2 Kings · chapter 22 · verse 2
2 Kings 22:2 in Kannada
ಅವನು ಕರ್ತನ ದೃಷ್ಟಿಗೆ ಒಳ್ಳೆಯದ್ದನ್ನು ಮಾಡಿ ತನ್ನ ತಂದೆಯಾದ ದಾವೀದನ ಎಲ್ಲಾ ಮಾರ್ಗಗಳಲ್ಲಿ ಬಲ, ಎಡ ಪಾರ್ಶ್ವವಾಗಿ ತಿರುಗದೆ ನಡೆದನು.
Avanu kartana drushtige olleyaddannu maadi tanna tandeyaada daaveedana ellaa maargagalalli bala, eda paarshvavaagi tirugade nadedanu.
2 Kings 22:2 in English
- King James Version (KJV)
- And he did [that which was] right in the sight of the LORD, and walked in all the way of David his father, and turned not aside to the right hand or to the left.
- World English Bible (WEB)
- He did that which was right in the LORD’s eyes, and walked in all the ways of David his father, and didn’t turn away to the right hand or to the left.
- American Standard Version (ASV)
- And he did that which was right in the eyes of Jehovah, and walked in all the way of David his father, and turned not aside to the right hand or to the left.
- Bible in Basic English (BBE)
- He did what was right in the eyes of the Lord, walking in the ways of David his father, without turning to the right hand or to the left.
- Darby Translation (DBY)
- And he did what was right in the sight of Jehovah, and walked in all the way of David his father, and turned not aside to the right hand nor to the left.
- Webster's Bible (WBS)
- And he did [that which was] right in the sight of the LORD, and walked in all the way of David his father, and turned not aside to the right hand or to the left.
- Young's Literal Translation (YLT)
- and he doth that which is right in the eyes of Jehovah, and walketh in all the way of David his father, and hath not turned aside — right or left.
Read in context
- 1ಯೋಷೀಯನು ಆಳಲು ಆರಂಭಿಸಿದಾಗ ಎಂಟು ವರುಷದವನಾಗಿದ್ದು ಮೂವ ತ್ತೊಂದು ವರುಷ ಯೆರೂಸಲೇಮಿನಲ್ಲಿ ಆಳಿದನು. ಅವನ ತಾಯಿ ಬೊಚ್ಕತೂರಿನ ಅದಾಯನ ಮಗಳಾ ಗಿದ್ದು, ಯೆದೀದಾಳೆಂಬ ಹೆಸರುಳ್ಳವಳಾಗಿದ್ದಳು.
- 2ಅವನು ಕರ್ತನ ದೃಷ್ಟಿಗೆ ಒಳ್ಳೆಯದ್ದನ್ನು ಮಾಡಿ ತನ್ನ ತಂದೆಯಾದ ದಾವೀದನ ಎಲ್ಲಾ ಮಾರ್ಗಗಳಲ್ಲಿ ಬಲ, ಎಡ ಪಾರ್ಶ್ವವಾಗಿ ತಿರುಗದೆ ನಡೆದನು.
- 3ಅರಸನಾದ ಯೋಷೀಯನ ಆಳ್ವಿಕೆಯ ಹದಿನೆಂಟನೇ ವರುಷದಲ್ಲಿ ಏನಾಯಿತಂದರೆ, ಅರಸನು ಲೇಖಕನಾದ ಮೆಷುಲ್ಲಾ ಮನ ಮಗನಾದ ಅಚಲ್ಯನ ಮಗನಾದ ಶಾಫಾನನನ್ನು ಕರ್ತನ ಮನೆಗೆ ಕಳುಹಿಸಿ ಹೇಳಿದ್ದೇನಂದರೆ--
- 4ನೀನು ಪ್ರಧಾನ ಯಾಜಕನಾದ ಹಿಲ್ಕೀಯನ ಬಳಿಗೆ ಹೋಗು, ಅವನು ಕರ್ತನ ಮನೆಯಲ್ಲಿ ದ್ವಾರಪಾಲಕರು ಜನರಿಂದ ತೆಗೆದುಕೊಂಡು ಕೂಡಿಸಿದ ಹಣವನ್ನು ಲೆಕ್ಕ ಮಾಡಲಿ.
Cross references
- Deuteronomy 5:32 ಧರ್ಮೋಪದೇಶಕಾಂಡ 5:32ಹೀಗಿರುವದರಿಂದ ನಿಮ್ಮ ದೇವರಾದ ಕರ್ತನು ನಿಮಗೆ ಆಜ್ಞಾಪಿಸಿದಂತೆ ಕೈಕೊಂಡು ನಡೆಯಬೇಕು; ಎಡಕ್ಕಾದರೂ ಬಲಕ್ಕಾದರೂ ತಿರುಗಬೇಡಿರಿ.ನೀವು ಬದುಕುವ ಹಾಗೆಯೂ ನಿಮಗೆ ಒಳ್ಳೆಯದಾಗುವ ಹಾಗೆಯೂ ನೀವು ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ನಿಮ್ಮ ದಿವಸಗಳು ಬಹಳವಾಗುವ ಹಾಗೆಯೂ ನಿಮ್ಮ ದೇವರಾದ ಕರ್ತನು ನಿಮಗೆ ಆಜ್ಞಾಪಿಸಿದ ಮಾರ್ಗ ಗಳಲ್ಲಿ ನಡಕೊಳ್ಳಬೇಕು.
- Joshua 1:7 ಯೆಹೋಶುವ 1:7ನನ್ನ ಸೇವಕನಾದ ಮೋಶೆಯು ನಿನಗೆ ಆಜ್ಞಾಪಿಸಿದ ನ್ಯಾಯ ಪ್ರಮಾಣವೆಲ್ಲಾದರ ಪ್ರಕಾರ ನೀನು ಕೈಕೊಂಡು ನಡೆ ಯುವ ಹಾಗೆ ಬಲವಾಗಿರು, ಬಹು ಧೈರ್ಯದಿಂದಿರು, ನೀನು ಹೋಗುವ ಸ್ಥಳದಲ್ಲೆಲ್ಲಾ ಸಫಲವಾಗುವ ಹಾಗೆ ಅದನ್ನು (ನ್ಯಾಯಪ್ರಮಾಣವನ್ನು) ಬಿಟ್ಟು ಬಲ ಕ್ಕಾದರೂ ಎಡಕ್ಕಾದರೂ ತಿರುಗಬೇಡ.
- 2 Kings 18:3 2 ಅರಸುಗಳು 18:3ಅವನು ತನ್ನ ತಂದೆಯಾದ ದಾವೀದನು ಮಾಡಿದ ಹಾಗೆ ಕರ್ತನ ದೃಷ್ಟಿಗೆ ಒಳ್ಳೆಯದನ್ನು ಮಾಡಿದನು.
- 1 Kings 3:6 1 ಅರಸುಗಳು 3:6ಅದಕ್ಕೆ ಸೊಲೊಮೋನನು--ನನ್ನ ತಂದೆಯಾಗಿರುವ ನಿನ್ನ ಸೇವಕನಾದ ದಾವೀದನು ನಿನ್ನ ಮುಂದೆ ಸತ್ಯದಿಂದಲೂ ನೀತಿಯಿಂದಲೂ ಯಥಾರ್ಥವಾದ ಹೃದಯವುಳ್ಳವ ನಾಗಿಯೂ ನಡೆದದ್ದರಿಂದ ನೀನು ಅವನಿಗೆ ಬಹು ದಯೆತೋರಿಸಿ ಈ ಮಹಾಕರುಣೆಯನ್ನು ಅವನಿ ಗೋಸ್ಕರ ಕಾದಿಟ್ಟಿದ್ದೀ. ಈ ಹೊತ್ತಿರುವ ಹಾಗೆಯೇ ತನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಒಬ್ಬ ಮಗನನ್ನು ಕೊಟ್ಟಿದ್ದೀ.
- 2 Kings 16:2 2 ಅರಸುಗಳು 16:2ಆಹಾಜನು ಆಳಲು ಆರಂಭಿ ಸಿದಾಗ ಇಪ್ಪತ್ತು ವರುಷದವನಾಗಿದ್ದು ಯೆರೂಸಲೇಮಿ ನಲ್ಲಿ ಹದಿನಾರು ವರುಷ ಆಳಿದನು.
- Proverbs 4:27 ಜ್ಞಾನೋಕ್ತಿಗಳು 4:27ನಿನ್ನ ಬಲಕ್ಕಾಗಲಿ ಎಡಕ್ಕಾಗಲಿ ತಿರುಗಬೇಡ; ಕೇಡಿನಿಂದ ನಿನ್ನ ಪಾದವನ್ನು ತಪ್ಪಿಸು.
- Proverbs 20:11 ಜ್ಞಾನೋಕ್ತಿಗಳು 20:11ತನ್ನ ಕೆಲಸವು ಶುದ್ಧವೋ ಇಲ್ಲವೆ ನ್ಯಾಯವೋ ಎಂಬದು ತನ್ನ ಕ್ರಿಯೆಗಳಿಂದಲೇ ಹುಡುಗನು ತೋರ್ಪಡಿಸಿ ಕೊಳ್ಳುತ್ತಾನೆ.
- 1 Kings 11:38 1 ಅರಸುಗಳು 11:38ನಾನು ನಿನಗೆ ಆಜ್ಞಾಪಿಸಿದ್ದೆಲ್ಲಾ ನೀನು ಕೇಳಿ ನನ್ನ ಮಾರ್ಗಗಳಲ್ಲಿ ನಡೆದು ನನ್ನ ಸೇವಕನಾದ ದಾವೀದನು ಮಾಡಿದ ಹಾಗೆ ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ಕೈಕೊಂಡು ನನ್ನ ದೃಷ್ಟಿಗೆ ಯಥಾರ್ಥ ವಾದದ್ದನ್ನು ಮಾಡಿದರೆ ನಾನು ನಿನ್ನ ಸಂಗಡ ಇದ್ದು ದಾವೀದನಿಗೋಸ್ಕರ ಕಟ್ಟಿದ ಹಾಗೆ ನಿನಗೆ ಸ್ಥಿರವಾದ ಮನೆಯನ್ನು ಕಟ್ಟಿ ಇಸ್ರಾಯೇಲ್ಯರನ್ನು ನಿನಗೆ ಕೊಡು ವೆನು.
- 2 Chronicles 29:2 2 ಪೂರ್ವಕಾಲವೃತ್ತಾಂತ 29:2ಅವನು ತನ್ನ ಪಿತೃವಾದ ದಾವೀದನು ಮಾಡಿದ ಎಲ್ಲಾದರ ಪ್ರಕಾರ ಕರ್ತನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದನು.
- 1 Kings 15:5 1 ಅರಸುಗಳು 15:5ದಾವೀದನು ಹಿತ್ತಿಯನಾದ ಊರೀಯನ ವಿಷಯ ಹೊರತಾಗಿ ತನ್ನ ಜೀವಿತದ ಸಮಸ್ತ ದಿವಸಗಳಲ್ಲಿ ಕರ್ತನು ತನಗೆ ಆಜ್ಞಾಪಿಸಿದ ಎಲ್ಲಾದಕ್ಕೆ ತೊಲಗದೆ ಆತನ ದೃಷ್ಟಿಗೆ ಮೆಚ್ಚಿಗೆಯಾದದ್ದನ್ನು ಮಾಡಿ ದನು. ಆದರೆ ರೆಹಬ್ಬಾಮನಿಗೂ ಯಾರೊಬ್ಬಾಮನಿಗೂ ಅವರ ಜೀವಾಂತ್ಯದ ವರೆಗೆ ಯುದ್ಧಉಂಟಾಗಿತ್ತು.
- 2 Chronicles 17:3 2 ಪೂರ್ವಕಾಲವೃತ್ತಾಂತ 17:3ಯೆಹೋಷಾಫಾಟನು ಬಾಳೀಮ್ ನನ್ನು ಹುಡುಕದೆ ತನ್ನ ತಂದೆಯಾದ ದಾವೀದನ ಮೊದಲಿನ ಮಾರ್ಗಗಳಲ್ಲಿ ನಡೆದದ್ದರಿಂದ ಕರ್ತನು ಅವನ ಸಂಗಡ ಇದ್ದನು.
- Ezekiel 18:14–17 ಯೆಹೆಜ್ಕೇಲನು 18:14–17ಆಗ ಇಗೋ, ಅವನು ಮಗನನ್ನು ಪಡೆದ ಮೇಲೆ ತನ್ನ ತಂದೆ ಮಾಡಿದ ಪಾಪಗಳನ್ನೆಲ್ಲಾ ನೋಡಿ ಆಲೊಚಿಸಿ, ಅವುಗಳಂತೆ ಮಾಡದೆ; ಪರ್ವತಗಳ ಮೇಲೆ ತಿನ್ನದೆ, ಇಸ್ರಾಯೇಲಿನ ಮನೆತನ ದವರ ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತದೆ, ತನ್ನ ನೆರೆಯವನ ಹೆಂಡತಿಯನ್ನು ಕೆಡಿಸದೆ, ಇಲ್ಲವೆ ಯಾರಿಗೂ ತೊಂದರೆಪಡಿಸದೆ, ಒತ್ತೆಯನ್ನು ಹಿಡಿಯದೆ, ಇಲ್ಲವೆ ಹಿಂಸೆಯಿಂದ ಸುಲಿಗೆ ಮಾಡದೆ, ಹಸಿದವನಿಗೆ ತನ್ನ ರೊಟ್ಟಿಯನ್ನು ಕೊಟ್ಟು ಬೆತ್ತಲೆಯಾದವನಿಗೆ ವಸ್ತ್ರ ವನ್ನು ಹೊದಿಸಿ, ಬಡವನ ಮೇಲೆ ಕೈಮಾಡದೆ, ಬಡ್ಡಿಯನ್ನೂ ಲಾಭವನ್ನು ತೆಗೆದುಕೊಳ್ಳದೆ, ನನ್ನ ನ್ಯಾಯ ಗಳನ್ನು ಮಾಡಿ ನಿಯಮಗಳಲ್ಲಿ ನಡೆದರೆ, ಅವನು ತನ್ನ ತಂದೆಯ ಅಕ್ರಮಗಳ ನಿಮಿತ್ತ ಸಾಯುವದಿಲ್ಲ ನಿಶ್ಚಯವಾಗಿ ಬದುಕುವನು.