahankaara tumbittu; aadadarinda avana meleyoo yehooda yeroo salemina meleyoo raudra untaayitu.
2 Chronicles 32:25 in English
- King James Version (KJV)
- But Hezekiah rendered not again according to the benefit [done] unto him; for his heart was lifted up: therefore there was wrath upon him, and upon Judah and Jerusalem.
- World English Bible (WEB)
- But Hezekiah didn’t reciprocate appropriate to the benefit done for him, because his heart was lifted up. Therefore there was wrath on him, Judah, and Jerusalem.
- American Standard Version (ASV)
- But Hezekiah rendered not again according to the benefit done unto him; for his heart was lifted up: therefore there was wrath upon him, and upon Judah and Jerusalem.
- Bible in Basic English (BBE)
- But Hezekiah did not do as had been done to him; for his heart was lifted up in pride; and so wrath came on him and on Judah and Jerusalem.
- Darby Translation (DBY)
- But Hezekiah rendered not again according to the benefit [done] to him, for his heart was lifted up; and there was wrath upon him, and upon Judah and Jerusalem.
- Webster's Bible (WBS)
- But Hezekiah rendered not again according to the benefit [done] to him; for his heart was lifted up: therefore there was wrath upon him, and upon Judah and Jerusalem.
- Young's Literal Translation (YLT)
- and Hezekiah hath not returned according to the deed [done] unto him, for his heart hath been lofty, and there is wrath upon him, and upon Judah and Jerusalem;
Read in context
- 23ಅನೇಕರು ಯೆರೂಸಲೇಮಿ ನಲ್ಲಿರುವ ಕರ್ತನಿಗೆ ಅರ್ಪಣೆಗಳನ್ನೂ ಯೆಹೂದದ ಅರಸನಾದ ಹಿಜ್ಕೀಯನಿಗೆ ವಸ್ತುಗಳನ್ನೂ ತಂದರು. ಅಂದಿನಿಂದ ಅವನು ಸಮಸ್ತ ಜನಾಂಗಗಳ ಸಮ್ಮುಖ ದಲ್ಲಿ ಉನ್ನತಕ್ಕೇರಿಸಲ್ಪಟ್ಟನು.
- 24ಆ ದಿನಗಳಲ್ಲಿ ಹಿಜ್ಕೀಯನು ಸಾಯುವ ರೋಗ ದಲ್ಲಿದ್ದದ್ದರಿಂದ ಅವನು ಕರ್ತನಿಗೆ ಪ್ರಾರ್ಥನೆ ಮಾಡಿ ದನು. ಆಗ ಆತನು ಅವನ ಸಂಗಡ ಮಾತನಾಡಿ ಅವನಿಗೆ ಗುರುತನ್ನು ಕೊಟ್ಟನು.
- 25ಆದರೆ ಹಿಜ್ಕೀ ಯನು ತನಗೆ ಆದ ಉಪಕಾರಕ್ಕೆ ತಕ್ಕಂತೆ ನಡೆಯದೆ ಇದ್ದನು; ಅವನ ಹೃದಯದಲ್ಲಿ ಅಹಂಕಾರ ತುಂಬಿತ್ತು; ಆದದರಿಂದ ಅವನ ಮೇಲೆಯೂ ಯೆಹೂದ ಯೆರೂ ಸಲೇಮಿನ ಮೇಲೆಯೂ ರೌದ್ರ ಉಂಟಾಯಿತು.
- 26ಆದಾಗ್ಯೂ ಹಿಜ್ಕೀಯನೂ ಯೆರೂಸಲೇಮಿನ ನಿವಾಸಿಗಳೂ ತಮ್ಮ ಹೃದಯದ ಗರ್ವದ ವಿಷಯ ತಮ್ಮನ್ನು ತಾವು ತಗ್ಗಿಸಿಕೊಂಡದ್ದರಿಂದ ಹಿಜ್ಕೀಯನ ದಿವಸಗಳಲ್ಲಿ ಕರ್ತನ ರೌದ್ರವು ಅವರ ಮೇಲೆ ಬರಲಿಲ್ಲ.
- 27ಹಿಜ್ಕೀಯನಿಗೆ ಅತ್ಯಧಿಕವಾದ ಐಶ್ವರ್ಯವೂ ಘನವೂ ಇದ್ದದ್ದರಿಂದ ಅವನು ಬೆಳ್ಳಿಬಂಗಾರ ರತ್ನ ಸುಗಂಧದ್ರವ್ಯ ಗುರಾಣಿಗಳಿಗೋಸ್ಕರವೂ ಎಲ್ಲಾ ವಿಧದ ಮನೋಹರವಾದ ಆಭರಣಗಳಿಗೋಸ್ಕರವೂ ತನಗೆ ಬೊಕ್ಕಸಗಳನ್ನು ಕಟ್ಟಿಸಿದನು.
Cross references
- 2 Chronicles 24:18 2 ಪೂರ್ವಕಾಲವೃತ್ತಾಂತ 24:18ಅವರು ತಮ್ಮ ಪಿತೃಗಳ ದೇವರಾದ ಕರ್ತನ ಆಲಯವನ್ನು ಬಿಟ್ಟು ತೋಪುಗಳನ್ನೂ ವಿಗ್ರಹಗಳನ್ನೂ ಸೇವಿಸಿದರು. ಆದಕಾರಣ ಅವರ ಈ ಅಪರಾಧದ ನಿಮಿತ್ತ ಯೆಹೂದ ಮತ್ತು ಯೆರೂಸಲೇಮಿನ ಮೇಲೆ ರೌದ್ರ ಬಂತು.
- 2 Chronicles 26:16 2 ಪೂರ್ವಕಾಲವೃತ್ತಾಂತ 26:16ಆದರೆ ಅವನು ಬಲ ಹೊಂದಿದ ಮೇಲೆ ಅವನ ಹೃದಯವು ನಾಶನಕ್ಕೆ ಎತ್ತಲ್ಪಟ್ಟಿತು. ಏನಂದರೆ, ಅವನು ಧೂಪಪೀಠದ ಮೇಲೆ ಧೂಪ ಸುಡುವದಕ್ಕೆ ಕರ್ತನ ಆಲಯದಲ್ಲಿ ಪ್ರವೇಶಿಸಿ ತನ್ನ ದೇವರಾದ ಕರ್ತ ನಿಗೆ ವಿರೋಧವಾಗಿ ಅಪರಾಧ ಮಾಡಿದನು.
- 2 Chronicles 32:31 2 ಪೂರ್ವಕಾಲವೃತ್ತಾಂತ 32:31ಆದರೆ ದೇಶದಲ್ಲಿ ಅದ್ಭುತಕ್ಕೋಸ್ಕರ ವಿಚಾ ರಣೆ ಮಾಡಲು ಬಾಬೆಲಿನ ಅಧಿಪತಿಗಳಿಂದ ತನ್ನ ಬಳಿಗೆ ಕಳುಹಿಸಲ್ಪಟ್ಟ ರಾಯಭಾರಿಗಳ ಕಾರ್ಯದಲ್ಲಿ ಅವನು ತನ್ನ ಹೃದಯದೊಳಗಿದ್ದದ್ದನ್ನೆಲ್ಲಾ ತಿಳುಕೊಳ್ಳುವ ಹಾಗೆ ಅವನನ್ನು ಶೋಧಿಸುವದಕ್ಕೆ ದೇವರು ಅವನನ್ನು ಬಿಟ್ಟುಬಿಟ್ಟನು.
- 2 Samuel 24:1 2 ಸಮುವೇಲನು 24:1ಕರ್ತನ ಕೋಪವು ತಿರಿಗಿ ಇಸ್ರಾಯೇಲಿಗೆ ವಿರೋಧವಾಗಿ ಉರಿಯಿತು; ಆಗ ಇಸ್ರಾ ಯೇಲನ್ನೂ ಯೆಹೂದವನ್ನೂ ಲೆಕ್ಕಿಸಲು ಹೋಗೆಂದು ಆತನು ದಾವೀದನನ್ನು ಪ್ರೇರೇಪಿಸಿದನು.
- Deuteronomy 8:17 ಧರ್ಮೋಪದೇಶಕಾಂಡ 8:17ನನ್ನ ಬಲವೇ ಮತ್ತು ನನ್ನ ಕೈಯ ಸಾಮರ್ಥ್ಯವೇ ನನಗೆ ಈ ಆಸ್ತಿಯನ್ನು ಸಂಪಾದಿಸಿತೆಂದು ನಿನ್ನ ಹೃದಯದಲ್ಲಿ ಹೇಳಿಕೊಳ್ಳದ ಹಾಗೆ ನೋಡಿಕೋ.
- 2 Kings 14:10 2 ಅರಸುಗಳು 14:10ನೀನು ಎದೋಮ್ಯ ರನ್ನು ಹೊಡೆದೇ ಹೊಡೆದದ್ದರಿಂದ ನಿನ್ನ ಹೃದಯವು ನಿನ್ನನ್ನು ಹೆಚ್ಚಿಸುವಂತೆ ಮಾಡಿತು. ಹೆಚ್ಚಳಪಡು; ಮನೆಯಲ್ಲಿ ಕಾದಿರು; ನಿನ್ನ ಕೇಡಿಗಾಗಿ ನೀನು ಯಾಕೆ ಜಗಳವಾಡಬೇಕು? ನೀನೂ ನಿನ್ನ ಸಂಗಡ ಯೆಹೂ ದವೂ ಬಿದ್ದು ಹೋಗುವಿರಲ್ಲಾ ಅಂದನು. ಆದರೆ ಅಮಚ್ಯನು ಕೇಳದೆ ಹೋದನು.
- 1 Chronicles 21:12–17 1 ಪೂರ್ವಕಾಲವೃತ್ತಾಂತ 21:12–17ಆದದರಿಂದ ನನ್ನನ್ನು ಕಳುಹಿ ಸಿದಾತನಿಗೆ ನಾನು ಹೇಳಬೇಕಾದ ಪ್ರತ್ಯುತ್ತರವೇನು ನೋಡಿಕೋ ಅಂದನು. ಆಗ ದಾವೀದನು ಗಾದ ನಿಗೆ--ನಾನು ಬಹು ಇಕ್ಕಟ್ಟಿನಲ್ಲಿ ಇದ್ದೇನೆ. ಕರ್ತನ ಕೈಯಲ್ಲಿ ಬೀಳುತ್ತೇನೆ; ಯಾಕಂದರೆ ಆತನ ಕರುಣೆಯು ಬಹಳವಾಗಿರುವದು; ಆದರೆ ಮನುಷ್ಯನ ಕೈಯಲ್ಲಿ ಬೀಳಲಾರೆನು ಅಂದನು. ಹಾಗೆಯೇ ಕರ್ತನು ಇಸ್ರಾಯೇಲಿನ ಮೇಲೆ ವ್ಯಾಧಿಯನ್ನು ಕಳುಹಿಸಿದನು; ಆಗ ಇಸ್ರಾಯೇಲಿನಲ್ಲಿ ಎಪ್ಪತ್ತು ಸಾವಿರ ಜನರು ಸತ್ತುಹೋದರು. ಇದ ಲ್ಲದೆ ಯೆರೂಸಲೇಮನ್ನು ನಾಶಮಾಡುವದಕ್ಕೆ ದೇವರು ದೂತನನ್ನು ಕಳುಹಿಸಿದನು. ಅವನು ನಾಶಮಾಡು ವದನ್ನು ಕರ್ತನು ನೋಡಿ ಆ ಕೇಡಿಗೋಸ್ಕರ ಪಶ್ಚಾ ತ್ತಾಪಪಟ್ಟು ನಾಶಮಾಡುವ ದೂತನಿಗೆ--ಸಾಕು; ನಿನ್ನ ಕೈಯನ್ನು ಹಿಂದೆಗೆ ಅಂದನು. ಆದರೆ ಕರ್ತನ ದೂತನು ಯೆಬೂಸಿಯನಾದ ಒರ್ನಾನನ ಕಣದ ಬಳಿಯಲ್ಲಿ ನಿಂತಿದ್ದನು. ಆಗ ದಾವೀದನು ತನ್ನ ಕಣ್ಣುಗಳನ್ನೆತ್ತಿ ಭೂಮಿಗೂ ಆಕಾಶಕ್ಕೂ ಮಧ್ಯದಲ್ಲಿ ನಿಂತಿರುವ ಕರ್ತನ ದೂತನನ್ನು ಕಂಡನು; ಅವನ ಕೈಯಲ್ಲಿ ಯೆರೂಸ ಲೇಮಿನ ಮೇಲೆ ಚಾಚಿದ್ದ ಬಿಚ್ಚುಕತ್ತಿ ಇತ್ತು. ಆಗ ದಾವೀದನೂ ಇಸ್ರಾಯೇಲಿನ ಹಿರಿಯರೂ ಗೋಣೀ ತಟ್ಟುಗಳಿಂದ ಮುಚ್ಚಿಕೊಂಡವರಾಗಿ ಮೋರೆ ಕೆಳಗಾಗಿ ಬಿದ್ದರು. ದಾವೀದನು ದೇವರಿಗೆ--ಜನರನ್ನು ಲೆಕ್ಕ ಮಾಡಲು ಆಜ್ಞಾಪಿಸಿದವನು ನಾನಲ್ಲವೋ? ನಾನೇ ಪಾಪವನ್ನು ಮಾಡಿ ಈ ಕೆಟ್ಟದ್ದನು ಮಾಡಿದ್ದೇನೆ. ಆದರೆ ಕುರಿಗಳಾದ ಇವರು ಮಾಡಿದ್ದೇನು? ನನ್ನ ದೇವರಾದ ಕರ್ತನೇ, ದಯದಿಂದ ನಿನ್ನ ಕೈ ನನ್ನ ಮೇಲೆಯೂ ನನ್ನ ತಂದೆಯ ಮನೆಯ ಮೇಲೆಯೂ ಇರಲಿ. ಆದರೆ ನಿನ್ನ ಜನರು ಬಾಧೆಪಡುವ ಹಾಗೆ ಅವರ ಮೇಲೆ ಬೇಡ ಅಂದನು.
- Deuteronomy 32:6 ಧರ್ಮೋಪದೇಶಕಾಂಡ 32:6ಓ ಮೂರ್ಖರಾದ ಬುದ್ಧಿಹೀನ ಜನರೇ, ಕರ್ತನಿಗೆ ಹೀಗೆ ಪ್ರತಿಯಾಗಿ ಕೊಡುತ್ತೀರೋ? ಆತನು ನಿನ್ನನ್ನು ಕೊಂಡುಕೊಂಡ ತಂದೆಯಲ್ಲವೋ? ಆತನು ನಿನ್ನನ್ನು ಸೃಷ್ಟಿಮಾಡಿ ಸ್ಥಿರಪಡಿಸಿದ್ದಾನೆ.
- Hosea 14:2 ಹೋಶೇಯ 14:2ಮಾತುಗಳನ್ನು ನಿಮ್ಮ ಸಂಗಡ ತೆಗೆದುಕೊಂಡು ಕರ್ತನ ಕಡೆಗೆ ತಿರಿಗಿಕೊಂಡು ಆತನಿಗೆ--ಎಲ್ಲಾ ದುಷ್ಕತ್ಯವನ್ನು ತೆಗೆದು ಹಾಕಿ ನಮ್ಮನ್ನು ಕೃಪೆಯಿಂದ ಸ್ವೀಕರಿಸು; ಆಗ ನಮ್ಮ ತುಟಿಗಳ ಯಜ್ಞಗಳನ್ನು ನಿನಗೆ ಅರ್ಪಿಸುವೆವು.
- Daniel 5:23 ದಾನಿಯೇಲನು 5:23ಪರಲೋಕದ ಕರ್ತನಿಗೆ ವಿರೋಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿರುವಿ; ಆತನ ಆಲಯದ ಪಾತ್ರೆಗಳನ್ನು ನಿನ್ನ ಸನ್ನಿಧಿಗೆ ತಂದರು, ಆಗ ನೀನು, ನಿನ್ನ ಪ್ರಭುಗಳು ಮತ್ತು ಪತ್ನಿ ಉಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು ಬುದ್ಧಿ ಕಣ್ಣು ಕಿವಿಗಳಿಲ್ಲದ ಬೆಳ್ಳಿ ಬಂಗಾರ ಕಂಚು ಕಬ್ಬಿಣ ಮರ ಕಲ್ಲುಗಳ ದೇವರುಗಳನ್ನು ಸ್ತುತಿಸಿದಿ; ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ ನಿನ್ನ ಸ್ಥಿತಿಗಳು ಯಾರ ಅಧೀನದಲ್ಲಿವೆಯೋ ಆ ದೇವರನ್ನು ಘನಪಡಿಸಲೇ ಇಲ್ಲ.
- 2 Chronicles 25:19 2 ಪೂರ್ವಕಾಲವೃತ್ತಾಂತ 25:19ಇಗೋನಾನು ಎದೋಮ್ಯರನ್ನು ಹೊಡೆದಿದ್ದೇನೆಂದು ಹೇಳಿ ಕೊಳ್ಳುತ್ತೀ; ಆದದರಿಂದ ನಿನ್ನ ಹೃದಯವು ನಿನ್ನನ್ನು ಅಹಂಕಾರದಿಂದ ಕೊಚ್ಕಿಕೊಳ್ಳುವಂತೆ ಮಾಡುತ್ತದೆ. ಈಗ ಮನೆಯಲ್ಲಿ ಕೂತಿರು. ನೀನೂ ನಿನ್ನ ಸಂಗಡ ಯೆಹೂದವೂ ಬಿದ್ದು ಹೋಗುವ ಹಾಗೆ ನಿನ್ನ ಕೇಡಿಗೆ ನೀನು ಕೈ ಹಾಕುವದೇನು ಅಂದನು.
- Deuteronomy 8:12–14 ಧರ್ಮೋಪದೇಶಕಾಂಡ 8:12–14ನೀನು ತಿಂದು ತೃಪ್ತಿಹೊಂದಿದಾಗಲೂ ಒಳ್ಳೇ ಮನೆಗಳನ್ನು ಕಟ್ಟಿ ಅವುಗಳಲ್ಲಿ ವಾಸಮಾಡುವಾಗಲೂ ನಿನ್ನ ಪಶು ಕುರಿಗಳು ಹೆಚ್ಚಿದಾಗಲೂ ಬೆಳ್ಳಿ ಬಂಗಾರ ನಿನಗೆ ಹೆಚ್ಚಿದಾಗಲೂ ನಿನಗಿರುವಂಥದ್ದೆಲ್ಲಾ ಹೆಚ್ಚಿದಾ ಗಲೂ ನಿನ್ನ ಹೃದಯವು ಉಬ್ಬಿಕೊಳ್ಳದ ಹಾಗೆಯೂ ನಿನ್ನನ್ನು ಐಗುಪ್ತದೇಶದ ದಾಸತ್ವದ ಮನೆಯೊಳಗಿಂದ ಹೊರಗೆ ಬರಮಾಡಿದಂಥ,