2 Kings · chapter 3 · verse 18
2 Kings 3:18 in Kannada
ಇದಲ್ಲದೆ ಇದು ಕರ್ತನ ದೃಷ್ಟಿಗೆ ಅಲ್ಪವಾಗಿರುವದು; ಆತನು ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿ ಕೊಡುವನು.
Idallade idu kartana drushtige alpavaagiruvadu; aatanu movaabyarannu nimma kaiyalli oppisi koduvanu.
2 Kings 3:18 in English
- King James Version (KJV)
- And this is [but] a light thing in the sight of the LORD: he will deliver the Moabites also into your hand.
- World English Bible (WEB)
- This is an easy thing in the LORD’s sight. He will also deliver the Moabites into your hand.
- American Standard Version (ASV)
- And this is but a light thing in the sight of Jehovah: he will also deliver the Moabites into your hand.
- Bible in Basic English (BBE)
- And this will be only a small thing to the Lord: in addition he will give the Moabites into your hands.
- Darby Translation (DBY)
- And this is a light thing in the sight of Jehovah: he will give the Moabites also into your hand.
- Webster's Bible (WBS)
- And this is [but] a light thing in the sight of the LORD: he will deliver the Moabites also into your hand.
- Young's Literal Translation (YLT)
- 'And this hath been light in the eyes of Jehovah, and he hath given Moab into your hand,
Read in context
- 16ಅವನು ಹೇಳಿದ್ದೇನಂದರೆ -- ಈ ತಗ್ಗನ್ನು ಹಳ್ಳ ಕೊಳ್ಳಗಳಾಗಿ ಮಾಡಿರೆಂದು ಕರ್ತನು ಹೇಳುತ್ತಾನೆ.
- 17ಕರ್ತನು ಹೀಗೆ ಹೇಳುತ್ತಾನೆ--ನೀನು ಗಾಳಿಯನ್ನೂ ಮಳೆಯನ್ನೂ ನೋಡುವದಿಲ್ಲ; ಆದರೆ ನೀವು ನಿಮ್ಮ ದನಗಳೂ ನಿಮ್ಮ ಪಶುಗಳೂ ಕುಡಿಯುವ ಹಾಗೆ ಈ ತಗ್ಗು ನೀರಿನಿಂದ ತುಂಬಲ್ಪಡುವದು.
- 18ಇದಲ್ಲದೆ ಇದು ಕರ್ತನ ದೃಷ್ಟಿಗೆ ಅಲ್ಪವಾಗಿರುವದು; ಆತನು ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿ ಕೊಡುವನು.
- 19ನೀವು ಕೋಟೆಯುಳ್ಳ ಎಲ್ಲಾ ಪಟ್ಟಣಗಳನ್ನೂ ಆದು ಕೊಳ್ಳತಕ್ಕ ಎಲ್ಲಾ ಪಟ್ಟಣಗಳನ್ನೂ ಹೊಡೆದು ಬಿಟ್ಟು ಉತ್ತಮವಾದ ಎಲ್ಲಾ ಮರಗಳನ್ನು ಬೀಳಮಾಡಿ ನೀರು ಬಾವಿಗಳನ್ನೆಲ್ಲಾ ಮುಚ್ಚಿ ಉತ್ತಮವಾದ ಭೂಮಿಯಲ್ಲಿ ರುವ ಹೊಲಗಳನ್ನೆಲ್ಲಾ ಕಲ್ಲುಗಳಿಂದ ತುಂಬಿಸಿ ಕೆಡಿಸ ಬೇಕು ಅಂದನು.
- 20ಉದಯದಲ್ಲಿ ಕಾಣಿಕೆಯನ್ನು ಅರ್ಪಿಸುತ್ತಿರುವಾಗ ಏನಾಯಿತಂದರೆ, ಇಗೋ, ನೀರು ಎದೋಮಿನ ಮಾರ್ಗವಾಗಿ ಬಂದದರಿಂದ ದೇಶವು ನೀರಿನಿಂದ ತುಂಬಲ್ಪಟ್ಟಿತು.
Cross references
- Luke 1:37 ಲೂಕನು 1:37ಯಾಕಂದರೆ ದೇವರಿಗೆ ಅಸಾಧ್ಯವಾದದ್ದು ಯಾವದೂ ಇಲ್ಲ ಎಂದು ಹೇಳಿ ದನು.
- Jeremiah 32:27 ಯೆರೆಮೀಯ 32:27ಇಗೋ, ನಾನೇ ಕರ್ತನು, ಸಮಸ್ತ ಜನರ ದೇವರು; ನನಗೆ ಕಠಿಣವಾದ ಕಾರ್ಯ ಒಂದಾದರೂ ಉಂಟೋ?
- Jeremiah 32:17 ಯೆರೆಮೀಯ 32:17ಓ ಕರ್ತನಾದ ದೇವರೇ, ಇಗೋ, ನೀನು ನಿನ್ನ ಮಹಾಬಲದಿಂದ ನಿನ್ನ ಕೈಚಾಚಿ ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದ್ದೀ; ನಿನಗೆ ಕಠಿಣವಾದ ಕಾರ್ಯ ಒಂದೂ ಇಲ್ಲ.
- 2 Kings 20:10 2 ಅರಸುಗಳು 20:10ಅದಕ್ಕೆ ಹಿಜ್ಕೀ ಯನು--ನೆರಳು ಹತ್ತು ಮೆಟ್ಟಲು ಇಳಿಯುವದು ಅಲ್ಪವಾದದ್ದು; ಹಾಗಲ್ಲ, ನೆರಳು ಹತ್ತು ಮೆಟ್ಟಲು ಹಿಂದಕ್ಕೆ ತಿರುಗಲಿ ಅಂದನು.
- Isaiah 49:6 ಯೆಶಾಯ 49:6ಆತನೇ ಈಗ ಹೀಗನ್ನುತ್ತಾನೆ--ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬನ ಕುಲಗಳನ್ನು ಉನ್ನತಪಡಿ ಸುವದೂ ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರಿಗಿ ಬರಮಾಡುವದೂ ಅಲ್ಪ ಕಾರ್ಯವೇ; ನನ್ನ ರಕ್ಷಣೆಯು ಲೋಕದ ಕಟ್ಟಕಡೆಯ ವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೆ ಬೆಳಕನ್ನಾಗಿ ದಯಪಾಲಿಸುವೆನು.
- Ephesians 3:20 ಎಫೆಸದವರಿಗೆ 3:20ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದಾತನಿಗೆಸಭೆಯಲ್ಲಿ ಕ್ರಿಸ್ತ ಯೇಸುವಿನ ಮೂಲಕ ತಲತಲಾಂತ ರಕ್ಕೂ ಯುಗಯುಗಾಂತರಕ್ಕೂ ಮಹಿಮೆಯುಂಟಾಗಲಿ. ಆಮೆನ್.
- Mark 10:27 ಮಾರ್ಕನು 10:27ಆಗ ಯೇಸು ಅವರನ್ನು ದೃಷ್ಟಿಸುತ್ತಾ--ಮನುಷ್ಯರಿಗೆ ಇದು ಅಸಾಧ್ಯವಾಗಿದೆ; ಆದರೆ ದೇವರಿಗೆ ಅಲ್ಲ; ಯಾಕಂದರೆ ದೇವರಿಗೆ ಎಲ್ಲವೂ ಸಾಧ್ಯವಾಗಿವೆ ಅಂದನು.
- Ezekiel 8:17 ಯೆಹೆಜ್ಕೇಲನು 8:17ಆಗ ಆತನು ನನಗೆ--ಓ ಮನುಷ್ಯಪುತ್ರನೇ, ನೋಡಿ ದೆಯಾ? ಅವರು ಇಲ್ಲಿ ಮಾಡುವ ಅಸಹ್ಯವಾದವುಗಳು ಯೆಹೂದನ ಮನೆತನದವರಿಗಲ್ಲವೇ? ಅವರು ದೇಶವನ್ನು ಹಿಂಸೆಯಿಂದ ತುಂಬಿಸಿದ್ದಲ್ಲದೆ ನನ್ನನ್ನು ಕೆಣಕಬೇಕೆಂದು ಮತ್ತೆ ಯತ್ನಿಸುತ್ತಿದ್ದಾರೆ. ನೋಡು, ಅವರ ಮೂಗಿಗೆ ಕೊಂಬೆಗಳನ್ನಿಟ್ಟು ಕೊಳ್ಳುತ್ತಾರೆ.ಆದದರಿಂದ ನಾನು ಸಹ ಉಗ್ರ ದಿಂದಲೇ ಇರುವೆನು. ನನ್ನ ಕಣ್ಣು ಕನಿಕರಿಸುವದೂ ಇಲ್ಲ, ನಾನು ಕಟಾಕ್ಷಿಸುವದೂ ಇಲ್ಲ, ಅವರು ನನ್ನ ಕಿವಿಗಳಲ್ಲಿ ಮಹಾಧ್ವನಿಯಿಂದ ಕಿರಿಚಿದರೂ ನಾನು ಕೇಳಿಸಿಕೊಳ್ಳುವದೂ ಇಲ್ಲ.
- 1 Kings 20:13 1 ಅರಸುಗಳು 20:13ಆಗ ಇಗೋ, ಒಬ್ಬ ಪ್ರವಾದಿಯು ಇಸ್ರಾಯೇ ಲಿನ ಅರಸನಾದ ಅಹಾಬನ ಬಳಿಗೆ ಬಂದು--ಈ ದೊಡ್ಡ ಗುಂಪನ್ನು ನೋಡಿದಿಯೋ? ಇಗೋ, ನಾನೇ ಕರ್ತನೆಂದು ನೀನು ತಿಳಿಯುವ ಹಾಗೆ ಈ ಹೊತ್ತು ಅದನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವೆನೆಂದು ಕರ್ತನು ಹೇಳುತ್ತಾನೆ ಅಂದನು.
- Isaiah 7:1–9 ಯೆಶಾಯ 7:1–9ಯೋಥಾಮನ ಮಗನೂ ಉಜ್ಜೀಯನ ಮೊಮ್ಮಗನೂ ಯೆಹೂದದ ಅರಸನೂ ಆದ ಆಹಾಜನ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀನ, ರೆಮಲ್ಯನ ಮಗನೂ ಇಸ್ರಾಯೇಲ್ಯರ ಅರ ಸನೂ ಆದ ಪೆಕಹ ಎಂಬವರು ಯೆರೂಸಲೇಮಿನ ವಿರುದ್ಧವಾಗಿ ಯುದ್ಧಕ್ಕೆ ಹೋದರು. ಆದರೆ ಅದನ್ನು ಜಯಿಸಲು ಸಾಧ್ಯವಾಗಲಿಲ್ಲ. ಸಿರಿಯಾದವರು ಎಫ್ರಾಯಾಮ್ಯರೊಂದಿಗೆ ಹೊಂದಿಕೊಂಡಿದ್ದಾರೆಂದು ದಾವೀದನ ಮನೆಗೆ ತಿಳಿದಾಗ ಅವನ ಹೃದಯವು ಪ್ರಜೆಯ ಹೃದಯವು ಅರಣ್ಯದ ಮರಗಳು ಗಾಳಿಗೆ ಅಲುಗಾಡುವಂತೆ ನಡುಗಿದವು. ಆಗ ಕರ್ತನು, ಯೆಶಾಯನಿಗೆ--ನೀನು ಶೆಯಾರ್ ಯಾಶೂಬನೆಂಬ ನಿನ್ನ ಮಗನನ್ನು ಕರೆದುಕೊಂಡು ಹೋಗಿ ಮಡಿವಾಳರ ಹೊಲದ ಮೇಲೆ ಹೋಗುವ ದಾರಿಯಲ್ಲಿ ಮೇಲಿನ ಕೆರೆಯ ಕಾಲುವೆಯ ಕೊನೆಯ ಹತ್ತಿರ ಆಹಾಜನನ್ನು ಎದುರುಗೊಂಡು ಅವನಿಗೆ ಹೀಗೆ ಹೇಳು-- ಜಾಗ ರೂಕನಾಗಿ ಸುಮ್ಮನಿರು; ಭಯಪಡಬೇಡ ಇಲ್ಲವೆ ರೆಚೀನ ಅರಾಮ್ಯ ರೆಮಲ್ಯನ ಮಗ ಇವರ ಕೋಪವು ಎಷ್ಟು ಹೆಚ್ಚಿದರೂ ಹೊಗೆಯಾಡುವ ಈ ಎರಡು ಮೋಟು ಕೊಳ್ಳಿಗಳಿಗೆ ನಿನ್ನ ಹೃದಯವು ಕುಂದದಿರಲಿ. ಸಿರಿಯಾದವರೂ ಎಫ್ರಾಯಿಮಿನವರೂ ರೆಮಲ್ಯನ ಮಗನೂ ನಿನಗೆ ವಿರೋಧವಾಗಿ ದುರಾಲೋಚನೆ ಮಾಡಿ, ನಾವು ಯೆಹೂದಕ್ಕೆ ವಿರೋಧವಾಗಿ ಹೋಗಿ ಅದನ್ನು ವ್ಯಥೆಪಡಿಸಿ ಅದರಲ್ಲಿ ನಮಗಾಗಿ ಮಾಡಿ ಕೊಂಡಿರುವ ಒಪ್ಪಂದವನ್ನು ಉಲ್ಲಂಘಿಸಿ ಅದರ ಮಧ್ಯದಲ್ಲಿ ಒಬ್ಬ ಅರಸನನ್ನು ಅಂದರೆ ಟಾಬೇಲನ ಮಗನನ್ನು ನೇಮಿಸಿಕೊಳ್ಳೋಣ ಎಂದು ಹೇಳುವರು ಅದಕ್ಕೆ ಕರ್ತನಾದ ದೇವರು--ಅದು ನಿಲ್ಲುವದಿಲ್ಲ; ಇಲ್ಲವೆ ಅದು ಆಗುವದೇ ಇಲ್ಲ. ದಮಸ್ಕವು ಸಿರಿ ಯಾದ ತಲೆಯಾಗಿದೆ ಮತ್ತು ದಮಸ್ಕದ ತಲೆಯು ರೆಚೀನ; ಅರುವತ್ತೈದು ವರುಷಗಳೊಳಗೆ ಎಫ್ರಾಯಾ ಮ್ಯರು ಭಂಗಪಟ್ಟು ಜನಾಂಗವೆನಿಸಿಕೊಳ್ಳರು. ಎಫ್ರಾ ಯಾಮಿನ ತಲೆ ಸಮಾರ್ಯ ಸಮಾರ್ಯದ ತಲೆ ರೆಮಲ್ಯನ ಮಗನು. ನೀವು ನಂಬದೆ ಹೋದರೆ ನೀವು ನಿಜವಾಗಿಯೂ ನೆಲೆಗೊಳ್ಳುವದಿಲ್ಲ ಎಂಬದೇ.
- 1 Kings 3:13 1 ಅರಸುಗಳು 3:13ನೀನು ಕೇಳದ ಐಶ್ವ ರ್ಯವನ್ನೂ ಘನವನ್ನೂ ಕೊಟ್ಟಿದ್ದೇನೆ. ಆದದರಿಂದ ನಿನ್ನ ಸಮಸ್ತ ದಿವಸಗಳಲ್ಲಿ ನಿನ್ನ ಹಾಗೆ ಅರಸು ಗಳಲ್ಲಿ ಒಬ್ಬನೂ ಇರುವದಿಲ್ಲ.
- 1 Kings 20:28 1 ಅರಸುಗಳು 20:28ಆಗ ದೇವರ ಮನುಷ್ಯನೊಬ್ಬನು ಬಂದು ಇಸ್ರಾ ಯೇಲಿನ ಅರಸನಿಗೆ--ಕರ್ತನು ತಗ್ಗುಗಳ ದೇವರಾ ಗಿರದೆ ಪರ್ವತಗಳ ದೇವರಾಗಿದ್ದಾನೆಂಬದಾಗಿ ಅರಾ ಮ್ಯರು ಹೇಳಿದ್ದರಿಂದ ನಾನು ಕರ್ತನಾಗಿದ್ದೇನೆಂದು ನೀವು ತಿಳಿಯುವ ಹಾಗೆ ಆ ದೊಡ್ಡ ಸಮೂಹವನ್ನೆಲ್ಲಾ ನಿನ್ನ ಕೈಯಲ್ಲಿ ಒಪ್ಪಿಸುವೆನೆಂದು ಕರ್ತನು ಹೇಳುತ್ತಾನೆ ಅಂದನು.