2 Kings · chapter 18 · verse 5
2 Kings 18:5 in Kannada
ಅವನು ಇಸ್ರಾಯೇಲಿನ ದೇವರಾದ ಕರ್ತನಲ್ಲಿ ಭರವಸವುಳ್ಳ ವನಾಗಿದ್ದನು; ಅವನಿಗೆ ಮುಂಚೆ ಇದ್ದವರಲ್ಲಿಯೂ ಅವನ ತರುವಾಯ ಯೆಹೂದದ ಎಲ್ಲಾ ಅರಸುಗಳ ಲ್ಲಿಯೂ ಅವನ ಹಾಗೆ ಇದ್ದವನು ಒಬ್ಬನೂ ಇಲ್ಲ.
Avanu israayelina devaraada kartanalli bharavasavulla vanaagiddanu; avanige munche iddavaralliyoo avana taruvaaya yehoodada ellaa arasugala lliyoo avana haage iddavanu obbanoo illa.
2 Kings 18:5 in English
- King James Version (KJV)
- He trusted in the LORD God of Israel; so that after him was none like him among all the kings of Judah, nor [any] that were before him.
- World English Bible (WEB)
- He trusted in the LORD, the God of Israel, so that after him was no one like him among all the kings of Judah, nor among them that were before him.
- American Standard Version (ASV)
- He trusted in Jehovah, the God of Israel; so that after him was none like him among all the kings of Judah, nor [among them] that were before him.
- Bible in Basic English (BBE)
- He had faith in the Lord, the God of Israel; so that there was no one like him among all the kings of Judah who were before him.
- Darby Translation (DBY)
- He trusted in Jehovah the God of Israel; so that after him was none like him among all the kings of Judah, nor [among any] that were before him.
- Webster's Bible (WBS)
- He trusted in the LORD God of Israel; so that after him was none like him among all the kings of Judah, nor [any] that were before him.
- Young's Literal Translation (YLT)
- In Jehovah, God of Israel, he hath trusted, and after him there hath not been like him among all the kings of Judah, nor [among any] who were before him;
Read in context
- 3ಅವನು ತನ್ನ ತಂದೆಯಾದ ದಾವೀದನು ಮಾಡಿದ ಹಾಗೆ ಕರ್ತನ ದೃಷ್ಟಿಗೆ ಒಳ್ಳೆಯದನ್ನು ಮಾಡಿದನು.
- 4ಅವನು ಉನ್ನತ ಸ್ಥಳಗಳನ್ನು ತೆಗೆದುಹಾಕಿ, ವಿಗ್ರಹ ಗಳನ್ನು ಒಡೆದುಬಿಟ್ಟು, ತೋಪುಗಳನ್ನು ಕಡಿದುಹಾಕಿ, ಮೋಶೆಯು ಮಾಡಿದ ತಾಮ್ರದ ಸರ್ಪವನ್ನು ಚೂರುಚೂರು ಮಾಡಿದನು. ಆ ದಿವಸಗಳ ವರೆಗೂ ಇಸ್ರಾ ಯೇಲಿನ ಮಕ್ಕಳು ಅದಕ್ಕೆ ಧೂಪಸುಡುತ್ತಿದ್ದರು. ಅದನ್ನು ತಾಮ್ರದ ತುಂಡು ಎಂದು ಅವನು ಕರೆದನು.
- 5ಅವನು ಇಸ್ರಾಯೇಲಿನ ದೇವರಾದ ಕರ್ತನಲ್ಲಿ ಭರವಸವುಳ್ಳ ವನಾಗಿದ್ದನು; ಅವನಿಗೆ ಮುಂಚೆ ಇದ್ದವರಲ್ಲಿಯೂ ಅವನ ತರುವಾಯ ಯೆಹೂದದ ಎಲ್ಲಾ ಅರಸುಗಳ ಲ್ಲಿಯೂ ಅವನ ಹಾಗೆ ಇದ್ದವನು ಒಬ್ಬನೂ ಇಲ್ಲ.
- 6ಅವನು ಕರ್ತನನ್ನು ಹಿಂಬಾಲಿಸುವದನ್ನು ಬಿಟ್ಟುಬಿಡದೆ ಆತನಿಗೆ ಹೊಂದಿಕೊಂಡು ಕರ್ತನು ಮೋಶೆಗೆ ಆಜ್ಞಾ ಪಿಸಿದ ಆಜ್ಞೆಗಳನ್ನು ಕೈಕೊಂಡನು.
- 7ಕರ್ತನು ಅವನ ಸಂಗಡ ಇದ್ದನು; ಅವನು ಯಾವ ಕಡೆಗೆ ಹೋದರೂ ಅವನಿಗೆ ಸಫಲವಾಗುತ್ತಿತ್ತು. ಅವನು ಅಶ್ಶೂರಿನ ಅರಸ ನನ್ನು ಸೇವಿಸದೆ ಅವನ ಮೇಲೆ ತಿರುಗಿ ಬಿದ್ದನು.
Cross references
- 2 Kings 23:25 2 ಅರಸುಗಳು 23:25ತನ್ನ ಪೂರ್ಣಹೃದಯ ದಿಂದಲೂ ತನ್ನ ಪೂರ್ಣಪ್ರಾಣದಿಂದಲೂ ಪೂರ್ಣ ಬಲದಿಂದಲೂ ಮೋಶೆಯ ಎಲ್ಲಾ ನ್ಯಾಯಪ್ರಮಾ ಣದ ಪ್ರಕಾರ ಕರ್ತನ ಬಳಿಗೆ ತಿರುಗಿದ ಅರಸನ ಹಾಗೆ ಅವನ ಮುಂದೆ ಯಾವನೂ ಇರಲಿಲ್ಲ; ಅವನ ತರುವಾಯ ಅವನ ಹಾಗೆ ಯಾವನೂ ಎದ್ದಿರಲಿಲ್ಲ.
- 2 Kings 19:10 2 ಅರಸುಗಳು 19:10ನೀವು ಯೆಹೂದದ ಅರಸನಾದ ಹಿಜ್ಕೀಯನಿಗೆ ಹೇಳಬೇಕಾದದ್ದೇನಂದರೆ--ಯೆರೂಸಲೇಮು ಅಶ್ಶೂ ರಿನ ಅರಸನ ಕೈಯಲ್ಲಿ ಒಪ್ಪಿಸಲ್ಪಡುವದಿಲ್ಲವೆಂದು ನೀನು ನಂಬಿರುವ ನಿನ್ನ ದೇವರು ನಿನ್ನನ್ನು ಮೋಸಗೊಳಿಸ ದಿರಲಿ.
- Matthew 27:43 ಮತ್ತಾಯನು 27:43ಇವನು ದೇವರಲ್ಲಿ ವಿಶ್ವಾಸವಿಟ್ಟವನು; ದೇವರಿಗೆ ಇಷ್ಟವಿದ್ದರೆ ಆತನು ಇವನನ್ನು ಈಗ ಬಿಡಿಸಲಿ; ಯಾಕಂದರೆ ಆತನು--ನಾನು ದೇವಕುಮಾರನು ಎಂದು ಹೇಳಿದ್ದಾನೆ ಅಂದರು.
- Ephesians 1:12 ಎಫೆಸದವರಿಗೆ 1:12ಕ್ರಿಸ್ತನ ಮಹಿಮೆಯು ಸ್ತುತಿಸಲ್ಪಡುವಂತೆ ಆತನಲ್ಲಿ ನಾವು ಮೊದಲು ನಂಬಿಕೆಯಿಟ್ಟೆವು.
- Psalm 146:5–6 ಕೀರ್ತನೆಗಳು 146:5–6ಯಾಕೋಬನ ದೇವರನ್ನು ತನ್ನ ಸಹಾಯವನ್ನಾಗಿ ಮಾಡಿಕೊಂಡವನು ಧನ್ಯನು; ಅವನು ತನ್ನ ದೇವರಾದ ಕರ್ತನ ಮೇಲೆ ತನ್ನ ನಿರೀಕ್ಷೆ ಇಡುವನು. ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಎಲ್ಲವನ್ನೂ ಉಂಟುಮಾಡಿದಾತನೇ ಎಂದೆಂದಿಗೂ ವಾಗ್ದಾನ ನೆರವೇರಿಸುತ್ತಾನೆ.
- Psalm 27:1–2 ಕೀರ್ತನೆಗಳು 27:1–2ಕರ್ತನು ನನ್ನ ಬೆಳಕೂ ರಕ್ಷಣೆಯೂ ಆಗಿದ್ದಾನೆ; ನಾನು ಯಾರಿಗೆ ಭಯಪಡು ವೆನು? ಕರ್ತನು ನನ್ನ ಜೀವದ ಬಲವಾಗಿದ್ದಾನೆ; ನಾನು ಯಾರಿಗೆ ಹೆದರುವೆನು? ನನ್ನ ಮಾಂಸವನ್ನು ತಿನ್ನಬೇಕೆಂದು ದುಷ್ಟರು ಅಂದರೆ ನನ್ನ ವೈರಿಗಳೂ ಶತ್ರುಗಳೂ ಬಂದಾಗ ಅವರು ಎಡವಿಬಿದ್ದರು.
- 2 Chronicles 32:7–8 2 ಪೂರ್ವಕಾಲವೃತ್ತಾಂತ 32:7–8ಬಲಗೊಳ್ಳಿರಿ; ಧೈರ್ಯ ವಾಗಿರ್ರಿ; ಅಶ್ಶೂರಿನ ಅರಸನ ನಿಮಿತ್ತವೂ ಅವನ ಸಂಗಡ ಕೂಡಿರುವ ಮಹಾಗುಂಪಿನ ನಿಮಿತ್ತವೂ ಭಯ ಪಡಬೇಡಿರಿ; ಹೆದರಬೇಡಿರಿ. ಯಾಕಂದರೆ ಅವನ ಸಂಗಡ ಇರುವವರಿಗಿಂತ ನಮ್ಮ ಸಂಗಡ ಅನೇಕರು ಇದ್ದಾರೆ. ಅವನ ಸಂಗಡ ಮಾಂಸದ ತೋಳು; ಆದರೆ ನಮ್ಮ ಸಂಗಡ ನಮಗೆ ಸಹಾಯ ಕೊಡುವದಕ್ಕೂ ನಮ್ಮ ಯುದ್ಧಗಳನ್ನು ನಡಿಸುವದಕ್ಕೂ ನಮ್ಮ ದೇವರಾದ ಕರ್ತನು ತಾನೇ ಇದ್ದಾನೆ ಎಂದು ಹೇಳಿದನು. ಆದ ದರಿಂದ ಜನರು ಯೆಹೂದದ ಅರಸನಾದ ಹಿಜ್ಕೀಯನ ಮಾತುಗಳಲ್ಲಿ ಆತುಕೊಂಡರು.
- Job 13:15 ಯೋಬನು 13:15ಆತನು ನನ್ನನ್ನು ಕೊಂದರೂ ನಾನು ಆತನಲ್ಲಿ ಭರವಸೆ ಇಡುವೆನು, ಆದರೆ ನನ್ನ ಮಾರ್ಗ ಗಳನ್ನು ಉಳಿಸಿಕೊಳ್ಳುವೆನು.
- Psalm 13:5 ಕೀರ್ತನೆಗಳು 13:5ನಾನಾದರೋ ನಿನ್ನ ಕರುಣೆಯಲ್ಲಿ ಭರವಸವಿ ಟ್ಟಿದ್ದೇನೆ; ನಿನ್ನ ರಕ್ಷಣೆಯಲ್ಲಿ ನನ್ನ ಹೃದಯವು ಉಲ್ಲಾ ಸಪಡುವದು.ನಾನು ಕರ್ತನಿಗೆ ಹಾಡುವೆನು; ಆತನು ನನಗೆ ಮೇಲು ಮಾಡಿದ್ದಾನೆ.
- Psalm 84:12 ಕೀರ್ತನೆಗಳು 84:12ಸೈನ್ಯಗಳ ಓ ಕರ್ತನೇ, ನಿನ್ನಲ್ಲಿ ಭರವಸವಿಡುವ ಮನುಷ್ಯನು ಧನ್ಯನು.
- 2 Chronicles 14:11 2 ಪೂರ್ವಕಾಲವೃತ್ತಾಂತ 14:11ಆಗ ಆಸನು ತನ್ನ ದೇವರಾದ ಕರ್ತನನ್ನು ಕರೆದು--ಕರ್ತನೇ, ಅನೇಕರ ಮಧ್ಯದಲ್ಲಿ ಬಲಹೀನರಿಗೆ ಸಹಾಯಕೊಡು ವವನು ನಮ್ಮ ದೇವರಾದ ಕರ್ತನೇ, ನಮಗೆ ಸಹಾಯ ಕೊಡು; ಯಾಕಂದರೆ ನಾವು ನಿನ್ನ ಮೇಲೆ ಆತುಕೊಂಡಿ ದ್ದೇವೆ; ನಿನ್ನ ಹೆಸರಿನಲ್ಲಿ ನಾವು ಈ ಗುಂಪಿನ ಮೇಲೆ ಹೋಗುತ್ತೇವೆ; ಓ ಕರ್ತನೇ, ನಿನ್ನ ಹೊರತು ಬೇರೆ ಯಾರೂ ಇಲ್ಲ, ನೀನೇ ನಮ್ಮ ದೇವರು; ಮನುಷ್ಯನು ನಿನ್ನೆದುರಿನಲ್ಲಿ ಬಲಗೊಳ್ಳದಿರಲಿ ಅಂದನು.
- 2 Kings 19:15–19 2 ಅರಸುಗಳು 19:15–19ಇದಲ್ಲದೆ ಹಿಜ್ಕೀಯನು ಕರ್ತನ ಮುಂದೆ ಪ್ರಾರ್ಥನೆ ಮಾಡಿ ಹೇಳಿದ್ದೇನಂದರೆ--ಕೆರೂಬಿಗಳ ಮಧ್ಯದಲ್ಲಿ ವಾಸ ವಾಗಿರುವ ಇಸ್ರಾಯೇಲಿನ ದೇವರಾದ ಕರ್ತನೇ, ನೀನೊಬ್ಬನೇ ಭೂಮಿಯ ಎಲ್ಲಾ ರಾಜ್ಯಗಳಿಗೆ ದೇವ ರಾಗಿದ್ದೀ. ನೀನೇ ಆಕಾಶವನ್ನೂ ಭೂಮಿಯನ್ನೂ ಉಂಟು ಮಾಡಿದ್ದೀ. ಕರ್ತನೇ, ಕಿವಿ ಕೊಟ್ಟು ಕೇಳು; ಕರ್ತನೆ, ಕಣ್ಣುಗಳನ್ನು ತೆರೆದುನೋಡು. ಸನ್ಹೇರೀಬನು ಜೀವವುಳ್ಳ ದೇವರನ್ನು ನಿಂದಿಸಿ ಕಳುಹಿಸಿದ ಮಾತು ಗಳನ್ನು ಕೇಳು. ಕರ್ತನೇ, ನಿಶ್ಚಯವಾಗಿ ಅಶ್ಶೂರಿನ ಅರಸುಗಳು ಜನಾಂಗಗಳನ್ನೂ ಅವರ ದೇಶಗಳನ್ನೂ ಹಾಳು ಮಾಡಿ ಅವರ ದೇವರುಗಳನ್ನು ಬೆಂಕಿಯಲ್ಲಿ ಹಾಕಿದ್ದಾರೆ. ಅವು ದೇವರುಗಳಲ್ಲ, ಮನುಷ್ಯನ ಕೈಕೆಲಸವಾದ ಕಟ್ಟಿಗೆಯೂ ಕಲ್ಲೂ ಆಗಿದ್ದವು. ಆದದ ರಿಂದ ಅವರು ಅವುಗಳನ್ನು ನಾಶಮಾಡಿದ್ದಾರೆ. ಆದರೆ ಈಗ ನಮ್ಮ ದೇವರಾದ ಕರ್ತನೇ, ನೀನೊಬ್ಬನೇ ದೇವರಾದ ಕರ್ತನಾಗಿದ್ದೀ ಎಂದು ಭೂಮಿಯ ಎಲ್ಲಾ ರಾಜ್ಯಗಳೂ ತಿಳಿಯುವ ಹಾಗೆ ನಮ್ಮನ್ನು ಅವನ ಕೈಯಿಂದ ತಪ್ಪಿಸಿ ರಕ್ಷಿಸು ಎಂಬದೇ.