Acts · chapter 11 · verse 15
Acts 11:15 in Kannada
ನಾನು ಮಾತನಾ ಡುವದಕ್ಕೆ ಪ್ರಾರಂಭಿಸಿದಾಗ ಪವಿತ್ರಾತ್ಮನು ಮೊದಲು ನಮ್ಮ ಮೇಲೆ ಬಂದಹಾಗೆ ಅವರ ಮೇಲೆಯೂ ಬಂದನು.
Naanu maatanaa duvadakke praarambhisidaaga pavitraatmanu modalu namma mele bandahaage avara meleyoo bandanu.
Acts 11:15 in English
- King James Version (KJV)
- And as I began to speak, the Holy Ghost fell on them, as on us at the beginning.
- World English Bible (WEB)
- As I began to speak, the Holy Spirit fell on them, even as on us at the beginning.
- American Standard Version (ASV)
- And as I began to speak, the Holy Spirit fell on them, even as on us at the beginning.
- Bible in Basic English (BBE)
- And, while I was talking to them, the Holy Spirit came on them, as on us at first.
- Darby Translation (DBY)
- And as I began to speak, the Holy Spirit fell upon them even as upon us also at the beginning.
- Webster's Bible (WBS)
- And as I began to speak, the Holy Spirit fell on them, as on us at the beginning.
- Young's Literal Translation (YLT)
- 'And in my beginning to speak, the Holy Spirit did fall upon them, even as also upon us in the beginning,
Read in context
- 13ಅವನು ತನ್ನ ಮನೆಯಲ್ಲಿ ಒಬ್ಬ ದೂತನನ್ನು ಕಂಡನೆಂದು ನಮಗೆ ತಿಳಿಸಿದನು. ಆ ದೂತನು ಅವನಿಗೆ--ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸು;
- 14ಅವನು ನಿನಗೆ ವಾಕ್ಯ ಗಳನ್ನು ಹೇಳುವನು; ಆ ವಾಕ್ಯಗಳಿಂದ ನಿನಗೂ ನಿನ್ನ ಮನೆಯವರೆಲ್ಲರಿಗೂ ರಕ್ಷಣೆಯಾಗುವದು ಎಂದು ಹೇಳಿದನೆಂಬದಾಗಿ ತಿಳಿಸಿದನು.
- 15ನಾನು ಮಾತನಾ ಡುವದಕ್ಕೆ ಪ್ರಾರಂಭಿಸಿದಾಗ ಪವಿತ್ರಾತ್ಮನು ಮೊದಲು ನಮ್ಮ ಮೇಲೆ ಬಂದಹಾಗೆ ಅವರ ಮೇಲೆಯೂ ಬಂದನು.
- 16ಆಗ--ಯೋಹಾನನು ನಿಜವಾಗಿಯೂ ನೀರಿನ ಬಾಪ್ತಿಸ್ಮ ಮಾಡಿಸಿದನು; ನೀವಾದರೋ ಪವಿತ್ರಾತ್ಮನಿಂದ ಬಾಪ್ತಿಸ್ಮ ಹೊಂದುವಿರಿ ಎಂದು ಕರ್ತನು ಹೇಳಿದ ಮಾತು ನನ್ನ ನೆನಪಿಗೆ ಬಂತು.
- 17ಕರ್ತನಾಗಿರುವ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಮಗೆ ದೇವರು ಕೊಟ್ಟ ದಾನಕ್ಕೆ ಸರಿಯಾದ ದಾನವನ್ನು ಅವರಿಗೂ ಕೊಟ್ಟಿರಲಾಗಿ ದೇವರನ್ನು ತಡೆಯುವದಕ್ಕೆ ನಾನು ಎಷ್ಟರವನು ಎಂದು ಹೇಳಿದನು.
Cross references
- Acts 19:6 ಅಪೊಸ್ತಲರ ಕೃತ್ಯಗಳು 19:6ಆಗ ಪೌಲನು ಅವರ ಮೇಲೆ ಕೈಗಳನ್ನಿಡಲು ಪವಿತ್ರಾತ್ಮನು ಅವರ ಮೇಲೆ ಬಂದನು; ಅವರು ಭಾಷೆಗಳನ್ನಾಡಿದರು ಮತ್ತು ಪ್ರವಾದಿಸಿದರು.
- Acts 10:34–46 ಅಪೊಸ್ತಲರ ಕೃತ್ಯಗಳು 10:34–46ಆಗ ಪೇತ್ರನು ತನ್ನ ಬಾಯಿ ತೆರೆದು ಹೇಳಿದ್ದೇನಂದರೆ--ನಿಜವಾಗಿಯೂ ದೇವರು ಪಕ್ಷಪಾತಿ ಅಲ್ಲವೆಂದು ನಾನು ತಿಳಿದಿದ್ದೇನೆ. ಆದರೆ ಪ್ರತಿ ಯೊಂದು ಜನಾಂಗದವರಲ್ಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಮೆಚ್ಚಿಕೆಯಾ ಗಿದ್ದಾನೆ. ಯೇಸು ಕ್ರಿಸ್ತನ ಮೂಲಕ ದೇವರು ಸಮಾಧಾನವನ್ನು ಪ್ರಕಟಿಸುತ್ತಾ ಇಸ್ರಾಯೇಲ್ ಜನರಿಗೆ ವಾಕ್ಯವನ್ನು ಅನುಗ್ರಹಿಸಿದ್ದಾನೆ; (ಆತನು ಎಲ್ಲರಿಗೂ ಕರ್ತನಾಗಿದ್ದಾನೆ.) ಯೋಹಾನನು ಸಾರಿದ ಬಾಪ್ತಿಸ್ಮದ ತರುವಾಯ ಆ ವಾಕ್ಯವು ಗಲಿಲಾಯದಿಂದ ಪ್ರಾರಂಭವಾಗಿ ಯೂದಾಯದಲ್ಲೆಲ್ಲಾ ಪ್ರಬಲವಾಯಿ ತೆಂಬದನ್ನೂ ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮನಿಂದಲೂ ಬಲದಿಂದಲೂ ಅಭಿಷೇಕಿಸಿದ ನೆಂಬದನ್ನೂ ಹೇಗೆ ಆತನು ಒಳ್ಳೇದನ್ನು ಮಾಡುತ್ತಾ ಸೈತಾನನಿಂದ ಬಾಧಿಸಲ್ಪಡುತ್ತಿರುವವರೆಲ್ಲರನ್ನು ಗುಣ ಮಾಡುತ್ತಾ ಸಂಚರಿಸಿದನೆಂಬದನ್ನು ನೀವು ತಿಳಿದಿದ್ದೀರಿ; ಯಾಕಂದರೆ ದೇವರು ಆತನ ಸಂಗಡ ಇದ್ದನು. ಆತನು ಯೆಹೂದ್ಯರ ಸೀಮೆಯಲ್ಲಿಯೂ ಯೆರೂಸ ಲೇಮಿನಲ್ಲಿಯೂ ಮಾಡಿದ ಎಲ್ಲಾ ಕಾರ್ಯಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ; ಅವರು ಆತನನ್ನು ಮರದ ಮೇಲೆ ತೂಗಹಾಕಿಕೊಂದರು; ದೇವರು ಆತನನ್ನು ಮೂರನೆಯ ದಿನದಲ್ಲಿ ಎಬ್ಬಿಸಿ ಬಹಿರಂಗವಾಗಿ ತೋರ್ಪಡಿಸಿದನು. ದೇವರು ಎಲ್ಲರಿಗೆ ತೋರ್ಪಡಿ ಸದೆ ಆತನು ಮುಂಚಿತವಾಗಿ ಆರಿಸಿಕೊಂಡಿದ್ದ ಸಾಕ್ಷಿಗಳಾಗಿರುವ ನಮಗೆ ಆತನನ್ನು ತೋರ್ಪಡಿಸಿ ದನು. ಆತನು ಸತ್ತವರೊಳಗಿಂದ ಎದ್ದು ಬಂದ ಮೇಲೆ ನಾವು ಆತನ ಸಂಗಡ ತಿಂದು ಕುಡಿದೆವು. ಆತನೇ ಜೀವಿತರಿಗೂ ಸತ್ತವರಿಗೂ ನ್ಯಾಯಾಧಿಪತಿಯಾಗಿ ದೇವರಿಂದ ನೇಮಕವಾದವನೆಂಬದನ್ನು ಜನರಿಗೆ ಸಾರಿ ಸಾಕ್ಷಿ ಹೇಳಬೇಕೆಂದು ದೇವರು ನಮಗೆ ಅಪ್ಪಣೆಕೊಟ್ಟನು. ಆತನ ಹೆಸರಿನಲ್ಲಿ ನಂಬಿಕೆಯಿ ಡುವ ಪ್ರತಿಯೊಬ್ಬನು ಆತನಲ್ಲಿ ಪಾಪ ಪರಿಹಾರವನ್ನು ಹೊಂದುವನೆಂದು ಆತನ ವಿಷಯದಲ್ಲಿ ಪ್ರವಾದಿ ಗಳೆಲ್ಲರು ಸಾಕ್ಷಿಕೊಡುತ್ತಾರೆ ಅಂದನು. ಪೇತ್ರನು ಈ ಮಾತುಗಳನ್ನು ಇನ್ನೂ ಹೇಳು ತ್ತಿರುವಾಗ ವಾಕ್ಯವನ್ನು ಕೇಳಿದವರೆಲ್ಲರ ಮೇಲೆ ಪವಿ ತ್ರಾತ್ಮನು ಇಳಿದನು. ಪೇತ್ರನ ಸಂಗಡ ಬಂದಿದ್ದ ಸುನ್ನತಿಯಾದವರಲ್ಲಿ ನಂಬಿದವರೆಲ್ಲಾ ಅನ್ಯಜನಗಳ ಮೇಲೆಯೂ ಪವಿತ್ರಾತ್ಮನು ಸುರಿಸಲ್ಪಟ್ಟದ್ದರಿಂದ ಅತ್ಯಾ ಶ್ಚರ್ಯಪಟ್ಟರು. ಯಾಕಂದರೆ ಅವರು ಭಾಷೆಗಳನ್ನು ಮಾತನಾಡುತ್ತಾ ದೇವರನ್ನು ಕೊಂಡಾಡುತ್ತಾ ಇದ್ದದ್ದನ್ನು ಅವರು ಕೇಳಿದರು. ಆಗ ಪೇತ್ರನು--
- Acts 2:2–12 ಅಪೊಸ್ತಲರ ಕೃತ್ಯಗಳು 2:2–12ಆಗ ರಭಸವಾಗಿ ಬೀಸುವ ಬಲವಾದ ಗಾಳಿಯೋಪಾದಿಯಲ್ಲಿ ಒಂದು ಶಬ್ದವು ಆಕಾಶದಿಂದ ಫಕ್ಕನೆ ಬಂದು ಅವರು ಕೂತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು. ಇದಲ್ಲದೆ ಅಲ್ಲಿ ವಿಂಗಡಿಸಲ್ಪಟ್ಟ ನಾಲಿಗೆಗಳು ಬೆಂಕಿಯಂತೆ ಅವರಿಗೆ ಕಾಣಿಸಿಕೊಂಡು ಅವರಲ್ಲಿ ಪ್ರತಿಯೊಬ್ಬನ ಮೇಲೆ ಅದು ಕೂತುಕೊಂಡಿತು. ಆಗ ಅವರೆಲ್ಲರೂ ಪವಿತ್ರಾತ್ಮಭರಿತರಾಗಿ ಆತ್ಮನು ತಮಗೆ ನುಡಿಯುವ ಶಕ್ತಿಯನ್ನು ಕೊಟ್ಟ ಪ್ರಕಾರ ಅವರು ಬೇರೆಬೇರೆ ಭಾಷೆಗಳಲ್ಲಿ ಮಾತನಾಡುವದಕ್ಕೆ ಪ್ರಾರಂಭಿಸಿದರು. ಆಕಾಶದ ಕೆಳಗಿರುವ ಪ್ರತಿಯೊಂದು ಜನಾಂಗದವರೊಳಗಿಂದ (ಬಂದಿದ್ದ) ಭಕ್ತಿಯುಳ್ಳ ಯೆಹೂದ್ಯರು ಯೆರೂಸಲೇಮಿನಲ್ಲಿ ವಾಸ ಮಾಡುತ್ತಿದ್ದರು ಆಗ ಈ ಶಬ್ದವು ಬಹು ದೂರದವರೆಗೆ ಕೇಳಿಸಿದ್ದರಿಂದ ಜನಸಮೂಹವು ಕೂಡಿ ಬಂದು ಪ್ರತಿಯೊಬ್ಬನು ತನ್ನ ತನ್ನ ಸ್ವಭಾಷೆಯಲ್ಲಿ ಅವರು ಮಾತನಾಡಿದ್ದನ್ನು ಕೇಳಿ ಭ್ರಮೆಗೊಂಡರು. ಅವರು ಆಶ್ಚರ್ಯಪಟ್ಟು ಬೆರ ಗಾಗಿ--ಇಗೋ, ಮಾತನಾಡುತ್ತಿರುವ ಇವರೆಲ್ಲರೂ ಗಲಿಲಾಯದವರಲ್ಲವೇ? ಹಾಗಾದರೆ ಪ್ರತಿಯೊ ಬ್ಬನು ನಮ್ಮ ಸ್ವಂತ ಹುಟ್ಟುಭಾಷೆಯಲ್ಲಿ ಮಾತನಾಡು ವದನ್ನು ನಾವು ಕೇಳುವದು ಹೇಗೆ? ಪಾರ್ಥ್ಯರೂ ಮೇದ್ಯರೂ ಎಲಾಮ್ಯರೂ ಮೆಸೊಪೊತಾಮ್ಯ, ಯೂದಾಯ, ಕಪ್ಪದೋಕ್ಯ, ಪೊಂತ, ಆಸ್ಯ, ಫ್ರುಗ್ಯ, ಪಂಫುಲ್ಯ, ಐಗುಪ್ತದಲ್ಲಿದ್ದವರು, ಕುರೇನದ ಮಗ್ಗುಲಲ್ಲಿ ರುವ ಲಿಬ್ಯದ ಪ್ರಾಂತ್ಯದವರು, ರೋಮದ ಪ್ರವಾಸಿ ಗಳು, ಯೆಹೂದ್ಯರು, ಯೆಹೂದ್ಯ ಮತಾವಲಂಬಿಗಳು, ಕ್ರೇತ್ಯರು ಮತ್ತು ಅರಬಿಯರು ಆಗಿರುವ ನಾವು ನಮ್ಮ ಭಾಷೆಗಳಲ್ಲಿ ದೇವರ ಮಹತ್ಕಾರ್ಯಗಳನ್ನು ಇವರು ಹೇಳುವದನ್ನು ಕೇಳುತ್ತೇವೆ ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು. ಅವರೆ ಲ್ಲರೂ ವಿಸ್ಮಯಗೊಂಡು ಸಂದೇಹಪಟ್ಟವರಾಗಿ-- ಇದರ ಅರ್ಥವೇನು ಎಂದು ಒಬ್ಬರನ್ನೊಬ್ಬರು ಕೇಳುವವರಾದರು.
- Acts 4:31 ಅಪೊಸ್ತಲರ ಕೃತ್ಯಗಳು 4:31ಹೀಗೆ ಪ್ರಾರ್ಥಿಸಿದ ಮೇಲೆ ಅವರು ಕೂಡಿದ್ದ ಸ್ಥಳವು ನಡುಗಿತು. ಅವರೆಲ್ಲರೂ ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಮಾತನಾಡಿದರು.
Original words (Greek)
- And · G1161δέ dé
- as · G1722ἐν en
- I · G3165μέ mé
- began · G756ἄρχομαι árchomai
- speak · G2980λαλέω laléō
- Holy · G40ἅγιος hágios
- Ghost · G4151πνεῦμα pneûma
- fell · G1968ἐπιπίπτω epipíptō
- on · G1909ἐπί epí
- them · G846αὐτός autós
- as · G5618ὥσπερ hṓsper
- on · G1909ἐπί epí
- us · G2248ἡμᾶς hēmâs
- at · G1722ἐν en
- beginning · G746ἀρχή archḗ