2 Samuel · chapter 3 · verse 2
2 Samuel 3:2 in Kannada
ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಮಕ್ಕಳು ಯಾರಂದರೆ, ಇಜ್ರೇಲಿನವಳಾದ ಅಹೀನೋವಮ ಳಿಂದ ಹುಟ್ಟಿದ ತನ್ನ ಚೊಚ್ಚಲ ಮಗನಾದ ಅಮ್ನೋ ನನೂ
Hebroninalli daaveedanige huttida makkalu yaarandare, ijrelinavalaada aheenovama linda huttida tanna chochchala maganaada amno nanoo
2 Samuel 3:2 in English
- King James Version (KJV)
- And unto David were sons born in Hebron: and his firstborn was Amnon, of Ahinoam the Jezreelitess;
- World English Bible (WEB)
- Sons were born to David in Hebron. His firstborn was Amnon, of Ahinoam the Jezreelitess;
- American Standard Version (ASV)
- And unto David were sons born in Hebron: and his first-born was Amnon, of Ahinoam the Jezreelitess;
- Bible in Basic English (BBE)
- While David was in Hebron he became the father of sons: the oldest was Amnon, son of Ahinoam of Jezreel;
- Darby Translation (DBY)
- And to David were sons born in Hebron: his firstborn was Amnon, of Ahinoam the Jizreelitess;
- Webster's Bible (WBS)
- And to David were sons born in Hebron: and his first-born was Amnon, of Ahinoam the Jezreelitess;
- Young's Literal Translation (YLT)
- And there are born to David sons in Hebron, and his first-born is Amnon, of Ahinoam the Jezreelitess,
Read in context
- 1ಸೌಲನ ಮನೆಗೂ ದಾವೀದನ ಮನೆಗೂ ಬಹು ದಿವಸಗಳು ಯುದ್ಧವುನಡೆಯಿತು. ದಾವೀದನು ಬಲವಾಗುತ್ತಾ ಬಂದನು. ಸೌಲನ ಮನೆ ಯವರು ಬಲಹೀನರಾಗುತ್ತಾ ಹೋದರು.
- 2ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಮಕ್ಕಳು ಯಾರಂದರೆ, ಇಜ್ರೇಲಿನವಳಾದ ಅಹೀನೋವಮ ಳಿಂದ ಹುಟ್ಟಿದ ತನ್ನ ಚೊಚ್ಚಲ ಮಗನಾದ ಅಮ್ನೋ ನನೂ
- 3ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳಿಂದ ಹುಟ್ಟಿದ ಅವನ ಎರಡನೇ ಮಗನಾದ ಕಿಲಾಬನೂ ಗೆಷೂರಿನ ಅರಸನಾಗಿರುವ ತಲ್ಮೈಯನ ಮಗಳಾದ ಮಾಕಳಿಂದ ಹುಟ್ಟಿದ ಅವನ ಮೂರನೇ ಮಗನಾದ ಅಬ್ಷಾಲೋಮನೂ
- 4ಹಗ್ಗೀತಳಿಂದ ಹುಟ್ಟಿದ ನಾಲ್ಕನೇ ಮಗನಾದ ಅದೋನೀಯನೂ ಅಬೀಟಲ ಳಿಂದ ಹುಟ್ಟಿದ ಐದನೇ ಮಗನಾದ ಶೆಫಟ್ಯನೂ
Cross references
- 1 Chronicles 3:1–4 1 ಪೂರ್ವಕಾಲವೃತ್ತಾಂತ 3:1–4ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಮಕ್ಕಳು ಯಾರಂದರೆ -- ಇಜ್ರೇಲ್ಯಳಾದ ಅಹೀನೋವಮಳಿಂದ ಚೊಚ್ಚಲ ಮಗನಾದ ಅಮ್ನೋ ನನು, ಕರ್ಮೇಲ್ಯಳಾದ ಅಬೀಗೈಲಳಲ್ಲಿ ಹುಟ್ಟಿದ ಎರಡ ನೆಯವನಾದ ದಾನಿಯೇಲನು, ಗೆಷೂರಿನ ಅರಸ ನಾಗಿರುವ ತಲ್ಮೈಯ ಮಗಳಾದ ಮಾಕಳ ಮಗನಾ ದಂಥ ಮೂರನೆಯವನಾದ ಅಬ್ಷಾಲೋಮನು, ಹಗ್ಗೀ ತಳ ಮಗನಾದ ನಾಲ್ಕನೆಯವನಾದ ಅದೋನೀ ಯನು, ಅಬೀಟಲಳಿಂದ ಹುಟ್ಟಿದ ಐದನೆಯವನಾದ ಶೆಫಟ್ಯನು, ತನ್ನ ಹೆಂಡತಿಯಾದ ಎಗ್ಲಳಿಂದ ಹುಟ್ಟಿದ ಆರನೆಯವನಾದ ಇತ್ರಾಮನು. ಈ ಆರು ಮಂದಿ ಹೆಬ್ರೋನಿನಲ್ಲಿ ಅವನಿಗೆ ಹುಟ್ಟಿದರು. ಅಲ್ಲಿ ಅವನು ಏಳೂವರೆ ವರುಷ ಆಳಿದನು; ಯೆರೂಸಲೇಮಿನಲ್ಲಿ ಮೂವತ್ತಮೂರು ವರುಷ ಆಳಿದನು.
- 1 Samuel 25:42–43 1 ಸಮುವೇಲನು 25:42–43ಅಬೀಗೈಲಳು ಬೇಗನೆ ಎದ್ದು ಕತ್ತೆಯ ಮೇಲೆ ಹತ್ತಿಕೊಂಡು ತನ್ನ ಸಂಗಡ ಇರುವ ಐದು ಮಂದಿ ದಾಸಿಯರನ್ನು ಕರಕೊಂಡು ದಾವೀದನ ಸೇವಕರ ಹಿಂದೆ ಹೋಗಿ ಅವನಿಗೆ ಹೆಂಡತಿ ಯಾದಳು. ಇದಲ್ಲದೆ ದಾವೀದನು ಇಜ್ರೇಲು ಊರಿನವಳಾದ ಅಹೀನೋವಮಳನ್ನು ತಕ್ಕೊಂಡನು.ಅವರಿಬ್ಬರೂ ಅವನಿಗೆ ಹೆಂಡತಿಯರಾದರು.ಆದರೆ ಸೌಲನು ದಾವೀದನ ಹೆಂಡತಿಯಾದ ವಿಾಕಲಳೆಂಬ ತನ್ನ ಕುಮಾರ್ತೆಯನ್ನು ಗಲ್ಲೀಮ್ ಪಟ್ಟಣದ ಲಯಿಷನ ಮಗನಾದ ಪಲ್ಟೀಗೆ ಕೊಟ್ಟನು.
- 2 Samuel 13:1–29 2 ಸಮುವೇಲನು 13:1–29ತರುವಾಯ ಏನಾಯಿತಂದರೆ, ದಾವೀದನ ಮಗನಾದ ಅಬ್ಷಾಲೋಮನಿಗೆ ತಾಮಾರಳೆಂಬ ಹೆಸರುಳ್ಳ ಸೌಂದರ್ಯವತಿಯಾದ ಒಬ್ಬ ಸಹೋದರಿ ಇದ್ದಳು. ಅವಳನ್ನು ದಾವೀದನ ಮಗನಾದ ಅಮ್ನೋನನು ಪ್ರೀತಿಮಾಡಿದನು. ತನ್ನ ಸಹೋದರಿಯಾದ ತಾಮಾರಳ ನಿಮಿತ್ತ ಬಹು ತಾಪಪಟ್ಟು ಅಸ್ವಸ್ಥನಾದನು; ಅವಳು ಕನ್ನಿಕೆಯಾಗಿದ್ದಳು; ಆದದರಿಂದ ಅವಳನ್ನು ಏನಾದರೂ ಮಾಡುವದಕ್ಕೆ ಅಮ್ನೋನನಿಗೆ ಕಷ್ಟವಾಗಿತ್ತು. ಆದರೆ ಅಮ್ನೋನನಿಗೆ ದಾವೀದನ ಸಹೋದರನಾಗಿರುವ ಶಿಮ್ಮನ ಮಗನಾದ ಯೋನಾದಾಬನೆಂಬ ಒಬ್ಬ ಸ್ನೇಹಿತನಿದ್ದನು. ಈ ಯೋನಾದಾಬನು ಮಹಾ ಕುಯುಕ್ತಿಯುಳ್ಳವನಾಗಿ ದ್ದನು. ಇವನು ಅವನಿಗೆ--ಅರಸನ ಮಗನಾದ ನೀನು ದಿನದಿನಕ್ಕೆ ಯಾಕೆ ಕ್ಷೀಣನಾಗಿ ಹೋಗುತ್ತೀ? ನನಗೆ ತಿಳಿಸುವದಿಲ್ಲವೋ ಅಂದನು. ಅದಕ್ಕೆ ಅಮ್ನೋನನು ಅವನಿಗೆ--ನಾನು ನನ್ನ ಸಹೋದರನಾಗಿರುವ ಅಬ್ಷಾ ಲೋಮನ ಸಹೋದರಿಯಾದ ತಾಮಾರಳನ್ನು ಪ್ರೀತಿ ಮಾಡುತ್ತೇನೆ ಅಂದನು. ಆಗ ಯೋನಾದಾಬನು ಅವನಿಗೆ--ನೀನು ರೋಗಿಷ್ಟನ ಹಾಗೆ ಮಂಚದ ಮೇಲೆ ಮಲಗು; ನಿನ್ನನ್ನು ನೋಡುವದಕ್ಕೆ ನಿನ್ನ ತಂದೆ ಬರುವಾಗ ನೀನು ಅವನಿಗೆ--ನನ್ನ ಸಹೋದರಿಯಾದ ತಾಮಾರಳು ಬರುವ ಹಾಗೆ ದಯಮಾಡಬೇಕು; ನಾನು ಅವಳ ಕೈಯಿಂದ ಉಣ್ಣುವ ಹಾಗೆ ಅವಳು ನನ್ನ ಕಣ್ಣೆದುರಿನಲ್ಲಿ ಅಡಿಗೆಯನ್ನು ಮಾಡಿ ನನಗೆ ಆಹಾರ ಕೊಡಲಿ ಎಂದು ಹೇಳು ಅಂದನು. ಅವನು ಅದೇ ಪ್ರಕಾರ ರೋಗಿಷ್ಟನ ಹಾಗೆ ಮಲಗಿದನು. ಅರಸನು ತನ್ನನ್ನು ನೋಡುವದಕ್ಕೆ ಬಂದಾಗ ಅಮ್ನೋನನು ಅರಸನಿಗೆ--ನೀನು ನನ್ನ ಸಹೋದರಿಯಾದ ತಾಮಾರಳು ಬರುವ ಹಾಗೆ ದಯಮಾಡಬೇಕು; ನಾನು ಅವಳ ಕೈಯಿಂದ ಉಣ್ಣುವ ಹಾಗೆ ಅವಳು ನನ್ನ ಕಣ್ಣುಮುಂದೆ ಎರಡು ಭಕ್ಷ್ಯಗಳನ್ನು ಮಾಡುವದಕ್ಕೆ ಬರಲಿ ಅಂದನು. ಆಗ ದಾವೀದನು ತನ್ನ ಮನೆಯಲ್ಲಿರುವ ತಾಮಾರಳ ಬಳಿಗೆ ಮನುಷ್ಯನನ್ನು ಕಳುಹಿಸಿ--ನೀನು ನಿನ್ನ ಸಹೋದರನಾದ ಅಮ್ನೋನನ ಮನೆಗೆ ಹೋಗಿ ಅವನಿಗೆ ಅಡಿಗೆಯನ್ನು ಮಾಡು ಅಂದನು. ಹಾಗೆಯೇ ತನ್ನ ಸಹೋದರನಾದ ಅಮ್ನೋನನ ಮನೆಗೆ ಹೋದಳು. ಆಗ ಅವನು ಮಲಗಿದ್ದನು. ಅವಳು ಹಿಟ್ಟನ್ನು ತೆಗೆದುಕೊಂಡು ಅವನ ಕಣ್ಣು ಮುಂದೆ ಹಿಸಿಕಿ ನಾದಿ ಭಕ್ಷ್ಯಗಳನ್ನು ಮಾಡಿ ಪಾತ್ರೆ ತಕ್ಕೊಂಡು ಅವನ ಮುಂದೆ ಇಟ್ಟಳು. ಆದರೆ ಅಮ್ನೋನನು--ನಾನು ಉಣ್ಣುವದಿಲ್ಲ ಎಂದು ಹೇಳಿ ನನ್ನ ಬಳಿಯಿಂದ ಎಲ್ಲಾ ಜನರನ್ನು ಕಳುಹಿಸಿಬಿಡಿರಿ ಅಂದನು. ಹಾಗೆಯೇ ಎಲ್ಲರೂ ಅವನನ್ನು ಬಿಟ್ಟು ಹೊರಗೆ ಹೋದರು. ಆಗ ಅಮ್ನೋನನು--ನಾನು ನಿನ್ನ ಕೈಯಿಂದ ತಿನ್ನುವಂತೆ ಆ ಭಕ್ಷ್ಯಗಳನ್ನು ಕೊಠಡಿ ಯೊಳಗೆ ತೆಗೆದುಕೊಂಡು ಬಾ ಅಂದನು. ಹಾಗೆಯೇ ತಾಮಾರಳು ತಾನು ಮಾಡಿದ ಭಕ್ಷ್ಯಗಳನ್ನು ಕೊಠಡಿ ಯೊಳಗೆ ತನ್ನ ಸಹೋದರನಾದ ಅಮ್ನೋನನ ಬಳಿಗೆ ತಕ್ಕೊಂಡು ಬಂದಳು. ಆದರೆ ಅವನು ಅವುಗಳನ್ನು ಉಣ್ಣುವ ಹಾಗೆ ಅವಳು ಅವನ ಬಳಿಗೆ ತಂದಾಗ ಅವನು ಅವಳನ್ನು ಹಿಡಿದು ಅವಳಿಗೆ--ನನ್ನ ಸಹೋ ದರಿಯೇ, ನನ್ನ ಸಂಗಡ ಮಲಗು; ಬಾ ಅಂದನು. ಅದಕ್ಕವಳು--ನನ್ನ ಸಹೋದರನೇ, ಬೇಡ; ನನ್ನನ್ನು ಒತ್ತಾಯಮಾಡಬೇಡ; ಯಾಕಂದರೆ ಇಸ್ರಾಯೇಲಿನಲ್ಲಿ ಇಂಥಾ ಕಾರ್ಯಮಾಡಕೂಡದು; ಇಂಥಾ ಬುದ್ಧಿಹೀನ ವಾದ ಕೆಲಸ ಮಾಡಬೇಡ. ನಾನಾದರೋ ನನ್ನ ನಿಂದೆಯನ್ನು ಎಲ್ಲಿಗೆ ಹೋಗಮಾಡಲಿ; ಇದಲ್ಲದೆ ನೀನು ಇಸ್ರಾಯೇಲಿನಲ್ಲಿ ಬುದ್ಧಿಹೀನರೊಳಗೆ ಒಬ್ಬನ ಹಾಗೆ ಇರುವಿ. ಹಾಗಾದರೆ ಈಗ ದಯಮಾಡಿ ಅರಸನ ಸಂಗಡ ಮಾತನಾಡು; ಅವನು ನಿನ್ನ ಬಳಿಯಿಂದ ನನ್ನನ್ನು ಹೇಗಾದರೂ ಹಿಂತೆಗೆಯುವುದಿಲ್ಲ ಅಂದಳು. ಅವನು ಅವಳ ಮಾತನ್ನು ಕೇಳಲೊಲ್ಲದೆ ತಾನು ಅವಳಿಗಿಂತ ಬಲವುಳ್ಳವನಾಗಿದ್ದದರಿಂದ ಅವಳನ್ನು ಕುಂದಿಸಿ ಅವಳ ಸಂಗಡ ಮಲಗಿದನು. ಆಗ ಅಮ್ನೊನನು ಅವಳನ್ನು ಅತ್ಯಂತ ಹಗೆಮಾಡಿದನು; ಅವನು ಅವಳನ್ನು ಹಗೆಮಾಡಿದ ಹಗೆಯು ಮೊದಲು ಮಾಡಿದ ಪ್ರೀತಿಗಿಂತ ಅಧಿಕವಾಗಿತ್ತು; ಆದದರಿಂದ ಅಮ್ನೋನನು ಅವಳಿಗೆ--ಎದ್ದು ಹೋಗು ಅಂದನು. ಆಗ ಅವಳು ಅವನಿಗೆ--ಇದಕ್ಕೆ ಕಾರಣವಿಲ್ಲ; ನನಗೆ ಮಾಡಿದ ಆ ಕೆಟ್ಟತನಕ್ಕಿಂತ ನೀನು ನನ್ನನ್ನು ಕಳುಹಿಸಿಬಿಡುವ ಈ ಕೆಟ್ಟತನವು ಮತ್ತೂ ಅಧಿಕವಾಗಿದೆ ಅಂದಳು. ಆದರೆ ಅವನು ಅವಳ ಮಾತನ್ನು ಕೇಳಲೊಲ್ಲದೆ ತನ್ನನ್ನು ಸೇವಿಸುವ ತನ್ನ ದಾಸರನ್ನು ಕರೆದು--ಇವಳನ್ನು ನನ್ನ ಬಳಿಯಿಂದ ಹೊರಗೆ ತಳ್ಳಿ ಬಾಗಲು ಮುಚ್ಚಿ ಬೀಗಹಾಕು ಅಂದನು. ಅವಳು ವಿವಿಧವಾದ ವಸ್ತ್ರವನ್ನು ಉಟ್ಟಿದ್ದಳು; ಯಾಕಂದರೆ ಅರಸನ ಕುಮಾರ್ತೆಯರಾದ ಕನ್ಯಾಸ್ತ್ರೀಯರು ಇಂಥಾ ನಿಲುವಂಗಿಗಳನ್ನು ಧರಿಸಿಕೊಳ್ಳುತ್ತಿದ್ದರು. ಆದರೆ ಅವನ ಸೇವಕನು ಅವಳನ್ನು ಹೊರಗೆ ಕಳುಹಿಸಿ ಬಾಗಲು ಮುಚ್ಚಿ ಬೀಗಹಾಕಿದನು. ಆಗ ತನ್ನ ತಲೆಯಮೇಲೆ ಬೂದಿಯನ್ನು ಹಾಕಿಕೊಂಡು ತಾನು ಧರಿಸಿಕೊಂಡಿದ್ದ ವಿವಿಧವಾದ ವಸ್ತ್ರವನ್ನು ಹರಿದು ತನ್ನ ಕೈಗಳನ್ನು ತಲೆಯ ಮೇಲೆ ಇಟ್ಟುಕೊಂಡು ಅಳುತ್ತಾ ಹೋದಳು. ಆಗ ಅವಳ ಸಹೋದರನಾದ ಅಬ್ಷಾಲೋಮನು ಅವಳಿಗೆ --ನಿನ್ನ ಸಹೋದರನಾದ ಅಮ್ನೋನನು ನಿನ್ನ ಸಂಗಡ ಇದ್ದನೋ? ನನ್ನ ಸಹೋದರಿಯೇ, ಈಗ ಮೌನ ವಾಗಿರು; ಅವನು ನಿನ್ನ ಸಹೋದರನು; ಈ ಕಾರ್ಯ ವನ್ನು ನಿನ್ನ ಮನಸ್ಸಿಗೆ ಹಚ್ಚಿಕೊಳ್ಳಬೇಡ ಅಂದನು. ಹಾಗೆಯೇ ತಾಮಾರಳು ತನ್ನ ಸಹೋದರನಾದ ಅಬ್ಷಾಲೋಮನ ಮನೆಯಲ್ಲಿ ಒಂಟಿಗಳಾಗಿದ್ದಳು. ಅರಸನಾದ ದಾವೀದನು ಇವುಗಳನೆಲ್ಲಾ ಕೇಳಿದಾಗ ಬಹುಕೋಪಗೊಂಡನು. ಅಬ್ಷಾಲೋಮನು ತನ್ನ ಸಹೋದರನಾದ ಅಮ್ನೋನನ ಸಂಗಡ ಒಳ್ಳೇದಾ ದರೂ ಕೆಟ್ಟದ್ದಾದರೂ ಮಾತನಾಡದೆ ಇದ್ದನು. ಅವನು ತನ್ನ ಸಹೋದರಿಯಾದ ತಾಮಾರಳನ್ನು ಬಲವಂತ ಮಾಡಿದ್ದರಿಂದ ಅಬ್ಷಾಲೋಮನು ಅವನನ್ನು ಹಗೆ ಮಾಡಿದನು. ಎರಡು ವರುಷ ಪೂರ್ಣಮುಗಿದ ತರುವಾಯ ಏನಾಯಿತಂದರೆ, ಅಬ್ಷಾಲೋಮನಿಗೆ ಎಫ್ರಾಯಾಮ್ ಬಳಿಯಲ್ಲಿರುವ ಬಾಳ್ಹಾಚೋರಿನಲ್ಲಿ ಕುರಿಗಳ ಉಣ್ಣೆ ಕತ್ತರಿಸುವವರಿದ್ದರು. ಆದದರಿಂದ ಅಬ್ಷಾಲೋಮನು ಅರಸನ ಮಕ್ಕಳನ್ನೆಲ್ಲಾ ಔತಣಕ್ಕೆ ಕರೆದನು. ಇದಲ್ಲದೆ ಅಬ್ಷಾಲೋಮನು ಅರಸನ ಬಳಿಗೆ ಹೋಗಿ--ಇಗೋ, ಈಗ ನಿನ್ನ ಸೇವಕನಿಗೆ ಉಣ್ಣೆ ಕತ್ತರಿಸುವವರು ಇದ್ದಾರೆ; ಅರಸನೂ ತನ್ನ ಸೇವಕರೂ ನಿನ್ನ ಸೇವಕನ ಸಂಗಡ ಬರಲಿ ಅಂದನು. ಅದಕ್ಕೆ ಅರಸನು ಅಬ್ಷಾಲೋಮ ನಿಗೆ--ಹಾಗಲ್ಲ; ನನ್ನ ಮಗನೇ, ನಾವು ನಿನಗೆ ಭಾರವಾಗಿರದ ಹಾಗೆ ನಾವೆಲ್ಲರು ಈಗ ಬರುವದಿಲ್ಲ ಅಂದನು. ಅವನು ರಾಜನನ್ನು ಬಲವಂತ ಮಾಡಿದನು; ಆದರೆ ಅವನು ಹೋಗಲೊಲ್ಲದೆ ಅವನನ್ನು ಆಶೀ ರ್ವದಿಸಿದನು. ಆಗ ಅಬ್ಷಾಲೋಮನು--ಹಾಗಾ ದರೆ ನನ್ನ ಸಹೋದರನಾದ ಅಮ್ನೋನನು ನಮ್ಮ ಸಂಗಡ ಬರಲಿ ಅಂದನು. ಅರಸನು ಅವನಿಗೆ--ಯಾಕೆ ಅವನು ನಿಮ್ಮ ಸಂಗಡ ಬರಬೇಕು ಅಂದನು. ಆದರೆ ಅಬ್ಷಾಲೋಮನು ಅವನನ್ನು ಬಲವಂತ ಮಾಡಿದ್ದರಿಂದ ಅವನು ಅಮ್ನೋನನನ್ನೂ ಅರಸನ ಎಲ್ಲಾ ಮಕ್ಕಳನ್ನೂ ಅವನ ಸಂಗಡ ಕಳುಹಿಸಿದನು. ಆದರೆ ಅಬ್ಷಾಲೋಮನು ತನ್ನ ಸೇವಕರಿಗೆ--ನೀವು ನೋಡಿಕೊಳ್ಳಿರಿ; ಅಮ್ನೋನನ ಹೃದಯವು ದ್ರಾಕ್ಷಾರಸ ದಿಂದ ಸಂಭ್ರಮವಾಗಿರುವಾಗ ನಾನು ನಿಮಗೆ ಅಮ್ನೋನ ನನ್ನು ಹೊಡೆಯಿರಿ ಎಂದು ಹೇಳುತ್ತಲೇ ಅವನನ್ನು ಕೊಂದುಹಾಕಿರಿ; ಭಯಪಡಬೇಡಿರಿ ನಾನು ನಿಮಗೆ ಆಜ್ಞಾಪಿಸಿದ್ದೇನಲ್ಲಾ. ಬಲವಾಗಿರಿ; ಪರಾಕ್ರಮಿಗಳಾ ಗಿರ್ರಿ; ಎಂದು ಆಜ್ಞಾಪಿಸಿ ಹೇಳಿದನು. ಅಬ್ಷಾಲೋ ಮನು ಆಜ್ಞಾಪಿಸಿದ ಹಾಗೆಯೇ ಅವನ ಸೇವಕರು ಅಮ್ನೋನನಿಗೆ ಮಾಡಿದರು. ಆಗ ಅರಸನ ಮಕ್ಕಳೆ ಲ್ಲರೂ ಎದ್ದು ತಮ್ಮ ತಮ್ಮ ಹೇಸರ ಕತ್ತೆಗಳನ್ನೇರಿ ಓಡಿಹೋದರು.
- Genesis 49:3–4 ಆದಿಕಾಂಡ 49:3–4ರೂಬೇನನೇ, ನೀನು ನನ್ನ ಚೊಚ್ಚಲ ಮಗನು, ನನ್ನ ಶಕ್ತಿಯೂ ನನ್ನ ಬಲದ ಆರಂಭವೂ ಔನ್ಯತ್ಯಾತಿ ಶಯವೂ ಬಲಾತಿಶಯವೂ ನೀನೇ. ನೀರಿ ನಂತೆ ಚಂಚಲನಾಗಿದ್ದು ನೀನು ಶ್ರೇಷ್ಠನಾಗುವದಿಲ್ಲ. ಯಾಕಂದರೆ ನಿನ್ನ ತಂದೆಯ ಮಂಚವನ್ನೇರಿ ಹೊಲೆ ಮಾಡಿದಿ; ನನ್ನ ಹಾಸಿಗೆಯನ್ನು ಏರಿದಿ;