2 Kings · chapter 3 · verse 2
2 Kings 3:2 in Kannada
ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ತನ್ನ ತಂದೆ ತಾಯಿಯ ಹಾಗೂ ಅಲ್ಲ; ತನ್ನ ತಂದೆಯು ಮಾಡಿಟ್ಟ ಬಾಳನ ಸ್ತಂಭವನ್ನು ತೆಗೆದುಹಾಕಿದನು.
Avanu kartana sammukhadalli kettaddannu maadidanu. Aadare tanna tande taayiya haagoo alla; tanna tandeyu maaditta baalana stambhavannu tegeduhaakidanu.
2 Kings 3:2 in English
- King James Version (KJV)
- And he wrought evil in the sight of the LORD; but not like his father, and like his mother: for he put away the image of Baal that his father had made.
- World English Bible (WEB)
- He did that which was evil in the LORD’s sight, but not like his father and like his mother, for he put away the pillar of Baal that his father had made.
- American Standard Version (ASV)
- And he did that which was evil in the sight of Jehovah, but not like his father, and like his mother; for he put away the pillar of Baal that his father had made.
- Bible in Basic English (BBE)
- He did evil in the eyes of the Lord; but not like his father and his mother, for he put away the stone pillar of Baal which his father had made.
- Darby Translation (DBY)
- And he wrought evil in the sight of Jehovah, but not like his father, and like his mother; and he took away the column of Baal that his father had made.
- Webster's Bible (WBS)
- And he wrought evil in the sight of the LORD; but not like his father, and like his mother: for he put away the image of Baal that his father had made.
- Young's Literal Translation (YLT)
- and doth the evil thing in the eyes of Jehovah, only not like his father, and like his mother, and he turneth aside the standing-pillar of Baal that his father made;
Read in context
- 1ಯೆಹೂದದ ಅರಸನಾದ ಯೆಹೋಷಾಫಾಟನ ಹದಿನೆಂಟನೆಯ ವರುಷದಲ್ಲಿ ಅಹಾಬನ ಮಗನಾದ ಯೋರಾಮನು ಸಮಾರ್ಯ ದಲ್ಲಿ ಇಸ್ರಾಯೇಲ್ಯರ ಅರಸನಾಗಿ ಹನ್ನೆರಡು ವರುಷ ಆಳಿದನು.
- 2ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ತನ್ನ ತಂದೆ ತಾಯಿಯ ಹಾಗೂ ಅಲ್ಲ; ತನ್ನ ತಂದೆಯು ಮಾಡಿಟ್ಟ ಬಾಳನ ಸ್ತಂಭವನ್ನು ತೆಗೆದುಹಾಕಿದನು.
- 3ಆದರೂ ಇಸ್ರಾಯೇಲ್ಯರನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳಿಗೆ ಅವನು ಅಂಟಿಕೊಂಡು ಅವುಗಳನ್ನು ಬಿಡದೇ ಇದ್ದನು.
- 4ಮೋವಾಬಿನ ಅರಸನಾದ ಮೇಷನು ಕುರಿಮಂದೆ ಯುಳ್ಳವನಾಗಿದ್ದು ಇಸ್ರಾಯೇಲಿನ ಅರಸನಿಗೆ ಒಂದು ಲಕ್ಷ ಕುರಿಮರಿಗಳನ್ನೂ ಉಣ್ಣೆ ಸಹಿತವಾಗಿ ಒಂದು ಲಕ್ಷ ಟಗರುಗಳನ್ನೂ ಕಪ್ಪವಾಗಿ ಕೊಡುತ್ತಿದ್ದನು.
Cross references
- 2 Kings 10:18 2 ಅರಸುಗಳು 10:18ಯೇಹುವು ಜನರೆಲ್ಲರನ್ನು ಕೂಡಿಸಿ ಅವರಿಗೆ-- ಅಹಾಬನು ಸ್ವಲ್ಪವಾಗಿ ಬಾಳನನ್ನು ಸೇವಿಸಿದನು; ಆದರೆ ಯೇಹುವು ಅವನನ್ನು ಬಹಳವಾಗಿ ಸೇವಿಸುವನು.
- 2 Kings 10:26–28 2 ಅರಸುಗಳು 10:26–28ಹಾಗೆಯೇ ಅವರನ್ನು ಕತ್ತಿಯಿಂದ ಸಂಹರಿಸಿದರು. ಕಾವಲು ಗಾರನೂ ಅಧಿಪತಿಗಳೂ ಅವರನ್ನು ಹೊರಗೆ ಹಾಕಿದ ತರುವಾಯ ಬಾಳನ ಮನೆಯ ಪಟ್ಟಣಕ್ಕೆ ಹೋಗಿ ಬಾಳನ ಮನೆಯಿಂದ ವಿಗ್ರಹವನ್ನು ತಂದು ಅವುಗಳನ್ನು ಸುಟ್ಟುಬಿಟ್ಟರು. ಇದಲ್ಲದೆ ಅವರು ಬಾಳನ ವಿಗ್ರಹ ವನ್ನು ಒಡೆದುಹಾಕಿ ಬಾಳನ ಮನೆಯನ್ನು ಕೆಡವಿಬಿಟ್ಟು ಅದನ್ನು ಈ ಹೊತ್ತಿನ ವರೆಗೂ ತಿಪ್ಪೆಯಾಗಿ ಮಾಡಿದರು. ಹೀಗೆಯೇ ಯೇಹುವು ಬಾಳನನ್ನು ಇಸ್ರಾಯೇಲಿ ನಲ್ಲಿಂದ ನಾಶಮಾಡಿಬಿಟ್ಟನು.
- 1 Kings 21:25 1 ಅರಸುಗಳು 21:25ಆದರೆ ತನ್ನ ಹೆಂಡತಿಯಾದ ಈಜೆಬೆಲಳಿಂದ ಪ್ರೇರೇಪಿಸಲ್ಪಟ್ಟು ಕರ್ತನ ಸಮ್ಮುಖದಲ್ಲಿ ಕೆಟ್ಟತನವನ್ನು ಮಾಡಲು ತನ್ನನ್ನು ಮಾರಿಬಿಟ್ಟ ಅಹಾಬನ ಹಾಗೆ ಯಾವನೂ ಇರಲಿಲ್ಲ.
- Exodus 23:24 ವಿಮೋಚನಕಾಂಡ 23:24ಅವರ ದೇವರುಗಳಿಗೆ ನೀವು ಅಡ್ಡಬೀಳಲೂ ಬಾರದು, ಅವುಗಳನ್ನು ಸೇವಿಸಲೂಬಾರದು. ಇದಲ್ಲದೆ ನೀವು ಅವರ ಕೃತ್ಯಗಳ ಪ್ರಕಾರ ಮಾಡದೆ ಅವರನ್ನು ನಿರ್ಮೂಲ ಮಾಡಿಬಿಟ್ಟು ಅವರ ವಿಗ್ರಹಗಳನ್ನು ಪೂರ್ಣವಾಗಿ ಒಡೆದು ಹಾಕಬೇಕು.
- 2 Kings 9:34 2 ಅರಸುಗಳು 9:34ಅವನು ಒಳಗೆ ಹೋಗಿ ತಿಂದು ಕುಡಿದ ಮೇಲೆ ಅವರಿಗೆ -- ನೀವು ಹೋಗಿ ಆ ಶಪಿಸಲ್ಪಟ್ಟವಳನ್ನು ನೋಡಿಕೊಂಡು ಹೂಣಿಡಿರಿ; ಅವಳು ಅರಸನ ಮಗಳು ಅಂದನು.
- 1 Kings 21:20 1 ಅರಸುಗಳು 21:20ಆಗ ಅಹಾಬನು ಎಲೀಯನಿಗೆ--ನನ್ನ ಶತ್ರುವೇ, ನೀನು ನನ್ನನ್ನು ಕಂಡುಕೊಂಡಿಯಾ ಅಂದನು. ಅದಕ್ಕ ವನು--ಕಂಡುಕೊಂಡೆನು;
- 1 Kings 16:19 1 ಅರಸುಗಳು 16:19ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟತನಮಾಡಿ ತಾನು ಮಾಡಿದ ಪಾಪ ಗಳ ನಿಮಿತ್ತವಾಗಿಯೂ ಯಾರೊಬ್ಬಾಮನ ಮಾರ್ಗ ದಲ್ಲಿ ನಡೆದು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ಅವನ ಪಾಪದ ನಿಮಿತ್ತವಾಗಿಯೂ ಇದು ಆಯಿತು.
- 1 Samuel 15:19 1 ಸಮುವೇಲನು 15:19ಹೀಗಿರುವಾಗ ನೀನು ಯಾಕೆ ಕರ್ತನ ಮಾತಿಗೆ ವಿಧೇಯನಾಗದೆ ಕೊಳ್ಳೆಯ ಮೇಲೆ ಬಿದ್ದು ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿದಿ ಅಂದನು.
- 2 Kings 21:6 2 ಅರಸುಗಳು 21:6ಅವನು ತನ್ನ ಮಗನನ್ನು ಬೆಂಕಿಯಲ್ಲಿ ದಾಟುವಂತೆ ಮಾಡಿದನು; ಮೇಘ ಮಂತ್ರ ಗಳನ್ನೂ ಸರ್ಪಮಂತ್ರಗಳನ್ನೂ ಮಾಡಿದನು; ಯಕ್ಷಿಣಿ ಗಾರರ ಬಳಿಯಲ್ಲೂ ಮಂತ್ರಜ್ಞರ ಬಳಿಯಲ್ಲೂ ವಿಚಾರಿ ಸಿದನು; ಕರ್ತನಿಗೆ ಕೋಪವನ್ನು ಎಬ್ಬಿಸಲು ಆತನ ದೃಷ್ಟಿಯಲ್ಲಿ ಅತ್ಯಂತ ಕೆಟ್ಟತನವನ್ನು ಮಾಡಿದನು.
- 2 Kings 9:22 2 ಅರಸುಗಳು 9:22ಯೋರಾಮನು ಯೇಹು ವನ್ನು ನೋಡಿದಾಗ--ಯೇಹುವೇ, ಸಮಾಧಾನವೋ ಅಂದನು. ಅದಕ್ಕವನು--ನಿನ್ನ ತಾಯಿಯಾದ ಈಜೆ ಬೆಲಳ ಜಾರತ್ವವೂ ಅವಳ ಮಾಟಗಳೂ ಅಧಿಕವಾಗಿರು ವಾಗ ಸಮಾಧಾನವೇನು ಅಂದನು.
- 1 Kings 16:31–33 1 ಅರಸುಗಳು 16:31–33ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳಲ್ಲಿ ನಡೆಯು ವದು ಅವನಿಗೆ ಅಲ್ಪವಾಗಿತ್ತು; ಅವನು ಚೀದೋನ್ಯರ ಅರಸನಾಗಿರುವ ಎತ್ಬಾಳನ ಮಗಳಾದ ಈಜೆಬೆಲಳನ್ನು ಮದುವೆಯಾಗಿ ಬಾಳನನ್ನು ಸೇವಿಸಿ ಅವನಿಗೆ ಅಡ್ಡ ಬಿದ್ದನು. ಇದಲ್ಲದೆ ತಾನು ಸಮಾರ್ಯದಲ್ಲಿ ಕಟ್ಟಿಸಿದ ಬಾಳನ ಮನೆಯಲ್ಲಿ ಬಾಳನಿಗೆ ಬಲಿಪೀಠವನ್ನು ಕಟ್ಟಿಸಿ ದನು, ಅಹಾಬನು ತೋಪನ್ನು ಹಾಕಿಸಿದನು. ಹೀಗೆಯೆ ಅಹಾಬನು ಇಸ್ರಾಯೇಲಿನ ದೇವರಾದ ಕರ್ತನಿಗೆ ಕೋಪವನ್ನು ಎಬ್ಬಿಸುವ ಹಾಗೆ ತನಗೆ ಮುಂಚಿನ ಇಸ್ರಾಯೇಲಿನ ಅರಸುಗಳೆಲ್ಲರಿಗಿಂತ ಅಧಿಕ ವಾಗಿ ಕೆಟ್ಟತನಮಾಡಿದನು.ಅವನ ದಿವಸಗಳಲ್ಲಿ ಬೇತೇಲಿನವನಾದ ಹೀಯೇ ಲನು ಯೆರಿಕೋವನ್ನು ಕಟ್ಟಿಸಿದನು; ಕರ್ತನು ನೂನನ ಮಗನಾದ ಯೆಹೋಶುವನ ಮುಖಾಂತರ ಹೇಳಿದ್ದ ವಾಕ್ಯದ ಪ್ರಕಾರವೇ ಅವನು ಅದಕ್ಕೆ ಅಸ್ತಿವಾರವನ್ನು ಹಾಕಿದಾಗ ತನ್ನ ಚೊಚ್ಚಲ ಮಗನಾದ ಅಬೀರಾಮನೂ ಅದರ ಬಾಗಲುಗಳನ್ನು ಇಟ್ಟಾಗ ಅವನ ಚಿಕ್ಕಮಗನಾದ ಸೆಗೂಬನೂ ಸತ್ತರು.
- 1 Kings 21:5–15 1 ಅರಸುಗಳು 21:5–15ಆಗ ಅವನ ಹೆಂಡತಿಯಾದ ಈಜೆಬೆಲಳು ಅವನ ಬಳಿಗೆ ಬಂದು ಅವನಿಗೆ--ನೀನು ರೊಟ್ಟಿ ತಿನ್ನದ ಹಾಗೆ ನಿನ್ನ ಪ್ರಾಣ ವ್ಯಸನವುಳ್ಳದ್ದಾಗಿರುವದೇನು ಅಂದಳು. ಅವನು ಅವಳಿಗೆ--ನಾನು ಇಜ್ರೇಲ್ಯನಾದ ನಾಬೋ ತನ ಸಂಗಡ ಮಾತನಾಡಿ--ನಿನ್ನ ದ್ರಾಕ್ಷೇ ತೋಟವನ್ನು ನನಗೆ ಕ್ರಯಕ್ಕೆ ಕೊಡು; ಇಲ್ಲವೆ ನಿನಗೆ ಮನಸ್ಸಿದ್ದರೆ ಅದಕ್ಕೆ ಬದಲಾಗಿ ಬೇರೆ ದ್ರಾಕ್ಷೇ ತೋಟವನ್ನು ಕೊಡು ವೆನು ಎಂದು ಅವನಿಗೆ ಹೇಳಿದೆನು. ಅದಕ್ಕವನುನನ್ನ ದ್ರಾಕ್ಷೇ ತೋಟವನ್ನು ಕೊಡುವದಿಲ್ಲ ಅಂದನು ಎಂದು ಹೇಳಿದನು. ಆಗ ಅವನ ಹೆಂಡತಿಯಾದ ಈಜೆಬೆಲಳು ಅವನಿಗೆ--ನೀನು ಈಗ ಇಸ್ರಾಯೇಲಿನ ರಾಜ್ಯವನ್ನು ಆಳುತ್ತಾ ಇದ್ದೀಯೊ? ಎದ್ದು ರೊಟ್ಟಿತಿನ್ನು; ನಿನ್ನ ಹೃದಯ ಸಂತೋಷವಾಗಿರಲಿ. ನಾನೇ ಇಜ್ರೇಲ್ಯನಾದ ನಾಬೋತನ ದ್ರಾಕ್ಷೇ ತೋಟವನ್ನು ನಿನಗೆ ಕೊಡುವೆನು ಅಂದಳು. ಹೀಗೆ ಅವಳು ಅಹಾ ಬನ ಹೆಸರಿನಲ್ಲಿ ಪತ್ರಗಳನ್ನು ಬರೆದು ಅವುಗಳಿಗೆ ಅವನ ಮುದ್ರೆ ಹಾಕಿ ಆ ಪತ್ರಗಳನ್ನು ನಾಬೋತನ ಸಂಗಡ ಅವನ ಪಟ್ಟಣದಲ್ಲಿ ವಾಸವಾಗಿರುವ ಹಿರಿಯ ರಿಗೂ ಗೌರವಸ್ಥರಿಗೂ ಕಳುಹಿಸಿದಳು. ಅವಳು ಪತ್ರಗಳಲ್ಲಿ--ನೀವು ಉಪವಾಸವನ್ನು ಪ್ರಕಟಮಾಡಿ ನಾಬೋತನನ್ನು ಜನರೊಳಗೆ ಎತ್ತರದ ಸ್ಥಳದಲ್ಲಿ ನಿಲ್ಲಿಸಿ-- ನೀನು ದೇವರನ್ನೂ ಅರಸನನ್ನೂ ದೂಷಿ ಸಿದಿ ಎಂದು ಅವನಿಗೆ ವಿರೋಧವಾಗಿ ಸಾಕ್ಷಿ ಹೇಳಲು ಅವನ ಮುಂದೆ ಬೆಲಿಯಾಳನ ಮಕ್ಕಳಾದ ಇಬ್ಬರು ಮನುಷ್ಯರನ್ನು ನಿಲ್ಲಿಸಿರಿ; ತರುವಾಯ ಅವನನ್ನು ಹೊರಗೆ ತಕ್ಕೊಂಡು ಹೋಗಿ ಅವನು ಸಾಯುವ ಹಾಗೆ ಕಲ್ಲೆಸೆಯಿರಿ ಎಂದು ಬರೆದಿತ್ತು. ಆಗ ಅವನ ಪಟ್ಟಣದಲ್ಲಿರುವ ಹಿರಿಯರೂ ಗೌರವಸ್ಥರೂ ತಮಗೆ ಈಜೆಬೆಲಳು ಕಳುಹಿಸಿದ ಪತ್ರದ ಪ್ರಕಾರವೇ ಮಾಡಿ ದರು. ಅವರು ಉಪವಾಸವನ್ನು ಪ್ರಕಟಮಾಡಿ ನಾಬೋತನನ್ನು ಜನರೊಳಗೆ ಎತ್ತರ ಸ್ಥಳದಲ್ಲಿ ನಿಲ್ಲಿಸಿ ದರು. ಆಗ ಬೆಲಿಯಾಳನ ಮಕ್ಕಳಾದ ಇಬ್ಬರು ಮನುಷ್ಯರು ಬಂದು ಅವನಿಗೆದುರಾಗಿ ಕುಳಿತು ಕೊಂಡರು; ಈ ಬೆಲಿಯಾಳನ ಮನುಷ್ಯರು ಜನರ ಸಮ್ಮುಖದಲ್ಲಿ ನಾಬೋತನಿಗೆ ವಿರೋಧವಾಗಿ--ಈ ನಾಬೋತನು ದೇವರನ್ನೂ ಅರಸನನ್ನೂ ದೂಷಿಸಿದ ನೆಂದು ಸಾಕ್ಷಿ ಹೇಳಿದರು. ಆಗ ಅವನನ್ನು ಪಟ್ಟಣದ ಹೊರಗೆ ತಕ್ಕೊಂಡು ಹೋಗಿ ಅವನು ಸಾಯುವ ಹಾಗೆ ಅವರು ಅವನಿಗೆ ಕಲ್ಲೆಸೆದರು. ಅವನು ಸತ್ತನು. ಅವರು ಈಜೆಬೆಲಳಿಗೆ--ನಾಬೋತನು ಕಲ್ಲೆಸೆಯ ಲ್ಪಟ್ಟು ಸತ್ತನೆಂದು ಹೇಳಿ ಕಳುಹಿಸಿದರು. ನಾಬೋ ತನು ಕಲ್ಲೆಸೆಯಲ್ಪಟ್ಟು ಸತ್ತಿದ್ದಾನೆಂದು ಈಜೆಬೆಲಳು ಕೇಳಿದಾಗ ಅವಳು ಅಹಾಬನಿಗೆ--ನೀನೆದ್ದು ಇಜ್ರೇಲ್ಯ ನಾದ ನಾಬೋತನು ಬೆಲೆಗೆ ಕೊಡಲು ಸಮ್ಮತಿಸ ದಿದ್ದ ದ್ರಾಕ್ಷೇ ತೋಟವನ್ನು ಸ್ವಾಧೀನ ಮಾಡಿಕೋ; ಯಾಕಂದರೆ ನಾಬೋತನು ಜೀವದಿಂದ ಇಲ್ಲ, ಸತ್ತಿ ದ್ದಾನೆ ಅಂದಳು.