2 Kings · chapter 19 · verse 18
2 Kings 19:18 in Kannada
ಅವು ದೇವರುಗಳಲ್ಲ, ಮನುಷ್ಯನ ಕೈಕೆಲಸವಾದ ಕಟ್ಟಿಗೆಯೂ ಕಲ್ಲೂ ಆಗಿದ್ದವು.
Avu devarugalalla, manushyana kaikelasavaada kattigeyoo kalloo aagiddavu.
2 Kings 19:18 in English
- King James Version (KJV)
- And have cast their gods into the fire: for they [were] no gods, but the work of men’s hands, wood and stone: therefore they have destroyed them.
- World English Bible (WEB)
- and have cast their gods into the fire; for they were no gods, but the work of men’s hands, wood and stone. Therefore they have destroyed them.
- American Standard Version (ASV)
- and have cast their gods into the fire; for they were no gods, but the work of men’s hands, wood and stone; therefore they have destroyed them.
- Bible in Basic English (BBE)
- And have given their gods to the fire; for they were no gods, but wood and stone, the work of men's hands; so they have given them to destruction.
- Darby Translation (DBY)
- and have cast their gods into the fire; for they were no gods, but the work of men's hands, wood and stone; therefore have they destroyed them.
- Webster's Bible (WBS)
- And have cast their gods into the fire: for they [were] no gods, but the work of men's hands, wood and stone: therefore they have destroyed them.
- Young's Literal Translation (YLT)
- and have put their gods into fire, for they [are] no gods, but work of the hands of man, wood and stone, and destroy them.
Read in context
- 16ನೀನೇ ಆಕಾಶವನ್ನೂ ಭೂಮಿಯನ್ನೂ ಉಂಟು ಮಾಡಿದ್ದೀ. ಕರ್ತನೇ, ಕಿವಿ ಕೊಟ್ಟು ಕೇಳು; ಕರ್ತನೆ, ಕಣ್ಣುಗಳನ್ನು ತೆರೆದುನೋಡು. ಸನ್ಹೇರೀಬನು ಜೀವವುಳ್ಳ ದೇವರನ್ನು ನಿಂದಿಸಿ ಕಳುಹಿಸಿದ ಮಾತು ಗಳನ್ನು ಕೇಳು.
- 17ಕರ್ತನೇ, ನಿಶ್ಚಯವಾಗಿ ಅಶ್ಶೂರಿನ ಅರಸುಗಳು ಜನಾಂಗಗಳನ್ನೂ ಅವರ ದೇಶಗಳನ್ನೂ ಹಾಳು ಮಾಡಿ ಅವರ ದೇವರುಗಳನ್ನು ಬೆಂಕಿಯಲ್ಲಿ ಹಾಕಿದ್ದಾರೆ.
- 18ಅವು ದೇವರುಗಳಲ್ಲ, ಮನುಷ್ಯನ ಕೈಕೆಲಸವಾದ ಕಟ್ಟಿಗೆಯೂ ಕಲ್ಲೂ ಆಗಿದ್ದವು.
- 19ಆದದ ರಿಂದ ಅವರು ಅವುಗಳನ್ನು ನಾಶಮಾಡಿದ್ದಾರೆ. ಆದರೆ ಈಗ ನಮ್ಮ ದೇವರಾದ ಕರ್ತನೇ, ನೀನೊಬ್ಬನೇ ದೇವರಾದ ಕರ್ತನಾಗಿದ್ದೀ ಎಂದು ಭೂಮಿಯ ಎಲ್ಲಾ ರಾಜ್ಯಗಳೂ ತಿಳಿಯುವ ಹಾಗೆ ನಮ್ಮನ್ನು ಅವನ ಕೈಯಿಂದ ತಪ್ಪಿಸಿ ರಕ್ಷಿಸು ಎಂಬದೇ.
- 20ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿ ಕಳುಹಿಸಿದ್ದೇನಂದರೆ--ಇಸ್ರಾ ಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಅಶ್ಶೂರಿನ ಅರಸನಾದ ಸನ್ಹೇರೀಬನನ್ನು ಕುರಿತು ನೀನು ನನಗೆ ಪ್ರಾರ್ಥನೆ ಮಾಡಿದ್ದನ್ನು ನಾನು ಕೇಳಿ ದ್ದೇನೆ. ಕರ್ತನು ಅವನನ್ನು ಕುರಿತು ಹೇಳಿದ ವಾಕ್ಯ ವೇನಂದರೆ--
Cross references
- Acts 17:29 ಅಪೊಸ್ತಲರ ಕೃತ್ಯಗಳು 17:29ನಾವು ದೇವರ ಸಂತಾನದವ ರಾಗಿದ್ದ ಮೇಲೆ ದೈವತ್ವವು ಮನುಷ್ಯನ ಶಿಲ್ಪ ವಿದ್ಯೆ ಯಿಂದಲೂ ಕಲ್ಪನೆಯಿಂದಲೂ ಕೆತ್ತಿರುವ ಚಿನ್ನ ಬೆಳ್ಳಿ ಕಲ್ಲಿಗೆ ಸಮಾನವೆಂದು ನಾವು ಭಾವಿಸಲೇಬಾರದು.
- Isaiah 44:9–20 ಯೆಶಾಯ 44:9–20ಕೆತ್ತಿದ ವಿಗ್ರಹವನ್ನು ಮಾಡುವವರೆಲ್ಲರೂ ವ್ಯರ್ಥ ರೇ; ಅವರ ಮನೋರಂಜಕ ವಸ್ತುಗಳು ಯಾತಕ್ಕೂ ಬಾರವು; ಅವರು ನೋಡದೆ ಇಲ್ಲವೆ ತಿಳಿಯದೆ, ನಾಚಿಕೆಗೆ ಗುರಿಯಾಗುವಂತೆ ಅವುಗಳೇ ಅವರಿಗೆ ಸ್ವಂತ ಸಾಕ್ಷಿಗಳಾಗಿರುವವು. ದೇವರನ್ನು ರೂಪಿ ಸುವವರೂ ಇಲ್ಲವೆ ಕೆತ್ತಿದ ವ್ಯರ್ಥವಾದ ವಿಗ್ರಹವನ್ನು ಎರಕ ಹೊಯ್ಯುವವರು ಯಾರು? ಇಗೋ, ಅವನ ಸಂಗಡಿಗರೆಲ್ಲಾ ನಾಚಿಕೆಗೊಳಗಾಗುವರು; ಆ ಕೆಲಸ ದವರು ಮನುಷ್ಯ ಮಾತ್ರದವರೇ; ಅವರೆಲ್ಲರೂ ಒಟ್ಟುಗೂಡಿಕೊಂಡು ನಿಂತುಕೊಳ್ಳಲಿ, ಆದರೂ ಅವರು ಭಯಪಟ್ಟು ಒಟ್ಟಿಗೆ ಲಜ್ಜೆಪಡುವರು. ಕಮ್ಮಾ ರನು ಚಿಮಟದೊಂದಿಗೆ ಬೆಂಕಿಯಲ್ಲಿ ಕೆಲಸ ಮಾಡುತ್ತಾ ಚಮಟಿಗೆಯಿಂದ ಅದನ್ನು ಬಡಿದು ರೂಪಿಸಿ ತನ್ನ ತೋಳಿನ ಬಲದಿಂದ ಕೆಲಸ ಮಾಡುತ್ತಾನೆ; ಹೌದು, ಅವನು ಹಸಿದು ಬಲಹೀನನಾಗಿದ್ದರೂ ನೀರು ಕುಡಿ ಯದೆ ದಣಿಯುತ್ತಾನೆ. ಬಡಗಿಯು ನೂಲನ್ನು ಹಿಡಿದು ಗೆರೆ ಎಳೆದು ಬಾಚಿಯಿಂದ ಸಮಮಾಡಿ, ಕೈವಾರದಿಂದ ಗುರುತಿಸಿ, ಆಮೇಲೆ ಮನುಷ್ಯನ ಆಕಾ ರಕ್ಕೆ ತಂದು ಮನೆಯಲ್ಲಿ ವಾಸಿಸ ತಕ್ಕದ್ದಾಗಲೆಂದು ಮನುಷ್ಯನ ಅಂದದಂತೆ ರೂಪಿಸುವನು. ಅರಣ್ಯದ ಮಧ್ಯದಲ್ಲಿರುವ ಮರಗಳಲ್ಲಿ ದೇವದಾರುಗಳನ್ನು ಕಡಿದು; ತುರಾಯಿ, ಅಲ್ಲೊನ್, ಮತ್ತು ಓಕ್ಮರ ಗಳನ್ನು ತನ್ನ ಬಲಕ್ಕೋಸ್ಕರ ತೆಗೆದು ಕೊಳ್ಳುವನು. ಪೀತದಾರವನ್ನು ಅವನು ನೆಡಲು ಮಳೆಯು ಅದನ್ನು ಬೆಳೆಯಿಸುವದು. ಆಗ ಅದು ಮನುಷ್ಯರು ಉರಿಸು ವದಕ್ಕಾಗುವದು; ಅದರಿಂದ ಚಳಿಕಾಯಿಸಿಕೊಳ್ಳು ವನು, ಹೌದು, ಅದನ್ನು ಬೆಂಕಿ ಹಚ್ಚಿ ರೊಟ್ಟಿ ಸುಡು ವನು; ಹೌದು, ಅವನು ಒಂದು ದೇವರನ್ನು ಮಾಡಿ ಅದಕ್ಕೆ ನಮಸ್ಕರಿಸುವನು; ಅದರಲ್ಲಿ ಒಂದು ಕೆತ್ತಿದ ವಿಗ್ರಹವನ್ನು ಮಾಡಿ, ಅದಕ್ಕೆ ಅಡ್ಡಬಿಳುವನು. ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು; ಅದರ ಇನ್ನೊಂದು ಭಾಗದಲ್ಲಿ ಮಾಂಸವನ್ನು ಉಣ್ಣುವನು; ಮಾಂಸವನ್ನು ಸುಟ್ಟು ತೃಪ್ತಿಹೊಂದುವನು; ಹೌದು, ಅವನು ಚಳಿಕಾಯಿಸಿ ಕೊಳ್ಳುತ್ತಾ--ಆಹಾ! ಬೆಂಕಿ ಯನ್ನು ಕಂಡೆ, ಬೆಚ್ಚಗಾಯಿತು ಅಂದುಕೊಳ್ಳುವನು; ಅದರಲ್ಲಿ ಉಳಿದ ಭಾಗವನ್ನು ದೇವರನ್ನಾಗಿಯೂ ಕೆತ್ತಿದ ವಿಗ್ರಹವನ್ನಾಗಿಯೂ ಮಾಡಿ ಅದಕ್ಕೆ ಅಡ್ಡಬಿದ್ದು ನಮಸ್ಕರಿಸಿ--ನೀನೇ ನನ್ನ ದೇವರು, ನನ್ನನ್ನು ಕಾಪಾಡು ಎಂದು ಬೇಡಿಕೊಳ್ಳುವನು. ಅವರು ಏನೂ ತಿಳಿಯ ದವರು ಇಲ್ಲವೆ ಏನೂ ಗ್ರಹಿಸಲಾರದವರು; ಆತನು ಅವರ ಕಣ್ಣು ಕಾಣದಂತೆಯೂ ಹೃದಯಗಳು ಗ್ರಹಿಸ ದಂತೆಯೂ ಮುಚ್ಚಿ ಬಿಟ್ಟಿದ್ದಾನೆ. ನಾನು ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸಿದೆನು; ಹೌದು, ಅದರ ಕೆಂಡದಲ್ಲಿ ರೊಟ್ಟಿಮಾಡಿ ಮಾಂಸವನ್ನು ಸುಟ್ಟು ತಿಂದೆ ನಲ್ಲಾ; ಮಿಕ್ಕಿದ್ದರಲ್ಲಿ ಅಸಹ್ಯವಾದದ್ದನ್ನು ಮಾಡಲೋ, ಮರದ ತುಂಡಿಗೆ ಅಡ್ಡಬೀಳಬಹುದೋ ಅಂದುಕೊಳ್ಳು ವಷ್ಟು ಜ್ಞಾನವಿವೇಕಗಳು ಯಾರಿಗೂ ಇಲ್ಲ, ಯಾರೂ ಇದನ್ನು ಮನಸ್ಸಿಗೆತಾರರು. ಅವನು ತಿನ್ನುವದು ಬೂದಿಯೇ; ಮೋಸಕ್ಕೊಳಗಾದ ಹೃದಯವು ಅವನಿಗೆ ದಾರಿ ತಪ್ಪಿಸಿದ ಕಾರಣ ನನ್ನ ಬಲಗೈಯಲ್ಲಿ ಸುಳ್ಳು ಇದೆಯಲ್ಲಾ ಎಂದು ಅಂದುಕೊಳ್ಳಲೂ ತನ್ನ ಪ್ರಾಣ ವನ್ನು ಕಾಪಾಡಿಕೊಳ್ಳಲೂ ಅವನಿಂದಾಗದು.
- Jeremiah 10:3–9 ಯೆರೆಮೀಯ 10:3–9ಜನಗಳ ಪದ್ಧತಿಗಳು ವ್ಯರ್ಥ ವಾಗಿವೆ. ಹೇಗಂದರೆ ಅಡವಿಯಲ್ಲಿ ಒಬ್ಬನು ಮರವನ್ನು ಕಡಿಯುತ್ತಾನೆ; ಅದು ಕೊಡಲಿಯಿಂದ ಬಡಿಗೆಯವನ ಕೈ ಕೆಲಸವೇ ಬೆಳ್ಳಿಯಿಂದಲೂ ಬಂಗಾರದಿಂದಲೂ ಅದನ್ನು ಅಲಂಕರಿಸುತ್ತಾರೆ; ಮೊಳೆಗಳಿಂದಲೂ ಸುತ್ತಿಗೆ ಗಳಿಂದಲೂ ಚಲಿಸದ ಹಾಗೆ ಅದನ್ನು ಬಿಗಿಸುತ್ತಾರೆ. ಅವು ಖರ್ಜೂರ ಮರದಂತೆ ನೆಟ್ಟಗೆ ಇವೆ. ಅವು ಮಾತನಾಡುವದಿಲ್ಲ; ಅವುಗಳನ್ನು ಹೊತ್ತುಕೊಳ್ಳ ತಕ್ಕದ್ದು, ಅವು ನಡೆಯಲಾರವು. ಅವುಗಳಿಗೆ ಭಯ ಪಡಬೇಡಿರಿ. ಅವು ಕೆಟ್ಟದ್ದನ್ನು ಮಾಡಲಾರವು ಇಲ್ಲವೆ ಒಳ್ಳೇದು ಮಾಡುವದು ಸಹ ಅವುಗಳಲ್ಲಿಲ್ಲ. ಓ ಕರ್ತನೇ, ನಿನ್ನ ಹಾಗೆ ಯಾರೂ ಇಲ್ಲ; ನೀನು ಮಹೋ ತ್ತಮನು, ನಿನ್ನ ಹೆಸರು ಪರಾಕ್ರಮದಲ್ಲಿ ದೊಡ್ಡದು. ಓ ಜನಾಂಗಗಳ ಅರಸನೇ, ನಿನಗೆ ಭಯಪಡದವ ನಾರು? ಅದು ನಿನಗೆ ಸಲ್ಲತಕ್ಕದ್ದು; ಜನಾಂಗಗಳ ಎಲ್ಲಾ ಜ್ಞಾನಿಗಳಲ್ಲಿಯೂ ಅವುಗಳ ಎಲ್ಲಾ ರಾಜ್ಯಗ ಳಲ್ಲಿಯೂ ನಿನ್ನ ಹಾಗೆ ಯಾರೂ ಇಲ್ಲ. ಅವರು ಒಟ್ಟಾರೆ ಕ್ರೂರಿಗಳೂ ಮೂರ್ಖರೂ ಆಗಿದ್ದಾರೆ; ಮರವು ವ್ಯರ್ಥವಾದ ಬೋಧನೆಯಾಗಿವೆ. ಬೆಳ್ಳಿಯ ತಗಡುಗಳನ್ನು ತಾರ್ಷೀಷಿನಿಂದಲೂ ಬಂಗಾರವನ್ನು ಊಫಜಿನಿಂದಲೂ ತರುತ್ತಾರೆ; ಅದು ಕೆತ್ತನೆಯವನ ಕೆಲಸ, ಎರಕ ಹೊಯ್ಯುವವನ ಕೈಯಿಂದ ಉಂಟಾ ದದ್ದು. ನೀಲಿಯೂ ಧೂಮ್ರ ವರ್ಣವೂ ಅವುಗಳ ವಸ್ತ್ರವಾಗಿದೆ; ಅವುಗಳೆಲ್ಲಾ ಕೌಶಲ್ಯಗಾರರ ಕೆಲಸವೇ.
- Isaiah 37:18–19 ಯೆಶಾಯ 37:18–19ಕರ್ತನೇ, ಅಶ್ಶೂರದ ಅರಸರು ಸಕಲ ಜನಾಂಗ ಗಳನ್ನೂ ದೇಶಗಳನ್ನೂ ಹಾಳುಮಾಡಿ, ಅವರ ದೇವತೆ ಗಳನ್ನು ಸಹ ಬೆಂಕಿಯಲ್ಲಿ ಹಾಕಿದ್ದು ನಿಜ. ಅವು ದೇವರುಗಳಲ್ಲ, ಮರ, ಕಲ್ಲು, ಮನುಷ್ಯರ ಕೈ ಕೆಲಸ ಗಳೇ ಆದದರಿಂದಲೇ ಅವರು ಅವುಗಳನ್ನು ಹಾಳು ಮಾಡಿದರು.
- Jeremiah 10:14–16 ಯೆರೆಮೀಯ 10:14–16ಪ್ರತಿ ಮನುಷ್ಯನು ತನ್ನ ಜ್ಞಾನದಲ್ಲಿ ಪಶುವಾಗಿದ್ದಾನೆ; ಎರಕ ಹೊಯ್ಯುವವರೆಲ್ಲಾ ಕೆತ್ತಿದ ವಿಗ್ರಹಕ್ಕೋಸ್ಕರ ನಾಚಿಕೆಪಡುತ್ತಾರೆ; ಅವರ ಎರಕ ವಿಗ್ರಹವು ಸುಳ್ಳಾದದ್ದು; ಅವುಗಳಲ್ಲಿ ಉಸಿರು ಇಲ್ಲ. ಅವು ವ್ಯರ್ಥವೇ, ತಪ್ಪಾದ ಕೆಲಸವೇ; ಅವು ವಿಚಾ ರಿಸಲ್ಪಡುವ ಕಾಲದಲ್ಲಿ ನಾಶವಾಗುವವು. ಯಾಕೋ ಬ್ಯರ ಪಾಲು ಇವುಗಳ ಹಾಗಲ್ಲ; ಆತನು ಸಮಸ್ತ ವನ್ನು ರೂಪಿಸಿದಾತನೇ; ಇಸ್ರಾಯೇಲ್ ಆತನ ಸ್ವಾಸ್ತ್ಯದ ಕೋಲು; ಸೈನ್ಯಗಳ ಕರ್ತನು ಎಂಬದು ಆತನ ಹೆಸರಾಗಿದೆ.
- Isaiah 46:1–2 ಯೆಶಾಯ 46:1–2ಬೇಲ್(ದೇವತೆಯು)ಬೊಗ್ಗಿದೆ, ನೆಬೋ (ದೇವತೆಯು) ಕುಗ್ಗಿದೆ; ಅವರ ವಿಗ್ರಹಗಳು ಮೃಗಗಳ ಮತ್ತು ಪಶುಗಳ ಮೇಲೆ ಇದ್ದವು, ನೀವು ಹೊರುತ್ತಿದ್ದವುಗಳು ಭಾರವಾದ ಹೊರೆಯಾಗಿದ್ದವು. ಆಯಾಸವುಳ್ಳ ಮೃಗಗಳಿಗೆ ಅವು ಭಾರವಾದವು. ಒಟ್ಟಿಗೆ ಕುಗ್ಗಿ, ಬೊಗ್ಗಿವೆ. ತಮ್ಮ ಮೇಲೆ ಬಿದ್ದ ಭಾರವನ್ನು ಹೊತ್ತು ನಿರ್ವಹಿಸಲಾರದೆ ತಾವೇ ಸೆರೆಗೆ ಹೋದವು.
- Psalm 115:4–8 ಕೀರ್ತನೆಗಳು 115:4–8ಅವರ ವಿಗ್ರಹಗಳು ಬೆಳ್ಳಿಯೂ ಬಂಗಾರವೂ ಮನುಷ್ಯನ ಕೈಕೆಲಸವೂ ಆಗಿವೆ. ಅವುಗಳಿಗೆ ಬಾಯಿ ಉಂಟು; ಮಾತಾಡುವದಿಲ್ಲ; ಕಣ್ಣುಗಳುಂಟು; ನೋಡು ವದಿಲ್ಲ. ಕಿವಿಗಳುಂಟು; ಕೇಳುವದಿಲ್ಲ. ಮೂಗು ಉಂಟು; ಮೂಸುವದಿಲ್ಲ. ಕೈಗಳುಂಟು; ಮುಟ್ಟುವ ದಿಲ್ಲ. ಕಾಲುಗಳುಂಟು; ನಡೆಯುವದಿಲ್ಲ. ತಮ್ಮ ಗಂಟಲಿನಿಂದ ಮಾತನಾಡುವದಿಲ್ಲ, ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಡುವವ ರೆಲ್ಲರೂ ಅವುಗಳ ಹಾಗೆಯೇ ಇದ್ದಾರೆ.
- 2 Samuel 5:21 2 ಸಮುವೇಲನು 5:21ಅಲ್ಲಿ ಫಿಲಿಷ್ಟಿಯರು ತಮ್ಮ ವಿಗ್ರಹಗಳನ್ನು ಬಿಟ್ಟುಹೋದದರಿಂದ ದಾವೀದನೂ ಅವನ ಜನರೂ ಅವುಗಳನ್ನು ಸುಟ್ಟುಬಿಟ್ಟರು.