2 Kings · chapter 25 · verse 3
2 Kings 25:3 in Kannada
ನಾಲ್ಕನೇ ತಿಂಗಳಿನ ಒಂಭತ್ತನೇ ದಿವಸದಲ್ಲಿ ಪಟ್ಟಣದಲ್ಲಿ ಬರವು ಬಲವಾದದರಿಂದ ದೇಶದ ಜನರಿಗೆ ರೊಟ್ಟಿಯಿಲ್ಲದೆ ಹೋಯಿತು.
Naalkane tingalina ombhattane divasadalli pattanadalli baravu balavaadadarinda deshada janarige rottiyillade hoyitu.
2 Kings 25:3 in English
- King James Version (KJV)
- And on the ninth [day] of the [fourth] month the famine prevailed in the city, and there was no bread for the people of the land.
- World English Bible (WEB)
- On the ninth day of the fourth month, the famine was severe in the city, so that there was no bread for the people of the land.
- American Standard Version (ASV)
- On the ninth day of the [fourth] month the famine was sore in the city, so that there was no bread for the people of the land.
- Bible in Basic English (BBE)
- Now on the ninth day of the fourth month, the store of food in the town was almost gone, so that there was no food for the people of the land.
- Darby Translation (DBY)
- On the ninth of the [fourth] month the famine prevailed in the city, and there was no bread for the people of the land.
- Webster's Bible (WBS)
- And on the ninth [day] of the [fourth] month the famine prevailed in the city, and there was no bread for the people of the land.
- Young's Literal Translation (YLT)
- on the ninth of the month — when the famine is severe in the city, and there hath not been bread for the people of the land,
Read in context
- 1ಅವನ ಆಳಿಕೆಯ ಒಂಭತ್ತನೇ ವರುಷದ ಹತ್ತನೇ ತಿಂಗಳಿನ ಹತ್ತನೇ ದಿವಸದಲ್ಲಿ ಏನಾಯಿತಂದರೆ, ಬಾಬೆಲಿನ ಅರಸನಾದ ನೆಬೂಕ ದ್ನೆಚರನು ತಾನೂ ತನ್ನ ಎಲ್ಲಾ ಸೈನ್ಯವೂ ಯೆರೂಸ ಲೇಮಿನ ಮೇಲೆ ಬಂದು ಅದಕ್ಕೆ ಎದುರಾಗಿ ದಂಡಿಳಿದು ಅದರ ಸುತ್ತಲೂ ದಿಣ್ಣೆಗಳನ್ನು ಹಾಕಿದರು.
- 2ಅರಸನಾದ ಚಿದ್ಕೀಯನ ಆಳ್ವಿಕೆಯ ಹನ್ನೊಂದನೇ ವರುಷದ ವರೆಗೆ ಪಟ್ಟಣವು ಮುತ್ತಿಗೆ ಹಾಕಲ್ಪಟ್ಟಿತು.
- 3ನಾಲ್ಕನೇ ತಿಂಗಳಿನ ಒಂಭತ್ತನೇ ದಿವಸದಲ್ಲಿ ಪಟ್ಟಣದಲ್ಲಿ ಬರವು ಬಲವಾದದರಿಂದ ದೇಶದ ಜನರಿಗೆ ರೊಟ್ಟಿಯಿಲ್ಲದೆ ಹೋಯಿತು.
- 4ಪಟ್ಟಣವು ವಿಭಾಗಿಸಲ್ಪಟ್ಟಿದ್ದರಿಂದ ಸೈನ್ಯದ ಜನರೆಲ್ಲರೂ ಅರಸನ ತೋಟದ ಬಳಿಯಲ್ಲಿದ್ದ ಎರಡು ಗೋಡೆಗಳ ಮಧ್ಯದಲ್ಲಿ ಬಾಗಲ ಮಾರ್ಗವಾಗಿ ಓಡಿಹೋದರು; ಆದರೆ ಅರಸನು ಬಯಲು ಮಾರ್ಗ ವಾಗಿ ಹೋದನು.
- 5ಕಸ್ದೀಯರು ಪಟ್ಟಣದ ಬಳಿಯಲ್ಲಿ ಇದ್ದದರಿಂದ ಅವರ ದಂಡು ಅರಸನನ್ನು ಹಿಂಬಾಲಿಸಿ ಯೆರಿಕೋವಿನ ಬಯಲು ಸ್ಥಳಗಳಲ್ಲಿ ಅವನನ್ನು ಹಿಡು ಕೊಂಡರು.
Cross references
- Ezekiel 7:15 ಯೆಹೆಜ್ಕೇಲನು 7:15ಹೊರಗೆ ಕತ್ತಿಯೂ ಒಳಗೆ ವ್ಯಾಧಿಯೂ ಕ್ಷಾಮವೂ ಉಂಟು. ಹೊಲದಲ್ಲಿರುವವನನ್ನು ಕತ್ತಿಯು ಸಾಯಿಸುವದು; ಪಟ್ಟಣದಲ್ಲಿರುವವನನ್ನು ವ್ಯಾಧಿಯೂ ಬರವೂ ತಿಂದು ಬಿಡುವದು.
- Lamentations 4:4–10 ಪ್ರಲಾಪಗಳು 4:4–10ಮೊಲೆಕೂಸಿನ ನಾಲಿಗೆಯು ದಾಹದಿಂದ ಅಂಗಳಕ್ಕೆ ಹತ್ತುತ್ತದೆ, ಎಳೆಕೂಸುಗಳು ರೊಟ್ಟಿ ಕೇಳುತ್ತವೆ; ಆದರೆ ಅವರಿಗೆ ಯಾರೂ ಕೊಡುವದಿಲ್ಲ. ರುಚಿ ಯಾದವುಗಳನ್ನು ತಿಂದವರು ಬೀದಿಗಳಲ್ಲಿ ಹಾಳಾಗಿ ದ್ದಾರೆ; ಸಕಲಾತಿಗಳಲ್ಲಿ ಬೆಳೆಸಲ್ಪಟ್ಟವರು ತಿಪ್ಪೆಗಳನ್ನು ಅಪ್ಪಿಕೊಳ್ಳುತ್ತಾರೆ. ನನ್ನ ಜನರ ಮಗಳ ಅಕ್ರಮದ ದಂಡನೆಯು ಸೊದೋಮಿನ ಪಾಪದ ದಂಡನೆಗಿಂತ ದೊಡ್ಡದು; ಅದು ಕ್ಷಣಮಾತ್ರದಲ್ಲಿ ಕೆಡವಿ ಹಾಕಲ್ಪಟ್ಟಿತು! ಅವಳನ್ನು ಯಾವ ಕೈಗಳೂ ತಡೆಯಲಿಲ್ಲ. ಅವಳ ನಜರೀಯರು ಹಿಮಕ್ಕಿಂತಲೂ ಸ್ವಚ್ಛವಾಗಿದ್ದರು, ಹಾಲಿಗಿಂತಲೂ ಬೆಳ್ಳಗಿದ್ದರು, ಅವರು ಮೈ ಕಟ್ಟಿನಲ್ಲಿ ಹವಳಕ್ಕಿಂತಲೂ ಕೆಂಪಾಗಿದ್ದರು; ಅವರ ಹೊಳಪು ಇಂದ್ರನೀಲಮಣಿಯ ಹಾಗಿತ್ತು. ಈಗ ಅವರ ರೂಪವು ಕಲ್ಲಿದ್ದಲಿಗಿಂತ ಕಪ್ಪಾಗಿದೆ, ಬೀದಿಗಳಲ್ಲಿ ಅವರು ಯಾರೆಂಬದು ತಿಳಿಯಲಿಲ್ಲ; ಅವರ ಚರ್ಮವು ಅವರ ಎಲುಬುಗಳಿಗೆ ಹತ್ತಿಕೊಂಡಿದೆ, ಅದು ಒಣಗಿ ಕಡ್ಡಿಯ ಹಾಗೆ ಆಗಿದೆ. ಕತ್ತಿಯಿಂದ ಹತರಾದವರು ಹಸಿವೆ ಯಿಂದ ಹತರಾದವರಿಗಿಂತ ಲೇಸು, ಇವರು ಭೂಫಲ ಗಳಿಲ್ಲದೆ ಕ್ಷಾಮದಿಂದ ತಿವಿಯಲ್ಪಟ್ಟು ಕ್ಷೀಣಿಸಿ ಹೋಗುತ್ತಾರೆ. ಕನಿಕರ ತುಂಬಿದ ಹೆಂಗಸರ ಕೈಗಳು ಅವರ ಸ್ವಂತ ಮಕ್ಕಳನ್ನೇ ಬೇಯಿಸಿದವು; ಇವರು ನನ್ನ ಜನರ ಮಗಳ ನಾಶದಲ್ಲಿ ಅವರಿಗೆ ಆಹಾರ ವಾದರು.
- Jeremiah 52:6 ಯೆರೆಮೀಯ 52:6ನಾಲ್ಕನೇ ತಿಂಗಳಲ್ಲಿ, ತಿಂಗಳಿನ ಒಂಭತ್ತನೇ ದಿವಸದಲ್ಲಿ ದೇಶಸ್ಥರಿ ಗೋಸ್ಕರ ರೊಟ್ಟಿ ಇಲ್ಲದೆ ಪಟ್ಟಣದಲ್ಲಿ ಕ್ಷಾಮವು ಕಠಿಣವಾಗಿತ್ತು.
- Ezekiel 5:12 ಯೆಹೆಜ್ಕೇಲನು 5:12ನಿನ್ನಲ್ಲಿಯ ಮೂರನೆಯ ಒಂದು ಪಾಲು ವ್ಯಾಧಿಗಳಿಂದ ಸಾಯು ವರು, ಕ್ಷಾಮದಿಂದ ನಿನ್ನಲ್ಲಿ ಅವರು ನಾಶವಾಗುವರು; ಮೂರನೆಯ ಒಂದು ಪಾಲು ನಿನ್ನ ಸುತ್ತಲೂ ಕತ್ತಿಯಿಂದ ಬೀಳುವರು; ಮೂರನೆಯ ಒಂದು ಪಾಲನ್ನು ಎಲ್ಲಾ ದಿಕ್ಕುಗಳಿಗೆ (ಗಾಳಿಗೆ ತೂರಿ) ಚದರಿಸಿ ಅವರ ಮೇಲೆ ಕತ್ತಿಯನ್ನು ಬೀಸುವೆನು.
- Leviticus 26:26 ಯಾಜಕಕಾಂಡ 26:26ನಾನು ನಿಮ್ಮ ಅನ್ನಾಧಾರವನ್ನು ಮುರಿದುಹಾಕಿ ದಾಗ ಹತ್ತು ಸ್ತ್ರೀಯರು ನಿಮ್ಮ ರೊಟ್ಟಿಯನ್ನು ಒಂದೇ ಒಲೆಯಲ್ಲಿ ಸುಟ್ಟು ತೂಕದ ಪ್ರಕಾರ ನಿಮಗೆ ರೊಟ್ಟಿಯನ್ನು ಕೊಡುವರು. ನೀವು ಅದನ್ನು ತಿನ್ನುವಿರಿ; ನಿಮಗೆ ತೃಪ್ತಿಯಾಗುವದಿಲ್ಲ.
- Jeremiah 38:2 ಯೆರೆಮೀಯ 38:2ಕರ್ತನು ಹೀಗೆ ಹೇಳುತ್ತಾನೆ--ಈ ಪಟ್ಟಣದಲ್ಲಿ ನಿಲ್ಲುವವನು ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯ ದಿಂದಲೂ ಸಾಯುವನು; ಆದರೆ ಕಸ್ದೀಯರ ಬಳಿಗೆ ಹೊರಗೆ ಹೋಗುವವನು ಬದುಕುವನು; ಅವನ ಪ್ರಾಣವು ಅವನಿಗೆ ಕೊಳ್ಳೆಯಾಗಿರುವದು;
- Deuteronomy 28:52–53 ಧರ್ಮೋಪದೇಶಕಾಂಡ 28:52–53ನಿನ್ನ ದೇಶದಲ್ಲೆಲ್ಲಾ ನೀನು ನಂಬಿಕೊಂಡಿರುವ ಉದ್ದವಾದ ಮತ್ತು ಭದ್ರವಾದ ನಿನ್ನ ಗೋಡೆಗಳೆಲ್ಲಾ ಬೀಳುವ ವರೆಗೆ ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ಮುತ್ತಿಗೆ ಹಾಕುವದು; ನಿನ್ನ ದೇವರಾದ ಕರ್ತನು ನಿನಗೆ ಕೊಟ್ಟ ನಿನ್ನ ದೇಶದಲ್ಲೆಲ್ಲಾ ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ಮುತ್ತಿಗೆಹಾಕುವನು. ಆಗ ಮುತ್ತಿಗೆಯಲ್ಲಿಯೂ ನಿನ್ನ ಶತ್ರುಗಳು ನಿನಗೆ ಮಾಡುವ ಇಕ್ಕಟ್ಟಿನಲ್ಲಿಯೂ ನಿನ್ನ ಗರ್ಭದ ಫಲವನ್ನೂ ನಿನ್ನ ದೇವರಾದ ಕರ್ತನು ನಿನಗೆ ಕೊಟ್ಟ ಕುಮಾರ ಕುಮಾರ್ತೆಯರ ಮಾಂಸವನ್ನೂ ತಿನ್ನುವಿ.
- Ezekiel 14:21 ಯೆಹೆಜ್ಕೇಲನು 14:21ದೇವರಾದ ಕರ್ತನು ಹೀಗೆ ಹೇಳುತ್ತಾನೆ; ನಾನು ಕತ್ತಿ ಬರಗಾಲ ದುಷ್ಟಮೃಗ ವ್ಯಾಧಿಗಳೆಂಬ ನನ್ನ ನಾಲ್ಕು ಕಠಿಣವಾದ ನ್ಯಾಯತೀರ್ಪುಗಳನ್ನು ಯೆರೂಸ ಲೇಮಿನ ಮೇಲೆ ಕಳುಹಿಸಿ ಮನುಷ್ಯರನ್ನೂ ಮೃಗಗಳನ್ನೂ ಕಡಿದು ಬಿಟ್ಟ ಮೇಲೆ ಮತ್ತೆ ಏನಾಗುವದು?
- Zechariah 8:19 ಜೆಕರ್ಯ 8:19ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ನಾಲ್ಕನೇ ತಿಂಗಳಿನ ಉಪವಾಸವು, ಐದನೆ ಯದು, ಏಳನೆಯದು, ಹತ್ತನೆಯದು, ಯೆಹೂದದ ಮನೆತನದವರಿಗೆ ಸಂತೋಷವೂ ಸಂಭ್ರಮವೂ ಆನಂದವಾದ ಹಬ್ಬಗಳೂ ಆಗುವವು; ಆದರೆ ಸತ್ಯ ವನ್ನೂ ಸಮಾಧಾನವನ್ನೂ ಪ್ರೀತಿಮಾಡಿರಿ.
- Jeremiah 37:21 ಯೆರೆಮೀಯ 37:21ಆಗ ಅರಸನಾದ ಚಿದ್ಕೀ ಯನು ಯೆರೆವಿಾಯನನ್ನು ಸೆರೆಮನೆಯ ಅಂಗಳದಲ್ಲಿ ಇರಿಸಬೇಕೆಂದೂ ಪಟ್ಟಣದಲ್ಲಿರುವ ರೊಟ್ಟಿಯೆಲ್ಲಾ ಮುಗಿದು ಹೋಗುವ ವರೆಗೆ ಅವನಿಗೆ ರೊಟ್ಟಿಗಾರರ ಅಂಗಡಿಯಿಂದ ದಿನಕ್ಕೆ ಒಂದು ತುಂಡು ರೊಟ್ಟಿಕೊಡ ಬೇಕೆಂದೂ ಆಜ್ಞಾಪಿಸಿದನು; ಹಾಗೆಯೇ ಯೆರೆವಿಾ ಯನು ಸೆರೆಮನೆಯ ಅಂಗಳದಲ್ಲಿ ವಾಸಿಸಿದನು.
- Ezekiel 5:10 ಯೆಹೆಜ್ಕೇಲನು 5:10ಆದದರಿಂದ ನಿನ್ನ ಮಧ್ಯದಲ್ಲಿ ತಂದೆಗಳೇ ಮಕ್ಕಳನ್ನು ತಿನ್ನುವರು; ಮಕ್ಕಳು ಅವರ ತಂದೆಗಳನ್ನು ತಿನ್ನುವರು; ಹೀಗೆ ನಿನ್ನಲ್ಲಿ ನ್ಯಾಯ ತೀರ್ಪನ್ನು ನಡಿಸುವೆನು. ನಿನ್ನಲ್ಲಿ ಉಳಿದವರನ್ನೆಲ್ಲಾ ಗಾಳಿ ಬೀಸುವ ಎಲ್ಲಾ ದಿಕ್ಕಿಗೂ ಚದರಿಸುವೆನು.
- Jeremiah 39:2 ಯೆರೆಮೀಯ 39:2ಚಿದ್ಕೀಯನ ಹನ್ನೊಂದನೇ ವರುಷದಲ್ಲಿ ನಾಲ್ಕನೇ ತಿಂಗಳಿನ ಒಂಭ ತ್ತನೇ ದಿವಸದಲ್ಲಿ ಪಟ್ಟಣವು ಒಡೆಯಲ್ಪಟ್ಟಿತು.