2 Kings · chapter 19 · verse 21
2 Kings 19:21 in Kannada
ಚೀಯೋನಿನ ಮಗಳಾದ ಕನ್ಯಾಸ್ತ್ರೀ ನಿನ್ನನ್ನು ಉದಾಸೀನ ಮಾಡಿ ನಿನಗೆ ಅಪಹಾಸ್ಯ ಮಾಡು ತ್ತಾಳೆ; ಯೆರೂಸಲೇಮಿನ ಕುಮಾರ್ತೆ ನಿನ್ನ ಹಿಂದೆ ತಲೆ ಅಲ್ಲಾಡಿಸುತ್ತಾಳೆ.
Cheeyonina magalaada kanyaastree ninnannu udaaseena maadi ninage apahaasya maadu ttaale; yeroosalemina kumaarte ninna hinde tale allaadisuttaale.
2 Kings 19:21 in English
- King James Version (KJV)
- This [is] the word that the LORD hath spoken concerning him; The virgin the daughter of Zion hath despised thee, [and] laughed thee to scorn; the daughter of Jerusalem hath shaken her head at thee.
- World English Bible (WEB)
- This is the word that the LORD has spoken concerning him: ‘The virgin daughter of Zion has despised you and ridiculed you. The daughter of Jerusalem has shaken her head at you.
- American Standard Version (ASV)
- This is the word that Jehovah hath spoken concerning him: The virgin daughter of Zion hath despised thee and laughed thee to scorn; the daughter of Jerusalem hath shaken her head at thee.
- Bible in Basic English (BBE)
- This is the word which the Lord has said about him: In the eyes of the virgin daughter of Zion you are shamed and laughed at; the daughter of Jerusalem has made sport of you.
- Darby Translation (DBY)
- This is the word that Jehovah has spoken against him: The virgin-daughter of Zion despiseth thee, laugheth thee to scorn; The daughter of Jerusalem shaketh her head at thee.
- Webster's Bible (WBS)
- This [is] the word that the LORD hath spoken concerning him; The virgin the daughter of Zion hath despised thee, [and] laughed thee to scorn; the daughter of Jerusalem hath shaken her head at thee.
- Young's Literal Translation (YLT)
- this [is] the word that Jehovah spake concerning him: 'Trampled on thee — laughed at thee, Hath the virgin daughter of Zion Behind thee shaken the head — Hath the daughter of Jerusalem?
Read in context
- 19ಆದದ ರಿಂದ ಅವರು ಅವುಗಳನ್ನು ನಾಶಮಾಡಿದ್ದಾರೆ. ಆದರೆ ಈಗ ನಮ್ಮ ದೇವರಾದ ಕರ್ತನೇ, ನೀನೊಬ್ಬನೇ ದೇವರಾದ ಕರ್ತನಾಗಿದ್ದೀ ಎಂದು ಭೂಮಿಯ ಎಲ್ಲಾ ರಾಜ್ಯಗಳೂ ತಿಳಿಯುವ ಹಾಗೆ ನಮ್ಮನ್ನು ಅವನ ಕೈಯಿಂದ ತಪ್ಪಿಸಿ ರಕ್ಷಿಸು ಎಂಬದೇ.
- 20ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿ ಕಳುಹಿಸಿದ್ದೇನಂದರೆ--ಇಸ್ರಾ ಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಅಶ್ಶೂರಿನ ಅರಸನಾದ ಸನ್ಹೇರೀಬನನ್ನು ಕುರಿತು ನೀನು ನನಗೆ ಪ್ರಾರ್ಥನೆ ಮಾಡಿದ್ದನ್ನು ನಾನು ಕೇಳಿ ದ್ದೇನೆ. ಕರ್ತನು ಅವನನ್ನು ಕುರಿತು ಹೇಳಿದ ವಾಕ್ಯ ವೇನಂದರೆ--
- 21ಚೀಯೋನಿನ ಮಗಳಾದ ಕನ್ಯಾಸ್ತ್ರೀ ನಿನ್ನನ್ನು ಉದಾಸೀನ ಮಾಡಿ ನಿನಗೆ ಅಪಹಾಸ್ಯ ಮಾಡು ತ್ತಾಳೆ; ಯೆರೂಸಲೇಮಿನ ಕುಮಾರ್ತೆ ನಿನ್ನ ಹಿಂದೆ ತಲೆ ಅಲ್ಲಾಡಿಸುತ್ತಾಳೆ.
- 22ಯಾರನ್ನು ನಿಂದಿಸಿ ದೂಷಿ ಸಿದಿ? ಯಾರಿಗೆ ವಿರೋಧವಾಗಿ ಸ್ವರವನ್ನು ಎತ್ತಿ ನಿನ್ನ ಕಣ್ಣುಗಳನ್ನು ಮೇಲಕ್ಕೆ ಎತ್ತಿದಿ? ಇಸ್ರಾಯೇಲಿನ ಪರಿಶುದ್ಧನಿಗೆ ವಿರೋಧವಾಗಿಯೇ.
- 23ನಿನ್ನ ಸೇವಕರ ಮುಖಾಂತರ ಕರ್ತನನ್ನು ನಿಂದಿಸಿ ಹೇಳಿದ್ದು--ನಾನು ನನ್ನ ಹೆಚ್ಚಾದ ರಥಗಳಿಂದ ಪರ್ವತಗಳ ಶಿಖರಕ್ಕೂ ಲೆಬನೋನಿನ ಪಾರ್ಶ್ವಗಳಿಗೂ ಹೋಗಿ ಅದರ ಉನ್ನತ ವಾದ ದೇವದಾರುಗಳನ್ನೂ ಅದರ ಮುಖ್ಯವಾದ ತುರಾಯಿ ಮರಗಳನ್ನೂ ಕಡಿದು ಅದರ ಅಂಚಿನ ಗಡಿ ಸ್ಥಳಗಳಲ್ಲಿಯೂ ಅದರ ಫಲವುಳ್ಳ ಅಡವಿಯ ಲ್ಲಿಯೂ ಸೇರುತ್ತೇನೆ.
Cross references
- Lamentations 2:13 ಪ್ರಲಾಪಗಳು 2:13ಯೆರೂಸಲೇಮಿನ ಕುಮಾರ್ತೆಯೇ, ನಾನು ಯಾವದನ್ನು ನಿನಗೆ ಸಾಕ್ಷಿಯ ನ್ನಾಗಿಡಲಿ? ಯಾವದನ್ನು ನಿನಗೆ ಸಮಾನ ಮಾಡಲಿ? ಚೀಯೋನಿನ ಮಗಳಾದ ಕನ್ಯೆಯೇ, ನಿನ್ನನ್ನು ಆದರಿಸುವ ಹಾಗೆ ನಾನು ಯಾವದನ್ನು ನಿನಗೆ ಸಮಾನಮಾಡಲಿ? ನಿನ್ನ ಮುರಿಯುವಿಕೆಯು ಸಮುದ್ರದ ಹಾಗೆ ದೊಡ್ಡ ದಾಗಿದೆ, ನಿನ್ನನ್ನು ಗುಣಪಡಿಸುವವರು ಯಾರು?
- Matthew 27:39 ಮತ್ತಾಯನು 27:39ಅಲ್ಲಿ ಹೋಗುತ್ತಿದ್ದವರು ಆತನನ್ನು ದೂಷಿಸಿ ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾ--
- Jeremiah 14:17 ಯೆರೆಮೀಯ 14:17ಆದದರಿಂದ ನೀನು ಈ ಮಾತನ್ನು ಅವರಿಗೆ ಹೇಳಬೇಕು--ನನ್ನ ಕಣ್ಣುಗಳು ರಾತ್ರಿ ಹಗಲು ಬಿಡದೆ ಕಣ್ಣೀರು ಸುರಿಸಲಿ; ಯಾಕಂದರೆ ನನ್ನ ಜನರ ಮಗಳಾದ ಕನ್ಯೆಯು ಕ್ರೂರವಾದ ದೊಡ್ಡ ಏಟಿನಿಂದಲೂ ಪೆಟ್ಟಿನಿಂದಲೂ ಮುರಿಯಲ್ಪಟ್ಟಳು.
- Job 16:4 ಯೋಬನು 16:4ನಿಮ್ಮ ಪ್ರಾಣವು ನನ್ನ ಪ್ರಾಣದ ಸ್ಥಳದಲ್ಲಿ ಇದ್ದರೆ ನಾನು ಸಹ ನಿಮ್ಮ ಹಾಗೆ ಮಾತಾಡಬಹುದು; ಮಾತುಗಳನ್ನು ನಿಮ್ಮ ಮೇಲೆ ಕೂಡಿಸಬಹುದು; ನಿಮಗೆ ವಿರೋಧವಾಗಿ ನನ್ನ ತಲೆ ಅಲ್ಲಾಡಿಸಬಹುದು.
- Psalm 109:25 ಕೀರ್ತನೆಗಳು 109:25ನಾನು ಅವರಿಗೆ ನಿಂದೆಯಾಗಿದ್ದೇನೆ; ನನ್ನನ್ನು ನೋಡಿ ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾರೆ.
- Psalm 22:7–8 ಕೀರ್ತನೆಗಳು 22:7–8ನನ್ನನ್ನು ನೋಡುವವರೆಲ್ಲರು ನನ್ನನ್ನು ಗೇಲಿ ಮಾಡಿ ನಗುವರು, ಅವರು ತುಟಿ ಅಗಲಮಾಡಿ ತಲೆ ಆಡಿಸುತ್ತಾ-- ಆತನು ಕರ್ತನ ಮೇಲೆ ಭರವಸ ವಿಟ್ಟಿದ್ದಾನಲ್ಲಾ; ಆತನು ಅವನನ್ನು ತಪ್ಪಿಸಿ ಅವನನ್ನು ಬಿಡಿಸಲಿ; ಆತನು ಅವನಲ್ಲಿ ಸಂತೋಷಪಡುತ್ತಾ ನಲ್ಲಾ ಅನ್ನುತ್ತಾರೆ.
- Lamentations 2:15 ಪ್ರಲಾಪಗಳು 2:15ದಾರಿಯಲ್ಲಿ ಹೋಗುವವ ರೆಲ್ಲರೂ ನಿನ್ನ ವಿಷಯದಲ್ಲಿ ತಮ್ಮ ಕೈಗಳನ್ನು ತಟ್ಟುತ್ತಾರೆ; ಅವರು ಯೆರೂಸಲೇಮಿನ ಕುಮಾರ್ತೆಯ ವಿಷಯದಲ್ಲಿ ಸಿಳ್ಳು ಹಾಕಿ ತಲೆಯಾಡಿಸಿ--ಆ ಮನುಷ್ಯರು ಕರೆಯು ತ್ತಿದ್ದ ಸೌಂದರ್ಯದ ಸಂಪೂರ್ಣತೆಯೂ ಸರ್ವ ಭೂಮಿಯ ಸಂತೋಷವೂ ಆಗಿರುವ ನಗರಿಯು ಇದೇಯೋ?
- Isaiah 37:21–35 ಯೆಶಾಯ 37:21–35ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿ ಕಳುಹಿಸಿದ್ದೇನಂದರೆ--ನೀನು ಅಶ್ಶೂರದ ಅರಸನಾದ ಸನ್ಹೇರೀಬನ ವಿಷಯವಾಗಿ ಮಾಡಿದ ಬಿನ್ನಹವನ್ನು ಕೇಳಿ ಅವನನ್ನು ಕುರಿತು ಇಸ್ರಾಯೇಲ್ ದೇವರಾದ ಕರ್ತನು ಹೇಳುವದೇ ನಂದರೆ--ಕನ್ನಿಕೆಯಾದ ಚೀಯೋನ್ ಕುಮಾರ್ತೆಯು ನಿನ್ನನ್ನು ತಿರಸ್ಕರಿಸಿ, ಪರಿಹಾಸ್ಯ ಮಾಡುತ್ತಾಳೆ; ಯೆರೂಸ ಲೇಮಿನ ಕುಮಾರ್ತೆಯು ನಿನ್ನ ಹಿಂದೆ ತಲೆಯನ್ನು ಅಲ್ಲಾಡಿಸುತ್ತಾಳೆ. ನೀನು ಯಾರನ್ನು ನಿಂದಿಸಿ ದೂಷಿಸಿದ್ದೀ? ಯಾರಿಗೆ ವಿರೋಧವಾಗಿ ನಿನ್ನ ಸ್ವರವೆತ್ತಿ ನೀನು ಸೊಕ್ಕಿನಿಂದ ನೋಡಿದ್ದು ಯಾರನ್ನು? ಇಸ್ರಾ ಯೇಲಿನ ಪರಿಶುದ್ಧನಿಗಲ್ಲವೋ? ನೀನು ನಿನ್ನ ಸೇವಕರ ಮುಖಾಂತರವಾಗಿ ಕರ್ತನನ್ನು ನಿಂದಿಸಿ--ನನ್ನ ರಥಸಮೂಹದೊಡನೆ ಪರ್ವತ ಶಿಖರಗಳನ್ನು ಹತ್ತಿದ್ದೇನೆ; ಲೆಬನೋನಿನ ಭಾಗಗಳಿಗೆ ಹೋಗಿದ್ದೇನೆ; ಅದರ ಎತ್ತರವಾದ ದೇವದಾರು, ಶ್ರೇಷ್ಠವಾದ ತುರಾಯಿ ಮರಗಳನ್ನು ಕಡಿದುಬಿಟ್ಟಿದ್ದೇನೆ; ಅಂಚಿನ ಉನ್ನತವಾದ ಸ್ಥಳವನ್ನೂ ಮತ್ತು ಅದರ ಕರ್ಮೇಲಿನ ಅಡವಿಯನ್ನೂ ಪ್ರವೇಶಿಸಿದ್ದೇನೆ; ನಾನೇ ಅಗೆದು ನೀರನ್ನು ಕುಡಿದಿದ್ದೇನೆ; ನನ್ನ ಅಂಗಾಲಿನಿಂದ ಐಗು ಪ್ತದ ಎಲ್ಲಾ ಹೊಳೆಗಳನ್ನು ಬತ್ತಿಸಿದ್ದೇನೆ ಎಂಬದಾಗಿ ನೀನು ಹೇಳಿದ್ದೀ. ಹೀಗಾಗಬೇಕೆಂದು ಬಹುಕಾಲದ ಹಿಂದೆಯೇ ಗೊತ್ತುಮಾಡಿದ್ದನ್ನು ನೀನು ಕೇಳಿಲ್ಲವೋ? ಈಗ ಪೂರ್ವಕಾಲದಲ್ಲಿ ನಿರ್ಣಯಿಸಿದ್ದನ್ನು ನೆರವೇರಿ ಸಿದ್ದೇನೆ. ಆದದರಿಂದಲೇ ಕೋಟೆಗಳುಳ್ಳ ಪಟ್ಟಣ ಗಳನ್ನು ಹಾಳು ದಿಬ್ಬಗಳನ್ನಾಗಿ ಮಾಡುವದು ನಿನಗೆ ಸಾಧ್ಯವಾಯಿತು; ಆದದರಿಂದ ಅವುಗಳ ನಿವಾಸಿ ಗಳು ಬಲವಿಲ್ಲದವರಾಗಿ ಆಶಾಭಂಗ ಪಟ್ಟು ಕಳವಳ ಗೊಂಡರು; ಅವರು ಹೊಲದ ಹುಲ್ಲಿನಂತೆಯೂ ಹಸಿರು ಎಲೆಯಂತೆಯೂ ಮಾಳಿಗೆಯ ಮೇಲಿನ ಹುಲ್ಲಿನಂತೆಯೂ ಹೊಡೆಯುವದಕ್ಕಿಂತ ಮೊದಲೇ ಬಾಡಿಹೋಗುವ ಪೈರಿನಂತೆಯೂ ಇದ್ದರು. ನೀನು ವಾಸಿಸುವದು ಹೊರಗೆ ಹೋಗುವದು, ಒಳಗೆ ಬರುವದು; ನೀನು ನನ್ನ ಮೇಲೆ ರೌದ್ರಾವೇಶನಾಗಿ ರುವದನ್ನೂ ನಾನು ಬಲ್ಲೆನು. ನೀನು ನನಗೆ ವಿರೋಧವಾಗಿ ರೌದ್ರನಾಗಿರುವದೂ ಗೊಂದಲ ದಿಂದಿರುವದೂ ನನ್ನ ಕಿವಿಗೆ ಕೇಳಿಬಂತು. ಆದದರಿಂದ ನಾನು ನಿನ್ನ ಕೊಂಡಿಯನ್ನು ನಿನ್ನ ಮೂಗಿನಲ್ಲಿಯೂ ನನ್ನ ಕಡಿವಾಣವನ್ನು ನಿನ್ನ ತುಟಿಗಳಲ್ಲಿಯೂ ಹಾಕಿ, ನೀನು ಬಂದು ದಾರಿಯಿಂದಲೇ ನಿನ್ನನ್ನು ಹಿಂದಕ್ಕೆ ಎಳೆದುಕೊಂಡು ಹೋಗುವೆನು ಎಂಬದಾಗಿ ಹೇಳಿ ದ್ದಾನೆ. ಈ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನು ಎರಡನೇ ವರ್ಷದಲ್ಲಿ ಆದರಿಂದ ಮೊಳೆತದ್ದನ್ನು ತಿನ್ನುವಿರಿ. ಮೂರನೇ ವರ್ಷದಲ್ಲಿ ನೀವು ಬೀಜವನ್ನು ಬಿತ್ತಿ ಕೊಯ್ಯುವಿರಿ; ದ್ರಾಕ್ಷೇ ತೋಟವನ್ನು ನೆಟ್ಟು ಅವುಗಳ ಫಲವನ್ನು ತಿನ್ನುವದೇ ನಿಮಗೆ ಗುರುತಾಗಿ ರುವದು. ಯೆಹೂದನ ಮನೆತನದಿಂದ ತಪ್ಪಿಸಿ ಕೊಂಡು ಉಳಿದವರು ತಿರುಗಿ ಕೆಳಗೆ ಬೇರೂರಿ ಮೇಲಕ್ಕೆ ಫಲಫಲಿಸುವರು. ಯೆರೂಸಲೇಮಿನಿಂದ ಉಳಿದ ವರು ಮತ್ತು ಚೀಯೋನ್ ಪರ್ವತದಿಂದ ತಪ್ಪಿಸಿ ಕೊಂಡವರು; ಹೊರಡುವರು ಇದನ್ನು ಸೈನ್ಯಗಳ ಕರ್ತನ ಆಸಕ್ತಿಯು ಮಾಡುವದು. ಆದದರಿಂದ ಕರ್ತನು ಅಶ್ಶೂರದ ಅರಸನ ವಿಷಯವಾಗಿ ಹೇಳುವ ದೇನಂದರೆ ಅವನು ಈ ಪಟ್ಟಣಕ್ಕೆ ಬರಲಾರನು ಬಾಣವನ್ನು ಎಸೆಯನು, ಇಲ್ಲವೇ ಅದರ ಮುಂದೆ ಗುರಾಣಿಯೊಂದಿಗೆ ಬರಲಾರನು ಇಲ್ಲವೆ ಅದಕ್ಕೆ ವಿರೋಧವಾಗಿ ಮಣ್ಣಿನ ದಿಬ್ಬವನ್ನು ಹಾಕುವದಿಲ್ಲ. ಅವನು ಬಂದ ದಾರಿಯಿಂದಲೇ ಹಿಂತಿರುಗಿ ಹೋಗುವನು ಈ ಪಟ್ಟಣಕ್ಕೆ ಬರುವದೇ ಇಲ್ಲ. ಈ ಪಟ್ಟಣವನ್ನು ನನಗಾಗಿಯೂ ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ ಇದನ್ನು ಕಾಪಾಡು ವೆನು ಎಂದು ಕರ್ತನು ಹೇಳುತ್ತಾನೆ.
- Amos 5:2 ಆಮೋಸ 5:2ಇಸ್ರಾಯೇಲಿನ ಕನ್ಯೆಯು ಬಿದ್ದಿದ್ದಾಳೆ, ಇನ್ನು ಮೇಲೆ ಎದ್ದೇಳುವದೇ ಇಲ್ಲ. ಅವಳು ತನ್ನ ಭೂಮಿಯ ಮೇಲೆ ತೊರೆದು ಬಿಡಲ್ಪಟ್ಟವಳಾಗಿದ್ದಾಳೆ. ಅಲ್ಲಿ ಅವಳನ್ನು ಎಬ್ಬಿಸುವವರು ಯಾರೂ ಇಲ್ಲ.
- Micah 4:8 ಮೀಕ 4:8ಇದಲ್ಲದೆ ನೀನು ಮಂದೆಯ ಬುರುಜೇ ಚೀಯೋನಿನ ಕುಮಾರ್ತೆಯ ದುರ್ಗವೇ, ನಿನಗೆ ಬರು ವದು, ಹೌದು, ಮೊದಲನೇ ದೊರೆತನವೂ ಯೆರೂ ಸಲೇಮಿನ ಕುಮಾರ್ತೆಗೆ ರಾಜ್ಯವೂ ಬರುವದು.
- Zechariah 9:9 ಜೆಕರ್ಯ 9:9ಚೀಯೋನ್ ಕುಮಾರ್ತೆಯೇ, ಬಹಳವಾಗಿ ಉಲ್ಲಾಸಪಡು; ಯೆರೂಸಲೇಮಿನ ಕುಮಾರ್ತೆಯೇ, ಆರ್ಭಟಿಸು; ಇಗೋ, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಾನೆ; ಆತನು ನೀತಿವಂತನಾಗಿಯೂ ರಕ್ಷಿಸುವಾತ ನಾಗಿಯೂ ದೀನನಾಗಿಯೂ ಕತ್ತೆಯ ಮೇಲೆ ಹೌದು, ಕತ್ತೆಯ ಮರಿಯ ಮೇಲೆ ಹತ್ತಿದವನಾಗಿಯೂ ಬರು ತ್ತಾನೆ.
- Isaiah 23:12 ಯೆಶಾಯ 23:12ಆತನು ಹೇಳಿದ್ದೇನಂದರೆ--ಹಿಂಸೆಗೆ ಈಡಾದ ಕನ್ಯೆಯಂತಿರುವ ಚೀದೋನ್ ನಗರಿಯೇ, ಇನ್ನು ಮೇಲೆ ನಿನಗೆ ಹರ್ಷವೇ ಇಲ್ಲ; ಎದ್ದು ಕಿತ್ತೀಮಿಗೆ ಸಮುದ್ರದ ಮೇಲೆ ಹಾದುಹೋಗು ಅಲ್ಲಿಯೂ ನಿನಗೆ ವಿಶ್ರಾಂತಿ ಇರದು.
Original words (Hebrew)
- word · H1697דָּבָר dâbâr
- spoken · H1696דָבַר dâbar
- virgin · H1330בְּתוּלָה bᵉthûwlâh
- daughter · H1323בַּת bath
- Zion · H6726צִיּוֹן Tsîyôwn
- despised · H959בָּזָה bâzâh
- scorn · H3932לָעַג lâʻag
- daughter · H1323בַּת bath
- Jerusalem · H3389יְרוּשָׁלַ͏ִם Yᵉrûwshâlaim
- shaken · H5128נוּעַ nûwaʻ
- head · H7218רֹאשׁ rôʼsh
- thee · H310אַחַר ʼachar