2 Samuel · chapter 8 · verse 1
2 Samuel 8:1 in Kannada
ಇದಾದ ಮೇಲೆ ಏನಾಯಿತಂದರೆ, ದಾವೀದನು ಫಿಲಿಷ್ಟಿಯರನ್ನು ಹೊಡೆದು ಅವರನ್ನು ಅಣಗಿಸಿ ಅವರ ಕೈಯಿಂದ ಮೇತೆಗಮ್ಮವನ್ನು ತಕ್ಕೊಂಡನು.
Idaada mele enaayitandare, daaveedanu philishtiyarannu hodedu avarannu anagisi avara kaiyinda metegammavannu takkondanu.
2 Samuel 8:1 in English
- King James Version (KJV)
- And after this it came to pass, that David smote the Philistines, and subdued them: and David took Metheg-ammah out of the hand of the Philistines.
- World English Bible (WEB)
- After this, David struck the Philistines and subdued them; and David took the bridle of the mother city out of the hand of the Philistines.
- American Standard Version (ASV)
- And after this it came to pass, that David smote the Philistines, and subdued them: and David took the bridle of the mother city out of the hand of the Philistines.
- Bible in Basic English (BBE)
- And it came about after this that David made an attack on the Philistines and overcame them; and David took the authority of the mother-town from the hands of the Philistines.
- Darby Translation (DBY)
- And after this it came to pass that David smote the Philistines, and subdued them; and David took the power of the capital out of the hand of the Philistines.
- Webster's Bible (WBS)
- And after this it came to pass, that David smote the Philistines, and subdued them: and David took Metheg-ammah out of the hand of the Philistines.
- Young's Literal Translation (YLT)
- And it cometh to pass afterwards that David smiteth the Philistines, and humbleth them, and David taketh the bridle of the metropolis out of the hand of the Philistines.
Read in context
- 1ಇದಾದ ಮೇಲೆ ಏನಾಯಿತಂದರೆ, ದಾವೀದನು ಫಿಲಿಷ್ಟಿಯರನ್ನು ಹೊಡೆದು ಅವರನ್ನು ಅಣಗಿಸಿ ಅವರ ಕೈಯಿಂದ ಮೇತೆಗಮ್ಮವನ್ನು ತಕ್ಕೊಂಡನು.
- 2ಇದಲ್ಲದೆ ಅವನು ಮೋವಾಬ್ಯರನ್ನು ಹೊಡೆದು ಅವರನ್ನು ಹಗ್ಗದಿಂದ ಅಳೆದು ನೆಲಕ್ಕೆ ಬೀಳಮಾಡಿದನು; ಅವರನ್ನು ಕೊಲ್ಲುವದಕ್ಕೆ ಎರಡು ದಾರಗಳಿಂದ, ಜೀವದಲ್ಲಿಡುವದಕ್ಕೆ ಒಂದು ಪೂರ್ಣ ವಾದ ಹಗ್ಗದಿಂದ ಅಳೆದನು. ಹಾಗೆಯೇ ಮೋವಾಬ್ಯರು ದಾವೀದನಿಗೆ ದಾಸರಾಗಿ ಅವನಿಗೆ ಕಪ್ಪವನ್ನು ತಂದರು.
- 3ಇದಲ್ಲದೆ ಚೋಬದ ಅರಸನಾಗಿರುವ ರೆಹೋಬನ ಮಗನಾದ ಹದದೆಜೆರನು ತನ್ನ ಮೇರೆಯನ್ನು ಕಟ್ಟಿ ಕೊಳ್ಳುವದಕ್ಕೆ ಹೋದಾಗ
Cross references
- 1 Chronicles 18:1–17 1 ಪೂರ್ವಕಾಲವೃತ್ತಾಂತ 18:1–17ಇದರ ತರುವಾಯ ಏನಾಯಿತಂದರೆ, ದಾವೀದನು ಫಿಲಿಷ್ಟಿಯರನ್ನು ಹೊಡೆದು ಅವರನ್ನು ತಗ್ಗಿಸಿ ಗತ್ನ್ನೂ ಅದರ ಗ್ರಾಮಗಳನ್ನೂ ಫಿಲಿಷ್ಟಿಯರ ಕೈಯೊಳಗಿಂದ ತೆಗೆದುಕೊಂಡನು. ಹಾಗೆಯೇ ಅವನು ಮೋವಾಬ್ಯರನ್ನು ಸಂಹರಿಸಿ ದ್ದರಿಂದ ಮೋವಾಬ್ಯರು ದಾವೀದನಿಗೆ ಸೇವಕರಾಗಿ ಕಪ್ಪವನ್ನು ಕೊಡುವವರಾದರು. ಇದಲ್ಲದೆ ದಾವೀದನು ಯೂಫ್ರೇಟೀಸ್ ನದಿಯ ಬಳಿಯಲ್ಲಿ ತನ್ನ ಅಧಿಕಾರವನ್ನು ಸ್ಥಿರಪಡಿಸಲು ಹೋಗುತ್ತಿ ರುವಾಗ ಹಮಾತಿನ ಬಳಿಯಲ್ಲಿ ಚೋಬದ ಅರಸನಾದ ಹದರೆಜರನನ್ನು ಸಂಹರಿಸಿದನು. ದಾವೀದನು ಅವ ನಿಂದ ಸಾವಿರ ರಥಗಳನ್ನೂ ಏಳು ಸಾವಿರ ರಾಹುತ ರನ್ನೂ ಇಪ್ಪತ್ತು ಸಾವಿರ ಕಾಲಾಳುಗಳನ್ನೂ ತೆಗೆದು ಕೊಂಡನು. ದಾವೀದನು ನೂರು ರಥಗಳಿಗೆ ತಕ್ಕ ಕುದುರೆಗಳನ್ನು ಉಳಿಸಿ ಇತರ ಕುದುರೆಗಳ ಕಾಲುನರ ಗಳನ್ನು ಕೊಯಿಸಿ ಬಿಟ್ಟನು. ದಮಸ್ಕದ ಅರಾಮ್ಯರು ಚೋಬದ ಅರಸನಾದ ಹದರೆಜರನಿಗೆ ಸಹಾಯ ಕೊಡಲು ಬಂದಾಗ ದಾವೀದನು ಅರಾಮ್ಯರಲ್ಲಿ ಇಪ್ಪತ್ತೆರಡು ಸಾವಿರ ಮಂದಿಯನ್ನು ಸಂಹರಿಸಿಬಿಟ್ಟನು. ದಾವೀದನು ದಮಸ್ಕದ ಅರಾಮಿನಲ್ಲಿ ಠಾಣಗಳನ್ನು ಇಟ್ಟನು. ಅರಾಮ್ಯರು ದಾವೀದನಿಗೆ ಸೇವಕರಾಗಿ ಕಪ್ಪ ವನ್ನು ಕೊಡುವವರಾದರು. ದಾವೀದನು ಹೋದ ಸ್ಥಳಗಳಲ್ಲೆಲ್ಲಾ ಕರ್ತನು ಅವನನ್ನು ರಕ್ಷಿಸಿದನು. ಆಗ ದಾವೀದನು ಹದರೆಜರನ ಸೇವಕರಿಗುಂಟಾದ ಬಂಗಾ ರದ ಗುರಾಣಿಗಳನ್ನು ತೆಗೆದುಕೊಂಡು ಅವುಗಳನ್ನು ಯೆರೂಸಲೇಮಿಗೆ ತಂದನು. ಇದಲ್ಲದೆ ಹದರೆಜರನ ಪಟ್ಟಣಗಳಾದ ಟಭತಿನಿಂದಲೂ ಕೂನಿನಿಂದಲೂ ದಾವೀದನು ಅತ್ಯಧಿಕವಾಗಿ ತಾಮ್ರವನ್ನು ತಂದನು. ಅದರಿಂದ ಸೊಲೊಮೋನನು ತಾಮ್ರದ ಸಮುದ್ರ ವನ್ನೂ ಸ್ತಂಭಗಳನ್ನೂ ತಾಮ್ರದ ಪಾತ್ರೆಗಳನ್ನೂ ಮಾಡಿಸಿದನು. ಆದರೆ ಹಮಾತಿನ ಅರಸನಾದ ತೋವನಿಗೆ ಹದ ರೆಜರನ ಸಂಗಡ ಯುದ್ಧ ಉಂಟಾಗಿದ್ದದರಿಂದ ದಾವೀದನು ಹದರೆಜರನ ಸಮಸ್ತ ಸೈನ್ಯವನ್ನು ಹೊಡೆದ ವರ್ತಮಾನವನ್ನು ತೋವಿಗೆ ಮುಟ್ಟಿದಾಗ ಅರಸ ನಾದ ದಾವೀದನ ಕ್ಷೇಮ ಸಮಾಚಾರವನ್ನು ವಿಚಾರಿ ಸಲೂ ಹದರೆಜರನ ಸಂಗಡ ಯುದ್ಧ ಮಾಡಿ ಅವನನ್ನು ಹೊಡೆದದ್ದಕ್ಕೋಸ್ಕರ ಅವನನ್ನು ಆಶೀರ್ವದಿಸಲೂ ತೋವನು ತನ್ನ ಕುಮಾರನಾದ ಹದೋರಾಮನನ್ನು ಎಲ್ಲಾ ತರವಾದ ಬೆಳ್ಳಿ ಬಂಗಾರ ತಾಮ್ರದ ಪಾತ್ರೆಗಳು ಸಹಿತವಾಗಿ ಅವನ ಬಳಿಗೆ ಕಳುಹಿಸಿದನು. ಇವುಗಳನ್ನು ಅರಸನಾದ ದಾವೀದನು ಎದೋಮ್ಯರು ಮೋವಾಬ್ಯರು ಅಮ್ಮೋನನ ಮಕ್ಕಳು ಫಿಲಿಷ್ಟಿಯರು ಅಮಾಲೇಕ್ಯರು ಎಂಬ ಸಕಲ ಜನಾಂಗಗಳ ಬಳಿಯಿಂದ ತೆಗೆದುಕೊಂಡು ಬಂದ ಬೆಳ್ಳಿ ಬಂಗಾರವನ್ನು ಕರ್ತನಿಗೆ ಪ್ರತಿಷ್ಠೆಮಾಡಿದನು. ಇದಲ್ಲದೆ, ಚೆರೂಯಳ ಮಗನಾದ ಅಬ್ಷೈಯು ಉಪ್ಪಿನ ತಗ್ಗಿನಲ್ಲಿ ಎದೋಮ್ಯರೊಳಗೆ ಹದಿನೆಂಟು ಸಾವಿರ ಮಂದಿಯನ್ನು ಕೊಂದು ಎದೋಮಿನಲ್ಲಿ ಠಾಣ ಗಳನ್ನು ಇಟ್ಟನು. ಎದೋಮ್ಯರೆಲ್ಲರೂ ದಾವೀದನ ಸೇವಕರಾದರು. ದಾವೀದನು ಎಲ್ಲಿ ಹೋದನೋ ಅಲ್ಲಿ ಕರ್ತನು ಅವನನ್ನು ರಕ್ಷಿಸಿದನು. ಹೀಗೆಯೇ ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಆಳುತ್ತಾ, ತನ್ನ ಸಮಸ್ತ ಜನರಿಗೆ ನ್ಯಾಯವನ್ನೂ ನೀತಿಯನ್ನೂ ನಡಿಸಿದನು. ಚೆರೂಯಳ ಮಗನಾದ ಯೋವಾಬನು ಸೈನ್ಯಾಧಿಪತಿಯಾಗಿದ್ದನು; ಅಹೀಲೂ ದನ ಮಗನಾದ ಯೆಹೋಷಾಫಾಟನು ಲೇಖಕ ನಾಗಿದ್ದನು. ಅಹೀಟೂಬನ ಮಗನಾದ ಚಾದೋ ಕನೂ ಎಬ್ಯಾತಾರನ ಮಗನಾದ ಅಬೀಮೆಲೆಕನೂ ಯಾಜಕರಾಗಿದ್ದರು.ಶವ್ಷನು ಶಾಸ್ತ್ರಿಯಾಗಿದ್ದನು. ಯೆಹೋಯಾದನ ಮಗನಾದ ಬೆನಾಯನು ಕೆರೇತ್ಯರ ಮೇಲೆಯೂ ಪೆಲೇತ್ಯರ ಮೇಲೆಯೂ ಅಧಿಪತಿ ಯಾಗಿದ್ದನು. ದಾವೀದನ ಮಕ್ಕಳು ಅರಸನ ಬಳಿಯಲ್ಲಿ ಮುಖ್ಯಸ್ಥರಾಗಿದ್ದರು. ಶವ್ಷನು ಶಾಸ್ತ್ರಿಯಾಗಿದ್ದನು. ಯೆಹೋಯಾದನ ಮಗನಾದ ಬೆನಾಯನು ಕೆರೇತ್ಯರ ಮೇಲೆಯೂ ಪೆಲೇತ್ಯರ ಮೇಲೆಯೂ ಅಧಿಪತಿ ಯಾಗಿದ್ದನು. ದಾವೀದನ ಮಕ್ಕಳು ಅರಸನ ಬಳಿಯಲ್ಲಿ ಮುಖ್ಯಸ್ಥರಾಗಿದ್ದರು.
- 2 Samuel 7:9 2 ಸಮುವೇಲನು 7:9ನೀನು ಎಲ್ಲಿ ಹೋದರೂ ಅಲ್ಲಿ ನಿನ್ನ ಕೂಡ ಇದ್ದು ನಿನ್ನ ಶತ್ರುಗಳೆಲ್ಲರನ್ನು ನಿನ್ನ ಮುಂದೆ ಕಡಿದುಬಿಟ್ಟು ಭೂಮಿಯಲ್ಲಿರುವ ದೊಡ್ಡವರ ಹೆಸರಿನ ಹಾಗೆ ದೊಡ್ಡ ಹೆಸರನ್ನು ನಿನಗೆ ಉಂಟುಮಾಡಿದೆನು.
- 2 Samuel 2:24 2 ಸಮುವೇಲನು 2:24ಆದರೆ ಯೋವಾ ಬನೂ ಅಬಿಷೈಯೂ ಅಬ್ನೇರನನ್ನು ಹಿಂದಟ್ಟಿ ಸೂರ್ಯಅಸ್ತಮಿಸುವ ವರೆಗೆ ಗಿಬ್ಯೋನಿನ ಅರಣ್ಯ ಮಾರ್ಗದ ಅಂಚಾದ ಗೀಯಕ್ಕೆ ಎದುರಾಗಿರುವ ಅಮ್ಮಾ ಎಂಬ ಗುಡ್ಡದ ಮಟ್ಟಿಗೂ ಬಂದರು.
- 2 Samuel 21:15–22 2 ಸಮುವೇಲನು 21:15–22ಫಿಲಿಷ್ಟಿಯರು ತಿರಿಗಿ ಇಸ್ರಾಯೇಲ್ಯರ ಮೇಲೆ ಯುದ್ಧಮಾಡಿದರು. ಆಗ ದಾವೀದನೂ ಅವನ ಸಂಗಡ ಇದ್ದ ಅವನ ಸೇವಕರೂ ಹೋಗಿ ಫಿಲಿಷ್ಟಿಯರ ಸಂಗಡ ಯುದ್ಧಮಾಡಿದರು; ಆದರೆ ದಾವೀದನು ದಣಿದು ಹೋದನು. ಆಗ ಮುನ್ನೂರು ಶೇಕೆಲ ತೂಕವಾದ ಹಿತ್ತಾಳೆಯ ಈಟಿಯುಳ್ಳವನಾಗಿ ಹೊಸ ಕತ್ತಿಯನ್ನು ನಡುವಿನಲ್ಲಿ ಕಟ್ಟಿಕೊಂಡಿರುವ ಮಹಾ ಶರೀರದವನ ಮಕ್ಕಳಲ್ಲಿ ಇಷ್ಬೀಬೆನೋಬ್ನು ದಾವೀದ ನನ್ನು ಕೊಲ್ಲಬೇಕೆಂದಿದ್ದನು. ಆದರೆ ಚೆರೂಯಳ ಮಗನಾದ ಅಬೀಷೈಯು ಅವನಿಗೆ ಸಹಾಯವಾಗಿ ಬಂದು ಫಿಲಿಷ್ಟಿಯನನ್ನು ಹೊಡೆದು ಕೊಂದುಹಾಕಿ ದನು. ಆಗ ದಾವೀದನ ಜನರು ಅವನಿಗೆ--ನೀನು ಇಸ್ರಾಯೇಲಿನ ಬೆಳಕನ್ನು ಆರಿಸಿಬಿಡದ ಹಾಗೆ ಇನ್ನು ಮೇಲೆ ನಮ್ಮ ಸಂಗಡ ಯುದ್ಧಕ್ಕೆ ಹೊರಡಬೇಡ ಎಂದು ಅವನಿಗೆ ಆಣೆಯಿಟ್ಟರು. ತರುವಾಯ ತಿರಿಗಿ ಫಿಲಿಷ್ಟಿಯರ ಸಂಗಡ ಗೋಬಿ ನಲ್ಲಿ ಯುದ್ಧ ಉಂಟಾಯಿತು. ಆಗ ಹುಷಾತನಾದ ಸಿಬ್ಬೆಕೈನು ಮಹಾಶರೀರದವನ ಮಕ್ಕಳಲ್ಲಿ ಸಫ್ ಎಂಬವನನ್ನು ಕೊಂದನು. ತಿರಿಗಿ ಫಿಲಿಷ್ಟಿಯರ ಸಂಗಡ ಗೋಬಿನಲ್ಲಿ ಯುದ್ಧ ಉಂಟಾದಾಗ ಬೇತ್ಲೆಹೇಮಿನವನಾದ ಯಾರೇಯೋರೆ ಗೀಮ್ ಎಂಬವನ ಮಗನಾಗಿರುವ ಎಲ್ಹಾನಾನನು ಗಿತ್ತಿಯನಾದ ಗೊಲ್ಯಾತನ ಸಹೋದರನನ್ನು ಕೊಂದನು. ಈ ಗೊಲ್ಯಾತನ ಈಟಿಯ ಕಟ್ಟಿಗೆಯು ನೆಯ್ಯುವವರ ದೋಣೀ ಮರಕ್ಕೆ ಸಮಾನವಾಗಿತ್ತು. ಗತ್ ಊರಿನಲ್ಲಿ ಯುದ್ಧ ಉಂಟಾದಾಗ ಅಲ್ಲಿ ಎತ್ತರವಾದ ಒಬ್ಬ ಮನುಷ್ಯನಿದ್ದನು; ಅವನ ಕೈಕಾಲುಗಳ ಬೆರಳುಗಳು ಆರು ಆರಾಗಿ ಲೆಖ್ಖದಲ್ಲಿ ಇಪ್ಪತ್ತು ನಾಲ್ಕು ಆಗಿದ್ದವು. ಇವನು ಸಹ ಮಹಾಶರೀರದವನಿಗೆ ಹುಟ್ಟಿ ದನು. ಅವನು ಇಸ್ರಾಯೇಲನ್ನು ನಿಂದಿಸಿದ್ದರಿಂದ ದಾವೀದನ ಸಹೋದರನಾಗಿರುವ ಶಿಮ್ಮನ ಮಗ ನಾದ ಯೋನಾತಾನನು ಅವನನ್ನು ಕೊಂದುಬಿಟ್ಟನು.ಈ ನಾಲ್ಕು ಮಂದಿಯು ಗತ್ ಊರಿನಲ್ಲಿದ್ದ ಮಹಾಶರೀರದವನಿಗೆ ಹುಟ್ಟಿದ್ದರು; ಇವರು ದಾವೀದ ನಿಂದಲೂ ಅವನ ಸೇವಕರಿಂದಲೂ ಸಂಹಾರವಾದರು. ಈ ನಾಲ್ಕು ಮಂದಿಯು ಗತ್ ಊರಿನಲ್ಲಿದ್ದ ಮಹಾಶರೀರದವನಿಗೆ ಹುಟ್ಟಿದ್ದರು; ಇವರು ದಾವೀದ ನಿಂದಲೂ ಅವನ ಸೇವಕರಿಂದಲೂ ಸಂಹಾರವಾದರು.
Original words (Hebrew)
- after · H310אַחַר ʼachar
- David · H1732דָּוִד Dâvid
- smote · H5221נָכָה nâkâh
- Philistines · H6430פְּלִשְׁתִּי Pᵉlishtîy
- subdued · H3665כָּנַע kânaʻ
- David · H1732דָּוִד Dâvid
- took · H3947לָקַח lâqach
- Metheg-ammah · H4965מֶתֶג הָאַמָּה Metheg hâ-ʼAmmâh
- hand · H3027יָד yâd
- Philistines · H6430פְּלִשְׁתִּי Pᵉlishtîy