1 Timothy · chapter 3 · verse 6
1 Timothy 3:6 in Kannada
ಅವನು ಹೊಸಬನಾಗಿರಬಾರದು; ಅಂಥ ವನಾದರೆ ಉಬ್ಬಿಕೊಂಡು ಸೈತಾನನ ಶಿಕ್ಷಾವಿಧಿಗೆ ಒಳಗಾಗುವನು.
Avanu hosabanaagirabaaradu; antha vanaadare ubbikondu saitaanana shikshaavidhige olagaaguvanu.
1 Timothy 3:6 in English
- King James Version (KJV)
- Not a novice, lest being lifted up with pride he fall into the condemnation of the devil.
- World English Bible (WEB)
- not a new convert, lest being puffed up he fall into the same condemnation as the devil.
- American Standard Version (ASV)
- not a novice, lest being puffed up he fall into the condemnation of the devil.
- Bible in Basic English (BBE)
- Not one newly taken into the church, for fear that, through his high opinion of himself, he may come into the same sin as the Evil One.
- Darby Translation (DBY)
- not a novice, that he may not, being inflated, fall into [the] fault of the devil.
- Webster's Bible (WBS)
- Not a novice, lest being lifted up with pride he fall into the condemnation of the devil.
- Young's Literal Translation (YLT)
- not a new convert, lest having been puffed up he may fall to a judgment of the devil;
Read in context
- 4ಪೂರ್ಣ ಗೌರವದಿಂದ ತನ್ನ ಮಕ್ಕಳನ್ನೂ ಅಧೀನದಲ್ಲಿ ಟ್ಟುಕೊಂಡು ಸ್ವಂತ ಮನೆಯವರನ್ನು ಚೆನ್ನಾಗಿ ಆಳುವವ ನಾಗಿರಬೇಕು.
- 5(ಸ್ವಂತ ಮನೆಯವರನ್ನು ಆಳುವದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಮರಿ ಸುವನು)?
- 6ಅವನು ಹೊಸಬನಾಗಿರಬಾರದು; ಅಂಥ ವನಾದರೆ ಉಬ್ಬಿಕೊಂಡು ಸೈತಾನನ ಶಿಕ್ಷಾವಿಧಿಗೆ ಒಳಗಾಗುವನು.
- 7ಇದಲ್ಲದೆ ಅವನು ನಿಂದೆಗೆ ಗುರಿ ಯಾಗದಂತೆಯೂ ಸೈತಾನನ ಉರ್ಲಿಗೆ ಸಿಕ್ಕಿಬೀಳ ದಂತೆಯೂ ಹೊರಗಿನವರಿಂದ ಒಳ್ಳೇಸಾಕ್ಷಿಯನ್ನು ಹೊಂದಿದವನಾಗಿರತಕ್ಕದ್ದು.
- 8ಅದೇ ರೀತಿಯಾಗಿ ಸಭಾಸೇವಕರು ಗೌರವವುಳ್ಳ ವರಾಗಿರಬೇಕು; ಅವರು ಎರಡು ನಾಲಿಗೆಯುಳ್ಳವರಾಗಿ ರಬಾರದು. ಹೆಚ್ಚು ದ್ರಾಕ್ಷಾರಸ ಕುಡಿಯುವವರೂ ನೀಚಲಾಭವನ್ನು ಅಪೇಕ್ಷಿಸುವವರೂ ಆಗಿರದೆ
Cross references
- 1 Timothy 6:4 1 ತಿಮೊಥೆಯನಿಗೆ 6:4ಅಂಥವನು ಒಂದನ್ನೂ ತಿಳಿಯದೆ ಕುತರ್ಕ ವಾಗ್ವಾದಗಳನ್ನು ಮಾಡುವ ಭ್ರಾಂತಿಯಲ್ಲಿದ್ದು ಅಹಂಕಾರಿಯಾಗಿದ್ದಾನೆ. ಇವುಗಳಿಂದ ಹೊಟ್ಟೇಕಿಚ್ಚು ಜಗಳ ದೂಷಣೆ ದುಸ್ಸಂಶಯ ಇವುಗಳು ಉಂಟಾಗುತ್ತವೆ.
- Hebrews 5:12–13 ಇಬ್ರಿಯರಿಗೆ 5:12–13ನೀವು ಇಷ್ಟರೊಳಗೆ ಬೋಧಕರಾಗಿರ ಬೇಕಾಗಿದ್ದರೂ ಒಬ್ಬನು ನಿಮಗೆ ದೈವೋಕ್ತಿಗಳ ಮೂಲ ಪಾಠಗಳನ್ನು ತಿರಿಗಿ ಕಲಿಸಿಕೊಡಬೇಕಾಗಿದೆ; ನೀವು ಹಾಲು ಕುಡಿಯತಕ್ಕವರೇ ಹೊರತು ಗಟ್ಟಿಯಾದ ಆಹಾರವನ್ನು ತಿನ್ನತಕ್ಕವರಲ್ಲ. ಹಾಲು ಕುಡಿಯುವ ವನು ಕೂಸಿನಂತಿದ್ದು, ನೀತಿವಾಕ್ಯದಲ್ಲಿ ಅನುಭವವಿಲ್ಲದ ವನಾಗಿದ್ದಾನೆ.ಆದರೆ ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೊಸ್ಕರ ಅಂದರೆ ತಮ್ಮ ಜ್ಞಾನೇಂದ್ರಿ ಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಒಳ್ಳೇದನ್ನೂ ಕೆಟ್ಟದ್ದನ್ನೂ ತಿಳಿದವರಿಗೋಸ್ಕರವಾಗಿದೆ.
- 1 Peter 5:5 1 ಪೇತ್ರನು 5:5ಅದೇ ರೀತಿಯಾಗಿ ಯೌವನಸ್ಥರೇ, ಹಿರಿಯರಿಗೆ ಅಧೀನರಾಗಿರ್ರಿ; ನೀವೆಲ್ಲರೂ ದೀನತೆಯೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಅಧೀನರಾಗಿರ್ರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿ ಗಾದರೊ ಕೃಪೆಯನ್ನು ಅನುಗ್ರಹಿಸುತ್ತಾನೆ.
- 1 Peter 2:2 1 ಪೇತ್ರನು 2:2ಹೊಸದಾಗಿ ಹುಟ್ಟಿದ ಶಿಶುಗಳಂತಿರುವ ನೀವು ಬೆಳೆಯುವ ಹಾಗೆ ವಾಕ್ಯವೆಂಬ ಶುದ್ಧ ಹಾಲನ್ನು ಬಯಸಿರಿ.
- Isaiah 2:12 ಯೆಶಾಯ 2:12ಸೈನ್ಯಗಳ ಕರ್ತನ ದಿನವು ಗರ್ವ ಮತ್ತು ಅಹಂಭಾವದಿಂದ ತುಂಬಿರು ವವರ ಮೇಲೆಯೂ ತನ್ನನ್ನು ಹೆಚ್ಚಿಸಿಕೊಂಡಿರುವ ಪ್ರತಿಯೊಬ್ಬನ ಮೇಲೆಯೂ ಬರುವದು; ಆತನು ಅವರನ್ನು ತಗ್ಗಿಸುವನು.
- Isaiah 14:12–14 ಯೆಶಾಯ 14:12–14ಓ ಲೂಸಿಫರ್ ಉದಯದ ಮಗನೇ. ಆಕಾಶದಿಂದ ನೀನು ಹೇಗೆ ಬಿದ್ದೀ? ಜನಾಂಗಗಳನ್ನು ಬಲಹೀನ ಮಾಡಿದ ನೀನು ಭೂಮಿಗೆ ಹೇಗೆ ಕಡಿಯಲ್ಪಟ್ಟಿದ್ದೀ? ನೀನು ನಿನ್ನ ಹೃದಯದಲ್ಲಿ ನಾನು ಆಕಾಶಕ್ಕೆ ಏರಿ ದೇವರ ನಕ್ಷತ್ರಗಳ ಮೇಲೆ ನನ್ನ ಸಿಂಹಾಸನವನ್ನು ಘನತೆಗೇರಿಸುವೆನು; ಉತ್ತರ ದಿಕ್ಕಿನ ಕಡೆಗಿರುವ ಸಮೂಹ ಪರ್ವತದ ಮೇಲೆಯೂ ನಾನು ಆಸೀನನಾ ಗುವೆನು. ಉನ್ನತವಾದ ಮೇಘ ಮಂಡಲದ ಮೇಲೆ ಏರಿ ಮಹೋನ್ನತನಿಗೆ ಸಮಾನನಾಗುತ್ತೇನೆ ಅಂದು ಕೊಂಡಿದ್ದೆಯಲ್ಲಾ;
- 1 Corinthians 4:6–8 1 ಕೊರಿಂಥದವರಿಗೆ 4:6–8ಸಹೋದರರೇ, ನಾನು ನಿಮಗೋಸ್ಕರವೇ ಸಾಮ್ಯರೂಪವಾಗಿ ನನ್ನ ವಿಷಯದಲ್ಲಿಯೂ ಅಪೊಲ್ಲೋಸನ ವಿಷಯದಲ್ಲಿಯೂ ಹೇಳಿದ್ದೇನೆ; ಬರೆದಿರುವದನ್ನು ನೀವು ವಿಾರಿಹೋಗದೆ ನಿಮ್ಮಲ್ಲಿ ಯಾರೂ ಒಬ್ಬನಿಗೆ ವಿರೋಧವಾಗಿ ಮತ್ತೊಬ್ಬನು ಉಬ್ಬಿಕೊಳ್ಳಬಾರದೆಂಬದನ್ನು ನಮ್ಮಲ್ಲಿ ಕಲಿತುಕೊಳ್ಳ ಬೇಕು. ನಿನಗೂ ಇತರರಿಗೂ ತಾರತಮ್ಯ ಮಾಡಿ ದವರು ಯಾರು? ನೀನು ಹೊಂದದೆ ಇರುವಂಥದ್ದು ನಿನ್ನಲ್ಲಿ ಯಾವದು ಇದೆ? ಹೊಂದಿದ ಮೇಲೆ ಹೊಂದದವನಂತೆ ನೀನು ಯಾಕೆ ಹಿಗ್ಗಿಕೊಳ್ಳುತ್ತೀ? ಈಗಾಗಲೇ ನೀವು ತೃಪ್ತರಾದಿರಿ, ಈಗಾಗಲೇ ಐಶ್ವರ್ಯವಂತರಾದಿರಿ, ನಾವಿಲ್ಲದೆ ನೀವು ಅರಸರಂತೆ ಆಳಿದಿರಿ; ನೀವು ಆಳುವಂತೆ ದೇವರು ಮಾಡಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು; ಆಗ ನಾವು ಸಹ ನಿಮ್ಮೊಂದಿಗೆ ಆಳುತ್ತಿದ್ದೆವು.
- 1 Corinthians 8:1 1 ಕೊರಿಂಥದವರಿಗೆ 8:1ವಿಗ್ರಹಗಳಿಗೆ ಸಮರ್ಪಣೆ ಮಾಡುವವು ಗಳ ವಿಷಯದಲ್ಲಿ ನಮ್ಮೆಲ್ಲರಿಗೂ ಜ್ಞಾನ ವಿದೆಯೆಂದು ನಾವು ಬಲ್ಲೆವು; ಜ್ಞಾನವು ಉಬ್ಬಿಕೊಳ್ಳುತ್ತದೆ, ಆದರೆ ಪ್ರಿತಿಯು ಭಕ್ತಿವೃದ್ಧಿಯನ್ನುಂಟುಮಾಡು ತ್ತದೆ.
- 1 Corinthians 3:1 1 ಕೊರಿಂಥದವರಿಗೆ 3:1ಸಹೋದರರೇ, ನಾನಂತೂ ಆತ್ಮನಿಂದ ನಡಿಸಿಕೊಳ್ಳುವವರಿಗೆ ತಕ್ಕಂತೆ ನಿಮ್ಮ ಸಂಗಡ ಮಾತನಾಡಲಾರದೆ ಪ್ರಾಪಂಚಿಕರೂ ಕ್ರಿಸ್ತ ನಲ್ಲಿ ಎಳೆಕೂಸುಗಳೂ ಆಗಿರುವಂಥವರಿಗೆ ತಕ್ಕಂತೆ ನಿಮ್ಮ ಸಂಗಡ ಮಾತನಾಡಬೇಕಾಯಿತು.
- 2 Corinthians 12:7 2 ಕೊರಿಂಥದವರಿಗೆ 12:7ಇದಲ್ಲದೆ ಹೇರಳವಾದ ಪ್ರಕಟಣೆಗಳ ಮೂಲಕ ನಾನು ಮಿತಿವಿಾರಿ ಹೆಚ್ಚಿಸಿ ಕೊಳ್ಳಬಾರದೆಂದು ನನ್ನನ್ನು ಗುದ್ದುವದಕ್ಕಾಗಿ ಸೈತಾನನ ದೂತನಂತೆ ನನ್ನ ಶರೀರದಲ್ಲಿ ಒಂದು ಮುಳ್ಳು ನನಗೆ ಕೊಡಲ್ಪಟ್ಟಿದೆ; ಹೀಗೆ ನಾನು ಮಿತಿವಿಾರಿ ಹೆಚ್ಚಿಸಿ ಕೊಳ್ಳಲಾರದಂತೆ ಇದಾಯಿತು.
- Proverbs 29:23 ಜ್ಞಾನೋಕ್ತಿಗಳು 29:23ಮನುಷ್ಯನ ಗರ್ವವು ತನ್ನನ್ನು ಹೀನಸ್ಥಿತಿಗೆ ತರುವದು; ಆತ್ಮದಲ್ಲಿ ದೀನರಾಗಿರುವವರು ಸನ್ಮಾನಹೊಂದುವರು.
- Proverbs 16:18–19 ಜ್ಞಾನೋಕ್ತಿಗಳು 16:18–19ನಾಶನಕ್ಕೆ ಮುಂದಾಗಿ ಗರ್ವ ಹೋಗು ತ್ತದೆ; ಬೀಳುವಿಕೆಯ ಮುಂಚೆ ಜಂಬದ ಮನಸ್ಸು. ಅಹಂಕಾರಿಗಳೊಂದಿಗೆ ಕೊಳ್ಳೆಯನ್ನು ಹಂಚಿಕೊಳ್ಳು ವದಕ್ಕಿಂತ ದೀನರೊಂದಿಗೆ ವಿನಯ ಮನಸ್ಸುಳ್ಳವರಾಗಿ ಇರುವದು ಉತ್ತಮ.