Jeremiah · chapter 10 · verse 3
Jeremiah 10:3 in Kannada
ಜನಗಳ ಪದ್ಧತಿಗಳು ವ್ಯರ್ಥ ವಾಗಿವೆ. ಹೇಗಂದರೆ ಅಡವಿಯಲ್ಲಿ ಒಬ್ಬನು ಮರವನ್ನು ಕಡಿಯುತ್ತಾನೆ; ಅದು ಕೊಡಲಿಯಿಂದ ಬಡಿಗೆಯವನ ಕೈ ಕೆಲಸವೇ
Janagala paddhatigalu vyartha vaagive. Hegandare adaviyalli obbanu maravannu kadiyuttaane; adu kodaliyinda badigeyavana kai kelasave
Jeremiah 10:3 in English
- King James Version (KJV)
- For the customs of the people [are] vain: for [one] cutteth a tree out of the forest, the work of the hands of the workman, with the axe.
- World English Bible (WEB)
- For the customs of the peoples are vanity; for one cuts a tree out of the forest, the work of the hands of the workman with the ax.
- American Standard Version (ASV)
- For the customs of the peoples are vanity; for one cutteth a tree out of the forest, the work of the hands of the workman with the axe.
- Bible in Basic English (BBE)
- For that which is feared by the people is foolish: it is the work of the hands of the workman; for a tree is cut down by him out of the woods with his axe.
- Darby Translation (DBY)
- For the statutes of the peoples are vanity; for [it is] a tree cut out of the forest, worked with a chisel by the hands of the artizan;
- Webster's Bible (WBS)
- For the customs of the people [are] vain: for [one] cutteth a tree out of the forest, the work of the hands of the workman, with the ax.
- Young's Literal Translation (YLT)
- For the statutes of the peoples are vanity, For a tree from a forest hath one cut, Work of the hands of an artificer, with an axe,
Read in context
- 1ಇಸ್ರಾಯೇಲಿನ ಮನೆತನದವರೇ,ಕರ್ತನು ನಿಮಗೆ ಹೇಳುವ ವಾಕ್ಯವನ್ನು ಕೇಳಿರಿ;
- 2ಕರ್ತನು ಹೀಗೆ ಹೇಳುತ್ತಾನೆ, ಅನ್ಯರ ಆಚ ರಣೆಯನ್ನು ಕಲಿತುಕೊಳ್ಳಬೇಡಿರಿ, ಆಕಾಶದ ಗುರುತುಗಳಿಗೆ ದಿಗ್ಭ್ರಮೆಗೊಳ್ಳಬೇಡಿರಿ. ಅನ್ಯರು ಅವುಗಳಿಗೆ ದಿಗ್ಭ್ರಮೆಗೊಳ್ಳುತ್ತಾರೆ,
- 3ಜನಗಳ ಪದ್ಧತಿಗಳು ವ್ಯರ್ಥ ವಾಗಿವೆ. ಹೇಗಂದರೆ ಅಡವಿಯಲ್ಲಿ ಒಬ್ಬನು ಮರವನ್ನು ಕಡಿಯುತ್ತಾನೆ; ಅದು ಕೊಡಲಿಯಿಂದ ಬಡಿಗೆಯವನ ಕೈ ಕೆಲಸವೇ
- 4ಬೆಳ್ಳಿಯಿಂದಲೂ ಬಂಗಾರದಿಂದಲೂ ಅದನ್ನು ಅಲಂಕರಿಸುತ್ತಾರೆ; ಮೊಳೆಗಳಿಂದಲೂ ಸುತ್ತಿಗೆ ಗಳಿಂದಲೂ ಚಲಿಸದ ಹಾಗೆ ಅದನ್ನು ಬಿಗಿಸುತ್ತಾರೆ.
- 5ಅವು ಖರ್ಜೂರ ಮರದಂತೆ ನೆಟ್ಟಗೆ ಇವೆ. ಅವು ಮಾತನಾಡುವದಿಲ್ಲ; ಅವುಗಳನ್ನು ಹೊತ್ತುಕೊಳ್ಳ ತಕ್ಕದ್ದು, ಅವು ನಡೆಯಲಾರವು. ಅವುಗಳಿಗೆ ಭಯ ಪಡಬೇಡಿರಿ. ಅವು ಕೆಟ್ಟದ್ದನ್ನು ಮಾಡಲಾರವು ಇಲ್ಲವೆ ಒಳ್ಳೇದು ಮಾಡುವದು ಸಹ ಅವುಗಳಲ್ಲಿಲ್ಲ.
Cross references
- Isaiah 44:9–20 ಯೆಶಾಯ 44:9–20ಕೆತ್ತಿದ ವಿಗ್ರಹವನ್ನು ಮಾಡುವವರೆಲ್ಲರೂ ವ್ಯರ್ಥ ರೇ; ಅವರ ಮನೋರಂಜಕ ವಸ್ತುಗಳು ಯಾತಕ್ಕೂ ಬಾರವು; ಅವರು ನೋಡದೆ ಇಲ್ಲವೆ ತಿಳಿಯದೆ, ನಾಚಿಕೆಗೆ ಗುರಿಯಾಗುವಂತೆ ಅವುಗಳೇ ಅವರಿಗೆ ಸ್ವಂತ ಸಾಕ್ಷಿಗಳಾಗಿರುವವು. ದೇವರನ್ನು ರೂಪಿ ಸುವವರೂ ಇಲ್ಲವೆ ಕೆತ್ತಿದ ವ್ಯರ್ಥವಾದ ವಿಗ್ರಹವನ್ನು ಎರಕ ಹೊಯ್ಯುವವರು ಯಾರು? ಇಗೋ, ಅವನ ಸಂಗಡಿಗರೆಲ್ಲಾ ನಾಚಿಕೆಗೊಳಗಾಗುವರು; ಆ ಕೆಲಸ ದವರು ಮನುಷ್ಯ ಮಾತ್ರದವರೇ; ಅವರೆಲ್ಲರೂ ಒಟ್ಟುಗೂಡಿಕೊಂಡು ನಿಂತುಕೊಳ್ಳಲಿ, ಆದರೂ ಅವರು ಭಯಪಟ್ಟು ಒಟ್ಟಿಗೆ ಲಜ್ಜೆಪಡುವರು. ಕಮ್ಮಾ ರನು ಚಿಮಟದೊಂದಿಗೆ ಬೆಂಕಿಯಲ್ಲಿ ಕೆಲಸ ಮಾಡುತ್ತಾ ಚಮಟಿಗೆಯಿಂದ ಅದನ್ನು ಬಡಿದು ರೂಪಿಸಿ ತನ್ನ ತೋಳಿನ ಬಲದಿಂದ ಕೆಲಸ ಮಾಡುತ್ತಾನೆ; ಹೌದು, ಅವನು ಹಸಿದು ಬಲಹೀನನಾಗಿದ್ದರೂ ನೀರು ಕುಡಿ ಯದೆ ದಣಿಯುತ್ತಾನೆ. ಬಡಗಿಯು ನೂಲನ್ನು ಹಿಡಿದು ಗೆರೆ ಎಳೆದು ಬಾಚಿಯಿಂದ ಸಮಮಾಡಿ, ಕೈವಾರದಿಂದ ಗುರುತಿಸಿ, ಆಮೇಲೆ ಮನುಷ್ಯನ ಆಕಾ ರಕ್ಕೆ ತಂದು ಮನೆಯಲ್ಲಿ ವಾಸಿಸ ತಕ್ಕದ್ದಾಗಲೆಂದು ಮನುಷ್ಯನ ಅಂದದಂತೆ ರೂಪಿಸುವನು. ಅರಣ್ಯದ ಮಧ್ಯದಲ್ಲಿರುವ ಮರಗಳಲ್ಲಿ ದೇವದಾರುಗಳನ್ನು ಕಡಿದು; ತುರಾಯಿ, ಅಲ್ಲೊನ್, ಮತ್ತು ಓಕ್ಮರ ಗಳನ್ನು ತನ್ನ ಬಲಕ್ಕೋಸ್ಕರ ತೆಗೆದು ಕೊಳ್ಳುವನು. ಪೀತದಾರವನ್ನು ಅವನು ನೆಡಲು ಮಳೆಯು ಅದನ್ನು ಬೆಳೆಯಿಸುವದು. ಆಗ ಅದು ಮನುಷ್ಯರು ಉರಿಸು ವದಕ್ಕಾಗುವದು; ಅದರಿಂದ ಚಳಿಕಾಯಿಸಿಕೊಳ್ಳು ವನು, ಹೌದು, ಅದನ್ನು ಬೆಂಕಿ ಹಚ್ಚಿ ರೊಟ್ಟಿ ಸುಡು ವನು; ಹೌದು, ಅವನು ಒಂದು ದೇವರನ್ನು ಮಾಡಿ ಅದಕ್ಕೆ ನಮಸ್ಕರಿಸುವನು; ಅದರಲ್ಲಿ ಒಂದು ಕೆತ್ತಿದ ವಿಗ್ರಹವನ್ನು ಮಾಡಿ, ಅದಕ್ಕೆ ಅಡ್ಡಬಿಳುವನು. ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು; ಅದರ ಇನ್ನೊಂದು ಭಾಗದಲ್ಲಿ ಮಾಂಸವನ್ನು ಉಣ್ಣುವನು; ಮಾಂಸವನ್ನು ಸುಟ್ಟು ತೃಪ್ತಿಹೊಂದುವನು; ಹೌದು, ಅವನು ಚಳಿಕಾಯಿಸಿ ಕೊಳ್ಳುತ್ತಾ--ಆಹಾ! ಬೆಂಕಿ ಯನ್ನು ಕಂಡೆ, ಬೆಚ್ಚಗಾಯಿತು ಅಂದುಕೊಳ್ಳುವನು; ಅದರಲ್ಲಿ ಉಳಿದ ಭಾಗವನ್ನು ದೇವರನ್ನಾಗಿಯೂ ಕೆತ್ತಿದ ವಿಗ್ರಹವನ್ನಾಗಿಯೂ ಮಾಡಿ ಅದಕ್ಕೆ ಅಡ್ಡಬಿದ್ದು ನಮಸ್ಕರಿಸಿ--ನೀನೇ ನನ್ನ ದೇವರು, ನನ್ನನ್ನು ಕಾಪಾಡು ಎಂದು ಬೇಡಿಕೊಳ್ಳುವನು. ಅವರು ಏನೂ ತಿಳಿಯ ದವರು ಇಲ್ಲವೆ ಏನೂ ಗ್ರಹಿಸಲಾರದವರು; ಆತನು ಅವರ ಕಣ್ಣು ಕಾಣದಂತೆಯೂ ಹೃದಯಗಳು ಗ್ರಹಿಸ ದಂತೆಯೂ ಮುಚ್ಚಿ ಬಿಟ್ಟಿದ್ದಾನೆ. ನಾನು ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸಿದೆನು; ಹೌದು, ಅದರ ಕೆಂಡದಲ್ಲಿ ರೊಟ್ಟಿಮಾಡಿ ಮಾಂಸವನ್ನು ಸುಟ್ಟು ತಿಂದೆ ನಲ್ಲಾ; ಮಿಕ್ಕಿದ್ದರಲ್ಲಿ ಅಸಹ್ಯವಾದದ್ದನ್ನು ಮಾಡಲೋ, ಮರದ ತುಂಡಿಗೆ ಅಡ್ಡಬೀಳಬಹುದೋ ಅಂದುಕೊಳ್ಳು ವಷ್ಟು ಜ್ಞಾನವಿವೇಕಗಳು ಯಾರಿಗೂ ಇಲ್ಲ, ಯಾರೂ ಇದನ್ನು ಮನಸ್ಸಿಗೆತಾರರು. ಅವನು ತಿನ್ನುವದು ಬೂದಿಯೇ; ಮೋಸಕ್ಕೊಳಗಾದ ಹೃದಯವು ಅವನಿಗೆ ದಾರಿ ತಪ್ಪಿಸಿದ ಕಾರಣ ನನ್ನ ಬಲಗೈಯಲ್ಲಿ ಸುಳ್ಳು ಇದೆಯಲ್ಲಾ ಎಂದು ಅಂದುಕೊಳ್ಳಲೂ ತನ್ನ ಪ್ರಾಣ ವನ್ನು ಕಾಪಾಡಿಕೊಳ್ಳಲೂ ಅವನಿಂದಾಗದು.
- 1 Peter 1:18 1 ಪೇತ್ರನು 1:18ನಿಮ್ಮ ತಂದೆ ಗಳಿಂದ ಕಲಿತುಕೊಂಡ ಸಂಪ್ರದಾಯದ ವ್ಯರ್ಥವಾದ ನಡವಳಿಕೆಯಿಂದ ನಿಮಗೆ ಬಿಡುಗಡೆಯಾದದ್ದು ನಶಿಸಿ ಹೋಗುವ ಬೆಳ್ಳಿ ಬಂಗಾರದಿಂದಲ್ಲ;
- Leviticus 18:30 ಯಾಜಕಕಾಂಡ 18:30ಆದದರಿಂದ ನಿಮಗಿಂತ ಮೊದಲಿನವರು ಮಾಡಿದಂತೆ ಅಸಹ್ಯವಾದ ಆಚರಣೆ ಗಳಲ್ಲಿ ಒಂದನ್ನಾದರೂ ನೀವು ಮಾಡದಂತೆ ಮತ್ತು ಅವುಗಳಲ್ಲಿ ನಿಮ್ಮನ್ನು ಹೊಲೆಮಾಡಿಕೊಳ್ಳದಂತೆ ನೀವು ನನ್ನ ಕಟ್ಟಳೆಗಳನ್ನು ಕೈಕೊಳ್ಳಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.
- Romans 1:21 ರೋಮಾಪುರದವರಿಗೆ 1:21ಅವರು ದೇವರನ್ನು ಅರಿತಾಗ ಆತನನ್ನು ದೇವರೆಂದು ಮಹಿಮೆಪಡಿಸಲಿಲ್ಲ, ಕೃತಜ್ಞತೆಯುಳ್ಳವರಾಗಿಯೂ ಇರಲಿಲ್ಲ; ಅವರು ತಮ್ಮ ಕಲ್ಪನೆಗಳಲ್ಲಿ ವಿಫಲರಾದರು ಮತ್ತು ಮೂರ್ಖತನದ ಅವರ ಹೃದಯವು ಕತ್ತಲಾ ಯಿತು.
- Jeremiah 10:8 ಯೆರೆಮೀಯ 10:8ಅವರು ಒಟ್ಟಾರೆ ಕ್ರೂರಿಗಳೂ ಮೂರ್ಖರೂ ಆಗಿದ್ದಾರೆ; ಮರವು ವ್ಯರ್ಥವಾದ ಬೋಧನೆಯಾಗಿವೆ.
- Matthew 6:7 ಮತ್ತಾಯನು 6:7ಆದರೆ ನೀವು ಪ್ರಾರ್ಥನೆ ಮಾಡುವಾಗ ಅನ್ಯರು ಮಾಡುವಂತೆ ವ್ಯರ್ಥವಾದದ್ದನ್ನು ಪದೇಪದೇ ಹೇಳ ಬೇಡಿರಿ ಯಾಕಂದರೆ ತಾವು ಬಹಳವಾಗಿ ಮಾತನಾಡು ವದರಿಂದ ತಮ್ಮ ಪ್ರಾರ್ಥನೆಯು ಕೇಳಲ್ಪಡುವದೆಂದು ಅವರು ಯೋಚಿಸುತ್ತಾರೆ.
- Isaiah 45:20 ಯೆಶಾಯ 45:20ಜನಾಂಗಗಳಲ್ಲಿ ತಪ್ಪಿಸಿಕೊಂಡವರಾದ ನೀವು ಒಟ್ಟಾಗಿ ಕೂಡಿಕೊಂಡು ಸವಿಾಪಕ್ಕೆ ಬನ್ನಿರಿ. ಮರದಿಂದ ಕೆತ್ತಿದ ತಮ್ಮ ವಿಗ್ರಹವನ್ನು ಹೊತ್ತು ಕೊಂಡು, ರಕ್ಷಿಸಲಾರದ ಆ ದೇವರಿಗೆ ಬಿನ್ನಹಿಸುವವರು ಏನೂ ತಿಳಿಯದವರಾಗಿದ್ದಾರೆ.
- 1 Kings 18:26–28 1 ಅರಸುಗಳು 18:26–28ಅವರು ತಮಗೆ ಕೊಡಲ್ಪಟ್ಟ ಹೋರಿ ಯನ್ನು ತೆಗೆದುಕೊಂಡು ಸಿದ್ಧಮಾಡಿ--ಓ ಬಾಳನೇ, ನಮ್ಮನ್ನು ಕೇಳೆಂದು ಉದಯದಿಂದ ಮಧ್ಯಾಹ್ನದ ವರೆಗೂ ಬಾಳನ ಹೆಸರನ್ನು ಕರೆಯುತ್ತಿದ್ದರು. ಆದರೆ ಒಂದು ಶಬ್ದವಾಗಲಿ ಪ್ರತ್ಯುತ್ತರ ಕೊಡುವವನಾಗಲಿ ಇರಲಿಲ್ಲ. ಅವರು ಮಾಡಿದ ಬಲಿಪೀಠದ ಹತ್ತಿರ ಕುಣಿದಾಡಿದರು. ಮಧ್ಯಾಹ್ನದಲ್ಲಿ ಎಲೀಯನು ಅವ ರನ್ನು ಗೇಲಿಮಾಡಿ ಅವರಿಗೆ--ದೊಡ್ಡ ಶಬ್ದದಿಂದ ಕೂಗಿರಿ, ಯಾಕಂದರೆ ಅವನು ಒಬ್ಬ ದೇವರು; ಇಲ್ಲವೆ ಮಾತನಾಡುತ್ತಿದ್ದಾನು; ಇಲ್ಲವೆ ಹಿಂದಟ್ಟುತ್ತಿದ್ದಾನು.; ಇಲ್ಲವೆ ಪ್ರಯಾಣದಲ್ಲಿದ್ದಾನು; ಇಲ್ಲವೆ ಅವನು ನಿದ್ರೆ ಮಾಡುತ್ತಿದ್ದಾನು; ಈಗ ಅವನು ಎಚ್ಚರಿಸಲ್ಪಡಬೇಕು ಅಂದನು. ಅವರು ದೊಡ್ಡ ಶಬ್ದದಿಂದ ಕೂಗಿ ತಮ್ಮ ಕ್ರಮದ ಪ್ರಕಾರವೇ ರಕ್ತವು ತಮ್ಮ ಮೇಲೆ ಸೋರುವ ಮಟ್ಟಿಗೂ ಕತ್ತಿಗಳಿಂದಲೂ ಚೂರಿಗಳಿಂದಲೂ ತಮ್ಮನ್ನು ಕೊಯ್ದುಕೊಂಡರು.
- Hosea 8:4–6 ಹೋಶೇಯ 8:4–6ಅವರು ಅರಸುಗಳನ್ನು ನೇಮಿಸಿದ್ದಾರೆ. ಆದರೆ ನನ್ನಿಂದಲ್ಲ, ಪ್ರಧಾನರನ್ನು ನೇಮಿಸಿದ್ದಾರೆ, ಅದು ನನಗೆ ತಿಳಿಯಲಿಲ್ಲ; ಅವರು ಕಡಿದುಬಿಡಲ್ಪಡುವ ಹಾಗೆ ತಮ್ಮ ಬೆಳ್ಳಿಯಿಂದಲೂ ತಮ್ಮ ಬಂಗಾರದಿಂದಲೂ ತಮಗೆ ವಿಗ್ರಹಗಳನ್ನು ಮಾಡಿಕೊಂಡಿದ್ದಾರೆ. ಓ ಸಮಾ ರ್ಯವೇ, ನಿನ್ನ ಬಸವನನ್ನು ನಾನು ತಳ್ಳಿಹಾಕಿದ್ದೇನೆ; ನನ್ನ ಕೋಪವು ಅವರ ಮೇಲೆ ಉರಿಯುತ್ತದೆ; ಅವರು ನಿರಪರಾಧಿಗಳಾಗದೆ ಇರುವದು ಎಷ್ಟರ ವರೆಗೆ? ಅದು ಇಸ್ರಾಯೇಲ್ಯರಿಂದಲೂ ಆಗಿದೆ; ಕೆಲಸಗಾರನು ಅದನ್ನು ಮಾಡಿದನು, ಆದ್ದರಿಂದ ಅದು ದೇವರಲ್ಲ; ಆದರೆ ಸಮಾರ್ಯದ ಕರುವು ಪುಡಿಪುಡಿಯಾಗಿ ಮುರಿಯಲ್ಪಡುವದು.
- Habakkuk 2:18–19 ಹಬಕ್ಕೂಕ 2:18–19ಅದನ್ನು ಕೆತ್ತಿ ರೂಪಿಸಿದವನ ಕೆತ್ತಿದ ವಿಗ್ರಹದಿಂದ ಪ್ರಯೋಜನವೇನು? ಸುಳ್ಳನ್ನು ಬೋಧಿಸುವಂಥ, ಅದನ್ನು ರೂಪಿಸಿದವನು ಮೂಕ ಬೊಂಬೆಗಳನ್ನು ಮಾಡಿ ಅದರಲ್ಲಿ ನಂಬಿಕೆಯಿಡು ವಂಥ, ಎರಕದ ವಿಗ್ರಹದಿಂದ ಪ್ರಯೋಜನವೇನು? ಮರಕ್ಕೆ--ಎಚ್ಚರವಾಗು; ಮೂಕವಾದ ಕಲ್ಲಿಗೆ--ಎದ್ದು ಬೋಧಿಸಲಿ ಎಂದು ಹೇಳುವವನಿಗೆ ಅಯ್ಯೋ! ಇಗೋ, ಅದು ಬಂಗಾರದಿಂದಲೂ ಬೆಳ್ಳಿಯಿಂದಲೂ ಹೊದಿಸಲ್ಪಟ್ಟಿದೆ, ಆದರೆ ಅದರಲ್ಲಿ ಉಸಿರು ಎಷ್ಟು ಮಾತ್ರವೂ ಇಲ್ಲ.ಆದರೆ ಕರ್ತನು ತನ್ನ ಪರಿಶುದ್ಧ ಮಂದಿರದಲ್ಲಿ ಇದ್ದಾನೆ; ಆತನ ಮುಂದೆ ಭೂಮಿಯೆಲ್ಲಾ ಮೌನವಾಗಿರಲಿ.
- Jeremiah 2:5 ಯೆರೆಮೀಯ 2:5ಕರ್ತನು ಹೀಗೆ ಹೇಳುತ್ತಾನೆ, ನಿಮ್ಮ ತಂದೆಗಳು ನನಗೆ ದೂರವಾಗಿ ವ್ಯರ್ಥತ್ವವನ್ನು ಹಿಂದಟ್ಟಿ ವ್ಯರ್ಥವಾಗುವ ಹಾಗೆ ನನ್ನಲ್ಲಿ ಯಾವ ಅಕ್ರಮವನ್ನು ಕಂಡಿದ್ದಾರೆ?
- Isaiah 40:19–31 ಯೆಶಾಯ 40:19–31ಕಂಚುಗಾರನು ವಿಗ್ರಹವನ್ನು ಎರಕ ಹೊಯ್ಯುತ್ತಾನೆ; ಅಕ್ಕಸಾಲಿಗನು ಅದಕ್ಕೆ ಚಿನ್ನದ ಕವಚವನ್ನು ಹೊದಿಸಿ; ಬೆಳ್ಳಿಯ ಸರಪಣಿಗಳನ್ನು ಹಾಕುವನು. ಕಾಣಿಕೆಯನ್ನಾಗಿ ಪ್ರತಿಷ್ಠಿಸಿಕೊಳ್ಳ ಲಾರದ ಬಡವನು ಹುಳುತು ಹೋಗದ ಮರವನ್ನು ಹುಡುಕಿ ಚಲಿಸದ ವಿಗ್ರಹವನ್ನು ತಯಾರಿಸುವದಕ್ಕೆ ಕುಯುಕ್ತಿಯ ಕೆಲಸಗಾರರನ್ನು ವಿಚಾರಿಸಿಕೊಳ್ಳುವನು. ನಿಮಗೆ ತಿಳಿದಿಲ್ಲವೋ? ನೀವು ಕೇಳಿಲ್ಲವೋ? ಆದಿಯಿಂದಲೇ ನಿಮಗೆ ತಿಳಿಸಲ್ಪಟ್ಟಿಲ್ಲವೋ? ಭೂಮಿ ಯು ಸ್ಥಾಪಿತವಾದಂದಿನಿಂದ ನಿಮಗೆ ಅರ್ಥವಾಗ ಲಿಲ್ಲವೋ? ಆಕಾಶ ಮಂಡಲವನ್ನು ತೆರೆಯಂತೆ ವಿಸ್ತರಿಸಿ ಅದರೊಳಗೆ ವಾಸಮಾಡುವ ಗುಡಾರದಂತೆ ಹರಡಿ ಭೂನಿವಾಸಿಗಳು ಮಿಡತೆಯಂತೆ ಕಾಣಿಸುವಷ್ಟು ಭೂವೃತ್ತದ ಮೇಲೆ ಕೂತಿರುವಾತನು ಆತನೇ. ಅದು ಪ್ರಭುಗಳನ್ನು ನಿರ್ನಾಮ ಮಾಡುತ್ತದೆ ಭೂಮಿಯ ನ್ಯಾಯಾಧಿಪತಿಗಳನ್ನು ಶೂನ್ಯವಾಗುವಂತೆ ಮಾಡು ತ್ತದೆ. 2 ಹೌದು, ಅವರು ನೆಡಲ್ಪಡುವದಿಲ್ಲ ಬಿತ್ತ ಲ್ಪಡುವದಿಲ್ಲ. ಹೌದು ಅವರ ಬುಡವು ಭೂಮಿ ಯಲ್ಲಿ ಬೇರೂರುವದಿಲ್ಲ. ಆತನು ಶ್ವಾಸವನ್ನು ಅವರ ಮೇಲೆ ಊದಲು ಒಣಗಿಹೋಗುವರು. ಬಿರು ಗಾಳಿಯು ಅವರನ್ನು ಹೊಟ್ಟಿನಂತೆ ಬಡಿದುಕೊಂಡು ಹೋಗುವದು. ಹೀಗಿರಲು ನನ್ನನ್ನು ಯಾರಿಗೆ ಹೋಲಿಸಿ ಸರಿ ಸಮಾನ ಮಾಡುತ್ತೀರಿ ಎಂದು ಪರಿಶುದ್ಧನಾದವನು ಹೇಳುತ್ತಾನೆ. ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ನೋಡಿರಿ; ಇಗೋ, ಇವುಗಳನ್ನು ಸೃಷ್ಟಿಸಿದಾತನು ಯಾರು? ಆತನೇ ತನ್ನ ಮಹಾಶಕ್ತಿಯಿಂದಲೂ ಅವುಗಳ ಸೈನ್ಯವನ್ನೆಲ್ಲಾ ಲೆಕ್ಕಮಾಡಿ ಹೊರಗೆ ತರು ವನು. ಆತನು ಅತಿ ಬಲಾಢ್ಯನಾಗಿರುವದರಿಂದ ಅವುಗಳೊಳಗೆ ಒಂದೂ ತಪ್ಪದು. ನನ್ನ ಮಾರ್ಗವು ಕರ್ತನಿಗೆ ಮರೆಯಾಗಿದೆ ಮತ್ತು ನನ್ನ ನ್ಯಾಯವು ನನ್ನ ದೇವರಿಂದ ದಾಟಿ ಹೋಯಿ ತಲ್ಲಾ! ಎಂದು ಯಾಕೋಬೇ ಯಾಕೆ ಹೇಳುತ್ತಿ? ಇಸ್ರಾಯೇಲೇ ಯಾಕೆ ಮಾತಾಡುತ್ತಿ? ನಿನಗೆ ಗೊತ್ತಿಲ್ಲವೋ? ನೀನು ಕೇಳಲಿಲ್ಲವೋ? ಕರ್ತನು ನಿರಂತರವಾದ ದೇವರೂ ಭೂಮಿಯ ಅಂತ್ಯಗಳನ್ನು ಸೃಷ್ಟಿಸಿದವನೂ ದಣಿಯುವದಿಲ್ಲ ಇಲ್ಲವೆ ಬಳಲುವ ದಿಲ್ಲ; ಆತನ ತಿಳುವಳಿಕೆಯು ಪರಿಶೋಧನೆಗೆ ಅಗಮ್ಯ. ಆತನು ದಣಿದವನಿಗೆ ಶಕ್ತಿಯನ್ನೂ ಬಲಹೀನನಿಗೆ ಬಹುಬಲವನ್ನೂ ಕೊಡುತ್ತಾನೆ. ಯೌವನಸ್ಥರೋ ದಣಿದು ಬಳಲುವರು ತರುಣರು ಸಂಪೂರ್ಣವಾಗಿ ಬೀಳುವರು.ಆದರೆ ಕರ್ತನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಅವರು ಹದ್ದುಗ ಳಂತೆ ರೆಕ್ಕೆಗಳಿಂದ ಬೆಟ್ಟವನ್ನು ಏರುವರು. ಓಡಿ ದಣಿಯರು, ನಡೆದು ಬಳಲರು. ಆದರೆ ಕರ್ತನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಅವರು ಹದ್ದುಗ ಳಂತೆ ರೆಕ್ಕೆಗಳಿಂದ ಬೆಟ್ಟವನ್ನು ಏರುವರು. ಓಡಿ ದಣಿಯರು, ನಡೆದು ಬಳಲರು.