2 Samuel · chapter 2 · verse 3
2 Samuel 2:3 in Kannada
ಇದಲ್ಲದೆ ತನ್ನ ಸಂಗಡ ಇದ್ದ ಜನರನ್ನೂ ಅವರವರ ಮನೆಯವರನ್ನೂ ಕರಕೊಂಡು ಹೋದನು; ಅವರು ಹೆಬ್ರೋನಿನ ಪಟ್ಟಣ ಗಳಲ್ಲಿ ವಾಸವಾಗಿದ್ದರು.
Idallade tanna sangada idda janarannoo avaravara maneyavarannoo karakondu hodanu; avaru hebronina pattana galalli vaasavaagiddaru.
2 Samuel 2:3 in English
- King James Version (KJV)
- And his men that [were] with him did David bring up, every man with his household: and they dwelt in the cities of Hebron.
- World English Bible (WEB)
- David brought up his men who were with him, every man with his household. They lived in the cities of Hebron.
- American Standard Version (ASV)
- And his men that were with him did David bring up, every man with his household: and they dwelt in the cities of Hebron.
- Bible in Basic English (BBE)
- And David took all his men with him, every man with his family: and they were living in the towns round Hebron.
- Darby Translation (DBY)
- And his men that were with him did David bring up, every man with his household; and they dwelt in the cities of Hebron.
- Webster's Bible (WBS)
- And his men that [were] with him did David bring up, every man with his household: and they dwelt in the cities of Hebron.
- Young's Literal Translation (YLT)
- and his men who [are] with him hath David brought up — a man and his household — and they dwell in the cities of Hebron.
Read in context
- 1ಇದಾದ ಮೇಲೆ ದಾವೀದನು ಕರ್ತನನ್ನು -- ಯೆಹೂದದ ಪಟ್ಟಣಗಳಲ್ಲಿ ಯಾವದಕ್ಕಾದರೂ ಹೋಗಲೋ ಎಂದು ಕೇಳಿದನು. ಕರ್ತನು ಅವನಿಗೆ--ಹೋಗು ಅಂದನು. ದಾವೀ ದನು--ನಾನು ಎಲ್ಲಿಗೆ ಹೋಗಲಿ ಎಂದು ಕೇಳಿದಕ್ಕೆ ಆತನು -- ಹೆಬ್ರೋನಿಗೆ ಅಂದನು.
- 2ಹಾಗೆಯೇ ದಾವೀದನೂ ಅವನ ಇಬ್ಬರು ಹೆಂಡತಿಯರಾದ ಇಜ್ರೇಲಿಯವಳಾಗಿರುವ ಅಹಿನೋವಮಳೂ ಕರ್ಮೆ ಲ್ಯನನಾದ ನಾಬಾಲನ ಹೆಂಡತಿಯಾಗಿದ್ದ ಅಬೀ ಗೈಲಳೂ ಅಲ್ಲಿಗೆ ಹೋದರು.
- 3ಇದಲ್ಲದೆ ತನ್ನ ಸಂಗಡ ಇದ್ದ ಜನರನ್ನೂ ಅವರವರ ಮನೆಯವರನ್ನೂ ಕರಕೊಂಡು ಹೋದನು; ಅವರು ಹೆಬ್ರೋನಿನ ಪಟ್ಟಣ ಗಳಲ್ಲಿ ವಾಸವಾಗಿದ್ದರು.
- 4ಆಗ ಯೆಹೂದ ಜನರು ಬಂದು ಅಲ್ಲಿ ದಾವೀದನನ್ನು ಯೆಹೂದನ ಮನೆಯವರ ಮೇಲೆ ಅರಸನನ್ನಾಗಿ ಅಭಿಷೇಕಿಸಿದರು.
- 5ಯಾಬೇಷ್ಗಿಲ್ಯಾದಿನವರು ಸೌಲನನ್ನು ಹೂಣಿಟ್ಟ ರೆಂದು ದಾವೀದನಿಗೆ ತಿಳಿಸಿದಾಗ ಅವನು ದೂತರನ್ನು ಕಳುಹಿಸಿ--ನೀವು ನಿಮ್ಮ ಯಜಮಾನನಾದ ಸೌಲನಿಗೆ ಈ ದಯೆಯನ್ನು ತೋರಿಸಿ ಅವನನ್ನು ಹೂಣಿಟ್ಟ ಕಾರಣ ಕರ್ತನಿಂದ ನಿಮಗೆ ಆಶೀರ್ವಾದವಾಗಲಿ.
Cross references
- 1 Chronicles 12:1–7 1 ಪೂರ್ವಕಾಲವೃತ್ತಾಂತ 12:1–7ಕೀಷನ ಮಗನಾದ ಸೌಲನ ನಿಮಿತ್ತ ತಾನು ಇನ್ನೂ ಬಚ್ಚಿಟ್ಟುಕೊಂಡಿರುವಾಗ ಚಿಕ್ಲಗಿ ನಲ್ಲಿರುವ ದಾವೀದನ ಬಳಿಗೆ ಬಂದವರು ಇವರೇ; ಅವರು ಪರಾಕ್ರಮಶಾಲಿಗಳಲ್ಲಿ ಸೇರಿದವರೂ ಯುದ್ಧಕ್ಕೆ ಸಹಾಯಕರೂ ಎಡಬಲ ಕೈಗಳಿಂದ ಕಲ್ಲು ಗಳನ್ನೂ ಬಿಲ್ಲುಗಳಿಂದ ಅಂಬುಗಳನ್ನೂ ಎಸೆಯಬಲ್ಲ ಬೆನ್ಯಾವಿಾನನ ಗೋತ್ರದ ಸೌಲನ ಸಹೋದರರೂ ಆಗಿದ್ದರು. ಮುಖ್ಯಸ್ಥನಾದವನು ಅಹೀಯೆಜೆರನು ಮತ್ತು ಯೋವಾಷನು. ಇವರು ಗಿಬೆಯವನಾದ ಹಷ್ಷೆಮಾಹನ ಕುಮಾರರು ಮತ್ತು ಆಜ್ಮಾವೆತನ ಕುಮಾರರಾದ ಯೇಜೀಯೇಲನು ಪೆಲೆಟನು; ಬೆರಾಕಾನು, ಅನತೋ ತ್ಯನಾದ ಯೇಹುವು, ಗಿಬ್ಯೋನ್ಯನಾದ ಇಷ್ಮಾಯನು; ಇವನು ಮೂವತ್ತು ಮಂದಿಯಲ್ಲಿ ಪರಾಕ್ರಮಶಾಲಿ ಯಾಗಿದ್ದು ಆ ಮೂವತ್ತು ಮಂದಿಗಿಂತ ಮೇಲಾದವನಾ ಗಿದ್ದನು ಮತ್ತು ಯೆರೆವಿಾಯನು, ಯಹಜೀಯೇಲನು ಯೋಹನಾನು, ಗೆದೇರಾದವನಾದ ಯೋಜಾಬಾ ದನು, ಎಲ್ಲೂಜೈಯಿಯು, ಯೆರೀಮೋತನು, ಬೆಯ ಲ್ಯನು, ಶೆಮರ್ಯನು, ಹರೀಫ್ಯನಾದ ಶೆಫಟ್ಯನು, ಕೋರಹಿಯರಾದ ಎಲ್ಕಾನನು, ಇಷ್ಷೀಯನು, ಅಜ ರೇಲನು, ಯೋವೆಜೆರನು, ಯಾಷೊಬ್ಬಾಮನು, ಗೆದೋರಿನಲ್ಲಿರುವ ಯೆರೋಹಾಮನ ಕುಮಾರರಾದ ಯೋವೇಲನೂ ಜೆಬದ್ಯನೂ.
- 1 Samuel 30:1 1 ಸಮುವೇಲನು 30:1ದಾವೀದನೂ ಅವನ ಜನರೂ ಮೂರನೇದಿವಸದಲ್ಲಿ ಚಿಕ್ಲಗಿಗೆ ಬಂದು ಸೇರುವಷ್ಟರಲ್ಲಿ ಏನಾಯಿತಂದರೆ, ಅಮಾಲೇಕ್ಯರು ದಕ್ಷಿಣ ಸೀಮೆಯ ಮೇಲೆಯೂ ಚಿಕ್ಲಗಿನ ಮೇಲೆಯೂ ಬಂದು ಬಿದ್ದು ಚಿಕ್ಲಗನ್ನು ಹೊಡೆದು ಅದನ್ನು ಬೆಂಕಿಯಿಂದ ಸುಟ್ಟುಬಿಟ್ಟು
- 1 Samuel 27:2–3 1 ಸಮುವೇಲನು 27:2–3ಆದದರಿಂದ ದಾವೀದನು ಎದ್ದು ತನ್ನ ಸಂಗಡವಿದ್ದ ಆರು ನೂರು ಜನರೊಡನೆ ಗತ್ ಊರಿನ ಅರಸನಾಗಿರುವ ಮಾವೋಕಿನ ಮಗನಾದ ಆಕೀಷನ ಬಳಿಗೆ ಹೋದನು. ದಾವೀದನು ಗತ್ ಊರಿನವ ನಾದ ಆಕೀಷನ ಬಳಿಯಲ್ಲಿ ತಾನೂ ತನ್ನ ಜನರೂ ವಾಸವಾಗಿದ್ದರು. ಪ್ರತಿ ಮನುಷ್ಯನು ತನ್ನ ಮನೆಯವರ ಸಹಿತವಾಗಿಯೂ ದಾವೀದನು ತನ್ನ ಇಬ್ಬರು ಹೆಂಡತಿ ಯರಾದ ಇಜ್ರೇಲಿಯಳಾದ ಅಹೀನೋವಮಳೂ ಕರ್ಮೆಲಿಯಳಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳೂ ಸಹಿತವಾಗಿಯೂ ಇದ್ದರು.
- 1 Samuel 22:2 1 ಸಮುವೇಲನು 22:2ಇದಲ್ಲದೆ ಶ್ರಮೆಪಟ್ಟವರೂ ಸಾಲಗಾರರೂ ತೃಪ್ತಿಯಿಲ್ಲದವರೂ ಅವನ ಸಂಗಡ ಕೂಡಿಕೊಂಡರು. ಆಗ ಅವರಿಗೆ ದಾವೀದನು ಅಧಿಪತಿಯಾದನು, ಹೆಚ್ಚು ಕಡಿಮೆ ನಾನೂರು ಜನರು ಅವನ ಬಳಿಯಲ್ಲಿ ಇದ್ದರು.
- 1 Samuel 30:9–10 1 ಸಮುವೇಲನು 30:9–10ಆಗ ದಾವೀದನೂ ಅವನ ಸಂಗಡ ಇದ್ದ ಆರು ನೂರು ಜನರೂ ಹೋದರು; ಅವರು ಬೆಸೋರ್ ಎಂಬ ಹಳ್ಳದ ಬಳಿಗೆ ಬಂದಾಗ ಹಿಂದುಳಿದವರು ಅಲ್ಲಿ ನಿಂತರು. ದಾವೀದನು, ತಾನೂ ನಾನೂರು ಜನರೂ ಹಿಂದಟ್ಟಿಹೋದರು. ಬೆಸೋರಿನ ಹಳ್ಳವನ್ನು ದಾಟಲಾರದೆ ದಣಿದಿದ್ದದರಿಂದ ಇನ್ನೂರು ಜನರು ಅಲ್ಲಿ ನಿಂತರು.
- Joshua 21:11–12 ಯೆಹೋಶುವ 21:11–12ಯೂದನ ಬೆಟ್ಟಗಳಲ್ಲಿರುವ ಅನಾಕನ ತಂದೆಯಾದ ಅರ್ಬನ ಹೆಸರಿನ ಪಟ್ಟಣ ಹೆಬ್ರೋ ನನ್ನೂ ಅದರ ಸುತ್ತಲಿರುವ ಉಪನಗರಗಳನ್ನೂ ಅವ ರಿಗೆ ಕೊಟ್ಟರು. ಆದರೆ ಆ ಪಟ್ಟಣದ ಹೊಲಗ ಳನ್ನೂ ಗ್ರಾಮಗಳನ್ನೂ ಯೆಫುನ್ನೆಯ ಮಗನಾದ ಕಾಲೇಬನಿಗೆ ಬಾಧ್ಯತೆಯಾಗಿ ಕೊಟ್ಟರು.