2 Chronicles · chapter 9 · verse 23
2 Chronicles 9:23 in Kannada
ದೇವರು ಸೊಲೊಮೋನನ ಹೃದಯದಲ್ಲಿ ಉಂಟುಮಾಡಿದ ಅವನ ಜ್ಞಾನವನ್ನು ಕೇಳುವದಕ್ಕಾಗಿ ಭೂಮಿಯ ಸಮಸ್ತ ಅರಸುಗಳು ಸೊಲೊಮೋನನ ಮುಖದರ್ಶನವನ್ನು ಹುಡುಕಿದರು.
Devaru solomonana hrudayadalli untumaadida avana jnyaanavannu keluvadakkaagi bhoomiya samasta arasugalu solomonana mukhadarshanavannu hudukidaru.
2 Chronicles 9:23 in English
- King James Version (KJV)
- And all the kings of the earth sought the presence of Solomon, to hear his wisdom, that God had put in his heart.
- World English Bible (WEB)
- All the kings of the earth sought the presence of Solomon to hear his wisdom, which God had put in his heart.
- American Standard Version (ASV)
- And all the kings of the earth sought the presence of Solomon, to hear his wisdom, which God had put in his heart.
- Bible in Basic English (BBE)
- And all the kings of the earth came to see Solomon and to give ear to his wisdom, which God had put into his heart.
- Darby Translation (DBY)
- And all the kings of the earth sought the presence of Solomon, to hear his wisdom, which God had put in his heart.
- Webster's Bible (WBS)
- And all the kings of the earth sought the presence of Solomon, to hear his wisdom, that God had put in his heart.
- Young's Literal Translation (YLT)
- and all the kings of the earth are seeking the presence of Solomon to hear his wisdom that God hath put in his heart,
Read in context
- 21ಯಾಕಂದರೆ ಹೂರಾಮನ ಸೇವಕರ ಸಂಗಡ ಅರಸನ ಹಡಗುಗಳು ತಾರ್ಷಿಷಿಗೆ ಹೋಗಿ ಮೂರು ವರುಷಕ್ಕೆ ಒಂದುಸಾರಿ ಬಂಗಾರವನ್ನೂ ಬೆಳ್ಳಿ ಯನ್ನೂ ದಂತವನ್ನೂ ಕೋತಿಗಳನ್ನೂ ನವಿಲುಗಳನ್ನೂ ತಕ್ಕೊಂಡು ಬರುತ್ತಿದ್ದವು.
- 22ಹೀಗೆಯೇ ಅರಸನಾದ ಸೊಲೊಮೋನನು ಐಶ್ವರ್ಯದಲ್ಲಿಯೂ ಜ್ಞಾನದ ಲ್ಲಿಯೂ ಭೂಮಿಯ ಸಮಸ್ತ ಅರಸುಗಳಿಗಿಂತ ದೊಡ್ಡವನಾಗಿದ್ದನು.
- 23ದೇವರು ಸೊಲೊಮೋನನ ಹೃದಯದಲ್ಲಿ ಉಂಟುಮಾಡಿದ ಅವನ ಜ್ಞಾನವನ್ನು ಕೇಳುವದಕ್ಕಾಗಿ ಭೂಮಿಯ ಸಮಸ್ತ ಅರಸುಗಳು ಸೊಲೊಮೋನನ ಮುಖದರ್ಶನವನ್ನು ಹುಡುಕಿದರು.
- 24ಅವರವರು ಕಾಣಿಕೆಯಾಗಿ ಬೆಳ್ಳಿಯ ಪಾತ್ರೆಗಳನ್ನೂ ಬಂಗಾರದ ಪಾತ್ರೆಗಳನ್ನೂ ವಸ್ತ್ರಗಳನ್ನೂ ಆಯುಧ ಗಳನ್ನೂ ಸುಗಂಧಗಳನ್ನೂ ಕುದುರೆಗಳನ್ನೂ ಹೇಸರ ಕತ್ತೆಗಳನ್ನೂ ವರುಷ ವರುಷಕ್ಕೂ ನೇಮಕದ ಪ್ರಕಾರ ತರುತ್ತಿದ್ದರು.
- 25ಸೊಲೊಮೋನನಿಗೆ ನಾಲ್ಕು ಸಾವಿರ ಜೋಡು ಕುದುರೆಗಳೂ ರಥಗಳೂ ಇದ್ದವು. ಇದ ಲ್ಲದೆ ಹನ್ನೆರಡು ಸಾವಿರ ರಾಹುತರಿದ್ದರು. ಅವರನ್ನು ರಥಗಳ ಪಟ್ಟಣಗಳಲ್ಲಿಯೂ ಅರಸನ ಬಳಿಯಲ್ಲಿ ಯೆರೂಸಲೇಮಿನಲ್ಲಿಯೂ ಇರಿಸಿದನು.
Cross references
- James 3:17 ಯಾಕೋಬನು 3:17ಆದರೆ ಮೇಲಣಿಂದ ಬರುವ ಜ್ಞಾನವು ಮೊದಲು ನಿರ್ಮಲವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸುಲಭವಾಗಿ ಒಪ್ಪಿಕೊಳ್ಳುವಂಥದು, ಕರುಣೆಯಿಂದಲೂ ಒಳ್ಳೇ ಫಲಗಳಿಂದಲೂ ತುಂಬಿರುವಂಥದ್ದು ಆಗಿದೆ; ಅದರಲ್ಲಿ ಪಕ್ಷಪಾತವೂ ಕಪಟವೂ ಇಲ್ಲ.ಸಮಾಧಾನ ಪಡಿಸುವವರಿಗೆ ಸಮಾಧಾನದಲ್ಲಿ ನೀತಿಯ ಫಲವು ಬಿತ್ತಲ್ಪಡುತ್ತದೆ.
- James 1:5 ಯಾಕೋಬನು 1:5ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆ ಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲ ರಿಗೂ ಉದಾರ ಮನಸ್ಸಿನಿಂದ ಕೊಡುವಾತನಾಗಿದ್ದಾನೆ.
- Proverbs 2:6 ಜ್ಞಾನೋಕ್ತಿಗಳು 2:6ಜ್ಞಾನವನ್ನು ಕರ್ತನೇ ಕೊಡುತ್ತಾನೆ; ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ.
- 1 Kings 4:34 1 ಅರಸುಗಳು 4:34ಸೊಲೊಮೋನನ ಜ್ಞಾನವನ್ನು ಕುರಿತು ಕೇಳಿದ ಭೂಮಿಯ ಮೇಲಿರುವ ಸಮಸ್ತ ಅರಸರ ಬಳಿಯಿಂದ ಎಲ್ಲಾ ಜನಗಳು ಅವನ ಜ್ಞಾನವನ್ನು ಕೇಳಲು ಬಂದರು.
- Daniel 5:11 ದಾನಿಯೇಲನು 5:11ನಿನ್ನ ರಾಜ್ಯದಲ್ಲಿ ಪರಿಶುದ್ಧ ದೇವರುಗಳ ಆತ್ಮವುಳ್ಳ ಒಬ್ಬ ಮನುಷ್ಯನಿದ್ದಾನೆ; ದೇವ ರುಗಳ ಜ್ಞಾನಕ್ಕೆ ಸಮಾನವಾದ ಜ್ಞಾನವೂ ವಿವೇಕವೂ ಬುದ್ಧಿಯೂ ಪ್ರಕಾಶವೂ ನಿನ್ನ ತಂದೆಯ ಕಾಲದಲ್ಲಿ ಅವನೊಳಗೆ ಕಂಡುಬಂದವು. ನಿನ್ನ ತಂದೆಯಾದ ನೆಬೂಕದ್ನೆಚ್ಚರ ಅರಸನು ಅವನನ್ನು ಮಂತ್ರಗಾರರಿಗೂ ಜ್ಯೋತಿಷ್ಯರಿಗೂ ಕಸ್ದೀಯರಿಗೂ ಶಕುನಗಾರರಿಗೂ ಅಧಿಕಾರಿಯನ್ನಾಗಿ ನೇಮಿಸಿದನು.
- James 1:16–17 ಯಾಕೋಬನು 1:16–17ನನ್ನ ಪ್ರಿಯ ಸಹೋದರರೇ, ತಪ್ಪು ಮಾಡಬೇಡಿರಿ. ಪ್ರತಿಯೊಂದು ಒಳ್ಳೇ ದಾನವೂ ಸಂಪೂರ್ಣವಾದ ಪ್ರತಿವರವೂ ಮೇಲಣ ವುಗಳೇ; ಅವು ಬೆಳಕುಗಳ ತಂದೆಯಿಂದ ಇಳಿದು ಬರುತ್ತವೆ. ಆತನಲ್ಲಿ ಚಂಚಲತ್ವವೇನೂ ಇಲ್ಲ, ವ್ಯತ್ಯಾಸದ ನೆರಳೂ ಇಲ್ಲ.
- Isaiah 11:2 ಯೆಶಾಯ 11:2ಅವನ ಮೇಲೆ ಜ್ಞಾನ ವಿವೇಕ ದಾಯಕ ಆತ್ಮ, ಆಲೋಚನಾ ಪರಾಕ್ರಮದ ಆತ್ಮ,ತಿಳುವಳಿಕೆಯ ಆತ್ಮ ಕರ್ತನ ಭಯದ ಆತ್ಮ, ಅಂತೂ ಕರ್ತನ ಆತ್ಮನು ನೆಲೆಯಾಗುವನು;
- 2 Chronicles 9:6–7 2 ಪೂರ್ವಕಾಲವೃತ್ತಾಂತ 9:6–7ಆದರೆ ನಾನು ಬಂದು ನನ್ನ ಕಣ್ಣುಗಳಿಂದ ನೋಡುವ ವರೆಗೆ ಆ ಮಾತುಗಳನ್ನು ನಂಬದೆ ಹೋದೆನು; ಇಗೋ, ನಿನ್ನ ಮಹಾಜ್ಞಾನದಲ್ಲಿ ಅರ್ಧ ವಾದರೂ ನನಗೆ ಹೇಳಲ್ಪಟ್ಟಿದ್ದಿಲ್ಲ; ನಾನು ಕೇಳಿದ್ದಕ್ಕಿಂತ ನಿನ್ನ ಕೀರ್ತಿ ಅಧಿಕವಾಗಿರುವದು. ನಿನ್ನ ಮನುಷ್ಯರು ಭಾಗ್ಯವಂತರು; ನಿನ್ನ ಮುಂದೆ ಯಾವಾಗಲೂ ನಿಂತು ನಿನ್ನ ಜ್ಞಾನವನ್ನು ಕೇಳುವ ಈ ನಿನ್ನ ಸೇವಕರು ಭಾಗ್ಯ ವಂತರು.
- 1 Corinthians 1:30 1 ಕೊರಿಂಥದವರಿಗೆ 1:30ಆದರೆ ನೀವು ಕ್ರಿಸ್ತ ಯೇಸುವಿನಲ್ಲಿ ರುವದು ಆತನಿಂದಲೇ; ಆತನು ನಮಗೆ ದೇವರ ಕಡೆಯಿಂದ ಜ್ಞಾನವು ನೀತಿ ಶುದ್ಧೀಕರಣ ವಿಮೋಚನೆ ಗಳಾಗಿ ಮಾಡಲ್ಪಟ್ಟಿದ್ದಾನೆ.ಹೆಚ್ಚಳ ಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ ಎಂದು ಬರೆಯಲ್ಪಟ್ಟಂತೆ ಆಯಿತು.
- 1 Corinthians 12:8 1 ಕೊರಿಂಥದವರಿಗೆ 12:8ಹೇಗಂದರೆ ಒಬ್ಬನಿಗೆ ಆತ್ಮನ ಮೂಲಕ ಜ್ಞಾನವಾಕ್ಯವು, ಒಬ್ಬನಿಗೆ ಅದೇ ಆತ್ಮನಿಗೆ ಅನುಗುಣವಾಗಿ ತಿಳುವಳಿಕೆಯ ವಾಕ್ಯವು,
- Daniel 1:17 ದಾನಿಯೇಲನು 1:17ಈ ನಾಲ್ಕು ಯೌವನಸ್ಥರ ವಿಷಯವು: ದೇವರು ಅವರಿಗೆ ಎಲ್ಲಾ ವಿದ್ಯೆಯಲ್ಲಿಯೂ ಜ್ಞಾನದಲ್ಲಿಯೂ ತಿಳುವಳಿಕೆಯನ್ನೂ ವಿವೇಕವನ್ನೂ ಕೊಟ್ಟನು; ದಾನಿಯೇಲನು ಸಕಲ ದರ್ಶನಗಳಲ್ಲಿಯೂ ಕನಸುಗಳಲ್ಲಿಯೂ ತಿಳುವಳಿಕೆ ಯುಳ್ಳವನಾಗಿದ್ದನು.
- Isaiah 11:10 ಯೆಶಾಯ 11:10ಆ ದಿನದಲ್ಲಿ ಹುಡುಕುವ ಅನ್ಯಜನರಿಗೆ ಇಷ ಯನ ಬೇರು ಒಂದು ಗುರುತಾಗಿ ನಿಲ್ಲುವದು; ಅವನ ವಿಶ್ರಾಂತಿ ವೈಭವವುಳ್ಳದ್ದಾಗಿರುವದು.