2 Corinthians · chapter 6 · verse 13
2 Corinthians 6:13 in Kannada
ನಿಮ್ಮ ವಿಷಯದಲ್ಲಿ ನಮ್ಮ ಅಂತಃ ಕರುಣೆಯ ಫಲವಾಗಿ ನೀವು ನಿಮ್ಮ ಹೃದಯವನ್ನು ವಿಶಾಲಮಾಡಿಕೊಳ್ಳಿರಿ; (ನೀವು ನನ್ನ ಮಕ್ಕಳೆಂದು ನಾನು ಹೇಳುತ್ತೇನೆ).
Nimma vishayadalli namma antah karuneya phalavaagi neevu nimma hrudayavannu vishaalamaadikolliri; (neevu nanna makkalendu naanu heluttene).
2 Corinthians 6:13 in English
- King James Version (KJV)
- Now for a recompence in the same, (I speak as unto [my] children,) be ye also enlarged.
- World English Bible (WEB)
- Now in return—I speak as to my children—you also open your hearts.
- American Standard Version (ASV)
- Now for a recompense in like kind (I speak as unto [my] children), be ye also enlarged.
- Bible in Basic English (BBE)
- Now to give me back payment of the same sort (I am talking as to my children), let your hearts be wide open to me.
- Darby Translation (DBY)
- but for an answering recompense, (I speak as to children,) let your heart also expand itself.
- Webster's Bible (WBS)
- Now for a recompense in the same (I speak as to [my] children,) be ye also enlarged.
- Young's Literal Translation (YLT)
- and [as] a recompense of the same kind, (as to children I say [it],) be ye enlarged — also ye!
Read in context
- 11ಓ ಕೊರಿಂಥದವರೇ, ನಮ್ಮ ಹೃದಯವು ವಿಶಾಲವಾಗಿರುವದರಿಂದ ನಾವು ನಿಮ್ಮೊಡನೆ ಧಾರಳವಾಗಿ ಮಾತನಾಡುತ್ತಾ ಇದ್ದೇವೆ;
- 12ನಿಮ್ಮ ಮೇಲಿರುವ ನಮ್ಮ ಪ್ರೀತಿಯು ಸಂಕೋಚವಾದದ್ದಲ್ಲ, ನಮ್ಮ ವಿಷಯದಲ್ಲಿ ನಿಮ್ಮ ಪ್ರೀತಿಯೇ ಸಂಕೋಚ ವಾದದ್ದು.
- 13ನಿಮ್ಮ ವಿಷಯದಲ್ಲಿ ನಮ್ಮ ಅಂತಃ ಕರುಣೆಯ ಫಲವಾಗಿ ನೀವು ನಿಮ್ಮ ಹೃದಯವನ್ನು ವಿಶಾಲಮಾಡಿಕೊಳ್ಳಿರಿ; (ನೀವು ನನ್ನ ಮಕ್ಕಳೆಂದು ನಾನು ಹೇಳುತ್ತೇನೆ).
- 14ನೀವು ಅವಿಶ್ವಾಸಿಗಳೊಂದಿಗೆ ಸೇರಿ ಸಮವಲ್ಲದ ನೊಗವನ್ನು ಹೊರಬೇಡಿರಿ; ಯಾಕಂದರೆ ಅನೀತಿಯ ಕೂಡ ನೀತಿಗೆ ಅನ್ಯೋನ್ಯತೆ ಏನು? ಕತ್ತಲೆಯ ಕೂಡ ಬೆಳಕಿಗೆ ಐಕ್ಯವೇನು?
- 15ಬೆಲಿಯಾಳನ ಕೂಡ ಕ್ರಿಸ್ತನಿಗೆ ಒಪ್ಪಂದವೇನು? ನಂಬದಿರುವವನ ಕೂಡ ನಂಬುವ ವನಿಗೆ ಪಾಲುಗಾರಿಕೆ ಏನು?
Cross references
- 1 John 3:18 1 ಯೋಹಾನನು 3:18ನನ್ನ ಚಿಕ್ಕ ಮಕ್ಕಳೇ, ನೀವು ಮಾತಿನಿಂದಾಗಲಿ ನಾಲಿಗೆಯಿಂದಾಗಲಿ ಪ್ರೀತಿಸುವವರಾಗಿರದೆ ಕ್ರಿಯೆಯಲ್ಲಿಯೂ ಸತ್ಯದ ಲ್ಲಿಯೂ ಪ್ರೀತಿಸುವವರಾಗಿರಬೇಕು.
- 3 John 1:4 3 ಯೋಹಾನನು 1:4ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವ ದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.
- 1 Corinthians 4:14–15 1 ಕೊರಿಂಥದವರಿಗೆ 4:14–15ನಿಮ್ಮನ್ನು ನಾಚಿಕೆಪಡಿಸುವದಕ್ಕಾಗಿ ಬರೆಯದೆ ನನ್ನ ಪ್ರಿಯ ಮಕ್ಕಳೆಂದು ಭಾವಿಸಿ ನಿಮ್ಮನ್ನು ಎಚ್ಚರಿಸುವ ದಕ್ಕಾಗಿಯೇ ಈ ಮಾತುಗಳನ್ನು ಬರೆದಿದ್ದೇನೆ. ನಿಮಗೆ ಕ್ರಿಸ್ತನಲ್ಲಿ ಉಪಾಧ್ಯಾಯರು ಹತ್ತು ಸಾವಿರ ಮಂದಿ ಇದ್ದರೂ ತಂದೆಗಳು ಬಹು ಮಂದಿ ಇಲ್ಲ; ನಾನೇ ನಿಮ್ಮನ್ನು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ಪಡೆದೆನು.
- 1 John 2:1 1 ಯೋಹಾನನು 2:1ನನ್ನ ಚಿಕ್ಕಮಕ್ಕಳೇ, ನೀವು ಪಾಪಮಾಡ ದಂತೆ ಇವುಗಳನ್ನು ನಾನು ನಿಮಗೆ ಬರೆಯು ತ್ತೇನೆ. ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನು ನಮಗೆ ಪಕ್ಷವಾದಿಯಾಗಿದ್ದಾನೆ.
- 1 John 3:7 1 ಯೋಹಾನನು 3:7ಚಿಕ್ಕ ಮಕ್ಕಳೇ, ಯಾರೂ ನಿಮ್ಮನ್ನು ಮೋಸಗೊಳಿಸದಿರಲಿ. ಆತನು ಹೇಗೆ ನೀತಿವಂತ ನಾಗಿದ್ದಾನೋ ಹಾಗೆಯೇ ನೀತಿಯನ್ನನುಸರಿಸುವವನು ನೀತಿವಂತನಾಗಿದ್ದಾನೆ.
- 1 Thessalonians 2:11 1 ಥೆಸಲೊನೀಕದವರಿಗೆ 2:11ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಬುದ್ದಿ ಹೇಳುತ್ತಾ ಆದರಿಸುತ್ತಾ ಬಂದೆವು.
- 1 John 5:14–15 1 ಯೋಹಾನನು 5:14–15ನಾವು ಆತನ ಚಿತ್ತಾನುಸಾರ ವಾಗಿ ಏನಾದರೂ ಬೇಡಿಕೊಂಡರೆ ಆತನು ಕೇಳು ತ್ತಾನೆಂಬ ಭರವಸವು ಆತನಲ್ಲಿ ನಮಗುಂಟು. ನಾವು ಏನು ಬೇಡಿಕೊಂಡರೂ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬದು ನಮಗೆ ಗೊತ್ತಾಗಿದ್ದರೆ ನಾವು ಆಶಿಸಿದವುಗಳು ಆತನಿಂದ ನಮಗೆ ದೊರೆತವೆಂಬದು ನಮಗೆ ತಿಳಿದದೆ.
- Matthew 17:19–20 ಮತ್ತಾಯನು 17:19–20ತರುವಾಯ ಶಿಷ್ಯರು ವಿಂಗಡವಾಗಿ ಯೇಸುವಿನ ಬಳಿಗೆ ಬಂದು--ಅದನ್ನು ಬಿಡಿಸುವದಕ್ಕೆ ನಮಗೆ ಯಾಕೆ ಆಗಲಿಲ್ಲ ಎಂದು ಕೇಳಿದರು. ಯೇಸು ಅವರಿಗೆ--ನಿಮ್ಮ ಅಪನಂಬಿಕೆಯ ದೆಸೆಯಿಂದಲೇ; ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ಸಾಸಿವೆ ಕಾಳಷ್ಟು ನಂಬಿಕೆ ನಿಮಗಿರುವದಾದರೆ ನೀವು ಈ ಬೆಟ್ಟಕ್ಕೆ--ಇಲ್ಲಿಂದ ಆ ಸ್ಥಳಕ್ಕೆ ಹೋಗು ಎಂದು ಹೇಳಿದರೆ ಅದು ಹೋಗುವದು; ಮತ್ತು ಯಾವದೂ ನಿಮಗೆ ಅಸಾಧ್ಯವಾಗಿರುವದಿಲ್ಲ.
- Mark 6:4–6 ಮಾರ್ಕನು 6:4–6ಅದಕ್ಕೆ ಯೇಸು ಅವರಿಗೆ--ಪ್ರವಾದಿಗೆ ಬೇರೆ ಎಲ್ಲಿ ಯಾದರೂ ಮರ್ಯಾದೆ ಉಂಟು; ಆದರೆ ಸ್ವದೇಶದಲ್ಲಿಯೂ ಸ್ವಂತ ಜನರಲ್ಲಿಯೂ ಸ್ವಂತ ಮನೆಯಲ್ಲಿಯೂ ಇಲ್ಲ ಎಂದು ಹೇಳಿದನು. ಆತನು ಅಲ್ಲಿ ಕೆಲವು ರೋಗಿಗಳ ಮೇಲೆ ತನ್ನ ಕೈಗಳನ್ನಿಟ್ಟು ಸ್ವಸ್ಥಪಡಿಸಿದನೇ ಹೊರತು ಬೇರೆ ಯಾವ ಮಹತ್ಕಾರ್ಯವನ್ನೂ ಮಾಡುವದಕ್ಕಾಗಲಿಲ್ಲ. ಆತನು ಅವರ ಅಪನಂಬಿಕೆ ಯ ದೆಸೆಯಿಂದ ಆಶ್ಚರ್ಯಪಟ್ಟನು; ಮತ್ತು ಸುತ್ತಲಿನ ಹಳ್ಳಿಗಳಿಗೆ ಹೋಗಿ ಬೋಧಿಸುತ್ತಾ ಇದ್ದನು.
- Hebrews 12:5–6 ಇಬ್ರಿಯರಿಗೆ 12:5–6ಮಕ್ಕಳಿಗೆ ಹೇಳುವಂತೆ ನಿಮಗೆ ಹೇಳಿದ ಎಚ್ಚರಿಕೆಯ ಮಾತನ್ನು ಮರೆತುಬಿಟ್ಟಿದ್ದೀರೋ? ಏನಂದರೆ--ನನ್ನ ಮಗನೇ, ಕರ್ತನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ; ಇಲ್ಲವೆ ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳ ಬೇಡ; ಕರ್ತನು ತಾನು ಪ್ರೀತಿಸುವವನನ್ನೇ ಶಿಕ್ಷಿಸು ತ್ತಾನೆ; ತಾನು ಸೇರಿಸಿಕೊಳ್ಳುವ ಪ್ರತಿಯೊಬ್ಬ ಮಗನನ್ನು ಹೊಡೆಯುತ್ತಾನೆ ಎಂಬದು.
- Galatians 4:12 ಗಲಾತ್ಯದವರಿಗೆ 4:12ಸಹೋದರರೇ, ನಾನು ನಿಮ್ಮ ಹಾಗೆ ಆದದ್ದ ರಿಂದ ನೀವೂ ನನ್ನ ಹಾಗೆ ಆಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ನನಗೇನೂ ಕೇಡು ಮಾಡ ಲಿಲ್ಲ.
- 2 Kings 13:14–19 2 ಅರಸುಗಳು 13:14–19ಆಗ ಎಲೀಷನು ಮರಣಕರವಾದ ವ್ಯಾಧಿ ಯಿಂದ ಬಿದ್ದು ಸತ್ತಾಗ ಇಸ್ರಾಯೇಲಿನ ಅರಸನಾದ ಯೋವಾಷನು ಅವನ ಬಳಿಗೆ ಬಂದು ಅವನ ಮುಂದೆ ಬಿದ್ದು ಅತ್ತು ಅವನಿಗೆ--ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲಿನ ರಥವೂ ಅದರ ಕುದುರೆ ರಾಹುತನೂ ಆದವನೇ ಅಂದನು. ಆಗ ಎಲೀಷನು ಅವನಿಗೆ--ಬಿಲ್ಲನ್ನೂ ಬಾಣಗಳನ್ನೂ ತಕ್ಕೋ ಅಂದನು. ಅವನು ಬಿಲ್ಲು ಬಾಣಗಳನ್ನು ತಕ್ಕೊಂಡನು. ಅವನು ಇಸ್ರಾಯೇಲಿನ ಅರಸನಿಗೆ--ನಿನ್ನ ಕೈಯನ್ನು ಬಿಲ್ಲಿನ ಮೇಲೆ ಇರಿಸು ಅಂದನು. ಅವನು ತನ್ನ ಕೈಯನ್ನು ಇರಿಸಿದನು. ಎಲೀಷನು ತನ್ನ ಕೈಗಳನ್ನು ಅರಸನ ಕೈಗಳ ಮೇಲೆ ಇಟ್ಟನು. ಆಗ ಅವನು--ಮೂಡಲಲ್ಲಿರುವ ಕಿಟಕಿಯನ್ನು ತೆರೆ ಅಂದನು. ಅವನು ತೆರೆದನು. ಎಲೀಷನು--ಎಸೆ ಅಂದನು. ಅವನು ಎಸೆದನು. ಇದು ಕರ್ತನ ರಕ್ಷಣೆಯ ಬಾಣ; ಅರಾಮ್ಯರಿಂದ ತಪ್ಪಿಸುವ ರಕ್ಷಣೆಯ ಬಾಣವೇ, ಏನಂದರೆ ಅಫೇಕದಲ್ಲಿ ಅರಾಮ್ಯರನ್ನು ನಾಶಮಾಡುವ ವರೆಗೂ ಅವರನ್ನು ಹೊಡೆ ಯುವಿ ಅಂದನು. ಅವನು--ಬಾಣಗಳನ್ನು ತಕ್ಕೋ ಅಂದನು. ಅವನು ತಕ್ಕೊಂಡನು. ಅವನು ಇಸ್ರಾ ಯೇಲಿನ ಅರಸನಿಗೆ -- ನೆಲದ ಮೇಲೆ ಹೊಡೆ ಅಂದನು. ಆಗ ಅವನು ಮೂರು ಸಾರಿ ಹೊಡೆದು ನಿಂತನು. ಆದರೆ ದೇವರ ಮನುಷ್ಯನು ಅವನ ಮೇಲೆ ರೌದ್ರವುಳ್ಳವನಾಗಿ--ನೀನು ಐದಾರು ಸಾರಿ ಹೊಡೆ ಯಬೇಕಾಗಿತ್ತು; ಆಗ ಅರಾಮ್ಯರನ್ನು ನಾಶಮಾಡುವ ವರೆಗೂ ಹೊಡೆಯುತ್ತಿದ್ದಿ; ಆದರೆ ಈಗ ಅರಾಮ್ಯರನ್ನು ಮೂರು ಸಾರಿ ಹೊಡೆಯುವಿ ಅಂದನು.