2 Chronicles · chapter 35 · verse 2
2 Chronicles 35:2 in Kannada
ಆಗ ಅವನು ಯಾಜಕರನ್ನು ಅವರವರ ಕೆಲಸಗಳಲ್ಲಿ ನಿಲ್ಲಿಸಿ ಕರ್ತನ ಆಲಯದ ಸೇವೆ ಮಾಡುವದಕ್ಕೆ ಅವರನ್ನು ದೃಢ ಪಡಿಸಿ,
Aaga avanu yaajakarannu avaravara kelasagalalli nillisi kartana aalayada seve maaduvadakke avarannu drudha padisi,
2 Chronicles 35:2 in English
- King James Version (KJV)
- And he set the priests in their charges, and encouraged them to the service of the house of the LORD,
- World English Bible (WEB)
- He set the priests in their offices and encouraged them in the service of the LORD’s house.
- American Standard Version (ASV)
- And he set the priests in their offices, and encouraged them to the service of the house of Jehovah.
- Bible in Basic English (BBE)
- And he gave the priests their places, making them strong for the work of the house of God.
- Darby Translation (DBY)
- And he set the priests in their charges, and encouraged them to the service of the house of Jehovah.
- Webster's Bible (WBS)
- And he set the priests in their charges, and encouraged them to the service of the house of the LORD,
- Young's Literal Translation (YLT)
- and he stationeth the priests over their charges, and strengtheneth them for the service of the house of Jehovah,
Read in context
- 1ಇದಲ್ಲದೆ ಯೋಷೀಯನು ಯೆರೂಸ ಲೇಮಿನಲ್ಲಿ ಕರ್ತನಿಗೆ ಪಸ್ಕವನ್ನು ಆಚರಿ ಸಿದನು. ಮೊದಲನೇ ತಿಂಗಳ ಹದಿನಾಲ್ಕನೇ ದಿವಸ ದಲ್ಲಿ ಪಸ್ಕದ ಕುರಿಯನ್ನು ವಧಿಸಿದರು.
- 2ಆಗ ಅವನು ಯಾಜಕರನ್ನು ಅವರವರ ಕೆಲಸಗಳಲ್ಲಿ ನಿಲ್ಲಿಸಿ ಕರ್ತನ ಆಲಯದ ಸೇವೆ ಮಾಡುವದಕ್ಕೆ ಅವರನ್ನು ದೃಢ ಪಡಿಸಿ,
- 3ಸಮಸ್ತ ಇಸ್ರಾಯೇಲ್ಯರಿಗೆ ಬೋಧಿಸತಕ್ಕ ವರೂ ಕರ್ತನಿಗೆ ಪ್ರತಿಷ್ಠಿತರೂ ಆದ ಲೇವಿಯರಿಗೆಪರಿಶುದ್ಧವಾದ ಮಂಜೂಷವು ನಿಮ್ಮ ಭುಜಗಳ ಮೇಲೆ ಭಾರವಿಲ್ಲದ ಹಾಗೆ ನೀವು ಅದನ್ನು ಇಸ್ರಾ ಯೇಲಿನ ಅರಸನಾಗಿರುವ ದಾವೀದನ ಮಗನಾದ ಸೊಲೊಮೋನನು ಕಟ್ಟಿಸಿದ ಮನೆಯಲ್ಲಿ ಇರಿಸಿ ನಿಮ್ಮ ದೇವರಾದ ಕರ್ತನನ್ನೂ ಆತನ ಜನವಾದ ಇಸ್ರಾಯೇಲ್ಯರನ್ನೂ ಸೇವಿಸಿರಿ.
- 4ಇದಲ್ಲದೆ ಇಸ್ರಾ ಯೇಲಿನ ಅರಸನಾದ ದಾವೀದನ ಬರಹದ ಪ್ರಕಾರ ವಾಗಿಯೂ ಅವನ ಮಗನಾದ ಸೊಲೊಮೋನನ ಬರಹದ ಪ್ರಕಾರವಾಗಿಯೂ ನಿಮ್ಮ ಸರತಿಗಳಲ್ಲಿ ನಿಮ್ಮ ಪಿತೃಗಳ ಮನೆಗಳ ಪ್ರಕಾರ ಸಿದ್ಧಮಾಡಿಕೊಂಡು
Cross references
- 2 Chronicles 31:2 2 ಪೂರ್ವಕಾಲವೃತ್ತಾಂತ 31:2ಹಿಜ್ಕೀಯನು ಅವನವನ ಸೇವೆಯ ಪ್ರಕಾರ ಯಾಜ ಕರ ಲೇವಿಯರ ಸರತಿಗಳನ್ನು ನೇಮಿಸಿದನು. ದಹನ ಬಲಿಗಳನ್ನು ಮತ್ತು ಸಮಾಧಾನದ ಬಲಿಗಳನ್ನು ಅರ್ಪಿ ಸುವದಕ್ಕೂ ಸೇವಿಸುವದಕ್ಕೂ ಕರ್ತನ ಗುಡಾರಗಳ ಬಾಗಲುಗಳಲ್ಲಿ ಸ್ತೋತ್ರ ಮಾಡುವದಕ್ಕೂ ಕೊಂಡಾ ಡುವದಕ್ಕೂ ಯಾಜಕರನ್ನೂ ಲೇವಿಯರನ್ನೂ ನೇಮಿಸಿ ದನು.
- 1 Chronicles 22:19 1 ಪೂರ್ವಕಾಲವೃತ್ತಾಂತ 22:19ನಿಮ್ಮ ದೇವರಾದ ಕರ್ತನನ್ನು ಹುಡು ಕಲು ನಿಮ್ಮ ಹೃದಯವನ್ನೂ ಪ್ರಾಣವನ್ನೂ ಒಪ್ಪಿಸಿ ಕರ್ತನ ಒಡಂಬಡಿಕೆಯ ಮಂಜೂಷದ ದೇವರ ಪರಿ ಶುದ್ಧ ಪಾತ್ರೆಗಳನ್ನು ಕರ್ತನ ನಾಮಕ್ಕೆ ಕಟ್ಟಿಸಲ್ಪಡುವ ಮನೆಯೊಳಗೆ ತರುವ ಹಾಗೆ ಎದ್ದು ಕರ್ತನಾದ ದೇವ ರಿಗೆ ಪರಿಶುದ್ಧ ಸ್ಥಳವನ್ನು ಕಟ್ಟಿಸಿರಿ ಅಂದನು.
- 2 Chronicles 29:5–11 2 ಪೂರ್ವಕಾಲವೃತ್ತಾಂತ 29:5–11ಲೇವಿಯರೇ, ನನ್ನ ಮಾತನ್ನು ಕೇಳಿರಿ; ನೀವು ನಿಮ್ಮನ್ನು ಪರಿಶುದ್ಧ ಮಾಡಿಕೊಂಡು ನಿಮ್ಮ ಪಿತೃಗಳ ಕರ್ತನಾದ ದೇವರ ಮನೆಯನ್ನು ಪರಿಶುದ್ಧಮಾಡಿ ಅದರ ಮೈಲಿಗೆಯನ್ನು ಪರಿಶುದ್ಧ ಸ್ಥಾನದಿಂದ ತೆಗೆದುಹಾಕಿರಿ. ನಮ್ಮ ಪಿತೃಗಳು ಅಪರಾಧಮಾಡಿ ನಮ್ಮ ದೇವರಾದ ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ನಡಿಸಿ ಆತನನ್ನು ಬಿಟ್ಟು ಕರ್ತನ ನಿವಾಸ ಸ್ಥಾನದ ಕಡೆಯಿಂದ ತಮ್ಮ ಮುಖಗಳನ್ನು ತಿರುಗಿಸಿ ತಮ್ಮ ಬೆನ್ನುಗಳನ್ನು ತೋರಿಸಿದ್ದಾರೆ. ಇದಲ್ಲದೆ ಅವರು ದ್ವಾರಾಂಗಳದ ಬಾಗಲುಗಳನ್ನು ಮುಚ್ಚಿ ದೀಪಗಳನ್ನು ಆರಿಸಿ ಇಸ್ರಾಯೇಲಿನ ದೇವರಿಗೆ ಪರಿಶುದ್ಧ ಸ್ಥಾನದಲ್ಲಿ ಧೂಪವನ್ನು ಸುಡದೆ, ದಹನಬಲಿಗಳನ್ನು ಅರ್ಪಿ ಸದೆ ಹೋದರು. ಆದದರಿಂದ ಯೆಹೂದದ ಮೇಲೆ ಯೂ ಮತ್ತು ಯೆರೂಸಲೇಮಿನವರ ಮೇಲೆಯೂ ಕರ್ತನ ರೌದ್ರವಾಯಿತು; ನೀವು ನಿಮ್ಮ ಕಣ್ಣುಗಳಿಂದ ನೋಡುವ ಹಾಗೆ ಆತನು ಅವರನ್ನು ಕಳವಳಕ್ಕೂ ವಿಸ್ಮಯಕ್ಕೂ ಅಪಹಾಸ್ಯಕ್ಕೂ ಒಪ್ಪಿಸಿಕೊಟ್ಟನು. ಅದ ಕ್ಕೋಸ್ಕರ ಇಗೋ, ನಮ್ಮ ಪಿತೃಗಳು ಕತ್ತಿಯಿಂದ ಬಿದ್ದಿ ದ್ದಾರೆ; ನಮ್ಮ ಕುಮಾರರೂ ಕುಮಾರ್ತೆಯರೂ ಹೆಂಡ ತಿಯರೂ ಸೆರೆಯಲ್ಲಿದ್ದಾರೆ. ಈಗ ಇಸ್ರಾಯೇಲಿನ ದೇವರಾದ ಕರ್ತನ ಉಗ್ರಕೋಪವು ನಮ್ಮನ್ನು ಬಿಟ್ಟು ಹೋಗುವ ಹಾಗೆ ನಾನು ಆತನ ಸಂಗಡ ಒಡಂಬಡಿ ಕೆಯನ್ನು ಮಾಡಲು ಮನಸ್ಸುಳ್ಳವನಾಗಿದ್ದೇನೆ. ನನ್ನ ಮಕ್ಕಳೇ, ಉದಾಸೀನರಾಗಿರಬೇಡಿರಿ; ಯಾಕಂದರೆ ತನ್ನ ಸಮ್ಮುಖದಲ್ಲಿ ನಿಲ್ಲುವದಕ್ಕೂ ತನ್ನನ್ನು ಸೇವಿಸುವದಕ್ಕೂ ಸೇವಕರಾಗಿರುವದಕ್ಕೂ ಧೂಪಸುಡುವದಕ್ಕೂ ಕರ್ತನು ನಿಮ್ಮನ್ನು ಆದುಕೊಂಡಿದ್ದಾನೆ ಅಂದನು.
- Numbers 18:5–7 ಅರಣ್ಯಕಾಂಡ 18:5–7ಇಸ್ರಾಯೇಲ್ ಮಕ್ಕಳ ಮೇಲೆ ಇನ್ನು ಮುಂದೆ ಎಂದಿಗೂ ರೌದ್ರವು ಬಾರದಹಾಗೆ ಪರಿಶುದ್ಧ ಸ್ಥಳದ ಆಜ್ಞೆಯನ್ನೂ ಬಲಿಪೀಠದ ಆಜ್ಞೆಯನ್ನೂ ನೀವು ಕಾಪಾಡಬೇಕು. ಇಗೋ, ನಾನು ನಿಮ್ಮ ಸಹೋದರ ರಾದ ಲೇವಿಯರನ್ನು ಇಸ್ರಾಯೇಲ್ ಮಕ್ಕಳೊ ಳಗಿಂದ ತೆಗೆದುಕೊಂಡಿದ್ದೇನೆ. ಸಭೆಯ ಗುಡಾರದ ಸೇವೆಯನ್ನು ಮಾಡುವದಕ್ಕೆ ಅವರು ಕರ್ತನಿಗೋಸ್ಕರ ನಿಮಗೆ ದಾನವಾಗಿ ಕೊಡಲ್ಪಟ್ಟವರಾಗಿದ್ದಾರೆ. ಆದದರಿಂದ ನೀನು ನಿನ್ನ ಕುಮಾರರ ಸಹಿತವಾಗಿ ನಿಮ್ಮ ಯಾಜಕತ್ವವನ್ನು ಕಾಪಾಡಬೇಕು. ಬಲಿಪೀಠದ ಸಮಸ್ತ ಕಾರ್ಯಗಳಿಗೋಸ್ಕರ ಪರದೆಯ ಒಳಗೆ ನೀವು ಸೇವೆಮಾಡಬೇಕು. ನಿಮ್ಮ ಯಾಜಕತ್ವವನ್ನು ದಾನದ ಸೇವೆಯಾಗಿ ನಿಮಗೆ ಕೊಟ್ಟಿದ್ದೇನೆ. ಪರಕೀಯನು ಸವಿಾಪಕ್ಕೆ ಬಂದರೆ ಸಾಯಬೇಕು ಎಂದು ಹೇಳಿದನು.
- 1 Chronicles 24:1–31 1 ಪೂರ್ವಕಾಲವೃತ್ತಾಂತ 24:1–31ಆರೋನನ ಕುಮಾರರಲ್ಲಿ ವರ್ಗಗಳಾಗಿ ವಿಭಾಗಿಸಿದವರು ಇವರೇ. ಆರೋನನ ಕುಮಾರರು--ನಾದಾಬನೂ ಅಬೀಹುವೂ ಎಲ್ಲಾಜಾ ರನೂ ಈತಾಮಾರನೂ; ನಾದಾಬನೂ ಅಬೀಹುವೂ ತಮ್ಮ ತಂದೆಗಿಂತ ಮುಂಚೆ ಸತ್ತು ಮಕ್ಕಳಿಲ್ಲದೆ ಇದ್ದದ ರಿಂದ ಎಲ್ಲಾಜಾರನೂ ಈತಾಮಾರನೂ ಯಾಜಕ ಸೇವೆಮಾಡಿದರು. ಆದದರಿಂದ ದಾವೀದನು ಎಲ್ಲಾ ಜಾರನ ಮಕ್ಕಳಲ್ಲಿ ಚಾದೋಕನಿಗೂ ಈತಾಮಾರನ ಮಕ್ಕಳಲ್ಲಿ ಅಹೀಮೇಲೆಕನಿಗೂ ಅವರ ಸೇವೆಯಲ್ಲಿರುವ ವಿಚಾರಗಳ ಪ್ರಕಾರ ವರ್ಗಗಳನ್ನು ವಿಭಾಗಿಸಿದನು. ಈತಾಮಾರನ ಕುಮಾರರಿಗಿಂತ ಎಲ್ಲಾಜಾರನ ಕುಮಾ ರರಲ್ಲಿ ಮುಖ್ಯಸ್ಥರು ಹೆಚ್ಚಾಗಿದ್ದದರಿಂದ ಅವರು ಹೀಗೆಯೇ ವಿಭಾಗಿಸಲ್ಪಟ್ಟಿದ್ದರು. ಎಲ್ಲಾಜಾರನ ಕುಮಾರ ರಲ್ಲಿ ತಮ್ಮ ಪಿತೃಗಳ ಮನೆಯ ಪ್ರಕಾರ ಹದಿನಾರು ಮಂದಿ ಮುಖ್ಯಸ್ಥರು. ಈತಾಮಾರನ ಕುಮಾರರಲ್ಲಿ ತಮ್ಮ ಪಿತೃಗಳ ಮನೆಯ ಪ್ರಕಾರ ಎಂಟುಮಂದಿ ಮುಖ್ಯ ಸ್ಥರು. ಇವರು ಅವರ ಸಂಗಡ ಬೆರೆತಿದ್ದು ಚೀಟು ಗಳಿಂದ ವಿಭಾಗಿಸಲ್ಪಟ್ಟಿದ್ದರು; ಪರಿಶುದ್ಧ ಸ್ಥಾನದ ಪ್ರಧಾನರೂ ದೈವೀಕ ಕಾರ್ಯಗಳಲ್ಲಿ ಪ್ರಧಾನರೂ ಎಲ್ಲಾಜಾರನ ಕುಮಾರರಿಂದಲೂ ಈತಾಮಾರನ ಕುಮಾರರಿಂದಲೂ ಇದ್ದರು. ಇದಲ್ಲದೆ ಲೇವಿಯರಲ್ಲಿ ಒಬ್ಬನಾದಂಥ ನೆತನೇಲನ ಮಗನಾದ ಲೇಖಕನಾ ದಂಥ ಶೆಮಾಯನು ಅರಸನ ಮುಂದೆಯೂ ಪ್ರಧಾನ ಯಾಜಕನಾದ ಚಾದೋಕನು, ಎಬ್ಯಾತಾರನ ಮಗ ನಾದ ಅಹೀಮೆಲೆಕನು, ಯಾಜಕರ ಲೇವಿಯರ ಪಿತೃಗಳ ಮುಖ್ಯಸ್ಥರ ಮುಂದೆಯೂ ಆ ವರ್ಗಗಳ ಪಟ್ಟಿಯನ್ನು ಬರೆದನು. ಎಲ್ಲಾಜಾರ್ಯರ ಒಂದು ವರ್ಗದವರಾದ ನಂತರ ಈತಾಮಾರ್ಯರ ಒಂದು ವರ್ಗದವರು ಸೇವಿಸ ಬೇಕೆಂದು ನೇಮಿಸಿದರು. ಎಲ್ಲಾ ವರ್ಗಗಳ ಸರತಿ ಯನ್ನು ಚೀಟಿನಿಂದಲೇ ಗೊತ್ತುಮಾಡಿದರು. ಮೊದಲನೇ ಚೀಟು ಯೆಹೋಯಾರೀಬನಿಗೆ ಬಂತು, ಎರಡನೆಯದು ಯೆದಾಯನಿಗೆ ಮೂರನೆ ಯದು ಹಾರೀಮನಿಗೆ, ನಾಲ್ಕನೆಯದು ಸೆಯೋರೀಮ ನಿಗೆ, ಐದನೆಯದು ಮಲ್ಕೀಯನಿಗೆ, ಆರನೆಯದು ಮಿಯ್ಯಾವಿಾನನಿಗೆ, ಏಳನೆಯದು ಹಕ್ಕೋಚನಿಗೆ, ಎಂಟನೆಯದು ಅಬೀಯನಿಗೆ, ಒಂಭತ್ತನೆಯದು ಯೆಷೂವನಿಗೆ, ಹತ್ತನೆಯದು ಶೆಕನ್ಯನಿಗೆ, ಹನ್ನೊಂದ ನೆಯದು ಎಲ್ಯಾಷೀಬನಿಗೆ, ಹನ್ನೆರಡನೆಯದು ಯಾಕೀಮನಿಗೆ, ಹದಿಮೂರನೆಯದು ಹುಪ್ಪನಿಗೆ, ಹದಿನಾಲ್ಕನೆಯದು ಎಫೆಬಾಬನಿಗೆ, ಹದಿನೈದನೆ ಯದು ಬಿಲ್ಗನಿಗೆ, ಹದಿನಾರನೆಯದು ಇಮ್ಮೇರನಿಗೆ, ಹದಿನೇಳನೆಯದು ಹೇಜೀರನಿಗೆ, ಹದಿನೆಂಟನೆ ಯದು ಹಪ್ಪಿಚ್ಚೇಚನಿಗೆ, ಹತ್ತೊಂಭತ್ತನೆಯದು ಪೆತಹ್ಯನಿಗೆ, ಇಪ್ಪತ್ತನೆಯದು ಯೆಹೆಜ್ಕೇಲನಿಗೆ, ಇಪ್ಪತ್ತೊಂದನೆಯದು ಯಾಕೀನನಿಗೆ, ಇಪ್ಪತ್ತೆ ರಡನೆಯದು ಗಾಮೂಲನಿಗೆ, ಇಪ್ಪತ್ತಮೂರನೆ ಯದು ದೆಲಾಯನಿಗೆ, ಇಪ್ಪತ್ತನಾಲ್ಕನೆಯದು ಮಾಜ್ಯ ನಿಗೆ. ಇವೇ ಇಸ್ರಾಯೇಲ್ ದೇವರಾದ ಕರ್ತನು ತಮ್ಮ ತಂದೆಯಾದ ಆರೋನನಿಗೆ ಆಜ್ಞಾಪಿಸಿದ ಹಾಗೆ ಅವನ ಕೈಕೆಳಗೆ ತಮ್ಮ ತಮ್ಮ ಕಟ್ಟಳೆಗಳ ಪ್ರಕಾರ ಕರ್ತನ ಮನೆಯಲ್ಲಿ ಸೇವೆಮಾಡುವದಕ್ಕೆ ಬರಬೇಕಾದ ಅವರ ನಿಯಮಗಳು. ಲೇವಿಯ ಮಿಕ್ಕಾದ ಕುಮಾರರಲ್ಲಿ ಯಾರಂದರೆ, ಅಮ್ರಾಮನ ಕುಮಾರರಲ್ಲಿ ಶೂಬಾಯೇಲನು; ಶೂಬಾ ಯೇಲನ ಕುಮಾರರಲ್ಲಿ ಯೆಹ್ದೆಯಾಹನು. ರೆಹಬ್ಯ ನನ್ನು ಕುರಿತು ಏನಂದರೆ, ರೆಹಬ್ಯನ ಕುಮಾರರಲ್ಲಿ ಇಷ್ಷೀಯನು ಮೊದಲನೆಯವನು. ಇಚ್ಹಾರರಲ್ಲಿ ಶೆಲೋಮೊತನು ಮೊದಲನೆಯವನು. ಶೆಲೋಮೊ ತನ ಕುಮಾರರಲ್ಲಿ ಯಹತನು. ಹೆಬ್ರೋನನ ಕುಮಾರರಲ್ಲಿ ಯೆರೀಯನು ಮೊದಲನೆಯವನು, ಎರ ಡನೆಯವನು ಅಮರ್ಯನು, ಮೂರನೆಯವನು ಯಹಜೀಯೇಲನು, ನಾಲ್ಕನೆಯವನು ಯೆಕಮ್ಮಾ ಮನು. ಉಜ್ಜೀಯೇಲನ ಕುಮಾರರಲ್ಲಿ ವಿಾಕನು; ವಿಾಕನ ಕುಮಾರರಲ್ಲಿ ಶಾವಿಾರನು. ವಿಾಕನ ಸಹೋದರನು ಇಷ್ಷೀಯನು; ಇಷ್ಷೀಯನ ಕುಮಾರರಲ್ಲಿ ಜೆಕರ್ಯನು. ಮೆರಾರೀಯ ಕುಮಾರರಲ್ಲಿ ಮಹ್ಲೀ ಯನು ಮೂಷೀಯು; ಯಾಜ್ಯನ ಮಗನು ಬೆನೋ ನನು. ಮೆರಾರೀಯ ಕುಮಾರರಲ್ಲಿ ಯಾಜ್ಯನಿಗೆ ಬೆನೋನನು ಶೋಹಮನು ಜಕ್ಕೂರನು ಇಬ್ರೀಯನು ಎಂಬ ಕುಮಾರರಿದ್ದರು. ಮಹ್ಲೀಯನಿಗೆ ಎಲ್ಲಾಜಾರನು ಹುಟ್ಟಿದನು; ಅವನಿಗೆ ಕುಮಾರರಿಲ್ಲ. ಕೀಷನನ್ನು ಕುರಿತು ಏನಂದರೆ, ಕೀಷನ ಮಗನು ಯೆರಹ್ಮೇಲನು. ಮೂಷೀಯ ಕುಮಾರರು--ಮಹ್ಲೀಯು ಏದೆರನು ಯೆರೀಮೋತನು; ಇವರು ತಮ್ಮ ಪಿತೃಗಳ ಮನೆಯ ಪ್ರಕಾರ ಲೇವಿಯರ ಕುಮಾರರಾಗಿದ್ದರು.ಇವರು ಹಾಗೆಯೇ ಅರಸನಾದ ದಾವೀದನ ಸಮ್ಮುಖದಲ್ಲಿಯೂ ಚಾದೋಕನು ಅಹಿಮೇಲೆಕನು ಯಾಜಕರ ಮತ್ತು ಲೇವಿಯರ ಪಿತೃಗಳ ಮುಖ್ಯಸ್ಥರು, ಇವರ ಸಮ್ಮುಖದಲ್ಲಿಯೂ ಆರೋನನ ಕುಮಾರರಾದ ತಮ್ಮ ಸಹೋದರರಿಗೆದುರಾಗಿ ಮುಖ್ಯಸ್ಥರಾದ ಪಿತೃಗಳು ತಮ್ಮ ಚಿಕ್ಕ ಸಹೋದರರಿಗೆದುರಾಗಿ ಚೀಟುಗಳನ್ನು ಹಾಕಿದರು. ಇವರು ಹಾಗೆಯೇ ಅರಸನಾದ ದಾವೀದನ ಸಮ್ಮುಖದಲ್ಲಿಯೂ ಚಾದೋಕನು ಅಹಿಮೇಲೆಕನು ಯಾಜಕರ ಮತ್ತು ಲೇವಿಯರ ಪಿತೃಗಳ ಮುಖ್ಯಸ್ಥರು, ಇವರ ಸಮ್ಮುಖದಲ್ಲಿಯೂ ಆರೋನನ ಕುಮಾರರಾದ ತಮ್ಮ ಸಹೋದರರಿಗೆದುರಾಗಿ ಮುಖ್ಯಸ್ಥರಾದ ಪಿತೃಗಳು ತಮ್ಮ ಚಿಕ್ಕ ಸಹೋದರರಿಗೆದುರಾಗಿ ಚೀಟುಗಳನ್ನು ಹಾಕಿದರು.
- Ezra 6:18 ಎಜ್ರನು 6:18ಮೋಶೆಯ ಪುಸ್ತಕದಲ್ಲಿ ಬರೆಯಲ್ಪಟ್ಟ ಹಾಗೆ ಯೆರೂ ಸಲೇಮಿನಲ್ಲಿ ವಾಸವಾಗಿರುವ ದೇವರ ಆರಾಧನೆ ಗೋಸ್ಕರ ಯಾಜಕರನ್ನು ಅವರ ಸರತಿಯ ಪ್ರಕಾರವೂ ಲೇವಿಯರನ್ನು ಅವರ ಸರತಿಯ ಪ್ರಕಾರವೂ ನೇಮಿಸಿದರು.
- 2 Chronicles 23:18 2 ಪೂರ್ವಕಾಲವೃತ್ತಾಂತ 23:18ಇದಲ್ಲದೆ ಯೆಹೋ ಯಾದನು ಕರ್ತನ ಆಲಯದ ಪರಿಚಾರಕರನ್ನು ನೇಮಿ ಸಿದನು. ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದಿ ರುವ ಹಾಗೆ ಸಂತೋಷದಿಂದಲೂ ಸಂಗೀತದಿಂದಲೂ ದಾವೀದನಿಂದ ನೇಮಿಸಲ್ಪಟ್ಟ ಹಾಗೆ ದಾವೀದನು ಕರ್ತನ ದಹನಬಲಿಗಳನ್ನು ಅರ್ಪಿಸುವದಕ್ಕೆ ಕರ್ತನ ಆಲಯ ದಲ್ಲಿ ವಿಭಾಗಿಸಿದ ಲೇವಿಯರಾದ ಯಾಜಕರಿಂದ ಅವರನ್ನು ನೇಮಿಸಿದನು.
- 2 Chronicles 23:8 2 ಪೂರ್ವಕಾಲವೃತ್ತಾಂತ 23:8ಹೀಗೆಯೇ ಲೇವಿಯರೂ ಸಮಸ್ತ ಯೆಹೂದದವರೂ ಯಾಜಕನಾದ ಯೆಹೋಯಾದನು ಆಜ್ಞಾಪಿಸಿದ ಎಲ್ಲಾ ದರ ಪ್ರಕಾರ ಮಾಡಿ ಪ್ರತಿ ಮನುಷ್ಯನು ಸಬ್ಬತ್ತಿನಲ್ಲಿ ಒಳಗೆ ಬರಬೇಕಾದ ತನ್ನ ಮನುಷ್ಯರನ್ನೂ ಸಬ್ಬತ್ತಿ ನಲ್ಲಿ ಹೊರಟು ಹೋಗಬೇಕಾದವರನ್ನೂ ತೆಗೆದು ಕೊಂಡನು. ಯಾಜಕನಾದ ಯೆಹೋಯಾದನು ಅವ ರನ್ನು ಕಳುಹಿಸಿ ಬಿಡಲಿಲ್ಲ.