2 Kings · chapter 15 · verse 37
2 Kings 15:37 in Kannada
ಆ ದಿವಸಗಳಲ್ಲಿ ಕರ್ತನು ಅರಾ ಮ್ಯರ ಅರಸನಾದ ರೆಚೀನನನ್ನೂ ರೆಮಲ್ಯನ ಮಗನಾದ ಪೆಕಹನನ್ನೂ ಯೆಹೂದದ ಮೇಲೆ ಕಳುಹಿಸಲು ಆರಂಭಿ ಸಿದನು.ಯೋತಾಮನು ತನ್ನ ಪಿತೃಗಳ ಸಂಗಡ ನಿದ್ರಿಸಿದನು. ಅವನನ್ನು ಅವನ ತಂದೆಯಾದ ದಾವೀ ದನ ಪಟ್ಟಣದಲ್ಲಿ ತನ್ನ ಪಿತೃಗಳ ಸ್ಮಶಾನ ಭೂಮಿಯಲ್ಲಿ ಹೂಣಿಟ್ಟರು. ಅವನ ಮಗನಾದ ಆಹಾಜನು ಅವನಿಗೆ ಬದಲಾಗಿ ಅರಸನಾದನು.
Aa divasagalalli kartanu araa myara arasanaada recheenanannoo remalyana maganaada pekahanannoo yehoodada mele kaluhisalu aarambhi sidanu.yotaamanu tanna pitrugala sangada nidrisidanu. Avanannu avana tandeyaada daavee dana pattanadalli tanna pitrugala smashaana bhoomiyalli hoonittaru. Avana maganaada aahaajanu avanige badalaagi arasanaadanu.
2 Kings 15:37 in English
- King James Version (KJV)
- In those days the LORD began to send against Judah Rezin the king of Syria, and Pekah the son of Remaliah.
- World English Bible (WEB)
- In those days, the LORD began to send Rezin the king of Syria and Pekah the son of Remaliah against Judah.
- American Standard Version (ASV)
- In those days Jehovah began to send against Judah Rezin the king of Syria, and Pekah the son of Remaliah.
- Bible in Basic English (BBE)
- In those days the Lord first sent against Judah, Rezin, the king of Aram, and Pekah, the son of Remaliah.
- Darby Translation (DBY)
- In those days Jehovah began to send against Judah Rezin the king of Syria, and Pekah the son of Remaliah.
- Webster's Bible (WBS)
- In those days the LORD began to send against Judah, Rezin the king of Syria, and Pekah the son of Remaliah.
- Young's Literal Translation (YLT)
- In those days hath Jehovah begun to send against Judah Rezin king of Amram and Pekah son of Remaliah.
Read in context
- 35ಇವನು ಕರ್ತನ ಮನೆಗೆ ಎತ್ತರವಾದ ಬಾಗಲನ್ನು ಕಟ್ಟಿಸಿದನು. ಆದರೆ ಉನ್ನತ ಸ್ಥಳಗಳು ತೆಗೆಯಲ್ಪಡಲಿಲ್ಲ; ಜನರು ಇನ್ನೂ ಉನ್ನತ ಸ್ಥಳಗಳ ಮೇಲೆ ಬಲಿಗಳನ್ನೂ ಧೂಪವನ್ನೂ ಅರ್ಪಿಸುತ್ತಿದ್ದರು.
- 36ಯೋತಾಮನ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
- 37ಆ ದಿವಸಗಳಲ್ಲಿ ಕರ್ತನು ಅರಾ ಮ್ಯರ ಅರಸನಾದ ರೆಚೀನನನ್ನೂ ರೆಮಲ್ಯನ ಮಗನಾದ ಪೆಕಹನನ್ನೂ ಯೆಹೂದದ ಮೇಲೆ ಕಳುಹಿಸಲು ಆರಂಭಿ ಸಿದನು.ಯೋತಾಮನು ತನ್ನ ಪಿತೃಗಳ ಸಂಗಡ ನಿದ್ರಿಸಿದನು. ಅವನನ್ನು ಅವನ ತಂದೆಯಾದ ದಾವೀ ದನ ಪಟ್ಟಣದಲ್ಲಿ ತನ್ನ ಪಿತೃಗಳ ಸ್ಮಶಾನ ಭೂಮಿಯಲ್ಲಿ ಹೂಣಿಟ್ಟರು. ಅವನ ಮಗನಾದ ಆಹಾಜನು ಅವನಿಗೆ ಬದಲಾಗಿ ಅರಸನಾದನು.
- 38ಯೋತಾಮನು ತನ್ನ ಪಿತೃಗಳ ಸಂಗಡ ನಿದ್ರಿಸಿದನು. ಅವನನ್ನು ಅವನ ತಂದೆಯಾದ ದಾವೀ ದನ ಪಟ್ಟಣದಲ್ಲಿ ತನ್ನ ಪಿತೃಗಳ ಸ್ಮಶಾನ ಭೂಮಿಯಲ್ಲಿ ಹೂಣಿಟ್ಟರು. ಅವನ ಮಗನಾದ ಆಹಾಜನು ಅವನಿಗೆ ಬದಲಾಗಿ ಅರಸನಾದನು.
Cross references
- 2 Kings 16:5 2 ಅರಸುಗಳು 16:5ಅವನ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀ ನನೂ ಇಸ್ರಾಯೇಲಿನ ಅರಸನಾದಂಥ ರೆಮಲ್ಯನ ಮಗನಾದ ಪೆಕಹನೂ ಯುದ್ಧಮಾಡಲು ಯೆರೂಸ ಲೇಮಿಗೆ ಬಂದು ಆಹಾಜನನ್ನು ಮುತ್ತಿಗೆ ಹಾಕಿದರು; ಆದರೆ ಅವನನ್ನು ಜಯಿಸಲಾರದೆ ಹೋದರು.
- Isaiah 7:1 ಯೆಶಾಯ 7:1ಯೋಥಾಮನ ಮಗನೂ ಉಜ್ಜೀಯನ ಮೊಮ್ಮಗನೂ ಯೆಹೂದದ ಅರಸನೂ ಆದ ಆಹಾಜನ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀನ, ರೆಮಲ್ಯನ ಮಗನೂ ಇಸ್ರಾಯೇಲ್ಯರ ಅರ ಸನೂ ಆದ ಪೆಕಹ ಎಂಬವರು ಯೆರೂಸಲೇಮಿನ ವಿರುದ್ಧವಾಗಿ ಯುದ್ಧಕ್ಕೆ ಹೋದರು. ಆದರೆ ಅದನ್ನು ಜಯಿಸಲು ಸಾಧ್ಯವಾಗಲಿಲ್ಲ.
- 2 Chronicles 28:6 2 ಪೂರ್ವಕಾಲವೃತ್ತಾಂತ 28:6ಅವರು ತಮ್ಮ ಪಿತೃಗಳ ಕರ್ತನಾದ ದೇವರನ್ನು ಬಿಟ್ಟದ್ದರಿಂದ ರೆಮಲ್ಯನ ಮಗ ನಾದ ಪೆಕಹನು ಒಂದೇ ದಿವಸದೊಳಗೆ ಯೆಹೂ ದದವರಲ್ಲಿ ಲಕ್ಷದ ಇಪ್ಪತ್ತು ಸಾವಿರ ಮಂದಿಯನ್ನು ಕೊಂದುಹಾಕಿದನು; ಇವರೆಲ್ಲರು ಪರಾಕ್ರಮಶಾಲಿ ಗಳಾಗಿದ್ದರು.
- Jeremiah 43:10 ಯೆರೆಮೀಯ 43:10ಇಸ್ರಾ ಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ನಾನು ಕಳುಹಿಸಿ ನನ್ನ ಸೇವಕನಾದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನನ್ನು ಕರೆಯಿಸಿ ನಾನು ಬಚ್ಚಿಟ್ಟಿರುವ ಈ ಕಲ್ಲುಗಳ ಮೇಲೆ ಅವನ ಸಿಂಹಾಸನವನ್ನು ಇಡುವೆನು; ಅವನು ತನ್ನ ಮೇಲ್ಕಟ್ಟನ್ನು ಅವುಗಳ ಮೇಲೆ ಹಾಸುವನು.
- Isaiah 10:5–7 ಯೆಶಾಯ 10:5–7ಓ ನನ್ನ ಕೋಪದ ಕೋಲಾದ ಅಶ್ಶೂರವೇ, ಕೈಯಲ್ಲಿರುವ ಬೆತ್ತವು ನನ್ನ ರೌದ್ರವೇ. ನಾನು ಅವನನ್ನು ಭ್ರಷ್ಠಜನರಿಗೆ ವಿರುದ್ಧವಾಗಿ ಕಳುಹಿಸಿ ನನ್ನ ಕೋಪಕ್ಕೆ ಗುರಿಯಾದ (ನನ್ನ) ಪ್ರಜೆಯನ್ನು ಸೂರೆ ಮಾಡಿ ಕೊಳ್ಳೆಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದು ಹಾಕಬೇಕೆಂದು ಅಪ್ಪಣೆ ಕೊಡು ವೆನು. ಅದರ ಅಭಿಪ್ರಾಯವೋ ಹಾಗಲ್ಲ; ಇಲ್ಲವೇ ಅದರ ಹೃದಯವು ಈ ಪ್ರಕಾರ ಆಲೋಚಿಸುವದಿಲ್ಲ; ಜನಾಂಗಗಳನ್ನು ಕಡಿದು ಬಿಡುವದು ಕೊಂಚವಾಗಿ ಅಲ್ಲ. ಆದರೆ ನಾಶಮಾಡುವದು ಅವನ ಹೃದಯದಲ್ಲಿ ಇದೆ.
- 2 Kings 10:32 2 ಅರಸುಗಳು 10:32ಆ ದಿವಸಗಳಲ್ಲಿ ಕರ್ತನು ಇಸ್ರಾಯೇಲನ್ನು ಕಡಿಮೆ ಮಾಡಲು ಆರಂಭಿಸಿದನು. ಯಾಕಂದರೆ ಹಜಾಯೇ ಲನು ಇಸ್ರಾಯೇಲಿನ ಎಲ್ಲಾ ಮೇರೆಗಳಲ್ಲಿ ಅವರನ್ನು ಸಂಹರಿಸಿದನು.
- Jeremiah 25:29 ಯೆರೆಮೀಯ 25:29ಇಗೋ, ನನ್ನ ಹೆಸರಿನಿಂದ ಕರೆಯಲ್ಪಟ್ಟಿರುವ ಪಟ್ಟಣದ ಮೇಲೆ ನಾನು ಕೇಡನ್ನು ತರಿಸುವದಕ್ಕೆ ಆರಂಭಮಾಡುತ್ತೇನೆ; ಹಾಗಾದರೆ ನೀವು ಸಂಪೂರ್ಣ ದಂಡನೆಗೆ ತಪ್ಪಿಸಿಕೊಂಡೀರೋ? ತಪ್ಪಿಸಿ ಕೊಳ್ಳುವದಿಲ್ಲ: ನಾನು ಭೂನಿವಾಸಿಗಳೆಲ್ಲರ ಮೇಲೆ ಕತ್ತಿಯನ್ನು ಕರೆಯುತ್ತೇನೆಂದು ಸೈನ್ಯಗಳ ಕರ್ತನು ಅನ್ನು ತ್ತಾನೆ.
- Jeremiah 16:16 ಯೆರೆಮೀಯ 16:16ಇಗೋ, ನಾನು ಅನೇಕ ವಿಾನುಗಾರರನ್ನು ಕಳುಹಿಸುತ್ತೇನೆಂದು ಕರ್ತನು ಅನ್ನುತ್ತಾನೆ; ಇವರು ಅವರನ್ನು ಹಿಡಿಯುವರು; ಆಮೇಲೆ ಅನೇಕ ಬೇಟೆ ಗಾರರನ್ನು ಕಳುಹಿಸುವೆನು; ಇವರು ಎಲ್ಲಾ ಬೆಟ್ಟಗುಡ್ಡಗಳ ಮೇಲೆಯೂ ಎಲ್ಲಾ ಗುಡ್ಡಗಳ ಮೇಲೆಯೂ ಎಲ್ಲಾ ಬಂಡೆಗಳ ಬಿರುಕುಗಳಲ್ಲಿಯೂ ಅವರನ್ನು ಬೇಟೆಯಾಡು ವರು.
- Deuteronomy 28:48 ಧರ್ಮೋಪದೇಶಕಾಂಡ 28:48ಹಸಿವೆಯಲ್ಲಿ, ದಾಹದಲ್ಲಿ, ಬೆತ್ತಲೆಯಲ್ಲಿ, ಎಲ್ಲವುಗಳ ಕೊರತೆಯಲ್ಲಿ ದೇವರು ನಿನ್ನ ಮೇಲೆ ಕಳುಹಿಸುವ ನಿನ್ನ ಶತ್ರುಗಳನ್ನು ಸೇವಿಸಬೇಕು; ಆತನು ನಿನ್ನನ್ನು ನಾಶಮಾಡುವ ವರೆಗೆ ಕಬ್ಬಿಣದ ನೊಗವನ್ನು ನಿನ್ನ ಕುತ್ತಿಗೆಯ ಮೇಲೆ ಹೊರಿ ಸುವನು.
- Luke 21:28 ಲೂಕನು 21:28ಆದರೆ ಈ ಸಂಗತಿಗಳು ಸಂಭವಿಸುವದಕ್ಕೆ ಪ್ರಾರಂಭಿಸಿದಾಗ ಮೇಲಕ್ಕೆ ನೋಡಿರಿ; ನಿಮ್ಮ ತಲೆಗಳನ್ನು ಎತ್ತಿರಿ; ಯಾಕಂದರೆ ನಿಮ್ಮ ವಿಮೋಚನೆಯು ಸವಿಾಪವಾಗಿದೆ ಅಂದನು.
- Isaiah 38:1–22 ಯೆಶಾಯ 38:1–22ಆ ಕಾಲದಲ್ಲಿ ಹಿಜ್ಕೀಯನು ರೋಗಿಯಾಗಿ ಸಾಯುವದಕ್ಕಿದ್ದನು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು ಅವನಿಗೆ--ನಿನ್ನ ಮನೆಯ ವಿಷಯವಾಗಿ ವ್ಯವಸ್ಥೆ ಮಾಡಿಕೋ; ಯಾಕಂದರೆ ನೀನು ಉಳಿಯುವ ಹಾಗಿಲ್ಲ, ಸಾಯಬೇಕಾಗಿದೆ ಎಂಬದಾಗಿ ಕರ್ತನು ಹೇಳುತ್ತಾನೆ ಎಂದು ಹೇಳಿದನು. ಆಗ ಹಿಜ್ಕೀಯನು ತನ್ನ ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ-- ಓ ಕರ್ತನೇ, ನಾನು ನಿನ್ನ ಮುಂದೆ ಸತ್ಯವಾಗಿಯೂ ಯಥಾರ್ಥ ಹೃದಯದಿಂದಲೂ ನಡೆದು ನಿನ್ನ ದೃಷ್ಟಿ ಯಲ್ಲಿ ಒಳ್ಳೆಯದನ್ನು ಮಾಡಿದ್ದೇನೆಂದು ನೆನಪು ಮಾಡಿಕೋ ಎಂದು ಬೇಡಿಕೊಂಡು ವ್ಯಥೆಪಟ್ಟು ಅತ್ತನು. ಆಗ ಕರ್ತನ ವಾಕ್ಯವು ಯೆಶಾ ಯನ ಬಳಿಗೆ ಬಂದು ಹೇಳಿದ್ದೇನಂದರೆ-- ನೀನು ಹೋಗಿ ಹಿಜ್ಕೀ ಯನಿಗೆ ಹೇಳತಕ್ಕದ್ದೇನಂದರೆ--ನಿನ್ನ ತಂದೆಯಾದ ದಾವೀದನ ದೇವರಾದ ಕರ್ತನು ಹೀಗೆ ಹೇಳುತ್ತಾನೆ, ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನೂ ನೋಡಿದ್ದೇನೆ; ಇಗೋ, ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನೂ ಕೂಡಿಸುತ್ತೇನೆ. ನಿನ್ನನ್ನೂ ಈ ಪಟ್ಟಣವನ್ನೂ ಅಶ್ಶೂರದ ಅರಸನ ಕೈಯಿಂದ ಬಿಡಿಸುವೆನು; ಈ ಪಟ್ಟಣವನ್ನು ಕಾಪಾಡುವೆನು. ಕರ್ತನು ತಾನು ನುಡಿದದ್ದನ್ನು ನೆರವೇರಿಸುವನು ಎಂಬದಕ್ಕೆ ಒಂದು ಗುರುತನ್ನು ಕಾಣುವಿ. ಆಗ ಇಗೋ, ಸೂರ್ಯನ ಇಳಿತರದಿಂದ ಆಹಾಜನ ಸೋಫಾನ ಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳನ್ನು ಹತ್ತು ಮೆಟ್ಲು ಹಿಂದಕ್ಕೆ ಬರಮಾಡುವೆನು ಅಂದನು. ಅದರಂತೆ ಸೋಫಾನ ಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಲು ಹಿಂದಕ್ಕೆ ಬಂತು. ಯೆಹೂದದ ಅರಸನಾದ ಹಿಜ್ಕೀಯನು ರೋಗದಿಂದ ಗುಣ ಹೊಂದಿದನಂತರ ಬರೆದದ್ದು-- ನನ್ನ ದಿವಸಗಳು ಕಡಿಮೆ ಮಾಡಲ್ಪಟ್ಟದ್ದರಿಂದ ನಾನು ಪಾತಾಳದ ದ್ವಾರ ಗಳೊಳಗೆ ಹೋಗಬೇಕು ನನ್ನ ಆಯುಷ್ಯದಲ್ಲಿ ಮಿಕ್ಕಾ ದದ್ದು ನನಗೆ ತಪ್ಪಿಹೋಯಿತು ಎಂದು ಅಂದು ಕೊಂಡನು. ಕರ್ತನನ್ನು, ಜೀವಿತರ ದೇಶದಲ್ಲಿಯೂ ಸಹ ಕರ್ತನನ್ನು ನೋಡೆನೆಂದೂ ಇನ್ನೂ ಭೂಲೋಕ ನಿವಾಸಿಗಳಲ್ಲೊಬ್ಬನಾಗಿ ಮನುಷ್ಯರನ್ನು ನೋಡಲಾರೆ ನಲ್ಲಾ ಎಂದು ಅಂದುಕೊಂಡೆನು. ನನ್ನ ಆಯುಷ್ಯ ಮುಗಿಯಿತು ಮತ್ತು ಕುರುಬನ ಗುಡಾರದಂತೆ ನನ್ನಿಂದ ತೆಗೆದುಹಾಕಲ್ಪಟ್ಟಿದೆ; ಆತನು ನನ್ನ ಆಯುಷ್ಯದ ಹಾಸನ್ನು ಕತ್ತರಿಸಿದ್ದರಿಂದ ನೇಯಿಗೆಯವನಂತೆ ನನ್ನ ಜೀವಮಾನವನ್ನು ಸುತ್ತಿಬಿಟ್ಟಿದ್ದೇನೆ; ಬೆಳಗಿನಿಂದ ರಾತ್ರಿಯೊಳಗೇ ನನ್ನನ್ನು ಕೊನೆಗಾಣಿಸುತ್ತೀ. ಆತನು ಸಿಂಹದಂತೆ ಎಲುಬುಗಳನ್ನೆಲ್ಲಾ ಮುರಿದಿದ್ದಾಗ್ಯೂ ಬೆಳಗಿನ ವರೆಗೂ ತಾಳಿಕೊಂಡೇ ಇದ್ದೆನು; ಬೆಳಗಿನಿಂದ ರಾತ್ರಿಯೊಳಗೇ ನನ್ನನ್ನು ಕೊನೆಗಾಣಿಸುತ್ತೀ. ನಾನು ಬಾನಕ್ಕಿಯಂತೆಯೂ ಬಕದ ಹಾಗೂ ಕೀಚುಗುಟ್ಟಿದೆನು ಪಾರಿವಾಳದಂತೆ ಮೂಲುಗುತ್ತಿದ್ದೆನು. ನನ್ನ ಕಣ್ಣುಗಳು ಮೇಲಕ್ಕೆ ನೋಡುವದರಿಂದ ಕ್ಷೀಣವಾದವು. ಓ ಕರ್ತನೇ, ನಾನು ಬಾಧೆಪಡುತ್ತಿದ್ದೇನೆ; ನೀನು ನನಗೆ ಆಶ್ರಯನಾಗು. ನಾನು ಏನು ಹೇಳಲಿ; ಆತನು ನನಗೆ ಮಾತುಕೊಟ್ಟು ತಾನೇ ಅದನ್ನು ನೆರವೇರಿಸಿ ದ್ದಾನೆ. ನನ್ನ ಆತ್ಮಕ್ಕೆ ಸಂಭವಿಸಿದ ದುಃಖದಲ್ಲಿ ನನ್ನ ವರುಷಗಳಲ್ಲೆಲ್ಲಾ ಮೆಲ್ಲಗೆ ನಡೆಯುವೆನು. ಓ ಕರ್ತನೇ, ಇಂಥಾ ಸಂಬಂಧಗಳಿಂದ ಮನುಷ್ಯರು ಬದುಕುತ್ತಾರೆ, ಇವೆಲ್ಲವುಗಳಿಂದಲೇ ನನ್ನ ಆತ್ಮದಲ್ಲಿ ಜೀವವುಂಟು, ಹೀಗೆ ನನ್ನನ್ನು ನೀನು ಸ್ವಸ್ಥಮಾಡಿ ಬದುಕುವಂತೆ ಮಾಡಿದಿ. ಇಗೋ, ಆ ಬಹು ವ್ಯಥೆಯು ನನ್ನ ಸಮಾಧಾನಕ್ಕಾಗಿಯೇ ಆಯಿತು; ಆದರೆ ನನ್ನ ಆತ್ಮವನ್ನು ನಾಶಕೂಪದಿಂದ ಬಿಡುಗಡೆ ಮಾಡಿದ್ದು ನಿನ್ನ ಪ್ರೀತಿಯೇ. ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನಿನ ಹಿಂದೆ ಹಾಕಿಬಿಟ್ಟಿದ್ದೀ. ಸಮಾಧಿಯು ನಿನ್ನನ್ನು ಹೊಗಳುವದಿಲ್ಲ, ಮರಣವು ನಿನ್ನನ್ನು ಕೊಂಡಾಡುವದಿಲ್ಲ; ಕುಣಿಯೊಳಕ್ಕೆ ಹೋಗುವವರು ನಿನ್ನ ಸತ್ಯತೆಯಲ್ಲಿ ಭರವಸವಿಡಲಾರರು. ನಾನು ಈ ಹೊತ್ತು ಮಾಡುವ ಪ್ರಕಾರ, ಜೀವಂತನು ಹೌದು, ಜೀವಂತನೇ, ನಿನ್ನನ್ನು ಹೊಗಳುವನು; ತಂದೆಯು ಮಕ್ಕಳಿಗೆ ನಿನ್ನ ಸತ್ಯತೆಯನ್ನು ತಿಳಿಯ ಪಡಿಸುವನು. ಕರ್ತನು ನನ್ನನ್ನು ರಕ್ಷಿಸಲು ಸಿದ್ಧನಾಗಿ ದ್ದನು; ಆದದರಿಂದ ಕರ್ತನ ಆಲಯದಲ್ಲಿ ನಮ್ಮ ಜೀವ ಮಾನದ ದಿವಸಗಳಲ್ಲೆಲ್ಲಾ ತಂತಿವಾದ್ಯಗಳಿಂದ ಹಾಡು ಗಳನ್ನು ನಾವು ಹಾಡುವೆವು. ಯೆಶಾಯನು--ಅಂಜೂರದ ಹಣ್ಣುಗಳ ಅಡೆಯನ್ನು ತರಿಸಿ ಹುಣ್ಣಿನ ಮೇಲೆ ಇಟ್ಟರೆ ಅವನು ಬದುಕುವನೆಂದು ಹೇಳಿದ್ದನು.ಇದಲ್ಲದೆ ಹಿಜ್ಕೀಯನು--ನಾನು ಕರ್ತನ ಆಲಯಕ್ಕೆ ಹೋಗುವದಕ್ಕೆ ಗುರುತೇನು ಎಂದು ಕೇಳಿದ್ದನು. ಇದಲ್ಲದೆ ಹಿಜ್ಕೀಯನು--ನಾನು ಕರ್ತನ ಆಲಯಕ್ಕೆ ಹೋಗುವದಕ್ಕೆ ಗುರುತೇನು ಎಂದು ಕೇಳಿದ್ದನು.
- Isaiah 7:8 ಯೆಶಾಯ 7:8ದಮಸ್ಕವು ಸಿರಿ ಯಾದ ತಲೆಯಾಗಿದೆ ಮತ್ತು ದಮಸ್ಕದ ತಲೆಯು ರೆಚೀನ; ಅರುವತ್ತೈದು ವರುಷಗಳೊಳಗೆ ಎಫ್ರಾಯಾ ಮ್ಯರು ಭಂಗಪಟ್ಟು ಜನಾಂಗವೆನಿಸಿಕೊಳ್ಳರು.