2 Samuel · chapter 5 · verse 11
2 Samuel 5:11 in Kannada
ಆಗ ತೂರಿನ ಅರಸನಾದ ಹೀರಾ ಮನು ದಾವೀದನ ಬಳಿಗೆ ದೂತರನ್ನೂ ದೇವದಾರು ಮರಗಳನ್ನೂ ಬಡಿಗೆಯವರನ್ನೂ ಶಿಲ್ಪಿಗಳನ್ನೂ ಕಳು ಹಿಸಿದನು. ಅವರು ದಾವೀದನಿಗೆ ಮನೆಯನ್ನು ಕಟ್ಟಿ ದರು.
Aaga toorina arasanaada heeraa manu daaveedana balige dootarannoo devadaaru maragalannoo badigeyavarannoo shilpigalannoo kalu hisidanu. Avaru daaveedanige maneyannu katti daru.
2 Samuel 5:11 in English
- King James Version (KJV)
- And Hiram king of Tyre sent messengers to David, and cedar trees, and carpenters, and masons: and they built David an house.
- World English Bible (WEB)
- Hiram king of Tyre sent messengers to David, with cedar trees, carpenters, and masons; and they built David a house.
- American Standard Version (ASV)
- And Hiram king of Tyre sent messengers to David, and cedar-trees, and carpenters, and masons; and they built David a house.
- Bible in Basic English (BBE)
- And Hiram, king of Tyre, sent men to David, with cedar-trees and woodworkers and stoneworkers: and they made David a house.
- Darby Translation (DBY)
- And Hiram king of Tyre sent messengers to David, and timber of cedars, and carpenters, and masons; and they built David a house.
- Webster's Bible (WBS)
- And Hiram king of Tyre sent messengers to David, and cedar-trees, and carpenters, and masons: and they built David a house.
- Young's Literal Translation (YLT)
- And Hiram king of Tyre sendeth messengers unto David, and cedar-trees, and artificers of wood, and artificers of stone, for walls, and they build a house for David,
Read in context
- 9ದಾವೀದನು ಕೋಟೆಯಲ್ಲಿ ವಾಸಮಾಡಿ ಅದಕ್ಕೆ ದಾವೀದನ ಪಟ್ಟಣವೆಂದು ಹೆಸರಿಟ್ಟನು. ಇದಲ್ಲದೆ ದಾವೀದನು ಮಿಲ್ಲೋವಿನ ಸುತ್ತಲಾಗಿ ಪ್ರಾರಂಭಿಸಿ ಒಳಪಾರ್ಶ್ವದಲ್ಲಿ ಇರುವದನ್ನು ಕಟ್ಟಿಸಿದನು.
- 10ಹೀಗೆ ಯೇ ದಾವೀದನು ದಿನದಿನಕ್ಕೆ ದೊಡ್ಡವನಾಗುತ್ತಾ ಇದ್ದನು; ಸೈನ್ಯಗಳ ದೇವರಾದ ಕರ್ತನು ಅವನ ಸಂಗಡ ಇದ್ದನು.
- 11ಆಗ ತೂರಿನ ಅರಸನಾದ ಹೀರಾ ಮನು ದಾವೀದನ ಬಳಿಗೆ ದೂತರನ್ನೂ ದೇವದಾರು ಮರಗಳನ್ನೂ ಬಡಿಗೆಯವರನ್ನೂ ಶಿಲ್ಪಿಗಳನ್ನೂ ಕಳು ಹಿಸಿದನು. ಅವರು ದಾವೀದನಿಗೆ ಮನೆಯನ್ನು ಕಟ್ಟಿ ದರು.
- 12ದಾವೀದನು ತನ್ನನ್ನು ಕರ್ತನು ಇಸ್ರಾಯೇ ಲಿನ ಮೇಲೆ ಅರಸನನ್ನಾಗಿ ಸ್ಥಿರಪಡಿಸಿದನೆಂದೂ ತನ್ನ ಜನವಾದ ಇಸ್ರಾಯೇಲಿನ ನಿಮಿತ್ತ ತನ್ನ ರಾಜ್ಯವನ್ನು ಉನ್ನತಕ್ಕೇರಿಸಿದನೆಂದೂ ತಿಳಿದುಕೊಂಡನು.
- 13ದಾವೀದನು ಹೆಬ್ರೋನನ್ನು ಬಿಟ್ಟುಹೋದ ತರುವಾಯ ಯೆರೂಸಲೇಮಿನಿಂದ ಇನ್ನೂ ಕೆಲವು ಮಂದಿ ಉಪಪತ್ನಿಯರನ್ನೂ ಹೆಂಡತಿಯರನ್ನೂ ಮಾಡಿಕೊಂಡನು; ದಾವೀದನಿಗೆ ಇನ್ನೂ ಕುಮಾ ರರೂ ಕುಮಾರ್ತೆಯರೂ ಹುಟ್ಟಿದರು.
Cross references
- 1 Chronicles 14:1 1 ಪೂರ್ವಕಾಲವೃತ್ತಾಂತ 14:1ತೂರಿನ ಅರಸನಾದ ಹೀರಾಮನು ದಾವೀದನಿಗೆ ಮನೆಯನ್ನು ಕಟ್ಟುವ ನಿಮಿತ್ತ ದೇವದಾರು ಮರಗಳನ್ನೂ ಕಲ್ಲು ಕುಟಿಗರನ್ನೂ ಬಡಗಿ ಯರನ್ನೂ ಅವನ ಬಳಿಗೆ ಕಳುಹಿಸಿದನು.
- 1 Kings 5:1–2 1 ಅರಸುಗಳು 5:1–2ಸೊಲೊಮೋನನನ್ನು ತನ್ನ ತಂದೆಗೆ ಬದಲಾಗಿ ಅರಸನಾಗಲು ಅಭಿಷೇಕಿಸಿದ್ದಾ ನೆಂದು ತೂರಿನ ಅರಸನಾದ ಹೀರಾಮನು ಕೇಳಿದಾಗ ಅವನು ತನ್ನ ಸೇವಕರನ್ನು ಸೊಲೊಮೋನನ ಬಳಿಗೆ ಕಳುಹಿಸಿದನು. ಹೀರಾಮನು ಯಾವಾಗಲೂ ದಾವೀದ ನನ್ನು ಪ್ರೀತಿಸುವವನಾಗಿದ್ದನು. ಸೊಲೊಮೋನನು ಹೀರಾಮನ ಬಳಿಗೆ ಸೇವಕರನ್ನು ಕಳುಹಿಸಿ--
- 1 Kings 5:18 1 ಅರಸುಗಳು 5:18ಹೀಗೆಯೇ ಸೊಲೊಮೋನನ ಶಿಲ್ಪಕಾರರೂ ಹಿರಾಮನ ಶಿಲ್ಪಕಾ ರರೂ ಗಿಬ್ಲಿಯರೂ ಅವುಗಳನ್ನು ಕಡಿದು ಮನೆಯನ್ನು ಕಟ್ಟುವದಕ್ಕೆ ಕಲ್ಲುಗಳನ್ನೂ ಮರಗಳನ್ನೂ ಸಿದ್ಧ ಮಾಡಿದರು.
- 2 Samuel 7:2 2 ಸಮುವೇಲನು 7:2ಅರ ಸನು ಪ್ರವಾದಿಯಾದ ನಾತಾನನಿಗೆ--ನೋಡು, ನಾನು ದೇವದಾರುಗಳ ಮನೆಯಲ್ಲಿ ವಾಸವಾಗಿದ್ದೇನೆ; ಆದರೆ ದೇವರ ಮಂಜೂಷವು ತೆರೆಗಳ ಮಧ್ಯದಲ್ಲಿ ವಾಸವಾಗಿದೆ ಅಂದನು.
- Jeremiah 22:14–16 ಯೆರೆಮೀಯ 22:14–16ಅವನು--ನಾನು ವಿಸ್ತಾರವಾದ ಮನೆಯನ್ನೂ ವಿಶಾಲವಾದ ಕೊಠಡಿಗಳನ್ನೂ ಕಟ್ಟಿಕೊಳ್ಳುವೆನೆಂದು ಹೇಳಿ ಕಿಟಕಿಗಳನ್ನು ಕೊರೆದು ದೇವದಾರಿನ ಹಲಿಗೆ ಗಳನ್ನು ಹಾಕಿ ಕೆಂಪು ಬಣ್ಣವನ್ನು ಹಚ್ಚುವವನಿಗೂ ಅಯ್ಯೋ! ನೀನು ದೇವದಾರಿನಲ್ಲಿ ನಿನ್ನನ್ನು ಮುಚ್ಚಿ ಕೊಳ್ಳುವದರಿಂದ ದೊರೆತನ ಮಾಡುವಿಯೋ? ನಿನ್ನ ತಂದೆ ಉಂಡು, ಕುಡಿದು, ನ್ಯಾಯವನ್ನೂ ನೀತಿಯನ್ನೂ ಮಾಡಲಿಲ್ಲವೋ? ಆಗ ಅವನಿಗೆ ಒಳ್ಳೆಯದಾ ಗಲಿಲ್ಲವೋ? ಬಡವನ ಮತ್ತು ದರಿದ್ರನ ನ್ಯಾಯ ವನ್ನು ತೀರಿಸಿದನು. ಆಗ ಒಳ್ಳೇದಾಯಿತು; ನನ್ನನ್ನು ತಿಳುಕೊಳ್ಳುವದು ಇದೇ ಅಲ್ಲವೋ ಎಂದು ಕರ್ತನು ಅನ್ನುತ್ತಾನೆ.
- Ecclesiastes 2:4–11 ಪ್ರಸಂಗಿ 2:4–11ನಾನು ಮಹ ತ್ತಾದ ಕಾರ್ಯಗಳನ್ನು ನಡಿಸಿದೆನು, ಮನೆಗಳನ್ನು ಕಟ್ಟಿಸಿ ಕೊಂಡೆನು; ದ್ರಾಕ್ಷಾತೋಟಗಳನ್ನು ನೆಟ್ಟೆನು. ಉದ್ಯಾನ ವನಗಳನ್ನೂ ಹಣ್ಣು ತೋಟಗಳನ್ನೂ ಮಾಡಿಕೊಂಡು ಅವುಗಳಲ್ಲಿ ತರತರವಾದ ಹಣ್ಣಿನ ವೃಕ್ಷಗಳನ್ನು ನೆಟ್ಟೆನು. ವೃಕ್ಷಗಳನ್ನು ಬೆಳೆಸುವ ಮರಕ್ಕೆ ನೀರು ಹಾಯಿಸುವ ದಕ್ಕೆ ನಾನು ಕೊಳಗಳನ್ನು ಮಾಡಿಕೊಂಡೆನು. ನನಗೆ ದಾಸದಾಸಿಯರು ಇದ್ದರು; ನನ್ನ ಮನೆಯಲ್ಲಿ ಹುಟ್ಟಿದ ದಾಸರು ನನಗೆ ಇದ್ದರು; ನನಗೆ ಮುಂಚೆ ಯೆರೂಸ ಲೇಮಿನಲ್ಲಿ ಇದ್ದವರಿಗಿಂತ ದನಕುರಿಗಳ ಸಂಪತ್ತು ಹೆಚ್ಚಾ ಗಿತ್ತು. ನಾನು ಬೆಳ್ಳಿ ಬಂಗಾರಗಳನ್ನು ಅರಸರ ಮತ್ತು ಪ್ರಾಂತ್ಯಗಳ ವಿಶೇಷವಾದ ಸಂಪತ್ತನ್ನು ಸಂಗ್ರಹಿಸಿ ಕೊಂಡೆನು; ಗಾಯಕ ಗಾಯಕಿಯರನ್ನು ಮತ್ತು ಮನುಷ್ಯ ಪುತ್ರರಿಗೆ ಆನಂದಕರವಾದ ಸಂಗೀತ ವಾದ್ಯ ಗಳನ್ನು ಅವುಗಳಿಗೆ ಸಂಭವಿಸಿದವುಗಳನ್ನು ಸಂಪಾದಿಸಿ ಕೊಂಡೆನು. ಹೀಗೆ ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಇದ್ದ ಎಲ್ಲರಿಗಿಂತಲೂ ನಾನು ಅಭಿವೃದ್ಧಿ ಹೊಂದಿ ದೊಡ್ಡವನಾಗಿದ್ದೆನು. ನನ್ನ ಕಣ್ಣುಗಳು ಬಯಸಿದ್ದೆಲ್ಲವನ್ನು ಅವುಗಳಿಂದ ಹಿಂತೆಗೆಯಲಿಲ್ಲ, ಯಾವ ಸಂತೋಷಕ್ಕಾಗಿಯೂ ನನ್ನ ಹೃದಯವನ್ನು ನಾನು ತಡೆಯಲಿಲ್ಲ; ನನ್ನ ಎಲ್ಲಾ ಪ್ರಯಾಸದಲ್ಲಿ ನನ್ನ ಹೃದಯವು ಸಂತೋಷಿಸಿತು; ನನ್ನ ಪ್ರಯಾಸ ದಿಂದೆಲ್ಲಾ ನನಗಾದ ಪಾಲು ಇದೆ. ಆಗ ನನ್ನ ಕೈಗಳು ನಡಿಸಿದವುಗಳೆಲ್ಲವನ್ನು ನಾನು ಪ್ರಯಾಸ ಪಟ್ಟ ಪ್ರಯಾಸವನ್ನು ದೃಷ್ಟಿಸಿದೆನು; ಇಗೋ, ಎಲ್ಲವೂ ವ್ಯರ್ಥ ಮತ್ತು ಮನಸ್ಸಿಗೆ ಆಯಾಸಕರ. ಸೂರ್ಯನ ಕೆಳಗೆ ಯಾವ ಲಾಭವಿಲ್ಲ.
- 1 Kings 7:1–12 1 ಅರಸುಗಳು 7:1–12ಇದಲ್ಲದೆ ಸೊಲೊಮೋನನು ತನ್ನ ಮನೆಯನ್ನು ಹದಿಮೂರು ವರುಷಗಳಲ್ಲಿ ಕಟ್ಟಿಸಿ ಅದನ್ನೆಲ್ಲಾ ಮುಗಿಸಿದನು. ಇದಲ್ಲದೆ ಅವನು ಲೆಬ ನೋನಿನ ಅಡವಿಯ ಮನೆಯನ್ನು ಕಟ್ಟಿಸಿದನು. ಅದು ನೂರು ಮೊಳ ಉದ್ದವೂ ಐವತ್ತು ಮೊಳ ಅಗಲವೂ ಮೂವತ್ತು ಮೊಳ ಎತ್ತರವೂ ಆಗಿತ್ತು; ನಾಲ್ಕು ಸಾಲು ದೇವದಾರು ಕಂಭಗಳ ಮೇಲೆ ಇತ್ತು; ದೇವದಾರು ತೊಲೆಗಳು ಕಂಭಗಳ ಮೇಲೆ ಇದ್ದವು. ಒಂದೊಂದು ಸಾಲು ಹದಿನೈದು ಕಂಭಗಳಾಗಿ ನಾಲ್ವತ್ತೈದು ಕಂಭ ಗಳ ಮೇಲೆ ಇರುವ ತೊಲೆಗಳು ದೇವದಾರುಗಳಿಂದ ಮುಚ್ಚಲ್ಪಟ್ಟವು. ಮೂರು ಸಾಲು ಕಿಟಿಕಿಗಳು ಇದ್ದವು; ಮೂರು ಸಾಲುಗಳಲ್ಲಿ ಬೆಳಕಿಗೆ ಬೆಳಕು ಎದುರಾಗಿತ್ತು. ಕಿಟಿಕಿಗಳಲ್ಲಿ ಬಾಗಲುಗಳೂ ನಿಲುವುಗಳೂ ಎಲ್ಲಾ ಚೌಕವು; ಮೂರು ಸಾಲುಗಳಲ್ಲಿ ಬೆಳಕಿಗೆ ಬೆಳಕು ಎದುರಾಗಿತ್ತು. ಐವತ್ತು ಮೊಳ ಉದ್ದವೂ ಮೂವತ್ತು ಮೊಳ ಅಗಲವೂ ಆದ ದ್ವಾರಾಂಗಳವನ್ನು ಸ್ತಂಭಗಳಿಂದ ಮಾಡಿದನು. ಈ ದ್ವಾರಾಂಗಳವೂ ಅದರ ಸ್ತಂಭಗಳೂ ತೊಲೆಗಳೂ ಮನೆಯ ಸ್ತಂಭಗಳಿಗೂ ತೊಲೆಗಳಿಗೂ ಎದುರಾಗಿದ್ದವು. ಅಲ್ಲಿ ನ್ಯಾಯತೀರಿಸಲು ನ್ಯಾಯಾ ಸನದ ದ್ವಾರಾಂಗಗಳೆಂಬ ದ್ವಾರಾಂಗಳವನ್ನು ಮಾಡಿ ಈ ಪಾರ್ಶ್ವದಿಂದ ಆ ಪಾರ್ಶ್ವದ ವರೆಗೂ ದೇವದಾರು ಗಳನ್ನು ಹೊದಿಸಿದನು. ತಾನು ವಾಸವಾಗಿರುವ ತನ್ನ ಮನೆಯಲ್ಲಿ ದ್ವಾರಾಂಗ ಳದ ಒಳಭಾಗದಲ್ಲಿ ಈ ಕೆಲಸದ ಹಾಗೆ ಮಾಡಲ್ಪಟ್ಟ ಬೇರೆ ಒಂದು ಅಂಗಳ ಇತ್ತು. ಇದಲ್ಲದೆ ಸೊಲೊ ಮೋನನು ತಾನು ತಕ್ಕೊಂಡ ಫರೋಹನ ಮಗಳಿಗೂ ಈ ದ್ವಾರಾಂಗಳದ ಹಾಗೆ ಒಂದು ಮನೆಯನ್ನು ಮಾಡಿ ದನು. ಇವೆಲ್ಲಾ ಒಳಗೂ ಹೊರಗೂ ಅಸ್ತಿವಾರ ಗಳು ಮೊದಲುಗೊಂಡು ಕಬೋದದ ವರೆಗೂ ಹೊರ ಗಿರುವ ದೊಡ್ಡ ಅಂಗಳದ ಮಟ್ಟಿಗೂ ಅಳತೆಯ ಪ್ರಕಾರ ಗರಗಸದಿಂದ ಕೊಯ್ಯಲ್ಪಟ್ಟ ಕೆತ್ತಿದ ಬೆಲೆಯುಳ್ಳ ಕಲ್ಲು ಗಳಾಗಿದ್ದವು. ಅಸ್ತಿವಾರವು ಹತ್ತು ಮೊಳದ ಕಲ್ಲು ಗಳೂ ಎಂಟು ಮೊಳದ ಕಲ್ಲುಗಳೂ ಆದ ಬೆಲೆ ಯುಳ್ಳ ಕಲ್ಲುಗಳಾಗಿಯೂ ದೊಡ್ಡ ಕಲ್ಲುಗಳಾಗಿಯೂ ಇದ್ದವು. ಅದರ ಮೇಲೆ ಕೆತ್ತಿದ ಕಲ್ಲುಗಳ ಅಳ ತೆಯ ಪ್ರಕಾರ ಬೆಲೆಯುಳ್ಳ ಕಲ್ಲುಗಳೂ ದೇವದಾರುಗಳೂ ಇದ್ದವು. ದೊಡ್ಡ ಅಂಗಳವು ಸುತ್ತಲಾಗಿ ಮೂರು ತರ ಕೆತ್ತಿದ ಕಲ್ಲುಗಳೂ ಒಂದು ತರ ದೇವ ದಾರು ಮರದ ತೊಲೆಗಳೂ ಆಗಿದ್ದವು; ಕರ್ತನ ಮನೆಯ ಒಳ ಅಂಗಳಕ್ಕೂ ಮನೆಯ ದ್ವಾರಾಂಗಳಕ್ಕೂ ಹಾಗೆಯೇ ಇತ್ತು.
- 1 Kings 5:8–10 1 ಅರಸುಗಳು 5:8–10ಹೀರಾಮನು ಸೊಲೊಮೋನನ ಬಳಿಗೆ ಸೇವಕರನ್ನು ಕಳುಹಿಸಿ--ನೀನು ಹೇಳಿ ಕಳುಹಿಸಿದ್ದನ್ನು ನಾನು ಕೇಳಿ ದ್ದೇನೆ. ದೇವದಾರು ಮರಗಳ ವಿಷಯವೂ ತುರಾಯಿ ಮರಗಳ ವಿಷಯವೂ ನೀನು ಇಚ್ಚೈಸಿದ್ದನ್ನೆಲ್ಲಾ ನಾನು ಮಾಡುವೆನು. ನನ್ನ ಸೇವಕರು ಅವುಗಳನ್ನು ಲೆಬ ನೋನಿನಿಂದ ಸಮುದ್ರಕ್ಕೆ ತಂದ ಮೇಲೆ ನೀನು ನನಗೆ ನೇಮಿಸಿದ ಸ್ಥಳಕ್ಕೆ ತೆಪ್ಪವನ್ನು ಕಟ್ಟಿಸಿ ಸಮುದ್ರದಿಂದ ಕಳುಹಿಸಿ ಅಲ್ಲಿ ಒಪ್ಪಿಸುವ ಹಾಗೆ ಮಾಡುವೆನು. ನೀನು ಅವುಗಳನ್ನು ತಕ್ಕೊಂಡು ನನ್ನ ಮನೆಯವರಿಗೋಸ್ಕರ ಆಹಾರವನ್ನು ಕೊಟ್ಟು ನನ್ನ ಇಚ್ಚೆಯನ್ನು ತೀರಿಸುವಿ ಅಂದನು. ಹೀಗೆ ಹೀರಾಮನು ತನ್ನ ಇಚ್ಚೆಯ ಪ್ರಕಾರ ಸೊಲೊಮೋನನಿಗೆ ದೇವದಾರು ಮರಗ ಳನ್ನೂ ತುರಾಯಿ ಮರಗಳನ್ನೂ ಕೊಟ್ಟನು.
Original words (Hebrew)
- Hiram · H2438חִירָם Chîyrâm
- king · H4428מֶלֶךְ melek
- Tyre · H6865צֹר Tsôr
- sent · H7971שָׁלַח shâlach
- messengers · H4397מֲלְאָךְ mălʼâk
- David · H1732דָּוִד Dâvid
- cedar · H730אֶרֶז ʼerez
- trees · H6086עֵץ ʻêts
- carpenters · H2796חָרָשׁ chârâsh
- masons · H7023קִיר qîyr
- built · H1129בָּנָה bânâh
- David · H1732דָּוִד Dâvid
- house · H1004בַּיִת bayith