2 Chronicles · chapter 35 · verse 4
2 Chronicles 35:4 in Kannada
ಇದಲ್ಲದೆ ಇಸ್ರಾ ಯೇಲಿನ ಅರಸನಾದ ದಾವೀದನ ಬರಹದ ಪ್ರಕಾರ ವಾಗಿಯೂ ಅವನ ಮಗನಾದ ಸೊಲೊಮೋನನ ಬರಹದ ಪ್ರಕಾರವಾಗಿಯೂ ನಿಮ್ಮ ಸರತಿಗಳಲ್ಲಿ ನಿಮ್ಮ ಪಿತೃಗಳ ಮನೆಗಳ ಪ್ರಕಾರ ಸಿದ್ಧಮಾಡಿಕೊಂಡು
Idallade israa yelina arasanaada daaveedana barahada prakaara vaagiyoo avana maganaada solomonana barahada prakaaravaagiyoo nimma saratigalalli nimma pitrugala manegala prakaara siddhamaadikondu
2 Chronicles 35:4 in English
- King James Version (KJV)
- And prepare [yourselves] by the houses of your fathers, after your courses, according to the writing of David king of Israel, and according to the writing of Solomon his son.
- World English Bible (WEB)
- Prepare yourselves after your fathers’ houses by your divisions, according to the writing of David king of Israel, and according to the writing of Solomon his son.
- American Standard Version (ASV)
- and prepare yourselves after your fathers’ houses by your courses, according to the writing of David king of Israel, and according to the writing of Solomon his son.
- Bible in Basic English (BBE)
- And make yourselves ready in your divisions, by your families, as it is ordered in the writings of David, king of Israel, and of Solomon his son;
- Darby Translation (DBY)
- and prepare yourselves by your fathers' houses, in your divisions, according to the writing of David king of Israel, and according to the writing of Solomon his son;
- Webster's Bible (WBS)
- And prepare [yourselves] by the houses of your fathers after your courses, according to the writing of David king of Israel, and according to the writing of Solomon his son.
- Young's Literal Translation (YLT)
- and prepare, by the house of your fathers, according to your courses, by the writing of David king of Israel, and by the writing of Solomon his son,
Read in context
- 2ಆಗ ಅವನು ಯಾಜಕರನ್ನು ಅವರವರ ಕೆಲಸಗಳಲ್ಲಿ ನಿಲ್ಲಿಸಿ ಕರ್ತನ ಆಲಯದ ಸೇವೆ ಮಾಡುವದಕ್ಕೆ ಅವರನ್ನು ದೃಢ ಪಡಿಸಿ,
- 3ಸಮಸ್ತ ಇಸ್ರಾಯೇಲ್ಯರಿಗೆ ಬೋಧಿಸತಕ್ಕ ವರೂ ಕರ್ತನಿಗೆ ಪ್ರತಿಷ್ಠಿತರೂ ಆದ ಲೇವಿಯರಿಗೆಪರಿಶುದ್ಧವಾದ ಮಂಜೂಷವು ನಿಮ್ಮ ಭುಜಗಳ ಮೇಲೆ ಭಾರವಿಲ್ಲದ ಹಾಗೆ ನೀವು ಅದನ್ನು ಇಸ್ರಾ ಯೇಲಿನ ಅರಸನಾಗಿರುವ ದಾವೀದನ ಮಗನಾದ ಸೊಲೊಮೋನನು ಕಟ್ಟಿಸಿದ ಮನೆಯಲ್ಲಿ ಇರಿಸಿ ನಿಮ್ಮ ದೇವರಾದ ಕರ್ತನನ್ನೂ ಆತನ ಜನವಾದ ಇಸ್ರಾಯೇಲ್ಯರನ್ನೂ ಸೇವಿಸಿರಿ.
- 4ಇದಲ್ಲದೆ ಇಸ್ರಾ ಯೇಲಿನ ಅರಸನಾದ ದಾವೀದನ ಬರಹದ ಪ್ರಕಾರ ವಾಗಿಯೂ ಅವನ ಮಗನಾದ ಸೊಲೊಮೋನನ ಬರಹದ ಪ್ರಕಾರವಾಗಿಯೂ ನಿಮ್ಮ ಸರತಿಗಳಲ್ಲಿ ನಿಮ್ಮ ಪಿತೃಗಳ ಮನೆಗಳ ಪ್ರಕಾರ ಸಿದ್ಧಮಾಡಿಕೊಂಡು
- 5ಜನರಾದ ನಿಮ್ಮ ಸಹೋದರರ ಪಿತೃಗಳ ಕುಟುಂಬ ಗಳ ವಿಭಾಗದ ಪ್ರಕಾರವಾಗಿ ಪರಿಶುದ್ಧ ಸ್ಥಾನದಲ್ಲಿ ನಿಲ್ಲಿರಿ.
- 6ಪಸ್ಕವನ್ನು ವಧಿಸಿ ನಿಮ್ಮನ್ನು ಪರಿಶುದ್ಧ ಮಾಡಿ ಕೊಂಡು ಕರ್ತನು ಮೋಶೆಯ ಮುಖಾಂತರವಾಗಿ ಹೇಳಿದ ವಾಕ್ಯದ ಪ್ರಕಾರ ನಿಮ್ಮ ಸಹೋದರರು ಮಾಡುವ ಹಾಗೆ ಅವರನ್ನು ಸಿದ್ಧಮಾಡಿರಿ ಅಂದನು.
Cross references
- 2 Chronicles 8:14 2 ಪೂರ್ವಕಾಲವೃತ್ತಾಂತ 8:14ಅವನು ತನ್ನ ತಂದೆಯಾದ ದಾವೀದನ ಕ್ರಮದ ಪ್ರಕಾರ ಅವರ ಸೇವೆಗೆ ಯಾಜಕರ ಸರದಿ ಗಳನ್ನೂ ಪ್ರತಿ ದಿವಸಕ್ಕೆ ಬೇಕಾದ ಕಾರ್ಯದ ಪ್ರಕಾರ ಯಾಜಕರ ಮುಂದೆ ಸ್ತುತಿಸುವದಕ್ಕೂ ಸೇವೆಮಾಡು ವದಕ್ಕೂ ತಮ್ಮ ವಿಚಾರಗಳಲ್ಲಿ ಲೇವಿಯರನ್ನೂ ಸೇವೆಯ ಬಾಗಲಲ್ಲಿ ತಮ್ಮ ಸರದಿಗಳಾಗಿ ದ್ವಾರಪಾಲಕರನ್ನೂ ನೇಮಿಸಿದನು. ದೇವರ ಮನುಷ್ಯನಾದ ದಾವೀದನು ಹಾಗೆಯೇ ನೇಮಿಸಿದ್ದನು.
- 1 Chronicles 23:1–26 1 ಪೂರ್ವಕಾಲವೃತ್ತಾಂತ 23:1–26ಹೀಗೆ ದಾವೀದನು ಮುದುಕನಾಗಿಯೂ ದಿವಸಗಳು ತುಂಬಿದವನಾಗಿಯೂ ಇರು ವಾಗ ತನ್ನ ಮಗನಾದ ಸೊಲೊಮೋನನನ್ನು ಇಸ್ರಾ ಯೇಲಿನ ಮೇಲೆ ಅರಸನನ್ನಾಗಿ ಮಾಡಿದನು. ಇದ ಲ್ಲದೆ ತಾನು ಇಸ್ರಾಯೇಲಿನ ಸಮಸ್ತ ಪ್ರಧಾನರನ್ನೂ ಯಾಜಕರನ್ನೂ ಲೇವಿಯರನ್ನೂ ಒಟ್ಟುಗೂಡಿಸಿ ಬರ ಮಾಡಿದನು. ಲೇವಿಯರು ಮೂವತ್ತು ವರುಷ ಪ್ರಾಯದವರು ಮೊದಲುಗೊಂಡು ಲೆಕ್ಕಿಸಲ್ಪಟ್ಟಿದ್ದರು. ಅವರ ಪುರುಷರ ಲೆಕ್ಕವು ತಲೆ ತಲೆಯ ಪ್ರಕಾರ ಮೂವತ್ತೆಂಟು ಸಾವಿರ ವಾಗಿತ್ತು. ಇವರಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಕರ್ತನ ಮನೆಯ ಕೆಲಸವನ್ನು ನಡಿಸುವವರಾಗಿದ್ದರು; ಆರು ಸಾವಿರ ಮಂದಿ ಪಾರುಪತ್ಯಗಾರರೂ ನ್ಯಾಯಾಧಿ ಪತಿಗಳೂ ಆಗಿದ್ದರು. ಇದಲ್ಲದೆ ನಾಲ್ಕು ಸಾವಿರ ಮಂದಿ ದ್ವಾರಪಾಲಕರಾಗಿದ್ದರು; ನಾಲ್ಕು ಸಾವಿರ ಮಂದಿ ಸ್ತುತಿಸುವದಕ್ಕೆ ದಾವೀದನು ಸಿದ್ಧಮಾಡಿದ ವಾದ್ಯಗಳಿಂದ ಕರ್ತನನ್ನು ಸ್ತುತಿಸಿದರು. ಗೇರ್ಷೋನನು ಕೆಹಾತನು ಮೆರಾರೀಯು ಎಂಬ ಲೇವಿಯ ಮಕ್ಕಳಲ್ಲಿ ಅವರನ್ನು ವರ್ಗಗಳಾಗಿ ದಾವೀ ದನು ವಿಭಾಗಿಸಿದನು. ಗೇರ್ಷೋನ್ಯರಲ್ಲಿ ಲದ್ದಾನನು ಶಿವ್ಮೆಾ: ಲದ್ದಾನನ ಕುಮಾರರು -- ಮುಖ್ಯಸ್ಥರಾದ ಯೆಹೀಯೇಲನು ಜೇತಾಮನು ಯೋವೇಲನು ಎಂಬ ಮೂರು ಮಂದಿಯು. ಶಿಮ್ಮಿಯ ಕುಮಾರರು ಶೆಲೋಮೊ ತನು ಹಜೀಯೇಲನು ಹಾರಾನನು ಎಂಬ ಮೂರು ಮಂದಿಯು. ಇವರು ಲದ್ದಾನನ ಪಿತೃಗಳಲ್ಲಿ ಮುಖ್ಯಸ್ಥ ರಾಗಿದ್ದರು. ಶಿಮ್ಮನ ಕುಮಾರರು--ಯಹತನು ಜೀನನು ಯೆಯೂಷನು ಬೆರೀಯನು. ಶಿಮ್ಮನ ಈ ನಾಲ್ಕು ಮಂದಿ ಕುಮಾರರಲ್ಲಿ ಯಹತನು ಮುಖ್ಯಸ್ಥನು. ಜೀಜನು ಎರಡನೆಯವನಾಗಿದ್ದನು; ಆದರೆ ಯೆಯೂಷ ನಿಗೂ ಬೆರೀಯನಿಗೂ ಬಹಳ ಮಂದಿ ಮಕ್ಕಳು ಇಲ್ಲ ದ್ದರಿಂದ ಇವರು ತಮ್ಮ ತಂದೆಯ ಮನೆಯಲ್ಲಿ ಒಂದೇ ಲೆಕ್ಕವಾಗಿ ಎಣಿಸಲ್ಪಟ್ಟಿದ್ದರು. ಕೆಹಾತನ ಕುಮಾರರು--ಅಮ್ರಾಮನು, ಇಚ್ಹಾ ರನು, ಹೆಬ್ರೋನನು, ಉಜ್ಜಿಯೇಲನು ಎಂಬ ಈ ನಾಲ್ಕು ಮಂದಿಯು. ಅಮ್ರಾಮನ ಕುಮಾರರು --ಆರೋನನು ಮೋಶೆಯು; ಆರೋನನು ಯುಗ ಯುಗಾಂತರಕ್ಕೂ ಕರ್ತನ ಮುಂದೆ ಧೂಪ ಸುಡು ವದಕ್ಕೂ ಆತನಿಗೆ ಸೇವೆಮಾಡುವದಕ್ಕೂ ಆತನ ಹೆಸರಿನಲ್ಲಿ ಆಶೀರ್ವದಿಸುವದಕ್ಕೂ ತಾನೂ ತನ್ನ ಕುಮಾರರೂ ಯುಗಯುಗಾಂತರಗಳಿಗೂ ಅತಿ ಪರಿ ಶುದ್ಧವಾದವುಗಳನ್ನು ಪ್ರತಿಷ್ಠೆಮಾಡುವದಕ್ಕೂ ಪ್ರತ್ಯೇ ಕಿಸಲ್ಪಟ್ಟನು. ದೇವರ ಮನುಷ್ಯನಾದ ಮೋಶೆಯ ಕುಮಾರರು ಲೇವಿಯ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟಿದ್ದರು. ಮೋಶೆಯ ಕುಮಾರರು--ಗೇರ್ಷೋಮನು ಎಲೀ ಯೆಜೆರನು. ಗೇರ್ಷೋಮನ ಕುಮಾರರಲ್ಲಿ ಶೆಬೂ ವೇಲನು ಮುಖ್ಯಸ್ಥನಾಗಿದ್ದನು. ಎಲೀಯೆಜೆರನ ಕುಮಾರರು -- ಮುಖ್ಯಸ್ಥನಾದ ರೆಹಬ್ಯನು. ಇವನ ಹೊರತಾಗಿ ಎಲೀಯೆಜೆರನಿಗೆ ಬೇರೆ ಕುಮಾರರಿಲ್ಲ; ಆದರೆ ರೆಹಬ್ಯನ ಕುಮಾರರು ಬಹಳ ಮಂದಿ ಇದ್ದರು. ಇಚ್ಹಾರನ ಕುಮಾರರಲ್ಲಿ ಶೆಲೋಮೊತನು ಮುಖ್ಯಸ್ಥನಾಗಿದ್ದನು. ಹೆಬ್ರೋನನ ಕುಮಾರರಲ್ಲಿ ಯೆರೀಯ ಮೊದಲನೆಯವನು, ಅಮರ್ಯನು ಎರ ಡನೆಯವನು, ಯಹಜೀಯೇಲನು ಮೂರನೆಯ ವನು, ಯೆಕಮ್ಮಾಮನು ನಾಲ್ಕನೆಯವನು. ಉಜ್ಜೀ ಯೇಲನ ಕುಮಾರರಲ್ಲಿ ವಿಾಕನು ಮೊದಲನೆಯವನು, ಇಷ್ಷೀಯನು ಎರಡನೆಯವನು. ಮೆರಾರೀಯ ಕುಮಾರರು--ಮಹ್ಲೀಯು, ಮೂಷೀಯು. ಮಹ್ಲೀಯ ಕುಮಾರರು--ಎಲ್ಲಾಜಾರ್, ಕೀಷನು; ಎಲ್ಲಾಜಾರ್ ಸತ್ತನು. ಅವನಿಗೆ ಕುಮಾರ ರಿಲ್ಲ, ಕುಮಾರ್ತೆಯರು ಮಾತ್ರ ಇದ್ದರು; ಅವರ ಸಹೋದರರಾದ ಕೀಷನ ಕುಮಾರರು ಅವರನ್ನು ತೆಗೆದುಕೊಂಡರು. ಮೂಷೀಯ ಕುಮಾರರು-- ಮಹ್ಲೀಯು ಏದೆರ್ ಯೆರೇಮೋತ್ ಈ ಮೂರು ಮಂದಿ. ಇವರು ತಮ್ಮ ಪಿತೃಗಳ ವಂಶದ ಪ್ರಕಾರವಾಗಿ ಲೇವಿಯ ಕುಮಾರರಾಗಿದ್ದರು; ಇವರು ತಮ್ಮ ಹೆಸರು ಗಳಿಂದಲೂ ತಮ್ಮ ತಲೆಗಳಿಂದಲೂ ಎಣಿಸಲ್ಪಟ್ಟಿದ್ದ ತಮ್ಮ ಪಿತೃಗಳಲ್ಲಿ ಮುಖ್ಯಸ್ಥರಾಗಿದ್ದರು; ಇಪ್ಪತ್ತು ವರುಷ ಪ್ರಾಯದವರು ಮೊದಲುಗೊಂಡು ಕರ್ತನ ಮನೆಯ ಸೇವೆಗೋಸ್ಕರ ಕೆಲಸ ಮಾಡಿದರು. ಅವರು ಯುಗ ಯುಗಾಂತರಕ್ಕೂ ಇಸ್ರಾಯೇಲಿನಲ್ಲಿ ವಾಸಿಸುವ ಹಾಗೆ ಇಸ್ರಾಯೇಲಿನ ದೇವರಾದ ಕರ್ತನು ತನ್ನ ಜನರಿಗೆ ವಿಶ್ರಾಂತಿಯನ್ನು ಕೊಟ್ಟಿದ್ದಾನೆ ಎಂದು ದಾವೀದನು ಹೇಳಿ ಲೇವಿಯರನ್ನು ಕುರಿತು ಅವರು ಗುಡಾರವನ್ನೂ ಅದರ ಸೇವೆಗೋಸ್ಕರ ಅದರ ಪಾತ್ರೆಗಳನ್ನೂ ಇನ್ನು ಮೇಲೆ ಹೊರುವ ಕೆಲಸವಿಲ್ಲವೆಂದು ಹೇಳಿದ್ದನು.
- 1 Chronicles 24:1 1 ಪೂರ್ವಕಾಲವೃತ್ತಾಂತ 24:1ಆರೋನನ ಕುಮಾರರಲ್ಲಿ ವರ್ಗಗಳಾಗಿ ವಿಭಾಗಿಸಿದವರು ಇವರೇ. ಆರೋನನ ಕುಮಾರರು--ನಾದಾಬನೂ ಅಬೀಹುವೂ ಎಲ್ಲಾಜಾ ರನೂ ಈತಾಮಾರನೂ;
- 1 Chronicles 9:10–34 1 ಪೂರ್ವಕಾಲವೃತ್ತಾಂತ 9:10–34ಯಾಜಕರಲ್ಲಿ ಯಾರಂದರೆ-- ಯೆದಾಯನೂ ಯೆಹೋಯಾರೀಬನೂ ಯಾಕೀನನೂ; ದೇವರ ಮನೆಯ ಅಧಿಕಾರಿಯಾದ ಅಹೀಟೂಬನ ಮಗನಾದ ಮೆರಾಯೋತನ ಮಗನಾದ ಚಾದೋಕನ ಮಗನಾದ ಮೆಷುಲ್ಲಾಮನ ಮಗನಾದ ಹಿಲ್ಕೀಯನ ಮಗನು ಅಜರ್ಯನೂ; ಯೆರೋಹಾಮನ ಮಗನಾದ ಅದಾಯ ಇವರೂ ಇವರ ಸಹೋದರರೂ. ಯೆರೋ ಹಾಮನು ಪಶ್ಹೂರನ ಮಗನು; ಇವನು ಮಲ್ಕೀಯನ ಮಗನು; ಇವನು ಮಾಸೈಯ ಮಗನು; ಇವನು ಅದೀಯೇಲನ ಮಗನು; ಇವನು ಯಹ್ಜೇರನ ಮಗನು; ಇವನು ಮೆಷುಲ್ಲಾಮನ ಮಗನು; ಇವನು ಮೆಷಿಲ್ಲೇಮೋತನ ಮಗನು; ಇವನು ಇಮ್ಮೇರನ ಮಗನು. ಅವರ ಸಹೋದರರೂ, ತಮ್ಮ ಪಿತೃಗಳ ಮನೆಯಲ್ಲಿ ಯಜಮಾನರು ಸಾವಿರದ ಏಳು ನೂರ ಅರವತ್ತು ಮಂದಿಯಾಗಿದ್ದರು. ಇವರು ದೇವರ ಮನೆಯ ಸೇವೆಯ ಕೆಲಸದಲ್ಲಿ ಪರಾಕ್ರಮಶಾಲಿ ಗಳಾಗಿದ್ದರು. ಲೇವಿಯರಲ್ಲಿ ಯಾರಂದರೆ, ಮೆರಾರೀಯ ಕುಮಾ ರರಲ್ಲಿ ಒಬ್ಬನಾದ ಹಷ್ಷೂಬನ ಮಗನಾದ ಅಜ್ರೀ ಕಾಮನ ಮಗನಾದ ಹಷಬ್ಯನ ಮಗನಾದ ಶೆಮಾ ಯನೂ; ಬಕ್ಬಕ್ಕರನೂ ಹೆರೆಷನೂ ಗಲಾಲನೂ ಅಸಾಫನ ಮಗನಾದ ಜಿಕ್ರಿಯ ಮಗನಾದ ವಿಾಕನ ಮಗನಾದ ಮತ್ತನ್ಯನೂ; ಯೆದೂತೂನನ ಮಗ ನಾದ ಗಾಲಾಲನ ಮಗನಾದ ಶೆಮಾಯನ ಮಗನಾದ ಓಬದ್ಯನೂ; ಎಲ್ಕಾನನ ಮಗನಾದ ಆಸನ ಮಗನಾದ ಬೆರೆಕ್ಯನೂ ಇವರು ನೆಟೋಫಾತದವರ ಊರುಗಳಲ್ಲಿ ವಾಸವಾಗಿದ್ದರು. ದ್ವಾರಪಾಲಕರು ಯಾರಂದರೆ -- ಶಲ್ಲೂಮನೂ ಅಕ್ಕೂಬನೂ ಟಲ್ಮೋನನೂ ಅಹೀಮಾನನೂ ಇವರ ಸಹೋದರರೂ. ಇವರಲ್ಲಿ ಶಲ್ಲೂಮನು ಮುಖ್ಯಸ್ಥ ನಾಗಿದ್ದನು. ಇವರು ಈ ವರೆಗೂ ಮೂಡಣ ಕಡೆ ಯಾದ ಅರಸನ ಬಾಗಲಲ್ಲಿ ಕಾದುಕೊಂಡಿದ್ದರು; ಇವರು ಲೇವಿಯ ಮಕ್ಕಳ ದಂಡುಗಳಲ್ಲಿ ದ್ವಾರಪಾಲಕರಾಗಿದ್ದರು. ಇದಲ್ಲದೆ ಕೋರಹನ ಮಗನಾದ ಎಬ್ಯಾಸಾಫನ ಮಗನಾದ ಕೋರೇಯ ಮಗನಾದ ಶಲ್ಲೂಮನೂ ಅವನ ತಂದೆಯ ಮನೆಯವರಾಗಿರುವ ತನ್ನ ಸಹೋ ದರರಾದ ಕೋರಹಿಯರೂ ಸೇವೆಯ ಕೆಲಸದ ಮೇಲೆ ಇದ್ದು ಗುಡಾರದ ಬಾಗಲಿನ ಕಾವಲುಗಾರರಾಗಿದ್ದರು. ಅವರ ಪಿತೃಗಳು ಕರ್ತನ ಸೈನ್ಯದ ಮೇಲೆ ಇದ್ದು ಪ್ರವೇಶ ಸ್ಥಳದ ಕಾವಲಿನವರಾಗಿದ್ದರು. ಎಲ್ಲಾಜಾ ರನ ಮಗನಾದ ಫೀನೆಹಾಸನು ಪೂರ್ವದಲ್ಲಿ ಅವರ ಮೇಲೆ ಅಧಿಕಾರಿಯಾಗಿದ್ದನು; ಕರ್ತನು ಅವರ ಸಂಗಡ ಇದ್ದನು. ಮೆಷೆಲೆಮ್ಯನ ಮಗನಾದ ಜೆಕರ್ಯನು ಸಭೆಯ ಗುಡಾರದ ದ್ವಾರಪಾಲಕನಾಗಿದ್ದನು. ಬಾಗ ಲುಗಳಲ್ಲಿ ದ್ವಾರಪಾಲಕರಾಗಿರಲು ಆಯಲ್ಪಟ್ಟ ಇವ ರೆಲ್ಲರೂ ಇನ್ನೂರ ಹನ್ನೆರಡು ಮಂದಿಯಾಗಿದ್ದರು. ಇವರು ತಮ್ಮ ಗ್ರಾಮಗಳಲ್ಲಿ ತಮ್ಮ ವಂಶಾವಳಿಯ ಪ್ರಕಾರವಾಗಿ ಲೆಕ್ಕಿಸಲ್ಪಟ್ಟಿದ್ದರು. ದಾವೀದನೂ ದರ್ಶಿ ಯಾದ ಸಮುವೇಲನೂ ಇವರನ್ನು ನೇಮಕವಾದ ಸೇವೆಗೆ ನೇಮಿಸಿದರು. ಹೀಗೆಯೇ ಇವರಿಗೂ ಇವರ ಮಕ್ಕಳಿಗೂ ಕರ್ತನ ಮನೆಯ ಬಾಗಲ ಕಾವಲಿತ್ತು ಅದು ಗುಡಾರವೆಂಬ ಮನೆಯ ಪ್ರಕಾರ ಕಾವಲುಗಾರ ರಿಂದ ಕಾವಲಿತ್ತು. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ನಾಲ್ಕು ದಿಕ್ಕುಗಳಲ್ಲಿ ದ್ವಾರಪಾಲಕರಿದ್ದರು. ಗ್ರಾಮಗಳಲ್ಲಿ ಇದ್ದ ಅವರ ಸಹೋದರರು ತಮ್ಮ ಕ್ರಮದ ಪ್ರಕಾರವಾಗಿ ಏಳೇಳು ದಿವಸಗಳಲ್ಲಿ ಬರುವ ನೇಮಕವಿತ್ತು ದ್ವಾರಪಾಲಕರಲ್ಲಿರುವ ನಾಲ್ಕುಮಂದಿ ಮುಖ್ಯಸ್ಥರಾದ ಈ ಲೇವಿಯರು ತಮ್ಮ ನೇಮಕವಾದ ಉದ್ಯೋಗದಲ್ಲಿ ಇದ್ದು ದೇವರ ಆಲಯ ಉಗ್ರಾಣ ಗಳ ಮೇಲೆಯೂ ಬೊಕ್ಕಸಗಳ ಮೇಲೆಯೂ ಇದ್ದರು. ಈ ಅಪ್ಪಣೆಯು ಅವರದಾಗಿದದ್ದರಿಂದಲೂ ಪ್ರತಿ ಉದಯದಲ್ಲಿ ತೆರೆಯುವದು ಅವರದಾಗಿದದ್ದ ರಿಂದಲೂ ಅವರು ದೇವರ ಮನೆಯ ಸುತ್ತಲೂ ವಾಸ ವಾಗಿದ್ದರು. ಸೇವೆಯ ಪಾತ್ರೆಗಳನ್ನು ಒಳಕ್ಕೆ ಲೆಕ್ಕದ ಪ್ರಕಾರ ತರುವದಕ್ಕೂ ಅವರಲ್ಲಿ ಕೆಲವರು ಅವುಗಳ ಮೇಲೆ ನೇಮಕವಾಗಿದ್ದರು. ಅವರಲ್ಲಿ ಕೆಲವರು ಸಾಮಾನುಗಳನ್ನೂ ಪರಿಶುದ್ಧಸ್ಥಾನದಲ್ಲಿರುವ ಎಲ್ಲಾ ಸಾಮಾನುಗಳನ್ನೂ ನಯವಾದ ಹಿಟ್ಟನ್ನೂ ದ್ರಾಕ್ಷಾ ರಸವನ್ನೂ ಎಣ್ಣೆಯನ್ನೂ ಸಾಂಬ್ರಾಣಿಯನ್ನೂ ಸುಗಂಧದ್ರವ್ಯಗಳನ್ನೂ ಕಾಯಲು ನೇಮಿಸಲ್ಪಟ್ಟಿದ್ದರು. ಯಾಜಕರ ಕುಮಾರರಲ್ಲಿ ಕೆಲವರು ಸುಗಂಧಗಳಿಂದ ತೈಲವನ್ನು ಮಾಡಿದರು. ಕೋರಹಿಯನಾದ ಶಲ್ಲೂಮನ ಚೊಚ್ಚಲ ಮಗನಾದ ಮತ್ತಿತ್ಯನು ಲೇವಿ ಯರಲ್ಲಿ ಒಬ್ಬನಾಗಿದ್ದು ತಟ್ಟೆಗಳ ಮೇಲೆ ಮಾಡಲ್ಪಟ್ಟ ಭಕ್ಷ್ಯಗಳ ಕೆಲಸಕ್ಕೆ ನೇಮಿಸಲ್ಪಟ್ಟಿದ್ದನು. ಸಮ್ಮುಖದ ರೊಟ್ಟಿಯನ್ನು ಪ್ರತಿಸಬ್ಬತ್ ದಿವಸದಲ್ಲಿ ಸಿದ್ಧಮಾಡು ವದಕ್ಕೆ ಕೆಹಾತ್ಯರ ಕುಮಾರರಾದ ಅವರ ಸಹೋದರ ರಲ್ಲಿ ಕೆಲವರು ನೇಮಿಸಲ್ಪಟ್ಟಿದ್ದರು. ಇದಲ್ಲದೆ ಲೇವಿಯರ ಪಿತೃಗಳಲ್ಲಿ ಮುಖ್ಯಸ್ಥರಾದ ಇವರು ಹಾಡುಗಾರರಾಗಿದ್ದು ಸ್ವತಂತ್ರವಾಗಿ ಕೊಠಡಿ ಗಳಲ್ಲಿ ವಾಸವಾಗಿದ್ದರು; ಅವರು ರಾತ್ರಿ ಹಗಲು ಅದೇ ಕಾರ್ಯದಲ್ಲಿದ್ದರು. ಲೇವಿಯರ ಪಿತೃಗಳಲ್ಲಿ ಮುಖ್ಯಸ್ಥರಾದ ಇವರು ತಮ್ಮ ವಂಶಗಳಲ್ಲಿ ಮುಖ್ಯಸ್ಥರಾಗಿದ್ದು ಯೆರೂಸಲೇಮಿ ನಲ್ಲಿ ವಾಸವಾಗಿದ್ದರು.
- Nehemiah 11:10–20 ನೆಹೆಮೀಯ 11:10–20ಯಾಜಕರಲ್ಲಿ ಯಾರಂದರೆ--ಯೋಯಾರೀಬನ ಮಗನಾದ ಯೆದಾಯನು, ಯಾಕೀನನು. ಅಹೀ ಟೂಬನ ಮಗನಾದ ಮೆರಾಯೋತನ ಮಗನಾದ ಚಾದೋಕನ ಮಗನಾದ ಮೆಷುಲ್ಲಾಮನ ಮಗನಾದ ಹಿಲ್ಕೀಯನ ಮಗನಾದ ಸೆರಾಯನು ದೇವರ ಆಲ ಯದ ನಾಯಕನಾಗಿದ್ದನು. ಮನೆಯ ಕೆಲಸವನ್ನು ನಡಿಸುವ ಅವರ ಸಹೋದರರು ಎಂಟು ನೂರ ಇಪ್ಪತ್ತೆರಡು ಮಂದಿ ಇದ್ದರು. ಮಲ್ಕೀಯನ ಮಗನಾದ ಪಷ್ಹೂರನ ಮಗನಾದ ಜೆಕರೀಯನ ಮಗನಾದ ಅಮ್ಜಿಯ ಮಗನಾದ ಪೆಲಲ್ಯನ ಮಗನಾದ ಯೆರೋ ಹಾಮನ ಮಗನಾದ ಅದಾಯನೂ. ಪಿತೃಗಳಲ್ಲಿ ಮುಖ್ಯಸ್ಥರಾದ ಅವನ ಸಹೋದರರೂ ಇನ್ನೂರ ನಾಲ್ವತ್ತೆರಡು ಮಂದಿಯಾಗಿದ್ದರು. ಇಮ್ಮೇರನ ಮಗ ನಾದ ಮೆಷಿಲ್ಲೇಮೋತನ ಮಗನಾದ ಅಹಜೈಯ ಮಗನಾದ ಅಜರೇಲನ ಮಗನಾದ ಅಮಷ್ಷೈಯೂ. ಅವರ ಸಹೋದರರಾದ ಪರಾಕ್ರಮಶಾಲಿಗಳೂ ನೂರ ಇಪ್ಪತ್ತೆಂಟು ಮಂದಿಯಾಗಿದ್ದರು. ಮಹಾ ಪುರುಷರಲ್ಲಿ ಒಬ್ಬನ ಮಗನಾದ ಜಬ್ದೀಯೇಲನು ಅವರಿಗೆ ಮೇಲ್ವಿಚಾರಕನಾಗಿದ್ದನು. ಲೇವಿಯರಲ್ಲಿ ಯಾರಂದರೆ--ಲೇವಿಯರ ಯಜ ಮಾನರಲ್ಲಿ ಬುನ್ನೀಯ ಮಗನಾದ ಹಷಬ್ಯನ ಮಗನಾದ ಅಜ್ರೀಕಾಮನ ಮಗನಾದ ಹಷ್ಷೂಬನ ಮಗನಾದ ಶೆಮಾಯನು; ಶಬ್ಬೆತೈನೂ ಯೋಜಾಬಾದನೂ ದೇವರ ಆಲಯದ ಹೊರಗಿನ ಕೆಲಸವನ್ನು ವಿಚಾರಿಸುವವರಾಗಿದ್ದರು. ಇದಲ್ಲದೆ ಆಸಾಫನ ಮಗ ನಾದ ಜಬ್ದೀಯ ಮಗನಾದ ವಿಾಕಾಯನ ಮಗ ನಾದ ಮತ್ತನ್ಯನು ಪ್ರಾರ್ಥನೆಯಲ್ಲಿ ಸ್ತುತಿಯನ್ನು ಪ್ರಾರಂಭಿಸಲು ಮುಖ್ಯಸ್ಥನಾಗಿದ್ದನು. ಅವನ ಸಹೋ ದರರಲ್ಲಿ ಎರಡನೆಯವನು ಬಕ್ಬುಕ್ಯನು; ಅವನ ಸಂಗಡ ಯೆದುತೂನನ ಮಗನಾದ ಗಾಲಾಲನ ಮಗನಾದ ಶಮ್ಮೂವನ ಮಗನಾದ ಅಬ್ದನು. ಪರಿ ಶುದ್ಧ ಪಟ್ಟಣದಲ್ಲಿರುವ ಲೇವಿಯರೆಲ್ಲಾ ಇನ್ನೂರ ಎಂಭತ್ತು ನಾಲ್ಕು ಮಂದಿಯಾಗಿದ್ದರು. ದ್ವಾರಪಾಲಕರಾದ ಅಕ್ಕೂಬನೂ ಟಲ್ಮೋನನೂ ಬಾಗಲುಗಳನ್ನು ಕಾಯುವವರಾದ ಅವರ ಸಹೋ ದರರೂ ನೂರ ಎಪ್ಪತ್ತೆರಡು ಮಂದಿಯಾಗಿದ್ದರು. ಇಸ್ರಾಯೇಲ್ಯರ ಮಿಕ್ಕಾದ ಯಾಜಕರೂ ಲೇವಿ ಯರೂ ತಮ್ಮ ತಮ್ಮ ಸ್ವಾಸ್ತ್ಯಗಳಾದ ಯೆಹೂದದ ಎಲ್ಲಾ ಪಟ್ಟಣಗಳಲ್ಲಿ ವಾಸವಾಗಿದ್ದರು.