2 Kings · chapter 12 · verse 16
2 Kings 12:16 in Kannada
ಅವರು ನಂಬಿಗಸ್ತರಾಗಿ ಮಾಡಿದರು. ಆದರೆ ಅಪರಾಧದ ಹಣವನ್ನೂ ಪಾಪಪರಿಹಾರದ ಹಣವನ್ನೂ ಕರ್ತನ ಮನೆಗೆ ತಕ್ಕೊಂಡು ಬರಲಿಲ್ಲ; ಅದು ಯಾಜಕರದಾಗಿತ್ತು.
Avaru nambigastaraagi maadidaru. Aadare aparaadhada hanavannoo paapaparihaarada hanavannoo kartana manege takkondu baralilla; adu yaajakaradaagittu.
2 Kings 12:16 in English
- King James Version (KJV)
- The trespass money and sin money was not brought into the house of the LORD: it was the priests’.
- World English Bible (WEB)
- The money for the trespass offerings and the money for the sin offerings was not brought into the LORD’s house. It was the priests’.
- American Standard Version (ASV)
- The money for the trespass-offerings, and the money for the sin-offerings, was not brought into the house of Jehovah: it was the priests’.
- Bible in Basic English (BBE)
- The money of the offerings for error and the sin-offerings was not taken into the house of the Lord; it was the priests'.
- Darby Translation (DBY)
- The money of trespass-offerings, and the money of sin-offerings, was not brought into the house of Jehovah: it was for the priests.
- Webster's Bible (WBS)
- The trespass-money and sin-money was not brought into the house of the LORD: it was the priests'.
- Young's Literal Translation (YLT)
- The money of a trespass-offering, and the money of sin-offerings is not brought in to the house of Jehovah — for the priests it is.
Read in context
- 14ಹಣದಿಂದ ಮಾಡಿ ಸದೆ ಅವರು ಅದನ್ನು ಕೆಲಸದವರಿಗೆ ಕೊಟ್ಟು ಕರ್ತನ ಮನೆಯನ್ನು ದುರಸ್ತು ಮಾಡಿಸಿದರು.
- 15ಇದಲ್ಲದೆ ಅವರು ಕೆಲಸ ಮಾಡುವವರಿಗೆ ಕೊಡುವದಕ್ಕೆ ಯಾರ ಕೈಯಲ್ಲಿ ಒಪ್ಪಿಸಿದ್ದರೋ ಅವರಿಂದ ಲೆಕ್ಕವನ್ನು ತೆಗೆದು ಕೊಳ್ಳಲಿಲ್ಲ.
- 16ಅವರು ನಂಬಿಗಸ್ತರಾಗಿ ಮಾಡಿದರು. ಆದರೆ ಅಪರಾಧದ ಹಣವನ್ನೂ ಪಾಪಪರಿಹಾರದ ಹಣವನ್ನೂ ಕರ್ತನ ಮನೆಗೆ ತಕ್ಕೊಂಡು ಬರಲಿಲ್ಲ; ಅದು ಯಾಜಕರದಾಗಿತ್ತು.
- 17ಅರಾಮ್ಯರ ಅರಸನಾದ ಹಜಾಯೇಲನು ಹೋಗಿ ಗತ್ ಊರಿನ ಮೇಲೆ ಯುದ್ಧಮಾಡಿ ಅದನ್ನು ವಶಪಡಿಸಿಕೊಂಡನು. ಹಜಾಯೇಲನು ಯೆರೂಸಲೇ ಮಿಗೆ ಹೋಗಲು ತನ್ನ ಮುಖವನ್ನು ತಿರುಗಿಸಿದನು.
- 18ಆಗ ಯೆಹೂದದ ಅರಸನಾದ ಯೆಹೋವಾಷನೂ ಯೆಹೂದದ ಅರಸುಗಳಾಗಿರುವ ತನ್ನ ತಂದೆಗಳಾದ ಯೆಹೋಷಾಫಾಟನೂ ಯೆಹೋರಾಮನೂ ಅಹ ಜ್ಯನೂ ಅರ್ಪಿಸಿದ ಎಲ್ಲಾ ಪ್ರತಿಷ್ಠಿತವಾದವುಗಳನ್ನೂ ತಾನು ಪರಿಶುದ್ಧ ಮಾಡಿದವುಗಳನ್ನೂ ಕರ್ತನ ಮನೆಯ ಬೊಕ್ಕಸದಲ್ಲಿಯೂ ಅರಸನ ಮನೆಯಲ್ಲಿಯೂ ಸಿಕ್ಕಿದ ಸಕಲ ಬಂಗಾರವನ್ನೂ ತಕ್ಕೊಂಡು ಅರಾಮ್ಯರ ಅರಸ ನಾದ ಹಜಾಯೇಲನಿಗೆ ಕಳುಹಿಸಿದನು. ಆಗ ಅವನು ಯೆರೂಸಲೇಮನ್ನು ಬಿಟ್ಟುಹೋದನು.
Cross references
- Leviticus 7:7 ಯಾಜಕಕಾಂಡ 7:7ಪಾಪದ ಬಲಿಯ ಹಾಗೆಯೇ ಅತಿಕ್ರಮದ ಬಲಿಯೂ ಆಗಿದೆ. ಅವುಗಳಿಗೆ ಇರುವದು ಒಂದೇ ನಿಯಮ; ಅವುಗಳಿಂದ ಪ್ರಾಯಶ್ಚಿತ್ತಮಾಡುವ ಯಾಜಕನೇ ಅವುಗಳನ್ನು ತೆಗೆದುಕೊಳ್ಳಬೇಕು.
- Leviticus 5:15–18 ಯಾಜಕಕಾಂಡ 5:15–18ಯಾವನಾದರೂ ಅತಿಕ್ರಮಿಸಿ ಕರ್ತನ ಪರಿಶುದ್ಧ ವಾದವುಗಳನ್ನು ಅರಿಯದೆ ಪಾಪಮಾಡಿದ್ದರೆ ಅವನು ತನ್ನ ಅತಿಕ್ರಮಕ್ಕಾಗಿ ತನ್ನ ಹಿಂಡುಗಳಿಂದ ದೋಷವಿಲ್ಲದ ಟಗರನ್ನು ನಿನ್ನ ಅಂದಾಜಿನ ಪ್ರಕಾರ ಪವಿತ್ರ ಸ್ಥಳದ ಶೆಕೆಲುಗಳಿಗನುಸಾರವಾಗಿ ಬೆಳ್ಳಿಯ ಶೆಕೆಲುಗಳನ್ನು ಅತಿ ಕ್ರಮದ ಬಲಿಗಾಗಿ ಕರ್ತನಿಗೆ ತರಬೇಕು. ಪರಿಶುದ್ಧ ವಾದದ್ದಲ್ಲದೆ ಮಾಡಿದ ಕೇಡಿಗೆ ಬದಲು ಕೊಟ್ಟು ಅದಕ್ಕೆ ಐದನೇ ಪಾಲನ್ನು ಕೂಡಿಸಿ ಅದನ್ನು ಯಾಜಕನಿಗೆ ಕೊಡಬೇಕು, ಯಾಜಕನು ಅವನಿಗಾಗಿ ಅತಿಕ್ರಮದ ಬಲಿಯಾದ ಟಗರಿನಿಂದ ಪ್ರಾಯಶ್ಚಿತ್ತಮಾಡಬೇಕು, ಆಗ ಅದು ಅವನಿಗೆ ಕ್ಷಮಿಸಲ್ಪಡುವದು. ಯಾವನಾದರೂ ಕರ್ತನು ನಿಷೇಧಿಸಿದ ಆಜ್ಞೆ ಗಳಲ್ಲಿ ಯಾವದನ್ನಾದರೂ ಮಾಡಿ ಪಾಪಮಾಡಿದರೆ ಅದು ಅವನಿಗೆ ತಿಳಿಯದಿದ್ದಾಗ್ಯೂ ಅವನು ಅಪರಾಧಿ ಯಾಗಿರುವನು, ಅವನು ತನ್ನ ಅಪರಾಧವನ್ನು ಹೊತ್ತು ಕೊಳ್ಳುವನು. ಅಲ್ಲದೆ ಅವನು ಹಿಂಡಿನೊಳಗಿಂದ ದೋಷವಿಲ್ಲದ ಒಂದು ಟಗರನ್ನು ನಿನ್ನ ಅಂದಾಜಿ ಗನುಸಾರ ಅತಿಕ್ರಮದ ಬಲಿಗಾಗಿ ಯಾಜಕನ ಬಳಿಗೆ ತರಬೇಕು; ತನ್ನ ಅಜ್ಞಾನದಲ್ಲಿ ಅವನು ಉದ್ದೇಶವಿಲ್ಲದೆ ಮಾಡಿದ ತಪ್ಪಿಗಾಗಿ ಯಾಜಕನು ಪ್ರಾಯಶ್ಚಿತ್ತವನ್ನು ಮಾಡಬೇಕು. ಅದು ಅವನಿಗೆ ಕ್ಷಮಿಸಲ್ಪಡುವದು.ಇದು ಅತಿಕ್ರಮದ ಬಲಿಯಾಗಿದೆ; ಅವನು ನಿಶ್ಚಯ ವಾಗಿಯೂ ಕರ್ತನಿಗೆ ವಿರುದ್ಧವಾಗಿ ಅತಿಕ್ರಮಿಸಿದ್ದಾನೆ ಅಂದನು.
- Leviticus 4:29 ಯಾಜಕಕಾಂಡ 4:29ಅವನು ತನ್ನ ಕೈಯನ್ನು ಪಾಪದ ಬಲಿಯ ಮೇಲಿಟ್ಟು ಆ ಪಾಪದ ಬಲಿಯನ್ನು ದಹನಬಲಿಯ ಸ್ಥಳದಲ್ಲಿ ವಧಿಸಬೇಕು.
- Leviticus 4:24 ಯಾಜಕಕಾಂಡ 4:24ಅವನು ತನ್ನ ಕೈಯನ್ನು ಆ ಮೇಕೆ ತಲೆಯ ಮೇಲೆ ಇಟ್ಟು ಕರ್ತನ ಮುಂದೆ ದಹನಬಲಿಯನ್ನು ವಧಿಸುವ ಸ್ಥಳದಲ್ಲಿ ಅದನ್ನು ವಧಿಸಬೇಕು; ಅದು ಪಾಪದ ಬಲಿಯಾಗಿರುವದು.
- Hosea 4:8 ಹೋಶೇಯ 4:8ಅವರು ನನ್ನ ಜನರ ಪಾಪವನ್ನು ತಿನ್ನುತ್ತಾರೆ ಮತ್ತು ಅವರು ದುಷ್ಟತನದ ಮೇಲೆ ಮನಸ್ಸಿಡುತ್ತಾರೆ.
- Numbers 18:19 ಅರಣ್ಯಕಾಂಡ 18:19ಇಸ್ರಾಯೇಲ್ ಮಕ್ಕಳು ಕರ್ತನಿಗೆ ಎತ್ತುವ ಪರಿಶುದ್ಧವಾದ ಅರ್ಪಣೆಗಳನ್ನೆಲ್ಲಾ ನಿನಗೂ ನಿನ್ನ ಕುಮಾರರಿಗೂ ಕುಮಾರ್ತೆಯರಿಗೂ ನಿತ್ಯ ಕಟ್ಟಳೆ ಯಾಗಿ ಕೊಟ್ಟಿದ್ದೇನೆ; ಇದು ಕರ್ತನ ಮುಂದೆ ನಿನಗೂ ನಿನ್ನ ಸಂಗಡ ಇರುವ ನಿನ್ನ ಸಂತತಿಗೂ ನಿತ್ಯವಾದ ಉಪ್ಪಿನ ಒಡಂಬಡಿಕೆಯಾಗಿರಬೇಕು.
- Numbers 18:8–9 ಅರಣ್ಯಕಾಂಡ 18:8–9ಕರ್ತನು ಮಾತನಾಡಿ ಆರೋನನಿಗೆ--ಇಗೋ, ನಾನು ನಿನಗೆ ಎತ್ತುವ ಅರ್ಪಣೆಗಳ ಅಪ್ಪಣೆಗಳನ್ನು ಕೊಟ್ಟಿದ್ದೇನೆ. ಇಸ್ರಾಯೇಲ್ ಮಕ್ಕಳು ಪರಿಶುದ್ಧ ಮಾಡುವ ಎಲ್ಲಾದರಲ್ಲಿ ನಾನು ಅವುಗಳನ್ನು ಅಭಿಷೇಕ ಕ್ಕೋಸ್ಕರ ನಿನಗೂ ನಿನ್ನ ಮಕ್ಕಳಿಗೂ ನಿತ್ಯಕಟ್ಟಳೆಯಾಗಿ ಕೊಟ್ಟಿದ್ದೇನೆ. ಬೆಂಕಿಗೆ ಒಳಗಾಗದ ಅತೀ ಪರಿಶುದ್ಧ ವಾದವುಗಳಲ್ಲಿ ನಿನಗಾಗಬೇಕಾದವುಗಳು ಯಾವ ವೆಂದರೆ--ಅವರ ಅರ್ಪಣೆಗಳೆಲ್ಲಾ ಅಂದರೆ ಅವರು ನನಗೆ ತರುವ ಆಹಾರ ಸಮರ್ಪಣೆಗಳು ಪಾಪದ ಬಲಿಗಳು ಅಪರಾಧದ ಬಲಿಗಳು ಇವೆಲ್ಲಾ ಅತೀ ಪರಿಶುದ್ಧವಾಗಿ ನಿನಗೂ ನಿನ್ನ ಕುಮಾರರಿಗೂ ಇರಬೇಕು.
- Numbers 5:8–10 ಅರಣ್ಯಕಾಂಡ 5:8–10ಆದರೆ ಅಪರಾಧಕ್ಕೆ ಬದಲು ಕೊಡುವದಕ್ಕೆ ಆ ಮನುಷ್ಯನಿಗೆ ಸಂಬಂಧಿಕನು ಇಲ್ಲದಿದ್ದರೆ ಸಲ್ಲಿಸಿದ ಆ ಅಪರಾಧವು ಅವನ ನಿಮಿತ್ತ ಪಾಪ ಮುಚ್ಚುವ ಟಗರಿನ ಹೊರತಾಗಿ ಅದು ಕರ್ತನದೂ ಯಾಜಕನದೂ ಆಗಿರಬೇಕು. ಇದಲ್ಲದೆ ಇಸ್ರಾಯೇಲ್ ಮಕ್ಕಳು ತರುವ ಸಕಲ ಪರಿಶುದ್ಧವಾದ ಬಲಿಗಳೆಲ್ಲಾ ಯಾಜಕನಿಗೇ ಸಲ್ಲಬೇಕು. ಪ್ರತಿ ಮನುಷ್ಯನ ಪರಿಶುದ್ಧವಾದವುಗಳು ಅವನಿಗೇ ಸಲ್ಲಬೇಕು. ಯಾವನಾದರೂ ಏನಾದರೂ ಯಾಜಕನಿಗೆ ಕೊಟ್ಟದ್ದು ಅವನಿಗೇ ಆಗಬೇಕು ಎಂದು ಹೇಳಿದನು.