2 Corinthians · chapter 11 · verse 25
2 Corinthians 11:25 in Kannada
ನಾನು ಮೂರು ಸಾರಿ ಚಡಿಗಳಿಂದ ಹೊಡಿಸಿಕೊಂಡೆನು. ಒಂದು ಸಾರಿ ನನ್ನ ಮೇಲೆ (ಕೊಲ್ಲುವದಕ್ಕೆ) ಕಲ್ಲೆಸೆದರು; ಮೂರು ಸಾರಿ ನಾನಿದ್ದ ಹಡಗು ಒಡೆದುಹೋಯಿತು; ಒಂದು ರಾತ್ರಿ ಒಂದು ಹಗಲು ಸಮುದ್ರದಲ್ಲಿ ಇದ್ದೆನು.
Naanu mooru saari chadigalinda hodisikondenu. Ondu saari nanna mele (kolluvadakke) kallesedaru; mooru saari naanidda hadagu odeduhoyitu; ondu raatri ondu hagalu samudradalli iddenu.
2 Corinthians 11:25 in English
- King James Version (KJV)
- Thrice was I beaten with rods, once was I stoned, thrice I suffered shipwreck, a night and a day I have been in the deep;
- World English Bible (WEB)
- Three times I was beaten with rods. Once I was stoned. Three times I suffered shipwreck. I have been a night and a day in the deep.
- American Standard Version (ASV)
- Thrice was I beaten with rods, once was I stoned, thrice I suffered shipwreck, a night and a day have I been in the deep;
- Bible in Basic English (BBE)
- Three times I was whipped with rods, once I was stoned, three times the ship I was in came to destruction at sea, a night and a day I have been in the water;
- Darby Translation (DBY)
- Thrice have I been scourged, once I have been stoned, three times I have suffered shipwreck, a night and day I passed in the deep:
- Webster's Bible (WBS)
- Thrice was I beaten with rods, once I was stoned, thrice I suffered shipwreck, a night and a day I have been in the deep;
- Young's Literal Translation (YLT)
- thrice was I beaten with rods, once was I stoned, thrice was I shipwrecked, a night and a day in the deep I have passed;
Read in context
- 23ಅವರು ಕ್ರಿಸ್ತನ ಸೇವಕರೋ? (ನಾನು ಬುದ್ಧಿಹೀನನಂತೆ ಮಾತನಾಡು ತ್ತೇನೆ) ಅವರಿಗಿಂತ ನಾನು ಹೆಚ್ಚಾಗಿ ಸೇವೆ ಮಾಡುವವ ನಾಗಿದ್ದೇನೆ; ಹೆಚ್ಚಾಗಿ ಪ್ರಯಾಸಪಟ್ಟೆನು. ಮಿತಿವಿಾರಿ ಪೆಟ್ಟುಗಳನ್ನು ತಿಂದೆನು; ಹೆಚ್ಚಾಗಿ ಸೆರೆಮನೆಗಳಲ್ಲಿ ಬಿದ್ದೆನು; ಅನೇಕ ಸಾರಿ ಮರಣಗಳಲ್ಲಿ ಸಿಕ್ಕಿಕೊಂಡೆನು.
- 24ಐದು ಸಾರಿ ಯೆಹೂದ್ಯರಿಂದ ನನಗೆ ಒಂದು ಕಡಿಮೆ ನಾಲ್ವತ್ತು ಏಟುಗಳು ಬಿದ್ದವು;
- 25ನಾನು ಮೂರು ಸಾರಿ ಚಡಿಗಳಿಂದ ಹೊಡಿಸಿಕೊಂಡೆನು. ಒಂದು ಸಾರಿ ನನ್ನ ಮೇಲೆ (ಕೊಲ್ಲುವದಕ್ಕೆ) ಕಲ್ಲೆಸೆದರು; ಮೂರು ಸಾರಿ ನಾನಿದ್ದ ಹಡಗು ಒಡೆದುಹೋಯಿತು; ಒಂದು ರಾತ್ರಿ ಒಂದು ಹಗಲು ಸಮುದ್ರದಲ್ಲಿ ಇದ್ದೆನು.
- 26ಎಷ್ಟೋ ಪ್ರಯಾಣಗಳನ್ನು ಮಾಡಿದೆನು; ನೀರಿನ ಅಪಾಯಗಳು ಕಳ್ಳರ ಅಪಾಯಗಳೂ ಸ್ವಂತ ಜನರಿಂದ ಅಪಾಯಗಳೂ ಅನ್ಯಜನರಿಂದ ಅಪಾಯಗಳೂ ಪಟ್ಟಣದಲ್ಲಿ ಅಪಾಯಗಳೂ ಕಾಡಿನಲ್ಲಿ ಅಪಾಯ ಗಳೂ ಸಮುದ್ರದಲ್ಲಿ ಅಪಾಯಗಳೂ ಸುಳ್ಳು ಸಹೋ ದರರೊಳಗೆ ಇರುವಾಗ ಅಪಾಯಗಳೂ ನನಗೆ ಸಂಭವಿಸಿದವು.
- 27ಪ್ರಯಾಸ ಪರಿಶ್ರಮಗಳಿಂದ ಆನೇಕ ಸಾರಿ ನಿದ್ದೆಗೆಟ್ಟು ಹಸಿವೆ ಬಾಯಾರಿಕೆಗಳನ್ನ ನುಭವಿಸಿ ಅನೇಕ ಸಾರಿ ಉಪವಾಸವಾಗಿಯೂ ಚಳಿಯಲ್ಲಿಯೂ ವಸ್ತ್ರವಿಲ್ಲದೆಯೂ ಇದ್ದು ಆತನನ್ನು ಸೇವಿಸಿದ್ದೇನೆ.
Cross references
- Acts 14:19 ಅಪೊಸ್ತಲರ ಕೃತ್ಯಗಳು 14:19ತರುವಾಯ ಅಂತಿಯೋಕ್ಯದಿಂದಲೂ ಇಕೋನ್ಯ ದಿಂದಲೂ ಕೆಲವು ಯೆಹೂದ್ಯರು ಅಲ್ಲಿಗೆ ಬಂದು ಜನರನ್ನು ಪ್ರೇರೇಪಿಸಿ ಪೌಲನ ಮೇಲೆ ಕಲ್ಲೆಸೆದು ಅವನು ಸತ್ತನೆಂದು ಭಾವಿಸಿ ಪಟ್ಟಣದ ಹೊರಕ್ಕೆ ಎಳೆದುಬಿಟ್ಟರು.
- Acts 16:33 ಅಪೊಸ್ತಲರ ಕೃತ್ಯಗಳು 16:33ಆಮೇಲೆ ಅವನು ರಾತ್ರಿಯ ಅದೇ ಗಳಿಗೆಯಲ್ಲಿ ಅವರನ್ನು ಕರಕೊಂಡು ಹೋಗಿ ಅವರ ಗಾಯಗಳನ್ನು ತೊಳೆದನು; ಕೂಡಲೆ ತಾನು ತನ್ನವ ರೆಲ್ಲರ ಸಹಿತವಾಗಿ ಬಾಪ್ತಿಸ್ಮ ಮಾಡಿಸಿಕೊಂಡನು.
- Hebrews 11:37 ಇಬ್ರಿಯರಿಗೆ 11:37ಕೆಲವರನ್ನು ಕಲ್ಲೆಸೆ ದರು; ಕೆಲವರನ್ನು ಗರಗಸದಿಂದ ಕೊಯ್ದುಕೊಂದರು. ಕೆಲವರನ್ನು ಪರಿಶೋಧಿಸಿದರು, ಕೆಲವರನ್ನು ಕತ್ತಿಯಿಂದ ಕೊಂದರು; ಕೆಲವರು ಕೊರತೆ ಹಿಂಸೆ ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು ಕುರಿ ಮೇಕೆಗಳ ಚರ್ಮ ಗಳನ್ನು ಉಟ್ಟುಕೊಂಡವರಾಗಿ ಅಲೆದಾಡಿದರು.
- Acts 27:1–44 ಅಪೊಸ್ತಲರ ಕೃತ್ಯಗಳು 27:1–44ನಾವು ಸಮುದ್ರ ಪ್ರಯಾಣ ಮಾಡಿ ಇತಾಲ್ಯಕ್ಕೆ ಹೋಗಬೇಕೆಂದು ನಿಶ್ಚಯ ಮಾಡಿದಾಗ ಔಗುಸ್ತನ ಪಟಾಲಮಿನ ಶತಾಧಿಪತಿಯಾದ ಯೂಲ್ಯ ಎಂಬವನಿಗೆ ಪೌಲನನ್ನೂ ಬೇರೆ ಕೆಲವು ಕೈದಿಗಳನ್ನೂ ಅವರು ಒಪ್ಪಿಸಿದರು. ನಾವು ಆಸ್ಯದ ತೀರಗಳ ಮಾರ್ಗವಾಗಿ ಪ್ರಯಾಣಮಾಡ ಬೇಕೆಂಬ ಉದ್ದೇಶದಿಂದ ಅದ್ರಮಿತ್ತಿಯ ಹಡಗನ್ನು ಹತ್ತಿ ಸಮುದ್ರ ಪ್ರಯಾಣವನ್ನು ಪ್ರಾರಂಭಿಸಿದೆವು ಆಗ ಥೆಸಲೊನೀಕದ ಮಕೆದೋನ್ಯದವನಾದ ಅರಿ ಸ್ತಾರ್ಕನು ನಮ್ಮೊಂದಿಗೆ ಇದ್ದನು. ನಾವು ಮರುದಿನ ಸೀದೋನಿಗೆ ಸೇರಿದೆವು; ಆಗ ಯೂಲ್ಯನು ದಯೆ ತೋರಿಸಿ ಪೌಲನನ್ನು ಒತ್ತಾಯ ಮಾಡಿ ಅವನು ತನ್ನ ಸ್ನೇಹಿತರ ಬಳಿಗೆ ಹೋಗಿ ವಿಶ್ರಮಿಸಿಕೊಳ್ಳುವಂತೆ ಸ್ವಾತಂತ್ರ್ಯವಾಗಿ ಬಿಟ್ಟನು. ಅಲ್ಲಿಂದ ನಾವು ಪ್ರಯಾಣ ವನ್ನು ಪ್ರಾರಂಭಿಸಿದಾಗ ಎದುರುಗಾಳಿಯು ಇದ್ದದ ರಿಂದ ಕುಪ್ರದ ಮರೆಯಲ್ಲಿ ಪ್ರಯಾಣಮಾಡಿದೆವು. ಇದಾದ ಮೇಲೆ ನಾವು ಕಿಲಿಕ್ಯ ಮತ್ತು ಪಂಪುಲ್ಯದ ಸಮುದ್ರಮಾರ್ಗವಾಗಿ ಪ್ರಯಾಣಮಾಡಿ ಲುಕೀಯ ಪಟ್ಟಣವಾದ ಮುರಕ್ಕೆ ಬಂದೆವು. ಅಲ್ಲಿ ಇತಾಲ್ಯಕ್ಕೆ ಸಮುದ್ರ ಪ್ರಯಾಣ ಮಾಡುವ ಅಲೆಕ್ಸಾಂದ್ರಿಯದ ಒಂದು ಹಡಗನ್ನು ಶತಾಧಿಪತಿಯು ಕಂಡು ಅದರಲ್ಲಿ ನಮ್ಮನ್ನು ಹತ್ತಿಸಿದನು. ನಾವು ಅನೇಕ ದಿವಸ ನಿಧಾನವಾಗಿ ಸಾಗಿದಾಗ್ಯೂ ಎದುರುಗಾಳಿಯ ದೆಸೆ ಯಿಂದ ಸಲ್ಮೊನೆಗೆ ಎದುರಾಗಿ ಕ್ರೇತದ ಮರೆಯಲ್ಲಿ ಪ್ರಯಾಣ ಮಾಡಿದೆವು; ಅದನ್ನು ದಾಟುವದು ಕಷ್ಟವಾದದರಿಂದ ಚಂದರೇವುಗಳೆಂಬ ಸ್ಥಳಕ್ಕೆ ಸೇರಿ ದೆವು; ಲಸಾಯವೆಂಬ ಪಟ್ಟಣವು ಇದಕ್ಕೆ ಸವಿಾಪವಾಗಿದೆ. ಹೀಗೆ ಬಹುಕಾಲ ಕಳೆದ ಮೇಲೆ ಉಪವಾಸದ ಸಮಯವು ಆಗಲೇ ದಾಟಿಹೋದದರಿಂದ ಸಮುದ್ರ ಪ್ರಯಾಣವು ಅಪಾಯಕರವಾದಾಗ ಪೌಲನು ಅವ ರನ್ನು ಎಚ್ಚರಿಸುತ್ತಾ-- ಅಯ್ಯಗಳಿರಾ, ಈ ಸಮುದ್ರ ಪ್ರಯಾಣವು ಸರಕಿಗೂ ಹಡಗಿಗೂ ಮಾತ್ರವಲ್ಲದೆ ನಮ್ಮ ಪ್ರಾಣಗಳಿಗೆ ಕೇಡನ್ನೂ ದೊಡ್ಡ ನಷ್ಟವನ್ನೂ ಉಂಟುಮಾಡುವಂತದ್ದಾಗಿದೆ ಎಂದು ನನಗೆ ತೋರು ತ್ತದೆ. ಆದರೂ ಪೌಲನು ಹೇಳಿದವುಗಳಿಗಿಂತ ಹೆಚ್ಚಾಗಿ ಹಡಗಿನ ನಾಯಕನೂ ಯಜಮಾನನೂ ಆಗಿದ್ದವನನ್ನು ಶತಾಧಿಪತಿಯು ನಂಬಿದನು. ಆ ರೇವು ಚಳಿಗಾಲವನ್ನು ಕಳೆಯುವದಕ್ಕೆ ಅನುಕೂಲ ವಲ್ಲದ್ದರಿಂದ ಅಲ್ಲಿಂದಲೂ ಹೊರಟು ಫೊಯಿನಿಕೆಗೆ ಸೇರಿ ಅಲ್ಲಿ ಚಳಿಗಾಲವನ್ನು ಕಳೆಯುವದು ಸಾಧ್ಯವಾಗ ಬಹುದು ಎಂದು ಅನೇಕರು ಸಲಹೆಕೊಟ್ಟರು; ಇದು ಕ್ರೇತದ ಒಂದು ರೇವು ಆಗಿದ್ದು ಈಶಾನ್ಯ ದಿಕ್ಕಿಗೂ ಅಗ್ನೇಯ ದಿಕ್ಕಿಗೂ ಅಭಿಮುಖವಾಗಿ ಇದಾದ ಮೇಲೆ ದಕ್ಷಿಣದ ಗಾಳಿಯು ಮೆಲ್ಲಗೆ ಬೀಸಿದಾಗ ಅವರು ತಮ್ಮ ಉದ್ದೇಶವು ಸಾರ್ಥಕವಾಯಿತೆಂದು ಭಾವಿಸಿ ಅಲ್ಲಿಂದ ಹೊರಟು ಕ್ರೇತಕ್ಕೆ ಸವಿಾಪವಾಗಿ ಪ್ರಯಾಣಮಾಡಿದರು. ಆದರೆ ಸ್ವಲ್ಪ ಹೊತ್ತಿನ ಮೇಲೆ ಊರಕಲೋನು ಎಂಬ ಬಿರುಗಾಳಿಯು ಎದುರಾಗಿ ಬೀಸಿತು. ಆಗ ಹಡಗು ಅದಕ್ಕೆ ಸಿಕ್ಕಿಕೊಂಡು ಗಾಳಿಗೆ ತಾಳಲಾರದೆ ಇದ್ದದರಿಂದ ಅದು ನೂಕಿಕೊಂಡು ಹೋಗುವಂತೆ ನಾವು ಬಿಟ್ಟುಕೊಟ್ಟೆವು ನಾವು ಕ್ಲೌಡವೆಂಬ ಒಂದು ದ್ವೀಪದ ಮರೆಯಲ್ಲಿ ಹೋಗುತ್ತಿ ದ್ದದರಿಂದ ದೋಣಿಯನ್ನು ಭದ್ರಮಾಡಿಕೊಳ್ಳುವದು ನಮಗೆ ಬಹಳ ಪ್ರಯಾಸವಾಗಿತ್ತು. ಅದನ್ನು ಮೇಲಕ್ಕೆ ಎತ್ತಿ ಸಾಧನಗಳಿಂದ ಹಡಗಿನ ಕೆಳಭಾಗವನ್ನು ಬಿಗಿಯಾಗಿ ಕಟ್ಟಿದರು. ಆಮೇಲೆ ಕಳ್ಳುಸುಬಿಗೆ ನಾವು ಸಿಕ್ಕಿಕೊಂಡೇವೆಂದು ಭಯಪಟ್ಟು ಹಾಯಿಯನ್ನು ಸಡಿಲು ಮಾಡಿ ನೂಕಿಸಿಕೊಂಡು ಹೋದೆವು. ಬಿರುಗಾಳಿಯು ನಮ್ಮನ್ನು ಬಹಳವಾಗಿ ಹೊಯಿದಾಡಿಸಿದ್ದರಿಂದ ಮರುದಿನ ಅವರು ಹಡಗನ್ನು ಹಗುರವಾಗಿ ಮಾಡಿ ದರು; ಮೂರನೆಯ ದಿನ ನಮ್ಮ ಕೈಗಳಿಂದಲೇ ಹಡಗಿನ ಸಾಮಾನುಗಳನ್ನು ಎತ್ತಿ ಹೊರಗೆ ಹಾಕಿದೆವು. ಅನೇಕ ದಿವಸಗಳವರೆಗೆ ಸೂರ್ಯನಾಗಲಿ ನಕ್ಷತ್ರ ಗಳಾಗಲಿ ಕಾಣಿಸದೆ ದೊಡ್ಡ ಬಿರುಗಾಳಿಯು ನಮ್ಮ ಮೇಲೆ ಹೊಡೆದದ್ದರಿಂದ ನಾವು ಪಾರಾದೇವೆಂಬ ಎಲ್ಲಾ ನಿರೀಕ್ಷೆಯು ತಪ್ಪಿಹೋಯಿತು. ಆದರೆ ಅವರು ಬಹುಕಾಲ ಆಹಾರವಿಲ್ಲದೆ ಇದ್ದಮೇಲೆ ಪೌಲನು ಅವರ ಮಧ್ಯದಲ್ಲಿ ನಿಂತುಕೊಂಡು--ಅಯ್ಯಗಳಿರಾ, ನೀವು ನನ್ನ ಮಾತು ಕೇಳಿ ಕ್ರೇತದಿಂದ ಹೊರಡದೆ ಇದ್ದಿದ್ದರೆ ನಾವು ಈ ಕಷ್ಟನಷ್ಟಕ್ಕೆ ಗುರಿಯಾಗುತ್ತಿರಲಿಲ್ಲ. ಆದಾಗ್ಯೂ ನೀವು ಧೈರ್ಯದಿಂದ ಇರಬೇಕೆಂದು ನಾನು ನಿಮ್ಮನ್ನು ಪ್ರೋತ್ಸಾಹಮಾಡುತ್ತೇನೆ; ಹಡಗಿಗೆ ಹೊರತು ನಿಮ್ಮಲ್ಲಿ ಯಾವ ಮನುಷ್ಯನಿಗೂ ಪ್ರಾಣ ನಷ್ಟವಾಗುವದಿಲ್ಲ. ನಾನು ಯಾರವನಾಗಿದ್ದೇನೋ ಯಾರನ್ನು ಸೇವಿಸುತ್ತೇನೊ ಆ ದೇವರ ದೂತನು ಈ ರಾತ್ರಿಯಲ್ಲಿ ನನ್ನ ಹತ್ತಿರ ನಿಂತು-- ಪೌಲನೇ, ಭಯಪಡಬೇಡ, ನೀನು ಕೈಸರನ ಮುಂದೆ ನಿಲ್ಲತಕ್ಕದ್ದು; ಇಗೋ, ನಿನ್ನೊಂದಿಗೆ ಪ್ರಯಾಣಮಾಡುವವರೆಲ್ಲರನ್ನು ನಿನಗೆ ದೇವರು ಕೊಟ್ಟಿದ್ದಾನೆ ಎಂದು ಹೇಳಿದನು. ಆದಕಾರಣ ಅಯ್ಯಗಳಿರಾ, ನೀವು ಧೈರ್ಯವಾಗಿರ್ರಿ; ನನಗೆ ಹೇಳಲ್ಪಟ್ಟ ಪ್ರಕಾರವೇ ಆಗುವದೆಂದು ನಾನು ದೇವರನ್ನು ನಂಬುತ್ತೇನೆ. ಹೇಗಿದ್ದರೂ ನಾವು ಒಂದು ದ್ವೀಪಕ್ಕೆ ಸೇರಲೇಬೇಕಾಗಿದೆ ಅಂದನು. ಆದರೆ ಹದಿನಾಲ್ಕನೆಯ ರಾತ್ರಿ ಬಂದಾಗ ಆದ್ರಿ ಯಲ್ಲಿ ಅತ್ತ ಇತ್ತ ಬಡಿಸಿಕೊಂಡ ನಂತರ ಸುಮಾರು ಮಧ್ಯರಾತ್ರಿಯಲ್ಲಿ ನಾವಿಕರು ಒಂದು ದೇಶಕ್ಕೆ ಬಂದೆವೆಂದು ನೆನಸಿದರು; ಆಗ ಅವರು ಅಳತೆಯ ಗುಂಡನ್ನು ಇಳಿಸಿ ಇಪ್ಪತ್ತು ಮಾರುದ್ದ ಎಂದು ತಿಳಿದು ಕೊಂಡರು. ಇನ್ನೂ ಸ್ವಲ್ಪ ದೂರ ಹೋಗಿ ತಿರಿಗಿ ಅಳತೆಯ ಗುಂಡನ್ನು ಇಳಿಸಿ ಹದಿನೈದು ಮಾರುದ್ದವೆಂದು ತಿಳಿದರು. ನಾವು ಬಂಡೆಗಳನ್ನು ತಾಕೇವೆಂದು ಭಯ ಪಟ್ಟಾಗ ಅವರು ಹಡಗಿನ ಹಿಂಭಾಗದ ನಾಲ್ಕು ಲಂಗರು ಗಳನ್ನು ಬಿಟ್ಟು ಯಾವಾಗ ಬೆಳಗಾದೀತು ಎಂದು ಹಾರೈ ಸುತ್ತಿದ್ದರು. ನಾವಿಕರು ಹಡಗಿನ ಮುಂಭಾಗದಲ್ಲಿ ಲಂಗರುಗಳನ್ನು ಹಾಕಬೇಕೆಂಬ ನೆವದಿಂದ ದೋಣಿ ಯನ್ನು ಸಮುದ್ರದಲ್ಲಿ ಇಳಿಸಿ ಅವರು ಹಡಗಿನಿಂದ ತಪ್ಪಿಸಿಕೊಂಡು ಹೋಗಬೇಕೆಂದಿದ್ದರು: ಆಗ ಪೌಲನು ಶತಾಧಿಪತಿಗೆ ಮತ್ತು ಸೈನಿಕರಿಗೆ--ಇವರು ಹಡಗಿನಲ್ಲಿ ನಿಲ್ಲದೆ ಹೋದರೆ ನೀವು ತಪ್ಪಿಸಿಕೊಳ್ಳಲಾರಿರಿ ಎಂದು ಹೇಳಿದನು. ಅದಕ್ಕೆ ಸೈನಿಕರು ದೋಣಿಯ ಹಗ್ಗಗಳನ್ನು ಕತ್ತರಿಸಿ ಅದು ಬಿದ್ದು ಹೋಗುವಂತೆ ಮಾಡಿದರು. ಬೆಳಗಾಗುತ್ತಿರುವಷ್ಟರಲ್ಲಿ ಆಹಾರವನ್ನು ತೆಗೆದುಕೊಳ್ಳಬೇಕೆಂದು ಪೌಲನು ಅವರೆಲ್ಲರನ್ನು ಬೇಡಿ ಕೊಳ್ಳುವವನಾಗಿ--ಏನೂ ಆಹಾರವನ್ನು ತೆಗೆದು ಕೊಳ್ಳದೆ ಕಾದುಕೊಂಡು ಉಪವಾಸವಾಗಿರುವದು ಇದು ಹದಿನಾಲ್ಕನೆಯ ದಿವಸ. ನಿಮ್ಮ ಕ್ಷೇಮಕ್ಕಾಗಿ ಸ್ವಲ್ಪ ಆಹಾರವನ್ನು ತೆಗೆದುಕೊಳ್ಳಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ; ನಿಮ್ಮಲ್ಲಿ ಯಾರ ತಲೆ ಯಿಂದ ಒಂದು ಕೂದಲೂ ಕೆಳಗೆ ಬಿದ್ದು ಹೋಗು ವದಿಲ್ಲ ಎಂದು ಹೇಳಿದನು. ಅವನು ಹಾಗೆ ಹೇಳಿದ ತರುವಾಯ ರೊಟ್ಟಿಯನ್ನು ತೆಗೆದುಕೊಂಡು ಅವರೆಲ್ಲರ ಮುಂದೆ ದೇವರಿಗೆ ಸ್ತೋತ್ರಮಾಡಿ ಅದನ್ನು ಮುರಿದು ತಿನ್ನುವದಕ್ಕೆ ಪ್ರಾರಂಭಿಸಿದನು. ಆಗ ಅವರೆಲ್ಲರು ಧೈರ್ಯದಿಂದ ಸ್ವಲ್ಪ ಆಹಾರವನ್ನು ತೆಗೆದುಕೊಂಡರು. ಎಲ್ಲರೂ ಸೇರಿ ಹಡಗಿನಲ್ಲಿ ಇನ್ನೂರ ಎಪ್ಪತ್ತಾರು ಮಂದಿ ಇದ್ದೆವು. ಅವರು ಸಾಕಾದಷ್ಟು ತಿಂದಮೇಲೆ ಗೋದಿಯನ್ನು ಸಮುದ್ರಕ್ಕೆ ಚೆಲ್ಲಿ ಹಡಗನ್ನು ಹಗುರ ಮಾಡಿದರು. ಬೆಳಗಾದ ಮೇಲೆ ಆ ದೇಶವು ಯಾವ ದೆಂದು ತಿಳಿಯದೆ ದಡವಿದ್ದ ಒಂದು ಕೊಲ್ಲಿಯನ್ನು ನೋಡಿ ಅದರ ಮೇಲೆ ಹಡಗನ್ನು ನೂಕುವದಕ್ಕೆ ಸಾಧ್ಯವಾದೀತೆಂದು ನಾವು ಯೋಚಿಸಿದೆವು. ಅವರು ಲಂಗರುಗಳನ್ನು ತೆಗೆದು ಸಮುದ್ರದಲ್ಲಿ ಬಿಟ್ಟು ಚುಕ್ಕಾ ಣಿಗಳ ಕಟ್ಟುಗಳನ್ನು ಬಿಚ್ಚಿ ದೊಡ್ಡ ಹಾಯಿಗಳನ್ನು ಗಾಳಿಗೆ ಎತ್ತಿಕಟ್ಟಿ ಹಡಗನ್ನು ದಡಕ್ಕೆ ನಡಿಸುತ್ತಿದ್ದರು. ಎರಡು ಸಮುದ್ರಗಳು ಸೇರುವ ಸ್ಥಳದಲ್ಲಿ ಅವರು ಹಡಗನ್ನು ಆಳವಿಲ್ಲದ ನೀರಿನಲ್ಲಿದ್ದ ನೆಲದ ಮೇಲೆ ಹತ್ತಿಸಿದರು; ಆಗ ಮುಂಭಾಗವು ತಗಲಿಕೊಂಡು ಅಲ್ಲಾಡದಂತೆ ನಿಂತಿತು. ಆದರೆ ಹಿಂಭಾಗವು ತೆರೆಗಳ ಹೊಡೆತದಿಂದ ಒಡೆದುಹೋಯಿತು. ಸೆರೆಯವರಲ್ಲಿ ಯಾರಾದರೂ ಈಜಿ ತಪ್ಪಿಸಿಕೊಂಡಾರೆಂದು ಅವರನ್ನು ಕೊಲ್ಲಬೇಕೆಂಬದಾಗಿ ಸೈನಿಕರು ಆಲೋಚಿಸಿದರು. ಆದರೆ ಶತಾಧಿಪತಿಯು ಪೌಲನನ್ನು ಉಳಿಸ ಬೇಕೆಂದು ಅಪೇಕ್ಷಿಸಿ ಅವರ ಉದ್ದೇಶವನ್ನು ತಡೆದು ಈಜು ಬಲ್ಲವರು ಮೊದಲು ಸಮುದ್ರದಲ್ಲಿ ಧುಮುಕ ಬೇಕೆಂತಲೂಉಳಿದವರಲ್ಲಿ ಕೆಲವರು ಹಲಿಗೆಗಳ ಮೇಲೆ ಇನ್ನೂ ಕೆಲವರು ಹಡಗಿನ ತುಂಡುಗಳ ಮೇಲೆ ತೀರಕ್ಕೆ ಹೋಗಬೇಕೆಂತಲೂ ಅಪ್ಪಣೆಕೊಟ್ಟನು. ಹೀಗೆ ಎಲ್ಲರೂ ಸುರಕ್ಷಿತವಾಗಿ ತೀರಕ್ಕೆ ಸೇರಿದರು. ಉಳಿದವರಲ್ಲಿ ಕೆಲವರು ಹಲಿಗೆಗಳ ಮೇಲೆ ಇನ್ನೂ ಕೆಲವರು ಹಡಗಿನ ತುಂಡುಗಳ ಮೇಲೆ ತೀರಕ್ಕೆ ಹೋಗಬೇಕೆಂತಲೂ ಅಪ್ಪಣೆಕೊಟ್ಟನು. ಹೀಗೆ ಎಲ್ಲರೂ ಸುರಕ್ಷಿತವಾಗಿ ತೀರಕ್ಕೆ ಸೇರಿದರು.
- Acts 16:37 ಅಪೊಸ್ತಲರ ಕೃತ್ಯಗಳು 16:37ಅದಕ್ಕೆ ಪೌಲನು--ಅವರು ವಿಚಾರಣೆ ಮಾಡದೆ ರೋಮ ನ್ನರಾದ ನಮ್ಮನ್ನು ಎಲ್ಲರ ಮುಂದೆ ಹೊಡಿಸಿ ಸೆರೆಮನೆ ಯೊಳಗೆ ಹಾಕಿಸಿದರು; ಈಗ ನಮ್ಮನ್ನು ಗುಪ್ತವಾಗಿ ಹೊರಗೆ ಕಳುಹಿಸುತ್ತಾರೋ? ಹಾಗೆ ಎಂದಿಗೂ ಆಗಕೂಡದು; ಅವರೇ ಬಂದು ನಮ್ಮನ್ನು ಹೊರಗೆ ಕರಕೊಂಡು ಹೋಗಲಿ ಎಂದು ಹೇಳಿ
- Acts 16:22–23 ಅಪೊಸ್ತಲರ ಕೃತ್ಯಗಳು 16:22–23ಸಮೂಹವು ಒಟ್ಟಾಗಿ ಕೂಡಿ ಅವರಿಗೆ ವಿರೋಧವಾಗಿ ಎದ್ದಾಗ ನ್ಯಾಯಾಧಿಪತಿಗಳು ಅವರ ವಸ್ತ್ರಗಳನ್ನು ಹರಿದು ಅವರನ್ನು ಹೊಡೆಯುವಂತೆ ಅಪ್ಪಣೆಕೊಟ್ಟರು. ಅವರನ್ನು ಬಹಳವಾಗಿ ಹೊಡೆಸಿದ ಮೇಲೆ ಅವರನ್ನು ಭದ್ರವಾಗಿ ಕಾಯಬೇಕೆಂದು ಸೆರೆಮನೆಯ ಅಧಿಕಾರಿಗೆ ಖಂಡಿತವಾಗಿ ಆಜ್ಞಾಪಿಸಿ ಸೆರೆಮನೆಯೊಳಗೆ ಹಾಕಿದರು.
- Matthew 21:35 ಮತ್ತಾಯನು 21:35ಆಗ ಒಕ್ಕಲಿಗರು ಅವನ ಸೇವಕರನ್ನು ಹಿಡಿದು ಒಬ್ಬನನ್ನು ಹೊಡೆದು ಇನ್ನೊಬ್ಬ ನನ್ನು ಕೊಂದು ಹಾಕಿದರು. ಮತ್ತೊಬ್ಬನ ಮೇಲೆ ಕಲ್ಲೆಸೆದರು.
- Acts 7:58–59 ಅಪೊಸ್ತಲರ ಕೃತ್ಯಗಳು 7:58–59ಅವನನ್ನು ಊರಹೊರಕ್ಕೆ ನೂಕಿಕೊಂಡು ಹೋಗಿ ಕಲ್ಲೆಸೆದರು. ಸಾಕ್ಷಿಯವರು ತಮ್ಮ ಬಟ್ಟೆಗಳನ್ನು ತೆಗೆದು ಸೌಲನೆಂಬ ಒಬ್ಬ ಯೌವನಸ್ಥನ ಪಾದಗಳ ಬಳಿಯಲ್ಲಿ ಇಟ್ಟರು. ಅವರು ಸ್ತೆಫನನ ಮೇಲೆ ಕಲ್ಲೆಸೆಯುತ್ತಾ ಇರಲು ಅವನು--ಕರ್ತನಾದ ಯೇಸುವೇ, ನನ್ನಾತ್ಮವನ್ನು ಸೇರಿ ಸಿಕೋ ಎಂದು ದೇವರನ್ನು ಪ್ರಾರ್ಥಿಸಿ,ಮೊಣ ಕಾಲೂರಿ--ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡವೆಂದು ಮಹಾಶಬ್ದದಿಂದ ಕೂಗಿದನು. ಇದನ್ನು ಹೇಳಿದ ತರುವಾಯ ನಿದ್ರೆಹೋದನು.
- Acts 14:5 ಅಪೊಸ್ತಲರ ಕೃತ್ಯಗಳು 14:5ಅನ್ಯಜನರೂ ಯೆಹೂದ್ಯರೂ ಕೂಡಿ ತಮ್ಮ ಅಧಿಪತಿಗಳೊಂದಿಗೆ ಅಪೊಸ್ತಲರನ್ನು ಅವಮಾನಪಡಿಸುವದಕ್ಕೂ ಕಲ್ಲೆಸೆದು ಕೊಲ್ಲುವದಕ್ಕೂ ಪ್ರವರ್ತಿಸಿದಾಗ
- Acts 22:24 ಅಪೊಸ್ತಲರ ಕೃತ್ಯಗಳು 22:24ಯಾವದಕ್ಕಾಗಿ ಅವರು ಅವನಿಗೆ ವಿರೋಧವಾಗಿ ಕೂಗಿಕೊಂಡರೆಂಬದನ್ನು ಮುಖ್ಯ ನಾಯಕನು ತಿಳುಕೊಳ್ಳುವಂತೆ ಅವನನ್ನು ಕೋಟೆ ಯೊಳಕ್ಕೆ ತರಬೇಕೆಂದು ಆಜ್ಞಾಪಿಸಿ ಕೊರಡೆಗಳಿಂದ ಹೊಡೆದು ವಿಚಾರಿಸಬೇಕೆಂದು ಅಪ್ಪಣೆಕೊಟ್ಟನು;