2 Kings · chapter 15 · verse 6
2 Kings 15:6 in Kannada
ಅಜರ್ಯನ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?
Ajaryana itara kriyegaloo avanu maadida ellavoo yehoodada arasugala vrutaantagala pustakadalli bareyalpadalillavo?
2 Kings 15:6 in English
- King James Version (KJV)
- And the rest of the acts of Azariah, and all that he did, [are] they not written in the book of the chronicles of the kings of Judah?
- World English Bible (WEB)
- Now the rest of the acts of Azariah, and all that he did, aren’t they written in the book of the chronicles of the kings of Judah?
- American Standard Version (ASV)
- Now the rest of the acts of Azariah, and all that he did, are they not written in the book of the chronicles of the kings of Judah?
- Bible in Basic English (BBE)
- Now the rest of the acts of Azariah, and all he did, are they not recorded in the book of the history of the kings of Judah?
- Darby Translation (DBY)
- And the rest of the acts of Azariah, and all that he did, are they not written in the book of the chronicles of the kings of Judah?
- Webster's Bible (WBS)
- And the rest of the acts of Azariah, and all that he did, [are] they not written in the book of the chronicles of the kings of Judah?
- Young's Literal Translation (YLT)
- And the rest of the matters of Azariah, and all that he did, are they not written on the book of the Chronicles of the kings of Judah?
Read in context
- 4ಆದರೆ ಉನ್ನತ ಸ್ಥಳಗಳು ಕೆಡವಲ್ಪಡಲಿಲ್ಲ; ಜನರು ಇನ್ನೂ ಉನ್ನತ ಸ್ಥಳಗಳ ಮೇಲೆ ಬಲಿಗಳನ್ನು ಅರ್ಪಿಸಿ ಧೂಪವನ್ನು ಅರ್ಪಿಸುತ್ತಿದ್ದರು.
- 5ಕರ್ತನು ಅರಸನನ್ನು ಹೊಡೆದದ್ದರಿಂದ ಅವನು ತನ್ನ ಜೀವದಿಂದಿರು ವರೆಗೂ ಕುಷ್ಠರೋಗಿಯಾಗಿದ್ದು ಪ್ರತ್ಯೇಕವಾದ ಮನೆಯಲ್ಲಿ ವಾಸವಾಗಿದ್ದನು. ಅರಸನ ಮಗನಾದ ಯೋತಾಮನು ಮನೆ ಯಜಮಾನನಾಗಿದ್ದು ದೇಶದ ಜನರಿಗೆ ನ್ಯಾಯ ತೀರಿಸುತ್ತಿದ್ದನು.
- 6ಅಜರ್ಯನ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?
- 7ಅಜರ್ಯನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವನನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಸ್ಮಶಾನ ಭೂಮಿಯಲ್ಲಿ ಹೂಣಿಟ್ಟರು; ಅವನ ಮಗನಾದ ಯೋತಾಮನು ಅವನಿಗೆ ಬದಲಾಗಿ ಅರಸನಾದನು.
- 8ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೆಂಟನೇ ವರುಷದಲ್ಲಿ ಯಾರೊಬ್ಬಾಮನ ಮಗ ನಾದ ಜೆಕರ್ಯ ಇಸ್ರಾಯೇಲಿನ ಮೇಲೆ ಸಮಾರ್ಯ ದಲ್ಲಿ ಆರು ತಿಂಗಳು ಆಳಿದನು.
Cross references
- 2 Kings 14:18 2 ಅರಸುಗಳು 14:18ಅಮಚ್ಯನ ಇತರ ಕ್ರಿಯೆಗಳು ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?
- 2 Chronicles 26:5–15 2 ಪೂರ್ವಕಾಲವೃತ್ತಾಂತ 26:5–15ದೇವರ ದರ್ಶನಗಳಲ್ಲಿ ಗ್ರಹಿಕೆಯುಳ್ಳವನಾಗಿದ್ದ ಜೆಕರೀಯನ ದಿವಸಗಳಲ್ಲಿ ಅವನು ದೇವರನ್ನು ಹುಡುಕಿದನು. ಕರ್ತನನ್ನು ಹುಡು ಕುವ ದಿವಸಗಳ ಮಟ್ಟಿಗೂ ದೇವರು ಅವನನ್ನು ಅಭಿ ವೃದ್ಧಿಪಡಿಸಿದನು. ಅವನು ಹೊರಟುಹೋಗಿ ಫಿಲಿಷ್ಟಿಯರ ಮೇಲೆ ಯುದ್ಧಮಾಡಿ ಗತ್ ಗೋಡೆಯನ್ನೂ ಯಬ್ನೆಯ ಗೋಡೆಯನ್ನೂ ಅಷ್ಡೋದಿನ ಗೋಡೆಯನ್ನೂ ಕೆಡವಿ ಬಿಟ್ಟು ಫಿಲಿಷ್ಟಿಯರ ಮಧ್ಯದಲ್ಲಿ ಅಷ್ಡೋ ದಿನ ಬಳಿಯಲ್ಲಿ ಪಟ್ಟಣಗಳನ್ನು ಕಟ್ಟಿಸಿದನು. ಇದ ಲ್ಲದೆ ಫಿಲಿಷ್ಟಿಯರ ಮೇಲೆಯೂ ಗೂರ್ಬಾಳಿನಲ್ಲಿ ವಾಸವಾಗಿದ್ದ ಅರಬ್ಬಿಯರ ಮೇಲೆಯೂ ಮೆಗೂನ್ಯರ ಮೇಲೆಯೂ ಅವನು ಯುದ್ಧಮಾಡಿ ದಾಗ ದೇವರು ಅವನಿಗೆ ಸಹಾಯಕೊಟ್ಟನು. ಇದಲ್ಲದೆ ಅಮ್ಮೋನ್ಯರು ಉಜ್ಜೀಯನಿಗೆ ಕಾಣಿಕೆ ಗಳನ್ನು ಕೊಟ್ಟರು. ಆದದರಿಂದ ಅವನ ಹೆಸರು ಐಗುಪ್ತದ ಮೇರೆಯ ವರೆಗೂ ಬಹಳವಾಗಿ ಹಬ್ಬಿತು. ಅವನು ತನ್ನನ್ನು ಬಹಳವಾಗಿ ಬಲಪಡಿಸಿಕೊಂಡನು. ಉಜ್ಜೀಯನು ಯೆರೂಸಲೇಮಿನಲ್ಲಿ ಮೂಲೆ ಬಾಗಲ ಬಳಿಯಲ್ಲಿಯೂ ತಗ್ಗಿನ ಬಾಗಲ ಬಳಿಯಲ್ಲಿಯೂ ಕೋಟೆಯ ಮೂಲೆಯಲ್ಲಿಯೂ ಬುರುಜುಗಳನ್ನು ಕಟ್ಟಿಸಿ ಅವುಗಳನ್ನು ಬಲಪಡಿಸಿದನು. ಅವನು ಅರಣ್ಯದಲ್ಲಿ ಬುರುಜುಗಳನ್ನು ಕಟ್ಟಿಸಿ ಅನೇಕ ಬಾವಿಗಳನ್ನು ತೋಡಿಸಿ ದನು; ತಗ್ಗಿನ ದೇಶದಲ್ಲಿಯೂ ಬೈಲು ದೇಶದಲ್ಲಿಯೂ ಅವನಿಗೆ ಬಹು ಕುರಿದನಗಳಿದ್ದವು. ಹಾಗೆಯೇ ಪರ್ವತ ಗಳಲ್ಲಿಯೂ ಕರ್ಮೆಲಿನಲ್ಲಿಯೂ ಅವನಿಗೆ ಒಕ್ಕಲಿ ಗರೂ ದ್ರಾಕ್ಷೇ ವ್ಯವಸಾಯದವರೂ ಇದ್ದರು. ಅವನು ವ್ಯವಸಾಯದಲ್ಲಿ ಇಷ್ಟವುಳ್ಳವನಾಗಿದ್ದನು. ಇದಲ್ಲದೆ ಶಾಸ್ತ್ರಿಯಾದ ಯೆಗೀಯೇಲನ ಕೈ ಯಿಂದಲೂ ಅಧಿಪತಿಯಾದ ಮಾಸೇಯನ ಕೈ ಯಿಂದಲೂ ಬರೆಯಲ್ಪಟ್ಟ ಲೆಕ್ಕದ ಪ್ರಕಾರ ಗುಂಪು ಗುಂಪಾಗಿ ಯುದ್ಧಕ್ಕೆ ಹೋಗುವ ರಾಣುವೆಯವರ ಸೈನ್ಯವು ಉಜ್ಜೀಯನಿಗೆ ಇತ್ತು. ಆ ಸೈನ್ಯವು ಅರಸನ ಪ್ರಧಾನರಲ್ಲಿ ಒಬ್ಬನಾದ ಹನನ್ಯನ ಕೈಕೆಳಗೆ ಇತ್ತು. ಪರಾಕ್ರಮಶಾಲಿಗಳಲ್ಲಿ ಪಿತೃಗಳ ಮುಖ್ಯಸ್ಥರ ಲೆಕ್ಕವು ಎರಡು ಸಾವಿರದ ಆರುನೂರು ಮಂದಿಯು. ಅವರ ಕೈಕೆಳಗೆ ಅರಸನಿಗೆ ಸಹಾಯವಾಗಿ ಶತ್ರುವಿನ ಮೇಲೆ ಬಹಳ ಪರಾಕ್ರಮದಿಂದ ಯುದ್ಧಮಾಡುವ ಮೂರು ಲಕ್ಷದ ಏಳು ಸಾವಿರದ ಐನೂರು ಮಂದಿ ಯುಳ್ಳ ಸೈನ್ಯವಿತ್ತು. ಉಜ್ಜೀಯನು ಸಮಸ್ತ ದಂಡಿ ನಲ್ಲಿ ಅವರ ನಿಮಿತ್ತ ಗುರಾಣಿಗಳನ್ನು ಈಟಿಗಳನ್ನೂ ಶಿರಸ್ತ್ರಾಣಗಳನ್ನೂ ಉಕ್ಕಿನ ಕವಚಗಳನ್ನೂ ಬಿಲ್ಲುಗಳನ್ನೂ ಕವಣೆಗಳನ್ನೂ ಸಿದ್ಧಮಾಡಿದನು. ಇದಲ್ಲದೆ ಬಾಣಗಳನ್ನೂ ದೊಡ್ಡ ಕಲ್ಲುಗಳನ್ನೂ ಎಸೆಯುವ ನಿಮಿತ್ತ ಬುರುಜುಗಳ ಮೇಲೆಯೂ ಮಣ್ಣು ದಿಬ್ಬಗಳ ಮೇಲೆಯೂ ಇರಲು ಪ್ರವೀಣರಿಂದ ಮಾಡಿದ ಯಂತ್ರಗಳನ್ನೂ ಯೆರೂಸಲೇಮಿನಲ್ಲಿ ಮಾಡಿಸಿದನು. ಆದದರಿಂದ ಅವನ ಹೆಸರು ಬಹಳ ದೂರದ ವರೆಗೆ ಪ್ರಸಿದ್ಧಿಯಾಯಿತು. ಬಹು ಬಲವುಳ್ಳ ವನಾಗುವ ಪರ್ಯಂತರ ಅವನು ಬಹು ಆಶ್ಚರ್ಯ ವಾಗಿ ಸಹಾಯ ಹೊಂದಿದನು.