2 Corinthians · chapter 6 · verse 3
2 Corinthians 6:3 in Kannada
ಸೇವೆಯು ದೂಷಿಸಲ್ಪಡದಂತೆ ಯಾವ ವಿಷಯ ದಲ್ಲಿಯೂ ನಿಂದೆಗೆ ಅವಕಾಶ ಕೊಡಬೇಡಿರಿ;
Seveyu dooshisalpadadante yaava vishaya dalliyoo nindege avakaasha kodabediri;
2 Corinthians 6:3 in English
- King James Version (KJV)
- Giving no offence in any thing, that the ministry be not blamed:
- World English Bible (WEB)
- We give no occasion of stumbling in anything, that our service may not be blamed,
- American Standard Version (ASV)
- giving no occasion of stumbling in anything, that our ministration be not blamed;
- Bible in Basic English (BBE)
- Giving no cause for trouble in anything, so that no one may be able to say anything against our work;
- Darby Translation (DBY)
- giving no manner of offence in anything, that the ministry be not blamed;
- Webster's Bible (WBS)
- Giving no offense in any thing, that the ministry be not blamed:
- Young's Literal Translation (YLT)
- in nothing giving any cause of offence, that the ministration may be not blamed,
Read in context
- 1ಆದದರಿಂದ ನಾವು ಆತನೊಂದಿಗೆ ಕೆಲಸ ನಡಿಸುವವರಾಗಿದ್ದೇವೆ; ನೀವು ಸಹ ಹೊಂದಿದ ದೇವರ ಕೃಪೆಯನ್ನು ವ್ಯರ್ಥಮಾಡಿ ಕೊಳ್ಳಬೇಡಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇವೆ.
- 2(ಆತನು--ಅಂಗೀಕಾರದ ಸಮಯದಲ್ಲಿ ನಾನು ನಿನ್ನ ಮನವಿಯನ್ನು ಕೇಳಿದೆನು, ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯಮಾಡಿದೆನು ಎಂದು ಹೇಳುತ್ತಾನೆ; ಇಗೋ, ಈಗಲೇ ಆ ಅಂಗೀಕಾರದ ಸಮಯ; ಇಗೋ, ಈಗಲೇ ಆ ರಕ್ಷಣೆಯ ದಿನ).
- 3ಸೇವೆಯು ದೂಷಿಸಲ್ಪಡದಂತೆ ಯಾವ ವಿಷಯ ದಲ್ಲಿಯೂ ನಿಂದೆಗೆ ಅವಕಾಶ ಕೊಡಬೇಡಿರಿ;
- 4ಆದರೆ ಎಲ್ಲಾ ಸಂಗತಿಗಳಲ್ಲಿ ಹೆಚ್ಚು ತಾಳ್ಮೆಯಲ್ಲಿಯೂ ಸಂಕಟ ಗಳಲ್ಲಿಯೂ ಕೊರತೆಗಳಲ್ಲಿಯೂ ಇಕ್ಕಟ್ಟುಗಳಲ್ಲಿಯೂ
- 5ಪೆಟ್ಟುಗಳಲ್ಲಿಯೂ ಸೆರೆಮನೆಗಳಲ್ಲಿಯೂ ಕಲಹಗಳ ಲ್ಲಿಯೂ ಪ್ರಯಾಸಗಳಲ್ಲಿಯೂ ನಿದ್ದೆಗೇಡುಗಳಲ್ಲಿಯೂ ಉಪವಾಸಗಳಲ್ಲಿಯೂ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗ ಮಾಡಿಕೊಳ್ಳುತ್ತೇವೆ.
Cross references
- Romans 14:13 ರೋಮಾಪುರದವರಿಗೆ 14:13ಆದಕಾರಣ ಇನ್ನು ಮೇಲೆ ಒಬ್ಬರ ವಿಷಯದ ಲ್ಲೊಬ್ಬರು ಎಂದಿಗೂ ತೀರ್ಪು ಮಾಡದೆ ಇರೋಣ; ಇದಲ್ಲದೆ ಸಹೋದರನ ಎದುರಿಗೆ ಅಡ್ಡಿಯನ್ನಾಗಲಿ ಎಡೆತಡೆಯನ್ನಾಗಲಿ ಹಾಕಲೇಬಾರದೆಂದು ತೀರ್ಮಾನಿ ಸಿಕೊಳ್ಳಿರಿ.
- 1 Corinthians 9:12 1 ಕೊರಿಂಥದವರಿಗೆ 9:12ನಿಮ್ಮ ಮೇಲಿರುವ ಅಧಿಕಾರದಲ್ಲಿ ಇತರರಿಗೆ ಪಾಲು ಇದ್ದರೆ ಅವರಿಗಿಂತ ನಮಗೆ ಎಷ್ಟೋ ಹೆಚ್ಚಾಗಿ ಇರಬೇಕಲ್ಲಾ. ಆದರೂ ನಾವು ಈ ಅಧಿಕಾರವನ್ನು ನಡಿಸದೆ ಕ್ರಿಸ್ತನ ಸುವಾರ್ತೆಗೆ ಅಡ್ಡಿಮಾಡಬಾರದೆಂದು ಎಲ್ಲವನ್ನು ಸಹಿಸಿ ಕೊಂಡಿರುತ್ತೇವೆ.
- 1 Corinthians 10:32–33 1 ಕೊರಿಂಥದವರಿಗೆ 10:32–33ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ಅಭ್ಯಂತರವಾಗಬೇಡಿರಿ.ಇದಲ್ಲದೆ ನಾನಂತೂ ನನ್ನ ಸ್ವಪ್ರಯೊಜನವನ್ನೇ ನೋಡದೆ ಅನೇಕರು ರಕ್ಷಿಸಲ್ಪಡುವಂತೆ ಅವರ ಪ್ರಯೋಜನಕ್ಕಾಗಿ ಎಲ್ಲಾ ವಿಷಯಗಳಲ್ಲಿ ಎಲ್ಲರನ್ನು ಮೆಚ್ಚಿಸುತ್ತೇನೆ. ಇದಲ್ಲದೆ ನಾನಂತೂ ನನ್ನ ಸ್ವಪ್ರಯೊಜನವನ್ನೇ ನೋಡದೆ ಅನೇಕರು ರಕ್ಷಿಸಲ್ಪಡುವಂತೆ ಅವರ ಪ್ರಯೋಜನಕ್ಕಾಗಿ ಎಲ್ಲಾ ವಿಷಯಗಳಲ್ಲಿ ಎಲ್ಲರನ್ನು ಮೆಚ್ಚಿಸುತ್ತೇನೆ.
- Matthew 18:6 ಮತ್ತಾಯನು 18:6ಆದರೆ ನನ್ನಲ್ಲಿ ವಿಶ್ವಾಸವಿಡುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವ ನಾದರೂ ಅಭ್ಯಂತರವಾದರೆ ಅವನ ಕೊರಳಿಗೆ ಬೀಸುವ ಕಲ್ಲನ್ನು ನೇತು ಹಾಕಿ ಅವನನ್ನು ಸಮುದ್ರದ ಆಳದಲ್ಲಿ ಮುಳುಗಿಸಿಬಿಡುವದು ಅವನಿಗೆ ಒಳ್ಳೇದು.
- Matthew 17:27 ಮತ್ತಾಯನು 17:27ಹೀಗಿದ್ದರೂ ನಾವು ಅವರನ್ನು ಅಭ್ಯಂತರಪಡಿಸದಂತೆ ನೀನು ಸಮುದ್ರಕ್ಕೆ ಹೋಗಿ ಗಾಳವನ್ನು ಹಾಕು; ಆಗ ಮೊದಲು ಬರುವ ಮಾನನ್ನು ಹಿಡಿದು ಅದರ ಬಾಯನ್ನು ತೆರೆದರೆ ಅದರಲ್ಲಿ ಒಂದು ನಾಣ್ಯವನ್ನು ಕಾಣುವಿ; ಅದನ್ನು ತಕ್ಕೊಂಡು ನನ್ನದೂ ನಿನ್ನದೂ ಎಂದು ಹೇಳಿ ಅವರಿಗೆ ಕೊಡು ಎಂದು ಹೇಳಿದ
- 1 Corinthians 9:22 1 ಕೊರಿಂಥದವರಿಗೆ 9:22ಬಲವಿಲ್ಲದವರನ್ನು ಸಂಪಾದಿಸು ವದಕ್ಕೆ ಅವರಿಗೆ ಬಲವಿಲ್ಲದವನಂತಾದೆನು; ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಯಾರಾರಿಗೆ ಎಂಥೆಂಥವನಾಗಬೇಕೋ ಅಂಥವನಾಗಿದ್ದೇನೆ.
- 1 Corinthians 10:23–24 1 ಕೊರಿಂಥದವರಿಗೆ 10:23–24ನನಗೆ ಎಲ್ಲಾ ವಿಷಯಗಳು ನ್ಯಾಯಸಮ್ಮತ ವಾಗಿವೆ; ಆದರೆ ಎಲ್ಲವೂ ವಿಹಿತವಾಗಿರುವದಿಲ್ಲ; ಎಲ್ಲಾ ವಿಷಯಗಳು ನನಗೆ ನ್ಯಾಯಸಮ್ಮತವಾಗಿವೆ; ಆದರೆ ಎಲ್ಲವೂ ಭಕ್ತಿವೃದ್ಧಿಯನ್ನುಂಟು ಮಾಡುವದಿಲ್ಲ. ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರ ಹಿತವನ್ನು ಚಿಂತಿಸಲಿ.
- 1 Corinthians 8:9–13 1 ಕೊರಿಂಥದವರಿಗೆ 8:9–13ಆದರೂ ಈ ನಿಮ್ಮ ಸ್ವಾತಂತ್ರ್ಯವು ಬಲವಿಲ್ಲದವರಿಗೆ ಒಂದು ವೇಳೆ ಅಭ್ಯಂತರ ವಾದೀತು, ಎಚ್ಚರಿಕೆಯಾಗಿರ್ರಿ. ಜ್ಞಾನಿಯಾದ ನೀನು ವಿಗ್ರಹಾಲಯದಲ್ಲಿ ಊಟಕ್ಕೆ ಕೂತಿರುವಾಗ ನಿರ್ಬಲ ವಾದ ಮನಸ್ಸಾಕ್ಷಿಯುಳ್ಳ ಯಾವನಾದರೂ ಕಂಡರೆ ಅವನೂ ವಿಗ್ರಹಕ್ಕೆ ಸಮರ್ಪಣೆ ಮಾಡಿದ ಪದಾರ್ಥ ಗಳನ್ನು ತಿನ್ನುವದಕ್ಕೆ ಧೈರ್ಯ ತಂದುಕೊಂಡಾನಲ್ಲವೇ? ಹೀಗೆ ಆ ಬಲಹೀನನಾದ ಸಹೋದರನು ನಿನ್ನ ಜ್ಞಾನದಿಂದ ನಾಶವಾಗುತ್ತಾನೆ; ಅವನಿಗಾಗಿಯೂ ಕ್ರಿಸ್ತನು ತನ್ನ ಪ್ರಾಣಕೊಟ್ಟನಲ್ಲವೇ? ಹೀಗಿರಲಾಗಿ ಸಹೋದರರಿಗೆ ವಿರೋಧವಾಗಿ ಪಾಪಮಾಡಿ ಅವರ ನಿರ್ಬಲವಾದ ಮನಸ್ಸನ್ನು ನೋಯಿಸಿ ಕ್ರಿಸ್ತನಿಗೆ ವಿರೋಧವಾಗಿ ಪಾಪ ಮಾಡುವವರಾಗುತ್ತೀರಿ.ಆದದರಿಂದ ಆಹಾರವು ನನ್ನ ಸಹೋದರನಿಗೆ ಅಭ್ಯಂತರವಾದರೆ ನಾನು ನನ್ನ ಸಹೋದರನಿಗೆ ಅಭ್ಯಂತರಪಡಿಸದಂತೆ ಎಂದಿಗೂ ಮಾಂಸ ತಿನ್ನುವದಿಲ್ಲ. ಆದದರಿಂದ ಆಹಾರವು ನನ್ನ ಸಹೋದರನಿಗೆ ಅಭ್ಯಂತರವಾದರೆ ನಾನು ನನ್ನ ಸಹೋದರನಿಗೆ ಅಭ್ಯಂತರಪಡಿಸದಂತೆ ಎಂದಿಗೂ ಮಾಂಸ ತಿನ್ನುವದಿಲ್ಲ.
- 2 Corinthians 8:20 2 ಕೊರಿಂಥದವರಿಗೆ 8:20ನಾವು ಪಾರುಪತ್ಯ ಮಾಡುವ ಈ ಸಮೃದ್ಧಿಯ ವಿಷಯದಲ್ಲಿ ಒಬ್ಬರೂ ನಮ್ಮ ಮೇಲೆ ತಪ್ಪುಹೊರಿಸುವದಕ್ಕೆ ಆಸ್ಪದ ವಿರಬಾರದು.
- 2 Corinthians 1:12 2 ಕೊರಿಂಥದವರಿಗೆ 1:12ನಾವು ಮನುಷ್ಯಜ್ಞಾನದಿಂದಲ್ಲ, ಆದರೆ ಸರಳತೆಯಿಂದಲೂ ಭಕ್ತಿಯ ನಿಷ್ಕಪಟದಿಂದಲೂ ದೇವರ ಕೃಪೆಯಿಂದಲೂ ಲೋಕದಲ್ಲಿ ಮತ್ತು ಇನ್ನೂ ಹೆಚ್ಚಾಗಿ ನಿಮ್ಮ ವಿಷಯದಲ್ಲಿ ನಡಕೊಂಡೆವೆಂದು ನಮ್ಮ ಮನಸ್ಸಿನ ಸಾಕ್ಷಿಯೇ ನಮ ಗಿರುವ ಸಂತೋಷವಾಗಿದೆ.