2 Samuel · chapter 20 · verse 19
2 Samuel 20:19 in Kannada
ನಾನು ಇಸ್ರಾಯೇಲಿನ ಸಮಾ ಧಾನವುಳ್ಳವರಲ್ಲಿಯೂ ನಂಬಿಗಸ್ತರಲ್ಲಿಯೂ ಒಬ್ಬ ಳಾಗಿದ್ದೇನೆ. ನೀನು ಇಸ್ರಾಯೇಲಿನಲ್ಲಿ ತಾಯಿಯಂತಿ ರುವ ಈ ಪಟ್ಟಣವನ್ನು ನಾಶಮಾಡಲು ಹುಡುಕುತ್ತೀ. ನೀನು ಕರ್ತನ ಬಾಧ್ಯತೆಯನ್ನು ನುಂಗುವದೇಕೆ ಅಂದಳು.
Naanu israayelina samaa dhaanavullavaralliyoo nambigastaralliyoo obba laagiddene. Neenu israayelinalli taayiyanti ruva ee pattanavannu naashamaadalu hudukuttee. Neenu kartana baadhyateyannu nunguvadeke andalu.
2 Samuel 20:19 in English
- King James Version (KJV)
- I [am one of them that are] peaceable [and] faithful in Israel: thou seekest to destroy a city and a mother in Israel: why wilt thou swallow up the inheritance of the LORD?
- World English Bible (WEB)
- I am among those who are peaceable and faithful in Israel. You seek to destroy a city and a mother in Israel. Why will you swallow up the LORD’s inheritance?”
- American Standard Version (ASV)
- I am of them that are peaceable and faithful in Israel: thou seekest to destroy a city and a mother in Israel: why wilt thou swallow up the inheritance of Jehovah?
- Bible in Basic English (BBE)
- Your purpose is the destruction of a mother-town in Israel: why would you put an end to the heritage of the Lord?
- Darby Translation (DBY)
- I am peaceable [and] faithful in Israel: thou seekest to destroy a city and a mother in Israel. Why wilt thou swallow up the inheritance of Jehovah?
- Webster's Bible (WBS)
- I [am one of them that are] peaceable [and] faithful in Israel: thou seekest to destroy a city and a mother in Israel: why wilt thou swallow up the inheritance of the LORD?
- Young's Literal Translation (YLT)
- I [am] of the peaceable — faithful ones of Israel; thou art seeking to destroy a city, and a mother in Israel; why dost thou swallow up the inheritance of Jehovah?
Read in context
- 17ಅವನು ಸವಿಾಪ ಬಂದಾಗ ಆ ಸ್ತ್ರೀಯು--ನೀನು ಯೋವಾಬನೋ ಅಂದಳು. ಅವನು--ನಾನೇ ಅಂದನು. ಅವಳು ಅವನಿಗೆ--ನಿನ್ನ ಸೇವಕಳ ಮಾತು ಗಳನ್ನು ಕೇಳು ಅಂದಳು. ಅವನು--ನಾನು ಕೇಳುತ್ತೇನೆ ಅಂದನು.
- 18ಆಗ ಅವಳು ಮಾತನಾಡಿ--ಪೂರ್ವ ದಲ್ಲಿ ಮಾತನಾಡುವ ಮಾತು ಏನಂದರೆ, ಅವರು ಆಬೇಲಿನಲ್ಲಿ ನಿಶ್ಚಯವಾಗಿ ಕೇಳಿ ಹಾಗೆಯೇ ಕಾರ್ಯ ತೀರಿಸಿಕೊಳ್ಳುವರು.
- 19ನಾನು ಇಸ್ರಾಯೇಲಿನ ಸಮಾ ಧಾನವುಳ್ಳವರಲ್ಲಿಯೂ ನಂಬಿಗಸ್ತರಲ್ಲಿಯೂ ಒಬ್ಬ ಳಾಗಿದ್ದೇನೆ. ನೀನು ಇಸ್ರಾಯೇಲಿನಲ್ಲಿ ತಾಯಿಯಂತಿ ರುವ ಈ ಪಟ್ಟಣವನ್ನು ನಾಶಮಾಡಲು ಹುಡುಕುತ್ತೀ. ನೀನು ಕರ್ತನ ಬಾಧ್ಯತೆಯನ್ನು ನುಂಗುವದೇಕೆ ಅಂದಳು.
- 20ಅದಕ್ಕೆ ಯೋವಾಬನು ಪ್ರತ್ಯುತ್ತರವಾಗಿ--ನನಗೆ ಅದು ದೂರವಾಗಿರಲಿ, ನುಂಗುವದೂ ಕೆಡಿಸುವದೂ ನನಗೆ ದೂರವಾಗಿರಲಿ.
- 21ಕಾರ್ಯವು ಹಾಗಲ್ಲ; ಬಿಕ್ರೀಯ ಮಗನಾದ ಶೆಬನೆಂಬ ಹೆಸರುಳ್ಳ ಎಫ್ರಾಯಾಮ್ ಬೆಟ್ಟದವನಾದ ಒಬ್ಬ ಮನುಷ್ಯನು ಅರಸನಾದ ದಾವೀದನಿಗೆ ವಿರೋಧವಾಗಿ ತನ್ನ ಕೈಯನ್ನು ಎತ್ತಿದ್ದಾನೆ. ನೀವು ಅವನೊಬ್ಬನನ್ನೇ ಒಪ್ಪಿಸಿಕೊಡಿರಿ; ಆಗ ನಾನು ಪಟ್ಟಣವನ್ನು ಬಿಟ್ಟು ಹೋಗುವೆನು ಅಂದನು. ಆ ಸ್ತ್ರೀಯು ಯೋವಾಬನಿಗೆ--ಇಗೋ, ಅವನ ತಲೆಯು ಗೋಡೆಯ ಮೇಲಿನಿಂದ ನಿನ್ನ ಬಳಿಗೆ ಹಾಕಲ್ಪಡುವದು ಅಂದಳು.
Cross references
- 1 Samuel 26:19 1 ಸಮುವೇಲನು 26:19ಈಗ ಅರಸನಾದ ನನ್ನ ಒಡೆಯನು ದಯಮಾಡಿ ತನ್ನ ಸೇವಕನ ಮಾತುಗಳನ್ನು ಕೇಳಲಿ. ಕರ್ತನು ನಿನ್ನನ್ನು ನನಗೆ ವಿರೋಧವಾಗಿ ಪ್ರೇರೇಪಿಸಿದರೆ ಕಾಣಿಕೆಯನ್ನು ಅಂಗೀಕರಿಸಲಿ; ಆದರೆ ಮನುಷ್ಯರ ಮಕ್ಕಳು ಇದನ್ನು ಮಾಡಿದರೆ ಅವರು ಕರ್ತನ ಮುಂದೆ ಶಪಿಸಲ್ಪಡಲಿ. ಯಾಕಂದರೆ ನೀನು ಹೋಗಿ ಅನ್ಯದೇವರುಗಳನ್ನು ಸೇವಿಸು ಎಂದು ಹೇಳಿ ಅವರು ಈ ಹೊತ್ತು ನನ್ನನ್ನು ಕರ್ತನ ಬಾಧ್ಯತೆಯಲ್ಲಿ ಇರದ ಹಾಗೆ ಓಡಿಸಿಬಿಟ್ಟರು.
- 1 Timothy 2:2 1 ತಿಮೊಥೆಯನಿಗೆ 2:2ಹೀಗೆ ನಾವು ಶಾಂತಿ ಸಮಾಧಾನಗಳಿಂದ ಕೂಡಿದ ಜೀವನ ವನ್ನು ಪೂರ್ಣ ಭಕ್ತಿಯಿಂದಲೂ ಗೌರವದಿಂದಲೂ ನಡಿಸುವದಕ್ಕಾಗುವದು.
- 2 Samuel 21:3 2 ಸಮುವೇಲನು 21:3ಆದದರಿಂದ ದಾವೀದನು ಗಿಬ್ಯೋನ್ಯರಿಗೆ--ನಾನು ನಿಮಗೆ ಮಾಡ ಬೇಕಾದದ್ದೇನು? ನೀವು ಕರ್ತನ ಬಾಧ್ಯತೆಯನ್ನು ಆಶೀರ್ವದಿಸುವ ಹಾಗೆ ನಾನು ಯಾವದರಿಂದ ಪ್ರಾಯಶ್ಚಿತ್ತ ಮಾಡಲಿ ಎಂದು ಕೇಳಿದನು.
- 2 Samuel 17:16 2 ಸಮುವೇಲನು 17:16ಆದರೆ ನಾನು ಇಂಥಿಂಥ ಆಲೋಚನೆ ಹೇಳಿದೆನು. ಆದದರಿಂದ ನೀವು ತ್ವರೆ ಯಾಗಿ ಕಳುಹಿಸಿ ದಾವೀದನಿಗೆ ತಿಳಿಸಬೇಕಾದದ್ದೇ ನಂದರೆ--ನೀನು ರಾತ್ರಿಯಲ್ಲಿ ಅರಣ್ಯದ ಬೈಲುಗಳಲ್ಲಿ ತಂಗಬೇಡ; ಅರಸನೂ ಅವನ ಸಂಗಡವಿರುವ ಎಲ್ಲಾ ಜನರೂ ನಾಶವಾಗದ ಹಾಗೆ ಬೇಗ ದಾಟಿಹೋಗು ಅಂದನು.
- Numbers 16:32 ಅರಣ್ಯಕಾಂಡ 16:32ಭೂಮಿಯು ತನ್ನ ಬಾಯಿ ತೆರೆದು ಅವರನ್ನೂ ಅವರ ಮನೆಯವರನ್ನೂ ಕೋರಹನಿಗೆ ಸಂಬಂಧಪಟ್ಟ ಸಕಲ ಮನುಷ್ಯರನ್ನೂ ಅವರಿಗಿದ್ದದ್ದನ್ನೆಲ್ಲಾ ನುಂಗಿ ಬಿಟ್ಟಿತು.
- Ezekiel 16:45–49 ಯೆಹೆಜ್ಕೇಲನು 16:45–49ಗಂಡನಿಗೂ ಮಕ್ಕಳಿಗೂ ಬೇಸರ ಪಡುವವಳಾದ ನಿನ್ನ ತಾಯಿಗೆ ನೀನು ತಕ್ಕ ಮಗಳು; ಗಂಡನಿಗೂ ಮಕ್ಕಳಿಗೂ ಬೇಸರ ಪಡುವವರಾದ ನಿನ್ನ ಅಕ್ಕಂದಿರಿಗೆ ನೀನು ತಕ್ಕ ತಂಗಿ; ನಿನ್ನ ತಾಯಿ ಹಿತ್ತಿಯಳು, ನಿನ್ನ ತಂದೆ ಅಮೋರಿಯನು. ನಿನ್ನ ಎಡಗಡೆಯಲ್ಲಿ ಕುಮಾರ್ತೆಯರೊಂದಿಗೆ ವಾಸಿಸುವ ಸಮಾರ್ಯವೇ ನಿನ್ನ ಅಕ್ಕ; ಬಲಗಡೆಯಲ್ಲಿ ಕುಮಾರ್ತೆಯರೊಂದಿಗೆ ವಾಸಿಸುವ ಸೊದೋಮ್ ನಿನ್ನ ತಂಗಿ. ಆದರೂ ನೀನು ಅವರ ಮಾರ್ಗಗಳಲ್ಲಿ ನಡೆಯಲಿಲ್ಲ, ಅವರ ಅಸಹ್ಯಗಳ ಹಾಗೆ ಮಾಡಲಿಲ್ಲ, ಅವರ ದುರ್ನಡತೆಯು ಅತ್ಯಲ್ಪವೆಂದು ಸದಾ ಅವರಿಗಿಂತ ಬಹಳ ಕೆಟ್ಟವಳಾಗಿ ನಡೆದುಕೊಂಡೆ. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನನ್ನ ಜೀವದಾಣೆ, ನಿನ್ನ ತಂಗಿಯಾದ ಸೊದೋಮು, ತಾನಾದರೂ ತನ್ನ ಕುಮಾರ್ತೆಯ ರಾದರೂ ನೀನು ನಿನ್ನ ಕುಮಾರ್ತೆಯರು ಮಾಡಿದ ಹಾಗೆ ಮಾಡಲಿಲ್ಲ. ಇಗೋ, ಸೊದೋಮ್ ಎಂಬ ನಿನ್ನ ತಂಗಿಯ ಅಕ್ರಮವನ್ನೂ ಗರ್ವವನ್ನೂ ನೋಡು; ರೊಟ್ಟಿಯ ತೃಪ್ತಿಯು ಅವಳಿಗೂ ಅವಳ ಕುಮಾರ್ತೆ ಯರಿಗೂ ನಿರ್ಭಯವಾದ ಸೌಖ್ಯವಾಗಿದೆ; ಆಕೆಯು ದೀನದರಿದ್ರರಿಗೆ ಬೆಂಬಲವಾಗಿರಲಿಲ್ಲ.
- Exodus 19:5–6 ವಿಮೋಚನಕಾಂಡ 19:5–6ಆದದರಿಂದ ಈಗ ನೀವು ನನ್ನ ಮಾತನ್ನು ಕೇಳಿ ನನ್ನ ಒಡಂಬಡಿಕೆಯನ್ನು ಕಾಪಾಡಿ ದರೆ, ಸಮಸ್ತ ಜನರಲ್ಲಿ ನೀವು ನನ್ನ ಅಸಮಾನ್ಯವಾದ ಸಂಪತ್ತಾಗಿರುವಿರಿ; ಭೂಮಿಯೆಲ್ಲಾ ನನ್ನದೇ. ನೀವು ನನಗೆ ಯಾಜಕ ರಾಜ್ಯವೂ ಪರಿಶುದ್ಧ ಜನಾಂಗವೂ ಆಗಿರುವಿರಿ ಎಂದು ಇಸ್ರಾಯೇಲ್ ಮಕ್ಕಳಿಗೆ ಹೇಳ ಬೇಕಾದ ಮಾತುಗಳು ಇವೇ ಅಂದನು.
- Psalm 124:3 ಕೀರ್ತನೆಗಳು 124:3ಅವರು ನಮ್ಮನ್ನು ಜೀವಿತರಾಗಿ ನುಂಗಿಬಿಡುತ್ತಿದ್ದರು.
- Jeremiah 51:44 ಯೆರೆಮೀಯ 51:44ನಾನು ಬಾಬೆಲಿನಲ್ಲಿರುವ ಬೇಲ್ನನ್ನು ದಂಡಿಸಿ ಅವನು ನುಂಗಿದ್ದನ್ನು ಅವನ ಬಾಯೊಳಗಿಂದ ಹೊರಗೆ ತರಿಸುವೆನು; ಇನ್ನು ಮೇಲೆ ಜನಾಂಗಗಳು ಅವನ ಬಳಿಗೆ ಪ್ರವಾಹವಾಗಿ ಬರುವದಿಲ್ಲ; ಹೌದು, ಬಾಬೆಲಿನ ಗೋಡೆ ಬೀಳುವದು.
- 1 Corinthians 15:54 1 ಕೊರಿಂಥದವರಿಗೆ 15:54ಲಯವಾಗುವಂಥದ್ದು ನಿರ್ಲಯತ್ವವನ್ನು ಧರಿಸಿ ಕೊಳ್ಳುವದು, ಮರಣಾಧೀನವಾಗಿರುವಂಥದ್ದು ಅಮರ ತ್ವವನ್ನು ಧರಿಸಿಕೊಳ್ಳುವದು; ಆಗ ಬರೆದಿರುವ ಮಾತು ನೆರವೇರುವದು, ಆ ಮಾತು ಏನಂದರೆ--ಜಯವು ಮರಣವನ್ನು ನುಂಗಿತು ಎಂಬದೇ.
- Romans 13:3–4 ರೋಮಾಪುರದವರಿಗೆ 13:3–4ಕೆಟ್ಟಕೆಲಸ ಮಾಡುವವನಿಗೆ ಅಧಿಕಾರಿಗಳ ಭಯವಿರುವದೇ ಹೊರತು ಒಳ್ಳೇಕೆಲಸ ಮಾಡುವವ ನಿಗೆ ಇರುವದಿಲ್ಲ; ನೀನು ಅಧಿಕಾರಿಗೆ ಭಯಪಡದೆ ಇರಬೇಕೆಂದು ಅಪೇಕ್ಷಿಸುತ್ತೀಯೋ? ಒಳ್ಳೆಯದನ್ನು ಮಾಡು; ಆಗ ಆ ಅಧಿಕಾರಿಯಿಂದಲೇ ನಿನಗೆ ಹೊಗ ಳಿಕೆಯುಂಟಾಗುವದು. ಅವನು ನಿನ್ನ ಹಿತಕ್ಕೋಸ್ಕರ ದೇವರ ಸೇವಕನಾಗಿದ್ದಾನಲ್ಲಾ; ಆದರೆ ನೀನು ಕೆಟ್ಟದ್ದನ್ನು ಮಾಡಿದರೆ ಭಯಪಡಬೇಕು; ಅವನು ಸುಮ್ಮನೆ ಕೈಯಲ್ಲಿ ಕತ್ತಿಯನ್ನು ಹಿಡಿದಿಲ್ಲ; ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ನಡಿಸುವವನಿಗೆ ದಂಡನೆಯನ್ನು ವಿಧಿಸುತ್ತಾನೆ.
- Lamentations 2:5 ಪ್ರಲಾಪಗಳು 2:5ಕರ್ತನು ಶತ್ರುವಿನಂತೆ ಇಸ್ರಾಯೇಲನ್ನು ನುಂಗಿಬಿಟ್ಟಿದ್ದಾನೆ; ಆತನು ಅವನ ಅರಮನೆಗಳನ್ನೆಲ್ಲಾ ನುಂಗಿಬಿಟ್ಟಿದ್ದಾನೆ, ಆತನು ಅವನ ಭದ್ರವಾದ ಸ್ಥಾನಗಳನ್ನೆಲ್ಲಾ ನಾಶಮಾಡಿದ್ದಾನೆ; ಯೆಹೂದದ ಮಗಳ ದುಃಖವನ್ನೂ ಪ್ರಲಾಪವನ್ನೂ ಹೆಚ್ಚಿಸಿದ್ದಾನೆ.