2 Samuel · chapter 7 · verse 9
2 Samuel 7:9 in Kannada
ನೀನು ಎಲ್ಲಿ ಹೋದರೂ ಅಲ್ಲಿ ನಿನ್ನ ಕೂಡ ಇದ್ದು ನಿನ್ನ ಶತ್ರುಗಳೆಲ್ಲರನ್ನು ನಿನ್ನ ಮುಂದೆ ಕಡಿದುಬಿಟ್ಟು ಭೂಮಿಯಲ್ಲಿರುವ ದೊಡ್ಡವರ ಹೆಸರಿನ ಹಾಗೆ ದೊಡ್ಡ ಹೆಸರನ್ನು ನಿನಗೆ ಉಂಟುಮಾಡಿದೆನು.
Neenu elli hodaroo alli ninna kooda iddu ninna shatrugalellarannu ninna munde kadidubittu bhoomiyalliruva doddavara hesarina haage dodda hesarannu ninage untumaadidenu.
2 Samuel 7:9 in English
- King James Version (KJV)
- And I was with thee whithersoever thou wentest, and have cut off all thine enemies out of thy sight, and have made thee a great name, like unto the name of the great [men] that [are] in the earth.
- World English Bible (WEB)
- I have been with you wherever you went, and have cut off all your enemies from before you. I will make you a great name, like the name of the great ones who are on the earth.
- American Standard Version (ASV)
- and I have been with thee whithersoever thou wentest, and have cut off all thine enemies from before thee; and I will make thee a great name, like unto the name of the great ones that are in the earth.
- Bible in Basic English (BBE)
- And I have been with you wherever you went, cutting off before you all those who were against you; and I will make your name great, like the name of the greatest ones of the earth.
- Darby Translation (DBY)
- and I have been with thee whithersoever thou wentest, and have cut off all thine enemies from before thee, and have made thee a great name, like unto the name of the great men that are on the earth.
- Webster's Bible (WBS)
- And I was with thee whithersoever thou wentest, and have cut off all thy enemies out of thy sight, and have made thee a great name, like to the name of the great [men] that [are] in the earth.
- Young's Literal Translation (YLT)
- and I am with thee whithersoever thou hast gone, and I cut off all thine enemies from thy presence, and have made for thee a great name, as the name of the great ones who [are] in the earth,
Read in context
- 7ನಾನು ಇಸ್ರಾಯೆಲ್ಯರಾದ ನನ್ನ ಜನರನ್ನು ಪೋಷಿಸುವಂತೆ ಆಜ್ಞಾಪಿಸಿದ ಇಸ್ರಾಯೇಲಿನ ಒಂದು ಗೋತ್ರದವ ರಿಗೂ--ನೀವು ನನಗೆ ದೇವದಾರಿನ ಮನೆಯನ್ನು ಕಟ್ಟದೆ ಇರುವದೇನೆಂದು ನಾನು ಇಸ್ರಾಯೇಲ್ ಮಕ್ಕಳೆಲ್ಲರ ಸಂಗಡ ನಡೆಯುತ್ತಿದ್ದ ಯಾವ ಸ್ಥಳದ ಲ್ಲಾದರೂ ಏನಾದರೂ ಹೇಳಿದೆನೋ?
- 8ಈಗ ನೀನು ನನ್ನ ಸೇವಕನಾದ ದಾವೀದನಿಗೆ--ನೀನು ನನ್ನ ಜನ ರಾದ ಇಸ್ರಾಯೇಲ್ಯರ ಮೇಲೆ ನಾಯಕನಾಗಿರುವಂತೆ ಕುರಿಗಳ ಹಿಂದೆ ಹೋಗುತ್ತಿದ್ದ ನಿನ್ನನ್ನು ನಾನು ಕುರಿಯ ಹಟ್ಟಿಯಿಂದ ತೆಗೆದುಕೊಂಡೆನು;
- 9ನೀನು ಎಲ್ಲಿ ಹೋದರೂ ಅಲ್ಲಿ ನಿನ್ನ ಕೂಡ ಇದ್ದು ನಿನ್ನ ಶತ್ರುಗಳೆಲ್ಲರನ್ನು ನಿನ್ನ ಮುಂದೆ ಕಡಿದುಬಿಟ್ಟು ಭೂಮಿಯಲ್ಲಿರುವ ದೊಡ್ಡವರ ಹೆಸರಿನ ಹಾಗೆ ದೊಡ್ಡ ಹೆಸರನ್ನು ನಿನಗೆ ಉಂಟುಮಾಡಿದೆನು.
- 10ಇದಲ್ಲದೆ ನಾನು ನನ್ನ ಜನರಾದ ಇಸ್ರಾಯೇಲ್ಯರಿಗೆ ಒಂದು ಸ್ಥಳವನ್ನು ಏರ್ಪಡಿಸಿ ಅವರು ಇನ್ನು ಮೇಲೆ ಚಲಿಸದೆ ಸ್ವಸ್ಥಳದಲ್ಲಿ ವಾಸವಾಗಿರುವ ಹಾಗೆ ಅವರನ್ನು ನೆಡು ವೆನು. ಪೂರ್ವದ ಹಾಗೆಯೂ ನಾನು ನನ್ನ ಜನವಾದ ಇಸ್ರಾಯೇಲಿನ ಮೇಲೆ ನ್ಯಾಯಾಧಿಪತಿಗಳನ್ನು ನೇಮಿ ಸಿದ ದಿವಸದಿಂದಾದ ಹಾಗೆಯೂ ದುಷ್ಟತನದ ಮಕ್ಕಳು ಇನ್ನು ಮೇಲೆ ಅವರನ್ನು ಕುಂದಿಸದೆ ಇರುವರು.
- 11ನಿನ್ನನ್ನು ನಿನ್ನ ಎಲ್ಲಾ ಶತ್ರುಗಳಿಗೆ ತಪ್ಪಿಸಿ ನಿನಗೆ ವಿಶ್ರಾಂತಿಯನ್ನು ಉಂಟುಮಾಡಿದೆನು.
Cross references
- 2 Samuel 5:10 2 ಸಮುವೇಲನು 5:10ಹೀಗೆ ಯೇ ದಾವೀದನು ದಿನದಿನಕ್ಕೆ ದೊಡ್ಡವನಾಗುತ್ತಾ ಇದ್ದನು; ಸೈನ್ಯಗಳ ದೇವರಾದ ಕರ್ತನು ಅವನ ಸಂಗಡ ಇದ್ದನು.
- 1 Chronicles 17:8 1 ಪೂರ್ವಕಾಲವೃತ್ತಾಂತ 17:8ನೀನು ಎಲ್ಲಿಗೆ ಹೋದರೂ ಅಲ್ಲಿ ನಿನ್ನ ಸಂಗಡ ಇದ್ದು ನಿನ್ನ ಶತ್ರುಗಳೆಲ್ಲರನ್ನು ನಿನ್ನ ಮುಂದೆ ಸಂಹರಿಸಿ ಭೂಮಿಯಲ್ಲಿರುವ ದೊಡ್ಡವರ ಹೆಸರಿನ ಹಾಗೆ ಹೆಸರನ್ನು ನಿನಗೆ ಉಂಟುಮಾಡಿದೆನು.
- 1 Samuel 18:14 1 ಸಮುವೇಲನು 18:14ದಾವೀದನು ತನ್ನ ಸಕಲ ಮಾರ್ಗಗಳಲ್ಲಿ ಬುದ್ಧಿಯುಳ್ಳವನಾಗಿ ವರ್ತಿಸಿದನು.
- Psalm 18:37–42 ಕೀರ್ತನೆಗಳು 18:37–42ನನ್ನ ಶತ್ರುಗಳನ್ನು ಹಿಂದಟ್ಟಿ ಹಿಡಿದಿ ದ್ದೇನೆ; ಅವರನ್ನು ಸಂಹರಿಸಿಬಿಡುವ ವರೆಗೆ ನಾನು ಹಿಂತಿರುಗಲಿಲ್ಲ. ಅವರು ಏಳಲಾರದ ಹಾಗೆ ಅವ ರಿಗೆ ಗಾಯ ಮಾಡಿದೆನು; ಅವರು ನನ್ನ ಪಾದಗಳ ಕೆಳಗೆ ಬಿದ್ದಿದ್ದಾರೆ. ನೀನು ಯುದ್ಧಕಾಗ್ಕಿ ಪರಾ ಕ್ರಮದಿಂದ ನನ್ನ ನಡುವನ್ನು ಕಟ್ಟಿ ನನ್ನ ಎದುರಾಳಿಗ ಳನ್ನು ಅಧೀನ ಮಾಡಿದಿ. ನನ್ನ ಹಗೆಯವರನ್ನು ನಾಶಮಾಡುವಂತೆ ಶತ್ರುಗಳ ಕುತ್ತಿಗೆಗಳನ್ನು ನೀನು ನನಗೆ ಕೊಟ್ಟಿದ್ದೀ. ಅವರು ಮೊರೆಯಿಟ್ಟರು, ಆದರೆ ರಕ್ಷಿಸುವವರು ಯಾರೂ ಇದ್ದಿಲ್ಲ. ಕರ್ತನಿಗೂ ಮೊರೆ ಇಟ್ಟರು, ಆದರೆ ಅವರಿಗೆ ಆತನು ಉತ್ತರ ಕೊಡ ಲಿಲ್ಲ. ಗಾಳಿಯ ಮುಂದಿನ ಧೂಳಿನಹಾಗೆ ಅವ ರನ್ನು ಹೊಡೆದು ಪುಡಿಪುಡಿ ಮಾಡಿದನು; ಬೀದಿಯ ಕೆಸರಿನಹಾಗೆ ಅವರನ್ನು ಹೊರಗೆ ಚೆಲ್ಲಿಬಿಟ್ಟನು.
- 2 Samuel 8:6 2 ಸಮುವೇಲನು 8:6ತರುವಾಯ ಕಾವಲುದಂಡುಗಳನ್ನು ದಾವೀದನು ದಮಸ್ಕಕ್ಕೆ ಹೊಂದಿದ ಅರಾಮ್ಯದ ಠಾಣ ಗಳಲ್ಲಿ ಇಟ್ಟನು. ಹಾಗೆಯೇ ಅರಾಮ್ಯರು ದಾವೀದ ನಿಗೆ ದಾಸರಾಗಿ ಕಪ್ಪಗಳನ್ನು ತಂದರು; ದಾವೀದನು ಹೋದ ಸ್ಥಳಗಳಲ್ಲೆಲ್ಲಾ ಕರ್ತನು ಅವನನ್ನು ಕಾಪಾಡಿ ದನು.
- Psalm 113:7–8 ಕೀರ್ತನೆಗಳು 113:7–8ಅಧಿಪತಿಗಳ ಸಂಗಡವೂ ತನ್ನ ಜನರ ಅಧಿಪತಿಗಳ ಸಂಗಡವೂ ಕುಳ್ಳಿರಿಸುವದಕ್ಕೆ, ಧೂಳಿನೊಳಗಿಂದ ದರಿದ್ರನನ್ನು ಏಳಮಾಡಿ ತಿಪ್ಪೆಯೊಳಗಿಂದ ಬಡವನನ್ನು ಎತ್ತುತ್ತಾನೆ.ಬಂಜೆಯಾದವಳನ್ನು ಮಕ್ಕಳ ಸಂತೋಷ ವುಳ್ಳ ತಾಯಿಯಾಗಿ ಮನೆಯಲ್ಲಿ ನಿವಾಸಿಸುವಂತೆ ಮಾಡುತ್ತಾನೆ ಕರ್ತನನ್ನು ಸ್ತುತಿಸಿರಿ.
- 2 Samuel 22:34–38 2 ಸಮುವೇಲನು 22:34–38ನನ್ನ ಕಾಲುಗಳನ್ನು ಜಿಂಕೆಗಳ ಹಾಗೆ ಮಾಡಿ ನನ್ನನ್ನು ಉನ್ನತ ಸ್ಥಳಗಳ ಮೇಲೆ ನಿಲ್ಲಿಸುತ್ತಾನೆ. ನನ್ನ ಕೈಗಳಿಗೆ ಯುದ್ಧ ಕಲಿಸುತ್ತಾನೆ. ನನ್ನ ತೋಳುಗಳು ಕಬ್ಬಿಣದ ಬಿಲ್ಲನ್ನು ಬೊಗ್ಗಿಸುತ್ತವೆ. ನೀನು ನಿನ್ನ ರಕ್ಷಣೆಯ ಗುರಾಣಿ ಯನ್ನು ನನಗೆ ಕೊಟ್ಟೆ; ನಿನ್ನ ಸೌಮ್ಯತೆಯು ನನ್ನನ್ನು ಹೆಚ್ಚಿಸಿತು. ನನ್ನ ಹೆಜ್ಜೆಗಳನ್ನು ನನ್ನ ಕೆಳಗೆ ವಿಶಾಲ ಮಾಡಿದ್ದರಿಂದ ನನ್ನ ಕಾಲುಗಳು ಜಾರಲಿಲ್ಲ. ನನ್ನ ಶತ್ರುಗಳನ್ನು ಹಿಂದಟ್ಟಿ ಅವರನ್ನು ನಾಶಮಾಡಿದೆನು; ಅವರನ್ನು ಸಂಹರಿಸಿಬಿಡುವ ವರೆಗೂ ನಾನು ಹಿಂತಿರು ಗಲಿಲ್ಲ.
- 2 Samuel 8:14 2 ಸಮುವೇಲನು 8:14ಎದೋಮಿ ನಲ್ಲಿ ಕಾವಲುದಂಡುಗಳನ್ನು ಇಟ್ಟನು. ಎಲ್ಲಾ ಎದೋಮಿ ನಲ್ಲಿ ಅವನು ಕಾವಲುದಂಡುಗಳನ್ನು ಇಟ್ಟದ್ದರಿಂದ ಎದೋಮ್ಯರೆಲ್ಲರೂ ದಾವೀದನಿಗೆ ದಾಸರಾದರು. ದಾವೀದನು ಹೋದಲ್ಲೆಲ್ಲಾ ಕರ್ತನು ಅವನನ್ನು ಕಾಪಾಡಿದನು.
- Genesis 12:2 ಆದಿಕಾಂಡ 12:2ನಾನು ನಿನ್ನನ್ನು ದೊಡ್ಡ ಜನಾಂಗವಾಗ ಮಾಡಿ ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರನ್ನು ದೊಡ್ಡ ದಾಗಿ ಮಾಡುವೆನು, ನೀನು ಆಶೀರ್ವಾದವಾಗಿರುವಿ.
- 2 Samuel 22:30 2 ಸಮುವೇಲನು 22:30ನಿನ್ನಿಂದ ಸೈನ್ಯದ ಮೇಲೆ ಬಿದ್ದೆನು; ನನ್ನ ದೇವರಿಂದ ಗೋಡೆ ನೆಗೆದನು.
- Psalm 89:23 ಕೀರ್ತನೆಗಳು 89:23ಇದ ಲ್ಲದೆ ಅವನ ಮುಂದೆ ವೈರಿಗಳನ್ನು ಹೊಡೆದು ಬಿಡು ವೆನು; ಅವನ ಹಗೆಯವರನ್ನು ಸಂಕಟಪಡಿಸುವೆನು.
- Luke 1:52 ಲೂಕನು 1:52ಬಲಿಷ್ಠ ರನ್ನು ಅವರ ಸ್ಥಾನಗಳಿಂದ ಕೆಳಗೆ ದೊಬ್ಬಿ ದೀನರನ್ನು ಮೇಲಕ್ಕೆ ಎತ್ತಿದ್ದಾನೆ.