2 Kings · chapter 10 · verse 30
2 Kings 10:30 in Kannada
ಕರ್ತನು ಯೇಹು ವಿಗೆ--ನೀನು ನನ್ನ ದೃಷ್ಟಿಗೆ ಸರಿಯಾದದ್ದನ್ನು ನಡಿಸಿ ನನ್ನ ಹೃದಯದಲ್ಲಿದ್ದ ಎಲ್ಲಾದರ ಪ್ರಕಾರ ಅಹಾಬನ ಮನೆಗೆ ಮಾಡಿ ಯುಕ್ತವಾದದ್ದನ್ನು ಮಾಡಿದ್ದರಿಂದ ನಿನ್ನ ಮಕ್ಕಳು ನಾಲ್ಕು ವಂಶಗಳ ವರೆಗೂ ಇಸ್ರಾಯೇ ಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು ಅಂದನು.
Kartanu yehu vige--neenu nanna drushtige sariyaadaddannu nadisi nanna hrudayadallidda ellaadara prakaara ahaabana manege maadi yuktavaadaddannu maadiddarinda ninna makkalu naalku vanshagala varegoo israaye lina sinhaasanada mele kulitukolluvaru andanu.
2 Kings 10:30 in English
- King James Version (KJV)
- And the LORD said unto Jehu, Because thou hast done well in executing [that which is] right in mine eyes, [and] hast done unto the house of Ahab according to all that [was] in mine heart, thy children of the fourth [generation] shall sit on the throne of Israel.
- World English Bible (WEB)
- The LORD said to Jehu, “Because you have done well in executing that which is right in my eyes, and have done to Ahab’s house according to all that was in my heart, your descendants shall sit on the throne of Israel to the fourth generation.”
- American Standard Version (ASV)
- And Jehovah said unto Jehu, Because thou hast done well in executing that which is right in mine eyes, [and] hast done unto the house of Ahab according to all that was in my heart, thy sons of the fourth generation shall sit on the throne of Israel.
- Bible in Basic English (BBE)
- And the Lord said to Jehu, Because you have done well in doing what is right in my eyes and effecting all my purpose for the family of Ahab, your sons will be kings of Israel to the fourth generation.
- Darby Translation (DBY)
- And Jehovah said to Jehu, Because thou hast executed well that which is right in my sight, [and] hast done unto the house of Ahab according to all that was in my heart, thy children of the fourth [generation] shall sit on the throne of Israel.
- Webster's Bible (WBS)
- And the LORD said to Jehu, Because thou hast done well in executing [that which is] right in my eyes, [and] hast done to the house of Ahab according to all that [was] in my heart, thy children of the fourth [generation] shall sit on the throne of Israel.
- Young's Literal Translation (YLT)
- And Jehovah saith unto Jehu, 'Because that thou hast done well, to do that which [is] right in Mine eyes — according to all that [is] in My heart thou hast done to the house of Ahab — the sons of the fourth [generation] do sit for thee on the throne of Israel.'
Read in context
- 28ಹೀಗೆಯೇ ಯೇಹುವು ಬಾಳನನ್ನು ಇಸ್ರಾಯೇಲಿ ನಲ್ಲಿಂದ ನಾಶಮಾಡಿಬಿಟ್ಟನು.
- 29ಆದರೆ ಬೇತೇಲ್, ದಾನ್ನಲ್ಲಿಯೂ ಇರುವ ಬಂಗಾರದ ಹೋರಿಗಳಿಂದ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ಯೇಹುವು ತೊರೆದುಬಿಡಲಿಲ್ಲ.
- 30ಕರ್ತನು ಯೇಹು ವಿಗೆ--ನೀನು ನನ್ನ ದೃಷ್ಟಿಗೆ ಸರಿಯಾದದ್ದನ್ನು ನಡಿಸಿ ನನ್ನ ಹೃದಯದಲ್ಲಿದ್ದ ಎಲ್ಲಾದರ ಪ್ರಕಾರ ಅಹಾಬನ ಮನೆಗೆ ಮಾಡಿ ಯುಕ್ತವಾದದ್ದನ್ನು ಮಾಡಿದ್ದರಿಂದ ನಿನ್ನ ಮಕ್ಕಳು ನಾಲ್ಕು ವಂಶಗಳ ವರೆಗೂ ಇಸ್ರಾಯೇ ಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು ಅಂದನು.
- 31ಆದರೆ ಯೇಹುವು ತನ್ನ ಪೂರ್ಣಹೃದಯ ದಿಂದ ಇಸ್ರಾಯೇಲಿನ ದೇವರಾದ ಕರ್ತನ ನ್ಯಾಯ ಪ್ರಮಾಣದಲ್ಲಿ ನಡೆಯುವ ಹಾಗೆ ಎಚ್ಚರಿಕೆಯಾಗಿರ ಲಿಲ್ಲ; ಇಸ್ರಾಯೇಲ್ಯರನ್ನು ಪಾಪಮಾಡಲು ಪ್ರೇರೇಪಿ ಸಿದ ಯಾರೊಬ್ಬಾಮನ ಪಾಪಗಳನ್ನು ತೊರೆದು ಬಿಡಲಿಲ್ಲ.
- 32ಆ ದಿವಸಗಳಲ್ಲಿ ಕರ್ತನು ಇಸ್ರಾಯೇಲನ್ನು ಕಡಿಮೆ ಮಾಡಲು ಆರಂಭಿಸಿದನು. ಯಾಕಂದರೆ ಹಜಾಯೇ ಲನು ಇಸ್ರಾಯೇಲಿನ ಎಲ್ಲಾ ಮೇರೆಗಳಲ್ಲಿ ಅವರನ್ನು ಸಂಹರಿಸಿದನು.
Cross references
- 2 Kings 10:35 2 ಅರಸುಗಳು 10:35ಅವನ ಪರಾಕ್ರಮವೆಲ್ಲವೂ ಇಸ್ರಾಯೇಲಿನ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆದಿರುತ್ತವೆ. ಯೇಹುವು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವನನ್ನು ಸಮಾರ್ಯದಲ್ಲಿ ಹೂಣಿಟ್ಟರು. ಅವನ ಮಗನಾದ ಯೆಹೋವಾಹಾಜನು ಅವನಿಗೆ ಬದಲಾಗಿ ಆಳಿದನು.ಯೇಹುವು ಸಮಾರ್ಯದಲ್ಲಿ ಇಸ್ರಾಯೇಲಿನ ಮೇಲೆ ಆಳಿದ್ದು ಇಪ್ಪತ್ತೆಂಟು ವರುಷಗಳು.
- 2 Kings 13:1 2 ಅರಸುಗಳು 13:1ಯೆಹೂದದ ಅರಸನಾಗಿರುವ ಅಹಜ್ಯನಮಗನಾದ ಯೆಹೋವಾಷನ ಇಪ್ಪತ್ತ ಮೂರನೇ ವರುಷದಲ್ಲಿ ಯೇಹುವಿನ ಮಗನಾದ ಯೆಹೋವಾಹಾಜನು ಸಮಾರ್ಯದಲ್ಲಿ ಇಸ್ರಾಯೇಲ್ಯರ ಅರಸನಾಗಿ ಹದಿನೇಳು ವರುಷ ಆಳಿದನು.
- 2 Kings 13:10 2 ಅರಸುಗಳು 13:10ಯೆಹೂದದ ಅರಸನಾದ ಯೆಹೋವಾಷನ ಆಳ್ವಿಕೆಯ ಮೂವತ್ತೇಳನೇ ವರುಷದಲ್ಲಿ ಯೆಹೋವಾ ಹಾಜನ ಮಗನಾದ ಯೋವಾಷನು ಸಮಾರ್ಯ ದಲ್ಲಿ ಇಸ್ರಾಯೇಲ್ಯರ ಅರಸನಾಗಿ ಹದಿನಾರು ವರುಷ ಆಳಿದನು.
- 2 Kings 14:23 2 ಅರಸುಗಳು 14:23ಯೆಹೂದದ ಅರಸನಾಗಿರುವ ಯೆಹೋವಾಷನ ಮಗನಾದ ಅಮಚ್ಯನ ಆಳ್ವಿಕೆಯ ಹದಿನೈದನೇ ವರು ಷದಲ್ಲಿ ಇಸ್ರಾಯೇಲಿನ ಅರಸನಾಗಿರುವ ಯೋವಾ ಷನ ಮಗನಾದ ಯಾರೊಬ್ಬಾಮನು ಅರಸನಾಗಿ ಸಮಾರ್ಯದಲ್ಲಿ ನಾಲ್ವತ್ತೊಂದು ವರುಷ ಆಳಿದನು.
- 1 Samuel 15:18–24 1 ಸಮುವೇಲನು 15:18–24ಪಾಪಿಷ್ಠರಾದ ಅಮಾಲೇಕ್ಯರನ್ನು ಸಂಪೂರ್ಣ ನಾಶಮಾಡಿ ಅವರು ತೀರಿಹೋಗುವ ವರೆಗೂ ಅವರ ಸಂಗಡ ಯುದ್ಧಮಾಡಬೇಕೆಂದು ಕರ್ತನು ನಿನ್ನನ್ನು ಕಳುಹಿಸಿದನು. ಹೀಗಿರುವಾಗ ನೀನು ಯಾಕೆ ಕರ್ತನ ಮಾತಿಗೆ ವಿಧೇಯನಾಗದೆ ಕೊಳ್ಳೆಯ ಮೇಲೆ ಬಿದ್ದು ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿದಿ ಅಂದನು. ಆಗ ಸೌಲನು ಸಮುವೇಲನಿಗೆ--ಹೌದು, ನಾನು ಕರ್ತನ ಮಾತಿಗೆ ವಿಧೇಯನಾಗಿ, ಕರ್ತನು ನನ್ನನ್ನು ಕಳುಹಿಸಿದಲ್ಲಿಗೆ ಹೋಗಿ ಅಮಾಲೇಕ್ಯರ ಅರಸನಾದ ಅಗಾಗನನ್ನು ಹಿಡಿದುಕೊಂಡು ಬಂದು ಅಮಾಲೇಕ್ಯರನ್ನು ಸಂಪೂರ್ಣ ನಾಶಮಾಡಿದೆನು. ಆದರೆ ಜನರು ನಿನ್ನ ದೇವರಾದ ಕರ್ತನಿಗೆ ಗಿಲ್ಗಾಲಿ ನಲ್ಲಿ ಬಲಿ ಕೊಡುವದಕ್ಕಾಗಿ ಕೊಳ್ಳೆಯಲ್ಲಿ ಸಂಪೂರ್ಣ ವಾಗಿ ನಾಶಮಾಡಬೇಕೆಂದಿರುವ ಕುರಿ ಪಶುಗಳಲ್ಲಿ ಮೇಲ್ತರವಾದವುಗಳನ್ನು ಹಿಡುಕೊಂಡು ಬಂದರು ಅಂದನು. ಅದಕ್ಕೆ ಸಮುವೇಲನು--ಕರ್ತನ ವಾಕ್ಯಕ್ಕೆ ವಿಧೇಯನಾದರೆ ಕರ್ತನಿಗೆ ಆಗುವ ಸಂತೋಷ ದಹನ ಬಲಿಗಳಲ್ಲಿಯೂ ಬಲಿಗಳಲ್ಲಿಯೂ ಆಗುವದೋ? ಇಗೋ, ಬಲಿಗಿಂತ ವಿಧೇಯವಾಗುವದು ಟಗರುಗಳ ಕೊಬ್ಬಿಗಿಂತ ಆಲೈಸುವದು ಉತ್ತಮವಾಗಿರುವದು. ಎದುರು ಬೀಳುವದು ಕಣಿ ಹೇಳುವಂತೆ ಪಾಪ ವಾಗಿದೆ, ಹಟವು ದುಷ್ಟತನ ಮತ್ತು ವಿಗ್ರಹಾರಾಧನೆಗಳ ಹಾಗೆ ಇದೆ. ನೀನು ಕರ್ತನ ವಾಕ್ಯವನ್ನು ತಿರಸ್ಕಾರ ಮಾಡಿದ್ದರಿಂದ ಆತನು ನಿನ್ನನ್ನು ಅರಸನಾಗಿರದ ಹಾಗೆ ತಿರಸ್ಕಾರ ಮಾಡಿಬಿಟ್ಟನು ಅಂದನು. ಆಗ ಸೌಲನು ಸಮುವೇಲನಿಗೆ--ನಾನು ಕರ್ತನ ವಾಕ್ಯವನ್ನೂ ನಿನ್ನ ಮಾತುಗಳನ್ನೂ ವಿಾರಿ ಪಾಪಮಾಡಿದೆನು. ನಾನು ಜನರಿಗೆ ಭಯಪಟ್ಟು ಅವರ ಮಾತನ್ನು ಕೇಳಿದೆನು.
- Ezekiel 29:18–20 ಯೆಹೆಜ್ಕೇಲನು 29:18–20ಮನುಷ್ಯ ಪುತ್ರನೇ, ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ತೂರಿಗೆ ಮುತ್ತಿಗೆ ಹಾಕಿ ತನ್ನ ಸೈನಿಕರಿಂದ ಅತಿಶ್ರಮ ವಾದ ಸೇವೆಯನ್ನು ಮಾಡಿಸಿದನು. ಪ್ರತಿಯೊಬ್ಬನ ತಲೆ ಬೋಳಾಗಿದೆ, ಪ್ರತಿಯೊಬ್ಬನ ಹೆಗಲೂ ಸುಲಿದು ಹೋಗಿದೆ. ಆದರೆ ಅವನು ಆ ಮುತ್ತಿಗೆಯಲ್ಲಿ ಪಟ್ಟ ಶ್ರಮಕ್ಕೆ ಅವನಿಗಾಗಲೀ ಅವನ ಸೈನಿಕರಿಗಾಗಲೀ ತೂರ್ನಿಂದ ಪ್ರತಿಫಲವೇನೂ ದೊರೆಯಲಿಲ್ಲ. ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ನಾನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಗೆ ಐಗುಪ್ತದೇಶವನ್ನು ಕೊಡುತ್ತೇನೆ, ಅವನು ಅದರ ಜನಸಮೂಹವನ್ನೂ ಕೊಳ್ಳೆಯನ್ನೂ ಸುಲಿಗೆಯನ್ನು ಸೂರೆಮಾಡುವನು. ಇದೇ ಅವನ ದಂಡು ಪಟ್ಟ ಶ್ರಮಕ್ಕೆ ಪ್ರತಿಫಲವಾಗುವದು. ಅವನು ಅದಕ್ಕೆ ವಿರುದ್ಧವಾಗಿ ಪಟ್ಟ ಕಷ್ಟಗಳಿಗೋಸ್ಕರ ನಾನು ಅವನಿಗೆ ಐಗುಪ್ತದೇಶವನ್ನು ಕೊಟ್ಟಿದ್ದೇನೆ; ನನಗೋಸ್ಕರ ಅದನ್ನು ಮಾಡಿದ್ದಾರೆಂದು ದೇವರಾದ ಕರ್ತನು ಹೇಳುತ್ತಾನೆ.ಆ ದಿನದಲ್ಲಿ ನಾನು ಇಸ್ರಾಯೇಲ್ಯರ ಮನೆ ತನದವರ ಕೊಂಬನ್ನು ಚಿಗುರಿಸುವೆನು. ಅವರ ಮಧ್ಯ ದಲ್ಲಿ ನಿನ್ನ ಬಾಯನ್ನು ತೆರೆಯುವಂತೆ ಮಾಡುವೆನು. ನಾನೇ ಕರ್ತನೆಂದು ಅವರು ತಿಳಿಯುವರು.
- Hosea 1:4 ಹೋಶೇಯ 1:4ಆಗ ಕರ್ತನು ಅವನಿಗೆ--ಅವನನ್ನು ಇಜ್ರೇಲ್ ಎಂಬ ಹೆಸರಿನಿಂದ ಕರೆ. ಇನ್ನೂ ಸ್ವಲ್ಪಕಾಲದಲ್ಲಿಯೇ ನಾನು ಇಜ್ರೇಲಿನ ರಕ್ತವನ್ನು ಯೆಹೂವಿನ ಮನೆತನದವರ ಮೇಲೆ ಸೇಡು ತೀರಿಸಿಕೊಳ್ಳುವೆನು; ಇಸ್ರಾಯೇಲಿನ ಮನೆತನದ ರಾಜ್ಯವು ನಿಂತುಹೋಗುವಂತೆ ಮಾಡು ವೆನು.
- 2 Kings 15:8–12 2 ಅರಸುಗಳು 15:8–12ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೆಂಟನೇ ವರುಷದಲ್ಲಿ ಯಾರೊಬ್ಬಾಮನ ಮಗ ನಾದ ಜೆಕರ್ಯ ಇಸ್ರಾಯೇಲಿನ ಮೇಲೆ ಸಮಾರ್ಯ ದಲ್ಲಿ ಆರು ತಿಂಗಳು ಆಳಿದನು. ಅವನು ತನ್ನ ಪಿತೃಗಳು ಮಾಡಿದ ಪ್ರಕಾರ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ. ಆಗ ಯಾಬೇಷನ ಮಗನಾದ ಶಲ್ಲೂಮನು ಅವನ ಮೇಲೆ ಒಳಸಂಚು ಮಾಡಿ ಜನರ ಮುಂದೆ ಅವನನ್ನು ಹೊಡೆದು ಕೊಂದು ಹಾಕಿ ಅವನಿಗೆ ಬದಲಾಗಿ ಅರಸನಾದನು. ಇಗೋ, ಜೆಕರ್ಯನ ಇತರ ಕ್ರಿಯೆಗಳು ಇಸ್ರಾಯೇಲಿನ ಅರಸು ಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. ನಿನ್ನ ಕುಮಾರರು ನಾಲ್ಕನೇ ಸಂತತಿಯ ವರೆಗೂ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತಿರುವರು ಎಂದು ಕರ್ತನು ಯೇಹುವಿಗೆ ಹೇಳಿದ ವಾಕ್ಯವು ಇದೇ; ಹೀಗೆಯೇ ಆಯಿತು.
- 1 Kings 21:22 1 ಅರಸುಗಳು 21:22ನೀನು ನನಗೆ ಎಬ್ಬಿಸಿದ ಕೋಪದ ನಿಮಿತ್ತವೂ ಇಸ್ರಾಯೇಲನ್ನು ಪಾಪ ಮಾಡುವಂತೆ ಮಾಡಿದ್ದರ ನಿಮಿತ್ತವೂ ನಾನು ನಿನ್ನ ಮನೆಯನ್ನು ನೆಬಾಟನ ಮಗನಾದ ಯಾರೊಬ್ಬಾಮನ ಮನೆಯ ಹಾಗೆಯೂ ಅಹೀಯನ ಮಗನಾದ ಬಾಷನ ಮನೆಯ ಹಾಗೆಯೂ ಮಾಡುವೆನು ಅಂದನು.
- 1 Kings 21:29 1 ಅರಸುಗಳು 21:29ಅಹಾಬನು ನನ್ನ ಮುಂದೆ ತನ್ನನ್ನು ತಗ್ಗಿಸಿದ್ದನ್ನು ಕಂಡಿಯಾ? ಅವನು ನನ್ನ ಮುಂದೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ನಾನು ಅವನ ದಿವಸಗಳಲ್ಲಿ ಆ ಕೇಡನ್ನು ಬರಮಾಡದೆ ಅವನ ಮಗನ ದಿವಸಗಳಲ್ಲಿ ಅವನ ಮನೆಯ ಮೇಲೆ ಬರ ಮಾಡುವೆನು ಅಂದನು.
- 1 Kings 20:42 1 ಅರಸುಗಳು 20:42ಇವನು ಅವನಿಗೆ--ಕರ್ತನು ಹೇಳುವ ದೇನಂದರೆ--ನಾನು ಪೂರ್ಣನಾಶಕ್ಕೆ ಒಪ್ಪಿಸಿದ ಮನು ಷ್ಯನನ್ನು ನೀನು ಕೈಬಿಟ್ಟು ಹೋಗಗೊಡಿಸಿದ ಕಾರಣ ಅವನ ಪ್ರಾಣಕ್ಕೆ ಬದಲಾಗಿ ನಿನ್ನ ಪ್ರಾಣವೂ ಅವನ ಜನಕ್ಕೆ ಬದಲಾಗಿ ನಿನ್ನ ಜನವೂ ಹೋಗುವದು ಅಂದನು.ಆಗ ಇಸ್ರಾಯೇಲಿನ ಅರಸನು ವ್ಯಸನ ದಿಂದಲೂ ಕೋಪದಿಂದಲೂ ಸಮಾರ್ಯದಲ್ಲಿದ್ದ ತನ್ನ ಮನೆಗೆ ಹೊರಟು ಬಂದನು.
Original words (Hebrew)
- said · H559אָמַר ʼâmar
- Jehu · H3058יֵהוּא Yêhûwʼ
- well · H2895טוֹב ṭôwb
- executing · H6213עָשָׂה ʻâsâh
- right · H3477יָשָׁר yâshâr
- eyes · H5869עַיִן ʻayin
- done · H6213עָשָׂה ʻâsâh
- house · H1004בַּיִת bayith
- Ahab · H256אַחְאָב ʼAchʼâb
- heart · H3824לֵבָב lêbâb
- children · H1121בֵּן bên
- fourth · H7243רְבִיעִי rᵉbîyʻîy
- sit · H3427יָשַׁב yâshab
- throne · H3678כִּסֵּא kiççêʼ
- Israel · H3478יִשְׂרָאֵל Yisrâʼêl