Ecclesiastes · chapter 2 · verse 4
Ecclesiastes 2:4 in Kannada
ನಾನು ಮಹ ತ್ತಾದ ಕಾರ್ಯಗಳನ್ನು ನಡಿಸಿದೆನು, ಮನೆಗಳನ್ನು ಕಟ್ಟಿಸಿ ಕೊಂಡೆನು; ದ್ರಾಕ್ಷಾತೋಟಗಳನ್ನು ನೆಟ್ಟೆನು.
Naanu maha ttaada kaaryagalannu nadisidenu, manegalannu kattisi kondenu; draakshaatotagalannu nettenu.
Ecclesiastes 2:4 in English
- King James Version (KJV)
- I made me great works; I builded me houses; I planted me vineyards:
- World English Bible (WEB)
- I made myself great works. I built myself houses. I planted myself vineyards.
- American Standard Version (ASV)
- I made me great works; I builded me houses; I planted me vineyards;
- Bible in Basic English (BBE)
- I undertook great works, building myself houses and planting vine-gardens.
- Darby Translation (DBY)
- I made me great works; I builded me houses; I planted me vineyards;
- Webster's Bible (WBS)
- I made me great works; I built me houses; I planted me vineyards:
- Young's Literal Translation (YLT)
- I made great my works, I builded for me houses, I planted for me vineyards.
Read in context
- 2ನಗೆಯ ವಿಷಯವಾಗಿ--ಇದು ಹುಚ್ಚು ಎಂದೂ ಸಂತೋಷದ ವಿಷಯವಾಗಿ--ಇದೇನು ಮಾಡುತ್ತದೆ ಎಂದೂ ನಾನು ಹೇಳಿದೆನು.
- 3ಜ್ಞಾನದಿಂದ ನನ್ನ ಹೃದಯವನ್ನು ಇನ್ನು ಸಂತೋಷಪಡಿಸುವದಕ್ಕಾಗಿ ದ್ರಾಕ್ಷಾರಸಕ್ಕೆ ನನ್ನನ್ನು ನಾನು ಒಪ್ಪಿಸಿ ಕೊಳ್ಳುವಂತೆಯೂ ಆಕಾಶದ ಕೆಳಗೆ ತಮ್ಮ ಜೀವ ಮಾನದಲ್ಲೆಲ್ಲಾ ಮನುಷ್ಯ ಪುತ್ರರಿಗೆ ಒಳ್ಳೆಯದೇನೆಂದು ನೋಡುವ ತನಕ ಬುದ್ಧಿ ಹೀನತೆಯನ್ನು ಹಿಡಿಯುವದಕ್ಕೂ ನಾನು ನನ್ನ ಹೃದಯ ದಲ್ಲಿ ವಿಚಾರ ಮಾಡಿಕೊಂಡೆನು.
- 4ನಾನು ಮಹ ತ್ತಾದ ಕಾರ್ಯಗಳನ್ನು ನಡಿಸಿದೆನು, ಮನೆಗಳನ್ನು ಕಟ್ಟಿಸಿ ಕೊಂಡೆನು; ದ್ರಾಕ್ಷಾತೋಟಗಳನ್ನು ನೆಟ್ಟೆನು.
- 5ಉದ್ಯಾನ ವನಗಳನ್ನೂ ಹಣ್ಣು ತೋಟಗಳನ್ನೂ ಮಾಡಿಕೊಂಡು ಅವುಗಳಲ್ಲಿ ತರತರವಾದ ಹಣ್ಣಿನ ವೃಕ್ಷಗಳನ್ನು ನೆಟ್ಟೆನು.
- 6ವೃಕ್ಷಗಳನ್ನು ಬೆಳೆಸುವ ಮರಕ್ಕೆ ನೀರು ಹಾಯಿಸುವ ದಕ್ಕೆ ನಾನು ಕೊಳಗಳನ್ನು ಮಾಡಿಕೊಂಡೆನು.
Cross references
- 1 Kings 7:1–12 1 ಅರಸುಗಳು 7:1–12ಇದಲ್ಲದೆ ಸೊಲೊಮೋನನು ತನ್ನ ಮನೆಯನ್ನು ಹದಿಮೂರು ವರುಷಗಳಲ್ಲಿ ಕಟ್ಟಿಸಿ ಅದನ್ನೆಲ್ಲಾ ಮುಗಿಸಿದನು. ಇದಲ್ಲದೆ ಅವನು ಲೆಬ ನೋನಿನ ಅಡವಿಯ ಮನೆಯನ್ನು ಕಟ್ಟಿಸಿದನು. ಅದು ನೂರು ಮೊಳ ಉದ್ದವೂ ಐವತ್ತು ಮೊಳ ಅಗಲವೂ ಮೂವತ್ತು ಮೊಳ ಎತ್ತರವೂ ಆಗಿತ್ತು; ನಾಲ್ಕು ಸಾಲು ದೇವದಾರು ಕಂಭಗಳ ಮೇಲೆ ಇತ್ತು; ದೇವದಾರು ತೊಲೆಗಳು ಕಂಭಗಳ ಮೇಲೆ ಇದ್ದವು. ಒಂದೊಂದು ಸಾಲು ಹದಿನೈದು ಕಂಭಗಳಾಗಿ ನಾಲ್ವತ್ತೈದು ಕಂಭ ಗಳ ಮೇಲೆ ಇರುವ ತೊಲೆಗಳು ದೇವದಾರುಗಳಿಂದ ಮುಚ್ಚಲ್ಪಟ್ಟವು. ಮೂರು ಸಾಲು ಕಿಟಿಕಿಗಳು ಇದ್ದವು; ಮೂರು ಸಾಲುಗಳಲ್ಲಿ ಬೆಳಕಿಗೆ ಬೆಳಕು ಎದುರಾಗಿತ್ತು. ಕಿಟಿಕಿಗಳಲ್ಲಿ ಬಾಗಲುಗಳೂ ನಿಲುವುಗಳೂ ಎಲ್ಲಾ ಚೌಕವು; ಮೂರು ಸಾಲುಗಳಲ್ಲಿ ಬೆಳಕಿಗೆ ಬೆಳಕು ಎದುರಾಗಿತ್ತು. ಐವತ್ತು ಮೊಳ ಉದ್ದವೂ ಮೂವತ್ತು ಮೊಳ ಅಗಲವೂ ಆದ ದ್ವಾರಾಂಗಳವನ್ನು ಸ್ತಂಭಗಳಿಂದ ಮಾಡಿದನು. ಈ ದ್ವಾರಾಂಗಳವೂ ಅದರ ಸ್ತಂಭಗಳೂ ತೊಲೆಗಳೂ ಮನೆಯ ಸ್ತಂಭಗಳಿಗೂ ತೊಲೆಗಳಿಗೂ ಎದುರಾಗಿದ್ದವು. ಅಲ್ಲಿ ನ್ಯಾಯತೀರಿಸಲು ನ್ಯಾಯಾ ಸನದ ದ್ವಾರಾಂಗಗಳೆಂಬ ದ್ವಾರಾಂಗಳವನ್ನು ಮಾಡಿ ಈ ಪಾರ್ಶ್ವದಿಂದ ಆ ಪಾರ್ಶ್ವದ ವರೆಗೂ ದೇವದಾರು ಗಳನ್ನು ಹೊದಿಸಿದನು. ತಾನು ವಾಸವಾಗಿರುವ ತನ್ನ ಮನೆಯಲ್ಲಿ ದ್ವಾರಾಂಗ ಳದ ಒಳಭಾಗದಲ್ಲಿ ಈ ಕೆಲಸದ ಹಾಗೆ ಮಾಡಲ್ಪಟ್ಟ ಬೇರೆ ಒಂದು ಅಂಗಳ ಇತ್ತು. ಇದಲ್ಲದೆ ಸೊಲೊ ಮೋನನು ತಾನು ತಕ್ಕೊಂಡ ಫರೋಹನ ಮಗಳಿಗೂ ಈ ದ್ವಾರಾಂಗಳದ ಹಾಗೆ ಒಂದು ಮನೆಯನ್ನು ಮಾಡಿ ದನು. ಇವೆಲ್ಲಾ ಒಳಗೂ ಹೊರಗೂ ಅಸ್ತಿವಾರ ಗಳು ಮೊದಲುಗೊಂಡು ಕಬೋದದ ವರೆಗೂ ಹೊರ ಗಿರುವ ದೊಡ್ಡ ಅಂಗಳದ ಮಟ್ಟಿಗೂ ಅಳತೆಯ ಪ್ರಕಾರ ಗರಗಸದಿಂದ ಕೊಯ್ಯಲ್ಪಟ್ಟ ಕೆತ್ತಿದ ಬೆಲೆಯುಳ್ಳ ಕಲ್ಲು ಗಳಾಗಿದ್ದವು. ಅಸ್ತಿವಾರವು ಹತ್ತು ಮೊಳದ ಕಲ್ಲು ಗಳೂ ಎಂಟು ಮೊಳದ ಕಲ್ಲುಗಳೂ ಆದ ಬೆಲೆ ಯುಳ್ಳ ಕಲ್ಲುಗಳಾಗಿಯೂ ದೊಡ್ಡ ಕಲ್ಲುಗಳಾಗಿಯೂ ಇದ್ದವು. ಅದರ ಮೇಲೆ ಕೆತ್ತಿದ ಕಲ್ಲುಗಳ ಅಳ ತೆಯ ಪ್ರಕಾರ ಬೆಲೆಯುಳ್ಳ ಕಲ್ಲುಗಳೂ ದೇವದಾರುಗಳೂ ಇದ್ದವು. ದೊಡ್ಡ ಅಂಗಳವು ಸುತ್ತಲಾಗಿ ಮೂರು ತರ ಕೆತ್ತಿದ ಕಲ್ಲುಗಳೂ ಒಂದು ತರ ದೇವ ದಾರು ಮರದ ತೊಲೆಗಳೂ ಆಗಿದ್ದವು; ಕರ್ತನ ಮನೆಯ ಒಳ ಅಂಗಳಕ್ಕೂ ಮನೆಯ ದ್ವಾರಾಂಗಳಕ್ಕೂ ಹಾಗೆಯೇ ಇತ್ತು.
- Daniel 4:30 ದಾನಿಯೇಲನು 4:30ಆಗ ಅರಸನು ಮಾತನಾಡಿ ಹೇಳಿದ್ದೇನಂದರೆ--ನಾನು ನನ್ನ ಪರಾಕ್ರಮದ ಬಲದಿಂದ ನನ್ನ ಮಹಿ ಮೆಯ ಕೀರ್ತಿಗಾಗಿ ಕಟ್ಟಿಸಿದ ಮಹಾಬಾಬೆಲು ಇದ ಲ್ಲವೇ ಅಂದನು.
- 2 Chronicles 26:10 2 ಪೂರ್ವಕಾಲವೃತ್ತಾಂತ 26:10ಅವನು ಅರಣ್ಯದಲ್ಲಿ ಬುರುಜುಗಳನ್ನು ಕಟ್ಟಿಸಿ ಅನೇಕ ಬಾವಿಗಳನ್ನು ತೋಡಿಸಿ ದನು; ತಗ್ಗಿನ ದೇಶದಲ್ಲಿಯೂ ಬೈಲು ದೇಶದಲ್ಲಿಯೂ ಅವನಿಗೆ ಬಹು ಕುರಿದನಗಳಿದ್ದವು. ಹಾಗೆಯೇ ಪರ್ವತ ಗಳಲ್ಲಿಯೂ ಕರ್ಮೆಲಿನಲ್ಲಿಯೂ ಅವನಿಗೆ ಒಕ್ಕಲಿ ಗರೂ ದ್ರಾಕ್ಷೇ ವ್ಯವಸಾಯದವರೂ ಇದ್ದರು. ಅವನು ವ್ಯವಸಾಯದಲ್ಲಿ ಇಷ್ಟವುಳ್ಳವನಾಗಿದ್ದನು.
- 2 Samuel 18:18 2 ಸಮುವೇಲನು 18:18ಆದರೆ ಅಬ್ಷಾಲೋಮನು ಜೀವ ದಿಂದಿರುವಾಗ--ನನ್ನ ಹೆಸರನ್ನು ಜ್ಞಾಪಕಮಾಡುವ ಹಾಗೆ ನನಗೆ ಮಗನಿಲ್ಲವೆಂದು ಹೇಳಿ ಅರಸನ ತಗ್ಗಿನ ಲ್ಲಿರುವ ಒಂದು ಸ್ತಂಭವನ್ನು ತಕ್ಕೊಂಡು ತನಗೋಸ್ಕರ ನಿಲ್ಲಿಸಿ ಆ ಸ್ತಂಭಕ್ಕೆ ತನ್ನ ಹೆಸರನ್ನಿಟ್ಟನು. ಅದು ಈ ದಿನದ ವರೆಗೂ ಅಬ್ಷಾಲೋಮನ ಸ್ಥಳ ಎಂದು ಹೇಳಲ್ಪಡುವದು.
- Isaiah 5:1 ಯೆಶಾಯ 5:1ನನ್ನ ಪ್ರಿಯನ ದ್ರಾಕ್ಷೇ ತೋಟದ ವಿಷಯವಾದ ಹಾಡನ್ನು ನನ್ನ ಅತಿ ಪ್ರಿಯನಿಗೆ ನಾನು ಹಾಡುವೆನು. ಫಲವತ್ತಾದ ಗುಡ್ಡದಲ್ಲಿ ನನ್ನ ಅತಿಪ್ರಿಯನಿಗೆ ದ್ರಾಕ್ಷೆಯ ತೋಟವಿದೆ.
- 2 Chronicles 8:1–6 2 ಪೂರ್ವಕಾಲವೃತ್ತಾಂತ 8:1–6ಸೊಲೊಮೋನನು ಕರ್ತನ ಆಲಯವನ್ನೂ ತನ್ನ ಮನೆಯನ್ನೂ ಇಪ್ಪತ್ತು ವರುಷ ಗಳಲ್ಲಿ ಕಟ್ಟಿದ ತರುವಾಯ ಆದದ್ದೇನಂದರೆ, ಹೂರಾ ಮನು ಸೊಲೊಮೋನನಿಗೆ ತಿರಿಗಿ ಕೊಟ್ಟ ಪಟ್ಟಣಗ ಳನ್ನು ಸೊಲೊಮೋನನು ಕಟ್ಟಿಸಿ ಇಸ್ರಾಯೇಲ್ ಮಕ್ಕಳನ್ನು ಅಲ್ಲಿ ನಿವಾಸವಾಗಿರುವಂತೆ ಮಾಡಿದನು. ಸೊಲೊಮೋನನು ಹಮಾತು ಚೋಬಕ್ಕೆ ಹೋಗಿ ಅದನ್ನು ಜಯಿಸಿದನು. ಅವನು ಅರಣ್ಯದಲ್ಲಿರುವ ತದ್ಮೋರನ್ನೂ ಹಮಾತಿನಲ್ಲಿರುವ ಉಗ್ರಾಣದ ಪಟ್ಟಣ ಗಳನ್ನೂ ಕಟ್ಟಿಸಿದನು. ಗೋಡೆಗಳೂ ಬಾಗಲುಗಳೂ ಅಗುಳಿಗಳೂ ಉಳ್ಳ ಕೋಟೆ ಪಟ್ಟಣಗಳಾದ ಮೇಲಿನ ಬೇತ್ಹೋರೋನನ್ನೂ ಕೆಳಗಿನ ಬೇತ್ಹೋರೋನನ್ನೂ ಬಾಲಾತೂರನ್ನೂ ಸೊಲೊಮೋನನಿಗೆ ಇದ್ದ ಸಮಸ್ತ ಉಗ್ರಾಣದ ಪಟ್ಟಣಗಳನ್ನೂ ಸಮಸ್ತ ರಥಗಳ ಪಟ್ಟಣ ಗಳನ್ನೂ ರಾಹುತರ ಪಟ್ಟಣಗಳನ್ನೂ ಕಟ್ಟಿಸಿದನು. ಸೊಲೊಮೋನನು ಯೆರೂಸಲೇಮಿನಲ್ಲಿಯೂ ಲೆಬ ನೋನಿನಲ್ಲಿಯೂ ತಾನು ಆಳುವ ಸಮಸ್ತ ದೇಶದ ಲ್ಲೆಲ್ಲಾ ಕಟ್ಟಿಸಲು ಇಚ್ಛೆಯಾದದ್ದನ್ನು ಕಟ್ಟಿಸಿದನು.
- Song of Solomon 7:12 ಪರಮಗೀತೆ 7:12ನಾವು ಉದಯದಲ್ಲಿ ಎದ್ದು,ದ್ರಾಕ್ಷೇ ತೋಟಗಳಿಗೆ ಹೋಗಿ, ದ್ರಾಕ್ಷೇ ಬಳ್ಳಿಯು ಬೆಳೆಯುವದೋ? ಅದರ ಎಳೆಗಾಯಿಗಳು ಕಾಣಿ ಸುತ್ತವೋ? ದಾಳಿಂಬರ ಗಿಡಗಳು ಚಿಗುರುತ್ತವೋ ನೋಡುವ. ಅಲ್ಲಿ ನನ್ನ ಪ್ರೀತಿಯನ್ನು ನಿನಗೆ ತೋರಿಸುವೆನು.ಓ ನನ್ನ ಪ್ರಿಯನೇ, ದುದಾಯಗಳು ವಾಸನೆಕೊಡುತ್ತವೆ; ನಮ್ಮ ಬಾಗಲುಗಳ ಬಳಿಯಲ್ಲಿ ನಿನಗೋಸ್ಕರ ನಾನು ಇಟ್ಟುಕೊಂಡ ವಿವಿಧ ಹೊಸ ಹಳೇ ರಮ್ಯವಾದ ಫಲಗಳು ಅವೆ.
- 1 Kings 9:1 1 ಅರಸುಗಳು 9:1ಸೊಲೊಮೋನನು ಕರ್ತನ ಮಂದಿರ ವನ್ನೂ ಅರಮನೆಯನ್ನೂ ಕಟ್ಟಲು ಆಶೆ ಯಿಂದ ಇಚ್ಚೈಸಿದ್ದನ್ನೆಲ್ಲಾ ಕಟ್ಟಿಸಿ ತೀರಿಸಿದ ಮೇಲೆ ಏನಾಯಿತಂದರೆ,
- Psalm 49:11 ಕೀರ್ತನೆಗಳು 49:11ತಮ್ಮ ಮನೆಗಳು ಯುಗಯುಗಕ್ಕೂ ತಮ್ಮ ನಿವಾಸಗಳು ತಲತಲಾಂತರಕ್ಕೂ ಇರಬೇಕೆಂದು ಅಂತರ್ಯದಲ್ಲಿ ಯೋಚಿಸಿ ಭೂಮಿಗಳಿಗೆ ತಮ್ಮ ಹೆಸರುಗಳನ್ನು ಇಡು ತ್ತಾರೆ.
- 2 Chronicles 8:11 2 ಪೂರ್ವಕಾಲವೃತ್ತಾಂತ 8:11ಸೊಲೊಮೋನನು ಫರೋಹನ ಕುಮಾರ್ತೆ ಯನ್ನು ದಾವೀದನ ಪಟ್ಟಣದಿಂದ ತಾನು ಅವಳಿ ಗೋಸ್ಕರ ಕಟ್ಟಿಸಿದ ಮನೆಗೆ ಬರಮಾಡಿದನು. ಕರ್ತನ ಒಡಂಬಡಿಕೆಯ ಮಂಜೂಷವು ಬಂದ ಸ್ಥಳಗಳು ಪರಿಶುದ್ಧವಾಗಿರುವದರಿಂದ ನನ್ನ ಹೆಂಡತಿಯು ಇಸ್ರಾ ಯೇಲಿನ ಅರಸನಾದ ದಾವೀದನ ಮನೆಯಲ್ಲಿ ವಾಸ ವಾಗಿರಕೂಡದೆಂದು ಹೇಳಿದನು.
- Song of Solomon 8:11–12 ಪರಮಗೀತೆ 8:11–12ಆಗ, ನಾನು ಅವನ ದೃಷ್ಟಿಯಲ್ಲಿ ದಯ ಹೊಂದಿದವಳ ಹಾಗಿದ್ದೆನು. ಬಾಲ್ಹಾಮೋನಿನಲ್ಲಿ ಸೊಲೊಮೋನನಿಗೆ ಒಂದು ದ್ರಾಕ್ಷೇ ತೋಟ ಇತ್ತು. ಅವನು ಆ ದ್ರಾಕ್ಷೇ ತೋಟವನ್ನು ಒಕ್ಕಲಿಗರಿಗೆ ಗುತ್ತಿ ಗೆಗೆ ಕೊಟ್ಟನು. ಒಬ್ಬೊಬ್ಬನು ಅದರ ಫಲಕ್ಕೋಸ್ಕರ ಸಾವಿರ ಬೆಳ್ಳಿಯ ನಾಣ್ಯಗಳನ್ನು ತರಬೇಕಾಗಿತ್ತು. ನನ್ನದಾದ ನನ್ನ ದ್ರಾಕ್ಷೇ ತೋಟವು ನನ್ನ ಮುಂದೆ ಅದೆ. ಓ ಸೊಲೊಮೋನನೇ, ನಿನಗೆ ಒಂದು ಸಾವಿರ ಇರತಕ್ಕದ್ದು. ಅದರ ಫಲವನ್ನು ಕಾಪಾಡುವವರಿಗೆ ಇನ್ನೂರು ಆಗಲಿ.
- 1 Kings 15:19 1 ಅರಸುಗಳು 15:19ಇಗೋ, ನಾನು ಬೆಳ್ಳಿ ಬಂಗಾರವನ್ನು ಕಾಣಿಕೆಯಾಗಿ ನಿನ್ನ ಬಳಿಗೆ ಕಳುಹಿಸಿದ್ದೇನೆ. ಇಸ್ರಾಯೇಲಿನ ಅರಸನಾದ ಬಾಷನು ನನ್ನನ್ನು ಬಿಟ್ಟು ಹೋಗುವ ಹಾಗೆ ನೀನು ಬಂದು ಅವನ ಸಂಗಡ ಮಾಡಿದ ನಿನ್ನ ಒಡಂಬಡಿಕೆಯನ್ನು ಮುರಿಯಬೇಕು ಅಂದನು.