2 Corinthians · chapter 6 · verse 5
2 Corinthians 6:5 in Kannada
ಪೆಟ್ಟುಗಳಲ್ಲಿಯೂ ಸೆರೆಮನೆಗಳಲ್ಲಿಯೂ ಕಲಹಗಳ ಲ್ಲಿಯೂ ಪ್ರಯಾಸಗಳಲ್ಲಿಯೂ ನಿದ್ದೆಗೇಡುಗಳಲ್ಲಿಯೂ ಉಪವಾಸಗಳಲ್ಲಿಯೂ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗ ಮಾಡಿಕೊಳ್ಳುತ್ತೇವೆ.
Pettugalalliyoo seremanegalalliyoo kalahagala lliyoo prayaasagalalliyoo niddegedugalalliyoo upavaasagalalliyoo devara sevakarendu nammannu sammataraaga maadikollutteve.
2 Corinthians 6:5 in English
- King James Version (KJV)
- In stripes, in imprisonments, in tumults, in labours, in watchings, in fastings;
- World English Bible (WEB)
- in beatings, in imprisonments, in riots, in labors, in watchings, in fastings,
- American Standard Version (ASV)
- in stripes, in imprisonments, in tumults, in labors, in watchings, in fastings;
- Bible in Basic English (BBE)
- In blows, in prisons, in attacks, in hard work, in watchings, in going without food;
- Darby Translation (DBY)
- in stripes, in prisons, in riots, in labours, in watchings, in fastings,
- Webster's Bible (WBS)
- In stripes, in imprisonments, in tumults, in labors, in watchings, in fastings;
- Young's Literal Translation (YLT)
- in stripes, in imprisonments, in insurrections, in labours, in watchings, in fastings,
Read in context
- 3ಸೇವೆಯು ದೂಷಿಸಲ್ಪಡದಂತೆ ಯಾವ ವಿಷಯ ದಲ್ಲಿಯೂ ನಿಂದೆಗೆ ಅವಕಾಶ ಕೊಡಬೇಡಿರಿ;
- 4ಆದರೆ ಎಲ್ಲಾ ಸಂಗತಿಗಳಲ್ಲಿ ಹೆಚ್ಚು ತಾಳ್ಮೆಯಲ್ಲಿಯೂ ಸಂಕಟ ಗಳಲ್ಲಿಯೂ ಕೊರತೆಗಳಲ್ಲಿಯೂ ಇಕ್ಕಟ್ಟುಗಳಲ್ಲಿಯೂ
- 5ಪೆಟ್ಟುಗಳಲ್ಲಿಯೂ ಸೆರೆಮನೆಗಳಲ್ಲಿಯೂ ಕಲಹಗಳ ಲ್ಲಿಯೂ ಪ್ರಯಾಸಗಳಲ್ಲಿಯೂ ನಿದ್ದೆಗೇಡುಗಳಲ್ಲಿಯೂ ಉಪವಾಸಗಳಲ್ಲಿಯೂ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗ ಮಾಡಿಕೊಳ್ಳುತ್ತೇವೆ.
- 6ಶುದ್ಧತೆಯಿಂದ, ಜ್ಞಾನದಿಂದ, ದೀರ್ಘಶಾಂತಿಯಿಂದ, ದಯೆಯಿಂದ, ಪವಿತ್ರಾತ್ಮನಿಂದ, ಕಪಟವಿಲ್ಲದ ಪ್ರೀತಿಯಿಂದ,
- 7ಸತ್ಯವಾಕ್ಯದಿಂದ, ದೇವರ ಶಕ್ತಿಯಿಂದ, ಎಡಬಲಗೈ ಗಳಲ್ಲಿ ನೀತಿಯೆಂಬ ಆಯುಧಗಳಿಂದ,
Cross references
- 2 Corinthians 11:23–25 2 ಕೊರಿಂಥದವರಿಗೆ 11:23–25ಅವರು ಕ್ರಿಸ್ತನ ಸೇವಕರೋ? (ನಾನು ಬುದ್ಧಿಹೀನನಂತೆ ಮಾತನಾಡು ತ್ತೇನೆ) ಅವರಿಗಿಂತ ನಾನು ಹೆಚ್ಚಾಗಿ ಸೇವೆ ಮಾಡುವವ ನಾಗಿದ್ದೇನೆ; ಹೆಚ್ಚಾಗಿ ಪ್ರಯಾಸಪಟ್ಟೆನು. ಮಿತಿವಿಾರಿ ಪೆಟ್ಟುಗಳನ್ನು ತಿಂದೆನು; ಹೆಚ್ಚಾಗಿ ಸೆರೆಮನೆಗಳಲ್ಲಿ ಬಿದ್ದೆನು; ಅನೇಕ ಸಾರಿ ಮರಣಗಳಲ್ಲಿ ಸಿಕ್ಕಿಕೊಂಡೆನು. ಐದು ಸಾರಿ ಯೆಹೂದ್ಯರಿಂದ ನನಗೆ ಒಂದು ಕಡಿಮೆ ನಾಲ್ವತ್ತು ಏಟುಗಳು ಬಿದ್ದವು; ನಾನು ಮೂರು ಸಾರಿ ಚಡಿಗಳಿಂದ ಹೊಡಿಸಿಕೊಂಡೆನು. ಒಂದು ಸಾರಿ ನನ್ನ ಮೇಲೆ (ಕೊಲ್ಲುವದಕ್ಕೆ) ಕಲ್ಲೆಸೆದರು; ಮೂರು ಸಾರಿ ನಾನಿದ್ದ ಹಡಗು ಒಡೆದುಹೋಯಿತು; ಒಂದು ರಾತ್ರಿ ಒಂದು ಹಗಲು ಸಮುದ್ರದಲ್ಲಿ ಇದ್ದೆನು.
- 2 Corinthians 11:27 2 ಕೊರಿಂಥದವರಿಗೆ 11:27ಪ್ರಯಾಸ ಪರಿಶ್ರಮಗಳಿಂದ ಆನೇಕ ಸಾರಿ ನಿದ್ದೆಗೆಟ್ಟು ಹಸಿವೆ ಬಾಯಾರಿಕೆಗಳನ್ನ ನುಭವಿಸಿ ಅನೇಕ ಸಾರಿ ಉಪವಾಸವಾಗಿಯೂ ಚಳಿಯಲ್ಲಿಯೂ ವಸ್ತ್ರವಿಲ್ಲದೆಯೂ ಇದ್ದು ಆತನನ್ನು ಸೇವಿಸಿದ್ದೇನೆ.
- Acts 19:23–34 ಅಪೊಸ್ತಲರ ಕೃತ್ಯಗಳು 19:23–34ಅದೇ ಸಮಯದಲ್ಲಿ ಆ ಮಾರ್ಗದ ವಿಷಯವಾಗಿ ಬಹಳ ಗಲಭೆ ಹುಟ್ಟಿತು. ಹೇಗಂದರೆ ದೇಮೇತ್ರಿಯನೆಂಬ ಒಬ್ಬ ಅಕ್ಕಸಾಲಿಗನು ಬೆಳ್ಳಿಯಿಂದ ಡಯಾನಿಗೆ ಗುಡಿಗಳನ್ನು ಮಾಡಿಸುವವನಾಗಿದ್ದು ಆ ಕಸಬಿನವರಿಗೆ ಬಹಳ ಲಾಭವನ್ನುಂಟುಮಾಡುತ್ತಿದ್ದನು. ಅವನು ಅವರನ್ನೂ ಆ ಕಸಬಿನ ಸಂಬಂಧವಾದ ಕೆಲಸದವರನ್ನೂ ಒಟ್ಟಿಗೆ ಕರೆಯಿಸಿ ಅವರಿಗೆ--ಅಯ್ಯ ಗಳಿರಾ, ಈ ಕೆಲಸದಿಂದ ನಮಗೆ ಐಶ್ವರ್ಯ ಉಂಟಾ ಗುತ್ತದೆಂದು ನೀವು ಬಲ್ಲಿರಿ. ಆದರೆ ಕೈಯಿಂದ ಮಾಡಿದವುಗಳು ದೇವರುಗಳಲ್ಲವೆಂದು ಈ ಪೌಲನು ಹೇಳಿ ಎಫೆಸದಲ್ಲಿ ಮಾತ್ರವಲ್ಲದೆ ಸ್ವಲ್ಪ ಕಡಿಮೆ ಆಸ್ಯ ಸೀಮೆಯಲ್ಲೆಲ್ಲಾ ಬಹಳ ಜನರನ್ನು ಒಡಂಬಡಿಸಿ ತಿರುಗಿಸಿ ಬಿಟ್ಟಿದ್ದಾನೆಂಬದನ್ನು ನೀವು ನೋಡುತ್ತೀರಿ ಇದರಿಂದ ನಮ್ಮ ಈ ಉದ್ಯೋಗಕ್ಕೆ ಅಪಾಯ ಬರುವ ಹಾಗಿರುವದಲ್ಲದೆ ಡಯಾನಿ ಮಹಾದೇವಿಯ ಗುಡಿಯು ಗಣನೆಗೆ ಬಾರದೆ ಹೋಗುವ ಹಾಗೆ ಎಲ್ಲಾ ಆಸ್ಯಸೀಮೆ ಮತ್ತು ಲೊಕವು ಪೂಜಿಸುವ ಈಕೆಯ ವೈಭವವು ನಾಶವಾಗ ತಕ್ಕದೆಂದು ಹೇಳಿದನು. ಅವರು ಈ ಮಾತುಗಳನ್ನು ಕೇಳಿ ರೌದ್ರವುಳ್ಳವರಾಗಿ-- ಎಫೆಸದವರ ಡಯಾನಿಯು ದೊಡ್ಡವಳು ಎಂದು ಕೂಗುತ್ತಾ ಹೇಳಿದರು. ಆಗ ಊರೆಲ್ಲಾ ಗಲಿಬಿಲಿಯಾಯಿತು; ಪ್ರಯಾಣದಲ್ಲಿ ಪೌಲನಿಗೆ ಜೊತೆಯವರಾಗಿದ್ದ ಮಕೆದೋನ್ಯದ ಗಾಯನನ್ನು ಅರಿಸ್ತಾರ್ಕನನ್ನು ಜನರು ಹಿಡಿದುಕೊಂಡು ಒಗ್ಗಟ್ಟಾಗಿ ನಾಟಕ ಶಾಲೆಯೊಳಗೆ ನುಗ್ಗಿದರು. ಪೌಲನು ಜನರೊಳಗೆ ಹೋಗ ಬೇಕೆಂದಿದ್ದಾಗ ಶಿಷ್ಯರು ಅವನನ್ನು ಬಿಡಲಿಲ್ಲ. ಇದಲ್ಲದೆ ಆಸ್ಯದಲ್ಲಿ ಅವನಿಗೆ ಸ್ನೇಹಿತರಾಗಿದ್ದ ಪ್ರಮುಖರಲ್ಲಿ ಕೆಲವರು ಅವನು ನಾಟಕ ಶಾಲೆಯೊಳಗೆ ಹೋಗಿ ಅಪಾಯಕ್ಕೆ ಗುರಿಮಾಡಿಕೊಳ್ಳ ಬಾರದೆಂದು ಅವನಿಗೆ ಹೇಳಿ ಕಳುಹಿಸಿದರು. ಯಾಕಂದರೆ ಕೆಲವರು ಒಂದು ಬಗೆಯಾಗಿ ಮತ್ತೆ ಕೆಲವರು ಇನ್ನೊಂದು ಬಗೆಯಾಗಿ ಕೂಗುತ್ತಿದ್ದರು. ಸಭೆಯು ಗಲಿಬಿಲಿಯಾಗಿತ್ತು ಮತ್ತು ಹೆಚ್ಚಾದ ಜನರಿಗೆ ತಾವು ಕೂಡಿಬಂದಿದ್ದ ಕಾರಣವು ಗೊತ್ತಿರಲಿಲ್ಲ. ಅವರು ಅಲೆಕ್ಸಾಂದ್ರನನ್ನು ಸಮೂಹ ದೊಳಗಿಂದ ಹೊರಗೆ ತಂದಾಗ ಯೆಹೂದ್ಯರು ಅವನನ್ನು ಮುಂದೆ ತಂದರು. ಆಗ ಅಲೆಕ್ಸಾಂದ್ರನು ಕೈಸನ್ನೆ ಮಾಡಿ ಜನರಿಗೆ ಪ್ರತಿವಾದ ಮಾಡ ಬೇಕೆಂದಿದ್ದನು. ಆದರೆ ಅವನು ಯೆಹೂದ್ಯನೆಂದು ತಿಳಿದಾಗ ಎಲ್ಲರೂ ಒಂದೇ ಶಬ್ದದಿಂದ--ಎಫೆಸದವರ ಡಯಾನಿ ದೊಡ್ಡವಳು ಎಂದು ಹೆಚ್ಚು ಕಡಿಮೆ ಎರಡು ಘಂಟೆ ಹೊತ್ತು ಕೂಗಿದರು.
- Hebrews 11:36 ಇಬ್ರಿಯರಿಗೆ 11:36ಬೇರೆ ಕೆಲವರು ಅಪಹಾಸ್ಯ ಕೊರಡೆಯಪೆಟ್ಟು, ಹೌದು, ಇನ್ನು ಬೇಡಿ ಸೆರೆಮನೆ ಇವುಗಳನ್ನು ಅನುಭವಿಸಿದರು.
- Acts 17:5 ಅಪೊಸ್ತಲರ ಕೃತ್ಯಗಳು 17:5ನಂಬದಿರುವ ಯೆಹೂ ದ್ಯರು ಹೊಟ್ಟೇಕಿಚ್ಚುಪಟ್ಟು ನೀಚರಾದ ಕೆಲವು ದುಷ್ಟ ರನ್ನು ಕರೆದುಕೊಂಡು ಬಂದು ಗುಂಪು ಕೂಡಿಸಿಕೊಂಡು ಪಟ್ಟಣದಲ್ಲೆಲ್ಲಾ ಗದ್ದಲವನ್ನೆಬ್ಬಿಸಿ ಪೌಲ ಸೀಲರನ್ನು ಜನರೆದುರಿಗೆ ತರಬೇಕೆಂದು ಅವರನ್ನು ಹುಡುಕುತ್ತಾ ಯಾಸೋನನ ಮನೆಯ ಮೇಲೆ ಬಿದ್ದರು.
- 2 Timothy 1:8 2 ತಿಮೊಥೆಯನಿಗೆ 1:8ಹೀಗಿರುವದರಿಂದ ನಮ್ಮ ಕರ್ತನ ಸಾಕ್ಷಿಯ ವಿಷಯದಲ್ಲಿಯೂ ಆತನ ಸೆರೆಯವನಾದ ನನ್ನ ವಿಷಯದಲ್ಲಿಯೂ ನೀನು ನಾಚಿಕೆಪಡದೆ ದೇವರ ಬಲಕ್ಕನು ಸಾರವಾಗಿ ಸುವಾರ್ತೆಯ ನಿಮಿತ್ತ ಉಂಟಾಗುವ ಶ್ರಮೆಗಳಲ್ಲಿ ಪಾಲುಗಾರನಾಗಿರು.
- 1 Kings 22:27 1 ಅರಸುಗಳು 22:27ನೀವು ಇವನನ್ನು ಸೆರೆಮನೆಯ ಲ್ಲಿಟ್ಟು ನಾನು ಸಮಾಧಾನವಾಗಿ ತಿರಿಗಿ ಬರುವ ವರೆಗೂ ಅವನಿಗೆ ಬಾಧೆಯ ರೊಟ್ಟಿಯನ್ನೂ ಬಾಧೆಯ ನೀರನ್ನೂ ಕೊಡಿರಿ ಎಂದು ಅರಸನು ಹೇಳುತ್ತಾನೆಂದು ಹೇಳಿರಿ ಅಂದನು.
- Ephesians 3:1 ಎಫೆಸದವರಿಗೆ 3:1ಈ ಕಾರಣದಿಂದ ಅನ್ಯಜನರಾಗಿರುವ ನಿಮ್ಮ ನಿಮಿತ್ತ ಯೇಸು ಕ್ರಿಸ್ತನ ಸೆರೆಯವನಾದ ಪೌಲನೆಂಬ ನಾನು
- 2 Chronicles 16:10 2 ಪೂರ್ವಕಾಲವೃತ್ತಾಂತ 16:10ಆಗ ಆಸನು ಪ್ರವಾದಿಯ ಮೇಲೆ ಕೋಪಗೊಂಡು ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. ಅವನ ಮಾತು ಗಳ ನಿಮಿತ್ತ ಅವನ ಮೆಲೆ ರೌದ್ರವುಳ್ಳವನಾಗಿದ್ದನು. ಇದಲ್ಲದೆ ಅದೇ ಕಾಲದಲ್ಲಿ ಆಸನು ಜನರಲ್ಲಿ ಕೆಲವ ರನ್ನು ಬಾಧಿಸಿದನು.
- 1 Corinthians 15:10 1 ಕೊರಿಂಥದವರಿಗೆ 15:10ಆದರೆ ನಾನು ಎಂಥವನಾಗಿದ್ದೇನೋ ದೇವರ ಕೃಪೆಯಿಂದಲೇ ಅಂಥವನಾಗಿದ್ದೇನೆ; ನನಗುಂಟಾದ ಆತನ ಕೃಪೆಯು ನಿಷ್ಪಲವಾಗಲಿಲ್ಲ; ನಾನು ಅವರೆಲ್ಲರಿ ಗಿಂತಲೂ ಎಷ್ಟೋ ಹೆಚ್ಚಾಗಿ ಪ್ರಯಾಸಪಟ್ಟೆನು; ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿದ್ದ ದೇವರ ಕೃಪೆಯೇ.
- Acts 16:23–24 ಅಪೊಸ್ತಲರ ಕೃತ್ಯಗಳು 16:23–24ಅವರನ್ನು ಬಹಳವಾಗಿ ಹೊಡೆಸಿದ ಮೇಲೆ ಅವರನ್ನು ಭದ್ರವಾಗಿ ಕಾಯಬೇಕೆಂದು ಸೆರೆಮನೆಯ ಅಧಿಕಾರಿಗೆ ಖಂಡಿತವಾಗಿ ಆಜ್ಞಾಪಿಸಿ ಸೆರೆಮನೆಯೊಳಗೆ ಹಾಕಿದರು. ಅವನು ಅಂಥಾ ಒಂದು ಜವಾಬ್ದಾರಿಕೆಯನ್ನು ಹೊಂದಿ ಅವರನ್ನು ಸೆರೆಯ ಒಳಭಾಗಕ್ಕೆ ದೂಡಿ ಅವರ ಕಾಲುಗಳಿಗೆ ಕೋಳವನ್ನು ಹಾಕಿ ಬಿಗಿಸಿದನು.
- Acts 24:27 ಅಪೊಸ್ತಲರ ಕೃತ್ಯಗಳು 24:27ಎರಡು ವರುಷಗಳಾದ ಮೇಲೆ ಫೇಲಿಕ್ಸನ ಸ್ಥಳಕ್ಕೆ ಪೋರ್ಕಿಯ ಫೆಸ್ತನು ಬಂದನು. ಆಗ ಫೇಲಿಕ್ಸನು ಯೆಹೂದ್ಯರನ್ನು ಸಂತೋಷಪಡಿಸುವ ಮನಸ್ಸುಳ್ಳವನಾಗಿ ಪೌಲನನ್ನು ಬಂಧನದಲ್ಲಿಯೇ ಬಿಟ್ಟನು.