2 Chronicles · chapter 33 · verse 24
2 Chronicles 33:24 in Kannada
ಆದದರಿಂದ ಅವನ ಸೇವಕರು ಅವನ ಮೇಲೆ ಒಳಸಂಚು ಮಾಡಿ ಅವನ ಸ್ವಂತ ಮನೆಯಲ್ಲಿ ಅವನನ್ನು ಕೊಂದುಹಾಕಿದರು.ಆದರೆ ದೇಶದ ಜನರು ಅರಸನಾದ ಆಮೋನನ ಮೇಲೆ ಒಳಸಂಚು ಮಾಡಿದವರನ್ನೆಲ್ಲಾ ಕೊಂದುಹಾಕಿ ಅವನ ಮಗನಾದ ಯೋಷೀಯನನ್ನು ಅವನಿಗೆ ಬದ ಲಾಗಿ ಅರಸನನ್ನಾಗಿ ಮಾಡಿದರು.
Aadadarinda avana sevakaru avana mele olasanchu maadi avana svanta maneyalli avanannu konduhaakidaru.aadare deshada janaru arasanaada aamonana mele olasanchu maadidavarannellaa konduhaaki avana maganaada yosheeyanannu avanige bada laagi arasanannaagi maadidaru.
2 Chronicles 33:24 in English
- King James Version (KJV)
- And his servants conspired against him, and slew him in his own house.
- World English Bible (WEB)
- His servants conspired against him, and put him to death in his own house.
- American Standard Version (ASV)
- And his servants conspired against him, and put him to death in his own house.
- Bible in Basic English (BBE)
- And his servants made a secret design against him, and put him to death in his house.
- Darby Translation (DBY)
- And his servants conspired against him, and slew him in his own house.
- Webster's Bible (WBS)
- And his servants conspired against him, and slew him in his own house.
- Young's Literal Translation (YLT)
- And his servants conspire against him, and put him to death in his own house,
Read in context
- 22ಆದರೆ ಅವನು ತನ್ನ ತಂದೆಯಾದ ಮನಸ್ಸೆಯು ಮಾಡಿದ ಹಾಗೆ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆಮೋನನು ತನ್ನ ತಂದೆಯಾದ ಮನಸ್ಸೆಯು ಮಾಡಿದ ಕೆತ್ತಿದ ವಿಗ್ರಹಗಳಿಗೆ ಬಲಿಗಳನ್ನರ್ಪಿಸಿ ಅವುಗಳನ್ನು ಸೇವಿಸಿ ದನು.
- 23ತನ್ನ ತಂದೆಯಾದ ಮನಸ್ಸೆಯು ತನ್ನನ್ನು ತಗ್ಗಿಸಿಕೊಂಡ ಹಾಗೆ ಆಮೋನನು ಕರ್ತನ ಮುಂದೆ ತನ್ನನ್ನು ತಗ್ಗಿಸಿಕೊಳ್ಳಲಿಲ್ಲ; ಆದರೆ ಆಮೋನನು ಅಧಿಕ ವಾಗಿ ಅಪರಾಧ ಮಾಡಿದನು.
- 24ಆದದರಿಂದ ಅವನ ಸೇವಕರು ಅವನ ಮೇಲೆ ಒಳಸಂಚು ಮಾಡಿ ಅವನ ಸ್ವಂತ ಮನೆಯಲ್ಲಿ ಅವನನ್ನು ಕೊಂದುಹಾಕಿದರು.ಆದರೆ ದೇಶದ ಜನರು ಅರಸನಾದ ಆಮೋನನ ಮೇಲೆ ಒಳಸಂಚು ಮಾಡಿದವರನ್ನೆಲ್ಲಾ ಕೊಂದುಹಾಕಿ ಅವನ ಮಗನಾದ ಯೋಷೀಯನನ್ನು ಅವನಿಗೆ ಬದ ಲಾಗಿ ಅರಸನನ್ನಾಗಿ ಮಾಡಿದರು.
- 25ಆದರೆ ದೇಶದ ಜನರು ಅರಸನಾದ ಆಮೋನನ ಮೇಲೆ ಒಳಸಂಚು ಮಾಡಿದವರನ್ನೆಲ್ಲಾ ಕೊಂದುಹಾಕಿ ಅವನ ಮಗನಾದ ಯೋಷೀಯನನ್ನು ಅವನಿಗೆ ಬದ ಲಾಗಿ ಅರಸನನ್ನಾಗಿ ಮಾಡಿದರು.
Cross references
- Romans 11:22 ರೋಮಾಪುರದವರಿಗೆ 11:22ಆದದರಿಂದ ದೇವರ ದಯೆಯನ್ನೂ ಕಾಠಿಣ್ಯ ವನ್ನೂ ನೋಡು; ಬಿದ್ದವರ ಕಡೆಗೆ ಕಾಠಿಣ್ಯ; ನೀನು ದೇವರ ದಯೆಯನ್ನು ಆಶ್ರಯಿಸಿಕೊಂಡೇ ಇದ್ದರೆ ನಿನ್ನ ಕಡೆಗೆ ಆತನ ದಯೆ; ಇಲ್ಲವಾದರೆ ನೀನೂ ಕಡಿದು ಹಾಕಲ್ಪಡುವಿ.
- Psalm 55:23 ಕೀರ್ತನೆಗಳು 55:23ಓ ದೇವರೇ, ನೀನು ಅವರನ್ನು ನಾಶನದ ಕುಣಿಯಲ್ಲಿ ಇಳಿಯ ಮಾಡುವಿ. ಕೊಲೆಪಾತಕರೂ ಮೋಸಗಾರರೂ ತಮ್ಮ ಆಯುಷ್ಯದ ದಿವಸಗಳಲ್ಲಿ ಅರ್ದದಷ್ಟಾದರೂ ಜೀವಿ ಸುವದಿಲ್ಲ; ನಾನು ನಿನ್ನಲ್ಲಿ ಭರವಸವಿಡುತ್ತೇನೆ.
- 2 Kings 21:23–26 2 ಅರಸುಗಳು 21:23–26ಆದರೆ ಆಮೋನನ ಸೇವಕರು ಅವನ ಮೇಲೆ ಒಳಸಂಚು ಮಾಡಿ ಅರಸ ನನ್ನು ಅವನ ಮನೆಯಲ್ಲಿಯೇ ಕೊಂದುಹಾಕಿದರು. ದೇಶದ ಜನರು ಅರಸನಾದ ಆಮೋನನ ಮೇಲೆ ಒಳಸಂಚು ಮಾಡಿದ ಎಲ್ಲರನ್ನು ಸಂಹರಿಸಿ ಅವನ ಮಗನಾದ ಯೋಷೀಯನನ್ನು ಅವನಿಗೆ ಬದಲಾಗಿ ಅರಸನನ್ನಾಗಿ ಮಾಡಿದರು. ಆಮೋನನು ಮಾಡಿದ ಅವನ ಇತರ ಕ್ರಿಯೆಗಳು ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?ಅವನ ಶವವನ್ನು ಉಜ್ಜನ ತೋಟದಲ್ಲಿದ್ದ ಸಮಾಧಿ ಯಲ್ಲಿ ಹೂಣಿಟ್ಟರು. ಅವನ ಮಗನಾದ ಯೋಷೀ ಯನು ಅವನಿಗೆ ಬದಲಾಗಿ ಅರಸನಾದನು. ಅವನ ಶವವನ್ನು ಉಜ್ಜನ ತೋಟದಲ್ಲಿದ್ದ ಸಮಾಧಿ ಯಲ್ಲಿ ಹೂಣಿಟ್ಟರು. ಅವನ ಮಗನಾದ ಯೋಷೀ ಯನು ಅವನಿಗೆ ಬದಲಾಗಿ ಅರಸನಾದನು.
- 2 Chronicles 24:25–26 2 ಪೂರ್ವಕಾಲವೃತ್ತಾಂತ 24:25–26ಅವರು ಅವನನ್ನು ಬಿಟ್ಟತರುವಾಯ ಯಾಜಕನಾದ ಯೆಹೋ ಯಾದನ ಮಕ್ಕಳ ರಕ್ತಾಪರಾಧದ ನಿಮಿತ್ತವಾಗಿ ಅವನ ಸ್ವಂತ ಸೇವಕರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿ ಅವನು ಸಾಯುವ ಹಾಗೆ ಅವನ ಮಂಚದ ಮೇಲೆ ಅವನನ್ನು ಕೊಂದುಹಾಕಿದರು. ಅವರು ಅವ ನನ್ನು ದಾವೀದನ ಪಟ್ಟಣದಲ್ಲಿ ಹೂಣಿಟ್ಟರು; ಆದರೆ ಅರಸುಗಳ ಸಮಾಧಿಗಳ ಬಳಿಯಲ್ಲಿ ಅವನನ್ನು ಹೂಣಿ ಡಲಿಲ್ಲ. ಅವನಿಗೆ ವಿರೋಧವಾಗಿ ಒಳಸಂಚು ಮಾಡಿ ದವರಾರಂದರೆ, ಅಮ್ಮೋನ್ಯಳಾಗಿರುವ ಶಿಮ್ಗಾಳ ಮಗ ನಾದ ಜಾಬಾದನು, ಮೋವಾಬ್ಯಳಾಗಿರುವ ಶಿವ್ರೆಾ ತಳ ಮಗನಾದ ಯೆಹೋಜಾಬಾದನು.ಆದರೆ ಅವನ ಕುಮಾರರನ್ನು ಕುರಿತೂ ಅವನ ಮೇಲೆ ಹಾಕಿದ ಭಾರಗಳನ್ನು ಕುರಿತೂ ದೇವರ ಆಲಯ ದುರಸ್ತು ಮಾಡುವದನ್ನು ಕುರಿತೂ ಇಗೋ, ಅವು ಅರಸುಗಳ ಚರಿತ್ರೆಯ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. ಅವನ ಮಗ ನಾದ ಅಮಚ್ಯನು ಅವನಿಗೆ ಬದಲಾಗಿ ಆಳಿದನು.
- 2 Samuel 4:5–12 2 ಸಮುವೇಲನು 4:5–12ಬೇರೋತಿನ ಮಗನಾಗಿರುವ ರಿಮ್ಮೋನನ ಮಕ್ಕ ಳಾದ ರೇಕಾಬನೂ ಬಾಣನೂ ಹೊರಟು ಮಧ್ಯಾಹ್ನದ ಬಿಸಿಲಿನಲ್ಲಿ ಮಂಚದ ಮೇಲೆ ಮಲಗಿಕೊಂಡಿರುವ ಈಷ್ಬೋಶೆತನ ಮನೆಗೆ ಬಂದರು. ಗೋಧಿಯನ್ನು ತಕ್ಕೊಂಡು ಹೋಗುವವರಾಗಿ ನಡು ಮನೆಯೊಳಗೆ ಬಂದು ಅವನ ಐದನೇ ಎಲುಬಿನ ಸಂದಿನಲ್ಲಿ ತಿವಿದರು. ರೇಕಾಬನೂ ಅವನ ಸಹೋದರನಾದ ಬಾಣನೂ ತಪ್ಪಿಸಿಕೊಂಡು ಹೋದರು. ಅವರು ಮನೆಯೊಳಗೆ ಪ್ರವೇಶಿಸಿದಾಗ ಅವನು ಮಲಗುವ ಮನೆಯಲ್ಲಿ ತನ್ನ ಹಾಸಿಗೆಯ ಮೇಲೆ ಮಲಗಿದ್ದನು; ಇವರು ಅವನನ್ನು ಹೊಡೆದು ಕೊಂದುಹಾಕಿ ತಲೆಯನ್ನು ಕಡಿದು ಅದನ್ನು ತೆಗೆದುಕೊಂಡು ರಾತ್ರಿಯೆಲ್ಲಾ ಬೈಲಿನಲ್ಲಿ ನಡೆದು ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಈಷ್ಬೋ ಶೆತನ ತಲೆಯನ್ನು ತಂದು ಅರಸನಿಗೆ--ಇಗೋ, ನಿನ್ನ ಪ್ರಾಣವನ್ನು ಹುಡುಕಿದ ನಿನ್ನ ಶತ್ರುವಾಗಿದ್ದ ಸೌಲನ ಮಗನಾದ ಈಷ್ಬೋಶೆತನ ತಲೆಯು. ಈ ದಿನದಲ್ಲಿ ಕರ್ತನು ಅರಸನಾದ ನಮ್ಮ ಒಡೆಯನಿಗೋಸ್ಕರ ಸೌಲ ನಿಗೂ ಅವನ ಸಂತಾನಕ್ಕೂ ಮುಯ್ಯಿತೀರಿಸಿದ್ದಾನೆ ಅಂದರು. ಆಗ ದಾವೀದನು ಬೇರೋತಿನ ಮಗನಾ ಗಿರುವ ರಿಮ್ಮೋನನ ಮಕ್ಕಳಾದ ರೇಕಾಬಿಗೂ ಅವನ ಸಹೋದರನಾದ ಬಾಣನಿಗೂ ಪ್ರತ್ಯುತ್ತರವಾಗಿ--ಎಲ್ಲಾ ಇಕ್ಕಟ್ಟಿನಿಂದ ನನ್ನ ಪ್ರಾಣವನ್ನು ವಿಮೋಚಿಸಿದ ಕರ್ತನ ಜೀವದಾಣೆ, ತನ್ನ ಕಣ್ಣಿಗೆ ಸುವರ್ತಮಾನವನ್ನು ತಂದವನು ಎಂದು ಕಾಣಿಸಿಕೊಂಡವನಾಗಿ ನಾನು ತನ್ನ ವರ್ತಮಾನಕ್ಕೋಸ್ಕರ ಬಹುಮಾನವನ್ನು ಕೊಡು ವೆನೆಂದು ನೆನಸಿ ಒಬ್ಬನು ನನಗೆ--ಇಗೋ, ಸೌಲನು ಸತ್ತನೆಂದು ಹೇಳಿದ್ದರಿಂದ ನಾನು ಚಿಕ್ಲಗಿನಲ್ಲಿ ಅವನನ್ನು ಹಿಡಿದು ಕೊಂದುಹಾಕಿದೆನು. ತನ್ನ ಮನೆಯಲ್ಲಿ ತನ್ನ ಹಾಸಿಗೆಯ ಮೇಲೆ ಮಲಗಿದ್ದ ನೀತಿವಂತನನ್ನು ಕೊಲೆಮಾಡಿದ ದುಷ್ಟ ಮನುಷ್ಯರನ್ನು ಎಷ್ಟೋ ಹೆಚ್ಚಾಗಿ ಕೊಲೆಮಾಡುವೆನು. ಹಾಗಾದರೆ ಈಗ ನಾನು ನಿಮ್ಮ ಕೈಯಿಂದ ಅವನ ರಕ್ತ ವಿಚಾ ರಣೆ ಮಾಡಿ ನಿಮ್ಮನ್ನು ಭೂಮಿಯಿಂದ ತೆಗೆದುಬಿಡದೆ ಇರುವೆನೋ ಅಂದನು.ದಾವೀದನು ತನ್ನ ಯೌವ ನಸ್ಥರಿಗೆ ಆಜ್ಞಾಪಿಸಿದ್ದರಿಂದ ಅವರು ಅವರನ್ನು ಕೊಂದು ಹಾಕಿ, ಅವರ ಕೈಕಾಲುಗಳನ್ನು ಕಡಿದು ಹೆಬ್ರೋ ನಿನಲ್ಲಿರುವ ಕೊಳದ ಬಳಿಯಲ್ಲಿ ತೂಗುಹಾಕಿದರು. ಅವರು ಈಷ್ಬೋಶೆತನ ತಲೆಯನ್ನು ತಕ್ಕೊಂಡು ಅದನ್ನು ಹೆಬ್ರೋನಿನಲ್ಲಿರುವ ಅಬ್ನೇರನ ಸಮಾಧಿಯಲ್ಲಿ ಹೂಣಿಟ್ಟರು. ದಾವೀದನು ತನ್ನ ಯೌವ ನಸ್ಥರಿಗೆ ಆಜ್ಞಾಪಿಸಿದ್ದರಿಂದ ಅವರು ಅವರನ್ನು ಕೊಂದು ಹಾಕಿ, ಅವರ ಕೈಕಾಲುಗಳನ್ನು ಕಡಿದು ಹೆಬ್ರೋ ನಿನಲ್ಲಿರುವ ಕೊಳದ ಬಳಿಯಲ್ಲಿ ತೂಗುಹಾಕಿದರು. ಅವರು ಈಷ್ಬೋಶೆತನ ತಲೆಯನ್ನು ತಕ್ಕೊಂಡು ಅದನ್ನು ಹೆಬ್ರೋನಿನಲ್ಲಿರುವ ಅಬ್ನೇರನ ಸಮಾಧಿಯಲ್ಲಿ ಹೂಣಿಟ್ಟರು.
- 2 Chronicles 25:27–28 2 ಪೂರ್ವಕಾಲವೃತ್ತಾಂತ 25:27–28ಆದರೆ ಅಮಚ್ಯನು ಕರ್ತನ ಕಡೆಯಿಂದ ತೊಲಗಿಹೋದ ತರುವಾಯ ಅವರು ಯೆರೂಸಲೇಮಿ ನಲ್ಲಿ ಅವನ ಮೇಲೆ ಒಳಸಂಚು ಮಾಡಿದರು. ಆದ ಕಾರಣ ಅವನು ಲಾಕೀಷಿಗೆ ಓಡಿಹೋದನು; ಆದರೆ ಅವರು ಅವನ ಹಿಂದೆ ಲಾಕೀಷಿಗೆ ಕಳುಹಿಸಿ ಅಲ್ಲಿ ಅವನನ್ನು ಕೊಂದುಹಾಕಿದರು.ಅವರು ಅವನನ್ನು ಕುದುರೆಗಳ ಮೇಲೆ ತಕ್ಕೊಂಡು ಬಂದು ಯೆಹೂದದ ಪಟ್ಟಣದಲ್ಲಿ ಅವನ ಪಿತೃಗಳ ಬಳಿಯಲ್ಲಿ ಅವನನ್ನು ಹೂಣಿಟ್ಟರು. ಅವರು ಅವನನ್ನು ಕುದುರೆಗಳ ಮೇಲೆ ತಕ್ಕೊಂಡು ಬಂದು ಯೆಹೂದದ ಪಟ್ಟಣದಲ್ಲಿ ಅವನ ಪಿತೃಗಳ ಬಳಿಯಲ್ಲಿ ಅವನನ್ನು ಹೂಣಿಟ್ಟರು.