2 Samuel · chapter 1 · verse 8
2 Samuel 1:8 in Kannada
ಆಗ ಅವನು ನೀನ್ಯಾರು ಅಂದನು.
Aaga avanu neenyaaru andanu.
2 Samuel 1:8 in English
- King James Version (KJV)
- And he said unto me, Who [art] thou? And I answered him, I [am] an Amalekite.
- World English Bible (WEB)
- He said to me, ‘Who are you?’ I answered him, ‘I am an Amalekite.’
- American Standard Version (ASV)
- And he said unto me, Who art thou? And I answered him, I am an Amalekite.
- Bible in Basic English (BBE)
- And he said to me, Who are you? And I said, I am an Amalekite.
- Darby Translation (DBY)
- And he said to me, Who art thou? And I said to him, I am an Amalekite.
- Webster's Bible (WBS)
- And he said to me, Who [art] thou? And I answered him, I [am] an Amalekite.
- Young's Literal Translation (YLT)
- And he saith to me, Who [art] thou? and I say unto him, An Amalekite I [am].'
Read in context
- 6ಅವನಿಗೆ ವರ್ತ ಮಾನ ಹೇಳಿದ ಯೌವನಸ್ಥನು--ನಾನು ಸುಮ್ಮನೆ ಗಿಲ್ಬೋವ ಬೆಟ್ಟದಲ್ಲಿ ಬಂದಿದ್ದೆನು. ಅಲ್ಲಿ ಇಗೋ, ಸೌಲನು ತನ್ನ ಈಟಿಯ ಮೇಲೆ ಆತುಕೊಂಡಿದ್ದನು. ಆಗ ಇಗೋ, ರಥಗಳೂ ರಾಹುತರೂ ಅವನನ್ನು ಹಿಂದಟ್ಟಿಕೊಂಡೇ ಇದ್ದರು.
- 7ಅವನು ಹಿಂದಕ್ಕೆ ತಿರುಗಿ ನೋಡಿ ನನ್ನನ್ನು ಕಂಡು ಕರೆದನು. ಆಗ ನಾನುಇಗೋ, ಇದ್ದೇನೆ ಅಂದೆನು.
- 8ಆಗ ಅವನು ನೀನ್ಯಾರು ಅಂದನು.
- 9ನಾನು ಅವನಿಗೆ--ಅಮಾಲೇಕ್ಯನು ಎಂದು ಹೇಳಿದೆನು. ಅವನು ನನಗೆ -- ನೀನು ದಯಮಾಡಿ ನನ್ನ ಮೇಲೆ ನಿಂತು ನನ್ನನ್ನು ಕೊಂದುಹಾಕು; ಯಾಕಂದರೆ ನನ್ನ ಪ್ರಾಣವು ಇನ್ನೂ ನನ್ನಲ್ಲಿ ಪೂರ್ಣ ವಾಗಿರುವದರಿಂದ ಸಂಕಟವು ನನ್ನನ್ನು ಹಿಡಿಯಿತು ಅಂದನು.
- 10ಆದದರಿಂದ ಇವನು ಬಿದ್ದ ತರುವಾಯ ಬದುಕಲಾರನೆಂದು ನಾನು ತಿಳಿದು ಅವನ ಮೇಲೆ ನಿಂತು ಅವನನ್ನು ಕೊಂದುಹಾಕಿದೆನು. ಅವನ ತಲೆಯ ಮೇಲಿದ್ದ ಕಿರೀಟವನ್ನೂ ಅವನ ಕೈಯಲ್ಲಿದ್ದ ಕಡಗ ವನ್ನೂ ತೆಗೆದುಕೊಂಡು ಅವುಗಳನ್ನು ನನ್ನ ಒಡೆಯನಿಗೆ ಇಲ್ಲಿ ತಂದೆನು ಅಂದನು.
Cross references
- 1 Samuel 30:17 1 ಸಮುವೇಲನು 30:17ಆಗ ದಾವೀದನು ಅವರನ್ನು ಬೆಳಗಿನ ಜಾವದಿಂದ ಮಾರ ನೆಯ ದಿವಸದ ಸಾಯಂಕಾಲದವರೆಗೂ ಸಂಹರಿಸುತ್ತಾ ಇದ್ದನು. ಆದರೆ ಅವರಲ್ಲಿ ಒಂಟೆಗಳ ಮೇಲೆ ಏರಿ ಓಡಿಹೋದ ನಾನೂರು ಮಂದಿ ಯೌವನಸ್ಥರ ಹೊರತು ಒಬ್ಬನಾದರೂ ತಪ್ಪಿಸಿಕೊಂಡದ್ದಿಲ್ಲ.
- 1 Samuel 30:13 1 ಸಮುವೇಲನು 30:13ದಾವೀದನು ಅವನನ್ನು--ನೀನು ಯಾರವನು? ನೀನು ಎಲ್ಲಿಯವನು ಎಂದು ಕೇಳಿದಾಗ ಅವನು--ನಾನು ಒಬ್ಬ ಅಮಾಲೇಕ್ಯನ ಸೇವಕನಾದ ಐಗುಪ್ತದೇಶದ ಯೌವನಸ್ಥನು. ಈ ಮೂರು ದಿವಸ ನಾನು ರೋಗದಲ್ಲಿ ಬಿದ್ದದರಿಂದ ನನ್ನ ಯಜಮಾನನು ನನ್ನನ್ನು ಬಿಟ್ಟುಹೋದನು.
- 1 Samuel 15:3 1 ಸಮುವೇಲನು 15:3ಈಗ ನೀನು ಹೋಗಿ ಆ ಅಮಾಲೇಕ್ಯರನ್ನು ಹೊಡೆದು ಅವರಿಗೆ ಇದ್ದದ್ದನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿ ಅವರನ್ನು ಕನಿಕರಿಸದೆ ಪುರುಷರನ್ನೂ ಸ್ತ್ರೀಯರನ್ನೂ ಚಿಕ್ಕವರನ್ನೂ ಮೊಲೆ ಕೂಸುಗಳನ್ನೂ ದನ ಕುರಿ ಒಂಟೆ ಕತ್ತೆಗಳನ್ನೂ ಕೊಂದುಹಾಕು ಎಂಬದು.
- 1 Samuel 30:1 1 ಸಮುವೇಲನು 30:1ದಾವೀದನೂ ಅವನ ಜನರೂ ಮೂರನೇದಿವಸದಲ್ಲಿ ಚಿಕ್ಲಗಿಗೆ ಬಂದು ಸೇರುವಷ್ಟರಲ್ಲಿ ಏನಾಯಿತಂದರೆ, ಅಮಾಲೇಕ್ಯರು ದಕ್ಷಿಣ ಸೀಮೆಯ ಮೇಲೆಯೂ ಚಿಕ್ಲಗಿನ ಮೇಲೆಯೂ ಬಂದು ಬಿದ್ದು ಚಿಕ್ಲಗನ್ನು ಹೊಡೆದು ಅದನ್ನು ಬೆಂಕಿಯಿಂದ ಸುಟ್ಟುಬಿಟ್ಟು
- Numbers 24:20 ಅರಣ್ಯಕಾಂಡ 24:20ತರುವಾಯ ಅವನು ಅಮಾಲೇಕ್ಯರನ್ನು ನೋಡಿ ಸಾಮ್ಯರೂಪವಾಗಿ--ಜನಾಂಗಗಳಲ್ಲಿ ಮೊದಲನೆ ಯವನೇ ಅಮಾಲೇಕ್ಯನು; ಆದರೆ ಅವನ ಅಂತ್ಯವು ಸದಾಕಾಲಕ್ಕೆ ನಾಶವಾಗುವದು ಅಂದನು.
- Genesis 14:7 ಆದಿಕಾಂಡ 14:7ಅವರು ಹಿಂತಿರುಗಿ ಕಾದೇಶ್ ಎಂಬ ಎನ್ಮಿಷ್ಪಾಟಿಗೆ ಬಂದು ಅಮಾಲೆಕ್ಯರ ಎಲ್ಲಾ ಬೈಲನ್ನು ಹಚಚೋನ್ತಾಮರಿನಲ್ಲಿ ವಾಸವಾಗಿದ್ದ ಅಮೋರಿಯರನ್ನೂ ಸಂಹರಿಸಿದರು.
- 1 Samuel 27:8 1 ಸಮುವೇಲನು 27:8ದಾವೀ ದನೂ ಅವನ ಜನರೂ ಶೂರಿಗೆ ಹೋಗುವ ಮೇರೆ ಯಿಂದ ಐಗುಪ್ತದ ವರೆಗೂ ಇರುವ ಸೀಮೆಯಲ್ಲಿ ಪೂರ್ವದಿಂದ ವಾಸಿಸಿರುವವರಾದ ಗೆಷೂರ್ಯರ ಮೇಲೆಯೂ ಗಿಜ್ರೀಯರ ಮೇಲೆಯೂ ಅಮಾಲೇಕ್ಯರ ಮೇಲೆಯೂ ದಂಡೆತ್ತಿ ಹೋದರು.
- Deuteronomy 25:17–19 ಧರ್ಮೋಪದೇಶಕಾಂಡ 25:17–19ನೀವು ಐಗುಪ್ತವನ್ನು ಬಿಟ್ಟು ಬರುವ ಮಾರ್ಗ ನದಲ್ಲಿ ಅಮಾಲೇಕ್ಯನು ನಿನಗೆ ಮಾಡಿದ್ದನ್ನು ಜ್ಞಾಪಕ ಮಾಡಿಕೊ. ಅವನು ಮಾರ್ಗದಲ್ಲಿ ನಿನಗೆ ಎದುರು ಗೊಂಡು ದೇವರಿಗೆ ಭಯಪಡದೆ ನೀನು ಆಯಾಸವುಳ್ಳ ವನೂ ದಣಿದವನೂ ಆಗಿರುವ ಸಮಯದಲ್ಲಿ ನಿನ್ನ ಹಿಂದೆ ಬಿದ್ದ ಬಲಹೀನರೆಲ್ಲರನ್ನು ನಿನ್ನ ಹಿಂಭಾಗದಲ್ಲಿ ಸಂಹಾರಮಾಡಿದನು.ಆದದರಿಂದ ನಿನ್ನ ದೇವರಾದ ಕರ್ತನು ನಿನಗೆ ವಶಮಾಡಿಕೊಳ್ಳುವದಕ್ಕೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ಸುತ್ತಲಾಗಿರುವ ಶತ್ರುಗಳಿಂದ ನಿನ್ನ ದೇವರಾದ ಕರ್ತನು ನಿನ್ನನ್ನು ಬಿಡಿಸಿ ವಿಶ್ರಾಂತಿ ಕೊಟ್ಟ ಮೇಲೆ ಆಮಾಲೇಕ್ಯನ ಜ್ಞಾಪಕವನ್ನು ಆಕಾಶದ ಕೆಳಗಿಂದ ಅಳಿಸಿಬಿಡಬೇಕು; ಇದನ್ನು ಮರೆಯಬಾರದು. ಆದದರಿಂದ ನಿನ್ನ ದೇವರಾದ ಕರ್ತನು ನಿನಗೆ ವಶಮಾಡಿಕೊಳ್ಳುವದಕ್ಕೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ಸುತ್ತಲಾಗಿರುವ ಶತ್ರುಗಳಿಂದ ನಿನ್ನ ದೇವರಾದ ಕರ್ತನು ನಿನ್ನನ್ನು ಬಿಡಿಸಿ ವಿಶ್ರಾಂತಿ ಕೊಟ್ಟ ಮೇಲೆ ಆಮಾಲೇಕ್ಯನ ಜ್ಞಾಪಕವನ್ನು ಆಕಾಶದ ಕೆಳಗಿಂದ ಅಳಿಸಿಬಿಡಬೇಕು; ಇದನ್ನು ಮರೆಯಬಾರದು.
- Exodus 17:8–16 ವಿಮೋಚನಕಾಂಡ 17:8–16ತರುವಾಯ ಅಮಾಲೇಕ್ಯರು ಬಂದು ರೆಫೀದೀಮಿ ನಲ್ಲಿ ಇಸ್ರಾಯೇಲ್ಯರ ಸಂಗಡ ಯುದ್ಧಮಾಡಿದರು. ಆಗ ಮೋಶೆಯು ಯೆಹೋಶುವನಿಗೆ--ನೀನು ನಮ ಗಾಗಿ ಮನುಷ್ಯರನ್ನು ಆರಿಸಿಕೊಂಡು ಅಮಾಲೇಕ್ಯರ ಸಂಗಡ ಯುದ್ಧಮಾಡುವದಕ್ಕೆ ಹೊರಟುಹೋಗು; ನಾಳೆ ನಾನು ದೇವರ ಕೋಲನ್ನು ಕೈಯಲ್ಲಿ ಹಿಡಿದು ಕೊಂಡು ಗುಡ್ಡದ ಮೇಲೆ ನಿಂತುಕೊಳ್ಳುವೆನು ಅಂದನು. ಮೋಶೆಯು ತನಗೆ ಹೇಳಿದಂತೆ ಯೆಹೋಶುವನು ಅಮಾಲೇಕ್ಯರೊಂದಿಗೆ ಯುದ್ಧಮಾಡಿದನು. ಮೋಶೆ ಯೂ ಆರೋನನೂ ಹೂರನೂ ಗುಡ್ಡದ ಮೇಲೆ ಏರಿಹೋದರು. ಮೋಶೆಯು ತನ್ನ ಕೈಯನ್ನು ಎತ್ತಿದಾಗ ಇಸ್ರಾಯೇಲ್ಯರು ಜಯಿಸಿದರು. ಅವನು ತನ್ನ ಕೈಯನ್ನು ಇಳಿಸಿದಾಗ ಅಮಾಲೇಕ್ಯರು ಜಯಿಸಿದರು. ಆದರೆ ಮೋಶೆಯ ಕೈಗಳು ಭಾರವಾಗಿರಲಾಗಿ ಅವರು ಒಂದು ಕಲ್ಲನ್ನು ತಂದು ಅವನ ಕೆಳಗೆ ಇಟ್ಟಾಗ ಅವನು ಅದರ ಮೇಲೆ ಕೂತುಕೊಂಡನು. ಆರೋನನೂ ಹೂರನೂ ಒಬ್ಬನು ಒಂದು ಕಡೆಯಲ್ಲಿಯೂ ಇನ್ನೊಬ್ಬನು ಇನ್ನೊಂದು ಕಡೆಯಲ್ಲಿಯೂ ಅವನ ಕೈಗಳಿಗೆ ಆಧಾರ ಕೊಟ್ಟರು. ಹೀಗೆ ಸೂರ್ಯನು ಮುಳುಗುವ ವರೆಗೆ ಅವನ ಕೈಗಳು ಇಳಿಯದೇ ಇದ್ದವು. ಯೆಹೋಶು ವನು ಅಮಾಲೇಕ್ಯನನ್ನೂ ಅವನ ಜನರನ್ನೂ ಕತ್ತಿಯಿಂದ ಸೋಲಿಸಿದನು. ಆಗ ಕರ್ತನು ಮೋಶೆಗೆ--ಇದನ್ನು ಜ್ಞಾಪಕಾರ್ಥ ವಾಗಿ ಪುಸ್ತಕದಲ್ಲಿ ಬರೆ; ನಾನು ಅಮಾಲೇಕ್ಯರ ನೆನಪು ಆಕಾಶದ ಕೆಳಗೆ ಇರದಂತೆ ಸಂಪೂರ್ಣವಾಗಿ ಅಳಿಸಿ ಬಿಡುವೆನು. ಇದನ್ನು ತಿರಿಗಿ ಯೆಹೋಶುವನಿಗೆ ಹೇಳು ಅಂದನು. ಇದಾದ ಮೇಲೆ ಮೋಶೆಯು ಯಜ್ಞವೇದಿಯನ್ನು ಕಟ್ಟಿ ಅದಕ್ಕೆ ಯೆಹೋವ ನಿಸ್ಸಿ ಎಂದು ಹೆಸರಿಟ್ಟನು.ಆತನು--ಅಮಾಲೇಕ್ಯರ ಕೂಡ ಕರ್ತನಿಗೆ ತಲ ತಲಾಂತರಗಳಲ್ಲಿ ಯುದ್ಧವಿರುವದು ಎಂದು ಕರ್ತನು ಆಣೆ ಇಟ್ಟಿದ್ದಾನೆ ಅಂದನು. ಆತನು--ಅಮಾಲೇಕ್ಯರ ಕೂಡ ಕರ್ತನಿಗೆ ತಲ ತಲಾಂತರಗಳಲ್ಲಿ ಯುದ್ಧವಿರುವದು ಎಂದು ಕರ್ತನು ಆಣೆ ಇಟ್ಟಿದ್ದಾನೆ ಅಂದನು.