2 Timothy · chapter 3 · verse 4
2 Timothy 3:4 in Kannada
ದ್ರೋಹಿಗಳೂ ದುಡಿಕಿನವರೂ ಉಬ್ಬಿಕೊಂಡವರೂ ದೇವರಿಗಿಂತ ಹೆಚ್ಚಾಗಿ ಭೋಗಗಳನ್ನೇ ಪ್ರೀತಿಸುವವರೂ
Drohigaloo dudikinavaroo ubbikondavaroo devariginta hechchaagi bhogagalanne preetisuvavaroo
2 Timothy 3:4 in English
- King James Version (KJV)
- Traitors, heady, highminded, lovers of pleasures more than lovers of God;
- World English Bible (WEB)
- traitors, headstrong, conceited, lovers of pleasure rather than lovers of God,
- American Standard Version (ASV)
- traitors, headstrong, puffed up, lovers of pleasure rather than lovers of God;
- Bible in Basic English (BBE)
- False to their friends, acting without thought, lifted up in mind, loving pleasure more than God;
- Darby Translation (DBY)
- traitors, headlong, of vain pretensions, lovers of pleasure rather than lovers of God;
- Webster's Bible (WBS)
- Traitors, heady, high-minded, lovers of pleasures more than lovers of God;
- Young's Literal Translation (YLT)
- traitors, heady, lofty, lovers of pleasure more than lovers of God,
Read in context
- 2ಮನುಷ್ಯರು ತಮ್ಮನ್ನು ತಾವೇ ಪ್ರೀತಿಸಿ ಕೊಳ್ಳುವವರೂ ಲೋಭಿಗಳೂ ಬಡಾಯಿ ಕೊಚ್ಚುವ ವರೂ ಅಹಂಕಾರಿಗಳೂ ದೇವದೂಷಕರೂ ತಂದೆ ತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ಅಶುದ್ಧರೂ
- 3ಸ್ವಾಭಾವಿಕವಾದ ಮಮತೆಯಿಲ್ಲದವರೂ ಒಪ್ಪಂದವನ್ನು ಮುರಿಯುವವರೂ ಸುಳ್ಳಾಗಿ ದೂರು ವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೆಯವರನ್ನೂ ಹೀನೈಸುವವರೂ
- 4ದ್ರೋಹಿಗಳೂ ದುಡಿಕಿನವರೂ ಉಬ್ಬಿಕೊಂಡವರೂ ದೇವರಿಗಿಂತ ಹೆಚ್ಚಾಗಿ ಭೋಗಗಳನ್ನೇ ಪ್ರೀತಿಸುವವರೂ
- 5ಭಕ್ತಿಯ ವೇಷವಿದ್ದು ಅದರ ಬಲವನ್ನು ಅಲ್ಲಗಳೆಯುವವರೂ ಆಗಿರುವರು; ಇಂಥವರಿಂದ ಪ್ರತ್ಯೇಕವಾಗಿರು.
- 6ಮನೆ ಗಳಲ್ಲಿ ನುಸುಳಿ ಪಾಪಗಳಿಂದ ತುಂಬಿದವರೂ ನಾನಾ ವಿಧವಾದ ಇಚ್ಛೆಗಳಿಂದ ನಡಿಸಲ್ಪಟ್ಟವರೂ ಆಗಿರುವ ಅವಿವೇಕಿಗಳಾದ ಸ್ತ್ರೀಯರನ್ನು ವಶಮಾಡಿಕೊಳ್ಳು ವವರೂ ಇವರೊಳಗೆ ಸೇರಿದವರೇ.
Cross references
- 1 Timothy 3:6 1 ತಿಮೊಥೆಯನಿಗೆ 3:6ಅವನು ಹೊಸಬನಾಗಿರಬಾರದು; ಅಂಥ ವನಾದರೆ ಉಬ್ಬಿಕೊಂಡು ಸೈತಾನನ ಶಿಕ್ಷಾವಿಧಿಗೆ ಒಳಗಾಗುವನು.
- Jude 1:4 ಯೂದನು 1:4ಯಾಕಂದರೆ ಭಕ್ತಿಹೀನರೂ ನಮ್ಮ ದೇವರ ಕೃಪೆಯನ್ನು ನೆವ ಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡಿಸುವವರೂ ನಮ್ಮ ಒಬ್ಬನೇ ಕರ್ತನಾದ ದೇವರನ್ನು ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ಅಲ್ಲಗಳೆಯುವ ಈ ಕೆಲವು ಜನರು ರಹಸ್ಯವಾಗಿ ಒಳಗೆ ಹೊಕ್ಕಿದ್ದಾರೆ; ಇವರು ಈ ದಂ
- Philippians 3:18–19 ಫಿಲಿಪ್ಪಿಯವರಿಗೆ 3:18–19(ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ; ಅವರ ವಿಷಯದಲ್ಲಿ ನಾನು ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ ಅಳುತ್ತಾ ಹೇಳುತ್ತೇನೆ. ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು, ನಾಚಿಕೆ ಕೆಲಸಗಳಲ್ಲಿಯೇ ಅವರ ಗೌರವವು. ಅವರು ಭೂಸಂಬಂಧವಾದವುಗಳ ಮೇಲೆ ಮನಸ್ಸಿಡುತ್ತಾರೆ.)
- 2 Peter 2:10–22 2 ಪೇತ್ರನು 2:10–22ಆದರೆ ಮುಖ್ಯವಾಗಿ ಬಂಡು ತನದ ದುರಾಶೆಯಲ್ಲಿ ಶರೀರಾನುಸಾರ ನಡೆದು ಪ್ರಭುತ್ವವನ್ನು ತಿರಸ್ಕಾರ ಮಾಡುವವರನ್ನು ಹೀಗೆ ಶಿಕ್ಷಿಸುವನು. ಇವರು ಯಾರಿಗೂ ಹೆದರದೆ ಸ್ವೇಚ್ಛಾಪರರಾಗಿದ್ದಾರೆ; ದುರಹಂಕಾರದಿಂದ ಗೌರವವುಳ್ಳವರನ್ನು ದೂಷಿಸುತ್ತಾರೆ. ದೂತರು ಬಲದಲ್ಲಿಯೂ ಮಹತ್ತಿನಲ್ಲಿಯೂ ಶ್ರೇಷ್ಠರಾಗಿದ್ದರೂ ಕರ್ತನ ಮುಂದೆ ಗೌರವವುಳ್ಳವರಿಗೆ ವಿರೋಧವಾಗಿ ನಿಂದೆಯನ್ನೂ ದೂಷಣೆಯನ್ನೂ ತರು ವದಿಲ್ಲ. ಆದರೆ ಹಿಡಿಯಲ್ಪಟ್ಟು ನಾಶವಾಗುವದಕ್ಕೆ ಹುಟ್ಟಿರುವ ವಿವೇಕ ಶೂನ್ಯ ಮೃಗಗಳಂತಿರುವ ಈ ದುರ್ಮಾರ್ಗಿಗಳು ತಮಗೆ ತಿಳಿಯದವುಗಳ ವಿಷಯ ವಾಗಿ ದೂಷಣೆ ಹೇಳುವವರಾಗಿದ್ದಾರೆ; ಇವರು ತಮ್ಮ ಕೆಟ್ಟತನದಿಂದ ಸಂಪೂರ್ಣ ನಾಶವಾಗುವವರಾಗಿ ತಮ್ಮ ದುರ್ನೀತಿಗೆ ಸರಿಯಾದ ದುಷ್ಪಲವನ್ನು ಹೊಂದುವರು. ದುಂದುಗಾರಿಕೆಯಲ್ಲಿ ಹಗಲನ್ನು ಕಳೆಯುವದೇ ಸುಖವೆಂದೆಣಿಸುತ್ತಾರೆ. ಇವರು ನಿಮ್ಮ ಸಂಗಡ ಸೇರಿ ಔತಣ ಮಾಡುತ್ತಿರುವಾಗ ವಂಚಕ ರಾಗಿದ್ದು ಕಳಂಕಕ್ಕೂ ನಿಂದೆಗೂ ಕಾರಣರಾಗಿದ್ದಾರೆ. ಇವರು ಜಾರತ್ವದಿಂದ ತುಂಬಿದ ಮತ್ತು ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರೂ ಚಪಲ ಚಿತ್ತರನ್ನು ಮರುಳು ಗೊಳಿಸುವವರೂ ಲೋಭಗಳಲ್ಲಿ ತೇರ್ಗಡೆ ಹೊಂದಿದ ಹೃದಯವುಳ್ಳವರೂ ಶಾಪದ ಮಕ್ಕಳೂ ಆಗಿದ್ದಾರೆ. ಇವರು ನೀಟಾದ ಮಾರ್ಗವನ್ನು ಬಿಟ್ಟು ಬೆಯೋರನ ಮಗನಾದ ಬಿಳಾಮನ ಮಾರ್ಗವನ್ನು ಹಿಡಿದು ತಪ್ಪಿಹೋಗಿದ್ದಾರೆ. ಈ ಬಿಳಾಮನು ಅನೀತಿಯಿಂದ ದೊರಕುವ ಸಂಬಳವನ್ನು ಪ್ರೀತಿಸಿದನು. ಆದರೆ ಅವನ ದುಷ್ಟತ್ವಕ್ಕೆ ಖಂಡನೆಯಾಯಿತು; ಮೂಕ ಕತ್ತೆಯು ಮನುಷ್ಯ ಸ್ವರದಿಂದ ಮಾತನಾಡಿ ಆ ಪ್ರವಾದಿಯ ಹುಚ್ಚುತನಕ್ಕೆ ಅಡ್ಡಿ ಮಾಡಿತು. ಇವರು ನೀರಿಲ್ಲದ ಭಾವಿಗಳೂ ಬಿರುಗಾಳಿಯಿಂದ ಬಡಿಸಿಕೊಂಡು ಹಾರಿ ಹೋಗುವ ಮೇಘಗಳೂ ಆಗಿದ್ದಾರೆ. ಇಂಥವರ ಪಾಲಿಗೆ ನಿರಂತರವಾದ ಕಾರ್ಗತ್ತಲು ಇಟ್ಟಿರುವದು. ತಪ್ಪಾದ ಮಾರ್ಗದಲ್ಲಿ ಜೀವಿಸುವವರಿಂದ ಸಂಪೂರ್ಣವಾಗಿ ತಪ್ಪಿಸಿಕೊಂಡವರ ಸಂಗಡ ಇವರು ಹುರುಳಿಲ್ಲದ ದೊಡ್ಡ ದೊಡ್ಡ ಮಾತುಗಳನ್ನಾಡಿ ಶರೀರದ ದುರಾಶೆಗಳನ್ನು ಹುಟ್ಟಿಸಿ ಹೆಚ್ಚಾದ ಬಂಡುತನದಿಂದ ಅವರನ್ನು ಮರುಳುಗೊಳಿಸುತ್ತಾರೆ. ಇಂಥವರು ಸ್ವಾತಂತ್ರ್ಯ ಕೊಡುತ್ತೇವೆಂದು ಅವರಿಗೆ ವಾಗ್ದಾನ ಮಾಡುತ್ತಾರೆ, ಆದರೆ ತಾವೇ ಕೆಟ್ಟತನದ ದಾಸತ್ವ ದೊಳಗಿದ್ದಾರೆ. ಯಾಕಂದರೆ ಒಬ್ಬನು ಯಾವದಕ್ಕೆ ಸೋತು ಹೋಗಿರುವನೊ? ಅವನು ಅದರ ದಾಸತ್ವ ದೊಳಗಿರುವನಷ್ಟೆ. ರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ವಿಷಯವಾದ ಜ್ಞಾನಹೊಂದಿ ಲೋಕದ ಮಲಿನತ್ವ ಗಳಿಗೆ ತಪ್ಪಿಸಿಕೊಂಡವರು ತಿರಿಗಿ ಅವುಗಳಲ್ಲಿ ಸಿಕ್ಕಿ ಕೊಂಡು ಸೋತುಹೋದರೆ ಅವರ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿದೆ. ಅವರು ನೀತಿ ಮಾರ್ಗ ವನ್ನು ತಿಳಿದು ತಮಗೆ ಕೊಡಲ್ಪಟ್ಟ ಪರಿಶುದ್ಧ ಆಜ್ಞೆಯಿಂದ ತೊಲಗಿ ಹೋಗುವದಕ್ಕಿಂತ ಆ ಮಾರ್ಗವನ್ನು ತಿಳಿಯದೆ ಇದ್ದಿದ್ದರೆ ಮೇಲಾಗಿತ್ತು.ನಾಯಿ ತಾನು ಕಕ್ಕಿದ್ದನ್ನು ನೆಕ್ಕುವದಕ್ಕೆ ತಿರುಗಿ ಕೊಂಡಿತು ಮತ್ತು ತೊಳೆದ ಹಂದಿ ಕೆಸರಿನಲ್ಲಿ ಹೊರಳಾಡುವದಕ್ಕೆ ತಿರುಗಿಕೊಂಡಿತು ಎಂಬ ನಿಜವಾದ ಗಾದೆಗೆ ಸರಿಯಾಗಿ ಅವರಿಗೆ ಸಂಭವಿಸಿತು. ನಾಯಿ ತಾನು ಕಕ್ಕಿದ್ದನ್ನು ನೆಕ್ಕುವದಕ್ಕೆ ತಿರುಗಿ ಕೊಂಡಿತು ಮತ್ತು ತೊಳೆದ ಹಂದಿ ಕೆಸರಿನಲ್ಲಿ ಹೊರಳಾಡುವದಕ್ಕೆ ತಿರುಗಿಕೊಂಡಿತು ಎಂಬ ನಿಜವಾದ ಗಾದೆಗೆ ಸರಿಯಾಗಿ ಅವರಿಗೆ ಸಂಭವಿಸಿತು.
- Romans 16:18 ರೋಮಾಪುರದವರಿಗೆ 16:18ಅಂಥವರು ನಮ್ಮ ಕರ್ತನಾದ ಯೇಸು ಕ್ರಿಸ್ತನ ಸೇವೆಯನ್ನು ಮಾಡದೆ ತಮ್ಮ ಹೊಟ್ಟೆಯ ಸೇವೆಯನ್ನೇ ಮಾಡುವವರಾಗಿ ನಯದ ನುಡಿ ಗಳಿಂದಲೂ ಹೊಗಳಿಕೆಯ ಮಾತುಗಳಿಂದಲೂ ನಿಷ್ಕಪ ಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ.
- Jude 1:8–9 ಯೂದನು 1:8–9ಹಾಗೆಯೇ ಈ ದುಸ್ವಪ್ನದವರು ಶರೀರವನ್ನು ಮಲಿನ ಮಾಡಿಕೊಳ್ಳುವವರೂ ಪ್ರಭುತ್ವವನ್ನು ಅಸಡ್ಡೆ ಮಾಡು ವವರೂ ಗೌರವವುಳ್ಳವರನ್ನು ದೂಷಿಸುವವರೂ ಆಗಿದ್ದಾರೆ. ಆದರೂ ಪ್ರಧಾನ ದೇವದೂತನಾದ ಮಿಕಾಯೇಲನು ಮೋಶೆಯ ಶವದ ವಿಷಯದಲ್ಲಿ ಸೈತಾನನೊಂದಿಗೆ ವ್ಯಾಜ್ಯವಾಡಿ ವಾಗ್ವಾದ ಮಾಡಿದಾಗ ಅವನು ಸೈತಾನನನ್ನು ದೂಷಿಸುವದಕ್ಕೆ ಧೈರ್ಯ ಗೊಳ್ಳದೆ--ಕರ್ತನು ನಿನ್ನನ್ನು ಗದರಿಸಲಿ ಅಂದನು.
- Jude 1:19 ಯೂದನು 1:19ಇವರು ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವವರೂ ಪ್ರಾಕೃತಮನುಷ್ಯರೂ ಆತ್ಮವಿಲ್ಲದವರೂ ಆಗಿದ್ದಾರೆ.
- 1 Timothy 5:6 1 ತಿಮೊಥೆಯನಿಗೆ 5:6ಆದರೆ ಭೋಗಿಯಾಗಿರುವ ವಿಧವೆಯು ಬದುಕಿರು ವಾಗಲೂ ಸತ್ತವಳೇ.
- 1 Timothy 6:17 1 ತಿಮೊಥೆಯನಿಗೆ 6:17ಈ ಲೋಕದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿ ಗಳಾಗಿರದೆ, ಅಸ್ಥಿರವಾದ ಐಶ್ವರ್ಯದ ಮೇಲೆ ಭರವಸ ವನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲ ವನ್ನೂ ಹೇರಳವಾಗಿ ದಯಪಾಲಿಸುವ ಜೀವವುಳ್ಳ ದೇವರ ಮೇಲೆ ಭರವಸವನ್ನಿಡಬೇಕೆಂತಲೂ
- Romans 11:20 ರೋಮಾಪುರದವರಿಗೆ 11:20ಒಳ್ಳೆಯದು, ಅವರು ನಂಬದೆ ಹೋದದರಿಂದ ಮುರಿದುಹಾಕಲ್ಪಟ್ಟರು, ನೀನು ನಿಂತಿರುವದು ನಂಬಿಕೆಯಿಂದಲೇ, ಗರ್ವ ಪಡಬೇಡ, ಭಯದಿಂದಿರು;