Psalms · chapter 146 · verse 5
Psalm 146:5 in Kannada
ಯಾಕೋಬನ ದೇವರನ್ನು ತನ್ನ ಸಹಾಯವನ್ನಾಗಿ ಮಾಡಿಕೊಂಡವನು ಧನ್ಯನು; ಅವನು ತನ್ನ ದೇವರಾದ ಕರ್ತನ ಮೇಲೆ ತನ್ನ ನಿರೀಕ್ಷೆ ಇಡುವನು.
Yaakobana devarannu tanna sahaayavannaagi maadikondavanu dhanyanu; avanu tanna devaraada kartana mele tanna nireekshe iduvanu.
Psalm 146:5 in English
- King James Version (KJV)
- Happy [is he] that [hath] the God of Jacob for his help, whose hope [is] in the LORD his God:
- World English Bible (WEB)
- Happy is he who has the God of Jacob for his help, whose hope is in the LORD, his God,
- American Standard Version (ASV)
- Happy is he that hath the God of Jacob for his help, Whose hope is in Jehovah his God:
- Bible in Basic English (BBE)
- Happy is the man who has the God of Jacob for his help, whose hope is in the Lord his God:
- Darby Translation (DBY)
- Blessed is he who hath the God of Jacob for his help, whose hope is in Jehovah his God,
- Webster's Bible (WBS)
- Happy [is he] that [hath] the God of Jacob for his help, whose hope [is] in the LORD his God:
- Young's Literal Translation (YLT)
- O the happiness of him Who hath the God of Jacob for his help, His hope [is] on Jehovah his God,
Read in context
- 3ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನ ವರನ್ನು ನೆಚ್ಚಬೇಡಿರಿ, ಅವನು ಸಹಾಯಮಾಡ ಶಕ್ತ ನಲ್ಲ;
- 4ಅವನ ಉಸಿರು ಹೋಗಲು ಅವನು ಮಣ್ಣಿಗೆ ಹಿಂತಿರುಗುವನು; ಅದೇ ದಿನದಲ್ಲಿ ಅವನ ಸಂಕಲ್ಪ ಗಳೆಲ್ಲಾ ನಾಶವಾಗುತ್ತವೆ.
- 5ಯಾಕೋಬನ ದೇವರನ್ನು ತನ್ನ ಸಹಾಯವನ್ನಾಗಿ ಮಾಡಿಕೊಂಡವನು ಧನ್ಯನು; ಅವನು ತನ್ನ ದೇವರಾದ ಕರ್ತನ ಮೇಲೆ ತನ್ನ ನಿರೀಕ್ಷೆ ಇಡುವನು.
- 6ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಎಲ್ಲವನ್ನೂ ಉಂಟುಮಾಡಿದಾತನೇ ಎಂದೆಂದಿಗೂ ವಾಗ್ದಾನ ನೆರವೇರಿಸುತ್ತಾನೆ.
- 7ಹಿಂಸೆಗೆ ಗುರಿಯಾದವರ ನ್ಯಾಯವನ್ನು ಸ್ಥಾಪಿಸುವವನೂ ಹಸಿ ದವರಿಗೆ ಆಹಾರ ಕೊಡುವವನೂ ಆತನೇ.
Cross references
- Jeremiah 17:7–8 ಯೆರೆಮೀಯ 17:7–8ಯಾವನು ಕರ್ತನಲ್ಲಿ ಭರವಸವಿಟ್ಟಿರುವನೋ ಯಾವನಿಗೆ ಕರ್ತನು ನಿರೀಕ್ಷೆ ಯಾಗಿದ್ದಾನೋ ಆ ಮನುಷ್ಯನು ಧನ್ಯನು. ಅವನು ನೀರಿನ ಬಳಿಯಲ್ಲಿ ನೆಡಲ್ಪಟ್ಟು ಹೊಳೆಯ ಬಳಿಯಲ್ಲಿ ತನ್ನ ಬೇರುಗಳನ್ನು ಹರಡಿರುವ ಮರದ ಹಾಗಿರುವನು; ಧಗೆಯು ಬರುವಾಗ ಅದು ಬಾಡಿಹೋಗದೆ ಅದರ ಎಲೆ ಹಸುರಾಗಿರುವದು; ಕ್ಷಾಮದ ವರುಷದಲ್ಲಿ ಅದಕ್ಕೆ ಚಿಂತೆ ಇರುವದಿಲ್ಲ ಇಲ್ಲವೆ ಫಲಫಲಿಸುವದನ್ನು ನಿಲ್ಲಿಸುವದಿಲ್ಲ.
- Psalm 144:15 ಕೀರ್ತನೆಗಳು 144:15ಹೀಗಿರುವ ಜನರು ಧನ್ಯರು; ಕರ್ತನು ತಮಗೆ ದೇವರಾಗಿರುವ ಜನರು ಧನ್ಯರು.
- Psalm 71:5 ಕೀರ್ತನೆಗಳು 71:5ಓ ಕರ್ತನಾದ ದೇವರೇ, ನೀನು ನನ್ನ ನಿರೀಕ್ಷೆಯೂ ನನ್ನ ಯೌವನದಿಂದ ನನ್ನ ಭರವಸವೂ ಆಗಿದ್ದೀ.
- Psalm 33:12 ಕೀರ್ತನೆಗಳು 33:12ಕರ್ತನು ಯಾರ ದೇವರಾಗಿರು ವನೋ ಯಾವ ಜನಾಂಗವನ್ನು ತನ್ನ ಸ್ವಾಸ್ಥ್ಯವನ್ನಾಗಿ ಆದುಕೊಂಡಿದ್ದಾನೋ ಆ ಜನರೇ ಧನ್ಯರು.
- Psalm 46:11 ಕೀರ್ತನೆಗಳು 46:11ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.
- Psalm 84:12 ಕೀರ್ತನೆಗಳು 84:12ಸೈನ್ಯಗಳ ಓ ಕರ್ತನೇ, ನಿನ್ನಲ್ಲಿ ಭರವಸವಿಡುವ ಮನುಷ್ಯನು ಧನ್ಯನು.
- Exodus 3:6 ವಿಮೋಚನಕಾಂಡ 3:6ಇದಲ್ಲದೆ ಆತನು ಅವನಿಗೆ--ನಾನು ನಿನ್ನ ತಂದೆಯ ದೇವರು ಅಬ್ರಹಾಮನ ದೇವರು ಇಸಾಕನ ದೇವರು ಯಾಕೋಬನ ದೇವರು ಆಗಿದ್ದೇನೆ ಎಂದು ಹೇಳಿದನು. ಆಗ ಮೋಶೆಯು ದೇವರನ್ನು ನೋಡುವದಕ್ಕೆ ಭಯ ಪಟ್ಟು ತನ್ನ ಮುಖವನ್ನು ಮುಚ್ಚಿಕೊಂಡನು.
- Psalm 46:7 ಕೀರ್ತನೆಗಳು 46:7ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.
- Genesis 32:24–29 ಆದಿಕಾಂಡ 32:24–29ಆಗ ಯಾಕೋಬನು ಒಬ್ಬನೇ ಉಳಿದಾಗ ಒಬ್ಬ ಮನುಷ್ಯನು ಉದಯ ವಾಗುವ ವರೆಗೆ ಅವನ ಸಂಗಡ ಹೋರಾಡಿದನು. ಆ ಮನುಷ್ಯನು ಅವನನ್ನು ಜಯಿಸದೆ ಇರುವದನ್ನು ನೋಡಿ ಅವನ ತೊಡೆಯ ಕೀಲನ್ನು ಮುಟ್ಟಿದನು. ಅವನು ಹಾಗೆಯೇ ಆತನ ಸಂಗಡ ಹೋರಾಡುವಲ್ಲಿ ಯಾಕೋಬನ ತೊಡೆಯ ಕೀಲು ತಪ್ಪಿತು. ಆತನು ಯಾಕೋಬನಿಗೆ--ಉದಯವಾಯಿತು, ನನ್ನನು ಬಿಡು ಅಂದಾಗ ಅವನು--ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನ್ನು ಬಿಡೆನು ಅಂದನು. ಆತನು ಅವನಿಗೆ--ನಿನ್ನ ಹೆಸರು ಏನು ಅಂದಾಗ ಅವನು--ಯಾಕೋಬ ಅಂದನು. ಅದಕ್ಕೆ ಆತನುನಿನ್ನ ಹೆಸರು ಇನ್ನು ಮೇಲೆ ಯಾಕೋಬನೆಂದು ಕರೆಯಲ್ಪಡದೆ ಇಸ್ರಾಯೇಲ ಎಂದು ಕರೆಯಲ್ಪಡು ವದು. ಯಾಕಂದರೆ ನೀನು ದೇವರ ಸಂಗಡಲೂ ಮನುಷ್ಯರ ಸಂಗಡಲೂ ಹೋರಾಡಿ ಜಯಿಸಿದ್ದೀ ಅಂದನು. ಯಾಕೋಬನು--ನಿನ್ನ ಹೆಸರನ್ನು ನನಗೆ ತಿಳಿಸು ಎಂದು ಆತನನ್ನು ಕೇಳಿಕೊಂಡಾಗ ಆತನು--ನನ್ನ ಹೆಸರನ್ನು ಯಾಕೆ ಕೇಳುತ್ತೀ ಎಂದು ಹೇಳಿ ಅವನನ್ನು ಅಲ್ಲಿ ಆಶೀರ್ವದಿಸಿದನು.
- 1 Peter 1:21 1 ಪೇತ್ರನು 1:21ಹೀಗಿರ ಲಾಗಿ ನಿಮ್ಮ ನಂಬಿಕೆಯೂ ನಿರೀಕ್ಷೆಯೂ ದೇವರಲ್ಲಿಯೇ ನೆಲೆಗೊಂಡಿರುವಂತೆ ಆತನನ್ನು ಸತ್ತವರೊಳಗಿಂದ ಎಬ್ಬಿಸಿ ಆತನಿಗೆ ಪ್ರಭಾವವನ್ನು ಕೊಟ್ಟ ದೇವರಲ್ಲಿ ನೀವು ಆತನ ಮೂಲಕ ವಿಶ್ವಾಸವಿಟ್ಟವರಾದಿರಷ್ಟೆ.
- Psalm 39:7 ಕೀರ್ತನೆಗಳು 39:7ಹೀಗಿರಲಾಗಿ ಕರ್ತನೇ, ನಾನು ಇನ್ನು ಯಾವದಕ್ಕೆ ಕಾದುಕೊಳ್ಳಲಿ? ನನ್ನ ನಿರೀಕ್ಷೆ ನಿನ್ನಲ್ಲಿ ಅದೆ.
- Psalm 84:8 ಕೀರ್ತನೆಗಳು 84:8ಸೈನ್ಯಗಳ ದೇವರಾದ ಓ ಕರ್ತನೇ, ನನ್ನ ಪ್ರಾರ್ಥನೆ ಯನ್ನು ಕೇಳು; ಯಾಕೋಬನ ಓ ದೇವರೇ, ಕಿವಿ ಗೊಡು ಸೆಲಾ.