2 Kings · chapter 3 · verse 17
2 Kings 3:17 in Kannada
ಕರ್ತನು ಹೀಗೆ ಹೇಳುತ್ತಾನೆ--ನೀನು ಗಾಳಿಯನ್ನೂ ಮಳೆಯನ್ನೂ ನೋಡುವದಿಲ್ಲ; ಆದರೆ ನೀವು ನಿಮ್ಮ ದನಗಳೂ ನಿಮ್ಮ ಪಶುಗಳೂ ಕುಡಿಯುವ ಹಾಗೆ ಈ ತಗ್ಗು ನೀರಿನಿಂದ ತುಂಬಲ್ಪಡುವದು.
Kartanu heege heluttaane--neenu gaaliyannoo maleyannoo noduvadilla; aadare neevu nimma danagaloo nimma pashugaloo kudiyuva haage ee taggu neerininda tumbalpaduvadu.
2 Kings 3:17 in English
- King James Version (KJV)
- For thus saith the LORD, Ye shall not see wind, neither shall ye see rain; yet that valley shall be filled with water, that ye may drink, both ye, and your cattle, and your beasts.
- World English Bible (WEB)
- For the LORD says, ‘You will not see wind, neither will you see rain, yet that valley will be filled with water, and you will drink, both you and your livestock and your other animals.
- American Standard Version (ASV)
- For thus saith Jehovah, Ye shall not see wind, neither shall ye see rain; yet that valley shall be filled with water, and ye shall drink, both ye and your cattle and your beasts.
- Bible in Basic English (BBE)
- For the Lord says, Though you see no wind or rain, the valley will be full of water, and you and your armies and your beasts will have drink.
- Darby Translation (DBY)
- For thus saith Jehovah: Ye shall not see wind, neither shall ye see rain; yet this valley shall be filled with water, and ye shall drink, both ye, and your cattle, and your beasts.
- Webster's Bible (WBS)
- For thus saith the LORD, Ye shall not see wind, neither shall ye see rain; yet that valley shall be filled with water, that ye may drink, both ye, and your cattle, and your beasts.
- Young's Literal Translation (YLT)
- for thus said Jehovah, Ye do not see wind, nor do ye see rain, and that valley is full of water, and ye have drunk — ye, and your cattle, and your beasts.
Read in context
- 15ಆದರೆ ಈಗ ವಾದ್ಯ ಬಾರಿಸುವವನನ್ನು ನನ್ನ ಬಳಿಗೆ ಕರಕೊಂಡು ಬಾ ಅಂದನು. ಆಗ ವಾದ್ಯ ಬಾರಿಸುವ ವನು ಬಾರಿಸಿದಾಗ ಕರ್ತನ ಕೈ ಅವನ ಮೇಲೆ ಬಂತು.
- 16ಅವನು ಹೇಳಿದ್ದೇನಂದರೆ -- ಈ ತಗ್ಗನ್ನು ಹಳ್ಳ ಕೊಳ್ಳಗಳಾಗಿ ಮಾಡಿರೆಂದು ಕರ್ತನು ಹೇಳುತ್ತಾನೆ.
- 17ಕರ್ತನು ಹೀಗೆ ಹೇಳುತ್ತಾನೆ--ನೀನು ಗಾಳಿಯನ್ನೂ ಮಳೆಯನ್ನೂ ನೋಡುವದಿಲ್ಲ; ಆದರೆ ನೀವು ನಿಮ್ಮ ದನಗಳೂ ನಿಮ್ಮ ಪಶುಗಳೂ ಕುಡಿಯುವ ಹಾಗೆ ಈ ತಗ್ಗು ನೀರಿನಿಂದ ತುಂಬಲ್ಪಡುವದು.
- 18ಇದಲ್ಲದೆ ಇದು ಕರ್ತನ ದೃಷ್ಟಿಗೆ ಅಲ್ಪವಾಗಿರುವದು; ಆತನು ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿ ಕೊಡುವನು.
- 19ನೀವು ಕೋಟೆಯುಳ್ಳ ಎಲ್ಲಾ ಪಟ್ಟಣಗಳನ್ನೂ ಆದು ಕೊಳ್ಳತಕ್ಕ ಎಲ್ಲಾ ಪಟ್ಟಣಗಳನ್ನೂ ಹೊಡೆದು ಬಿಟ್ಟು ಉತ್ತಮವಾದ ಎಲ್ಲಾ ಮರಗಳನ್ನು ಬೀಳಮಾಡಿ ನೀರು ಬಾವಿಗಳನ್ನೆಲ್ಲಾ ಮುಚ್ಚಿ ಉತ್ತಮವಾದ ಭೂಮಿಯಲ್ಲಿ ರುವ ಹೊಲಗಳನ್ನೆಲ್ಲಾ ಕಲ್ಲುಗಳಿಂದ ತುಂಬಿಸಿ ಕೆಡಿಸ ಬೇಕು ಅಂದನು.
Cross references
- Psalm 107:35 ಕೀರ್ತನೆಗಳು 107:35ಆತನು ಅರಣ್ಯವನ್ನು ನೀರಿನ ಕೆರೆಯಾಗಿಯೂ ಒಣ ಭೂಮಿ ಯನ್ನು ನೀರಿನ ಬುಗ್ಗೆಗಳಾಗಿಯೂ ಮಾರ್ಪಡಿಸುತ್ತಾನೆ.
- Isaiah 41:17–18 ಯೆಶಾಯ 41:17–18ಬಡವರೂ ದರಿದ್ರರೂ ನೀರನ್ನು ಹುಡುಕಿ ಕಾಣದೇ ಬಾಯಾರಿಕೆಯಿಂದ ನಾಲಿಗೆ ಒಣಗಿದಾಗ ಕರ್ತನಾದ ನಾನೇ ಅವರನ್ನು ಅಲೈಸುವೆನು, ಇಸ್ರಾಯೇಲ್ ದೇವ ರಾಗಿರುವ ನಾನು ಅವರನ್ನು ಕೈಬಿಡೆನು. ಎತ್ತರವಾದ ಸ್ಥಳಗಳಲ್ಲಿ ನದಿಗಳನ್ನು, ತಗ್ಗುಗಳ ಮಧ್ಯದಲ್ಲಿ ಬುಗ್ಗೆ ಗಳನ್ನು ಹೊರಡಿಸಿ ಅರಣ್ಯವನ್ನು ನೀರಿನ ಕೆರೆಯ ನ್ನಾಗಿಯೂ ಒಣನೆಲವನ್ನು ನೀರಿನ ಒರತೆಗಳನ್ನಾ ಗಿಯೂ ಮಾಡುವೆನು.
- Isaiah 43:19–20 ಯೆಶಾಯ 43:19–20ಇಗೋ, ನಾನು ಒಂದು ಹೊಸ ಕಾರ್ಯವನ್ನು ಮಾಡುವೆನು, ಅದು ಈಗಲೇ ಮೊಳೆತು ಬರುವದು; ನಿಮಗೆ ಅದು ತಿಳಿದಿಲ್ಲವೋ? ನಾನು ಅರಣ್ಯದಲ್ಲಿ ಮಾರ್ಗವನ್ನು ಮರುಭೂಮಿಯಲ್ಲಿ ನದಿಗಳನ್ನು ಸಹ ಉಂಟುಮಾಡು ವೆನು. ಅಡವಿಯ ಮೃಗಗಳು, ಘಟಸರ್ಪಗಳು ಮತ್ತು ಗೂಬೆಗಳು ನನ್ನನ್ನು ಸನ್ಮಾನಿಸುತ್ತವೆ. ಅಡವಿಯ ನೀರನ್ನು ಮರುಭೂಮಿಯಲ್ಲಿ ನದಿಗಳನ್ನು ನಾನು ಆರಿ ಸಿಕೊಂಡ ನನ್ನ ಪ್ರಜೆಗಳಿಗೆ ಕುಡಿಯುವದಕ್ಕೆ ಕೊಟ್ಟೆನು.
- Isaiah 48:21 ಯೆಶಾಯ 48:21ಆತನು ಅವರನ್ನು ಮರುಭೂಮಿಯಲ್ಲಿ ನಡೆಸಿದಾಗ ಅವರು ದಾಹಗೊಳ್ಳಲಿಲ್ಲ; ಅವರಿಗಾಗಿ ನೀರನ್ನು ಬಂಡೆಯೊಳಗಿಂದ ಹರಿಸಿದನು; ಆತನು ಬಂಡೆಯನ್ನು ಸೀಳಲು ನೀರು ರಭಸದಿಂದ ಹೊರಗೆ ಬಂತು;ದುಷ್ಟರಿಗೆ ಸಮಾಧಾನವೇ ಇಲ್ಲ ಎಂದು ಕರ್ತನು ನುಡಿಯುತ್ತಾನೆ.
- Psalm 84:6 ಕೀರ್ತನೆಗಳು 84:6ಬಾಕಾ ತಗ್ಗನ್ನು ದಾಟುವಾಗ ಅದನ್ನು ಬುಗ್ಗೆಯಾಗಿ ಮಾಡುತ್ತಾರೆ; ಮಳೆಯು ಕೊಳಗಳನ್ನು ತುಂಬುತ್ತದೆ.
- Exodus 17:6 ವಿಮೋಚನಕಾಂಡ 17:6ಅಲ್ಲಿ ಇಗೋ, ನಾನು ಹೋರೇಬಿನಲ್ಲಿ ಬಂಡೆಯ ಮೇಲೆ ನಿನ್ನ ಮುಂದೆ ನಿಂತುಕೊಳ್ಳುವೆನು ನೀನು ಬಂಡೆಯನ್ನು ಹೊಡೆಯ ಬೇಕು. ಆಗ ಜನರು ಕುಡಿಯುವಂತೆ ನೀರು ಹೊರಗೆ ಬರುವದು ಅಂದನು. ಮೋಶೆಯು ಇಸ್ರಾಯೇಲ್ಯರ ಹಿರಿಯರ ಎದುರಿನಲ್ಲಿ ಹಾಗೆಯೇ ಮಾಡಿದನು.
- Numbers 20:8–11 ಅರಣ್ಯಕಾಂಡ 20:8–11ಕೋಲನ್ನು ತಕ್ಕೊಂಡು ನೀನು ನಿನ್ನ ಸಹೋದರನಾದ ಆರೋನನು ಸಭೆಯನ್ನು ಕೂಡಿಸಿ ಕೊಂಡು ಅವರ ಕಣ್ಣುಗಳ ಮುಂದೆ ಬಂಡೆಯ ಸಂಗಡ ಮಾತನಾಡಿರಿ; ಅದು ತನ್ನ ನೀರನ್ನು ಕೊಡುವದು; ನೀನು ಅವರಿಗೋಸ್ಕರ ಬಂಡೆಯೊಳಗಿಂದ ನೀರನ್ನು ಹೊರಗೆ ತರುವಿ; ಸಭೆಗೂ ಅವರ ಪಶುಗಳಿಗೂ ನೀನು ಕುಡಿಯಲು ಕೊಡುವಿ ಎಂದು ಹೇಳಿದನು. ಆಗ ಕರ್ತನು ಆಜ್ಞಾಪಿಸಿದ ಹಾಗೆ ಮೋಶೆಯು ಆತನ ಸನ್ನಿಧಿಯಿಂದ ಕೋಲನ್ನು ತಕ್ಕೊಂಡನು. ಮೋಶೆಯೂ ಆರೋನನೂ ಸಭೆಯನ್ನು ಬಂಡೆಯ ಮುಂದೆ ಕೂಡಿಸಿ ಅವರಿಗೆ--ತಿರುಗಿಬಿದ್ದವರೇ, ಕೇಳಿರಿ; ನಾವು ನಿಮಗೋಸ್ಕರ ಈ ಬಂಡೆಯೊಳಗಿಂದ ನೀರನ್ನು ಹೊರಡಿಸಬೇಕೋ ಎಂದು ಹೇಳಿದರು. ಮೋಶೆಯು ತನ್ನ ಕೈಯನ್ನು ಎತ್ತಿ ತನ್ನ ಕೋಲಿನಿಂದ ಬಂಡೆಯನ್ನು ಎರಡು ಸಾರಿ ಹೊಡೆದನು; ಆಗ ಬಹಳ ನೀರು ಹೊರಗೆ ಬಂತು; ಸಭೆಯೂ ಅವರ ಪಶುಗಳೂ ಕುಡಿದವು.
- 1 Kings 18:36–39 1 ಅರಸುಗಳು 18:36–39ಸಾಯಂಕಾಲದ ಬಲಿಯನ್ನು ಅರ್ಪಿಸುವ ವೇಳೆ ಯಲ್ಲಿ ಪ್ರವಾದಿಯಾದ ಎಲೀಯನು ಸವಿಾಪಕ್ಕೆ ಬಂದು--ಅಬ್ರಹಾಮನಿಗೂ ಇಸಾಕನಿಗೂ ಇಸ್ರಾ ಯೇಲಿಗೂ ದೇವರಾದ ಕರ್ತನೇ, ಇಸ್ರಾಯೇಲಿನಲ್ಲಿ ನೀನು ದೇವರೆಂದೂ ನಾನು ನಿನ್ನ ಸೇವಕನೆಂದೂ ನಾನು ಈ ಕಾರ್ಯಗಳನ್ನೆಲ್ಲಾ ನಿನ್ನ ಮಾತಿನ ಹಾಗೆಯೇ ಮಾಡಿದೆನೆಂದೂ ಇಂದು ತಿಳಿಯಲ್ಪಡಲಿ. ನೀನು ದೇವರಾದ ಕರ್ತನೆಂದೂ ನೀನು ಅವರ ಹೃದಯವನ್ನು ಮರಳಿ ತಿರಿಗಿಸುತ್ತಿ ಎಂದೂ ಈ ಜನವು ತಿಳಿಯುವ ಹಾಗೆ ನನಗೆ ಉತ್ತರಕೊಡು, ಓ ಕರ್ತನೇ, ನನಗೆ ಉತ್ತರಕೊಡು ಎಂದು ಬೇಡಿದನು. ಆಗ ಕರ್ತನ ಬೆಂಕಿಯು ಇಳಿದು ಬಂದು ದಹನಬಲಿಯನ್ನೂ ಕಟ್ಟಿಗೆ ಗಳನ್ನೂ ಕಲ್ಲುಗಳನ್ನೂ ಮಣ್ಣನ್ನೂ ಸುಟ್ಟುಬಿಟ್ಟು ಕಾಲುವೆ ಯಲ್ಲಿದ್ದ ನೀರನ್ನು ಹೀರಿಬಿಟ್ಟಿತು. ಜನರೆಲ್ಲರು ಇದನ್ನು ನೋಡಿದಾಗ ಬೋರಲು ಬಿದ್ದು--ಕರ್ತನು ತಾನೇ ದೇವರು, ಕರ್ತನು ತಾನೇ ದೇವರು ಅಂದರು.