Acts · chapter 16 · verse 10
Acts 16:10 in Kannada
ಅವನು ಆ ದರ್ಶನವನ್ನು ನೋಡಿದ ತರುವಾಯ ಅವರಿಗೆ ಸುವಾರ್ತೆಯನ್ನು ಸಾರುವದಕ್ಕೆ ಕರ್ತನು ನಿಶ್ಚಯವಾಗಿ ನಮ್ಮನ್ನು ಕರೆದಿದ್ದಾನೆಂದು ತಿಳುಕೊಂಡು ಕೂಡಲೆ ಮಕೆದೋನ್ಯಕ್ಕೆ ಹೋಗುವಂತೆ ಪ್ರಯತ್ನಿ ಸಿದೆವು.
Avanu aa darshanavannu nodida taruvaaya avarige suvaarteyannu saaruvadakke kartanu nishchayavaagi nammannu karediddaanendu tilukondu koodale makedonyakke hoguvante prayatni sidevu.
Acts 16:10 in English
- King James Version (KJV)
- And after he had seen the vision, immediately we endeavoured to go into Macedonia, assuredly gathering that the Lord had called us for to preach the gospel unto them.
- World English Bible (WEB)
- When he had seen the vision, immediately we sought to go out to Macedonia, concluding that the Lord had called us to preach the Good News to them.
- American Standard Version (ASV)
- And when he had seen the vision, straightway we sought to go forth into Macedonia, concluding that God had called us to preach the gospel unto them.
- Bible in Basic English (BBE)
- And when he had seen the vision, straight away we made the decision to go into Macedonia, for it seemed certain to us that God had sent us to give the good news to them.
- Darby Translation (DBY)
- And when he had seen the vision, immediately we sought to go forth to Macedonia, concluding that the Lord had called us to announce to them the glad tidings.
- Webster's Bible (WBS)
- And after he had seen the vision, immediately we endeavored to go into Macedonia, assuredly gathering, that the Lord had called us to preach the gospel to them.
- Young's Literal Translation (YLT)
- and when he saw the vision, immediately we endeavoured to go forth to Macedonia, assuredly gathering that the Lord hath called us to preach good news to them,
Read in context
- 8ಹೀಗೆ ಅವರು ಮೂಸ್ಯವನ್ನು ದಾಟಿ ತ್ರೋವಕ್ಕೆ ಬಂದರು.
- 9ಆಗ ರಾತ್ರಿ ಕಾಲದಲ್ಲಿ ಪೌಲನಿಗೆ ಒಂದು ದರ್ಶನವಾಯಿತು; ಏನಂ ದರೆ--ಮಕೆದೋನ್ಯ ದೇಶದವನಾದ ಒಬ್ಬ ಮನುಷ್ಯನು ನಿಂತುಕೊಂಡು--ಮಕೆದೋನ್ಯಕ್ಕೆ ಬಂದು ನಮಗೆ ನೆರವಾಗಬೇಕು ಎಂದು ಅವನನ್ನು ಬೇಡಿಕೊಂಡನು.
- 10ಅವನು ಆ ದರ್ಶನವನ್ನು ನೋಡಿದ ತರುವಾಯ ಅವರಿಗೆ ಸುವಾರ್ತೆಯನ್ನು ಸಾರುವದಕ್ಕೆ ಕರ್ತನು ನಿಶ್ಚಯವಾಗಿ ನಮ್ಮನ್ನು ಕರೆದಿದ್ದಾನೆಂದು ತಿಳುಕೊಂಡು ಕೂಡಲೆ ಮಕೆದೋನ್ಯಕ್ಕೆ ಹೋಗುವಂತೆ ಪ್ರಯತ್ನಿ ಸಿದೆವು.
- 11ಆದದರಿಂದ ತ್ರೋವದಿಂದ ಪ್ರಯಾಣ ಮಾಡಿ ನೆಟ್ಟಗೆ ಸಮೊಥ್ರಾಕೆಗೆ ಬಂದು ಮರುದಿನ ನೆಯಾಪೊಲಿಗೆ ಸೇರಿ ಅಲ್ಲಿಂದ ಫಿಲಿಪ್ಪಿಗೆ ಮುಟ್ಟಿದೆವು.
- 12ಅದು ಮಕೆದೋನ್ಯ ಭಾಗದ ಮುಖ್ಯಪಟ್ಟಣವೂ ವಲಸೆಯ ಸ್ಥಳವೂ ಆಗಿತ್ತು. ಆ ಪಟ್ಟಣದಲ್ಲಿ ನಾವು ಕೆಲವು ದಿವಸ ಇದ್ದೆವು.
Cross references
- 2 Corinthians 2:12–13 2 ಕೊರಿಂಥದವರಿಗೆ 2:12–13ಇದಲ್ಲದೆ ಕ್ರಿಸ್ತನ ಸುವಾರ್ತೆಯನ್ನು ಸಾರುವ ದಕ್ಕಾಗಿ ನಾನು ತ್ರೋವಕ್ಕೆ ಬಂದಾಗ ಕರ್ತನಿಂದ ನನಗೆ ಬಾಗಲು ತೆರೆಯಲ್ಪಟ್ಟಿತು. ಆದರೂ ನನ್ನ ಸಹೋದರನಾದ ತೀತನು ನನಗೆ ಸಿಕ್ಕಲಿಲ್ಲವಾದ ಕಾರಣ ನನ್ನ ಆತ್ಮಕ್ಕೆ ಉಪಶಮನವಿಲ್ಲದೆ ಅಲ್ಲಿದ್ದವರಿಂದ ಕಳುಹಿಸಿ ಕೊಂಡವನಾಗಿ ಹೊರಟು ಮಕೆದೋನ್ಯಕ್ಕೆ ಬಂದೆನು.
- Acts 14:7 ಅಪೊಸ್ತಲರ ಕೃತ್ಯಗಳು 14:7ಅಲ್ಲಿ ಸುವಾರ್ತೆಯನ್ನು ಸಾರಿದರು.
- Acts 20:5–8 ಅಪೊಸ್ತಲರ ಕೃತ್ಯಗಳು 20:5–8ಇವರು ಮುಂಚಿತವಾಗಿ ಹೋಗಿ ನಮಗೋಸ್ಕರ ತ್ರೋವದಲ್ಲಿ ಕಾದುಕೊಂಡರು. ಹುಳಿಯಿಲ್ಲದ ರೊಟ್ಟಿಯ ದಿವಸ ಗಳಾದ ಮೇಲೆ ನಾವು ಫಿಲಿಪ್ಪಿಯಿಂದ ಹೊರಟು ಹಡಗನ್ನು ಹತ್ತಿ ಐದು ದಿವಸಗಳಲ್ಲಿ ತ್ರೋವಕ್ಕೆ ಅವರ ಬಳಿಗೆ ಬಂದೆವು. ಅಲ್ಲಿ ಏಳು ದಿವಸಗಳಿದ್ದೆವು. ವಾರದ ಮೊದಲನೆಯ ದಿವಸದಲ್ಲಿ ಶಿಷ್ಯರು ರೊಟ್ಟಿಮುರಿಯುವದಕ್ಕಾಗಿ ಕೂಡಿ ಬಂದಾಗ ಮರು ದಿನ ಹೊರಡಬೇಕೆಂದಿದ್ದ ಪೌಲನು ಅವರಿಗೆ ಪ್ರಸಂಗಿಸುತ್ತಾ ಮಧ್ಯರಾತ್ರಿಯ ವರೆಗೂ ಉಪದೇಶ ವನ್ನು ನಡಿಸಿದನು. ಅವರು ಕೂಡಿದ್ದ ಮೇಲಂತಸ್ತಿನಲ್ಲಿ ಅನೇಕ ದೀಪಗಳಿದ್ದವು.
- Acts 21:1–18 ಅಪೊಸ್ತಲರ ಕೃತ್ಯಗಳು 21:1–18ಇದಾದ ಮೇಲೆ ನಾವು ಅವರನ್ನು ಬಿಟ್ಟು ಸಮುದ್ರಪ್ರಯಾಣವಾಗಿ ನೆಟ್ಟಗೆ ಕೋಸ್ಗೆ ಬಂದೆವು. ಮರುದಿನ ರೋದಕ್ಕೆ ಹೋಗಿ ಅಲ್ಲಿಂದ ಪತರಕ್ಕೆ ಸೇರಿದೆವು. ಅಲ್ಲಿ ಫೊಯಿನೀಕೆಗೆ ಹೋಗುವ ಹಡಗನ್ನು ಕಂಡು ಅದನ್ನು ಹತ್ತಿ ಪ್ರಯಾಣವನ್ನು ಸಾಗಿಸಿದೆವು. ನಾವು ಕುಪ್ರವನ್ನು ಕಂಡು ಅದನ್ನು ಎಡಗಡೆಗೆ ಬಿಟ್ಟು ಸಿರಿಯದ ಕಡೆಗೆ ಸಾಗಿ ತೂರ್ಗೆ ಬಂದು ಇಳಿದೆವು. ಹಡಗು ಅಲ್ಲಿ ಸರಕನ್ನು ಇಳಿಸ ಬೇಕಾಗಿತ್ತು. ಅಲ್ಲಿ ನಾವು ಶಿಷ್ಯರನ್ನು ಕಂಡು ಏಳು ದಿವಸ ಇದ್ದೆವು; ಪೌಲನು ಯೆರೂಸ ಲೇಮಿಗೆ ಹೋಗಬಾರದೆಂದು ಅವರು ಆತ್ಮನ ಮುಖಾಂತರ ಅವನಿಗೆ ಹೇಳಿದರು. ಆ ದಿವಸಗಳು ಕಳೆದ ಮೇಲೆ ನಾವು ಹೊರಟು ಹೋಗುತ್ತಿರುವಾಗ ಅವರು ತಮ್ಮ ಹೆಂಡತಿಯರು ಮಕ್ಕಳ ಸಹಿತವಾಗಿ ನಮ್ಮನ್ನು ಪಟ್ಟಣದ ಹೊರಗೆ ಸಾಗಕಳುಹಿಸಿದರು; ನಾವು ಸಮುದ್ರದ ತೀರದಲ್ಲಿ ಮೊಣಕಾಲೂರಿ ಪ್ರಾರ್ಥನೆ ಮಾಡಿದೆವು. ಆಗ ನಾವು ಒಬ್ಬರನ್ನೊಬ್ಬರು ಬಿಟ್ಟು ಹಡಗನ್ನು ಹತ್ತಿದಾಗ ಅವರು ತಮ್ಮ ಮನೆಗೆ ಹಿಂತಿರುಗಿದರು. ತೂರಿನಿಂದ ಪ್ರಯಾಣವನ್ನು ಮುಗಿಸಿದ ಮೇಲೆ ಪ್ತೊಲೆಮಾಯಕ್ಕೆ ಬಂದು ಅಲ್ಲಿದ್ದ ಸಹೋದರರನ್ನು ವಂದಿಸಿ ಅವರ ಬಳಿಯಲ್ಲಿ ಒಂದು ದಿವಸ ಇದ್ದೆವು. ಮರುದಿನ ಪೌಲನ ಜೊತೆಯವರಲ್ಲಿದ್ದ ನಾವು ಹೊರಟು ಕೈಸರೈಯಕ್ಕೆ ಸೇರಿ ಏಳು ಮಂದಿಯಲ್ಲಿ ಒಬ್ಬನಾಗಿದ್ದ ಸುವಾರ್ತಿಕನಾದ ಫಿಲಿಪ್ಪನ ಮನೆಗೆ ಹೋಗಿ ಅವನೊಂದಿಗೆ ಇದ್ದೆವು. ಇವನಿ ಪ್ರವಾದಿ ಸುತ್ತಿದ್ದ ಕನ್ಯೆಯರಾದ ನಾಲ್ಕು ಮಂದಿ ಕುಮಾರ್ತೆಯರು ಇದ್ದರು. ನಾವು ಅಲ್ಲಿ ಆನೇಕ ದಿವಸಗಳು ಇದ್ದ ತರುವಾಯ ಅಗಬನೆಂಬ ಒಬ್ಬ ಪ್ರವಾದಿಯು ಯೂದಾಯದಿಂದ ಅಲ್ಲಿಗೆ ಬಂದನು. ಅವನು ನಮ್ಮ ಬಳಿಗೆ ಬಂದು ಪೌಲನ ನಡುಕಟ್ಟನ್ನು ತೆಗೆದು ತನ್ನ ಸ್ವಂತ ಕೈಕಾಲುಗಳನ್ನು ಕಟ್ಟಿಕೊಂಡು--ಈ ನಡುಕಟ್ಟು ಯಾವನದೋ ಆ ಮನುಷ್ಯನನ್ನು ಯೆಹೂದ್ಯರು ಯೆರೂಸಲೇಮಿನಲ್ಲಿ ಹೀಗೆ ಕಟ್ಟಿ ಅನ್ಯಜನರ ಕೈಗೆ ಒಪ್ಪಿಸುವರು ಎಂದು ಪವಿತ್ರಾತ್ಮನು ಹೇಳುತ್ತಾನೆ ಅಂದ ನಾವೂ ಇವುಗಳನ್ನು ಕೇಳಿದಾಗ ಅವನು ಯೆರೂಸಲೇಮಿಗೆ ಹೋಗಬಾರ ದೆಂದು ನಾವು ಆ ಸ್ಥಳದಲ್ಲಿದ್ದವರೂ ಅವನನ್ನು ಬೇಡಿ ಕೊಂಡೆವು. ಅದಕ್ಕೆ ಪೌಲನು ಪ್ರತ್ಯುತ್ತರ ವಾಗಿ--ನೀವು ಅತ್ತು ನನ್ನ ಹೃದಯವನ್ನು ಒಡೆಯುವ ದೇನು? ಕರ್ತನಾದ ಯೇಸು ಕ್ರಿಸ್ತನ ಹೆಸರಿನ ನಿಮಿತ್ತವಾಗಿ ಬಂಧಿಸಲ್ಪಡುವದಕ್ಕೆ ಮಾತ್ರವಲ್ಲದೆ ಯೆರೂಸಲೇಮಿನಲ್ಲಿ ಸಾಯುವದಕ್ಕೂ ನಾನು ಸಿದ್ಧ ನಾಗಿದ್ದೇನೆ ಎಂದು ಹೇಳಿದನು. ಅವನು ಒಪ್ಪದೆ ಇದ್ದದರಿಂದ--ಕರ್ತನ ಚಿತ್ತದಂತೆಯೇ ಆಗಲಿ ಎಂದು ಹೇಳಿ ನಾವು ಸುಮ್ಮನಾದೆವು. ಆ ದಿವಸಗಳಾದ ಮೇಲೆ ನಾವು ಸಿದ್ಧಪಡಿಸಿ ಕೊಂಡು ಯೆರೂಸಲೇಮಿಗೆ ಹೋದೆವು. ಆಗ ಕೈಸರೈಯದ ಶಿಷ್ಯರಲ್ಲಿ ಸಹ ಕೆಲವರು ನಮ್ಮೊಂದಿಗೆ ಬಂದು ನಾವು ಕುಪ್ರದ ಮ್ನಾಸೋನನೆಂಬ ಪ್ರಾಯ ಹೋದ ಒಬ್ಬ ಶಿಷ್ಯನ ಕೂಡ ಇಳುಕೊಳ್ಳುವಂತೆ ತಮ್ಮೊಂದಿಗೆ ಅವನನ್ನು ಕರಕೊಂಡು ಬಂದರು. ನಾವು ಯೆರೂಸಲೇಮಿಗೆ ಬಂದಾಗ ಸಹೋದ ರರು ನಮ್ಮನ್ನು ಸಂತೋಷದಿಂದ ಸೇರಿಸಿಕೊಂಡರು. ಮರುದಿನ ಪೌಲನು ನಮ್ಮ ಕೂಡ ಯಾಕೋಬನ ಬಳಿಗೆ ಬಂದನು; ಆಗ ಹಿರಿಯರೆಲ್ಲರೂ ಅಲ್ಲಿ ಕೂಡಿದ್ದರು.
- Proverbs 3:27–28 ಜ್ಞಾನೋಕ್ತಿಗಳು 3:27–28ನಿನಗೆ ಸಾಧ್ಯವಿರುವಾಗ ಹೊಂದತಕ್ಕವರಿಗೆ ಒಳ್ಳೆ ಯದು ಮಾಡುವದನ್ನು ತಪ್ಪಿಸಬೇಡ. ಕೊಡತಕ್ಕದ್ದು ನಿನ್ನಲ್ಲಿರುವಾಗ--ಹೋಗಿ ಬಾ, ನಾಳೆ ನಿನಗೆ ಕೊಡು ವೆನು ಎಂದು ನಿನ್ನ ನೆರೆಯವನಿಗೆ ಹೇಳಬೇಡ.
- Psalm 119:60 ಕೀರ್ತನೆಗಳು 119:60ನಿನ್ನ ಆಜ್ಞೆಗಳನ್ನು ಕೈಕೊಳ್ಳು ವದಕ್ಕೆ ತಡಮಾಡದೆ ತ್ವರೆಪಟ್ಟಿದ್ದೇನೆ.
- Acts 16:10–17 ಅಪೊಸ್ತಲರ ಕೃತ್ಯಗಳು 16:10–17ಅವನು ಆ ದರ್ಶನವನ್ನು ನೋಡಿದ ತರುವಾಯ ಅವರಿಗೆ ಸುವಾರ್ತೆಯನ್ನು ಸಾರುವದಕ್ಕೆ ಕರ್ತನು ನಿಶ್ಚಯವಾಗಿ ನಮ್ಮನ್ನು ಕರೆದಿದ್ದಾನೆಂದು ತಿಳುಕೊಂಡು ಕೂಡಲೆ ಮಕೆದೋನ್ಯಕ್ಕೆ ಹೋಗುವಂತೆ ಪ್ರಯತ್ನಿ ಸಿದೆವು. ಆದದರಿಂದ ತ್ರೋವದಿಂದ ಪ್ರಯಾಣ ಮಾಡಿ ನೆಟ್ಟಗೆ ಸಮೊಥ್ರಾಕೆಗೆ ಬಂದು ಮರುದಿನ ನೆಯಾಪೊಲಿಗೆ ಸೇರಿ ಅಲ್ಲಿಂದ ಫಿಲಿಪ್ಪಿಗೆ ಮುಟ್ಟಿದೆವು. ಅದು ಮಕೆದೋನ್ಯ ಭಾಗದ ಮುಖ್ಯಪಟ್ಟಣವೂ ವಲಸೆಯ ಸ್ಥಳವೂ ಆಗಿತ್ತು. ಆ ಪಟ್ಟಣದಲ್ಲಿ ನಾವು ಕೆಲವು ದಿವಸ ಇದ್ದೆವು. ಸಬ್ಬತ್ತಿನಲ್ಲಿ ನಾವು ಪಟ್ಟಣದೊಳಗಿಂದ ನದೀತೀರದ ಕಡೆಗೆ ಹೋಗಿದ್ದೆವು. ಅಲ್ಲಿ ವಾಡಿಕೆಯಂತೆ ಪ್ರಾರ್ಥನೆ ನಡೆಯುತ್ತಿತ್ತು; ಕೂಡಿ ಬಂದಿದ್ದ ಸ್ತ್ರೀಯರೊಂದಿಗೆ ನಾವು ಕೂತು ಕೊಂಡು ಮಾತನಾಡಿದೆವು. ದೇವರನ್ನು ಆರಾಧಿಸು ತ್ತಿದ್ದವಳೂ ಥುವತೈರ ಪಟ್ಟಣದವಳೂ ಧೂಮ್ರ ವರ್ಣದ ವಸ್ತ್ರಗಳನ್ನು ಮಾರುತ್ತಿದ್ದವಳೂ ಆದ ಲುದ್ಯ ಳೆಂಬ ಹೆಸರುಳ್ಳ ಒಬ್ಬ ಸ್ತ್ರೀಯು ನಮ್ಮ ಮಾತುಗಳನ್ನು ಕೇಳುತ್ತಿದ್ದಳು. ಕರ್ತನು ಆಕೆಯ ಹೃದಯವನ್ನು ತೆರದ ದ್ದರಿಂದ ಪೌಲನು ಹೇಳಿದ ಮಾತುಗಳಿಗೆ ಆಕೆಯು ಲ ಆಕೆಯೂ ಆಕೆಯ ಮನೆಯವರೂ ಬಾಪ್ತಿಸ್ಮ ಮಾಡಿಸಿಕೊಂಡ ಮೇಲೆ--ನಾನು ಕರ್ತನಿಗೆ ನಂಬಿಗಸ್ತಳಾದವಳೆಂದು ನೀವು ತೀರ್ಮಾನಿಸಿದರೆ ನನ್ನ ಮನೆಗೆ ಬಂದು ಇರಬೇಕು ಎಂದು ಆಕೆಯು ನಮ್ಮನ್ನು ಬೇಡಿಕೊಂಡು ಬಲವಂತಮಾಡಿದಳು. ಇದಾದ ಮೇಲೆ ನಾವು ಪ್ರಾರ್ಥನೆ ನಡೆಯುವ ಸ್ಥಳಕ್ಕೆ ಹೋಗುತ್ತಿದ್ದಾಗ ಕಾಲಜ್ಞಾನದ ದುರಾತ್ಮ ಹಿಡಿದವಳಾಗಿ ಕಣಿ ಹೇಳುವದರಿಂದ ತನ್ನ ಯಜ ಮಾನರಿಗೆ ಬಹು ಆದಾಯವನ್ನು ತರುತ್ತಿದ್ದ ಒಬ್ಬ ಹುಡುಗಿಯು ನಮ್ಮನ್ನು ಸಂಧಿಸಿದಳು. ಈಕೆಯು ಪೌಲನನ್ನೂ ನಮ್ಮನ್ನೂ ಹಿಂಬಾಲಿಸಿ--ಇವರು ನಮಗೆ ರಕ್ಷಣೆಯ ಮಾರ್ಗವನ್ನು ತೋರಿಸುವ ಮಹೋನ್ನತ ನಾದ ದೇವರ ಸೇವಕರು ಎಂದು ಕೂಗಿ ಹೇಳುತ್ತಿದ್ದಳು.
- Acts 27:1–16 ಅಪೊಸ್ತಲರ ಕೃತ್ಯಗಳು 27:1–16ನಾವು ಸಮುದ್ರ ಪ್ರಯಾಣ ಮಾಡಿ ಇತಾಲ್ಯಕ್ಕೆ ಹೋಗಬೇಕೆಂದು ನಿಶ್ಚಯ ಮಾಡಿದಾಗ ಔಗುಸ್ತನ ಪಟಾಲಮಿನ ಶತಾಧಿಪತಿಯಾದ ಯೂಲ್ಯ ಎಂಬವನಿಗೆ ಪೌಲನನ್ನೂ ಬೇರೆ ಕೆಲವು ಕೈದಿಗಳನ್ನೂ ಅವರು ಒಪ್ಪಿಸಿದರು. ನಾವು ಆಸ್ಯದ ತೀರಗಳ ಮಾರ್ಗವಾಗಿ ಪ್ರಯಾಣಮಾಡ ಬೇಕೆಂಬ ಉದ್ದೇಶದಿಂದ ಅದ್ರಮಿತ್ತಿಯ ಹಡಗನ್ನು ಹತ್ತಿ ಸಮುದ್ರ ಪ್ರಯಾಣವನ್ನು ಪ್ರಾರಂಭಿಸಿದೆವು ಆಗ ಥೆಸಲೊನೀಕದ ಮಕೆದೋನ್ಯದವನಾದ ಅರಿ ಸ್ತಾರ್ಕನು ನಮ್ಮೊಂದಿಗೆ ಇದ್ದನು. ನಾವು ಮರುದಿನ ಸೀದೋನಿಗೆ ಸೇರಿದೆವು; ಆಗ ಯೂಲ್ಯನು ದಯೆ ತೋರಿಸಿ ಪೌಲನನ್ನು ಒತ್ತಾಯ ಮಾಡಿ ಅವನು ತನ್ನ ಸ್ನೇಹಿತರ ಬಳಿಗೆ ಹೋಗಿ ವಿಶ್ರಮಿಸಿಕೊಳ್ಳುವಂತೆ ಸ್ವಾತಂತ್ರ್ಯವಾಗಿ ಬಿಟ್ಟನು. ಅಲ್ಲಿಂದ ನಾವು ಪ್ರಯಾಣ ವನ್ನು ಪ್ರಾರಂಭಿಸಿದಾಗ ಎದುರುಗಾಳಿಯು ಇದ್ದದ ರಿಂದ ಕುಪ್ರದ ಮರೆಯಲ್ಲಿ ಪ್ರಯಾಣಮಾಡಿದೆವು. ಇದಾದ ಮೇಲೆ ನಾವು ಕಿಲಿಕ್ಯ ಮತ್ತು ಪಂಪುಲ್ಯದ ಸಮುದ್ರಮಾರ್ಗವಾಗಿ ಪ್ರಯಾಣಮಾಡಿ ಲುಕೀಯ ಪಟ್ಟಣವಾದ ಮುರಕ್ಕೆ ಬಂದೆವು. ಅಲ್ಲಿ ಇತಾಲ್ಯಕ್ಕೆ ಸಮುದ್ರ ಪ್ರಯಾಣ ಮಾಡುವ ಅಲೆಕ್ಸಾಂದ್ರಿಯದ ಒಂದು ಹಡಗನ್ನು ಶತಾಧಿಪತಿಯು ಕಂಡು ಅದರಲ್ಲಿ ನಮ್ಮನ್ನು ಹತ್ತಿಸಿದನು. ನಾವು ಅನೇಕ ದಿವಸ ನಿಧಾನವಾಗಿ ಸಾಗಿದಾಗ್ಯೂ ಎದುರುಗಾಳಿಯ ದೆಸೆ ಯಿಂದ ಸಲ್ಮೊನೆಗೆ ಎದುರಾಗಿ ಕ್ರೇತದ ಮರೆಯಲ್ಲಿ ಪ್ರಯಾಣ ಮಾಡಿದೆವು; ಅದನ್ನು ದಾಟುವದು ಕಷ್ಟವಾದದರಿಂದ ಚಂದರೇವುಗಳೆಂಬ ಸ್ಥಳಕ್ಕೆ ಸೇರಿ ದೆವು; ಲಸಾಯವೆಂಬ ಪಟ್ಟಣವು ಇದಕ್ಕೆ ಸವಿಾಪವಾಗಿದೆ. ಹೀಗೆ ಬಹುಕಾಲ ಕಳೆದ ಮೇಲೆ ಉಪವಾಸದ ಸಮಯವು ಆಗಲೇ ದಾಟಿಹೋದದರಿಂದ ಸಮುದ್ರ ಪ್ರಯಾಣವು ಅಪಾಯಕರವಾದಾಗ ಪೌಲನು ಅವ ರನ್ನು ಎಚ್ಚರಿಸುತ್ತಾ-- ಅಯ್ಯಗಳಿರಾ, ಈ ಸಮುದ್ರ ಪ್ರಯಾಣವು ಸರಕಿಗೂ ಹಡಗಿಗೂ ಮಾತ್ರವಲ್ಲದೆ ನಮ್ಮ ಪ್ರಾಣಗಳಿಗೆ ಕೇಡನ್ನೂ ದೊಡ್ಡ ನಷ್ಟವನ್ನೂ ಉಂಟುಮಾಡುವಂತದ್ದಾಗಿದೆ ಎಂದು ನನಗೆ ತೋರು ತ್ತದೆ. ಆದರೂ ಪೌಲನು ಹೇಳಿದವುಗಳಿಗಿಂತ ಹೆಚ್ಚಾಗಿ ಹಡಗಿನ ನಾಯಕನೂ ಯಜಮಾನನೂ ಆಗಿದ್ದವನನ್ನು ಶತಾಧಿಪತಿಯು ನಂಬಿದನು. ಆ ರೇವು ಚಳಿಗಾಲವನ್ನು ಕಳೆಯುವದಕ್ಕೆ ಅನುಕೂಲ ವಲ್ಲದ್ದರಿಂದ ಅಲ್ಲಿಂದಲೂ ಹೊರಟು ಫೊಯಿನಿಕೆಗೆ ಸೇರಿ ಅಲ್ಲಿ ಚಳಿಗಾಲವನ್ನು ಕಳೆಯುವದು ಸಾಧ್ಯವಾಗ ಬಹುದು ಎಂದು ಅನೇಕರು ಸಲಹೆಕೊಟ್ಟರು; ಇದು ಕ್ರೇತದ ಒಂದು ರೇವು ಆಗಿದ್ದು ಈಶಾನ್ಯ ದಿಕ್ಕಿಗೂ ಅಗ್ನೇಯ ದಿಕ್ಕಿಗೂ ಅಭಿಮುಖವಾಗಿ ಇದಾದ ಮೇಲೆ ದಕ್ಷಿಣದ ಗಾಳಿಯು ಮೆಲ್ಲಗೆ ಬೀಸಿದಾಗ ಅವರು ತಮ್ಮ ಉದ್ದೇಶವು ಸಾರ್ಥಕವಾಯಿತೆಂದು ಭಾವಿಸಿ ಅಲ್ಲಿಂದ ಹೊರಟು ಕ್ರೇತಕ್ಕೆ ಸವಿಾಪವಾಗಿ ಪ್ರಯಾಣಮಾಡಿದರು. ಆದರೆ ಸ್ವಲ್ಪ ಹೊತ್ತಿನ ಮೇಲೆ ಊರಕಲೋನು ಎಂಬ ಬಿರುಗಾಳಿಯು ಎದುರಾಗಿ ಬೀಸಿತು. ಆಗ ಹಡಗು ಅದಕ್ಕೆ ಸಿಕ್ಕಿಕೊಂಡು ಗಾಳಿಗೆ ತಾಳಲಾರದೆ ಇದ್ದದರಿಂದ ಅದು ನೂಕಿಕೊಂಡು ಹೋಗುವಂತೆ ನಾವು ಬಿಟ್ಟುಕೊಟ್ಟೆವು ನಾವು ಕ್ಲೌಡವೆಂಬ ಒಂದು ದ್ವೀಪದ ಮರೆಯಲ್ಲಿ ಹೋಗುತ್ತಿ ದ್ದದರಿಂದ ದೋಣಿಯನ್ನು ಭದ್ರಮಾಡಿಕೊಳ್ಳುವದು ನಮಗೆ ಬಹಳ ಪ್ರಯಾಸವಾಗಿತ್ತು.
- Acts 20:13–15 ಅಪೊಸ್ತಲರ ಕೃತ್ಯಗಳು 20:13–15ನಾವು ಮೊದಲು ಹೋಗಿ ಅಸ್ಸೊಸಿನಲ್ಲಿ ಪೌಲ ನನ್ನು ಹತ್ತಿಸಿಕೊಳ್ಳಬೇಕೆಂದು ಅಲ್ಲಿಗೆ ಸಮುದ್ರ ಪ್ರಯಾಣ ಮಾಡಿದೆವು. ಪೌಲನು ಹಾಗೆಯೇ ನಮಗೆ ಅಪ್ಪಣೆಮಾಡಿ ತಾನು ಕಾಲು ನಡೆಯಾಗಿ ಹೋಗಬೇಕೆಂದು ಮನಸ್ಸು ಮಾಡಿದನು. ಅಸ್ಸೊಸಿ ನಲ್ಲಿ ಅವನು ನಮ್ಮನ್ನು ಕೂಡಿಕೊಂಡಾಗ ನಾವು ಅವನನ್ನು ಹತ್ತಿಸಿಕೊಂಡು ಮಿತಿಲೇನೆಗೆ ಬಂದೆವು. ಅಲ್ಲಿಂದ ಹೊರಟು ಮರುದಿನ ಖೀಯೊಸ್ ದ್ವೀಪಕ್ಕೆದುರಾಗಿ ಬಂದು ಅದರ ಮರುದಿನ ಸಾಮೊಸಿಗೆ ಬಂದು ತ್ರೋಗುಲ್ಯದಲ್ಲಿ ಇದ್ದು ಅದರ ಮರುದಿನ ನಾವು ಮಿಲೇತಕ್ಕೆ ಸೇರಿದೆವು.
- Acts 26:13 ಅಪೊಸ್ತಲರ ಕೃತ್ಯಗಳು 26:13ಓ ರಾಜನೇ, ನಾನು ದಾರಿಯಲ್ಲಿದ್ದಾಗ ಮಧ್ಯಾಹ್ನದಲ್ಲಿ ನನ್ನ ಮತ್ತು ನನ್ನ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದವರ ಸುತ್ತಲೂ ಸೂರ್ಯನ ಪ್ರಕಾಶಕ್ಕಿಂತ ಹೆಚ್ಚಾದ ಬೆಳಕು ಪರಲೋಕ ದಿಂದ ಪ್ರಕಾಶಿಸುತ್ತಿರುವದನ್ನು ನಾನು ಕಂಡೆನು.
- Acts 10:29 ಅಪೊಸ್ತಲರ ಕೃತ್ಯಗಳು 10:29ಆದಕಾರಣ ನೀವು ನನ್ನನ್ನು ಕರೇಕಳುಹಿಸಿದಾಗ ನಾನು ಯಾವ ಎದುರು ಮಾತನ್ನೂ ಹೇಳದೆ ತಕ್ಷಣ ಬಂದೆನು. ಈಗ ನೀವು ನನ್ನನ್ನು ಕರೆಯಿಸಿದ ಉದ್ದೇಶವೇನು ಎಂದು ನಾನು ಕೇಳುತ್ತೇನೆ ಎಂದು ಹೇಳಿದನು.
Original words (Greek)
- And · G1161δέ dé
- after · G5613ὡς hōs
- seen · G1492εἴδω eídō
- vision · G3705ὅραμα hórama
- immediately · G2112εὐθέως euthéōs
- endeavoured · G2212ζητέω zētéō
- go · G1831ἐξέρχομαι exérchomai
- into · G1519εἰς eis
- Macedonia · G3109Μακεδονία Makedonía
- gathering · G4822συμβιβάζω symbibázō
- that · G3754ὅτι hóti
- Lord · G2962κύριος kýrios
- called · G4341προσκαλέομαι proskaléomai
- us · G2248ἡμᾶς hēmâs
- gospel · G2097εὐαγγελίζω euangelízō
- them · G846αὐτός autós