Isaiah · chapter 11 · verse 10
Isaiah 11:10 in Kannada
ಆ ದಿನದಲ್ಲಿ ಹುಡುಕುವ ಅನ್ಯಜನರಿಗೆ ಇಷ ಯನ ಬೇರು ಒಂದು ಗುರುತಾಗಿ ನಿಲ್ಲುವದು; ಅವನ ವಿಶ್ರಾಂತಿ ವೈಭವವುಳ್ಳದ್ದಾಗಿರುವದು.
Aa dinadalli hudukuva anyajanarige isha yana beru ondu gurutaagi nilluvadu; avana vishraanti vaibhavavulladdaagiruvadu.
Isaiah 11:10 in English
- King James Version (KJV)
- And in that day there shall be a root of Jesse, which shall stand for an ensign of the people; to it shall the Gentiles seek: and his rest shall be glorious.
- World English Bible (WEB)
- It will happen in that day that the nations will seek the root of Jesse, who stands as a banner of the peoples; and his resting place will be glorious.
- American Standard Version (ASV)
- And it shall come to pass in that day, that the root of Jesse, that standeth for an ensign of the peoples, unto him shall the nations seek; and his resting-place shall be glorious.
- Bible in Basic English (BBE)
- And in that day, the eyes of the nations will be turned to the root of Jesse which will be lifted up as the flag of the peoples; and his resting-place will be glory.
- Darby Translation (DBY)
- And in that day there shall be a root of Jesse, standing as a banner of the peoples: the nations shall seek it; and his resting-place shall be glory.
- Webster's Bible (WBS)
- And in that day there shall be a root of Jesse, which shall stand for an ensign of the people; to it shall the Gentiles seek: and his rest shall be glorious.
- Young's Literal Translation (YLT)
- And there hath been, in that day, A root of Jesse that is standing for an ensign of peoples, Unto him do nations seek, And his rest hath been — honour!
Read in context
- 8ಮೊಲೆಕೂಸು ನಾಗರ ಹುತ್ತದ ಮೇಲೆ ಆಡುವದು, ಮೊಲೆ ಬಿಟ್ಟ ಮಗುವು ಹಾವಿನ ಬಿಲದ ಮೇಲೆ ಕೈಹಾಕುವದು.
- 9ನನ್ನ ಪರಿಶುದ್ಧ ಪರ್ವತದ ಲ್ಲೆಲ್ಲಾ ಕೇಡನ್ನಾಗಲಿ ನಾಶವನ್ನಾಗಲಿ ಯಾರೂ ಮಾಡು ವದಿಲ್ಲ; ಸಮುದ್ರವು ನೀರಿನಿಂದ ಮುಚ್ಚಿಕೊಂಡಿರು ವಂತೆ ಕರ್ತನ ತಿಳುವಳಿಕೆಯು ಭೂಮಿಯಲ್ಲಿ ತುಂಬಿ ಕೊಂಡಿರುವದು.
- 10ಆ ದಿನದಲ್ಲಿ ಹುಡುಕುವ ಅನ್ಯಜನರಿಗೆ ಇಷ ಯನ ಬೇರು ಒಂದು ಗುರುತಾಗಿ ನಿಲ್ಲುವದು; ಅವನ ವಿಶ್ರಾಂತಿ ವೈಭವವುಳ್ಳದ್ದಾಗಿರುವದು.
- 11ಆ ದಿನದಲ್ಲಿ ಕರ್ತನು ಉಳಿದ ತನ್ನ ಜನರನ್ನು ಬಿಡಿಸಿಕೊಳ್ಳುವದಕ್ಕೆ ಎರಡನೇ ಸಾರಿ ಕೈಹಾಕಿ ಅಶ್ಶೂರ; ಐಗುಪ್ತ, ಪತ್ರೋಸ್, ಕೂಷ್, ಏಲಾಮ್, ಶಿನಾರ್, ಹಮಾಥ್ ಮತ್ತು ಸಮುದ್ರದ ದ್ವೀಪಗಳಿಂದಲೂ ಉಳಿದವರನ್ನು ಬರಮಾಡಿಕೊಳ್ಳುವನು.
- 12ಜನಾಂಗ ಗಳಿಗೆ ಗುರುತಾಗಿ ಇಟ್ಟ ಇಸ್ರಾಯೇಲಿನಿಂದ ತಳ್ಳಿಬಿಟ್ಟವ ರನ್ನು ಕೂಡಿಸುವನು ಮತ್ತು ಯೆಹೂದದಿಂದ ಚದರಿದ ವರನ್ನು ಭೂಮಿಯ ನಾಲ್ಕು ಮೂಲೆಗಳಿಂದ ಒಟ್ಟುಗೂಡಿಸುವನು.
Cross references
- Romans 15:9–12 ರೋಮಾಪುರದವರಿಗೆ 15:9–12ಈ ಕಾರಣದಿಂದ ನಾನು ಅನ್ಯಜನಗಳ ಮಧ್ಯದಲ್ಲಿ ನಿನ್ನನು ಅರಿಕೆ ಮಾಡಿ ನಿನ್ನ ನಾಮವನ್ನು ಸಂಕೀರ್ತಿಸುವೆನು ಎಂದು ಬರೆದಿರುವ ಪ್ರಕಾರ ಅನ್ಯಜನಗಳು ದೇವರ ಕರುಣೆಗಾಗಿ ಆತನನ್ನು ಮಹಿಮೆಪಡಿಸುವರು. ಆತನು ತಿರಿಗಿ--ಅನ್ಯಜನರೇ, ಆತನ ಜನರೊಂದಿಗೆ ಸಂತೋಷಿಸಿರಿ ಎಂದು ಹೇಳುತ್ತಾನೆ. ತಿರಿಗಿ--ಎಲ್ಲಾ ಅನ್ಯಜನರೇ, ಕರ್ತನನ್ನು ಸ್ತುತಿಸಿರಿ; ಎಲ್ಲಾ ಜನರೇ, ಆತನನ್ನು ಕೊಂಡಾಡಿರಿ ಅನ್ನುತ್ತಾನೆ. ತಿರಿಗಿ ಯೆಶಾಯನು--ಇಷಯನ ಅಂಕುರದವನು ಎದ್ದು ಅನ್ಯ ಜನಾಂಗಗಳ ಮೇಲೆ ಆಡಳಿತ ಮಾಡುವನು; ಅನ್ಯ ಜನರು ಆತನಲ್ಲಿ ನಂಬಿಕೆಯಿಡುವರು ಅಂದನು.
- Luke 2:32 ಲೂಕನು 2:32ಅದು ಅನ್ಯಜನರನ್ನು ಬೆಳಗಿಸುವ ಬೆಳಕೂ ನಿನ್ನ ಪ್ರಜೆಯಾದ ಇಸ್ರಾಯೇಲ್ಯರ ಮಹಿ ಮೆಯೂ ಆಗಿದೆ ಅಂದನು.
- Isaiah 11:1 ಯೆಶಾಯ 11:1ಇಷಯನ ಬುಡದಿಂದ ಒಂದು ಕೊಂಬೆ ಒಡೆಯುವದು ಅದರ ಬೇರಿನಿಂದ ಕೊಂಬೆ ಯು ಬೆಳೆಯುವದು.
- Matthew 2:1–2 ಮತ್ತಾಯನು 2:1–2ಅರಸನಾದ ಹೆರೋದನ ದಿನಗಳಲ್ಲಿ ಯೂದಾಯದ ಬೇತ್ಲೆಹೇಮಿನಲ್ಲಿ ಯೇಸು ಹುಟ್ಟಿದಾಗ ಇಗೋ, ಮೂಡಲದಿಂದ ಜ್ಞಾನಿಗಳು ಯೆರೂಸಲೇಮಿಗೆ ಬಂದು -- ಯೆಹೂದ್ಯರ ಅರಸ ನಾಗಿ ಹುಟ್ಟಿದಾತನು ಎಲ್ಲಿದ್ದಾನೆ? ಯಾಕೆಂದರೆ ನಾವು ಮೂಡಲದಲ್ಲಿ ಆತನ ನಕ್ಷತ್ರವನ್ನು ನೋಡಿ ಆತನನ್ನು ಆರಾಧಿಸುವದಕ್ಕೆ ಬಂದಿದ್ದೇವೆ ಅಂದರು.
- Matthew 12:21 ಮತ್ತಾಯನು 12:21ಮತ್ತು ಆತನ ಹೆಸರಿನಲ್ಲಿ ಅನ್ಯಜನರು ನಂಬಿಕೆಯಿಡುವರು ಎಂಬದೇ.
- John 12:32 ಯೋಹಾನನು 12:32ನಾನು ಭೂಮಿಯಿಂದ ಮೇಲಕ್ಕೆ ಎತ್ತಲ್ಪಟ್ಟರೆ ಎಲ್ಲ ರನ್ನೂ ನನ್ನ ಬಳಿಗೆ ಎಳಕೊಳ್ಳುವೆನು ಅಂದನು.
- Matthew 8:11 ಮತ್ತಾಯನು 8:11ನಾನು ನಿಮಗೆ ಹೇಳುವದೇನಂದರೆ--ಬಹಳ ಜನರು ಪೂರ್ವದಿಂದಲೂ ಪಶ್ಚಿಮದಿಂದಲೂ ಬಂದು ಪರ ಲೋಕರಾಜ್ಯದಲ್ಲಿ ಅಬ್ರಹಾಮ್ ಇಸಾಕ್ ಯಾಕೋಬ್ ಅವರೊಂದಿಗೆ ಕೂತುಕೊಳ್ಳುವರು.
- Isaiah 32:17–18 ಯೆಶಾಯ 32:17–18ನೀತಿಯ ಕೆಲಸವು ಸಮಾಧಾನವೂ ನೀತಿಯ ಫಲವು ನಿತ್ಯವಾದ ಶಾಂತಿಯೂ ಭರವಸವೂ ಆಗಿರುವದು. ಆಗ ನನ್ನ ಜನರು ಸಮಾಧಾನದ ನಿವಾಸಗಳಲ್ಲಿಯೂ ಭದ್ರವಾದ ಸ್ಥಾನಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.
- Acts 11:18 ಅಪೊಸ್ತಲರ ಕೃತ್ಯಗಳು 11:18ಅವರು ಇವುಗಳನ್ನು ಕೇಳಿ ಮೌನವಾಗಿದ್ದು ದೇವ ರನ್ನು ಕೊಂಡಾಡಿ--ಹಾಗಾದರೆ ಅನ್ಯ ಜನಾಂಗದವ ರಿಗೂ ಜೀವಕ್ಕಾಗಿ ಮಾನಸಾಂತರವನ್ನು ದೇವರು ದಯಪಾಲಿಸಿದ್ದಾನೆ ಎಂದು ಹೇಳಿದರು.
- John 3:14–15 ಯೋಹಾನನು 3:14–15ಇದಲ್ಲದೆ ಮೋಶೆಯು ಅರಣ್ಯದಲ್ಲಿ ಸರ್ಪವನ್ನು ಎತ್ತಿದ ಹಾಗೆಯೇ ಮನುಷ್ಯ ಕುಮಾರನು ಸಹ ಎತ್ತಲ್ಪಡತಕ್ಕದ್ದು. ಹೀಗೆ ಆತನನ್ನು ನಂಬುವ ಯಾವನಾದರೂ ನಾಶವಾಗದೆ ನಿತ್ಯಜೀವ ವನ್ನು ಪಡೆದಿರುವನು.
- Matthew 11:28–30 ಮತ್ತಾಯನು 11:28–30ಕಷ್ಟಪಡುವವರೇ ಮತ್ತು ಭಾರಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು. ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ.ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ ಎಂದು ಹೇಳಿದನು. ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ ಎಂದು ಹೇಳಿದನು.
- Revelation 22:16 ಪ್ರಕಟನೆ 22:16ಯೇಸುವೆಂಬ ನಾನು ಸಭೆಗಳಲ್ಲಿ ಇವುಗಳ ವಿಷಯವಾಗಿ ನಿಮಗೆ ಸಾಕ್ಷಿ ಹೇಳುವದಕ್ಕೋಸ್ಕರ ನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನು ದಾವೀದನ ಬೇರೂ ಸಂತತಿಯೂ ಉದಯದ ಪ್ರಕಾಶವುಳ್ಳ ನಕ್ಷತ್ರವೂ ಆಗಿದ್ದೇನೆ.