2 Chronicles · chapter 35 · verse 11
2 Chronicles 35:11 in Kannada
ಲೇವಿಯರು ಪಸ್ಕದ ಕುರಿಯನ್ನು ವಧಿಸಿದ ತರು ವಾಯ ಯಾಜಕರು ಅವರ ಕೈಯಿಂದ ರಕ್ತವನ್ನು ತಕ್ಕೊಂಡು ಚಿಮುಕಿಸಿದರು; ಆದರೆ ಲೇವಿಯರು ಚರ್ಮ ವನ್ನು ಸುಲಿದರು;
Leviyaru paskada kuriyannu vadhisida taru vaaya yaajakaru avara kaiyinda raktavannu takkondu chimukisidaru; aadare leviyaru charma vannu sulidaru;
2 Chronicles 35:11 in English
- King James Version (KJV)
- And they killed the passover, and the priests sprinkled [the blood] from their hands, and the Levites flayed [them].
- World English Bible (WEB)
- They killed the Passover lambs, and the priests sprinkled the blood which they received from their hands, and the Levites skinned them.
- American Standard Version (ASV)
- And they killed the passover, and the priests sprinkled [the blood which they received] of their hand, and the Levites flayed them.
- Bible in Basic English (BBE)
- And they put the Passover lambs to death, the blood being drained out by the priests when it was given to them, and the Levites did the skinning.
- Darby Translation (DBY)
- And they slaughtered the passover, and the priests sprinkled [the blood] from their hand, and the Levites flayed them.
- Webster's Bible (WBS)
- And they killed the passover, and the priests sprinkled [the blood] from their hands, and the Levites flayed [them] .
- Young's Literal Translation (YLT)
- and they slaughter the passover-offering, and the priests sprinkle out of their hand, and the Levites are striping;
Read in context
- 9ಇದಲ್ಲದೆ ಲೇವಿಯರಲ್ಲಿ ಪ್ರಧಾನರಾದ ಕೋನನ್ಯನೂ ಅವನ ಸಹೋದರರಾದ ಶೆಮಾಯನೂ ನೆತನೇಲನೂ ಹಷಲ್ಯನೂ ಯೆಗೀಯೇಲನೂ ಯೋಜಾಬಾದನೂ ಪಸ್ಕದ ಬಲಿಗಳ ನಿಮಿತ್ತವಾಗಿ ಐದು ಸಾವಿರ ಮರಿಗಳನ್ನೂ ಐನೂರು ಎತ್ತುಗಳನ್ನೂ ಲೇವಿಯರಿಗೆ ಕೊಟ್ಟರು.
- 10ಹೀಗೆಯೇ ಅರಸನ ಆಜ್ಞೆಯ ಪ್ರಕಾರ ಸೇವೆಯು ಸಿದ್ಧಮಾಡಲ್ಪಟ್ಟಿತು. ಯಾಜಕರು ತಮ್ಮ ತಮ್ಮ ಸ್ಥಳಗಳಲ್ಲಿಯೂ ಲೇವಿಯರು ತಮ್ಮ ತಮ್ಮ ಸರತಿಗಳಲ್ಲಿಯೂ ನಿಂತಿದ್ದರು.
- 11ಲೇವಿಯರು ಪಸ್ಕದ ಕುರಿಯನ್ನು ವಧಿಸಿದ ತರು ವಾಯ ಯಾಜಕರು ಅವರ ಕೈಯಿಂದ ರಕ್ತವನ್ನು ತಕ್ಕೊಂಡು ಚಿಮುಕಿಸಿದರು; ಆದರೆ ಲೇವಿಯರು ಚರ್ಮ ವನ್ನು ಸುಲಿದರು;
- 12ಮೋಶೆಯ ಪುಸ್ತಕದಲ್ಲಿ ಬರೆಯ ಲ್ಪಟ್ಟ ಹಾಗೆ ಕರ್ತನಿಗೆ ಅರ್ಪಿಸುವದಕ್ಕೋಸ್ಕರ ಜನರಿಗೆ ಆಯಾ ಕುಟುಂಬಗಳ ಶಾಖೆಗಳ ಪ್ರಕಾರ ಕೊಡಲು ಅವರು ದಹನಬಲಿಗಳನ್ನು ಹಾಗೆ ಎತ್ತುಗಳನ್ನು ತೆಗೆದಿಟ್ಟರು.
- 13ಹೀಗೆ ಕಟ್ಟಳೆಯ ಪ್ರಕಾರ ಪಸ್ಕವನ್ನು ಬೆಂಕಿಯಿಂದ ಬೇಯಿಸಿದರು. ಆದರೆ ಪರಿಶುದ್ಧವಾದ ವುಗಳನ್ನು ಗಡಿಗೆಗಳಲ್ಲಿಯೂ ತಪ್ಪಲೆಗಳಲ್ಲಿಯೂ ಕೊಪ್ಪರಿಗೆಗಳಲ್ಲಿಯೂ ಬೇಯಿಸಿ ಶೀಘ್ರವಾಗಿ ಜನರೆ ಲ್ಲರಿಗೆ ಕಳುಹಿಸಿದರು.
Cross references
- 2 Chronicles 29:34 2 ಪೂರ್ವಕಾಲವೃತ್ತಾಂತ 29:34ಯಾಜಕರು ಸ್ವಲ್ಪ ಜನರಾಗಿದ್ದು ದಹನಬಲಿಗಳನ್ನೆಲ್ಲಾ ಸುಲಿಯಲಾರದೆ ಇದ್ದದ್ದರಿಂದ ಕೆಲಸವು ತೀರುವ ವರೆಗೂ ಯಾಜಕರು ತಮ್ಮನ್ನು ಪರಿಶುದ್ಧಮಾಡಿಕೊಳ್ಳುವ ವರೆಗೂ ಲೇವಿ ಯರಾದ ಅವರ ಸಹೋದರರು ಅವರಿಗೆ ಸಹಾಯ ಮಾಡುತ್ತಿದ್ದರು. ಯಾಕಂದರೆ ತಮ್ಮನ್ನು ಪರಿಶುದ್ಧಮಾಡಿ ಕೊಳ್ಳಲು ಯಾಜಕರಿಗಿಂತ ಲೇವಿಯರು ಯಥಾರ್ಥ ಹೃದಯವುಳ್ಳವರಾಗಿದ್ದರು.
- Numbers 18:7 ಅರಣ್ಯಕಾಂಡ 18:7ಆದದರಿಂದ ನೀನು ನಿನ್ನ ಕುಮಾರರ ಸಹಿತವಾಗಿ ನಿಮ್ಮ ಯಾಜಕತ್ವವನ್ನು ಕಾಪಾಡಬೇಕು. ಬಲಿಪೀಠದ ಸಮಸ್ತ ಕಾರ್ಯಗಳಿಗೋಸ್ಕರ ಪರದೆಯ ಒಳಗೆ ನೀವು ಸೇವೆಮಾಡಬೇಕು. ನಿಮ್ಮ ಯಾಜಕತ್ವವನ್ನು ದಾನದ ಸೇವೆಯಾಗಿ ನಿಮಗೆ ಕೊಟ್ಟಿದ್ದೇನೆ. ಪರಕೀಯನು ಸವಿಾಪಕ್ಕೆ ಬಂದರೆ ಸಾಯಬೇಕು ಎಂದು ಹೇಳಿದನು.
- Leviticus 1:5–6 ಯಾಜಕಕಾಂಡ 1:5–6ಅವನು ಆ ಹೋರಿಯನ್ನು ಕರ್ತನ ಮುಂದೆ ವಧಿಸಬೇಕು; ಆಗ ಆರೋನನ ಕುಮಾರರಾದ ಯಾಜಕರು ರಕ್ತವನ್ನು ತಂದು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿರುವ ಯಜ್ಞವೇದಿಯ ಸುತ್ತಲೂ ಚಿಮುಕಿಸಬೇಕು. ಅವನು ಆ ದಹನಬಲಿಯ ಚರ್ಮವನ್ನು ಸುಲಿದು ಅದನ್ನು ತುಂಡುಗಳನ್ನಾಗಿ ಮಾಡಬೇಕು.
- 2 Chronicles 30:16 2 ಪೂರ್ವಕಾಲವೃತ್ತಾಂತ 30:16ಇದಲ್ಲದೆ ಅವರು ದೇವರ ಮನುಷ್ಯನಾದ ಮೋಶೆ ಯ ನ್ಯಾಯಪ್ರಮಾಣದ ಹಾಗೆ ತಮ್ಮ ಪದ್ಧತಿಯ ಪ್ರಕಾರ ತಮ್ಮ ತಮ್ಮ ಸ್ಥಳದಲ್ಲಿ ನಿಂತು ಯಾಜಕರು ಲೇವಿಯರ ಕೈಯಿಂದ ರಕ್ತವನ್ನು ತೆಗೆದುಕೊಂಡು ಚಿಮುಕಿಸಿದರು.
- Hebrews 9:21–22 ಇಬ್ರಿಯರಿಗೆ 9:21–22ಇದಲ್ಲದೆ ಗುಡಾರದ ಮೇಲೆಯೂ ಸೇವೆಗೆ ಬೇಕಾಗಿರುವ ಎಲ್ಲಾ ಉಪ ಕರಣಗಳ ಮೇಲೆಯೂ ರಕ್ತವನ್ನು ಪ್ರೋಕ್ಷಿಸಿದನು. ನ್ಯಾಯಪ್ರಮಾಣದಿಂದ ಹೆಚ್ಚು ಕಡಿಮೆ ಎಲ್ಲಾ ವಸ್ತುಗಳು ರಕ್ತದಿಂದಲೇ ಶುದ್ಧೀಕರಿಸಲ್ಪಡುವವು; ರಕ್ತ ಧಾರೆಯಿಲ್ಲದೆ ಪಾಪ ಪರಿಹಾರವಿಲ್ಲ.
- 2 Chronicles 29:22–24 2 ಪೂರ್ವಕಾಲವೃತ್ತಾಂತ 29:22–24ಹೀಗೆ ಅವರು ಹೋರಿ ಗಳನ್ನು ವಧಿಸಿದಾಗ ಯಾಜಕರು ಅವುಗಳ ರಕ್ತವನ್ನು ತೆಗೆದುಕೊಂಡು ಬಲಿಪೀಠದ ಮೇಲೆ ಚಿಮಿಕಿಸಿದರು; ಹಾಗೆಯೇ ಅವರು ಟಗರುಗಳನ್ನು ವಧಿಸಿ ರಕ್ತವನ್ನು ಬಲಿಪೀಠದ ಮೇಲೆ ಚಿಮಿಕಿಸಿದರು; ಅವರು ಕುರಿಮರಿ ಗಳನ್ನೂ ವಧಿಸಿ ರಕ್ತವನ್ನು ಬಲಿಪೀಠದ ಮೇಲೆ ಚಿಮಿಕಿಸಿದರು. ಅರಸನ ಮುಂದೆಯೂ ಸಭೆಯ ಮುಂದೆಯೂ ಪಾಪದ ಬಲಿಯಾದ ಮೇಕೆ ಹೋತ ಗಳನ್ನು ಹತ್ತಿರ ತಕ್ಕೊಂಡು ಬಂದು ತಮ್ಮ ಕೈಗಳನ್ನು ಅವುಗಳ ಮೇಲೆ ಇಟ್ಟರು. ಆಗ ಸಮಸ್ತ ಇಸ್ರಾಯೇ ಲಿಗೋಸ್ಕರ ಪ್ರಾಯಶ್ಚಿತ್ತವಾಗಿ ಯಾಜಕರು ಅವುಗಳನ್ನು ವಧಿಸಿ ಬಲಿಪೀಠದ ಮೇಲೆ ಅವುಗಳ ರಕ್ತದಿಂದ ಪಾಪ ನಿವಾರಣೆ ಮಾಡಿದರು. ದಹನಬಲಿಯೂ ಪಾಪದ ಬಲಿಯೂ ಸಮಸ್ತ ಇಸ್ರಾಯೇಲಿಗೋಸ್ಕರ ಆಗ ಬೇಕೆಂದು ಅರಸನು ಆಜ್ಞಾಪಿಸಿದನು,
- Numbers 18:3 ಅರಣ್ಯಕಾಂಡ 18:3ಅವರು ನಿನ್ನ ಅಪ್ಪಣೆಯನ್ನೂ ಗುಡಾರವೆಲ್ಲಾದರ ಅಪ್ಪಣೆಯನ್ನೂ ಕಾಪಾಡಬೇಕು. ಪರಿಶುದ್ಧ ಸ್ಥಳದ ಸಾಮಾನುಗಳಿಗೂ ಬಲಿಪೀಠಕ್ಕೂ ಮಾತ್ರ ಅವರೂ ನೀವೂ ಸಾಯದ ಹಾಗೆ ಅವರು ಸವಿಾಪಕ್ಕೆ ಬರಬಾರದು.