2 Chronicles · chapter 33 · verse 22
2 Chronicles 33:22 in Kannada
ಆದರೆ ಅವನು ತನ್ನ ತಂದೆಯಾದ ಮನಸ್ಸೆಯು ಮಾಡಿದ ಹಾಗೆ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆಮೋನನು ತನ್ನ ತಂದೆಯಾದ ಮನಸ್ಸೆಯು ಮಾಡಿದ ಕೆತ್ತಿದ ವಿಗ್ರಹಗಳಿಗೆ ಬಲಿಗಳನ್ನರ್ಪಿಸಿ ಅವುಗಳನ್ನು ಸೇವಿಸಿ ದನು.
Aadare avanu tanna tandeyaada manasseyu maadida haage kartana sammukhadalli kettaddannu maadidanu. Aamonanu tanna tandeyaada manasseyu maadida kettida vigrahagalige baligalannarpisi avugalannu sevisi danu.
2 Chronicles 33:22 in English
- King James Version (KJV)
- But he did [that which was] evil in the sight of the LORD, as did Manasseh his father: for Amon sacrificed unto all the carved images which Manasseh his father had made, and served them;
- World English Bible (WEB)
- He did that which was evil in the LORD’s sight, as did Manasseh his father; and Amon sacrificed to all the engraved images which Manasseh his father had made, and served them.
- American Standard Version (ASV)
- And he did that which was evil in the sight of Jehovah, as did Manasseh his father; and Amon sacrificed unto all the graven images which Manasseh his father had made, and served them.
- Bible in Basic English (BBE)
- He did evil in the eyes of the Lord, as Manasseh his father had done; and Amon made offerings to all the images which his father Manasseh had made, and was their servant.
- Darby Translation (DBY)
- And he did evil in the sight of Jehovah, as Manasseh his father had done; and Amon sacrificed to all the graven images that Manasseh his father had made, and served them.
- Webster's Bible (WBS)
- But he did [that which was] evil in the sight of the LORD, as did Manasseh his father: for Amon sacrificed to all the carved images which Manasseh his father had made, and served them;
- Young's Literal Translation (YLT)
- and he doth the evil thing in the eyes of Jehovah, as did Manasseh his father, and to all the graven images that Manasseh his father had made hath Amon sacrificed, and serveth them,
Read in context
- 20ಮನಸ್ಸೆಯು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವನನ್ನು ಅವನ ಸ್ವಂತ ಮನೆಯಲ್ಲಿ ಹೂಣಿಟ್ಟರು; ಅವನ ಮಗನಾದ ಆಮೋನನು ಅವನಿಗೆ ಬದಲಾಗಿ ಆಳಿದನು.
- 21ಆಮೋನನು ಆಳಲು ಆರಂಭಿಸಿದಾಗ ಇಪ್ಪತ್ತೆ ರಡು ವರುಷದವನಾಗಿದ್ದು, ಯೆರೂಸಲೇಮಿನಲ್ಲಿ ಎರಡು ವರುಷ ಆಳಿದನು.
- 22ಆದರೆ ಅವನು ತನ್ನ ತಂದೆಯಾದ ಮನಸ್ಸೆಯು ಮಾಡಿದ ಹಾಗೆ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆಮೋನನು ತನ್ನ ತಂದೆಯಾದ ಮನಸ್ಸೆಯು ಮಾಡಿದ ಕೆತ್ತಿದ ವಿಗ್ರಹಗಳಿಗೆ ಬಲಿಗಳನ್ನರ್ಪಿಸಿ ಅವುಗಳನ್ನು ಸೇವಿಸಿ ದನು.
- 23ತನ್ನ ತಂದೆಯಾದ ಮನಸ್ಸೆಯು ತನ್ನನ್ನು ತಗ್ಗಿಸಿಕೊಂಡ ಹಾಗೆ ಆಮೋನನು ಕರ್ತನ ಮುಂದೆ ತನ್ನನ್ನು ತಗ್ಗಿಸಿಕೊಳ್ಳಲಿಲ್ಲ; ಆದರೆ ಆಮೋನನು ಅಧಿಕ ವಾಗಿ ಅಪರಾಧ ಮಾಡಿದನು.
- 24ಆದದರಿಂದ ಅವನ ಸೇವಕರು ಅವನ ಮೇಲೆ ಒಳಸಂಚು ಮಾಡಿ ಅವನ ಸ್ವಂತ ಮನೆಯಲ್ಲಿ ಅವನನ್ನು ಕೊಂದುಹಾಕಿದರು.ಆದರೆ ದೇಶದ ಜನರು ಅರಸನಾದ ಆಮೋನನ ಮೇಲೆ ಒಳಸಂಚು ಮಾಡಿದವರನ್ನೆಲ್ಲಾ ಕೊಂದುಹಾಕಿ ಅವನ ಮಗನಾದ ಯೋಷೀಯನನ್ನು ಅವನಿಗೆ ಬದ ಲಾಗಿ ಅರಸನನ್ನಾಗಿ ಮಾಡಿದರು.
Cross references
- 2 Chronicles 33:1–10 2 ಪೂರ್ವಕಾಲವೃತ್ತಾಂತ 33:1–10ಮನಸ್ಸೆಯು ಆಳಲು ಆರಂಭಿಸಿದಾಗ ಹನ್ನೆರಡು ವರುಷದವನಾಗಿದ್ದು ಯೆರೂ ಸಲೇಮಿನಲ್ಲಿ ಐವತ್ತೈದು ವರುಷ ಆಳಿದನು. ಆದರೆ ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ಹೊರಡಿಸಿದ ಜನಾಂಗಗಳ ಅಸಹ್ಯಗಳ ಪ್ರಕಾರವೇ ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಏನಂದರೆ, ಅವನು ತನ್ನ ತಂದೆಯಾದ ಹಿಜ್ಕೀಯನು ಕೆಡವಿಹಾಕಿದ ಉನ್ನತ ಸ್ಥಳಗಳನ್ನು ತಿರಿಗಿ ಕಟ್ಟಿಸಿ ಬಾಳನಿಗೆ ಬಲಿಪೀಠ ಗಳನ್ನು ಎಬ್ಬಿಸಿ ತೋಪುಗಳನ್ನು ಹಾಕಿ ಆಕಾಶದ ಸೈನ್ಯ ಕ್ಕೆಲ್ಲಾ ಅಡ್ಡಬಿದ್ದು ಅವುಗಳನ್ನು ಸೇವಿಸಿದನು. ಇದ ಲ್ಲದೆ--ಯೆರೂಸಲೇಮಿನಲ್ಲಿ ನನ್ನ ಹೆಸರು ಯುಗ ಯುಗಕ್ಕೂ ಇರುವದೆಂದು ಕರ್ತನು ಹೇಳಿದ ಕರ್ತನ ಆಲಯದಲ್ಲಿ ಬಲಿಪೀಠಗಳನ್ನು ಕಟ್ಟಿಸಿದನು. ಕರ್ತನ ಆಲಯದ ಎರಡು ಅಂಗಳಗಳಲ್ಲಿ ಆಕಾಶದ ಎಲ್ಲಾ ಸೈನ್ಯಕ್ಕೋಸ್ಕರ ಬಲಿಪೀಠಗಳನ್ನು ಕಟ್ಟಿಸಿದನು. ಬೆನ್ ಹಿನ್ನೋಮ್ ಮಗನ ತಗ್ಗಿನಲ್ಲಿ ತನ್ನ ಮಕ್ಕಳನ್ನು ಬೆಂಕಿ ದಾಟುವಂತೆ ಮಾಡಿದನು; ಮೇಘಮಂತ್ರ ಸರ್ಪ ಮಂತ್ರಗಳನ್ನೂ ಮಾಟವನ್ನು ಮಾಡಿದನು; ಯಕ್ಷಿಣಿ ಗಾರರ ಮಂತ್ರಗಾರರ ಬಳಿಯಲ್ಲೂ ವಿಚಾರಿಸಿದನು; ಕರ್ತನಿಗೆ ಕೋಪವನ್ನು ಎಬ್ಬಿಸುವಂತೆ ಆತನ ಸಮ್ಮುಖ ದಲ್ಲಿ ಬಹಳವಾಗಿ ಕೆಟ್ಟತನವನ್ನು ಮಾಡಿದನು. ದೇವರು--ಈ ಆಲಯದಲ್ಲಿಯೂ ಇಸ್ರಾಯೇಲಿನ ಸಮಸ್ತ ಗೋತ್ರಗಳಿಂದ ನಾನು ಆದುಕೊಂಡ ಯೆರೂ ಸಲೇಮಿನಲ್ಲಿಯೂ ನಾನು ನನ್ನ ಹೆಸರನ್ನು ಯುಗ ಯುಗಕ್ಕೂ ಇರಿಸುವೆನೆಂದೂ ಮೋಶೆಯಿಂದ ಬರೆ ಯಿಸಿದ ಸಮಸ್ತ ನ್ಯಾಯಪ್ರಮಾಣವೂ ಆಜ್ಞೆಗಳೂ ಕಟ್ಟಳೆಗಳೂ ಇವುಗಳ ಪ್ರಕಾರ ನಾನು ಅವರಿಗೆ ಆಜ್ಞಾಪಿಸಿದ್ದೆನ್ನೆಲ್ಲವನ್ನು ಅವರು ಮಾಡಲು ಜಾಗ್ರತೆ ಯಾಗಿದ್ದರೆ ನಾನು ನಿಮ್ಮ ಪಿತೃಗಳಿಗೋಸ್ಕರ ನೇಮಿಸಿದ ದೇಶದೊಳಗಿಂದ ಇಸ್ರಾಯೇಲಿನ ಪಾದವನ್ನು ನಾನು ಇನ್ನು ಮೇಲೆ ಚಲಿಸ ಮಾಡುವದಿಲ್ಲವೆಂದೂ ಆತನು ದಾವೀದನಿಗೂ ಅವನ ಮಗನಾದ ಸೊಲೊಮೋನ ನಿಗೂ ಹೇಳಿದ ದೇವರ ಆಲಯದಲ್ಲಿ ಅವನು ಕೆತ್ತಿದ ವಿಗ್ರಹವನ್ನು ಮಾಡಿಸಿ ಇರಿಸಿದನು. ಹೀಗೆಯೇ ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ನಾಶ ಮಾಡಿದ ಜನಾಂಗಗಳಿಗಿಂತ ಯೆಹೂದದವರೂ ಯೆರೂಸಲೇಮಿನ ನಿವಾಸಿಗಳೂ ಕೆಟ್ಟದ್ದನ್ನು ಮಾಡು ವದಕ್ಕೆ ತಪ್ಪಿಹೋಗುವಂತೆ ಮನಸ್ಸೆಯು ಮಾಡಿದನು. ಕರ್ತನು ಮನಸ್ಸೆಯೊಂದಿಗೂ ಅವನ ಜನ ರೊಂದಿಗೂ ಮಾತನಾಡಿದನು; ಆದರೆ ಅವರು ಆಲೈ ಸದೆ ಹೋದರು.
- 2 Kings 21:20 2 ಅರಸುಗಳು 21:20ಅವನು ತನ್ನ ತಂದೆ ಯಾದ ಮನಸ್ಸೆಯು ಮಾಡಿದ ಹಾಗೆ ಕರ್ತನ ದೃಷ್ಟಿ ಯಲ್ಲಿ ಕೆಟ್ಟದ್ದನ್ನು ಮಾಡಿದನು.
- Isaiah 44:13–20 ಯೆಶಾಯ 44:13–20ಬಡಗಿಯು ನೂಲನ್ನು ಹಿಡಿದು ಗೆರೆ ಎಳೆದು ಬಾಚಿಯಿಂದ ಸಮಮಾಡಿ, ಕೈವಾರದಿಂದ ಗುರುತಿಸಿ, ಆಮೇಲೆ ಮನುಷ್ಯನ ಆಕಾ ರಕ್ಕೆ ತಂದು ಮನೆಯಲ್ಲಿ ವಾಸಿಸ ತಕ್ಕದ್ದಾಗಲೆಂದು ಮನುಷ್ಯನ ಅಂದದಂತೆ ರೂಪಿಸುವನು. ಅರಣ್ಯದ ಮಧ್ಯದಲ್ಲಿರುವ ಮರಗಳಲ್ಲಿ ದೇವದಾರುಗಳನ್ನು ಕಡಿದು; ತುರಾಯಿ, ಅಲ್ಲೊನ್, ಮತ್ತು ಓಕ್ಮರ ಗಳನ್ನು ತನ್ನ ಬಲಕ್ಕೋಸ್ಕರ ತೆಗೆದು ಕೊಳ್ಳುವನು. ಪೀತದಾರವನ್ನು ಅವನು ನೆಡಲು ಮಳೆಯು ಅದನ್ನು ಬೆಳೆಯಿಸುವದು. ಆಗ ಅದು ಮನುಷ್ಯರು ಉರಿಸು ವದಕ್ಕಾಗುವದು; ಅದರಿಂದ ಚಳಿಕಾಯಿಸಿಕೊಳ್ಳು ವನು, ಹೌದು, ಅದನ್ನು ಬೆಂಕಿ ಹಚ್ಚಿ ರೊಟ್ಟಿ ಸುಡು ವನು; ಹೌದು, ಅವನು ಒಂದು ದೇವರನ್ನು ಮಾಡಿ ಅದಕ್ಕೆ ನಮಸ್ಕರಿಸುವನು; ಅದರಲ್ಲಿ ಒಂದು ಕೆತ್ತಿದ ವಿಗ್ರಹವನ್ನು ಮಾಡಿ, ಅದಕ್ಕೆ ಅಡ್ಡಬಿಳುವನು. ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು; ಅದರ ಇನ್ನೊಂದು ಭಾಗದಲ್ಲಿ ಮಾಂಸವನ್ನು ಉಣ್ಣುವನು; ಮಾಂಸವನ್ನು ಸುಟ್ಟು ತೃಪ್ತಿಹೊಂದುವನು; ಹೌದು, ಅವನು ಚಳಿಕಾಯಿಸಿ ಕೊಳ್ಳುತ್ತಾ--ಆಹಾ! ಬೆಂಕಿ ಯನ್ನು ಕಂಡೆ, ಬೆಚ್ಚಗಾಯಿತು ಅಂದುಕೊಳ್ಳುವನು; ಅದರಲ್ಲಿ ಉಳಿದ ಭಾಗವನ್ನು ದೇವರನ್ನಾಗಿಯೂ ಕೆತ್ತಿದ ವಿಗ್ರಹವನ್ನಾಗಿಯೂ ಮಾಡಿ ಅದಕ್ಕೆ ಅಡ್ಡಬಿದ್ದು ನಮಸ್ಕರಿಸಿ--ನೀನೇ ನನ್ನ ದೇವರು, ನನ್ನನ್ನು ಕಾಪಾಡು ಎಂದು ಬೇಡಿಕೊಳ್ಳುವನು. ಅವರು ಏನೂ ತಿಳಿಯ ದವರು ಇಲ್ಲವೆ ಏನೂ ಗ್ರಹಿಸಲಾರದವರು; ಆತನು ಅವರ ಕಣ್ಣು ಕಾಣದಂತೆಯೂ ಹೃದಯಗಳು ಗ್ರಹಿಸ ದಂತೆಯೂ ಮುಚ್ಚಿ ಬಿಟ್ಟಿದ್ದಾನೆ. ನಾನು ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸಿದೆನು; ಹೌದು, ಅದರ ಕೆಂಡದಲ್ಲಿ ರೊಟ್ಟಿಮಾಡಿ ಮಾಂಸವನ್ನು ಸುಟ್ಟು ತಿಂದೆ ನಲ್ಲಾ; ಮಿಕ್ಕಿದ್ದರಲ್ಲಿ ಅಸಹ್ಯವಾದದ್ದನ್ನು ಮಾಡಲೋ, ಮರದ ತುಂಡಿಗೆ ಅಡ್ಡಬೀಳಬಹುದೋ ಅಂದುಕೊಳ್ಳು ವಷ್ಟು ಜ್ಞಾನವಿವೇಕಗಳು ಯಾರಿಗೂ ಇಲ್ಲ, ಯಾರೂ ಇದನ್ನು ಮನಸ್ಸಿಗೆತಾರರು. ಅವನು ತಿನ್ನುವದು ಬೂದಿಯೇ; ಮೋಸಕ್ಕೊಳಗಾದ ಹೃದಯವು ಅವನಿಗೆ ದಾರಿ ತಪ್ಪಿಸಿದ ಕಾರಣ ನನ್ನ ಬಲಗೈಯಲ್ಲಿ ಸುಳ್ಳು ಇದೆಯಲ್ಲಾ ಎಂದು ಅಂದುಕೊಳ್ಳಲೂ ತನ್ನ ಪ್ರಾಣ ವನ್ನು ಕಾಪಾಡಿಕೊಳ್ಳಲೂ ಅವನಿಂದಾಗದು.
- Ezekiel 20:18 ಯೆಹೆಜ್ಕೇಲನು 20:18ಆದರೆ ನಾನು ಅರಣ್ಯದಲ್ಲಿ ಅವರ ಮಕ್ಕಳಿಗೆ ಹೇಳಿದ್ದೇನಂದರೆ--ನಿಮ್ಮ ತಂದೆಗಳ ನಿಯಮಗಳಲ್ಲಿ ನಡೆಯಬೇಡಿರಿ, ಅವರ ನ್ಯಾಯಗಳನ್ನು ಅನುಸರಿಸ ಬೇಡಿರಿ, ಅವರ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರ ಮಾಡಿಕೊಳ್ಳಬೇಡಿರಿ;
- 2 Kings 21:1–11 2 ಅರಸುಗಳು 21:1–11ಮನಸ್ಸೆಯು ಆಳಲು ಆರಂಭಿಸಿದಾಗ ಹನ್ನೆರಡು ವರುಷದವನಾಗಿದ್ದು ಅವನು ಐವತ್ತೈದು ವರುಷ ಯೆರೂಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಹೆಫ್ಚಿಬಾ. ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ಹೊರಡಿಸಿದ ಅನ್ಯ ಜನಾಂಗಗಳ ಅಸಹ್ಯವಾದವುಗಳ ಹಾಗೆಯೇ ಅವನು ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿದನು. ಅವನು ತನ್ನ ತಂದೆಯಾದ ಹಿಜ್ಕೀಯನು ನಾಶಮಾಡಿದ ಉನ್ನತ ಸ್ಥಳಗಳನ್ನು ತಿರಿಗಿ ಕಟ್ಟಿಸಿ ಬಾಳನಿಗೆ ಬಲಿಪೀಠ ಗಳನ್ನು ಉಂಟುಮಾಡಿ ಇಸ್ರಾಯೇಲಿನ ಅರಸನಾದ ಅಹಾಬನು ಮಾಡಿದ ಹಾಗೆ ವಿಗ್ರಹದ ತೋಪನ್ನು ಮಾಡಿ ಆಕಾಶದ ಎಲ್ಲಾ ಸೈನ್ಯಕ್ಕೆ ಅಡ್ಡಬಿದ್ದು ಅವುಗಳನ್ನು ಸೇವಿಸಿದನು. ಇದಲ್ಲದೆ ಯೆರೂಸಲೇಮಿನಲ್ಲಿ ನನ್ನ ನಾಮವನ್ನು ಇರಿಸುವೆನೆಂದು ಕರ್ತನು ಯಾವದನ್ನು ಕುರಿತು ಹೇಳಿದ್ದನೋ ಆ ಕರ್ತನ ಮನೆಯಲ್ಲಿ ಅವನು ಬಲಿಪೀಠಗಳನ್ನು ಕಟ್ಟಿಸಿದನು. ಕರ್ತನ ಮನೆಯ ಎರಡು ಅಂಗಳಗಳಲ್ಲಿ ಆಕಾಶದ ಎಲ್ಲಾ ಸೈನ್ಯಕ್ಕೋಸ್ಕರ ಬಲಿಪೀಠಗಳನ್ನು ಕಟ್ಟಿಸಿದನು. ಅವನು ತನ್ನ ಮಗನನ್ನು ಬೆಂಕಿಯಲ್ಲಿ ದಾಟುವಂತೆ ಮಾಡಿದನು; ಮೇಘ ಮಂತ್ರ ಗಳನ್ನೂ ಸರ್ಪಮಂತ್ರಗಳನ್ನೂ ಮಾಡಿದನು; ಯಕ್ಷಿಣಿ ಗಾರರ ಬಳಿಯಲ್ಲೂ ಮಂತ್ರಜ್ಞರ ಬಳಿಯಲ್ಲೂ ವಿಚಾರಿ ಸಿದನು; ಕರ್ತನಿಗೆ ಕೋಪವನ್ನು ಎಬ್ಬಿಸಲು ಆತನ ದೃಷ್ಟಿಯಲ್ಲಿ ಅತ್ಯಂತ ಕೆಟ್ಟತನವನ್ನು ಮಾಡಿದನು. ಈ ಮನೆಯಲ್ಲಿಯೂ ಇಸ್ರಾಯೇಲಿನ ಸಕಲ ಗೋತ್ರಗಳ ಲ್ಲಿಯೂ ನಾನು ಆದುಕೊಂಡ ಯೆರೂಸಲೇಮಿನ ಲ್ಲಿಯೂ ನನ್ನ ನಾಮವನ್ನು ಯುಗಯುಗಕ್ಕೂ ಇರುವಂತೆ ಮಾಡುವೆನೆಂದು ಕರ್ತನು ದಾವೀದನಿಗೂ ಅವನ ಮಗನಾದ ಸೊಲೊಮೋನನಿಗೂ ಯಾವದನ್ನು ಕುರಿತು ಹೇಳಿದ್ದನೋ ಆ ಮನೆಯಲ್ಲಿ ತಾನು ಮಾಡಿದ ತೋಪಿನ ಕೆತ್ತಿದ ವಿಗ್ರಹವನ್ನು ಇಟ್ಟನು. ಕರ್ತನು --ನಾನು ಅವರಿಗೆ ಆಜ್ಞಾಪಿಸಿದ ಎಲ್ಲಾದರ ಪ್ರಕಾರವೂ ನನ್ನ ಸೇವಕನಾದ ಮೋಶೆಯು ಅವರಿಗೆ ಆಜ್ಞಾಪಿಸಿದ ಎಲ್ಲಾ ನ್ಯಾಯಪ್ರಮಾಣದ ಪ್ರಕಾರವೂ ಮಾಡಿ ಅವುಗಳನ್ನು ಅವರು ಕೈಕೊಂಡರೆ ನಾನು ಅವರ ತಂದೆಗಳಿಗೆ ಕೊಟ್ಟ ದೇಶದೊಳಗಿಂದ ಅವರ ಪಾದಗಳು ಇನ್ನು ಕದಲುವಂತೆ ಮಾಡುವದಿಲ್ಲವೆಂದು ಹೇಳಿದನು. ಆದರೆ ಅವರು ಕೇಳದೆ ಹೋದರು; ಕರ್ತನು ಇಸ್ರಾಯೇಲ್ ಮಕ್ಕಳ ಮುಂದೆ ನಾಶಮಾಡಿದ ಜನಾಂಗಗಳ ಕೆಟ್ಟತನಕ್ಕಿಂತ ಅಧಿಕ ವಾಗಿ ಮಾಡಲು ಮನಸ್ಸೆಯು ಅವರನ್ನು ಮಾರ್ಗ ತಪ್ಪಿಸಿದನು. ಆದದರಿಂದ ಕರ್ತನು ಪ್ರವಾದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ್ದೇನಂದರೆ-- ಯೆಹೂದದ ಅರಸನಾದ ಮನಸ್ಸೆಯು ತನ್ನ ಮುಂದೆ ಇದ್ದ ಅಮೋರಿಯರು ಮಾಡಿದ ಎಲ್ಲಕ್ಕಿಂತ ಕೆಟ್ಟದ್ದಾದ ಈ ಅಸಹ್ಯಗಳನ್ನು ಮಾಡಿದನು. ಯೆಹೂದವನ್ನು ತನ್ನ ವಿಗ್ರಹಗಳಿಂದ ಪಾಪಮಾಡಿಸಿದನು. ಈ ಕಾರಣ ದಿಂದ ಇಸ್ರಾಯೇಲಿನ ದೇವರಾದ ಕರ್ತನು ಹೇಳು ವದೇನಂದರೆ--
- 2 Chronicles 34:3–4 2 ಪೂರ್ವಕಾಲವೃತ್ತಾಂತ 34:3–4ಅವನು ಇನ್ನೂ ಹುಡುಗನಾಗಿರುವಾಗ ತನ್ನ ಆಳ್ವಿಕೆಯ ಎಂಟನೇ ವರುಷದಲ್ಲಿ ತನ್ನ ಪಿತೃವಾದ ದಾವೀದನ ದೇವರನ್ನು ಹುಡುಕಲು ಆರಂಭಿಸಿದನು. ಅವನ ಆಳ್ವಿಕೆಯ ಹನ್ನೆರಡನೇ ವರುಷದಲ್ಲಿ ಉನ್ನತ ಸ್ಥಳಗಳನ್ನೂ ತೋಪುಗಳನ್ನೂ ಕೆತ್ತಿದ ವಿಗ್ರಹಗಳನ್ನೂ ಎರಕಹೊಯಿದ ವಿಗ್ರಹಗಳನ್ನೂ ತೆಗೆದುಹಾಕಿ ಯೆಹೂದ ಯೆರೂಸಲೇಮನ್ನು ಶುಚಿಮಾಡಲು ಆರಂಭಿಸಿದನು. ಅವರು ಬಾಳನ ಬಲಿಪೀಠಗಳನ್ನು ಅವನ ಸಮ್ಮುಖದಿಂದ ಕೆಡವಿಹಾಕಿದರು. ಅವುಗಳ ಮೇಲಿರುವ ಸೂರ್ಯಸ್ತಂಭಗಳನ್ನು ಕಡಿದುಹಾಕಿ ತೋಪುಗಳನ್ನೂ ಕೆತ್ತಿದ ವಿಗ್ರಹಗಳನ್ನೂ ಎರಕ ಹೊಯ್ದ ವಿಗ್ರಹಗಳನ್ನೂ ಒಡೆದುಬಿಟ್ಟು ಪುಡಿಪುಡಿ ಮಾಡಿ, ಅವುಗಳಿಗೆ ಬಲಿ ಅರ್ಪಿಸಿದವರ ಸಮಾಧಿ ಗಳ ಮೇಲೆ ಚೆಲ್ಲಿಸಿ
Original words (Hebrew)
- did · H6213עָשָׂה ʻâsâh
- evil · H7451רַע raʻ
- sight · H5869עַיִן ʻayin
- did · H6213עָשָׂה ʻâsâh
- Manasseh · H4519מְנַשֶּׁה Mᵉnashsheh
- father · H1אָב ʼâb
- Amon · H526אָמוֹן ʼÂmôwn
- sacrificed · H2076זָבַח zâbach
- images · H6456פְּסִיל pᵉçîyl
- Manasseh · H4519מְנַשֶּׁה Mᵉnashsheh
- father · H1אָב ʼâb
- made · H6213עָשָׂה ʻâsâh
- served · H5647עָבַד ʻâbad