2 Thessalonians · chapter 2 · verse 12
2 Thessalonians 2:12 in Kannada
ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದಪಡುವವರೆಲ್ಲರೂ ಈ ಪ್ರಕಾರ ತೀರ್ಪಿಗೆ ಒಳಗಾಗುವರು.
Satyavannu nambade aneetiyalli aanandapaduvavarellaroo ee prakaara teerpige olagaaguvaru.
2 Thessalonians 2:12 in English
- King James Version (KJV)
- That they all might be damned who believed not the truth, but had pleasure in unrighteousness.
- World English Bible (WEB)
- that they all might be judged who didn’t believe the truth, but had pleasure in unrighteousness.
- American Standard Version (ASV)
- that they all might be judged who believed not the truth, but had pleasure in unrighteousness.
- Bible in Basic English (BBE)
- So that they all may be judged, who had no faith in what is true, but took pleasure in evil.
- Darby Translation (DBY)
- that all might be judged who have not believed the truth, but have found pleasure in unrighteousness.
- Webster's Bible (WBS)
- That they all may be damned who believed not the truth, but had pleasure in unrighteousness.
- Young's Literal Translation (YLT)
- that they may be judged — all who did not believe the truth, but were well pleased in the unrighteousness.
Read in context
- 10ದುರ್ನೀತಿಯ ಎಲ್ಲಾ ವಂಚನೆ ಯಿಂದಲೂ ಕೂಡಿ ನಾಶವಾಗುವವರಲ್ಲಿ ಸಂಭವಿಸು ವದು; ಅವರು ಪ್ರೀತಿಯ ಸತ್ಯವನ್ನು ಅಂಗೀಕರಿಸದ ಕಾರಣ ರಕ್ಷಣೆಯನ್ನು ಹೊಂದುವದಿಲ್ಲ.
- 11ಇದೇ ಕಾರಣದಿಂದ ದೇವರು ಬಲವಾದ ಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಅವರು ಆ ಸುಳ್ಳನ್ನು ನಂಬುವಂತೆ ಮಾಡುತ್ತಾನೆ.
- 12ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದಪಡುವವರೆಲ್ಲರೂ ಈ ಪ್ರಕಾರ ತೀರ್ಪಿಗೆ ಒಳಗಾಗುವರು.
- 13ಕರ್ತನಿಗೆ ಪ್ರಿಯರಾಗಿರುವ ಸಹೊದರರೇ, ನೀವು ಆತ್ಮನಿಂದ ಶುದ್ಧೀಕರಿಸಲ್ಪಟ್ಟವರಾಗಿ ಸತ್ಯದ ಮೇಲೆ ನಂಬಿಕೆಯನ್ನಿಟ್ಟು ರಕ್ಷಣೆಯನ್ನು ಪಡೆಯುವದಕ್ಕಾಗಿ ದೇವರು ನಿಮ್ಮನ್ನು ಆದಿಯಿಂದ ಆರಿಸಿಕೊಂಡದ್ದರಿಂದ ನಾವು ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಕೃತಜ್ಞತಾಸ್ತುತಿ ಮಾಡುವದಕ್ಕೆ ಬದ್ದರಾಗಿದ್ದೇವೆ
- 14ನಮ್ಮ ಕರ್ತನಾದ ಯೇಸು ಕ್ರಿಸ್ತನ ಪ್ರಭಾವವನ್ನು ಹೊಂದಿ ಕೊಳ್ಳಬೇಕೆಂದು ದೇವರು ನಮ್ಮ ಸುವಾರ್ತೆಯ ಮೂಲಕವಾಗಿ ನಿಮ್ಮನ್ನು ಅದಕ್ಕೆ ಕರೆದನು.
Cross references
- Romans 1:32 ರೋಮಾಪುರದವರಿಗೆ 1:32ಇಂಥವುಗಳನ್ನು ಮಾಡುವವರು ಮರಣಕ್ಕೆ ಯೋಗ್ಯರೆಂಬ ದೇವರ ನ್ಯಾಯತೀರ್ಪನ್ನು ಅವರು ತಿಳಿದವರಾಗಿದ್ದರೂ ಅವು ಗಳನ್ನು ಮಾಡುವದಲ್ಲದೆ ಅಂಥವುಗಳನ್ನು ಮಾಡುವವ ರಲ್ಲಿ ಸಂತೋಷಪಡುತ್ತಾರೆ.
- Romans 8:7–8 ರೋಮಾಪುರದವರಿಗೆ 8:7–8ಶರೀರ ಸಂಬಂಧವಾದ ಮನಸ್ಸು ದೇವರಿಗೆ ಶತ್ರುತ್ವವು; ಕಾರಣವೇನಂದರೆ ಅಂಥ ಮನಸ್ಸು ದೇವರ ನಿಯಮಕ್ಕೆ ಒಳಪಡುವದಿಲ್ಲ, ಒಳಪಡುವದಕ್ಕಾಗುವದೂ ಇಲ್ಲ. ಹೀಗಿರಲಾಗಿ ಶರೀರಾಧೀನರು ದೇವರನ್ನು ಮೆಚ್ಚಿಸಲಾರರು.
- Mark 16:16 ಮಾರ್ಕನು 16:16ನಂಬಿ ಬಾಪ್ತಿಸ್ಮ ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು. ಆದರೆ ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು.
- Romans 2:8 ರೋಮಾಪುರದವರಿಗೆ 2:8ಕಲಹಪ್ರಿಯ ರಾಗಿದ್ದು ಸತ್ಯಕ್ಕೆ ವಿಧೇಯರಾಗದೆ ಅನೀತಿಗೆ ವಿಧೇಯ ರಾಗಿ
- 1 Thessalonians 5:9 1 ಥೆಸಲೊನೀಕದವರಿಗೆ 5:9ಯಾಕಂದರೆ ದೇವರು ನಮ್ಮನ್ನು ಕೋಪಕ್ಕೆ ಗುರಿಯಾಗುವಂತೆ ನೇಮಿಸದೆ ನಾವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕವಾಗಿ ರಕ್ಷಣೆಯನ್ನು ಹೊಂದುವಂತೆ ನೇಮಿಸಿದನು.
- Psalm 11:5 ಕೀರ್ತನೆಗಳು 11:5ಕರ್ತನು ನೀತಿ ವಂತನನ್ನು ಶೋಧಿಸುತ್ತಾನೆ; ಆದರೆ ದುಷ್ಟನನ್ನೂ ಬಲಾತ್ಕಾರ ಪ್ರಿಯನನ್ನೂ ಆತನ ಪ್ರಾಣವು ಹಗೆ ಮಾಡುತ್ತದೆ.
- John 3:36 ಯೋಹಾನನು 3:36ಮಗನ ಮೇಲೆ ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು; ಯಾವನು ಮಗನನ್ನು ನಂಬುವದಿಲ್ಲವೋ ಅವನು ಜೀವವನ್ನು ಕಾಣುವದಿಲ್ಲ; ಆದರೆ ದೇವರ ಕೋಪವು ಅವನ ಮೇಲೆ ನೆಲೆಗೊಂಡಿದೆ ಅಂದನು.
- 2 Peter 2:13–15 2 ಪೇತ್ರನು 2:13–15ತಮ್ಮ ದುರ್ನೀತಿಗೆ ಸರಿಯಾದ ದುಷ್ಪಲವನ್ನು ಹೊಂದುವರು. ದುಂದುಗಾರಿಕೆಯಲ್ಲಿ ಹಗಲನ್ನು ಕಳೆಯುವದೇ ಸುಖವೆಂದೆಣಿಸುತ್ತಾರೆ. ಇವರು ನಿಮ್ಮ ಸಂಗಡ ಸೇರಿ ಔತಣ ಮಾಡುತ್ತಿರುವಾಗ ವಂಚಕ ರಾಗಿದ್ದು ಕಳಂಕಕ್ಕೂ ನಿಂದೆಗೂ ಕಾರಣರಾಗಿದ್ದಾರೆ. ಇವರು ಜಾರತ್ವದಿಂದ ತುಂಬಿದ ಮತ್ತು ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರೂ ಚಪಲ ಚಿತ್ತರನ್ನು ಮರುಳು ಗೊಳಿಸುವವರೂ ಲೋಭಗಳಲ್ಲಿ ತೇರ್ಗಡೆ ಹೊಂದಿದ ಹೃದಯವುಳ್ಳವರೂ ಶಾಪದ ಮಕ್ಕಳೂ ಆಗಿದ್ದಾರೆ. ಇವರು ನೀಟಾದ ಮಾರ್ಗವನ್ನು ಬಿಟ್ಟು ಬೆಯೋರನ ಮಗನಾದ ಬಿಳಾಮನ ಮಾರ್ಗವನ್ನು ಹಿಡಿದು ತಪ್ಪಿಹೋಗಿದ್ದಾರೆ. ಈ ಬಿಳಾಮನು ಅನೀತಿಯಿಂದ ದೊರಕುವ ಸಂಬಳವನ್ನು ಪ್ರೀತಿಸಿದನು.
- Hosea 7:3 ಹೋಶೇಯ 7:3ಅವರು ತಮ್ಮ ಕೆಟ್ಟತನದಿಂದ ಅರಸನನ್ನೂ ಸುಳ್ಳುಗ ಳಿಂದ ಪ್ರಧಾನರನ್ನೂ ಸಂತೋಷಪಡಿಸುತ್ತಾರೆ.
- John 3:19–21 ಯೋಹಾನನು 3:19–21ಆ ತೀರ್ಪು ಏನಂದರೆ, ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕ್ರಿಯೆಗಳು ಕೆಟ್ಟವುಗಳಾ ಗಿರುವದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಪ್ರೀತಿ ಮಾಡಿದರು. ಕೆಟ್ಟದ್ದನ್ನು ಮಾಡುವ ಪ್ರತಿ ಯೊಬ್ಬನು ತನ್ನ ಕೃತ್ಯಗಳು ಖಂಡಿಸಲ್ಪಟ್ಟಾವೆಂದು ಬೆಳಕನ್ನು ಹಗೆಮಾಡುತ್ತಾನೆ ಮತ್ತು ಬೆಳಕಿಗೆ ಬರುವದಿಲ್ಲ. ಆದರೆ ಸತ್ಯವನ್ನು ಅನುಸರಿಸುವವನು ತನ್ನ ಕೃತ್ಯಗಳು ದೇವರಿಂದ ಮಾಡಲ್ಪಟ್ಟವುಗಳೆಂದು ಪ್ರಕಟವಾಗು ವಂತೆ ಬೆಳಕಿಗೆ ಬರುತ್ತಾನೆ ಎಂದು ಹೇಳಿದನು.
- Romans 12:9 ರೋಮಾಪುರದವರಿಗೆ 12:9ಪ್ರೀತಿಯು ನಿಷ್ಕಪಟವಾಗಿರಲಿ ಕೆಟ್ಟತನವನ್ನು ಹೇಸಿ ಕೊಂಡು ಒಳ್ಳೆಯದಕ್ಕೆ ಅಂಟಿಕೊಳ್ಳಿರಿ.
- Jude 1:4–5 ಯೂದನು 1:4–5ಯಾಕಂದರೆ ಭಕ್ತಿಹೀನರೂ ನಮ್ಮ ದೇವರ ಕೃಪೆಯನ್ನು ನೆವ ಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡಿಸುವವರೂ ನಮ್ಮ ಒಬ್ಬನೇ ಕರ್ತನಾದ ದೇವರನ್ನು ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ಅಲ್ಲಗಳೆಯುವ ಈ ಕೆಲವು ಜನರು ರಹಸ್ಯವಾಗಿ ಒಳಗೆ ಹೊಕ್ಕಿದ್ದಾರೆ; ಇವರು ಈ ದಂ ನೀವು ಇದನ್ನು ಒಂದು ಸಾರಿ ತಿಳಿದವರಾಗಿದ್ದರೂ ನಾನು ಅದನ್ನೇ ನಿಮ್ಮ ಜ್ಞಾಪಕಕ್ಕೆ ತರಬೇಕೆಂದು ಅಪೇಕ್ಷಿಸುತ್ತೇನೆ. ಅದು ಯಾವದಂದರೆ--ಕರ್ತನು (ತನ್ನ) ಪ್ರಜೆಯನ್ನು ಐಗುಪ್ತದೇಶದೊಳಗಿಂದ ರಕ್ಷಿಸಿ ದರೂ ತರುವಾಯ ಅವರೊಳಗೆ ನಂಬದೆ ಹೋದ ವರನ್ನು ಸಂಹಾರ ಮಾಡಿದನು.