2 Corinthians · chapter 3 · verse 8
2 Corinthians 3:8 in Kannada
ಹೀಗಿದ್ದ ಮೇಲೆ ಆತ್ಮ ಸಂಬಂಧವಾದ ಸೇವೆಯು ಎಷ್ಟೋ ಹೆಚ್ಚಾಗಿ ಪ್ರಭಾವದಿಂದಿರುವದಲ್ಲವೇ?
Heegidda mele aatma sambandhavaada seveyu eshto hechchaagi prabhaavadindiruvadallave?
2 Corinthians 3:8 in English
- King James Version (KJV)
- How shall not the ministration of the spirit be rather glorious?
- World English Bible (WEB)
- won’t service of the Spirit be with much more glory?
- American Standard Version (ASV)
- how shall not rather the ministration of the spirit be with glory?
- Bible in Basic English (BBE)
- Will not the operation of the Spirit have a much greater glory?
- Darby Translation (DBY)
- how shall not rather the ministry of the Spirit subsist in glory?
- Webster's Bible (WBS)
- How shall not the ministration of the Spirit be rather glorious?
- Young's Literal Translation (YLT)
- how shall the ministration of the Spirit not be more in glory?
Read in context
- 6ಆತನು ನಮ್ಮನ್ನು ಸಹ ಹೊಸ ಒಡಂಬಡಿಕೆಗೆ ಸಮರ್ಥರಾದ ಸೇವಕರನ್ನಾಗಿ ಮಾಡಿದ್ದಾನೆ; ಅಕ್ಷರಕ್ಕನುಸಾರವಾಗಿ ಅಲ್ಲ; ಆತ್ಮನಿಗನು ಸಾರವಾಗಿಯೇ. ಯಾಕಂದರೆ ಅಕ್ಷರವು ಮರಣ ವನ್ನುಂಟು ಮಾಡುತ್ತದೆ; ಆತ್ಮವು ಜೀವವನ್ನುಂಟು ಮಾಡುತ್ತದೆ.
- 7ಆದರೆ ಮರಣದ ಸೇವೆಯು ಕಲ್ಲಿನ ಮೇಲೆ ಲಿಖಿತವಾದ ಅಕ್ಷರಗಳಲ್ಲಿದ್ದರೂ ಪ್ರಭಾವದಿಂದ ಕೂಡಿದ್ದಾಗಿತ್ತು; ಆ ಪ್ರಭಾವದಿಂದ ಮೋಶೆಯ ಮುಖಕ್ಕೆ ಬಂದ ಪ್ರಕಾಶವು ಕುಂದಿ ಹೋಗುವಂಥ ದ್ದಾಗಿದ್ದರೂ ಅದರ ನಿಮಿತ್ತ ಇಸ್ರಾಯೇಲ್ಯರು ಅವನ ಮುಖವನ್ನು ದೃಷ್ಟಿಸಿ ನೋಡಲಾರದೆ ಇದ್ದರು.
- 8ಹೀಗಿದ್ದ ಮೇಲೆ ಆತ್ಮ ಸಂಬಂಧವಾದ ಸೇವೆಯು ಎಷ್ಟೋ ಹೆಚ್ಚಾಗಿ ಪ್ರಭಾವದಿಂದಿರುವದಲ್ಲವೇ?
- 9ಅಪರಾಧ ನಿರ್ಣಯದ ಸೇವೆಯು ಪ್ರಭಾವದಿಂದಿರುವದಾದರೆ ನೀತಿಯ ಸೇವೆಯು ಎಷ್ಟೋ ಅಧಿಕವಾದ ಪ್ರಭಾವವುಳ್ಳದ್ದಾಗಿರಬೇಕು.
- 10ಈಗ ಅತ್ಯಧಿಕವಾದ ಪ್ರಭಾವವುಳ್ಳದ್ದು ಬಂದದ್ದರಿಂದ ಪ್ರಭಾವವಾಗಿದ್ದದ್ದು ಈ ವಿಷಯದಲ್ಲಿ ಪ್ರಭಾವ ವಿಲ್ಲದ್ದಾಯಿತು.
Cross references
- Ephesians 2:18 ಎಫೆಸದವರಿಗೆ 2:18ಆತನ ಮೂಲಕ ನಾವೂ ನೀವೂ ಒಬ್ಬ ಆತ್ಮನನ್ನೇ ಹೊಂದಿದವರಾಗಿ ತಂದೆಯ ಬಳಿಗೆ ಪ್ರವೇಶಿಸುವದಕ್ಕೆ ಮಾರ್ಗವಾಯಿತು.
- 1 Corinthians 3:16 1 ಕೊರಿಂಥದವರಿಗೆ 3:16ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ?
- 1 Peter 1:2 1 ಪೇತ್ರನು 1:2ಪವಿತ್ರಾತ್ಮನಿಂದ ಪ್ರತಿಷ್ಟಿಸಲ್ಪಟ್ಟವರಾಗಿ ವಿಧೇಯರಾ ಗುವದಕ್ಕೂ ಯೇಸು ಕ್ರಿಸ್ತನ ರಕ್ತದಿಂದ ಪ್ರೋಕ್ಷಿತರಾಗು ವದಕ್ಕೂ ತಂದೆಯಾದ ದೇವರ ಭವಿಷ್ಯದ್ ಜ್ಞಾನಾನು ಸಾರವಾಗಿ ಆರಿಸಿಕೊಳ್ಳಲ್ಪಟ್ಟವರಿಗೆ ಬರೆಯುವದೇ ನಂದರೆ--ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ದೊರೆಯಲಿ.
- 2 Thessalonians 2:13 2 ಥೆಸಲೊನೀಕದವರಿಗೆ 2:13ಕರ್ತನಿಗೆ ಪ್ರಿಯರಾಗಿರುವ ಸಹೊದರರೇ, ನೀವು ಆತ್ಮನಿಂದ ಶುದ್ಧೀಕರಿಸಲ್ಪಟ್ಟವರಾಗಿ ಸತ್ಯದ ಮೇಲೆ ನಂಬಿಕೆಯನ್ನಿಟ್ಟು ರಕ್ಷಣೆಯನ್ನು ಪಡೆಯುವದಕ್ಕಾಗಿ ದೇವರು ನಿಮ್ಮನ್ನು ಆದಿಯಿಂದ ಆರಿಸಿಕೊಂಡದ್ದರಿಂದ ನಾವು ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಕೃತಜ್ಞತಾಸ್ತುತಿ ಮಾಡುವದಕ್ಕೆ ಬದ್ದರಾಗಿದ್ದೇವೆ
- Isaiah 59:21 ಯೆಶಾಯ 59:21ಕರ್ತನು ಹೇಳುವದೇ ನಂದರೆ--ನಾನಾದರೋ ಅವರ ಸಂಗಡ ಮಾಡುವ ಒಡಂಬಡಿಕೆ ಇದೇ--ನಿನ್ನ ಮೇಲಿರುವ ನನ್ನ ಆತ್ಮನೂ ನಾನು ನಿನ್ನ ಬಾಯಲ್ಲಿ ಇಟ್ಟಿರುವ ನನ್ನ ವಾಕ್ಯಗಳೂ ಇಂದಿನಿಂದ ಸದಾಕಾಲಕ್ಕೆ ನಿನ್ನ ಬಾಯಿಂದಲೂ ನಿನ್ನ ಸಂತಾನದ ಬಾಯಿಂದಲೂ ನಿನ್ನ ಸಂತತಿಯ ಸಂತಾ ನದ ಬಾಯಿಂದಲೂ ತೊಲಗುವದಿಲ್ಲವೆಂದು ಕರ್ತನು ಹೇಳುತ್ತಾನೆ.
- Galatians 3:14 ಗಲಾತ್ಯದವರಿಗೆ 3:14ಅಬ್ರಹಾಮನಿಗೆ ಉಂಟಾದ ಆಶೀರ್ವಾದವು ಯೇಸು ಕ್ರಿಸ್ತನ ಮೂಲಕ ಆನ್ಯಜನರಿಗೆ ಉಂಟಾಗು ವಂತೆ ದೇವರು ವಾಗ್ದಾನ ಮಾಡಿದ ಆತ್ಮನು ನಮಗೆ ನಂಬಿಕೆಯ ಮೂಲಕ ದೊರಕುವಂತಾಯಿತು.
- John 1:17 ಯೋಹಾನನು 1:17ನ್ಯಾಯಪ್ರಮಾಣವು ಮೋಶೆಯ ಮುಖಾಂತರ ವಾಗಿ ಕೊಡಲ್ಪಟ್ಟಿತು; ಆದರೆ ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮುಖಾಂತರವಾಗಿ ಬಂದವು.
- Joel 2:28–29 ಯೋವೇಲ 2:28–29ಆಮೇಲೆ ಆಗುವದೇನಂದರೆ--ಎಲ್ಲಾ ಶರೀರಗಳ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ಆಗ ನಿಮ್ಮ ಕುಮಾರರೂ ಕುಮಾರ್ತೆಯರೂ ಪ್ರವಾದಿ ಸುವರು; ನಿಮ್ಮ ವೃದ್ಧರು ಕನಸುಗಳನ್ನು ಕಾಣುವರು; ನಿಮ್ಮ ಯೌವನಸ್ಥರು ದರ್ಶನಗಳನ್ನು ನೋಡುವರು. ದಾಸರ ಮೇಲೆಯೂ ದಾಸಿಯರ ಮೇಲೆಯೂ ಆ ದಿವಸಗಳಲ್ಲಿ ನನ್ನ ಆತ್ಮವನ್ನು ಸುರಿಸುವೆನು.
- Galatians 5:22–23 ಗಲಾತ್ಯದವರಿಗೆ 5:22–23ಆದರೆ ಆತ್ಮನ ಫಲವೇನಂದರೆ--ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ವಿನಯ ಸದ್ಗುಣ ನಂಬಿಕೆ ಸಾತ್ವಿಕತ್ವ ಮಿತವ್ಯಯ ಇಂಥ ವುಗಳೇ; ಇಂಥವುಗಳಿಗೆ ವಿರೋಧವಾಗಿ ನ್ಯಾಯ ಪ್ರಮಾಣವಿಲ್ಲ.
- Isaiah 44:3 ಯೆಶಾಯ 44:3ನಾನು ಬಾಯಾರಿ ದವನ ಮೇಲೆ ನೀರನ್ನು ಸುರಿಸುವೆನು; ಒಣನೆಲದ ಮೇಲೆ ಪ್ರವಾಹಗಳನ್ನು ಬರಮಾಡುವೆನು; ನಿನ್ನ ಸಂತಾನದವರಲ್ಲಿ ನನ್ನ ಆತ್ಮವನ್ನೂ ನಿನ್ನಿಂದ ಹುಟ್ಟು ವಂಥದ್ದರ ಮೇಲೆ ನನ್ನ ಆಶೀರ್ವಾದವನ್ನೂ ಸುರಿಸು ವೆನು.
- Isaiah 11:2 ಯೆಶಾಯ 11:2ಅವನ ಮೇಲೆ ಜ್ಞಾನ ವಿವೇಕ ದಾಯಕ ಆತ್ಮ, ಆಲೋಚನಾ ಪರಾಕ್ರಮದ ಆತ್ಮ,ತಿಳುವಳಿಕೆಯ ಆತ್ಮ ಕರ್ತನ ಭಯದ ಆತ್ಮ, ಅಂತೂ ಕರ್ತನ ಆತ್ಮನು ನೆಲೆಯಾಗುವನು;
- Galatians 5:5 ಗಲಾತ್ಯದವರಿಗೆ 5:5ನಾವಾದರೋ ಆತ್ಮನ ಮೂಲಕ ನಂಬಿಕೆಯಿಂದಾದ ನೀತಿಯ ನಿರೀಕ್ಷೆಗಾಗಿ ಎದುರು ನೋಡುತ್ತೇವೆ.