Acts · chapter 11 · verse 14
Acts 11:14 in Kannada
ಅವನು ನಿನಗೆ ವಾಕ್ಯ ಗಳನ್ನು ಹೇಳುವನು; ಆ ವಾಕ್ಯಗಳಿಂದ ನಿನಗೂ ನಿನ್ನ ಮನೆಯವರೆಲ್ಲರಿಗೂ ರಕ್ಷಣೆಯಾಗುವದು ಎಂದು ಹೇಳಿದನೆಂಬದಾಗಿ ತಿಳಿಸಿದನು.
Avanu ninage vaakya galannu heluvanu; aa vaakyagalinda ninagoo ninna maneyavarellarigoo rakshaneyaaguvadu endu helidanembadaagi tilisidanu.
Acts 11:14 in English
- King James Version (KJV)
- Who shall tell thee words, whereby thou and all thy house shall be saved.
- World English Bible (WEB)
- who will speak to you words by which you will be saved, you and all your house.’
- American Standard Version (ASV)
- who shall speak unto thee words, whereby thou shalt be saved, thou and all thy house.
- Bible in Basic English (BBE)
- Who will say words to you through which you and all your family may get salvation.
- Darby Translation (DBY)
- who shall speak words to thee whereby thou shalt be saved, thou and all thy house.
- Webster's Bible (WBS)
- Who shall tell thee words, by which thou and all thy house shall be saved.
- Young's Literal Translation (YLT)
- who shall speak sayings by which thou shalt be saved, thou and all thy house.
Read in context
- 12ಏನೂ ಸಂಶಯಪಡದೆ ಅವರ ಜೊತೆಯಲ್ಲಿ ಹೋಗಬೇಕೆಂದು ಆತ್ಮನು ನನಗೆ ಅಪ್ಪಣೆಕೊಟ್ಟನು; ಇದಲ್ಲದೆ ಈ ಆರು ಮಂದಿ ಸಹೋದರರು ನನ್ನೊಂದಿಗೆ ಬಂದರು; ನಾವು ಆ ಮನುಷ್ಯನ ಮನೆಯೊಳಕ್ಕೆ ಸೇರಿದೆವು.
- 13ಅವನು ತನ್ನ ಮನೆಯಲ್ಲಿ ಒಬ್ಬ ದೂತನನ್ನು ಕಂಡನೆಂದು ನಮಗೆ ತಿಳಿಸಿದನು. ಆ ದೂತನು ಅವನಿಗೆ--ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸು;
- 14ಅವನು ನಿನಗೆ ವಾಕ್ಯ ಗಳನ್ನು ಹೇಳುವನು; ಆ ವಾಕ್ಯಗಳಿಂದ ನಿನಗೂ ನಿನ್ನ ಮನೆಯವರೆಲ್ಲರಿಗೂ ರಕ್ಷಣೆಯಾಗುವದು ಎಂದು ಹೇಳಿದನೆಂಬದಾಗಿ ತಿಳಿಸಿದನು.
- 15ನಾನು ಮಾತನಾ ಡುವದಕ್ಕೆ ಪ್ರಾರಂಭಿಸಿದಾಗ ಪವಿತ್ರಾತ್ಮನು ಮೊದಲು ನಮ್ಮ ಮೇಲೆ ಬಂದಹಾಗೆ ಅವರ ಮೇಲೆಯೂ ಬಂದನು.
- 16ಆಗ--ಯೋಹಾನನು ನಿಜವಾಗಿಯೂ ನೀರಿನ ಬಾಪ್ತಿಸ್ಮ ಮಾಡಿಸಿದನು; ನೀವಾದರೋ ಪವಿತ್ರಾತ್ಮನಿಂದ ಬಾಪ್ತಿಸ್ಮ ಹೊಂದುವಿರಿ ಎಂದು ಕರ್ತನು ಹೇಳಿದ ಮಾತು ನನ್ನ ನೆನಪಿಗೆ ಬಂತು.
Cross references
- Acts 16:15 ಅಪೊಸ್ತಲರ ಕೃತ್ಯಗಳು 16:15ಆಕೆಯೂ ಆಕೆಯ ಮನೆಯವರೂ ಬಾಪ್ತಿಸ್ಮ ಮಾಡಿಸಿಕೊಂಡ ಮೇಲೆ--ನಾನು ಕರ್ತನಿಗೆ ನಂಬಿಗಸ್ತಳಾದವಳೆಂದು ನೀವು ತೀರ್ಮಾನಿಸಿದರೆ ನನ್ನ ಮನೆಗೆ ಬಂದು ಇರಬೇಕು ಎಂದು ಆಕೆಯು ನಮ್ಮನ್ನು ಬೇಡಿಕೊಂಡು ಬಲವಂತಮಾಡಿದಳು.
- Acts 10:22 ಅಪೊಸ್ತಲರ ಕೃತ್ಯಗಳು 10:22ಅವರು--ಕೊರ್ನೇಲ್ಯನೆಂಬ ಒಬ್ಬ ಶತಾಧಿಪತಿ ಇದ್ದಾನೆ. ಅವನು ನೀತಿವಂತನೂ ದೇವರಿಗೆ ಭಯಪಡು ವವನೂ ಯೆಹೂದ್ಯ ಜನಾಂಗದವರೆಲ್ಲರಿಂದ ಒಳ್ಳೇ ಹೆಸರು ಹೊಂದಿದವನೂ ಆಗಿದ್ದಾನೆ; ನಿನ್ನನ್ನು ತನ್ನ ಮನೆಗೆ ಕರೇ ಕಳುಹಿಸಿಕೊಂಡು ನಿನ್ನ ಮಾತುಗಳನ್ನು ಕೇಳಬೇಕೆಂದು ಅವನು ಪರಿಶುದ್ಧ ದೂತ
- Acts 16:31–34 ಅಪೊಸ್ತಲರ ಕೃತ್ಯಗಳು 16:31–34ಅವರು--ಕರ್ತನಾದ ಯೇಸು ಕ್ರಿಸ್ತನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆ ಹೊಂದುವಿ, ನಿನ್ನ ಮನೆಯವರೂ ರಕ್ಷಣೆ ಹೊಂದು ವರು ಎಂದು ಹೇಳಿದರು. ಅವನಿಗೂ ಅವನ ಮನೆಯಲ್ಲಿದ್ದವರೆಲ್ಲರಿಗೂ ಅವರು ಕರ್ತನ ವಾಕ್ಯವನ್ನು ತಿಳಿಸಿದರು. ಆಮೇಲೆ ಅವನು ರಾತ್ರಿಯ ಅದೇ ಗಳಿಗೆಯಲ್ಲಿ ಅವರನ್ನು ಕರಕೊಂಡು ಹೋಗಿ ಅವರ ಗಾಯಗಳನ್ನು ತೊಳೆದನು; ಕೂಡಲೆ ತಾನು ತನ್ನವ ರೆಲ್ಲರ ಸಹಿತವಾಗಿ ಬಾಪ್ತಿಸ್ಮ ಮಾಡಿಸಿಕೊಂಡನು. ತರುವಾಯ ಅವರನ್ನು ತನ್ನ ಮನೆಗೆ ಕರಕೊಂಡು ಹೋಗಿ ಊಟಮಾಡಿಸಿ ತನ್ನ ಮನೆಯವರೆಲ್ಲರ ಸಂಗಡ ದೇವರಲ್ಲಿ ನಂಬಿಕೆಯಿಟ್ಟು ಉಲ್ಲಾಸಗೊಂಡನು.
- John 12:50 ಯೋಹಾನನು 12:50ಆತನ ಆಜ್ಞೆಯು ನಿತ್ಯಜೀವವಾಗಿದೆ ಎಂದು ನಾನು ಬಲ್ಲೆನು; ಆದದರಿಂದ ನಾನು ಮಾತನಾಡುವವುಗಳನ್ನು ತಂದೆಯು ನನಗೆ ಹೇಳಿದಂತೆಯೇ ನಾನು ಮಾತನಾಡು ತ್ತೇನೆ ಎಂದು ಹೇಳಿದನು.
- John 20:31 ಯೋಹಾನನು 20:31ಆದರೆ ಯೇಸುವೇ ದೇವಕುಮಾರ ನಾದ ಕ್ರಿಸ್ತನೆಂದು ನೀವು ನಂಬುವಂತೆಯೂ ನಂಬಿ ಆತನ ಹೆಸರಿನ ಮೂಲಕ ಜೀವವನ್ನು ಪಡೆದುಕೊಳ್ಳುವಂತೆಯೂ ಇವುಗಳು ಬರೆಯಲ್ಪಟ್ಟಿವೆ.
- Acts 10:2 ಅಪೊಸ್ತಲರ ಕೃತ್ಯಗಳು 10:2ಅವನು ಭಕ್ತನೂ ತನ್ನ ಮನೆಯವರೆಲ್ಲರ ಸಹಿತವಾಗಿ ದೇವರಿಗೆ ಭಯಪಡುವವನೂ ಆಗಿದ್ದು ಜನರಿಗೆ ಬಹಳವಾಗಿ ದಾನವನ್ನು ಮಾಡುತ್ತಾ ದೇವರಿಗೆ ನಿತ್ಯವೂ ಪ್ರಾರ್ಥನೆ ಮಾಡುತ್ತಾ ಇದ್ದನು.
- 1 John 5:9–13 1 ಯೋಹಾನನು 5:9–13ನಾವು ಮನುಷ್ಯರ ಸಾಕ್ಷಿಯನ್ನು ತೆಗೆದುಕೊಳ್ಳುವದಾದರೆ ದೇವರ ಸಾಕ್ಷಿಯು ಅದಕ್ಕಿಂತ ದೊಡ್ಡದಾಗಿದೆಯಲ್ಲಾ. ಯಾಕಂದರೆ ತನ್ನ ಮಗನ ವಿಷಯದಲ್ಲಿ ದೇವರು ಕೊಟ್ಟ ಸಾಕ್ಷಿಯು ಇದೇ ಆಗಿದೆ. ದೇವರ ಮಗನಲ್ಲಿ ನಂಬಿಕೆ ಇಟ್ಟವನು ಆ ಸಾಕ್ಷಿಯನ್ನು ತನ್ನಲ್ಲೇ ಹೊಂದಿದ್ದಾನೆ. ದೇವರನ್ನು ನಂಬದವನು ಆತನನ್ನು ಸುಳ್ಳುಗಾರನನ್ನಾಗಿ ಮಾಡಿದ್ದಾನೆ; ಹೇಗೆಂದರೆ ದೇವರು ತನ್ನ ಮಗನ ವಿಷಯವಾಗಿ ಕೊಟ್ಟ ಸಾಕ್ಷಿಯಲ್ಲಿ ಅವನು ನಂಬಿಕೆಯಿಡಲಿಲ್ಲ. ಆ ಸಾಕ್ಷಿ ಯಾವದಂದರೆ ದೇವರು ನಮಗೆ ನಿತ್ಯಜೀವವನ್ನು ಅನುಗ್ರಹಿಸಿದನು.ಈ ಜೀವವು ಆತನ ಮಗನಲ್ಲಿ ಅದೆ ಎಂಬದೇ. ಯಾವನಲ್ಲಿ (ದೇವರ) ಮಗನು ಇದ್ದಾನೋ ಅವನಿಗೆ ಜೀವ ಉಂಟು; ಯಾವನಲ್ಲಿ ದೇವರ ಮಗನು ಇರುವ ದಿಲ್ಲವೋ ಅವನಿಗೆ ಜೀವವಿಲ್ಲ. ನಿಮಗೆ ನಿತ್ಯಜೀವವು ಉಂಟೆಂದು ನೀವು ತಿಳಿಯುವ ಹಾಗೆಯೂ ನೀವು ದೇವರ ಮಗನ ಹೆಸರಿನಲ್ಲಿ ನಂಬಿಕೆಯಿಡುವ ಹಾಗೆಯೂ ದೇವರ ಮಗನ ಹೆಸರಿನಲ್ಲಿ ನಂಬಿಕೆಯಿಡುವ ನಿಮಗೆ ಇವು ಗಳನ್ನು ಬರೆದಿದ್ದೇನೆ.
- Acts 2:39 ಅಪೊಸ್ತಲರ ಕೃತ್ಯಗಳು 2:39ಯಾಕಂದರೆ ಆ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರವಾಗಿರುವವರೆಲ್ಲರಿಗೂ ಅಂತೂ ನಮ್ಮ ದೇವರಾದ ಕರ್ತನು ಕರೆಯುವವರೆಲ್ಲರಿಗೂ ಮಾಡಿಯದೆ ಎಂದು ಹೇಳಿದನು.
- Acts 10:6 ಅಪೊಸ್ತಲರ ಕೃತ್ಯಗಳು 10:6ಅವನು ಚರ್ಮಕಾರನಾದ ಸೀಮೋನನ ಬಳಿಯಲ್ಲಿ ಇಳುಕೊಂಡಿದ್ದಾನೆ; ಈ ಸೀಮೋನನ ಮನೆಯು ಸಮುದ್ರದ ಬಳಿಯಲ್ಲಿದೆ. ನೀನು ಮಾಡಬೇಕಾದದ್ದನ್ನು ಅವನು ನಿನಗೆ ತಿಳಿಸುವನು ಎಂದು ಹೇಳಿದನು.
- Genesis 17:7 ಆದಿಕಾಂಡ 17:7ಇದಲ್ಲದೆ ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ದೇವರಾಗಿರುವದಕ್ಕೆ ನನಗೂ ನಿನಗೂ ನಿನ್ನ ತರುವಾಯ ಬರುವ ತಲ ತಲಾಂತರಗಳಲ್ಲಿ ನಿನ್ನ ಸಂತಾನಕ್ಕೂ ಮಧ್ಯದಲ್ಲಿ ನನ್ನ ಒಡಂಬಡಿಕೆಯನ್ನು ನಿತ್ಯವಾದ ಒಡಂಬಡಿಕೆಯಾಗಿ ಸ್ಥಾಪಿಸುತ್ತೇನೆ.
- Acts 10:32–33 ಅಪೊಸ್ತಲರ ಕೃತ್ಯಗಳು 10:32–33ಅದಕಾರಣ ನೀನು ಯೊಪ್ಪಕ್ಕೆ ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸಬೇಕು; ಅವನು ಚರ್ಮಕಾರನಾದ ಸೀಮೋ ನನ ಮನೆಯಲ್ಲಿ ಇಳುಕೊಂಡಿದ್ದಾನೆ; ಆ ಮನೆ ಸಮುದ್ರದ ಬಳಿಯಲ್ಲಿದೆ. ಅವನು ಬಂದು ನಿನ್ನೊಂದಿಗೆ ಮಾತನಾಡುವನು ಎಂದು ಹೇಳಿದನು. ಆದಕಾರಣ ನಾನು ತಡಮಾಡದೆ ನಿನ್ನ ಬಳಿಗೆ ಕಳುಹಿಸಿದೆನು. ನೀನು ಬಂದದ್ದು ಒಳ್ಳೇದಾಯಿತು. ಹೀಗಿರುವದರಿಂದ ಕರ್ತನು ನಿನಗೆ ಅಪ್ಪಣೆ ಕೊಟ್ಟಿರುವ ಎಲ್ಲಾ ಮಾತು ಗಳನ್ನು ಕೇಳುವದಕ್ಕೆ ನಾವೆಲ್ಲರು ಈಗ ದೇವರ ಸನ್ನಿಧಾನದಲ್ಲಿ ಕೂಡಿದ್ದೇವೆ ಅಂದನು.
- Jeremiah 32:39 ಯೆರೆಮೀಯ 32:39ಅವರಿಗೂ ಅವರ ತರುವಾಯ ಅವರ ಮಕ್ಕಳಿಗೂ ಒಳ್ಳೇದಕ್ಕಾಗಿ ಅವರು ಯಾವಾಗಲೂ ನನಗೆ ಭಯ ಪಡುವ ಹಾಗೆ ಅವರಿಗೆ ಒಂದೇ ಹೃದಯವನ್ನೂ ಒಂದೇ ಮಾರ್ಗವನ್ನೂ ಕೊಡುವೆನು.