2 Corinthians · chapter 6 · verse 15
2 Corinthians 6:15 in Kannada
ಬೆಲಿಯಾಳನ ಕೂಡ ಕ್ರಿಸ್ತನಿಗೆ ಒಪ್ಪಂದವೇನು? ನಂಬದಿರುವವನ ಕೂಡ ನಂಬುವ ವನಿಗೆ ಪಾಲುಗಾರಿಕೆ ಏನು?
Beliyaalana kooda kristanige oppandavenu? Nambadiruvavana kooda nambuva vanige paalugaarike enu?
2 Corinthians 6:15 in English
- King James Version (KJV)
- And what concord hath Christ with Belial? or what part hath he that believeth with an infidel?
- World English Bible (WEB)
- What agreement does Christ have with Belial? Or what portion does a believer have with an unbeliever?
- American Standard Version (ASV)
- And what concord hath Christ with Belial? or what portion hath a believer with an unbeliever?
- Bible in Basic English (BBE)
- And what agreement is there between Christ and the Evil One? or what part has one who has faith with one who has not?
- Darby Translation (DBY)
- and what consent of Christ with Beliar, or what part for a believer along with an unbeliever?
- Webster's Bible (WBS)
- And what concord hath Christ with Belial? or what part hath he that believeth with an infidel?
- Young's Literal Translation (YLT)
- and what fellowship to light with darkness? and what concord to Christ with Belial? or what part to a believer with an unbeliever?
Read in context
- 13ನಿಮ್ಮ ವಿಷಯದಲ್ಲಿ ನಮ್ಮ ಅಂತಃ ಕರುಣೆಯ ಫಲವಾಗಿ ನೀವು ನಿಮ್ಮ ಹೃದಯವನ್ನು ವಿಶಾಲಮಾಡಿಕೊಳ್ಳಿರಿ; (ನೀವು ನನ್ನ ಮಕ್ಕಳೆಂದು ನಾನು ಹೇಳುತ್ತೇನೆ).
- 14ನೀವು ಅವಿಶ್ವಾಸಿಗಳೊಂದಿಗೆ ಸೇರಿ ಸಮವಲ್ಲದ ನೊಗವನ್ನು ಹೊರಬೇಡಿರಿ; ಯಾಕಂದರೆ ಅನೀತಿಯ ಕೂಡ ನೀತಿಗೆ ಅನ್ಯೋನ್ಯತೆ ಏನು? ಕತ್ತಲೆಯ ಕೂಡ ಬೆಳಕಿಗೆ ಐಕ್ಯವೇನು?
- 15ಬೆಲಿಯಾಳನ ಕೂಡ ಕ್ರಿಸ್ತನಿಗೆ ಒಪ್ಪಂದವೇನು? ನಂಬದಿರುವವನ ಕೂಡ ನಂಬುವ ವನಿಗೆ ಪಾಲುಗಾರಿಕೆ ಏನು?
- 16ವಿಗ್ರಹಗಳ ಕೂಡ ದೇವರ ಮಂದಿರಕ್ಕೆ ಒಪ್ಪಿಗೆ ಏನು? ಯಾಕಂದರೆ ನೀವು ಜೀವವುಳ್ಳ ದೇವರ ಮಂದಿರವಾಗಿದ್ದೀರಲ್ಲಾ, ಇದರ ಸಂಬಂಧವಾಗಿ ದೇವರು--ನಾನು ಅವರಲ್ಲಿ ವಾಸಿಸುತ್ತಾ ತಿರುಗಾಡುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಹೇಳಿದ್ದಾನೆ.
- 17ಆದದರಿಂದ--ಅವರ ಮಧ್ಯದಲ್ಲಿಂದ ನೀವು ಹೊರಗೆ ಬಂದು ಪ್ರತ್ಯೇಕವಾಗಿರಿ. ಇದಲ್ಲದೆ ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ.ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ ಕುಮಾರ್ತೆಯರಾಗಿರುವಿರಿ ಎಂದು ಸರ್ವಶಕ್ತನಾದ ಕರ್ತನು ಹೇಳುತ್ತಾನೆ.
Cross references
- 1 Corinthians 10:20–21 1 ಕೊರಿಂಥದವರಿಗೆ 10:20–21ಆದರೆ ಅನ್ಯಜನರು ಯಜ್ಞಾರ್ಪಣೆ ಮಾಡುವದು ದೆವ್ವಗಳಿಗೆ, ದೇವರಿಗಲ್ಲ; ನೀವು ದೆವ್ವಗಳೊಂದಿಗೆ ಅನ್ಯೋನ್ಯವಾಗಿರಬೇಕೆಂದು ನಾನು ಇಷ್ಟಪಡುವದಿಲ್ಲ. ನೀವು ಕರ್ತನಪಾತ್ರೆ ಯಲ್ಲಿಯೂ ದೆವ್ವಗಳ ಪಾತ್ರೆಯಲ್ಲಿಯೂ ಕುಡಿಯ ಲಾರಿರಿ; ನೀವು ಕರ್ತನ ಮೇಜಿನಲ್ಲಿಯೂ ದೆವ್ವಗಳ ಮೇಜಿನಲ್ಲಿಯೂ ಪಾಲುಗಾರರಾಗಲಾರಿರಿ.
- 1 John 5:11–13 1 ಯೋಹಾನನು 5:11–13ಆ ಸಾಕ್ಷಿ ಯಾವದಂದರೆ ದೇವರು ನಮಗೆ ನಿತ್ಯಜೀವವನ್ನು ಅನುಗ್ರಹಿಸಿದನು.ಈ ಜೀವವು ಆತನ ಮಗನಲ್ಲಿ ಅದೆ ಎಂಬದೇ. ಯಾವನಲ್ಲಿ (ದೇವರ) ಮಗನು ಇದ್ದಾನೋ ಅವನಿಗೆ ಜೀವ ಉಂಟು; ಯಾವನಲ್ಲಿ ದೇವರ ಮಗನು ಇರುವ ದಿಲ್ಲವೋ ಅವನಿಗೆ ಜೀವವಿಲ್ಲ. ನಿಮಗೆ ನಿತ್ಯಜೀವವು ಉಂಟೆಂದು ನೀವು ತಿಳಿಯುವ ಹಾಗೆಯೂ ನೀವು ದೇವರ ಮಗನ ಹೆಸರಿನಲ್ಲಿ ನಂಬಿಕೆಯಿಡುವ ಹಾಗೆಯೂ ದೇವರ ಮಗನ ಹೆಸರಿನಲ್ಲಿ ನಂಬಿಕೆಯಿಡುವ ನಿಮಗೆ ಇವು ಗಳನ್ನು ಬರೆದಿದ್ದೇನೆ.
- 1 Kings 18:21 1 ಅರಸುಗಳು 18:21ಆಗ ಎಲೀಯನು ಸಕಲ ಜನರ ಬಳಿಗೆ ಬಂದು--ನೀವು ಎರಡು ಅಭಿಪ್ರಾಯಗಳ ಮಧ್ಯದಲ್ಲಿ ಎಷ್ಟರ ವರೆಗೂ ನಿಂತವರಾಗಿ ಇರುವಿರಿ. ಕರ್ತನು ದೇವರಾಗಿದ್ದರೆ ಆತನನ್ನು ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ ಅವನನ್ನು ಹಿಂಬಾಲಿಸಿರಿ ಅಂದನು. ಜನರು ಅವನಿಗೆ ಒಂದು ಮಾತಾದರೂ ಹೇಳಲಿಲ್ಲ.
- 1 Samuel 5:2–4 1 ಸಮುವೇಲನು 5:2–4ಫಿಲಿಷ್ಟಿಯರು ದೇವರ ಮಂಜೂಷವನ್ನು ತಕ್ಕೊಂಡು ಬಂದು ದಾಗೋನನ ಮನೆಯಲ್ಲಿ ದಾಗೋನನ ಬಳಿಯಲ್ಲಿಟ್ಟರು. ಆದರೆ ಅಷ್ಡೋದ್ಯರು ಮಾರನೆ ದಿವಸ ಬೆಳಿಗ್ಗೆ ಬಂದಾಗ ಇಗೋ, ದಾಗೋನ್ ಕರ್ತನ ಮಂಜೂಷದ ಮುಂದೆ ಬೋರಲು ಬಿದ್ದಿತ್ತು. ಆಗ ಅವರು ದಾಗೋನನನ್ನು ತೆಗೆದು ಅದನ್ನು ಅದರ ಸ್ಥಳದಲ್ಲಿ ತಿರಿಗಿ ಇಟ್ಟರು. ಅವರು ಮಾರನೆ ದಿವಸ ಬೆಳಿಗ್ಗೆ ಬಂದಾಗ ಇಗೋ, ದಾಗೋನ್ ಕರ್ತನ ಮಂಜೂಷದ ಮುಂದೆ ಬೋರಲು ಬಿದ್ದಿತ್ತು; ದಾಗೋನನ ತಲೆಯೂ ಅದರ ಎರಡು ಕೈಗಳೂ ಹೊಸ್ತಿಲ ಮೇಲೆ ಕಡಿಯಲ್ಪಟ್ಟು ಬಿದ್ದಿದ್ದವು; ಮುಂಡ ಮಾತ್ರ ಅದಕ್ಕೆ ಉಳಿದಿತ್ತು.
- Mark 16:16 ಮಾರ್ಕನು 16:16ನಂಬಿ ಬಾಪ್ತಿಸ್ಮ ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು. ಆದರೆ ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು.
- Acts 8:20 ಅಪೊಸ್ತಲರ ಕೃತ್ಯಗಳು 8:20ಆದರೆ ಪೇತ್ರನು ಅವನಿಗೆ--ನಿನ್ನ ಹಣವು ನಿನ್ನ ಕೂಡ ಹಾಳಾಗಿ ಹೋಗಲಿ; ನೀನು ದೇವರ ದಾನವನ್ನು ಹಣಕ್ಕೆ ಕೊಂಡುಕೊಳ್ಳಬಹುದೆಂದು ಯೋಚಿಸುತ್ತೀ ಯಲ್ಲಾ.
- Ezra 4:3 ಎಜ್ರನು 4:3ಆದರೆ ಜೆರುಬ್ಬಾ ಬೆಲನೂ ಯೇಷೂವನೂ ಮಿಕ್ಕಾದ ಇಸ್ರಾಯೇಲಿನ ಪಿತೃಗಳಲ್ಲಿ ಮುಖ್ಯಸ್ಥರೂ ಅವರಿಗೆ--ನಮ್ಮ ದೇವರಿಗೆ ಆಲಯವನ್ನು ಕಟ್ಟುವದಕ್ಕೆ ನಮಗೂ ನಿಮಗೂ ಏನು? ಪಾರಸಿಯರ ಅರಸನಾದ ಕೋರೆಷನೆಂಬ ಅರಸನು ನಮಗೆ ಆಜ್ಞಾಪಿಸಿದ ಹಾಗೆ ನಾವು ಇಸ್ರಾ ಯೇಲ್ ದೇವರಾಗಿರುವ ಕರ್ತನಿಗೆ ಅದನ್ನು ಕಟ್ಟು ವೆವು ಅಂದರು.
- Acts 5:14 ಅಪೊಸ್ತಲರ ಕೃತ್ಯಗಳು 5:14ವಿಶ್ವಾಸಿಗಳಾದ ಬಹಳ ಸ್ತ್ರೀ ಪುರುಷರ ಸಮೂಹದ ವರು ಕರ್ತನಲ್ಲಿ ಸೇರಿಕೊಂಡರು.
- 1 Timothy 5:8 1 ತಿಮೊಥೆಯನಿಗೆ 5:8ಯಾವನಾದರೂ ಸ್ವಂತದವರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ನಂಬಿಕೆಯನ್ನು ಅಲ್ಲಗಳೆ ದವನು ನಂಬದವನಿಗಿಂತ ಕೆಟ್ಟವನೂ ಆಗಿದ್ದಾನೆ.